Tag: ಟಿಫಿನ್ ಬಾಕ್ಸ್

  • ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಟಿಫಿನ್ ಬಾಕ್ಸ್, ಹೊಲಿಗೆ ಯಂತ್ರ ಜಪ್ತಿ

    ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಟಿಫಿನ್ ಬಾಕ್ಸ್, ಹೊಲಿಗೆ ಯಂತ್ರ ಜಪ್ತಿ

    ಬೆಳಗಾವಿ: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಹೊಲಿಗೆ ಯಂತ್ರಗಳು (Sewing Machine) ಮತ್ತು ಟಿಫಿನ್ ಬಾಕ್ಸ್‌ಗಳನ್ನು (Tiffin Box) ಪೊಲೀಸರು ಜಪ್ತಿ ಮಾಡಿರುವ ಘಟನೆ ಬೆಳಗಾವಿ‌ (Belagavi) ಜಿಲ್ಲೆಯ ಸವದತ್ತಿ (Savadatti) ಪಟ್ಟಣದಲ್ಲಿ ನಡೆದಿದೆ.

    ನಗರದ ಸಂಭವ ಟಿಂಬರ್ ಯಾರ್ಡ್ ಗೋದಾಮು ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಸವದತ್ತಿ ಕೇತ್ರದ ಜೆಡಿಎಸ್ (JDS) ಅಭ್ಯರ್ಥಿ ಸೌರಭ್ ಛೋಪ್ರಾ (Sourabh Chopra) ಭಾವಚಿತ್ರವಿರುವ ಟಿಫಿನ್ ಬಾಕ್ಸ್ ಜೊತೆಗೆ ಹೊಲಿಗೆ ಯಂತ್ರಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಶೆಟ್ಟರ್ ನಿರ್ಧಾರದಿಂದ ಉಂಟಾದ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಜೆ.ಪಿ ನಡ್ಡಾ 

    ಲಕ್ಷಾಂತರ ಮೌಲ್ಯದ 2300ಕ್ಕೂ ಅಧಿಕ ಹೊಲಿಗೆ ಯಂತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ಸರಕು ಮತ್ತು ಸೇವಾ ತೆರಿಗೆ (GST) ಅಧಿಕಾರಿಗಳು ಹಾಗೂ ಸ್ಥಳೀಯ ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಸೌರಭ್ ಛೋಪ್ರಾ ಹೊಲಿಗೆ ಯಂತ್ರ ಇರುವ ಕುರಿತಾಗಿ ಬಿಲ್ ಹಾಗೂ ಅದಕ್ಕೆ ಬೇಕಾದ ದಾಖಲೆಗಳನ್ನು ಒದಗಿಸಿದ್ದಾರೆ. ನೀತಿ ಸಂಹಿತೆ ಬರುವ ಮುಂಚೆಯೇ ಇವುಗಳನ್ನು ತರಲಾಗಿದೆ. ಆದರೆ ಎಲ್ಲಿಯೂ ಹಂಚಿಲ್ಲ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಜಾತಿ ರಾಜಕಾರಣಕ್ಕೆ ಮಾನ್ಯತೆಯಿಲ್ಲ, ನೀತಿ ರಾಜಕಾರಣಕ್ಕೆ ಬೆಲೆ: ಸಿ.ಟಿ.ರವಿ 

    ಅಭ್ಯರ್ಥಿ ಕಡೆಯವರು ಪೋಲಿಸರ ನೇತೃತ್ವದಲ್ಲಿ ಗೋದಾಮು ಸೀಜ್ (Seize) ಮಾಡಿದ್ದು, ನಂತರ ಗೋದಾಮಿನಲ್ಲಿರುವ ಹೊಲಿಗೆ ಯಂತ್ರ ಹಾಗೂ ಟಿಫಿನ್ ಬಾಕ್ಸ್‌ಗಳನ್ನು ವಶಕ್ಕೆ ಪಡೆದು ಬೇರೆಡೆ ಸ್ಥಳಾಂತರಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಕೆ – ನಾಣ್ಯ ಎಣಿಸಿ ಸುಸ್ತಾದ ಅಧಿಕಾರಿಗಳು

  • ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳ್ಕರ್‌ಗೆ ಮತ್ತೊಂದು ಶಾಕ್

    ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳ್ಕರ್‌ಗೆ ಮತ್ತೊಂದು ಶಾಕ್

    – ಮತದಾರರಿಗೆ ಹಂಚಲು ತಂದಿದ್ದ ನೂರಾರು ಟಿಫಿನ್ ಬಾಕ್ಸ್ ಜಪ್ತಿ

    ಬೆಳಗಾವಿ: ರಮೇಶ್ ಜಾರಕಿಹೊಳಿ (Ramesh Jarkiholi) ಆಪ್ತ ನಾಗೇಶ್ ಮನ್ನೋಳ್ಕರ್‌ಗೆ (Nagesh Manolkar) ಚುನಾವಣೆ ಅಧಿಕಾರಿಗಳು ಮತ್ತೊಂದು ಶಾಕ್ ನೀಡಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮತಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ತಂದಿದ್ದ ನೂರಾರು ಟಿಫಿನ್ ಬಾಕ್ಸ್‌ಗಳನ್ನು (Tiffin Box) ಜಪ್ತಿ ಮಾಡಿಕೊಂಡಿದ್ದಾರೆ.

    ತಾಲೂಕಿನ ಕುದ್ರೆಮನಿ ಗ್ರಾಮದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಟಿಫಿನ್ ಬಾಕ್ಸ್‌ಗಳನ್ನು ಬೆಳಗಾವಿ ಡಿಸಿ, ಚುನಾವಣಾಧಿಕಾರಿ ನಿತೇಶ್ ಪಾಟೀಲ್ ಮಾರ್ಗದರ್ಶನದಲ್ಲಿ ಜಪ್ತಿ ಮಾಡಿಕೊಳ್ಳಲಾಗಿದೆ. ಬೆಳಗಾವಿ (Belagavi) ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುದ್ರೆಮನಿ ಗ್ರಾಮದಲ್ಲಿ ಮತದಾರರಿಗೆ ಗಿಫ್ಟ್ ಕೊಡಲು ಟಿಫಿನ್ ಬಾಕ್ಸ್ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದರು. ಇದನ್ನೂ ಓದಿ: ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರುವುದು ಸುಳ್ಳು ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ – ರೇವಣ್ಣ ಸವಾಲು

    ದಾಳಿ ವೇಳೆ ರಮೇಶ್ ಜಾರಕಿಹೊಳಿ ಆಪ್ತ, ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನ್ನೋಳ್ಕರ್ ಭಾವಚಿತ್ರ ಇರುವ ಟಿಫಿನ್ ಬಾಕ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. 400 ಕ್ಕೂ ಅಧಿಕ ಟಿಫಿನ್ ಬಾಕ್ಸ್ ಜಪ್ತಿ ಮಾಡಿಕೊಂಡ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆ ಅಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರುವುದು ಸುಳ್ಳು ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ – ರೇವಣ್ಣ ಸವಾಲು

    ಇತ್ತೀಚೆಗೆ ಬಾಡೂಟ ಆಯೋಜನೆ ಹಿನ್ನೆಲೆ ನಾಗೇಶ್ ಮನ್ನೋಳ್ಕರ್ ಸೇರಿ ಇಬ್ಬರ ವಿರುದ್ಧ ಕೇಸ್ ದಾಖಲಾಗಿತ್ತು.

  • ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಫಿನ್ ಬಾಕ್ಸ್ ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಂಜಯ್ ಪಾಟೀಲ್ ಟಾಂಗ್

    ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಫಿನ್ ಬಾಕ್ಸ್ ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಂಜಯ್ ಪಾಟೀಲ್ ಟಾಂಗ್

    ಬೆಳಗಾವಿ: ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಫಿನ್ ಬಾಕ್ಸ್ (Tiffin Box) ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ ಎನ್ನುವ ಮೂಲಕ ಬೆಳಗಾವಿ (Belagavi) ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮತ್ತು ಅಂಜಲಿ ನಿಂಬಾಳ್ಕರ್‌ಗೆ (Anjali Nimbalkar) ಮಾಜಿ ಶಾಸಕ ಸಂಜಯ್ ಪಾಟೀಲ್  (Sanjay Patil) ಟಾಂಗ್ ನೀಡಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಂಚುವವರು ಹಂಚುತ್ತಾರೆ. ನಾನು ಸದ್ಯಕ್ಕೆ ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ನಾನು ಗಂಡಸಾಗಿ ಹೇಗೆ ಹಳದಿ, ಕುಂಕುಮ ಕಾರ್ಯಕ್ರಮ ಮಾಡೋಕೆ ಆಗುತ್ತದೆ? ಕಾರ್ಯಕ್ರಮ ಮಾಡಲು ಎಲ್ಲರಿಗೂ ಸ್ವಾತಂತ್ರ‍್ಯವಿದೆ. ಎಲ್ಲರೂ ಏನು ಬೇಕಾದರೂ ಕಾರ್ಯಕ್ರಮ ಮಾಡಬಹುದು. ಎಲ್ಲರೂ ಅವರವರ ಕಾರ್ಯಕ್ರಮ ಮಾಡುತ್ತಾರೆ. ನಾನು ಪಕ್ಷದ ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಬೆಳೆಸಲು ಪಕ್ಷದ ಕಾರ್ಯಕ್ರಮಗಳಲ್ಲಿ ಇರುತ್ತೇನೆ ಎಂದರು.

    ಗ್ರಾಮೀಣ ಕ್ಷೇತ್ರದಲ್ಲಿ ಟಿಫಿನ್ ಬಾಕ್ಸ್ ಹಂಚುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಫಿನ್ ಬಾಕ್ಸ್ ತೆಗೆದುಕೊಳ್ಳುವವರು, ತೆಗೆದುಕೊಳ್ಳುತ್ತಿರಬಹುದು. ಆದರೆ ಟಿಫಿನ್ ಬಾಕ್ಸ್ ಬಿಜೆಪಿ ಕಾರ್ಯಕರ್ತರು ಯಾರೂ ತೆಗೆದುಕೊಳ್ಳುವುದಿಲ್ಲ. ಚುನಾವಣೆ ಅಭಿವೃದ್ಧಿ ಮೇಲೆ ಆಗಬೇಕೇ ಹೊರತು. ಏನಾದರೂ ಹಂಚಿ ಆಗಬಾರದು. ಬಾಬಾಸಾಹೇಬ ಅಂಬೇಡ್ಕರ್ ಅವರು ಎಲ್ಲರಿಗೂ ಒಂದೇ ಮತ ಹಾಕುವ ಅಧಿಕಾರ ಕೊಟ್ಟಿದ್ದಾರೆ. ಆ ಮತವನ್ನು ಯಾರೂ ಮಾರಾಟ ಮಾಡಿಕೊಳ್ಳಬಾರದು ಎಂದು ತಿಳಿಸಿದರು. ಇದನ್ನೂ ಓದಿ: ನಾಳೆಯಿಂದ ಹಾಲು, ಮೊಸರಿನ ದರ 2 ರೂ. ಏರಿಕೆ

    ನಿಮ್ಮ ಪಕ್ಷದವರು ಯಾರೂ ಏನೂ ಹಂಚಿಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ನಮ್ಮವರು ಪುಸ್ತಕ ಹಂಚಿದ್ದಾರೆ. ಆದರೆ ಅವರು ಸಾರಾಯಿಯನ್ನು ಹಂಚುತ್ತಿಲ್ಲವಲ್ಲ. ಪುಸ್ತಕ ಹಂಚಬೇಕು, ಬಡವರ ಮಕ್ಕಳಿಗೆ ಕಲಿಸಬೇಕು. ಇದರಿಂದ ಅವರಿಗೆ ಜ್ಞಾನ ಬರುತ್ತದೆ. ಟಿಫಿನ್ ಬಾಕ್ಸ್ ಚುನಾವಣೆ ಸಂದರ್ಭದಲ್ಲಿ ಹಂಚುವುದು, ನಮಗೆ ಮತ ಹಾಕಬೇಕು ಎಂದು ಷರತ್ತು ಹಾಕುವುದು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗುಡಿ ಕಟ್ಟಲು 50 ಲಕ್ಷ ರೂ. ಕೊಡುತ್ತೇನೆ, ಒಂದೂ ಬೇರೆ ಟೇಬಲ್ ಹಾಕಬಾರದು ಎಂದು ಕಂಡಿಷನ್ ಹಾಕುತ್ತಿದ್ದಾರೆ. ನಾನು 10 ವರ್ಷ ಏನೂ ಕೆಲಸ ಮಾಡಿಲ್ಲ. ಇದನ್ನು ಜನರ ಮೇಲೆ ಬಿಡುತ್ತೇನೆ ಎಂದರು.

    ನಾನು ನಾಳೆ ಬೆಳಗ್ಗಿನ ವಿಚಾರಕ್ಕೆ ಗ್ಯಾರಂಟಿ ಕೊಡುವುದಿಲ್ಲ. ನಾಳೆ ಬೆಳಗ್ಗೆ ಏಳುತ್ತೇವೋ ಇಲ್ಲವೋ ಗೊತ್ತಿಲ್ಲ. ಅಂತಹ ಆಸೆ ಇರಬಾರದು. ಯಾರು ಅಭಿವೃದ್ಧಿ ಮಾಡುತ್ತಾರೆ, ಅವರು ಏನೂ ಹಂಚುವ ಅವಶ್ಯಕತೆ ಇಲ್ಲ ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಂಜಯ್ ಪಾಟೀಲ್ ಟಾಂಗ್ ಕೊಟ್ಟರು. ಇದನ್ನೂ ಓದಿ: ವಿರೋಧಪಕ್ಷ ಮತಕ್ಕೋಸ್ಕರ ಭಯೋತ್ಪಾದನೆಗೆ ಸಪೋರ್ಟ್ ಮಾಡ್ತಿದೆ: ಪ್ರಮೋದ್ ಮುತಾಲಿಕ್

    Live Tv
    [brid partner=56869869 player=32851 video=960834 autoplay=true]

  • ಲಂಚ್‌ ಬಾಕ್ಸ್ ಎಂದು ತೆರೆದಾಗ ಸ್ಫೋಟ- ಇಬ್ಬರು ವಲಸೆ ಕಾರ್ಮಿಕರು ಸಾವು

    ಲಂಚ್‌ ಬಾಕ್ಸ್ ಎಂದು ತೆರೆದಾಗ ಸ್ಫೋಟ- ಇಬ್ಬರು ವಲಸೆ ಕಾರ್ಮಿಕರು ಸಾವು

    ತಿರುವನಂತಪುರಂ: ಬಾಂಬ್ ಸ್ಫೋಟಗೊಂಡು ಅಸ್ಸಾಂನ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

    ಫಸಲ್ ಹಕ್ ಹಾಗೂ ಪುತ್ರ ಶಹೀದುಲ್ ಮೃತ ಪಟ್ಟವರು. ಈ ಇಬ್ಬರು ಗುಜರಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಈ ಗುಜರಿ ಸಂಗ್ರಹಿಸುವಾಗ ಸ್ಟೀಲ್ ಬಾಂಬ್ ದೊರೆತಿದೆ. ಆದರೆ ಅವರು ಈ ಸ್ಟೀಲ್ ಬಾಂಬ್‍ನ್ನು ಊಟದ ಬಾಕ್ಸ್ ಎಂದು ತೆರೆಯುತ್ತಿದ್ದಂತೆಯೇ ಅದು ಸ್ಫೋಟಗೊಂಡಿದೆ.

    crime

    ಘಟನೆಯಲ್ಲಿ ಫಸಲ್ ಹಕ್ ಸ್ಥಳದಲ್ಲೇ ಮೃತಪಟ್ಟರೇ, ಅವರ ಪುತ್ರ ಶಹೀದುದಲ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧಿಸಿ ಪೊಲೀಸರು ಅವರ ಬಳಿ ಹೇಗೆ ಬಾಂಬ್ ಬಂದಿದೆ ಎನ್ನುವುದರ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಉದ್ಧವ್‌ಗೆ ಮತ್ತೆ ಶಾಕ್ – ಶಿವಸೇನೆಯ 64 ಪಾಲಿಕೆ ಸದಸ್ಯರು ಶಿಂಧೆ ಬಣಕ್ಕೆ ಸೇರ್ಪಡೆ

    POLICE JEEP

    ಈ ಹಿನ್ನೆಲೆಯಲ್ಲಿ ಮನೆಯ ಸುತ್ತಲಿನ ಎಲ್ಲಾ ಸ್ಥಳಗಳನ್ನು ಪರಿಶೀಲಿಸುತ್ತಿದ್ದಾರೆ. 5 ವಲಸೆ ಕಾರ್ಮಿಕರು ಮನೆಯಲ್ಲಿ ತಂಗಿದ್ದರು. ಘಟನೆ ನಡೆದಾಗ ಮೂವರು ಮನೆಯಲ್ಲಿರಲಿಲ್ಲ. ಇದನ್ನೂ ಓದಿ: ಬೋರಿಸ್ ಜಾನ್ಸನ್ ಬಳಿಕ ಯುಕೆ ಪಿಎಂ ಯಾರು? ಭಾರತ ಮೂಲದ ರಿಷಿಗಿದೆ ಚಾನ್ಸ್

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ಶೈಲಿಯಲ್ಲಿ ಹೈದ್ರಾಬಾದ್ ಮ್ಯೂಸಿಯಂನಿಂದಲೇ 2 ಕೆಜಿ ಚಿನ್ನದ ಟಿಫಿನ್ ಬಾಕ್ಸ್ ದರೋಡೆ!

    ಸಿನಿಮಾ ಶೈಲಿಯಲ್ಲಿ ಹೈದ್ರಾಬಾದ್ ಮ್ಯೂಸಿಯಂನಿಂದಲೇ 2 ಕೆಜಿ ಚಿನ್ನದ ಟಿಫಿನ್ ಬಾಕ್ಸ್ ದರೋಡೆ!

    ಹೈದರಾಬಾದ್: ತೆಲಂಗಾಣದ ರಾಜಧಾನಿಯಲ್ಲಿರುವ ಪ್ರಸಿದ್ಧ ನಿಜಾಮ್ ಮ್ಯೂಸಿಯಂ ಸಂಗ್ರಹಾಲಯದಲ್ಲಿ ಸಿನಿಮೀಯಾ ಶೈಲಿಯಲ್ಲಿ ಕಳ್ಳರು 2 ಕೆಜಿ ಚಿನ್ನದ ಟಿಫಿನ್ ಬಾಕ್ಸ್ ಸೇರಿದಂತೆ ಹಲವು ವಸ್ತುಗಳನ್ನು ಎಗರಿಸಿದ್ದಾರೆ.

    ದೇಶದಲ್ಲೇ ಪ್ರಸಿದ್ಧ ಹಾಗೂ ಅತಿ ಭದ್ರತೆ ಹೊಂದಿರುವ ನಿಜಾಮಾ ಮ್ಯೂಸಿಯಂನಲ್ಲಿ ಎರಡು ದಶಕಗಳಿಗೂ ಹಳೆಯದಾದ 2 ಕೆಜಿ ತೂಕದ ಚಿನ್ನದ ಟಿಫಿನ್ ಬಾಕ್ಸ್, ಟೀ ಕಪ್, ಸಾಸರ್ ಹಾಗೂ ಸ್ಪೂನ್‍ಗಳನ್ನು ಕಳ್ಳರು ಸಿನಿಮಾ ಶೈಲಿಯಲ್ಲಿ ಎಗರಸಿ ಪರಾರಿಯಾಗಿದ್ದಾರೆ.

    ಕಳ್ಳತನವಾಗಿದ್ದು ಹೇಗೆ?
    ದರೋಡೆಕೋರರು ಭಾನುವಾರ ತಡರಾತ್ರಿ ಮೊದಲನೇ ಮಹಡಿಯಲ್ಲಿರುವ ಕಬ್ಬಿಣದ ಸರಳು ಮತ್ತು ವೆಂಟಿಲೇಟರ್ ಗಳನ್ನು ಮುರಿದು ಹಗ್ಗದ ಮೂಲಕ ಟಿಫಿನ್ ಬಾಕ್ಸ್ ಇರುವ ಕೊಠಡಿಗೆ ಬಂದಿದ್ದಾರೆ. ಮಾಣಿಕ್ಯ, ವಜ್ರ ಮತ್ತು ಪಚ್ಚೆಗಳಿಂದ ಅಲಂಕರಿಸಲಾಗಿದ್ದ ಟಿಫಿನ್ ಬಾಕ್ಸ್ ಸೇರಿದಂತೆ ಇತರೆ ಚಿನ್ನದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಸೋಮವಾರ ಎಂದಿನಂತೆ ಕೊಠಡಿಯನ್ನು ಪರೀಕ್ಷಿಸಿದ ಸೆಕ್ಯೂರಿಟಿ ಸಿಬ್ಬಂದಿಗಳು ಕಳ್ಳತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಸ್ಥಳಕ್ಕೆ ಮೀರ್ ಚೌಕ್ ಪೊಲೀಸ್ ಠಾಣಾ ಅಧಿಕಾರಿಗಳು ಆಗಮಿಸಿದ್ದಾರೆ. ಈ ವೇಳೆ ಸ್ಥಳವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ, ಸಿಸಿಟಿವಿಯ ದೃಶ್ಯಾವಳಿಗಳನ್ನು ಪರೀಕ್ಷಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಸಂಗ್ರಾಹಲಯದ ಸಿಬ್ಬಂದಿಗಳೇ ಕಳ್ಳತನದಲ್ಲಿ ಭಾಗಿಯಾಗಿರುವುದರ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಹೈದರಾಬಾದಿನ ಕೊನೆಯ ನಿಜಾಮ 7 ನೇ ಮೀರ್ ಒಸ್ಮಾನ್ ಅಲಿ ಖಾನ್ ಅಸಫ್ ಜಾ 1936 ರಲ್ಲಿ ತನ್ನ ಬೆಳ್ಳಿ ಮಹೋತ್ಸವದ ಜ್ಞಾಪಕಾರ್ಥವಾಗಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದ್ದನು. ಈ ಮ್ಯೂಸಿಯಂನಲ್ಲಿ ಹೈದರಾಬಾದಿನ ನಿಜಾಮರಿಗೆ ಸೇರಿದ ಪ್ರಮುಖ ಕಾಣಿಕೆಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=dN3WLhctcCE