Tag: ಟಿಪ್ಪರ್

  • ಚಿತ್ರದುರ್ಗ| ಬೈಕ್‌ಗೆ ಟಿಪ್ಪರ್ ಡಿಕ್ಕಿ – ಸವಾರ ಸಾವು

    ಚಿತ್ರದುರ್ಗ| ಬೈಕ್‌ಗೆ ಟಿಪ್ಪರ್ ಡಿಕ್ಕಿ – ಸವಾರ ಸಾವು

    ಚಿತ್ರದುರ್ಗ: ಬೈಕ್‌ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು (Molakalmuru) ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

    ಬಾಂಡ್ರಾವಿ ಗ್ರಾಮದ ಶಾಲೆಯ ಅತಿಥಿ ಶಿಕ್ಷಕ ರಂಗಪ್ಪ (43) ಮೃತ ದುರ್ದೈವಿ. ಇದನ್ನೂ ಓದಿ: ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಹಸು ಬಲಿ ರೈತ ಕಂಗಾಲು

    ಘಟನಾ ಸ್ಥಳಕ್ಕೆ ರಾಂಪುರ ಠಾಣೆ ಪಿಎಸ್‌ಐ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Lokayukta Raid | ಹುಟ್ಟುಹಬ್ಬದಂದು ಹಾಸ್ಟೆಲ್‌ನಲ್ಲಿ ಹೂಮಳೆ – ಅಂದು ವಾರ್ಡನ್‌, ಈಗ ಅಧಿಕಾರಿ

  • ಚಿಕ್ಕಬಳ್ಳಾಪುರದಲ್ಲಿ ಹೋಟೆಲ್‌ಗೆ ನುಗ್ಗಿದ ಟಿಪ್ಪರ್ – ಇಬ್ಬರ ದುರ್ಮರಣ

    ಚಿಕ್ಕಬಳ್ಳಾಪುರದಲ್ಲಿ ಹೋಟೆಲ್‌ಗೆ ನುಗ್ಗಿದ ಟಿಪ್ಪರ್ – ಇಬ್ಬರ ದುರ್ಮರಣ

    ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ (Tipper) ಲಾರಿಯೊಂದು ಹೋಟೆಲ್‌ಗೆ (Hotel) ನುಗ್ಗಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ (Chintamani) ನಗರದ ಕೋಲಾರ ರಸ್ತೆಯಲ್ಲಿ ನಡೆದಿದೆ.

    ಘಟನೆಯಲ್ಲಿ ಹೋಟೆಲ್‌ನ ಕ್ಯಾಷಿಯರ್ ಶಿವಾನಂದ್ ಹಾಗೂ ಶಾಂತಕುಮಾರ್ ಎಂಬುವವರು ಮೃತಪಟ್ಟಿದ್ದಾರೆ. ಇನ್ನೂ ಮುರುಳಿ ಹಾಗೂ ಶ್ರೀನಿವಾಸ್ ಬಾಬು ಎಂಬುವವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ತಲೆ ಓಪನ್ – ‘ಡಿ’‌ ಗ್ಯಾಂಗ್‌ ಭೀಕರ ಕ್ರೌರ್ಯ ಫೋಟೊಗಳಿಂದ ಬಹಿರಂಗ

    ಕೋಲಾರ (Kolar) ರಸ್ತೆಯ ದರ್ಶಿನಿ ಫಾಸ್ಟ್ ಫುಡ್‌ನಲ್ಲಿ ಘಟನೆ ನಡೆದಿದ್ದು, ಘಟನೆಯ ಬಳಿಕ ಟಿಪ್ಪರ್ ಚಾಲಕ ಎಸ್ಕೇಪ್ ಆಗಿದ್ದಾನೆ. ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಶಾಲಾ-ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

  • ಪೆಟ್ರೋಲ್ ಬಂಕ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟಿಪ್ಪರ್ – ಒಬ್ಬ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟಿಪ್ಪರ್ – ಒಬ್ಬ ಸ್ಥಳದಲ್ಲೇ ಸಾವು

    ಉಡುಪಿ: ಪೆಟ್ರೋಲ್ ಪಂಪ್ (Petrol Pump) ಒಂದರಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟಿಪ್ಪರ್ (Tipper) ಹರಿದು ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೆಬ್ರಿ (Hebri) ಸಮೀಪದ ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ನಡೆದಿದೆ.

    ಶಿವರಾಜ್ (38) ಟಿಪ್ಪರ್ ಹರಿದ ಪರಿಣಾಮ ಸಾವನ್ನಪ್ಪಿದ ಕಾರ್ಮಿಕ. ಮೃತ ಶಿವರಾಜ್ ಸಾಗರ ತಾಲೂಕಿನ ಕೊರ್ಲಿ ಕೊಪ್ಪದ ನಿವಾಸಿ. ಶಿವರಾಜ್ ಹಾಗೂ ಮಹೇಂದ್ರ ಎಂಬವರು ಪೆಟ್ರೋಲ್ ಪಂಪ್ ಬಳಿ ತಮ್ಮ ವಾಹನವನ್ನು ಬದಿಗಿಟ್ಟು ಮಲಗಿದ್ದರು. ನಿದ್ರೆಗೆ ಜಾರಿದ್ದ ವೇಳೆ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆ ಹೃದಯಾಘಾತದಿಂದ ಸಾವು

    ಅದೇ ಪೆಟ್ರೋಲ್ ಪಂಪ್‌ಗೆ ಬಂದು ಪೆಟ್ರೋಲ್ ಹಾಕಿಸಿ ನಿರ್ಗಮಿಸುತ್ತಿದ್ದ ಟಿಪ್ಪರ್, ಅಲ್ಲೇ ಮಲಗಿದ್ದ ಶಿವರಾಜ್ ಹಾಗೂ ಮಹೇಂದ್ರ ಮೇಲೆ ಹರಿದಿದೆ. ಇದರಿಂದ ಶಿವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮಹೇಂದ್ರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ನಾದಿನಿ ಜೊತೆ ಅಶ್ಲೀಲ ವರ್ತನೆ – ಪ್ರಶ್ನಿಸಿದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ

  • ಎಕ್ಸ್‌ಪ್ರೆಸ್ ವೇಯಲ್ಲಿ ಚಲಿಸುತ್ತಿದ್ದ ಟಿಪ್ಪರ್ ಚಕ್ರ ಬ್ಲಾಸ್ಟ್ – ತಪ್ಪಿದ ಭಾರೀ ದುರಂತ

    ಎಕ್ಸ್‌ಪ್ರೆಸ್ ವೇಯಲ್ಲಿ ಚಲಿಸುತ್ತಿದ್ದ ಟಿಪ್ಪರ್ ಚಕ್ರ ಬ್ಲಾಸ್ಟ್ – ತಪ್ಪಿದ ಭಾರೀ ದುರಂತ

    ಮಂಡ್ಯ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟಿಪ್ಪರ್‌ನ (Tipper) ಚಕ್ರ ಬ್ಲಾಸ್ಟ್ (Tyre Blast) ಆಗಿದ್ದು, ಘಟನೆಯಿಂದ ಸಂಭವಿಸಬೇಕಿದ್ದ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

    ಮಂಡ್ಯದ (Mandya) ಉಮ್ಮಡಹಳ್ಳಿ ಗೇಟ್ ಬಳಿ ಘಟನೆ ಸಂಭವಿಸಿದ್ದು, ಕಲ್ಲಿನ ಪುಡಿ ತುಂಬಿಕೊಂಡು ವೇಗವಾಗಿ ಹೋಗುತ್ತಿದ್ದ ಟಿಪ್ಪರ್‌ನ ಚಕ್ರ ಬ್ಲಾಸ್ಟ್ ಆಗಿದೆ. ಘಟನೆಯ ಪರಿಣಾಮ ಟಿಪ್ಪರ್‌ನ ಟೈರ್‌ನ ಮಡ್‌ಗಾರ್ಡ್ (Mud Guard) ಹಿಂದೆ ಬರುತ್ತಿದ್ದ ಕಾರಿನ (Car) ಹಿಂಭಾಗಕ್ಕೆ ಹೋಗಿ ಬಿದ್ದಿದೆ. ಒಂದು ವೇಳೆ ಈ ಮಡ್‌ಗಾರ್ಡ್ ಏನಾದರೂ ಕಾರಿಗೆ ಬಡಿದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ನೈತಿಕ ಪೊಲೀಸ್‍ಗಿರಿ – ಆಟೋ ಚಾಲಕನಿಗೆ ಥಳಿಸಿದ ದುಷ್ಕರ್ಮಿಗಳು

    ಅದೃಷ್ಟವಶಾತ್ ಮಡ್‌ಗಾರ್ಡ್ ಕಾರಿನ ಹಿಂದೆ ಬಿದ್ದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಬಚಾವ್ ಆಗಿದ್ದಾರೆ. ಸದ್ಯ ಕೂದಲೆಳೆ ಅಂತರದಲ್ಲಿ ಡೆಡ್ಲಿ ಅಪಘಾತ ತಪ್ಪಿದ್ದು, ಅಪಘಾತ ತಪ್ಪಿದ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನೀರಿನ ಟ್ಯಾಂಕ್ ಬಿದ್ದು ಇಬ್ಬರು ಸಾವು, ಇಬ್ಬರ ಸ್ಥಿತಿ ಚಿಂತಾಜನಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪಘಾತದಲ್ಲಿ ಸಿಲುಕಿಕೊಂಡ ಕಾರನ್ನು ಕಿ.ಮೀ ಗಟ್ಟಲೆ ಎಳೆದುಕೊಂಡು ಹೋದ ಟಿಪ್ಪರ್ ಚಾಲಕ

    ಅಪಘಾತದಲ್ಲಿ ಸಿಲುಕಿಕೊಂಡ ಕಾರನ್ನು ಕಿ.ಮೀ ಗಟ್ಟಲೆ ಎಳೆದುಕೊಂಡು ಹೋದ ಟಿಪ್ಪರ್ ಚಾಲಕ

    – ಬೆನ್ನಟ್ಟಿ ಬೈದ ನಂತರ ಗೊತ್ತಾಯ್ತು ವಿಚಾರ

    ಉಡುಪಿ: ಅಪಘಾತವೊಂದರಲ್ಲಿ ಟಿಪ್ಪರ್ ಲಾರಿ (Tipper Lorry) ಹಿಂಭಾಗದಲ್ಲಿ ಸಿಲುಕಿಕೊಂಡಿದ್ದ ಕಾರನ್ನು (Car) ಕಿಲೋಮೀಟರ್ ಗಟ್ಟಲೆ ಎಳೆದೊಯ್ದ ಘಟನೆ ಉಡುಪಿಯಲ್ಲಿ (Udupi) ನಡೆದಿದೆ. ಕಾರನ್ನು ಎಳೆದೊಯ್ಯವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟಿಪ್ಪರ್ ಚಾಲಕನ ವಿರುದ್ಧ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಸ್ಯಾಂಟ್ರೋ ಕಾರು ಮತ್ತು ಟಿಪ್ಪರ್ ಡಿಕ್ಕಿಯಾಗಿದೆ. ಉಡುಪಿ ಜಿಲ್ಲೆ ಬೆಳ್ಮಣ್‌ನಿಂದ ದಕ್ಷಿಣ ಕನ್ನಡ ಜಿಲ್ಲೆ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿದೆ ಎಂಬುದು ಪ್ರಾಥಮಿಕ ಮಾಹಿತಿ. ಅಪಘಾತವಾಗುತ್ತಿದ್ದಂತೆ ವಾಹನದ ವೇಗ ಹೆಚ್ಚಿಸಿದ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಕಾರು ಟಿಪ್ಪರ್ ಹಿಂಭಾಗಕ್ಕೆ ಸಿಲುಕಿಕೊಂಡಿದ್ದ ವಿಚಾರ ಚಾಲಕನ ಗಮನಕ್ಕೆ ಬಂದಿರಲಿಲ್ಲ.

    ಅಪಘಾತವಾಯ್ತು, ಸ್ಥಳೀಯರು, ಸಾರ್ವಜನಿಕರು ತನ್ನನ್ನು ಟಿಪ್ಪರ್‌ನಿಂದ ಇಳಿಸಿ ಎಳೆದಾಡಿ ಹೊಡೆಯಬಹುದು ಎಂಬ ಆತಂಕದಲ್ಲಿ ವೇಗವಾಗಿ ಚಾಲಕ ಟಿಪ್ಪರ್ ಓಡಿಸಿದ್ದಾನೆ. ಈ ವೇಳೆ ಸ್ಥಳೀಯರು ಟಿಪ್ಪರ್ ಅನ್ನು ಹಿಂಬಾಲಿಸಿಕೊಂಡು ಬಂದು ಬೈದು ಹೇಳಿದ ನಂತರ ಚಾಲಕ ಲಾರಿಯನ್ನು ನಿಲ್ಲಿಸಿದ್ದಾನೆ. ಟಿಪ್ಪರ್‌ನ ಹಿಂಬದಿಗೆ ಕಾರು ಸಿಲುಕಿರುವ ವಿಚಾರ ತನಗೆ ಗೊತ್ತಿರಲಿಲ್ಲ ಎಂದು ಚಾಲಕ ಹೇಳಿದ್ದಾನೆ. ಟಿಪ್ಪರ್ ಅನ್ನು ಪಡುಬಿದ್ರಿ ಪೊಲೀಸರು (Padubidri Police) ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪ್ರಯಾಣಿಕನ ಮೊಬೈಲ್ ಬ್ಲಾಸ್ಟ್ – ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

    ಘಟನೆಯಲ್ಲಿ ಕಾರಿನಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಗಾಯವಾಗಿದೆ. ಗಾಯಾಳುಗಳನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳುಗಳಿಂದ ಮಾಹಿತಿ ಪಡೆದು ಕೇಸ್ ದಾಖಲಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Mobile Ban – ಇನ್ನು ಮುಂದೆ ಮುಜರಾಯಿ ದೇವಸ್ಥಾನಗಳಲ್ಲಿ ಮೊಬೈಲ್‌ ಬಳಸುವಂತಿಲ್ಲ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂಗನವಾಡಿ ಮುಗಿಸಿ ಅಜ್ಜಿ ಜೊತೆ ವಾಪಸಾಗ್ತಿದ್ದ 3ರ ಬಾಲಕಿ ಮೇಲೆ ಹರಿದ ಲಾರಿ – ಕಂದಮ್ಮ ಸ್ಥಳದಲ್ಲೇ ಸಾವು

    ಅಂಗನವಾಡಿ ಮುಗಿಸಿ ಅಜ್ಜಿ ಜೊತೆ ವಾಪಸಾಗ್ತಿದ್ದ 3ರ ಬಾಲಕಿ ಮೇಲೆ ಹರಿದ ಲಾರಿ – ಕಂದಮ್ಮ ಸ್ಥಳದಲ್ಲೇ ಸಾವು

    ದಾವಣಗೆರೆ: ಅಂಗನವಾಡಿ ಮುಗಿಸಿ ಅಜ್ಜಿ ಜೊತೆ ಮನೆಗೆ ತೆರಳುತ್ತಿದ್ದ ಬಾಲಕಿ (Girl) ಮೇಲೆ ಎಂ ಸ್ಯಾಂಡ್ ಟಿಪ್ಪರ್ (Tipper) ಹರಿದು ಬಾಲಕಿ ಸಾವನ್ನಪ್ಪಿರುವ ಮನಕಲಕುವ ಘಟನೆ ದಾವಣಗೆರೆ (Davanagere) ನಗರದ ಹಳೇ ಕುಂದುವಾಡದಲ್ಲಿ ನಡೆದಿದೆ.

    ಕುಂದುವಾಡ ಗ್ರಾಮದ ಗಣೇಶ್ ಪುತ್ರಿ ಚರಸ್ವಿ (3) ಸಾವನ್ನಪ್ಪಿದ ಬಾಲಕಿ. ಚಕ್ರ ಹರಿದ ರಭಸಕ್ಕೆ ಬಾಲಕಿ ಮೆದುಳು ಚಿದ್ರ ಚಿದ್ರಗೊಂಡಿದೆ. ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಅವಘಡ ನಡೆದಿದ್ದು ಮಾತ್ರವಲ್ಲದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರ ತವರಿನಲ್ಲಿ ಈ ರೀತಿ ಘಟನೆ ನಡೆದಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

    ಬೆಳಗ್ಗೆಯಿಂದ ಸಂಜೆ ವರೆಗೂ ಬೃಹತ್ ವಾಹನಗಳು ನಗರದಲ್ಲಿ ಸಂಚಾರ ಮಾಡುವಂತಿಲ್ಲ ಎನ್ನುವ ಎಸ್‌ಪಿ ಅವರ ಆದೇಶವಿದ್ದರೂ ಕೂಡ ಅದನ್ನು ಧಿಕ್ಕರಿಸಿ ಎಂ ಸ್ಯಾಂಡ್ ಲಾರಿಗಳು ಅಡ್ಡಾಡುತ್ತಿವೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಘಟನೆ ಖಂಡಿಸಿ ರಸ್ತೆ ಬಂದ್ ಮಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಪರಿಚಿತ ವಾಹನ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

     

    ಲಾರಿ ಚಾಲಕ, ಮಾಲೀಕನ ಬಂಧನಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ, ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಂಪೌಂಡ್ ಹತ್ತುವ ವೇಳೆ ಜಾರಿಬಿದ್ದು ವಿದ್ಯಾರ್ಥಿನಿ ಸಾವು

  • ಅನಾಥ ಹೆಣ್ಣುಮಕ್ಕಳ ನೆರವಿಗೆ ನಿಂತ ಬ್ಯಾಟರಾಯನಪುರ ಸಂಚಾರ ಪೊಲೀಸರು

    ಅನಾಥ ಹೆಣ್ಣುಮಕ್ಕಳ ನೆರವಿಗೆ ನಿಂತ ಬ್ಯಾಟರಾಯನಪುರ ಸಂಚಾರ ಪೊಲೀಸರು

    ಬೆಂಗಳೂರು: ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಹೆಣ್ಣು ಮಕ್ಕಳ ನೆರವಿಗೆ ಟ್ರಾಫಿಕ್ ಡಿಸಿಪಿ ಹಾಗೂ ಇನ್ಸ್ ಪೆಕ್ಟರ್ ನಿಲ್ಲುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ನಾಗರಬಾವಿ ಸರ್ಕಲ್ ಬಳಿ ಜು 9 ರಂದು ಬೈಕ್‍ನಲ್ಲಿ ಚಲಿಸುತ್ತಿದ್ದಾಗ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ವಿಜಯ ಕಲಾ ಮೃತಪಟ್ಟಿದ್ರು. ನಿನ್ನೆ ಅವರ ಪತಿ ಕೂಡ ಸಾವನ್ನಪ್ಪಿದ್ದಾರೆ. ಅಪ್ಪ-ಅಮ್ಮನನ್ನು ಕಳೆದುಕೊಂಡ ಇಬ್ಬರು ಹೆಣ್ಣು ಮಕ್ಕಳಿಗೆ ಬ್ಯಾಟರಾಯನಪುರ ಮಹಿಳಾ ಇನ್ಸ್ ಪೆಕ್ಟರ್ ರೂಪಾ ಹಡಗಲಿ ಬೆನ್ನೆಲುಬಾಗಿದ್ದಾರೆ.

    ತಂದೆ ಯೋಗೇಂದ್ರರನ್ನು ಅಪಘಾತದಂದು ನಾಗರಬಾವಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ 5 ಲಕ್ಷ 72 ಸಾವಿರ ಬಿಲ್ ಆಗಿತ್ತು. ಆದರೆ ಪೊಷಕರನ್ನ ಕಳೆದುಕೊಂಡು ಅನಾಥವಾಗಿದ್ದ ಹೆಣ್ಣು ಮಕ್ಕಳಿಬ್ಬರು ಹಣ ಕಟ್ಟಲು ಇಲ್ಲದೆ ಸಂಬಂಧಿಕರ ಬಳಿಯೂ ಹಣವಿಲ್ಲದೆ ಪರದಾಡುತ್ತಿದ್ದರು. ಇದನ್ನೂ ಓದಿ: ಸಂಸತ್‌ ಅಧಿವೇಶನದಲ್ಲಿ ಧರಣಿ ನಡೆಸುವಂತಿಲ್ಲ: ಆದೇಶ ಪ್ರಕಟ

    ಈ ವೇಳೆ ಪಶ್ಚಿಮ ಸಂಚಾರ ವಿಭಾಗ ಡಿಸಿಪಿ ಕುಲ್ ದೀಪ್ ಜೈನ್ ಅವರು ಬ್ಯಾಟಯಪುರ ಸಂಚಾರ ಇನ್ಸ್ ಪೆಕ್ಟರ್ ರೂಪ ಹಡಗಲಿಗೆ ಸೂಚನೆ ನೀಡಿದ್ದಾರೆ. ಈ ಬೆನ್ನಲ್ಲೇ ರೂಪ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲದೆ ಆಸ್ಪತ್ರೆ ಆಡಳಿತ ಮಂಡಳಿ ಜೊತೆ ಮಾತನಾಡಿ ಬಿಲ್ ಮೊತ್ತ ಮನ್ನಾ ಮಾಡಿಸಿದ್ದಾರೆ. ಅದ್ಯ ರೂಪ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಚಿನ್ನಿದಾಂಡು ಆಟದಿಂದ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

    ಚಿನ್ನಿದಾಂಡು ಆಟದಿಂದ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

    ಹಾವೇರಿ: ಚಿನ್ನಿದಾಂಡು ಆಟದಿಂದ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಎಪಿಎಂಸಿ ವೇಬ್ರಿಡ್ಜ್ ಬಳಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನ ಉಮೇಶ್ ಶಿವಜೋಗಿಮಠ(40) ಎಂದು ಗುರುತಿಸಲಾಗಿದೆ. ಕಾರವಾರ ಜಿಲ್ಲೆ ಮುಂಡಗೋಡ ಮೂಲದವರಾದ ಉಮೇಶ್ ಅವರು ಕಳೆದ ಕೆಲವು ವರ್ಷಗಳಿಂದ ಹಾವೇರಿಯ ಎಪಿಎಂಸಿ ಬಳಿ ಗ್ಯಾರೇಜ್ ಇಟ್ಟುಕೊಂಡಿದ್ದರು. ಇದರ ಜೊತೆಗೆ ಅವರು ಟಿಪ್ಪರ್ ಕೂಡ ಓಡಿಸುತ್ತಿದ್ದರು. ಗ್ಯಾರೇಜ್ ಸಮೀಪದ ವೇಬ್ರಿಡ್ಜ್ ಬಳಿ ಟಿಪ್ಪರ್ ನಿಂತಿರುತ್ತಿತ್ತು. ಇದನ್ನೂ ಓದಿ: ದಾಳಿ ಮಾಡಿದವರು ಸಿವಿಲ್ ಉಗ್ರಗಾಮಿಗಳು, ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು: ಸೊಗಡು ಶಿವಣ್ಣ 

    ನಡೆದಿದ್ದೇನು?
    ಸಂಜೆ ಸುಮಾರಿಗೆ ಟಿಪ್ಪರ್ ನಿಂತಿದ್ದ ಜಾಗದ ಬಳಿ ಕೆಲವೊಂದಿಷ್ಟು ಹುಡುಗರು ಚಿನ್ನಿದಾಂಡು ಆಡುತ್ತಿದ್ದರು. ಆಟದ ವೇಳೆ ಚಿನ್ನಿ ಬಂದು ಟಿಪ್ಪರ್‌ಗೆ ಬಡಿದಿತ್ತು. ನಂತರ ಉಮೇಶ್ ಮತ್ತು ಚಿನ್ನಿದಾಂಡು ಆಡುತ್ತಿದ್ದವರ ನಡುವೆ ಜಗಳ ಶುರುವಾಗಿದೆ. ಆಗ ಐದಾರು ಜನರು ಬಂದು ಉಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಉಮೇಶ್ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

    ಉಮೇಶ್ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಶಿಗ್ಗಾಂವಿ ಠಾಣೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಉಮೇಶ್ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದು, ಮೃತ ಸುದ್ದಿ ತಿಳಿದು ಕಣ್ಣೀರು ಹಾಕುತ್ತಿದ್ದಾರೆ. ಪೊಲೀಸ್ ಠಾಣೆ ಮುಂದೆಯೇ ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ:  ಪಠ್ಯಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ 2 ಸಾಲು, ಮೊಘಲರ ಬಗ್ಗೆ ಜಾಸ್ತಿ ಉಲ್ಲೇಖ: ಅಕ್ಷಯ್ ಕುಮಾರ್ 

    ಮೃತನ ಸಹೋದರ ಈ ಕುರಿತು ಮಾತನಾಡಿದ್ದು, ಉಮೇಶ್ ಒಳ್ಳೆಯ ವ್ಯಕ್ತಿಯಾಗಿದ್ದ. ಯಾರೊಂದಿಗೂ ದ್ವೇಷ ಭಾವನೆ ಹೊಂದಿರಲಿಲ್ಲ. ಆದರೆ ಅವರನ್ನು ಕೊಲೆ ಮಾಡಿರುವುದು ನಿಜಕ್ಕೂ ಆಘಾತ ಮೂಡಿಸಿದೆ. ಪ್ರಕರಣದ ಕುರಿತು ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

  • ಮನೆ ಮುಂದೆ ಮಲಗಿದ್ದವನ ಮೇಲೆ ಹರಿದ ಟಿಪ್ಪರ್: ಯುವಕ ಸ್ಥಳದಲ್ಲೇ ಸಾವು

    ಮನೆ ಮುಂದೆ ಮಲಗಿದ್ದವನ ಮೇಲೆ ಹರಿದ ಟಿಪ್ಪರ್: ಯುವಕ ಸ್ಥಳದಲ್ಲೇ ಸಾವು

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಲಿಂಗದಹಳ್ಳಿಯಲ್ಲಿ ಮರಳು ಸಾಗಣೆ ಟಿಪ್ಪರ್ ಹರಿದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಮಾರುತಿ (19) ಮೃತ ಯುವಕ. ಬೇಸಿಗೆ ಹಿನ್ನೆಲೆಯಲ್ಲಿ ಮನೆ ಮುಂಭಾಗದಲ್ಲಿ ಮಲಗಿದ್ದ ಮಾರುತಿ ಟಿಪ್ಪರ್‌ಗೆ ಬಲಿಯಾಗಿದ್ದಾನೆ. ಹೊಲದಲ್ಲೆ ಮನೆ ಮಾಡಿಕೊಂಡು ಮಾರುತಿ ಕುಟುಂಬ ಕೃಷಿ ಕೆಲಸ ಮಾಡಿಕೊಂಡಿತ್ತು. ಇವರ ಮನೆ ಎದುರೇ ಮರಳು ಸಂಗ್ರಹಣೆ ಅಡ್ಡಾ ಇದ್ದು, ಹಗಲು ರಾತ್ರಿ ಮರಳು ಸಾಗಣೆ ನಡೆಯುತ್ತದೆ. ನಿನ್ನೆ ರಾತ್ರಿ ಮರಳು ಲೋಡ್ ಬಂದಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಪಂಜಾಬ್‍ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿಗೆ ಇಡಿ ಸಂಕಷ್ಟ

    ಮಂಜುನಾಥ್ ಹಾಗೂ ಹನುಮಂತ್ ಎನ್ನುವವರು ಅಕ್ರಮವಾಗಿ ಮರಳು ಸಂಗ್ರಹ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಹೊರಗಡೆ ಮಲಗಿದ್ದ ಮಾರುತಿ ಮೇಲೆ ರಾತ್ರಿ ಬಂದ ಟಿಪ್ಪರ್ ಹರಿದು ದುರ್ಘಟನೆ ನಡೆದಿದೆ. ಮಾರುತಿ ಸಾವು ಹಿನ್ನೆಲೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಮಗಿನ್ನೂ ಅವಕಾಶವಿದೆ: ಹಿಜಬ್‌ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೋರಿ ಸಿಎಂಗೆ ವಿದ್ಯಾರ್ಥಿನಿ ಮನವಿ

  • ರಸ್ತೆ ದಾಟುವಾಗ ಮರಳಿನ ಟಿಪ್ಪರ್ ಡಿಕ್ಕಿ- ಬಾಲಕ ಸಾವು

    ರಸ್ತೆ ದಾಟುವಾಗ ಮರಳಿನ ಟಿಪ್ಪರ್ ಡಿಕ್ಕಿ- ಬಾಲಕ ಸಾವು

    ಕಲಬುರಗಿ: ರಸ್ತೆ ದಾಟುತ್ತಿದ್ದ ಬಾಲಕನ ಮೇಲೆ ಮರಳಿನ ಟಿಪ್ಪರ್ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳಿಯರು ಟಿಪ್ಪರ್‌ಗೆ ಬೆಂಕಿ ಹಚ್ಚಿದ ಘಟನೆ ನಗರದ ಹೀರಾಪುರ ಬಡಾವಣೆಯ ಫ್ಲೈಓವರ್ ಬಳಿ ನಡೆದಿದೆ.

    ಮನೀಷ್ ಮಲ್ಲಿಕಾರ್ಜುನ (10) ಮೃತ ಬಾಲಕ. ಪೋಷಕರ ಜೊತೆ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಟೀಪರ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಬಾಲಕ ಸ್ಥಳದಲ್ಲೇ ಸಾವುಗೀಡಾಗಿದ್ದಾನೆ. ಟಿಪ್ಪರ್ ಮೇಲೆ ಹರಿದ ಪರಿಣಾಮ ಬಾಲಕ ದೇಹ ಛಿದ್ರ ಛಿದ್ರಗೊಂಡಿದೆ.

    ಈ ವೇಳೆ ಉದ್ರೇಕಗೊಂಡ ಸ್ಥಳೀಯರು ಟಿಪ್ಪರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಟಿಪ್ಪರ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಘಟನೆ ಸಂಬಂಧ ಸ್ಥಳಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಇದನ್ನೂ ಓದಿ: ಹಿಜಬ್ ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಣೆ – ಭಾರತೀಯ ಮೂಲದ ರೆಸ್ಟೋರೆಂಟ್ ಬಂದ್

    ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಾಗಿದ್ದು, ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಘಟನೆ ಸಂಬಂಧಿಸಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ರನ್ನು ಮರಳಿ ಕಳುಹಿಸು – ಅಭಿಮಾನಿಯಿಂದ ದೇವರಿಗೆ ಪತ್ರ