Tag: ಟಿಪ್ಪುಸುಲ್ತಾನ್

  • ಮೋದಿಯಂತೆ ಬೊಮ್ಮಾಯಿ ಸಿಎಂ ಹುದ್ದೆ ಬಿಟ್ಟು ಉಳಿದೆಲ್ಲ ಖಾತೆಗಳನ್ನ ಹಂಚಿಕೆ ಮಾಡ್ಬೇಕು – ಯತ್ನಾಳ್

    ಮೋದಿಯಂತೆ ಬೊಮ್ಮಾಯಿ ಸಿಎಂ ಹುದ್ದೆ ಬಿಟ್ಟು ಉಳಿದೆಲ್ಲ ಖಾತೆಗಳನ್ನ ಹಂಚಿಕೆ ಮಾಡ್ಬೇಕು – ಯತ್ನಾಳ್

    – ಐದೈದು ಖಾತೆ ಇಟ್ಕೊಂಡು ಕೂರೋದು ಸರಿಯಲ್ಲ
    – ಈಶ್ವರಪ್ಪಗೆ ಸಚಿವ ಸ್ಥಾನ ಕೊಡಿ

    ವಿಜಯಪುರ: ಪ್ರಧಾನಿ ಮೋದಿ (Naredra Modi) ಅವರು ಮುಖ್ಯಮಂತ್ರಿಯಾಗಿದ್ದಾಗ ಸಿಎಂ ಹುದ್ದೆ ಬಿಟ್ಟು ಬೇರೆ ಯಾವ ಖಾತೆಯನ್ನೂ ಅವರು ಹೊಂದಿರಲಿಲ್ಲ. ಹಾಗೆಯೇ ಬೊಮ್ಮಾಯಿ (Basavaraj Bommai) ಅವರು ಸಿಎಂ ಹುದ್ದೆ ಬಿಟ್ಟು ಉಳಿದೆಲ್ಲ ಖಾತೆಗಳನ್ನ ಹಂಚಿಕೆ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಒತ್ತಾಯಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೆಲವೊಂದು ಖಾಲಿ ಇರುವ ಖಾತೆಗಳನ್ನು ಸಿಎಂ ತಾವೇ ಇಟ್ಟುಕೊಂಡು ಕೂರಬಾರದು. ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ಐದೈದು ಖಾತೆ ಒಬ್ಬರೇ ಇಟ್ಟುಕೊಂಡು ಕೂರೋದು ಸರಿಯಲ್ಲ. ಮೋದಿಯವರು ಸಿಎಂ ಆಗಿದ್ದಾಗ ಸಿಎಂ ಬಿಟ್ಟು ಬೇರೆ ಯಾವ ಖಾತೆಯನ್ನೂ ಇಟ್ಟುಕೊಂಡಿರಲಿಲ್ಲ. ಅದೇ ರೀತಿ ಬೊಮ್ಮಾಯಿ (Basavaraj Bommai) ಅವರು ಕೂಡ ಸಿಎಂ ಸ್ಥಾನ ಬಿಟ್ಟು ಉಳಿದೆಲ್ಲವುಗಳನ್ನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಚೀನಾದ ರಹಸ್ಯ ಪೊಲೀಸ್‌ ಠಾಣೆ ಕಾರ್ಯಾಚರಣೆ!

    ಈಶ್ವರಪ್ಪನವರ (Eshwarappa) ಮೇಲೆ ಸುಳ್ಳು ಆರೋಪ ಮಾಡಿದ ಕಾರಣ ರಾಜಿನಾಮೆ ನೀಡಿದ್ದರು. ಈಗ ಅವರಿಗೂ ಸಚಿವ ಸ್ಥಾನ ನೀಡಬೇಕು. ಅದರೊಂದಿಗೆ ಬಸವರಾಜ ಹೊರಟ್ಟಿ (Basavaraj Horatti) ಅವರಿಗೂ ನೀಡಿದ್ದ ಭರವಸೆಯಂತೆ ಸಭಾಪತಿ ಸ್ಥಾನ ಕೊಡಬೇಕು. ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಪಕ್ಷದ ಮೇಲೆ ನಂಬಿಕೆ ಹೊರಟುಹೋಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಬೀದರ್‌ನ ಮರದಾಸಾದಲ್ಲಿ (Madrasa) ಆಯುಧ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅಲ್ಲಿ ಅಂಬಾಭವಾನಿ ಗುಡಿ ಇದ್ದದ್ದು ಸತ್ಯ. ಅಲ್ಲಿ ಪೂಜೆ ಮಾಡಿದ್ದರಲ್ಲಿ ತಪ್ಪಿಲ್ಲ. ಹಲವು ವರ್ಷಗಳಿಂದಲೂ ಅಲ್ಲಿ ಪೂಜೆ ನಡೆದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕಲ್ಯಾಣ ಪರ್ವ ಕಾರ್ಯಕ್ರಮ ಇಬ್ಭಾಗ – ಬಸವ ಭಕ್ತರು ಅಸಮಾಧಾನ

    ಶಿಕ್ಷಕರ (Teachers) ಅಕ್ರಮ ನೇಮಕಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರ ಕಾಲದಲ್ಲಿ ಶಿಕ್ಷಕರನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಮೆರಿಟ್ ಇಲ್ಲ, ಅರ್ಜಿ ಇಲ್ಲ, ಡೈರೆಕ್ಟ್ ಸೆಲೆಕ್ಷನ್ ಮಾಡಿಕೊಂಡಿದ್ದಾರೆ. ಈ ಪ್ರಮಾದಿಂದಾಗಿ ಅವರನ್ನು ಬಂಧಿಸಿರುವುದು ಸರಿಯಾಗಿಯೇ ಇದೆ. ಸಿಒಡಿ ತನಿಖೆ ನಡೆಸಿ ಇದಕ್ಕೊಂದು ತಾರ್ಕಿಕ ಅಂತ್ಯ ಕೊಡಬೇಕೆಂದು ಒತ್ತಾಯಿಸಿದ್ದಾರೆ.

    ಟಿಪ್ಪು ಮತಾಂಧ ರಾಜ: ಟಿಪ್ಪು ಹೆಸರಿಗೆ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್‌ (Wodeyar Express) ಹೆಸರನ್ನು ಇಟ್ಟಿದ್ದು, ಒಳ್ಳೆಯ ವಿಚಾರ. ಟಿಪ್ಪು ಲಕ್ಷಾಂತರ ಹಿಂದೂಗಳನ್ನ ಕೊಲೆ ಮಾಡಿದ ಮತಾಂಧ ರಾಜ. ಹೈದರ್ ಅಲಿ ಒಡೆಯರ್ ಆಸ್ಥಾನಲ್ಲಿ ಸೈನಿಕನಾಗಿದ್ದ. ಅವರೆಲ್ಲಾ ಮೋಸ ಮಾಡಿದವರು. ಆ ರೈಲಿಗೆ ಟಿಪ್ಪು ಅಂತಾ ಹೆಸರಿಟ್ಟಿದ್ದೇ ತಪ್ಪು. ಒಡೆಯರ್ ಅವರ ಹೆಸರು ಇಟ್ಟಿದ್ದು ಒಳ್ಳೆಯದೇ ಆಯ್ತು ಎಂದು ಶ್ಲಾಘಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟಿಪ್ಪುವಿನ ವೈಭವೀಕರಣ ಕೈಬಿಟ್ಟು, ಆತನ ಕ್ರೌರ್ಯದ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಿ: ಮುತಾಲಿಕ್

    ಟಿಪ್ಪುವಿನ ವೈಭವೀಕರಣ ಕೈಬಿಟ್ಟು, ಆತನ ಕ್ರೌರ್ಯದ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಿ: ಮುತಾಲಿಕ್

    ಬೆಂಗಳೂರು: ಪಠ್ಯದಲ್ಲಿ ಟಿಪ್ಪುವಿನ ವೈಭವೀಕರಣ ಕೈಬಿಡುವುದು ಮಾತ್ರವಲ್ಲದೇ, ಆತನ ಕ್ರೌರ್ಯದ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಿ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಮೈಸೂರು ಹುಲಿ ಅಲ್ಲ, ಆತನ ಕ್ರೌರ್ಯದ ಬಗ್ಗೆ ದಾಖಲೆಯನ್ನು ನಾವು ಒದಗಿಸುತ್ತೇವೆ. ಟಿಪ್ಪು ಮಹಿಳೆಯರ ಮೇಲೆ ಮಾಡಿದ ಅತ್ಯಾಚಾರ, ಟಿಪ್ಪು ಮಾಡಿದ ದೇವಸ್ಥಾನ ದ್ವಂಸ ಹಾಗೂ ಟಿಪ್ಪುವಿನ ಮತಾಂತರ ನಡೆಯ ಬಗ್ಗೆ ಪಠ್ಯದಲ್ಲಿ ಹಾಕಬೇಕು. ಈ ಕುರಿತು ಸರ್ಕಾರಕ್ಕೆ, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ದಾಖಲೆಯನ್ನು ನೀಡುತ್ತೇವೆ. ಈ ಹಿನ್ನೆಲೆಯಲ್ಲಿ ಟಿಪ್ಪುವಿನ ಕ್ರೌರ್ಯದ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದರು.

    tippu

    ಧರ್ಮ ಯುದ್ಧ ಅಂತ್ಯಕ್ಕೆ 61 ಸಾಹಿತಿಗಳಿಂದ ಸಿಎಂಗೆ ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೂಗಳ ಹತ್ಯೆ, ದೇವಾಲಯದ ಮೇಲೆ ದಾಳಿಯಾದಾಗ ಯಾರೂ ಧ್ವನಿ ಎತ್ತಿಲ್ಲ. ಹರ್ಷ ಕೊಲೆ ಆಯ್ತು, ದಲಿತ ಎಂಎಲ್‍ಎ ಮನೆಗೆ ಬೆಂಕಿ ಹಚ್ಚಿದರು. ಸ್ಟೇಷನ್‍ಗೆ ಬೆಂಕಿ ಹಚ್ಚಿದರು. ಆಗಲೂ ಧ್ವನಿ ಎತ್ತಿಲ್ಲ. ಆದರೆ ಈಗ ಧ್ವನಿ ಎತ್ತಿದ್ದಾರೆ. ಕೋರ್ಟ್‍ನ ತೀರ್ಪು ಬಂದಾಗ ಮುಸ್ಲಿಂ ಸಂಘಟನೆಗೆ ಪತ್ರ ಬರೆಯಬೇಕಿತ್ತು. ಆದರೆ ಆಗ ಮಾತನಾಡಿಲ್ಲ. ಇದೆಲ್ಲವನ್ನು ಗಮನಿಸಿದರೇ ಬುದ್ಧಿಜೀವಿಗಳು ಮುಸ್ಲಿಂ, ಕ್ರಿಶ್ಚಿಯನ್ ಏಜೆಂಟರಾಗಿದ್ದಾರೆ ಎಂದೆನಿಸುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಟಿಪ್ಪು ಹೆಸರಿನಲ್ಲಿ ಪೂಜೆ ಮಾಡಿದ್ರೆ ದೇವರ ಶಕ್ತಿ ಕಡಿಮೆಯಾಗುತ್ತದೆ: ಕಲ್ಲಡ್ಕ ಕಿಡಿ

    ಪಠ್ಯದಲ್ಲಿ ಭಗವದ್ಗೀತೆ ಕೈಬಿಡುವ ಕುರಿತ ವಿಷಯಕ್ಕೆ ಸಂಬಂಧಿಸಿ ಅವರು, ಸಾವಿರಾರು ವರ್ಷದಿಂದ ಸಾಮರಸ್ಯದಿಂದ ನಡೆದುಕೊಂಡ ಬಂದ ದೇಶ ನಮ್ಮದಾಗಿದೆ. ಭಗವದ್ಗೀತೆಯಲ್ಲಿ ಮನುಷ್ಯ ಹೇಗೆ ಬದುಕುಬೇಕು ಎಂದು ಹೇಳಿದೆ. ಮಾನವೀಯತೆ ಅಂಶ ಹೇಳಿರುವ ಭಗವದ್ಗೀತೆ ಕಂಡರೆ ನಿಮಗೆ ಯಾಕೆ ಉರಿ. ನಮಗೆ ಸರ್ವಧರ್ಮದ ಪಾಠ ಹೇಳಬೇಡಿ. ಬೇರೆ ಧರ್ಮದವರಿಗೆ ಹೇಳಿ. ಸಂವಿಧಾನ ಕಲಿಸಿ. ಅದಕ್ಕೆ ವಿರೋಧವಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧರ್ಮ ಯುದ್ಧ ಅಂತ್ಯಕ್ಕೆ ಬುದ್ಧಿಜೀವಿಗಳ ಮನವಿ- 61 ಸಾಹಿತಿಗಳಿಂದ ಸಿಎಂಗೆ ಪತ್ರ

  • ಟಿಪ್ಪು ಹೆಸರಿನಲ್ಲಿ ಪೂಜೆ ಮಾಡಿದ್ರೆ ದೇವರ ಶಕ್ತಿ ಕಡಿಮೆಯಾಗುತ್ತದೆ: ಕಲ್ಲಡ್ಕ ಕಿಡಿ

    ಟಿಪ್ಪು ಹೆಸರಿನಲ್ಲಿ ಪೂಜೆ ಮಾಡಿದ್ರೆ ದೇವರ ಶಕ್ತಿ ಕಡಿಮೆಯಾಗುತ್ತದೆ: ಕಲ್ಲಡ್ಕ ಕಿಡಿ

    ಉಡುಪಿ: ಟಿಪ್ಪು ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವುದು ಸರಿಯಲ್ಲ. ಅದು ದೇವರಿಗೆ ಮಾಡುವ ಅಪಮಾನ. ಇದರಿಂದ ದೇವರ ಶಕ್ತಿ ಕಡಿಮೆಯಾಗುತ್ತದೆ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

    ಶೃಂಗೇರಿಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ನಡೆಯುವ ಸಲಾಂ ಆರತಿ ಪೂಜೆಗೆ ಸಂಬಂಧಿಸಿದಂತೆ ಉಡುಪಿಯ ಬೈಂದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಲಾಂ ತೆಗೆದು ದೇವರ ಹೆಸರಿನಲ್ಲಿ ಪೂಜೆ ಮಾಡಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಆಧಾರವೇನಿದೆ..?: ಪ್ರೊ.ಟಿ ಮುರುಗೇಶಿ

    tippu

    ಟಿಪ್ಪು ನಮ್ಮ ಹಿಂದೂ ದೇವರನ್ನು ಅವಹೇಳನ ಮಾಡಿದ್ದಾನೆ. ಹಿಂದೂ ಸಮಾಜವನ್ನು ನಾಶ ಮಾಡಿದ್ದಾನೆ. ಇಂತಹ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವುದು ಸರಿಯಲ್ಲ. ಅದು ದೇವರಿಗೆ ಮಾಡುವಂತಹ ಅಪಮಾನ. ಸಲಾಂ ಹೆಸರನ್ನು ಎಷ್ಟು ಬೇಗ ತೆಗೆದು ಹಾಕುತ್ತಾರೋ ಅಷ್ಟು ಶ್ರೇಯಸ್ಸು. ಇಲ್ಲದಿದ್ದರೆ ದೇವರ ಶಕ್ತಿ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ – ಹೆಸರು ಬದಲಾಯಿಸುವಂತೆ ಕೊಲ್ಲೂರು ದೇವಾಲಯಕ್ಕೆ ಮನವಿ

    ಶೀಘ್ರವಾಗಿ ಸಲಾಂ ತೆಗೆದು, ದೇವರ ಹೆಸರಿನಲ್ಲಿ ಪೂಜೆ ಮಾಡಲಿ. ಸಲಾಂ ಇನ್ನೂ ಸ್ವಲ್ಪ ವರ್ಷ ಕಳೆದರೆ, ಅಲ್ಲಾಹು ಸಲಾಂ ಎಂದು ಬರುವ ಸಾಧ್ಯತೆ ಇದೆ. ಅವರಲ್ಲಿ ಬೇಕಾದರೆ ಮಾಡಲಿ, ನಮ್ಮಲ್ಲಿ ಬೇಡ. ನಮ್ಮ ದೇವಸ್ಥಾನದಲ್ಲಿ ನಮ್ಮ ನಮ್ಮತನ ಇರಬೇಕು. ಹಿಂದೂ ದೇವರಿಗೆ ಇಂತಹ ಸಲಾಂ ಪೂಜೆ ನಡೆಯಬಾರದು ಎಂದು ಕಿಡಿ ಕಾರಿದ್ದಾರೆ.

     

  • ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಆಧಾರವೇನಿದೆ..?: ಪ್ರೊ.ಟಿ ಮುರುಗೇಶಿ

    ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಆಧಾರವೇನಿದೆ..?: ಪ್ರೊ.ಟಿ ಮುರುಗೇಶಿ

    ಉಡುಪಿ: ಟಿಪ್ಪು ಸುಲ್ತಾನ್ ಹಿಂದೂ, ಕ್ರೈಸ್ತ ಹಾಗೂ ಮುಸ್ಲಿಮರ ವಿರೋಧಿ ಎಂದು ವ್ಯಾಪಕ ಚರ್ಚೆಗಳಾಗುತ್ತಿವೆ. ಆದರೆ ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಆಧಾರವೇನಿದೆ? ಎಂದು ಇತಿಹಾಸ ತಜ್ಞ ಪ್ರೊ.ಟಿ.ಮುರುಗೇಶಿ ಪ್ರಶ್ನಿಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಯಾವುದೇ ಬಲವಾದ ಆಧಾರಗಳು ಇಲ್ಲ. ಟಿಪ್ಪು ಒಬ್ಬ ರಾಜನಾಗಿ ಹಿಂದೂ, ಕ್ರೈಸ್ತ ಮತ್ತು ಮುಸ್ಲಿಂ ಧರ್ಮದವರನ್ನು ನಡೆಸಿಕೊಂಡಿದ್ದಾನೆ. ಅಧಿಕಾರದಲ್ಲಿದ್ದಾಗ ಬ್ರಿಟಿಷರು ಟಿಪ್ಪುವನ್ನು ಮುಗಿಸಲು ಎಲ್ಲ ಕಾರ್ಯತಂತ್ರಗಳನ್ನು ಮಾಡಿದ್ದರು. ಆಗ ಮಂಗಳೂರು, ಮಲೆನಾಡು ಹಾಗೂ ಕೊಡಗು ಪ್ರದೇಶಗಳಲ್ಲಿನ ಜನರೂ ಬ್ರಿಟೀಷರಿಗೆ ಸಹಾಯ ಮಾಡಿದ್ದರು. ಆದರೂ ಟಿಪ್ಪು ಅದನ್ನು ಹೇಗೆ ನಿಭಾಯಿಸಬೇಕೋ ಹಾಗೆ ನಿಭಾಯಿಸಿದ್ದಾನೆ. ಈ ಸಂದರ್ಭದಲ್ಲಿ ಮಂಗಳೂರು, ಕೊಡಗಿನ ಅನೇಕ ಜನರನ್ನು ಟಿಪ್ಪು ಜೈಲಿಗೆ ಹಾಕಿದ್ದಾನೆ – ಕೊಂದಿದ್ದಾನೆ. ಆದರೆ ಟಿಪ್ಪು ಹಿಂದೂ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಸುಲ್ತಾನ್‍ಗೆ ಭಾರತರತ್ನ ಕೊಡಿ ಅಂತಾ ಸಿದ್ದರಾಮಯ್ಯ ಹೇಳ್ತಾರೆ: ಶೆಟ್ಟರ್

    tippu

    ಮರಾಠರು ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡಿದಾಗ ಕರಾವಳಿಯ ಧಾರ್ಮಿಕ ಕೇಂದ್ರಗಳ ಪುನಶ್ಚೇತನಕ್ಕೆ ಟಿಪ್ಪು ಕಾರಣರಾಗಿದ್ದಾನೆ. ಧಾರ್ಮಿಕ ಚಟುವಟಿಕೆಗಳು ಯಥಾಪ್ರಕಾರ ಆರಂಭವಾಗಲು ಸಹಾಯ ಮಾಡಿದ್ದಾನೆ. ಇದೇ ಕಾರಣಕ್ಕಾಗಿ ಇಂದಿಗೂ ಕೊಲ್ಲೂರು ಮತ್ತು ಶೃಂಗೇರಿಯಲ್ಲಿ ಸಲಾಂ ಪೂಜೆಯ ನಡೆದುಕೊಂಡು ಬರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಟಿಪ್ಪು ಸುಲ್ತಾನ್‍ರಿಂದ ಮೈಸೂರಿನ ಮಹಾರಾಜರಿಗೆ ಭಾರೀ ಕೆಡುಕಾಗಿದೆ: ಮೈಸೂರು ರಾಜಮಾತೆ

    ಕರ್ನಾಟಕದ ಮೇಲೆ ಚೋಳರು ದಾಳಿ ಮಾಡಿ ಹಳ್ಳಿ – ಹಳ್ಳಿಗೆ ಬೆಂಕಿಯಿಟ್ಟರು, ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರು. ಆದರೆ, ಟಿಪ್ಪು ಬ್ರಿಟಿಷರಿಗೆ ಸಹಾಯ ಮಾಡಿದವರನ್ನು ಮಾತ್ರ ಕ್ರೂರವಾಗಿ ನಡೆಸಿಕೊಂಡಿದ್ದಾನೆ. ಇಂದಿಗೂ ಟಿಪ್ಪು ಸುಲ್ತಾನ್‌ನನ್ನು ವಿರೋಧಿಸುವುದು ರಾಜಕೀಯ ಕಾರಣಕ್ಕಾಗಿಯೇ ಹೊರತು ಧಾರ್ಮಿಕ ಕಾರಣಕ್ಕಲ್ಲ. ಅವನನ್ನು ಹಿಂದೂ ವಿರೋಧಿಯೆಂದು ಚಾರಿತ್ರಿಕವಾಗಿ ನಿರ್ಧಾರ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Temple

    ಟಿಪ್ಪು ಸುಲ್ತಾನ್ ಶೃಂಗೇರಿ, ಕೊಲ್ಲೂರಿಗೆ ಭೇಟಿ ಕೊಟ್ಟ ಬಗ್ಗೆ ದಾಖಲೆಯಿಲ್ಲ. ಆದರೆ ಶೃಂಗೇರಿಗೆ ಮಾಡಿದಂತಹ ದಾನ ಧರ್ಮ ಮತ್ತು ಸಹಾಯಕ್ಕೆ ಅಲ್ಲಿನ ಮಠದಲ್ಲಿ ದಾಖಲೆಗಳಿವೆ. ಶಂಕರನಾರಾಯಣದ ದೇವಸ್ಥಾನಕ್ಕೆ ಗಂಟೆ ಕೊಟ್ಟಿದ್ದು ಈಗಲೂ ನೆನಪಿದೆ. ಸುಖಾ ಸುಮ್ಮನೆ ಯಾವುದೇ ಪರಂಪರೆ ಸೃಷ್ಟಿಯಾಗುವುದಿಲ್ಲ. ಕರಾವಳಿಯ ಧಾರ್ಮಿಕ ಕೇಂದ್ರಗಳಿಗೆ ನೀಡಿದ ಸಹಾಯದಿಂದ ಇಂದಿಗೂ ಸಲಾಂ ಆರತಿ ಪರಂಪರೆಯಾಗಿ ಉಳಿದುಕೊಂಡಿದೆ ಎಂದು ಅವರು ವಿವರಿಸಿದ್ದಾರೆ.