Tag: ಟಿಕ್ ಟಾಕ್ ಸ್ಟಾರ್

  • ಪ್ಯಾರಾಚೂಟ್ ಓಪನ್ ಆಗದೇ ಸ್ಕೈಡೈವಿಂಗ್ ಮಾಡುವಾಗ ಖ್ಯಾತ ಟಿಕ್ ಟಾಕ್ ತಾರೆ ತಾನ್ಯಾ ಸಾವು

    ಪ್ಯಾರಾಚೂಟ್ ಓಪನ್ ಆಗದೇ ಸ್ಕೈಡೈವಿಂಗ್ ಮಾಡುವಾಗ ಖ್ಯಾತ ಟಿಕ್ ಟಾಕ್ ತಾರೆ ತಾನ್ಯಾ ಸಾವು

    ಕೆನಡಾದ ಖ್ಯಾತ ಟಿಕ್ ಟಾಕ್ ತಾರೆ ಹಾಗೂ ಮಾಡೆಲ್ ತಾನ್ಯಾ ಪರ್ದಾಜಿ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಅವರು ಸ್ಕೈಡೈವಿಂಗ್ ಕ್ಲಾಸಿಗೆ ಸೇರಿಕೊಂಡಿದ್ದು, ಸ್ಕೈಡೈವಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದಾಗ ಅನಾಹುತ ಸಂಭವಿಸಿದೆ. ಆಕಾಶದಿಂದ ನೇರವಾಗಿ ನೆಲಕ್ಕೆ ಬಿದ್ದು 21ರ ವಯಸ್ಸಿನ ತಾನ್ಯ ದುರಂತ ಅಂತ್ಯ ಕಂಡಿದ್ದಾರೆ.

    ತಾನ್ಯಾ ಪರ್ದಾಜಿ ಒಬ್ಬರೇ ಸ್ಕೈಡೈವಿಂಗ್ ಅಭ್ಯಾಸ ಮಾಡುವಾಗ ತಡವಾಗಿ ಪ್ಯಾರಾಚೂಟ್ ಓಪನ್ ಮಾಡಿದ ಹಿನ್ನೆಲೆಯಲ್ಲಿ ಪ್ಯಾರಾಚೂಟ್ ಗೆ ಗಾಳಿ ತುಂಬಿಕೊಳ್ಳದೇ ಆಕಾಶದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಆಗಸ್ಟ್ 27 ರಂದು ಕೆನಡಾದ ಒಂಟಾರಿಯೋದಲ್ಲಿ ಈ ದುರಂತ ನಡೆದಿದ್ದು, ಸ್ಕೈಡೈವಿಂಗ್ ತರಬೇತಿ ಸಂಸ್ಥೆಯ ಮೇಲೆ ದೂರು ದಾಖಲಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ತಾನ್ಯ ಪರ್ದಾಜಿ  ಕೇವಲ ಟಿಕ್ ಟಾಕ್ ತಾರೆ ಮಾತ್ರ ಆಗಿರಲಿಲ್ಲ. ಮಾಡೆಲಿಂಗ್ ನಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಲ್ಲದೇ, 2017ರಲ್ಲಿ ಮಿಸ್ ಕೆನಡಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿ ಸೆಮಿ ಫೈನಲಿಸ್ಟ್ ಕೂಡ ಆಗಿದ್ದವರು. ಸ್ಕೈಡೈವಿಂಗ್ ಮೇಲಿನ ಆಸಕ್ತಿಯಿಂದಾಗಿ ಇತ್ತೀಚೆಗಷ್ಟೇ ಅವರು ಕ್ಲಾಸಿಗೆ ಸೇರಿಕೊಂಡಿದ್ದರು ಎಂದಿದೆ ಸಂಸ್ಥೆ.

    Live Tv
    [brid partner=56869869 player=32851 video=960834 autoplay=true]

  • ನಾನು ಸ್ಮೋಕ್ ಮಾಡ್ತೀನಿ, ಅದರಲ್ಲಿ ತಪ್ಪೇನಿದೆ? ಬಿಗ್ ಬಾಸ್‌ನಲ್ಲಿ ಸೋನು ಗೌಡ ಬೋಲ್ಡ್ ಮಾತು

    ನಾನು ಸ್ಮೋಕ್ ಮಾಡ್ತೀನಿ, ಅದರಲ್ಲಿ ತಪ್ಪೇನಿದೆ? ಬಿಗ್ ಬಾಸ್‌ನಲ್ಲಿ ಸೋನು ಗೌಡ ಬೋಲ್ಡ್ ಮಾತು

    ನ್ನಡಿಗರು ಕಾತರದಿಂದ ಕಾಯುತ್ತಿರುವ ಶೋ ಬಿಗ್ ಬಾಸ್ ಓಟಿಟಿ ಈಗಾಗಲೇ ಶುರುವಾಗಿ, ಸಖತ್ ಸೌಂಡ್ ಮಾಡ್ತಿದೆ. ಕಿರುತೆರೆ, ಸಿನಿಮಾ, ಸೋಷಿಯಲ್ ಮೀಡಿಯಾ ಸ್ಟಾರ್ಸ್ ಹೀಗೆ ಬಹುಮುಖ ಪ್ರತಿಭೆಗಳು ಶೋನಲ್ಲಿ ಸಾಥ್ ನೀಡಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಗೌಡ ಕೂಡ ಭಾಗಿಯಾಗಿದ್ದು, ಇವರ ಬೋಲ್ಡ್ ಮಾತು ಸಖತ್ ಸದ್ದು ಮಾಡ್ತಿದೆ.

    ದೊಡ್ಮನೆ ಶೋ ಬಿಗ್ ಬಾಸ್ ಒಟಿಟಿ ಕಾಯುವಿಕೆ ತೆರೆ ಬಿದ್ದಿದೆ. ಯಾರೆಲ್ಲ ಈ ಕಾರ್ಯಕ್ರಮದ ಭಾಗವಾಗುತ್ತಾರೆ ಎಂಬುದು ಈಗಾಗಲೇ ರಿವೀಲ್ ಆಗಿ ಒಳ್ಳೆಯ ರೀಚ್ ಪಡೆಯುತ್ತಿದೆ. ಇನ್ನು ಟಿಕ್ ಟಾಕ್, ರೀಲ್ಸ್ ಮೂಲಕ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಸೋನು ಈಗ ಬಿಗ್ ಬಾಸ್ ಸ್ಪರ್ಧಿ ಆಗಿ, ಕಾಣಿಸಿಕೊಳ್ತಿದ್ದಾರೆ. ಈಕೆ ಸ್ಪರ್ಧಿಯಾಗಿ ಭಾಗಿಯಾದ ಬಹಳಷ್ಟು ನೆಗೆಟಿವ್ ಕಾಮೆಂಟ್ ಹರಿದು ಬಂದಿತ್ತು. ಈ ಬೆನ್ನಲ್ಲೇ ಸೋನು ಬೋಲ್ಡ್ ಮಾತು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ನಾನು ಸ್ಮೋಕ್ ಮಾಡ್ತೀನಿ, ಅದರಲ್ಲಿ ತಪ್ಪೇನಿದೆ? ಬಿಗ್ ಬಾಸ್‌ನಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ದೊಡ್ಮನೆಯಲ್ಲಿ ಉಳಿವವರ ಅಂತಿಮ ಪಟ್ಟಿ: ಏನ್ ಆಟ ಆಡಿಸ್ತಾನ್ರಿ ಈ ಬಿಗ್ ಬಾಸ್

    ಬಿಗ್ ಬಾಸ್ ಮನೆಯಲ್ಲಿ ಸ್ಮೋಕ್ ಮಾಡುವ ವಿಚಾರ ಬಂತು. ನಟ ರೂಪೇಶ್ ಶೆಟ್ಟಿ ನಾನು ಸ್ಮೋಕ್ ಮಾಡಲ್ಲ ಅಂದರು. ಅದಕ್ಕೆ ಸೋನು, ಸ್ಮೋಕ್ ಮಾಡುವುದಿಲ್ಲವಾ? ನಾನು ಮಾಡ್ತೀನಿ ಎಂದರು. `ಸಿಗರೇಟ್ ಸೇದುತ್ತೀರಾ’ ಎಂದು ಅಚ್ಚರಿಯಿಂದ ರೂಪೇಶ್ ಕೇಳಿದ್ದಾರೆ. ಹೌದು, ನಾನು ಸ್ಮೋಕ್ ಮಾಡ್ತೀನಿ, ನಾನು ಕುಡಿಯುತ್ತೀನಿ ಅದರಲ್ಲಿ ತಪ್ಪೇನಿದೆ ಎಂದು ನೇರವಾಗಿ ರೂಪೇಶ್‌ಗೆ ಪ್ರಶ್ನಿಸಿದ್ದಾರೆ. ಸೋನು ಅವರ ಈ ಬೋಲ್ಡ್ ಮಾತು ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂದೂಸ್ತಾನಿಗಳಾಗಿದ್ರೆ ಭಾರತ್ ಮಾತಾ ಕೀ ಜೈ ಅನ್ನಿ: ಸೋನಾಲಿ ಪೋಗಟ್

    ಹಿಂದೂಸ್ತಾನಿಗಳಾಗಿದ್ರೆ ಭಾರತ್ ಮಾತಾ ಕೀ ಜೈ ಅನ್ನಿ: ಸೋನಾಲಿ ಪೋಗಟ್

    ಚಂಡೀಗಢ: ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ಮತ್ಯಾಕೆ ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತಿಲ್ಲ ಎಂದು ಬಿಜೆಪಿ ಅಭ್ಯರ್ಥಿ, ಟಿಕ್ ಟಾಕ್ ಸ್ಟಾರ್ ಸೋನಾಲಿ ಪೋಗಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋನಾಲಿ ಪೋಗಟ್ ಆದಂಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದರೆ ಆದಂಪುರನಲ್ಲಿ ನಡೆದ ಸಮಾವೇಶದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ನನ್ನ ಕ್ಷೇತ್ರದ ಶೇ.52ರಷ್ಟು ಭಾಗದಲ್ಲಿ ಪಾಕಿಸ್ತಾನವಿದೆ: ಬಿಜೆಪಿ ಶಾಸಕ

    ಎಲ್ಲರೂ ಭಾರತ್ ಮಾತಾ ಕೀ ಜೈ ಎಂದು ಕೂಗಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಸೋನಾಲಿ ಪೋಗಟ್ ಉತ್ತೇಜಿಸಿದರು. ಆದರೆ ವೇದಿಕೆಯ ಎಡಭಾಗದಲ್ಲಿದ್ದ ಕೆಲವರು ಜೋರಾಗಿ ಘೋಷಣೆ ಕೂಗಲಿಲ್ಲ. ಇದರಿಂದ ಕೋಪಗೊಂಡ ಸೋನಾಲಿ, ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ಅಥವಾ ಪಾಕಿಸ್ತಾನದವರಾ? ನೀವು ಹಿಂದೂಸ್ತಾನ್ ನಿವಾಸಿಗಳಾಗಿದ್ದರೆ ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗಿ ಎಂದರು.

    ಸೋನಾಲಿ ಪೋಗಟ್ ಮತ್ತೆ ಭಾರತ್ ಮಾತಾ ಕೀ ಘೋಷಣೆ ಕೂಗಿದರು. ಆಗಲೂ ವೇದಿಕೆ ಎಡಭಾಗದ ಜನರಿಂದ ಏರು ಧ್ವನಿಯಲ್ಲಿ ಘೋಷಣೆ ಕೇಳಿಬರಲಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಸೋನಾಲಿ ಪೋಗಟ್, ನಾನು ನಿಮ್ಮ ಬಗ್ಗೆ ನಾಚಿಕೆ ಪಡುತ್ತೇನೆ. ಸಣ್ಣ ರಾಜಕೀಯದ ಕಾರಣಕ್ಕಾಗಿ ಭಾರತ್ ಮಾತಾ ಕೀ ಜೈ ಎಂದು ಹೇಳಲಾದ ನಿಮ್ಮಂತಹ ಭಾರತೀಯರಿದ್ದಾರೆ. ನಿಮ್ಮ ಮತಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಕಿಡಿಕಾರಿದರು.

    ಸೋನಾಲಿ ಪೋಗಟ್ ಕಾಂಗ್ರೆಸ್ ಪ್ರಾಬಲ್ಯದ ಆದಂಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಸೋನಾಲಿ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ, ವಿಡಿಯೋವನ್ನು ಟಿಕ್-ಟಾಕ್‍ನಲ್ಲಿ ಪೋಸ್ಟ್ ಮಾಡುತ್ತಾ ಬಂದಿದ್ದಾರೆ. ಈ ಮೂಲಕ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    ಆದಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ 1969ರಿಂದಲೂ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ. 1969 ರಿಂದ ಕಾಂಗ್ರೆಸ್ ಮುಖಂಡ ಭಜನ್ ಲಾಲ್ ಎಂಟು ಬಾರಿ ಗೆಲುಸು ಸಾಧಿಸಿದ್ದರು. ನಂತರ ಭಜನ್ ಲಾಲ್ ಪತ್ನಿ ಜಸ್ಮಾ ದೇವಿ ಹಾಗೂ ಪುತ್ರ ಕುಲ್ದೀಪ್ ಬಿಶ್ನೋಯ್ ಕ್ರಮವಾಗಿ 1987 ಹಾಗೂ 1998ರಲ್ಲಿ ಗೆಲುವು ಕಂಡಿದ್ದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಹರ್ಯಾಣ ಜನಹಿತ ಪಕ್ಷವು (ಎಚ್‍ಜೆಪಿ) ಗೆಲುವು ಸಾಧಿಸಿತ್ತು. ಆದರೆ 2019ರಲ್ಲಿ ಎಚ್‍ಜೆಪಿ ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಂಡಿತು.

    ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. ಅಕ್ಟೋಬರ್ 24ರಂದು ಫಲಿತಾಂಶ ಹೊರ ಬೀಳಲಿದೆ.