Tag: ಟಿಪ್ಪು ಸುಲ್ತಾನ

  • ಈ ಹಿಂದೆ ಪಠ್ಯಪುಸ್ತಕಗಳಲ್ಲಿ ಟಿಪ್ಪು ವೈಭವೀಕರಣ ಇತ್ತು ಈಗ ಇಲ್ಲ: ಬಿ.ಸಿ ನಾಗೇಶ್

    ಈ ಹಿಂದೆ ಪಠ್ಯಪುಸ್ತಕಗಳಲ್ಲಿ ಟಿಪ್ಪು ವೈಭವೀಕರಣ ಇತ್ತು ಈಗ ಇಲ್ಲ: ಬಿ.ಸಿ ನಾಗೇಶ್

    ಮಡಿಕೇರಿ: ಈ ಹಿಂದೆ ಪಠ್ಯಪುಸ್ತಕದಲ್ಲಿ (Textbooks) ನಮ್ಮನ್ನಾಳಿದ ರಾಜರ ಸರಿಯಾದ ಇತಿಹಾಸ ಇರಲಿಲ್ಲ. ಮೆಕಾಲೆ ಶಿಕ್ಷಣ ಪದ್ಧತಿ ಇತ್ತು. ಟಿಪ್ಪುವಿನಂತಹ (Tipu Sultan) ದೊರೆಗಳ ವೈಭವೀಕರಣ ಇತ್ತು. ಕೆಂಪೇಗೌಡರು (Kempe Gowda), ಮೈಸೂರು (Mysuru) ರಾಜರ ಇತಿಹಾಸ ತೆಗೆಯಲಾಗಿತ್ತು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C Nagesh) ಬೇಸರ ವ್ಯಕ್ತಪಡಿಸಿದರು.

    tippu

    ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, ಈ ನಾಡನ್ನು ಬ್ರಿಟಿಷರಿಗೂ ಮುನ್ನ ನಮ್ಮ ರಾಜರು ವೈಜ್ಞಾನಿಕವಾಗಿ ಆಳ್ವಿಕೆ ಮಾಡಿದ್ದರು. ಉತ್ತಮ ನಗರಗಳನ್ನು, ಕೆರೆಕಟ್ಟೆಗಳನ್ನು ಕಟ್ಟಿದ್ದರು. ಪ್ರಕೃತಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದರು ಎಂಬುದನ್ನು ತಿಳಿಸುವುದೇ ನಾಡಪ್ರಭು ಕೆಂಪೇಗೌಡ ಅವರ ರಥಯಾತ್ರೆಯ ಉದ್ದೇಶ ಎಂದರು. ಕೆಂಪೇಗೌಡರು ಎಲ್ಲರಿಗೂ ಜನಹಿತ, ಜನಪರವಾದ ಆಡಳಿತ ನೀಡಿದ್ದರು. ಇಂದಿನ ರಾಜಕಾರಣಿಗಳು, ಅಧಿಕಾರಿಗಳಿಗೆ ಮೇಲ್ಪಂಕ್ತಿಯಾಗಿದ್ದರು ಎಂದರು. ಇದನ್ನೂ ಓದಿ: ರಾಜ್ಯದಲ್ಲಿರುವ ಎಲ್ಲ ಅರೇಬಿಕ್ ಶಾಲೆಗಳ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು: ಬಿ.ಸಿ ನಾಗೇಶ್

    ನವೆಂಬರ್ 11 ರಂದು ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಉದ್ಘಾಟಿಸಲಿದ್ದಾರೆ. ಅದರ ನಿರ್ಮಾಣಕ್ಕೆ ರಾಜ್ಯದ ಎಲ್ಲ ಭಾಗಗಳಿಂದ ಪವಿತ್ರ ಮಣ್ಣನ್ನು ತರಲಾಗುತ್ತಿದೆ. ಕನಿಷ್ಠ ಪಕ್ಷ ಆ ಪ್ರತಿಮೆ ನೋಡಿಯಾದರೂ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಜನಪರ ಆಡಳಿತ ನೀಡುವ ಮಾನಸಿಕತೆ ಬರಲಿ ಎಂಬುದು ಇದರ ಉದ್ದೇಶ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಭರ್ಜರಿ ಪೋಸ್ ಸೆರೆಹಿಡಿದ ಸಿಎಂ ಬೊಮ್ಮಾಯಿ!

    Live Tv
    [brid partner=56869869 player=32851 video=960834 autoplay=true]

  • ನಾನು ಮಹಾಭಾರತದ ಜಯವಿಜಯ ಇದ್ದಂತೆ, ಕೆಲವು ಮೊದಲೇ ಗೊತ್ತಾಗುತ್ತೆ: ಸಿಎಂ ಇಬ್ರಾಹಿಂ

    ನಾನು ಮಹಾಭಾರತದ ಜಯವಿಜಯ ಇದ್ದಂತೆ, ಕೆಲವು ಮೊದಲೇ ಗೊತ್ತಾಗುತ್ತೆ: ಸಿಎಂ ಇಬ್ರಾಹಿಂ

    -ಶೃಂಗೇರಿ ಶ್ರೀಗಳಿಂದ ಟಿಪ್ಪು ಬಗ್ಗೆ ಕೇಳಿ ತಿಳಿಯಿರಿ
    -ವಿಶ್ವನಾಥ್ ಪುಸ್ತಕ ಬರೆದವರು, ಇತಿಹಾಸ ಅರಿತವರು
    -ಟಿಪ್ಪು ಪಠ್ಯ ಕೈ ಬಿಡಲು ಸುರೇಶ್ ಕುಮಾರ್ ಮೇಲೆ ಒತ್ತಡ

    ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದಿದ್ದು ಕೋಮು ಗಲಭೆ ಅಲ್ಲ ಎಂದು ನಾನು ಅವತ್ತೆ ಹೇಳಿದ್ದೆ. ಅಂದು ನಡೆದಿದ್ದು ಡ್ರಗ್ ಮಾಫಿಯಾ ಹಾಗೂ ಪೊಲೀಸರ ನಡುವಿನ ಹೊಡೆದಾಟ. ಅವನಿಗೆ ಡ್ರಗ್ಸ್ ಮಾರೋಕೆ ಬಿಡ್ತಾರೆ, ನನಗೆ ಬಿಡಲ್ಲ ಅಂತ ಗಲಾಟೆ ಶುರುವಾಯ್ತು ಇಂದು ಪೊಲೀಸ್ ಕಮೀಷನರ್ ಹೇಳಿದ್ದಾರೆ. ನಾನು ಮಹಾಭಾರತದ ಜಯ ವಿಜಯ ಇದ್ದ ಹಾಗೆ. ಕೆಲ ವಿಷಯಗಳ ನನಗೆ ಮೊದಲೇ ಗೊತ್ತಾಗುತ್ತೆ, ಹೇಳಿದ್ರೆ ಯಾರು ನಂಬಲ್ಲ ಎಂದು ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಹೇಳಿದ್ರು.

    ಶೃಂಗೇರಿಯಲ್ಲಿ ಶಂಕರಾಚಾರ್ಯ ಮೂರ್ತಿ ಮೇಲೆ ಧ್ವಜ ಹಾಕಿದ ಪ್ರಕರಣದಲ್ಲಿ ಗೂಬೆ ಕೂರಿಸೋಕೆ ಹೋಗಿದ್ದರು. ನಂತರ ಕುಡಿದವನು ತರೋದು ನೋಡಿ ಸುಮ್ಮನಾದ್ರು. ಕಿಡಿಗೇಡಿಗಳು ಎಲ್ಲ ಸಮಾಜದಲ್ಲೂ ಇದ್ದಾರೆ. ಹಿಂದೂಗಳಲ್ಲೂ ಇದ್ದಾರೆ, ಮುಸ್ಲಿಮರಲ್ಲೂ ಇದ್ದಾರೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮಾಜವನ್ನ ದೂಷಿಸೋದು ಬೇಡ. ಯಾರ ಹೃದಯ ಚೆನ್ನಾಗಿದೆ ಅವರಿಗೆ ಟಿಪ್ಪು ಚೆನ್ನಾಗಿದ್ದಾನೆ. ಯಾರಿಗೆ ಜಾತಿ ವೈರಸ್ ಇದ್ಯೋ ಅವರಿಗೆ ಟಿಪ್ಪು ವಿರೋಧಿ. ಮಾಜಿ ಸಚಿವ ಹೆಚ್ ವಿಶ್ವನಾಥ್ ಮೈಸೂರಿನವರಾಗಿದ್ದು, ಪುಸ್ತಕ ಬರೆದವರು, ಇತಿಹಾಸ ಅರಿತವರು. ಅವರು ಯಾವ ಪಾರ್ಟಿಯಲ್ಲಿದ್ದಾರೆ ಬೇಕಿಲ್ಲ. ಈ ಹಿಂದೆ ಯಡಿಯೂರಪ್ಪ ಮತ್ತು ರಾಷ್ಟ್ರೊಪತಿಗಳು ಟಿಪ್ಪು ಗುಣಗಾನ ಮಾಡಿದ್ದರು ಎಂದರು.

    ಇಷ್ಟು ದಿನ ವೋಟ್ ಬ್ಯಾಂಕ್ ಅಂತ ಕಾಂಗ್ರೆಸ್ ನವರನ್ನ ದೂರುತ್ತಿದ್ದರು. ಇಲ್ಲಿಯವರೆಗೆ ಹಿಂದುತ್ವದ ಬಗ್ಗೆ ಮಾತನಾಡಿದ್ರು. ಶೃಂಗೇರಿ ಶ್ರೀಗಳ ಬಗ್ಗೆ ನಿಮಗೆ ನಂಬಿಕೆಯಿದೆಯಲ್ಲ .ಆ ಶ್ರೀಗಳ ಬಳಿಯೇ ಟಿಪ್ಪು ಬಗ್ಗೆ ಕೇಳಿ ಬಿಜೆಪಿಯವರು ತಿಳಿದುಕೊಳ್ಳಬೇಕಿದೆ. ನಂಜನಗೂಡು ದೇಗುಲಕ್ಕೆ ಟಿಪ್ಪು ಕೊಟ್ಟ ಪಚ್ಚೆವಜ್ರಕ್ಕೆ ಇವತ್ತಿಗೂ ಮಂಗಳಾರತಿ ನಡೆಯುತ್ತೆ. ನಂತರ ಶ್ರೀಕಂಠೇಶ್ವರನಿಗೆ ಪೂಜೆ ಆಗುತ್ತೆ. ಶೃಂಗೇರಿಯಲ್ಲಿ 1000 ಬ್ರಾಹ್ಮಣರ ಊಟಕ್ಕೆ ಟಿಪ್ಪು ಖಜಾನೆಯಿಂದ ಹಣ ಹೋಗ್ತಿತ್ತು. ಮಲಗಿದವರನ್ನ ಎಬ್ಬಿಸಬಹುದು. ಆದ್ರೆ ಕಣ್ಣು ಮುಚ್ಚಿ ಕುಳಿತವರನ್ನ ಎಬ್ಬಿಸೋದು ಕಷ್ಟ. ವಿಶ್ವನಾಥ್ ಅವರು ಸತ್ಯವನ್ನ ಹೊರಗೆ ಹಾಕಿದ್ದಾರೆ ಎಂದು ತಿಳಿಸಿದರು.

    ಹೆಚ್.ವಿಶ್ವನಾಥ್ ಸಚಿವರಾಗಬೇಕು ಅನ್ನೋದು ನನ್ನ ಆಸೆಯೂ ಹೌದು. ಸುಮ್ಮನೆ ಬಿಜೆಪಿ ಅಂತ ವಿರೋಧ ಮಾಡೋದಲ್ಲ. ಸಚಿವ ಸುರೇಶ್ ಕುಮಾರ್ ಅವರ ಬಗ್ಗೆ ನನಗೆ ಪ್ರೀತಿಯಿದೆ. ನಾನು ಪಕ್ಷಾತೀತ ರಾಜಕಾರಣ ಮಾಡುವವನು. ಪಠ್ಯದಿಂದ ಟಿಪ್ಪು ಕೈಬಿಡೋಕೆ ಸುರೇಶ್ ಕುಮಾರ್ ಮೇಲೆ ಒತ್ತಡವಿದೆ ಎಂದು ಆರೋಪಿಸಿದರು.

     

  • ಬ್ರಿಟಿಷರ ವಿರುದ್ಧ ಹೋರಾಡಿದವರಿಗೆ ಬಿಜೆಪಿಯಿಂದ ದೇಶದ್ರೋಹಿ ಪಟ್ಟ: ರಮೇಶ್ ಕುಮಾರ್

    ಬ್ರಿಟಿಷರ ವಿರುದ್ಧ ಹೋರಾಡಿದವರಿಗೆ ಬಿಜೆಪಿಯಿಂದ ದೇಶದ್ರೋಹಿ ಪಟ್ಟ: ರಮೇಶ್ ಕುಮಾರ್

    ಕೋಲಾರ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರಿಗೆ ಬಿಜೆಪಿ ದೇಶದ್ರೋಹ ಪಟ್ಟ ಕಟ್ಟಿದೆ. ಅದು ಬಿಜೆಪಿಯ ನಂಬಿಕೆ ಮತ್ತು ಸಿದ್ದಾಂತ. ಅವರ ಕೈಯಲ್ಲಿ ಅಧಿಕಾರಿವಿದೆ ಹಾಗಾಗಿ ಅವರು ಇದೆಲ್ಲಾ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ.ಆರ್. ರಮೇಶ್ ಕುಮಾರ್ ಆರೋಪಿಸಿದ್ದಾರೆ.

    ಕೋಲಾರದ ಶ್ರೀನಿವಾಸಪುರದ ಗೌನಿಪಲ್ಲಿಯಲ್ಲಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷರು ಯಾರ ಪರ ಇದ್ದವರು, ಅಂತಹವರ ವಿರುದ್ಧ ಹೋರಾಟ ಮಾಡಿದವರಿಗೆ ದೇಶ ದ್ರೋಹದ ಪಟ್ಟಿ ಕಟ್ಟಿದವರು ಬಿಜೆಪಿಯವರು ಎಂದು ವಾಗ್ದಾಳಿ ಮಾಡಿದರು.

    ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಪ್ರಾಣ ಕಳೆದುಕೊಂಡವರು ಟಿಪ್ಪು ಸುಲ್ತಾನ್. ಬಿಜೆಪಿ ಅವರು ಇತಿಹಾಸ ತಿರುಚಲು ಹೊರಟಿದ್ದಾರೆ. ಅವರ ಕೈಯಲ್ಲಿ ಅಧಿಕಾರವಿದೆ ಅವರು ಮಾತನಾಡುತ್ತಾ ಇದ್ದರೆ. ವೈಯಕ್ತಿಕ ಆರೋಪಗಳು ಮಾಡುವುದು ಸರಿಯಲ್ಲ, ನಮಗೆ ಈ ವಿಚಾರವಾಗಿ ಸಹಮತ ಇಲ್ಲ. ಆದರೆ ಕೆಲವರು ಅವರೇನೇ ಮಾಡಿದರು ಸರಿ ಎನ್ನುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಬಿಜೆಪಿ ಸರ್ಕಾರ ನೂರು ದಿನ ಪೂರೈಸಿರುವುದು ಸಮಾಧಾನ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್, ಸಮಾಧಾನ ಅವರಿಗೂ ಇಲ್ಲ, ನಮಗೂ ಇಲ್ಲ. ಇದೇ ವೇಳೆ ಸಿಎಂ ಯಡಿಯೂರಪ್ಪ ಆಡಿಯೋ ವಿಚಾರವಾಗಿ ಮಾತನಾಡಲು ನಿರಾಕರಿಸಿದ ಅವರು, ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಅವರ ಅಜೆಂಡಾ ಜಾತ್ಯತೀತವಾಗಿದ್ದು ಅದನ್ನು ಸ್ವಾಗತಿಸುತ್ತೇನೆ. ಪವನ್ ಕಲ್ಯಾಣ್ ಒಳ್ಳೆಯ ಆದರ್ಶಗಳನ್ನು ಹೊಂದಿರುವ ವ್ಯಕ್ತಿ, ವಯಸ್ಸಿನಲ್ಲಿ ದೊಡ್ಡವನಾದ ಕಾರಣ ಆಶೀರ್ವಾದ ಮಾಡಿದ್ದೇನೆ ಎಂದು ತಿಳಿಸಿದರು.

  • ಮೋದಿಗೆ ಅಮೆರಿಕದಲ್ಲಿ ಬುದ್ಧ ಬೇಕು, ಭಾರತದಲ್ಲಿ ಯುದ್ಧ ಬೇಕು: ಮಹದೇವಪ್ಪ ಕಿಡಿ

    ಮೋದಿಗೆ ಅಮೆರಿಕದಲ್ಲಿ ಬುದ್ಧ ಬೇಕು, ಭಾರತದಲ್ಲಿ ಯುದ್ಧ ಬೇಕು: ಮಹದೇವಪ್ಪ ಕಿಡಿ

    ಮಂಡ್ಯ: ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ಮಾಜಿ ಸಚಿವ ಎಸ್.ಸಿ ಮಹದೇವಪ್ಪ ಕಿಡಿಕಾರಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದಲ್ಲಿ ಬುದ್ಧ ಬೇಕು, ಭಾರತದಲ್ಲಿ ಯುದ್ಧ ಬೇಕು ಎಂದು ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಟಿಪ್ಪು ಸುಲ್ತಾನ್ ರಾಜ್ಯದಲ್ಲಿ ಮೊದಲ ಬಾರಿಗೆ ಭೂ ಸುಧಾರಣೆಯನ್ನ ಜಾರಿಗೆ ತಂದ ವ್ಯಕ್ತಿ. ಆತ ದೇಶದ ಸ್ವಾತಂತ್ರ್ಯ ಸೇನಾನಿ. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಒಬ್ಬ ಶ್ರೀಮಂತನಿಗೂ ಜಮೀನು ಕೊಟ್ಟಿರಲಿಲ್ಲ. ದೇವದಾಸಿ ಪದ್ಧತಿಯನ್ನು ಅಳಿಸಿ ಹಾಕಿ ರೇಷ್ಮೆ ಕೃಷಿಯನ್ನು ಪರಿಚಯಿಸಿದ್ದ. ವಾಣಿಜ್ಯ ವಹಿವಾಟಿಗಾಗಿ ಹರಿಹರ, ಗುಬ್ಬಿಯನ್ನು ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ಶೃಂಗೇರಿಯ ಶಾರದಾ ಪೀಠದಲ್ಲಿ ಮರಾಠರು ದಾಳಿ ಮಾಡಿ ಚಿನ್ನದ ಕಳಶವನ್ನು ಹೋತ್ತುಕೊಂಡು ಹೋಗಿದ್ದರು. ಆಗ ಟಿಪ್ಪು ಮರಾಠರ ವಿರುದ್ಧ ಹೋರಾಡಿ ಚಿನ್ನದ ಕಳಸವನ್ನು ಮತ್ತೆ ಶೃಂಗೇರಿ ಮಠಕ್ಕೆ ತಂದು ಕೊಟ್ಟಿದ್ದ ಎಂದು ಹೇಳಿದರು. ಇದನ್ನೂ ಓದಿ: ಟಿಪ್ಪು ಕಾಲದಲ್ಲಿರುತ್ತಿದ್ದರೆ ಅಬ್ದುಲ್ ಸಿದ್ದರಾಮಯ್ಯ ಆಗ್ತಿದ್ರು- ಅಶೋಕ್

    ಹಿಂದೂ ಮತಾಂದರು ಈಗ ಮತಾಂದ ಕೆಲಸಕ್ಕೆ ಕೈ ಹಾಕಿದ್ದಾರೆ. ಟಿಪ್ಪು ಅಂತಹ ಚಾರಿತ್ರಿಕ ಪುರಷನನ್ನು ಚರಿತ್ರೆಯಿಂದ ಹೋಗಲಾಡಿಸಲು ಮುಂದಾಗಿದ್ದಾರೆ. ಹಾಗೆಯೇ ರಾಜ್ಯ ಸರ್ಕಾರ ಬೌದ್ಧಿಕ ದಿವಾಳಿಯಿಂದ ಟಿಪ್ಪುವನ್ನು ಪಠ್ಯದಿಂದ ತೆಗೆಯಲು ಮುಂದಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿಗೆ ಟಿಪ್ಪು ಬೇಡ, ಬಿಎಸ್‍ವೈ ಜೈಲಿಗೆ ಹೋದ ವಿಚಾರವನ್ನು ಮಕ್ಕಳು ಓದಬೇಕಿದೆ – ತನ್ವೀರ್ ಸೇಠ್