Tag: ಟಿಪ್ಪರ್

  • ಸ್ಕೂಟಿಗೆ ಡಿಕ್ಕಿಯಾಗಿ ಮಹಿಳೆ ಮೇಲೆ ಹರಿದ ಟಿಪ್ಪರ್

    ಸ್ಕೂಟಿಗೆ ಡಿಕ್ಕಿಯಾಗಿ ಮಹಿಳೆ ಮೇಲೆ ಹರಿದ ಟಿಪ್ಪರ್

    ಚಿಕ್ಕಮಗಳೂರು: ಸ್ಕೂಟಿಗೆ ಡಿಕ್ಕಿಯಾಗಿ ಮಹಿಳೆ ಮೇಲೆ ಟಿಪ್ಪರ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಚಿಕ್ಕಮಗಳೂರು ನಗರದ ಶೃಂಗಾರ ಸರ್ಕಲ್‍ನಲ್ಲಿ ನಡೆದಿದೆ.

    ಲಕ್ಷ್ಮೀ(48) ಸ್ಥಳದಲ್ಲೇ ಮೃತಪಟ್ಟ ಮಹಿಳೆ. ಲಕ್ಷ್ಮೀ ತನ್ನ ಪತಿ ಜೊತೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಸ್ಕೂಟಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ನೋಡ ನೋಡ್ತಿದ್ದಂತೆ ಮಹಿಳೆ ಲಾರಿ ಅಡಿ ಸಿಲುಕಿ ಕೊನೆಯುಸಿರು ಎಳೆದಿದ್ದಾರೆ.

    ಈ ಘಟನೆಯಲ್ಲಿ ಸ್ಕೂಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಭೀಕರ ಅಪಘಾತದ ದೃಶ್ಯ ಪಕ್ಕದ ಪೆಟ್ರೋಲ್ ಬಂಕ್‍ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳಿಯರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಬಗ್ಗೆ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ನಲ್ಲಿ ಮರವೇರಿದ ಟಿಪ್ಪರ್

    ಕೆಜಿಎಫ್ ನಲ್ಲಿ ಮರವೇರಿದ ಟಿಪ್ಪರ್

    ಕೋಲಾರ: ಟಿಪ್ಪರ್ ಮರಕ್ಕೆ ಡಿಕ್ಕಿಯಾಗಿದ್ದು, ಭಾರೀ ಅನಾಹುತ ತಪ್ಪಿರುವಂತಹ ಘಟನೆ ಜಿಲ್ಲೆಯ ಕೆಜಿಎಫ್ ನ ಫೈವ್ ಲೈಟ್ಸ್ ವೃತ್ತದಲ್ಲಿ ನಡೆದಿದೆ.

    ಟಿಪ್ಪರ್ ಲಾರಿ ಕೆಜಿಎಫ್ ಟೌನ್‍ನಿಂದ ಬಂಗಾರ ಪೇಟೆ ಕಡೆಗೆ ಹೋಗುತ್ತಿತ್ತು. ಆದರೆ ಕೆಜಿಎಫ್ ನ ಫೈವ್ ಲೈಟ್ಸ್ ವೃತ್ತದಲ್ಲಿ ಇದ್ದಕ್ಕಿದ್ದಂತೆ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಟಿಪ್ಪರ್ ನ ಮುಂದಿನ ಭಾಗ ಮರವೇರಿದ್ದು, ಜಖಂಗೊಂಡಿದೆ.

    ಸದ್ಯಕ್ಕೆ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಭಾರೀ ಅನಾಹುತ ತಪ್ಪಿದ್ದಂತಾಗಿದ್ದು, ಟಿಪ್ಪರ್ ನ ಚಾಲಕ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಉರಿಗಾಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟಿಪ್ಪರ್ ತೆರವುಗೊಳಿಸಿದ್ದಾರೆ.

    ಇನ್ನು ಈ ಅಪಘಾತದ ಫೋಟೋವನ್ನು ನೋಡಿದರೆ ಟಿಪ್ಪರ್ ಲಾರಿ ಮರವನ್ನೇರಲು ಪ್ರಯತ್ನಿಸಿದಂತೆ ಭಾಸವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರವಾಸ ಮುಗಿಸಿ ಮರಳುತ್ತಿದ್ದ ಬೆಂಗ್ಳೂರಿನ ಇಬ್ಬರು ದುರ್ಮರಣ!

    ಪ್ರವಾಸ ಮುಗಿಸಿ ಮರಳುತ್ತಿದ್ದ ಬೆಂಗ್ಳೂರಿನ ಇಬ್ಬರು ದುರ್ಮರಣ!

    ಹಾಸನ: ಟಿಪ್ಪರ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಕಲೇಶಪುರ ತಾಲೂಕಿನ ದೋಣಿಗಲ್ ಬಳಿ ನಡೆದಿದೆ. ಬೆಂಗಳೂರು ಮೂಲದ ರಾಹುಲ್ (30) ಹಾಗೂ ಸಂಜಯ್ (35) ಮೃತರು. ಈ ಅವಘಡದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸಕಲೇಶಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನೆಯ ವಿವರ:
    ಹಾಸನ ಪ್ರವಾಸಕ್ಕೆಂದು ಬಂದಿದ್ದ ರಾಹುಲ್, ಸಂಜಯ್ ಹಾಗೂ ಅವರ ಸ್ನೇಹಿತನೊಬ್ಬ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಬೆಂಗಳೂರಿಗೆ ಹೊರಟಿದ್ದರು. ಇತ್ತ ಟಿಪ್ಪರ್ ಚಾಲಕ ದೊಡ್ಡಮನೆ ರೆಸಾರ್ಟ್ ನಿಂದ ಸಕಲೇಶಪುರ ಮಾರ್ಗವಾಗಿ ಮಂಗಳೂರಿಗೆ ಹೊರಟಿದ್ದ. ಈ ವೇಳೆ ಸಕಲೇಶಪುರ ತಾಲೂಕಿನ ದೋಣಿಗಲ್ ಬಳಿ ಟಿಪ್ಪರ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಕಾರ್ ಚಾಲಕ ರಾಹುಲ್ ಹಾಗೂ ಪಕ್ಕದ ಸೀಟ್‍ನಲ್ಲಿ ಕುಳಿತಿದ್ದ ಸಂಜಯ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಹಿಂದೆ ಕುಳಿತಿದ್ದ ವ್ಯಕ್ತಿ ಬದುಕುಳಿದಿದ್ದಾನೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯರು ಸಕಲೇಶಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಕಲೇಶಪುರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರೂ ನಿಂತು ನೋಡಿ ಮಾನವೀಯತೆ ಮರೆತ್ರು!

    ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರೂ ನಿಂತು ನೋಡಿ ಮಾನವೀಯತೆ ಮರೆತ್ರು!

    ಹಾವೇರಿ: ಬೈಕ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸವಾರ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದು ನರಳುತ್ತಿದ್ದರೂ ಯಾರೊಬ್ಬರೂ ಆಸ್ಪತ್ರೆಗೆ ಸೇರಿಸದೇ ಅಮಾನವೀಯತೆ ಮೆರೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಹಾನಗಲ್ ತಾಲೂಕಿನ ಹಿರೇಕಾಂಶಿ ಗ್ರಾಮದ ನಿವಾಸಿ ಗದಿಗೆಯ್ಯ ಹಿರೇಮಠ (38) ಗಂಭೀರವಾಗಿ ಗಾಯಗೊಂಡಿದ್ದ ಸವಾರ. ಗದಿಗೆಯ್ಯ ಅವರು ಅಕ್ಕಿಆಲೂರು ಮಾರ್ಗವಾಗಿ ಹಾನಗಲ್‍ನಿಂದ ಸ್ವಗ್ರಾಮಕ್ಕೆ ಬೈಕ್ ಹೊರಟಿದ್ದರು. ಈ ವೇಳೆ ಅಕ್ಕಿಆಲೂರು ಬಳಿ ಟಿಪ್ಪರ್ ಬಂದು ಡಿಕ್ಕಿಹೊಡೆದಿದೆ. ಪರಿಣಾಮ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಬಿದ್ದಿದ್ದರು. ಇದನ್ನು ನೋಡಿದ ಸ್ಥಳೀಯರು ಯಾವುದೇ ಸಹಾಯಕ್ಕೆ ನಿಲ್ಲದೇ ಪ್ರಥಮ ಚಿಕಿತ್ಸೆ ನೀಡದೇ ಅಮಾನವೀಯತೆ ಮೆರೆದಿದ್ದಾರೆ.

    ಕೆಲವರು ಮೊಬೈಲ್‍ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಸ್ಥಳೀಯರೊಬ್ಬರು ಆಂಬುಲೆನ್ಸ್ ಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಘಟನೆ ಸಂಭವಿಸಿ ಅರ್ಧ ಗಂಟೆಯ ಬಳಿಕ ಅಕ್ಕಿಆಲೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಗದಿಗೆಯ್ಯ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ಗದಿಗೆಯ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಹಾನಗಲ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟಿಪ್ಪರ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಕ್ರಮ ಮರಳು ಸಾಗಾಟವಾಗಿದೆ ಎಂದು ನಿರೂಪಿಸಲು ಪೊಲೀಸರೇ ಟಿಪ್ಪರ್ ಗೆ ಹೊಯ್ಗೆ ತುಂಬಿಸಿದ್ರು!- ವಿಡಿಯೋ

    ಅಕ್ರಮ ಮರಳು ಸಾಗಾಟವಾಗಿದೆ ಎಂದು ನಿರೂಪಿಸಲು ಪೊಲೀಸರೇ ಟಿಪ್ಪರ್ ಗೆ ಹೊಯ್ಗೆ ತುಂಬಿಸಿದ್ರು!- ವಿಡಿಯೋ

    ಮಂಗಳೂರು: ಅಕ್ರಮ ಮರಳು ಸಾಗಾಟ ಆಗಿದೆಯೆಂದು ನಿರೂಪಿಸಲು ಪೊಲೀಸರೇ ಸೇರಿ ಟಿಪ್ಪರ್ ಲಾರಿಗೆ ಮರಳು ಲೋಡ್ ಮಾಡಿದ ಘಟನೆ ದಕ್ಷಿಣ ಕನ್ನಡದ ಪೊಳಲಿಯಲ್ಲಿ ನಡೆದಿದೆ.

    ಮರಳು ಸಾಗಾಣಿಕೆ ನಿಷೇಧ ಇದ್ದರೂ, ಮಂಗಳೂರಿನ ಪೊಳಲಿ ಸಮೀಪದ ಅಡ್ಡೂರಿನಲ್ಲಿ ಅಕ್ಬರ್ ಆಲಿ ಎಂಬವರಿಗೆ ಸೇರಿದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ ಎನ್ನುವ ದೂರು ಪೊಲೀಸರಿಗೆ ಬಂದಿತ್ತು. ಆದರೆ ಸ್ಥಳಕ್ಕೆ ತೆರಳಿದಾಗ, ಲಾರಿಯನ್ನು ಅಕ್ಬರ್ ಆಲಿಯವರ ಮನೆಯಲ್ಲಿ ಖಾಲಿ ಮಾಡಿ ನಿಲ್ಲಿಸಲಾಗಿತ್ತು.

    ಲಾರಿ ಸೀಜ್ ಮಾಡಿಕೊಂಡು ಬರಲು ಇನ್ಸ್ ಸ್ಪೆಕ್ಟರ್ ಹೇಳಿದ್ದರಿಂದ ಪೊಲೀಸರು ಸೀಜ್ ಮಾಡಲು ಬಂದಿದ್ದರು. ಆದರೆ ಖಾಲಿ ಲಾರಿ ಸೀಜ್ ಮಾಡಿದ್ರೆ ಪ್ರಕರಣ ದಾಖಲಿಸಲು ಆಗುವುದಿಲ್ಲ ಎಂದು ತಿಳಿದ ಪೊಲೀಸ್ ಸಿಬ್ಬಂದಿ ಸೇರಿ ಅಲ್ಲಿ ನಿರ್ಮಾಣ ಹಂತದ ಕಟ್ಟಡದ ಮುಂದೆ ರಾಶಿ ಹಾಕಿದ್ದ ಮರಳನ್ನು ಲಾರಿಗೆ ತುಂಬಿಸಿದ್ದಾರೆ. ಆದರೆ, ಪೊಲೀಸರೇ ಸೇರಿ ಲಾರಿಗೆ ಮರಳು ಲೋಡ್ ಮಾಡಿದ್ದನ್ನು ಮರೆಯಲ್ಲಿ ನಿಂತು ಕೆಲವರು ವಿಡಿಯೋ ಮಾಡಿದ್ದಾರೆ.

    ಪೊಲೀಸರು ನಮ್ಮನ್ನು ಟಾರ್ಗೆಟ್ ಮಾಡಿ, ಮರಳು ಸೀಜ್ ಮಾಡಿ ಕೇಸ್ ದಾಖಲಿಸಲು ಹೀಗೆ ಮಾಡಿದ್ದಾರೆಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ವಿಡಿಯೋ ಈಗ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=AFF26hK-jhc

  • ಗೋವಾದಲ್ಲಿ ಟಿಪ್ಪರ್ ಕದ್ದು ಉತ್ತರ ಕರ್ನಾಟಕದಲ್ಲಿ ಮಾರಾಟ ಮಾಡ್ತಿದ್ದ!

    ಗೋವಾದಲ್ಲಿ ಟಿಪ್ಪರ್ ಕದ್ದು ಉತ್ತರ ಕರ್ನಾಟಕದಲ್ಲಿ ಮಾರಾಟ ಮಾಡ್ತಿದ್ದ!

    – ಕಳ್ಳನ ಬಂಧನ, 60 ಲಕ್ಷ ರೂ. ಮೌಲ್ಯದ 4 ಟಿಪ್ಪರ್ ಪೊಲೀಸ್ ವಶಕ್ಕೆ

    ಹುಬ್ಬಳ್ಳಿ: ಗೋವಾ ರಾಜ್ಯದಿಂದ ಟಿಪ್ಪರ್ ಕಳ್ಳತನ ಮಾಡಿ, ಉತ್ತರ ಕರ್ನಾಟಕದಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಹುಬ್ಬಳ್ಳಿಯ ಉಪನಗರ ಪೊಲೀಸರು ಬಂಧಿಸಿದ್ದು, ಸುಮಾರು 60 ಲಕ್ಷ ರೂ. ಮೌಲ್ಯದ ನಾಲ್ಕು ಟಿಪ್ಪರ್ ವಶಕ್ಕೆ ಪಡೆದುಕೊಂಡಿದ್ದಾರೆ.

    ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪ ಗ್ರಾಮದ ನಿವಾಸಿ ಲಕ್ಷ್ಮಣ ಬಂಡಿವಡ್ಡರ್ ಬಂಧಿತ ಆರೋಪಿ. ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದ ಲಕ್ಷ್ಮಣ ಆಗಾಗ ಗೋವಾಕ್ಕೆ ಹೋಗುತ್ತಿದ್ದ. ಅಲ್ಲಿ ನಿಲ್ಲಿಸಿದ್ದ ಟಿಪ್ಪರ್ ಕಳ್ಳತನ ಮಾಡಿ, ರಾಜ್ಯಕ್ಕೆ ತರುತ್ತಿದ್ದ. ರಾಜ್ಯಕ್ಕೆ ಟಿಪ್ಪರ್ ತರುತ್ತಿದ್ದಂತೆ ಚಾಸ್ಸಿ ಬದಲಾಯಿಸಿ, ಕಡಿಮೆ ಬೆಲೆಗೆ ಮಾರುತ್ತಿದ್ದ. ಹೀಗೆ ಗ್ರಾಹಕರೊಬ್ಬರಿಗೆ ಟಿಪ್ಪರ್ ಮಾರಾಟ ಮಾಡುವಾಗ ಚಾಸ್ಸಿ ಬದಲಾಗಿರುವುದನ್ನು ಗಮನಿಸಿ, ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲಿಂದ ಮರಳಿದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸೂಕ್ತ ಮಾಹಿತಿ ಕಲೆಹಾಕಿ, ಹುಬ್ಬಳ್ಳಿ ಉಪ ನಗರ ಪೊಲೀಸರು ಲಕ್ಷ್ಮಣನನ್ನು ಬಂಧಿಸಿ, ವಿಚಾರಿಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ. ಬಂಧಿತನಿಂದ 60 ಲಕ್ಷ ರೂ. ಮೌಲ್ಯದ ನಾಲ್ಕು ಟಿಪ್ಪರ್ ವಶಕ್ಕೆ ಪಡೆದು, ಮಾಲೀಕರು ಯಾರು ಅಂತಾ ಪತ್ತೆ ಹಚ್ಚುವ ಕಾರ್ಯ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂತಾರಾಜ್ಯ ಕಳ್ಳರ ಬಂಧನ – 24 ಲಕ್ಷ ರೂ. ಮೌಲ್ಯದ ವಾಹನಗಳು ಪೊಲೀಸ್ ವಶಕ್ಕೆ

    ಅಂತಾರಾಜ್ಯ ಕಳ್ಳರ ಬಂಧನ – 24 ಲಕ್ಷ ರೂ. ಮೌಲ್ಯದ ವಾಹನಗಳು ಪೊಲೀಸ್ ವಶಕ್ಕೆ

    ರಾಯಚೂರು: ಆಂಧ್ರಪ್ರದೇಶ ಮೂಲದ ಕುಖ್ಯಾತ ಅಂತರ್ ರಾಜ್ಯದ 4 ಮಂದಿ ಕಳ್ಳರನ್ನು ರಾಯಚೂರಿನ ಶಕ್ತಿನಗರ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 24 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

    ಆಂಧ್ರಪ್ರದೇಶ ಗೋದಾವರಿ ಜಿಲ್ಲೆಯ ಗಂಗಾಧರ (39), ಸತೀಶ್ (26), ಹೈದರಾಬಾದ್ ನಗರದ ಮೊಹಮದ್ ಮುಸ್ತಫಾ ಹಾಗೂ ಖಾಲಿದ್ ಅಕ್ತರ್ (52) ಬಂಧಿತ ಆರೋಪಿಗಳು.

    ರಾಯಚೂರಿನ ಶಕ್ತಿನಗರ ಹಾಗೂ ಮಾರ್ಕೆಟ್ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಟಿಪ್ಪರ್ ಹಾಗೂ ಲಾರಿ ಕಳ್ಳತನವಾಗಿತ್ತು. ಕಳ್ಳರ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಿ.ಕಿಶೋರ ಬಾಬು ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತ್ತು. ಕಳ್ಳರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.

    ಬಂಧಿತರಿಂದ 18 ಲಕ್ಷ ರೂ. ಮೌಲ್ಯದ ಟಿಪ್ಪರ್ ಹಾಗೂ 6 ಲಕ್ಷ ರೂ. ಮೌಲ್ಯದ ಲಾರಿ ಸೇರಿದಂತೆ ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಸ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು – 15 ಮಂದಿಗೆ ಗಂಭೀರ ಗಾಯ

    ಬಸ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು – 15 ಮಂದಿಗೆ ಗಂಭೀರ ಗಾಯ

    ವಿಜಯಪುರ: ಸರ್ಕಾರಿ ಬಸ್ ಹಾಗೂ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ ಘಟನೆ ವಿಜಯಪುರದ ತಾಳಿಕೋಟೆ ತಾಲೂಕು ಕೊಣ್ಣೂರು ಕ್ರಾಸ್ ಬಳಿ ನಡೆದಿದೆ.

    ಮೀರಜ್ ನಿಂದ ತಾಳಿಕೋಟೆಗೆ ಬಸ್ ಹೊರಟಾಗ ಅಪಾಘಾತದ ವೇಗಕ್ಕೆ ಸರ್ಕಾರಿ ಬಸ್ ಪಲ್ಟಿ ಆಗಿದ್ದು, ಅವಘಡ ಸಂಭವಿಸಿದೆ. ತಾಳಿಕೋಟೆ ಘಟಕಕ್ಕೆ ಸೇರಿದ ಎಂ 28 ಈ 2428 ಸರ್ಕಾರಿ ಬಸ್ ಎಂದು ತಿಳಿದು ಬಂದಿದೆ.

    ಈ ಅಪಘಾತದಲ್ಲಿ ಓರ್ವ ವ್ಯಕ್ತಿ ಮತ್ತು ನಾಲ್ಕು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಕೊಣ್ಣೂರ ಕೆನರಾ ಬ್ಯಾಂಕ್ ನೌಕರ ವಿನೋಧ ಬಾಕಲಿ(35) ಹಾಗೂ ಮಸಬಿನಾಳ ಗ್ರಾಮದ ನಾಲ್ಕು ವರ್ಷದ ಬಾಲಕಿ ಅಮೃತಾ ಯಳಮೇಲಿ ಎಂದು ಗುರುತಿಸಲಾಗಿದೆ. ಬಸ್ ನಲ್ಲಿದ್ದ 15 ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಪ್ರಯಾಣಿಕರನ್ನು 108 ಸಿಬ್ಬಂದಿ ತಾಳಿಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಈ ಘಟನೆ ಬಗ್ಗೆ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾರಿಗೆ ಡಿಕ್ಕಿಗೆ ಹೊಡೆದ ಟಿಪ್ಪರ್-ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ಕಾರಿಗೆ ಡಿಕ್ಕಿಗೆ ಹೊಡೆದ ಟಿಪ್ಪರ್-ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.

    ಚಿಕ್ಕೋಡಿ ಪಟ್ಟಣದ ಹುಕ್ಕೇರಿ ಕ್ರಾಸ್ ಬಳಿ ಸ್ವಿಫ್ಟ್ ಕಾರಿಗೆ ಹಿಂಬದಿಯಿಂದ ಕಲ್ಲು ತುಂಬಿದ್ದ ಟಿಪ್ಪರ್ ಗುದ್ದಿದ ಪರಿಣಾಮ ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿದೆ. ಕಾರ್ ನುಜ್ಜಾಗುಜ್ಜಾಗಿದ್ದರಿಂದ ಒಳಗಡೆ ಯಕ್ಸಾಂಬಾ ಪಟ್ಟಣದ ಜಗದೀಶ್ ಸರಿಕರ್ ಮತ್ತು ಅಥಣಿಯ ಹೊನಕಪ್ಪ ಎಂಬವರು ಸಿಲುಕಿಕೊಂಡಿದ್ದರು.

    ಕಾರಿನೊಳಗೆ ಸಿಲುಕಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಚಿಕ್ಕೋಡಿ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬೈಕ್ ಗೆ ಟಿಪ್ಪರ್ ಡಿಕ್ಕಿ-2 ವರ್ಷದ ಕಂದಮ್ಮ ಸೇರಿ ಮೂವರ ಸಾವು

    ಬೈಕ್ ಗೆ ಟಿಪ್ಪರ್ ಡಿಕ್ಕಿ-2 ವರ್ಷದ ಕಂದಮ್ಮ ಸೇರಿ ಮೂವರ ಸಾವು

    ಕಾರವಾರ: ಬೈಕ್ ಗೆ ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ 2 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಿಣಗಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

    ಮೃತರನ್ನು ಉತ್ತರ ಪ್ರದೇಶ ಮೂಲದ ಅಮಿತ್ ಕೌಶಲ್ (31), ಪತ್ನಿ ಜ್ಯೋತಿ ಗುಪ್ತಾ (25) ಹಾಗೂ ದಂಪತಿಯ 2 ವರ್ಷದ ಗಂಡು ಮಗು ಎಂದು ಗುರುತಿಸಲಾಗಿದೆ.

    ಅಮಿತ್ ಕೌಶಲ್ ಕದಂಬ ನೌಖಾ ನೆಲೆಯ ಉದ್ಯೋಗಿಯಾಗಿದ್ದು, ಇಂದು ಬಿಣಗಾದಿಂದ ಕಾರವಾರ ಕಡೆ ಬೈಕ್ ನಲ್ಲಿ ಬರುತ್ತಿರುವಾಗ ವೇಳೆ ಕಾರವಾರ ದಿಂದ ಅಂಕೋಲ ಕಡೆ ಹೋಗುತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ.

    ಟಿಪ್ಪರ್ ಚಾಲಕನ ಅಜಾಗರೂಕತೆಯ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಅಪಘಾತದಲ್ಲಿ ಇಡೀ ಕುಟುಂಬ ಸಾವನ್ನಪ್ಪಿದೆ. ಈ ಘಟನೆ ಸಂಬಂಧ ಕಾರವಾರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.