Tag: ಟಿಟಿ ವಾಹನ

  • ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನಕ್ಕೆ ಟಿಟಿ ಡಿಕ್ಕಿ; ಹೈಮಾಸ್ಟ್ ದೀಪದ ಬೃಹತ್ ಕಂಬಕ್ಕೆ ಕಾರು ಡಿಕ್ಕಿ

    ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನಕ್ಕೆ ಟಿಟಿ ಡಿಕ್ಕಿ; ಹೈಮಾಸ್ಟ್ ದೀಪದ ಬೃಹತ್ ಕಂಬಕ್ಕೆ ಕಾರು ಡಿಕ್ಕಿ

    ಚಿಕ್ಕಬಳ್ಳಾಪುರ: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport) ಕೆಟ್ಟು ನಿಂತಿದ್ದ ಇಂಡಿಗೋ ವಿಮಾನಕ್ಕೆ ಟೆಂಪೋ ಟ್ರಾವೆಲ್ಲರ್ (Tempo Traveller) ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ಸಂಜೆ ನಡೆದಿದೆ.

    ಅಂದಹಾಗೆ ಇಂಜಿನ್ ರಿಪೇರಿ ಸಮಸ್ಯೆಯಿಂದ ಏರ್‌ಪೋರ್ಟ್‌ ಒಳಭಾಗದ ಅಲ್ಪಾ ಪಾರ್ಕಿಂಗ್ ಬೇ-71 ರಲ್ಲಿ ಹಲವು ದಿನಗಳಿಂದ ವಿಮಾನವನ್ನ ನಿಲ್ಲಿಸಲಾಗಿತ್ತು. ಇದೇ ವಿಮಾನಕ್ಕೆ ಮುಂಭಾಗದ ಮೂತಿ ಬಳಿ ಟೆಂಪೋ ಟ್ರಾವೆಲ್ಲರ್ ಡಿಕ್ಕಿಯಾಗಿದೆ.

    ಘಟನೆಯಲ್ಲಿ ಟೆಂಪೋ ಟ್ರಾವೆಲ್ಲರ್ ವಿಮಾನದ ಮೂತಿ ಭಾಗದ ಕೆಳಗೆ ಸಿಲುಕಿಕೊಂಡು ಟಿಟಿಯ ಟಾಪ್ ಜಖಂ ಆಗಿದೆ. ಘಟನೆಯಲ್ಲಿ ಚಾಲಕನ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯಿಂದ ಪಾರಾಗಿದ್ದಾನೆ ಅಂತ ತಿಳಿದುಬಂದಿದೆ. ರನ್ ವೇಗೆ ಸಿಬ್ಬಂದಿಯನ್ನ ಬಿಟ್ಟು ಬರಬೇಕಾದರೆ ಟಿಟಿ ವಾಹನ ಅಪಘಾತಕ್ಕೀಡಾಗಿದೆ.

    ಹೈಮಾಸ್ಟ್ ದೀಪದ ಬೃಹತ್ ಕಂಬಕ್ಕೆ ಕಾರು ಡಿಕ್ಕಿ:
    ಇನ್ನೂ ಮತ್ತೊಂದು ಪ್ರಕರಣದಲ್ಲಿ ಏರ್‌ಪೋರ್ಟ್‌ನ ಒಳಭಾಗದ ರನ್ ವೇ ಬಳಿ ಹೈಮಾಸ್ಟ್ ದೀಪದ ಬೃಹತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂ ಆಗಿದೆ. ಕಾರು ಚಾಲಕ ಗಾಯಗೊಂಡಿದ್ದಾನೆ. ಎರಡು ಪ್ರತ್ಯೇಕ ಪ್ರಕರಣಗಳ ತನಿಖೆಗೆ ಆದೇಶ ಮಾಡಲಾಗಿದೆ.

  • ಹಾವೇರಿಯಲ್ಲಿ ಭೀಕರ ಅಪಘಾತಕ್ಕೆ 13 ಸಾವು- ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ

    ಹಾವೇರಿಯಲ್ಲಿ ಭೀಕರ ಅಪಘಾತಕ್ಕೆ 13 ಸಾವು- ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ

    ನವದೆಹಲಿ: ಹಾವೇರಿಯಲ್ಲಿ (Haveri Accident) ಇಂದು ಬೆಳಗ್ಗೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ.

    ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಅಪಘಾತ ಈಗ ಗೊತ್ತಾಯಿತು. ಮಕ್ಕಳು ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಏನಿದು ಘಟನೆ..?: ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಟಿ ವಾಹನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಸುಭದ್ರಾಬಾಯಿ (65), ಮಾನಸ (24), ಮಂಜುಳಾ ಬಾಯಿ (62), ಚಾಲಕ ಆದರ್ಶ (23), ಆರ್ಯ, ವಿಶಾಲಾಕ್ಷಿ (40), ರೂಪಾಬಾಯಿ (40), ನಂದನ್, ಅಂಜಲಿ, ನಾಗೇಶ್ವರ ರಾವ್, ಅರುಣ್ ಕುಮಾರ್ ಮತ್ತು ಭಾಗ್ಯಲಕ್ಷ್ಮಿ ಮೃತಪಟ್ಟಿದ್ದಾರೆ. ಅನ್ನಪೂರ್ಣ, ಅರ್ಪಿತಾ, ಪರಶುರಾಮ್ ಮತ್ತು ಗೌತಮ್ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಬಳಿ ಇತ್ತಂತೆ 15 ಸಿಮ್- ಸಂತ್ರಸ್ತೆಯರಿಗೆ ನಗ್ನರಾಗುವಂತೆ ಬೆದರಿಕೆ!

    ಮೃತರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆ ಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು. ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂದು ಸ್ವಗ್ರಾಮಕ್ಕೆ ವಾಪಸ್ಸಾಗುವಾಗ ಈ ದುರ್ಘಟನೆ ಸಂಭವಿಸಿದೆ. ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂದಿನಿಂದ ಗುದ್ದಿದೆ. ಪರಿಣಾಮ ಟಿಟಿ ವಾಹನ ನಜ್ಜುಗುಜ್ಜಾಗಿದ್ದು, ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ. ಟಿಟಿ ವಾಹನ ಅತಿವೇಗದಲ್ಲಿ ಇದ್ದ ಕಾರಣ ಈ ದುರಂತ ಸಂಭವಿಸಿದೆ ಎಂದು ಜಿಲ್ಲೆಯ ಎಸ್‍ಪಿ ತಿಳಿಸಿದ್ದಾರೆ.

  • ಹಾವೇರಿ ಬಳಿ ಭೀಕರ ಅಪಘಾತ- 13 ಮಂದಿ ದುರ್ಮರಣ

    ಹಾವೇರಿ ಬಳಿ ಭೀಕರ ಅಪಘಾತ- 13 ಮಂದಿ ದುರ್ಮರಣ

    ಹಾವೇರಿ: ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಮೃತಪಟ್ಟ ಘಟನೆ ಹಾವೇರಿ (Accident in Haveri) ಬಳಿ ನಡೆದಿದೆ.

    ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ನಿದ್ದಪ್ಪ(45), ಶರಣು (40), ಯಲ್ಲಪ್ಪ (50), ನಾಗೇಶ್ (40), ನಾಗೇಶ್ (18) ಯಲ್ಲಪ್ಪ (65), ಗಣೇಶಪ್ಪ (65), ರಂಗನಾಥ ಸ್ವಾಮಿ (62) ಮತ್ತು ಇವರ 6 ಮತ್ತು 4 ವರ್ಷದ ಇಬ್ಬರು ಮಕ್ಕಳು, ಚಾಲಕ ನಾಗೇಶ್ (23), ಶರಣಪ್ಪ (24), ಪರಶುರಾ (40), ಮಂಜುಳಾ ರಾಮಕೃಷ್ಣ (50) ಎಂದು ಗುರುತಿಸಲಾಗಿದೆ.

    ಮೃತರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆ ಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು ಎನ್ನಲಾಗಿದೆ. ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂದು ಸ್ವಗ್ರಾಮಕ್ಕೆ ವಾಪಸ್ಸಾಗುವಾಗ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಗೋಬಿ, ಕಬಾಬ್ ಬಳಿಕ ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ

    ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂದಿನಿಂದ ಗುದ್ದಿದೆ. ಪರಿಣಾಮ ಟಿಟಿ ವಾಹನ ನಜ್ಜುಗುಜ್ಜಾಗಿದ್ದು, ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನ ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ಪೊಲೀಸರು ಮೃತರ ಹಿನ್ನೆಲೆ ಪತ್ತೆ ಹಚ್ಚುತ್ತಿದ್ದಾರೆ.

  • ಧಗಧಗನೆ ಹೊತ್ತಿ ಉರಿದ 10 ಜನರಿದ್ದ ಟೆಂಪೋ ಟ್ರಾವೆಲರ್!

    ಧಗಧಗನೆ ಹೊತ್ತಿ ಉರಿದ 10 ಜನರಿದ್ದ ಟೆಂಪೋ ಟ್ರಾವೆಲರ್!

    ತುಮಕೂರು: ನೋಡನೋಡುತ್ತಲೇ ಟೆಂಪೋ ಟ್ರಾವೆಲರ್ (Tempo Traveller) ಒಂದು ಧಗಧಗನೆ ಹೊತ್ತಿ ಉರಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಕ್ರಾಸ್ ಬಳಿ ನಡೆದಿದೆ.

    ಹಾಸನ (Hassan) ದಿಂದ ಬೆಂಗಳೂರಿಗೆ (Bengaluru) ತೆರಳುತ್ತಿದ್ದ ಟಿಟಿ ವಾಹನದಲ್ಲಿ ಮಗು ಸೇರಿ ಒಟ್ಟು ಹತ್ತು ಮಂದಿ ಇದ್ದರು. ಈ ವೇಳೆ ಸ್ವಲ್ಪ ಯಾಮಾರಿದ್ರೂ ಕೂತಲ್ಲೇ ಹತ್ತು ಜನ ಸುಟ್ಟು ಕರಕಲಾಗಬೇಕಿತ್ತು. ಆದರೆ ಸ್ವಲ್ಪದರಲ್ಲೇ ಬಹು ದೊಡ್ಡ ಅನಾಹುತವೊಂದು ತಪ್ಪಿದೆ. ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತ ಜಸ್ಟ್ ಮಿಸ್ ಆಗಿದೆ.

    ಎಂಜಿನ್ (Engine Fire) ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಟಿಟಿ ನಿಲ್ಲಿಸಿ ಚಾಲಕ ಎಲ್ಲರನ್ನೂ ಕೆಳಗಿಳಿಸಿದ್ದರು. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನೂ ಓದಿ: ತಂದೆಗೆ ಬೈದನೆಂದು ಯುವಕನಿಗೆ ಚಾಕುವಿನಿಂದ ಇರಿದ!

    ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಾರು- ಟಿಟಿ ವಾಹನ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

    ಕಾರು- ಟಿಟಿ ವಾಹನ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

    ತುಮಕೂರು: ಇನ್ನೋವಾ ಕಾರು ಹಾಗೂ ಟಿಟಿ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬೇಗೂರು ಬ್ರಿಡ್ಜ್ ಬಳಿ ನಡೆದಿದೆ.

    ಬೆಂಗಳೂರು ಕಡೆಯಿಂದ ಹಾಸನ ಕಡೆಗೆ ಕಾರು ತೆರಳುತ್ತಿತ್ತು. ಹಾಗೆಯೇ ರಸ್ತೆ ಡಿವೈಡರ್ ದಾಟಿ ಹಾಸನ ಕಡೆಯಿಂದ ಟಿಟಿ ವಾಹನ ಬರುತ್ತಿತ್ತು. ಈ ವೇಳೆ ಕಾರು ಹಾಗೂ ಟಿಟಿ ವಾಹನ ಡಿಕ್ಕಿಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪಿಎಸ್‍ಐ ನೇಮಕಾತಿ ಅಕ್ರಮ- ಮತ್ತೋರ್ವನ ಬಂಧನ, ಬಂಧಿತ ಆರೋಪಿಗಳ ಸಂಖ್ಯೆ 39ಕ್ಕೆ ಏರಿಕೆ

    ಶುಕ್ರವಾರವಷ್ಟೇ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ ನಡೆದಿತ್ತು. ಖಾಸಗಿ ಬಸ್ ಹಾಗೂ ಕಂಟೈನರ್ ಮುಖಾಮುಖಿ ಡಿಕ್ಕಿಯಾಗಿ 7 ಮಂದಿ ಮೃತಪಟ್ಟಿರುವ ಘಟನೆ ಕಲಬುರಗಿಯ ಕಮಲಾಪುರ ಹೊರವಲಯದಲ್ಲಿ ನಡೆದಿತ್ತು. ಮತ್ತೊಂದು ಪಂಚರ್ ಆಗಿ ನಿಂತಿದ್ದ ಕ್ಯಾಂಟರ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಬಳಿ ನಿಂತಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ನಡೆದಿತ್ತು. ಇದನ್ನೂ ಓದಿ: ಕಾರಿನಲ್ಲೇ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ – ಓರ್ವ ಅರೆಸ್ಟ್, ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು

  • ನಂದಿಗಿರಿಧಾಮಕ್ಕೆ ಪ್ರವಾಸಿಗರ ಕರೆದೊಯ್ಯಲು ಬಂತು ಹೊಸ ವಾಹನ

    ನಂದಿಗಿರಿಧಾಮಕ್ಕೆ ಪ್ರವಾಸಿಗರ ಕರೆದೊಯ್ಯಲು ಬಂತು ಹೊಸ ವಾಹನ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ಪ್ರವಾಸೋದ್ಯಮ ಇಲಾಖೆಯಿಂದ ಎರಡು ನೂತನ ಟಿಟಿ ವಾಹನಗಳನ್ನ ನಿಯೋಜಿಸಲಾಗಿದೆ.

    ನಂದಿಬೆಟ್ಟದ ಮೇಲ್ಭಾಗದಲ್ಲಿ ವಾಹನದಟ್ಟಣೆ ತಪ್ಪಿಸುವ ಸಲುವಾಗಿ ಜಿಲ್ಲಾಡಳಿತ ಮೇಲ್ಭಾಗದಲ್ಲಿ ನಿಲುಗಡೆ ಸಾಮಥ್ರ್ಯಕ್ಕನುಗುಣವಾಗಿ 300 ಕಾರು ಹಾಗೂ 500 ಬೈಕ್‍ಗಳ ಪಾಕಿರ್ಂಗ್‍ಗೆ ಅಷ್ಟೇ ಅವಕಾಶ ನೀಡಲಿದೆ. ಹೀಗಾಗಿ ಮೊದಲು ಕಾರು ಬೈಕ್‍ಗಳಲ್ಲಿ ಬಂದವರಿಗೆ ಮಾತ್ರ ಮೇಲ್ಭಾಗಕ್ಕೆ ಕಾರು ಹಾಗೂ ಬೈಕ್ ಗಳಲ್ಲಿ ಬರಲು ಅವಕಾಶವಿರುತ್ತೆ. ತದನಂತರ ಬರುವ ಪ್ರವಾಸಿಗರು ನಂದಿಬೆಟ್ಟದ ತಳಭಾಗದ ಚೆಕ್  ಪೋಸ್ಟ್ ನಲ್ಲಿ ತಮ್ಮ ವಾಹನಗಳನ್ನ ಪಾರ್ಕ್ ಮಾಡಬೇಕಿದೆ. ಇದನ್ನೂ ಓದಿ: ದಿವ್ಯಾ ಸುರೇಶ್‍ಗೆ ಗೊಂದಲ – ಕಾರಣವೇನು?

    ಈ ನೂತನ ಎರಡು ಟಿಟಿ ವಾಹನಗಳ ಮೂಲಕ ಪ್ರವಾಸಿಗರು ನಂದಿಬೆಟ್ಟಕ್ಕೆ ಬರಬಹುದಾಗಿದೆ. ನಂದಿಬೆಟ್ಟದ ತಪ್ಪಲಿನಪೊಲೀಸ್ ಚೆಕ್ಪೋಸ್ಟ್ ನಿಂದ ನಂದಿಬೆಟ್ಟದ ಮೇಲ್ಭಾಗದ ಮಯೂರ ಹೋಟೆಲ್ ಸರ್ಕಲ್‍ವರೆಗೂ ಪ್ರಯಾಣ ಮಾಡಬಹುದಾಗಿದೆ. ಪ್ರತಿ ಪ್ರಯಾಣಿಕರಿಗೆ 25 ರೂಪಾಯಿ ದರ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆ ಜಾರಿಗೆ ತಂದಿದೆ.

  • ಡ್ರಾಪ್ ನೀಡುವ ನೆಪದಲ್ಲಿ ರಾಬರಿ ಮಾಡುತ್ತಿದ್ದ ನಾಲ್ವರು ಅರೆಸ್ಟ್

    ಡ್ರಾಪ್ ನೀಡುವ ನೆಪದಲ್ಲಿ ರಾಬರಿ ಮಾಡುತ್ತಿದ್ದ ನಾಲ್ವರು ಅರೆಸ್ಟ್

    ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ರಾಬರಿ ಮಾಡುತ್ತಿದ್ದ ನಾಲ್ವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸಂದೀಪ್, ಅನುಕುಮಾರ್, ಮನುಕುಮಾರ್ ಬಂಧಿತ ಆರೋಪಿಗಳು. ತಂಡದಲ್ಲಿ ಓರ್ವ ಬಾಲಾಪರಾಧಿ ಇದ್ದಾನೆ. ರಾತ್ರಿ ಸಮಯದಲ್ಲಿ ಡ್ರಾಪ್ ಮಾಡುವ ನೆಪದಲ್ಲಿ ವಾಹನ ಹತ್ತಿಸಿಕೊಂಡು ಯಾರು ಇಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿ ಲಾಂಗ್ ಮಚ್ಚುಗಳನ್ನು ತೋರಿಸಿ ರಾಬರಿ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನವೆಂಬರ್ 4 ರಂದು ಗಂಗಾಧರಯ್ಯ ಎಂಬುವವರನ್ನು ಗೊರಗುಂಟೆಪಾಳ್ಯದಿಂದ ನಾಗರಭಾವಿ ಕಡೆಗೆ ತಲುಪಿಸುವುದಾಗಿ ಹೇಳಿ ತಮ್ಮ ಟಿಟಿ ವಾಹನ ಹತ್ತಿಸಿಕೊಂಡ ಈ ನಾಲ್ವರು. ನಂತರ ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಲಾಂಗು ಮಚ್ಚು ತೋರಿಸಿ ಗಂಗಾಧರಯ್ಯ ಬಳಿ ಇದ್ದ ಚಿನ್ನಾಭರಣ ದೋಚಿದ್ದರು. ಈ ಸಂಬಂಧ ಗಂಗಾಧರಯ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಟಿಟಿ ವಾಹನಕ್ಕೆ ಲಾರಿ ಡಿಕ್ಕಿ- ಬೆಂಗ್ಳೂರಿನ ಮೂವರು ವಿದ್ಯಾರ್ಥಿಗಳ ದುರ್ಮರಣ

    ಟಿಟಿ ವಾಹನಕ್ಕೆ ಲಾರಿ ಡಿಕ್ಕಿ- ಬೆಂಗ್ಳೂರಿನ ಮೂವರು ವಿದ್ಯಾರ್ಥಿಗಳ ದುರ್ಮರಣ

    ಚಿತ್ರದುರ್ಗ: ನಗರದ ಜಿಎಂಟಿ ವೃತ್ತದ ಬಳಿ ಟಿಟಿ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಮೂವರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

    ಬೆಂಗಳೂರು ಮೂಲದ ಕಾರ್ತಿಕ್ ಗೌಡ(20), ಹರ್ಷ(20), ಶ್ರೀನಿಧಿ(20) ಮೃತ ದುರ್ದೈವಿಗಳು. ಘಟನೆಯಲ್ಲಿ 6 ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಬೆಂಗಳೂರಿನ ಬಸವನಗುಡಿಯ ವಿಜಯ ಕಾಲೇಜಿನ ಅಂತಿಮ ವರ್ಷದ 13 ಮಂದಿ ಕಾಮರ್ಸ್ ವಿದ್ಯಾರ್ಥಿಗಳು ಏಪ್ರಿಲ್ 19 ರಂದು ಗೋಕರ್ಣ ಟ್ರಿಪ್ ತೆರಳಿದ್ದರು. ಗೋಕರ್ಣದಿಂದ ಬೆಂಗಳೂರಿಗೆ ಹಿಂದಿರುಗುವಾಗ ಟೈಯರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಕೆಟ್ಟು ನಿಂತಿತ್ತು. ಈ ವಾಹನಕ್ಕೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಟಿಟಿವಾಹನದ ಬಳಿಯಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.