Tag: ಟಿಟ್ ಟಾಕ್

  • ನಕಲಿ ಟಿಕ್‍ಟಾಕ್ ಖಾತೆಯಿಂದ ಮಹಿಳೆಗೆ ಕಿರುಕುಳ- ವ್ಯಕ್ತಿಯ ಬಂಧನ

    ನಕಲಿ ಟಿಕ್‍ಟಾಕ್ ಖಾತೆಯಿಂದ ಮಹಿಳೆಗೆ ಕಿರುಕುಳ- ವ್ಯಕ್ತಿಯ ಬಂಧನ

    ಶಿವಮೊಗ್ಗ: ನಕಲಿ ಟಿಕ್ ಟಾಕ್ ಖಾತೆಯಿಂದ ಮಹಿಳೆಯರ ವಿಡಿಯೋವನ್ನು ಅಶ್ಲೀಲವಾಗಿ ವಾಯ್ಸ್ ಎಡಿಟ್ ಮಾಡಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಭದ್ರಾವತಿ ತಾಲೂಕಿನ ಸಂಜಯ್(32) ಬಂಧಿತ ವ್ಯಕ್ತಿ. ಈತ ನಕಲಿ ಖಾತೆ ತೆರೆದು ಮಹಿಳೆಯಋ ವಿಡಿಯೋವನ್ನು ಅಶ್ಲೀಲವಾಗಿ ವಾಯ್ಸ್ ಎಡಿಟ್ ಮಾಡಿ ಟಿಕ್ ಟಾಕ್ ನಲ್ಲಿ ಅಪ್‍ಲೋಡ್ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

    ಆರೋಪಿ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಕುವೆಂಪು ವಿಶ್ವವಿದ್ಯಾಲಯದ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗಳಿಗೆ ಹಾಡು ಕಲಿಸುವಾಗ ಆರೋಪಿ ಸಂಜಯ್ ವಿಡಿಯೋ ಮಾಡಿಕೊಂಡಿದ್ದ. ನಂತರ ಈ ವಿಡಿಯೋವನ್ನೇ ಟಿಕ್ ಟಾಕ್ ಆ್ಯಪ್ ಮೂಲಕ ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿ ಬಿಡುತ್ತಿದ್ದ ಎನ್ನಲಾಗಿದೆ.

    ಈ ಬಗ್ಗೆ ಮಹಿಳೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿ ಸಂಜಯ್ ನನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.