Tag: ಟಿಕ್ರಿ

  • ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತೆ: ರಾಕೇಶ್ ಟಿಕಾಯತ್

    ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತೆ: ರಾಕೇಶ್ ಟಿಕಾಯತ್

    ನವದೆಹಲಿ: ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತೆ ಎಂದು ರೈತ ಮುಖಂಡ, ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖ್ಯಸ್ಥ ರಾಕೇಶ್ ಟಿಕಾಯತ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ರೈತರು ದೇಶಾದ್ಯಂತ ಸರ್ಕಾರಿ ಕಚೇರಿಗಳನ್ನು ಧಾನ್ಯ ಮಾರುಕಟ್ಟೆಗಳಾಗಿ ಪರಿವರ್ತಿಸುತ್ತಾರೆ. ದೆಹಲಿ ಗಡಿಯಿಂದ ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಕೇಶ್ ಅವರು ಟ್ವಿಟ್ಟರ್‌ನಲ್ಲಿ, ರೈತರನ್ನು ಗಡಿಯಿಂದ ಬಲವಂತವಾಗಿ ಹೊರಹಾಕುವ ಪ್ರಯತ್ನ ನಡೆದರೆ ದೇಶಾದ್ಯಂತ ಇರುವ ಸರ್ಕಾರಿ ಕಚೇರಿಗಳನ್ನು ಗಲ್ಲಾ ಮಂಡಿಯನ್ನಾಗಿ ಪರಿವರ್ತಿಸಲಾಗುತ್ತೆ ಎಂದು ಆಕ್ರೋಶ ಹೊರಹಾಕಿದರು. ಆಡಳಿತವು ಪ್ರತಿಭಟನಾ ಸ್ಥಳದಲ್ಲಿ ತಮ್ಮ ಡೇರೆಗಳನ್ನು ಎಳೆಯಲು ಪ್ರಯತ್ನಿಸಿದರೆ, ರೈತರು ಅವುಗಳನ್ನು ಪೊಲೀಸ್ ಠಾಣೆಗಳು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸುತ್ತೇವೆ ಎಂದಿದ್ದಾರೆ.

    ‘ಆಡಳಿತವು ಇಲ್ಲಿನ ಟೆಂಟ್‍ಗಳನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ನಮಗೆ ತಿಳಿದುಬಂದಿದೆ. ಅವರು ಆ ರೀತಿ ಮಾಡಿದರೆ, ರೈತರು ತಮ್ಮ ಟೆಂಟ್‍ಗಳನ್ನು ಪೊಲೀಸ್ ಠಾಣೆಗಳು, ಡಿಸಿ ಕಚೇರಿಗಳಲ್ಲಿ ಸ್ಥಾಪಿಸುತ್ತಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ದೆಹಲಿಗೆ ಸಮೀಪವಿರುವ 14 ಜಿಲ್ಲೆಗಳಲ್ಲಿ ಪಟಾಕಿ ನಿಷೇಧಿಸಿದ ಹರಿಯಾಣ

    ದಿಲ್ಲಿ ಪೊಲೀಸರು ಗಾಜಿಪುರ, ಟಿಕ್ರಿ ಗಡಿಯಿಂದ ಸಿಮೆಂಟ್ ಬ್ಲಾಕ್‍ಗಳು ಮತ್ತು ಬ್ಯಾರಿಕೇಡ್‍ಗಳನ್ನು ತೆಗೆದ ಎರಡು ದಿನಗಳ ನಂತರ ರಾಕೇಶ್ ಅವರು ಈ ಕುರಿತು ಪ್ರತಿಕ್ರಿಯಿಸಿದರು. ರೈತರ ಆಂದೋಲನ ಪ್ರಾರಂಭವಾದಾಗಿನಿಂದ 11 ತಿಂಗಳ ಕಾಲ ಈ ರಸ್ತೆಯನ್ನು ಮುಚ್ಚಲಾಗಿತ್ತು. ಈ ಸಂಬಂಧ ಸಾರ್ವಜನಿಕರು ನಮ್ಮ ಪ್ರಯಾಣಕ್ಕೆ ತೊಂದರೆಯಾಗುತ್ತಿದೆ ಎಂದು ದೂರಿದ್ದರು.

    ರೈತರಿಗೆ ಆಂದೋಲನ ನಡೆಸುವ ಹಕ್ಕಿದ್ದರೂ ಹೆಚ್ಚು ದಿನಗಳ ಕಾಲ ರಸ್ತೆಯನ್ನು ತಡೆ ಮಾಡಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ತಿಳಿಸಿತ್ತು.

    26 ನವೆಂಬರ್ 2020ರಿಂದ ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಪ್ರತಿಭಟಿಸಿ ಸಾವಿರಾರು ರೈತರು ದೆಹಲಿಯ ಮೂರು ಗಡಿ ಭಾಗಗಳಾದ ಟಿಕ್ರಿ, ಸಿಂಘು ಮತ್ತು ಗಾಜಿಪುರದಲ್ಲಿ ಕ್ಯಾಂಪ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋದಿ ಪ್ರಧಾನಿ ಆಗಲು ಕಾಂಗ್ರೆಸ್ ಕಾರಣ: ಸಿದ್ದರಾಮಯ್ಯ

    ಕಳೆದ ವರ್ಷ ಜಾರಿಗೆ ತಂದ ಮೂರು ಕಾನೂನುಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ರೈತರು ಪ್ರತಿಪಾದಿಸುತ್ತಿದ್ದು, ಕೇಂದ್ರ ಮಾತ್ರ ಈ ಕಾನೂನುಗಳು ರೈತ ಪರ ಎಂದು ವಾದಿಸುತ್ತಿದೆ. ಕೇಂದ್ರ ಮತ್ತು ರೈತರ ನಡುವೆ ಹಲವು ಸುತ್ತಿನ ಮಾತುಕತೆ ವಿಫಲವಾಗಿದೆ.

  • ಟಿಕ್ರಿ ಗಡಿಯಲ್ಲಿ ರೈತರಿಗಾಗಿ ಮನೆಗಳ ನಿರ್ಮಾಣ – ವೃದ್ಧರಿಗೆ ಎಸಿ, ಕೂಲರ್ ವ್ಯವಸ್ಥೆ

    ಟಿಕ್ರಿ ಗಡಿಯಲ್ಲಿ ರೈತರಿಗಾಗಿ ಮನೆಗಳ ನಿರ್ಮಾಣ – ವೃದ್ಧರಿಗೆ ಎಸಿ, ಕೂಲರ್ ವ್ಯವಸ್ಥೆ

    ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನ ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದೆ. ಬೇಸಿಗೆ ಆರಂಭವಾದ ಹಿನ್ನೆಲೆ ರೈತರಿಗಾಗಿ ತಾತ್ಕಲಿಕ ಮನೆಗಳನ್ನ ನಿರ್ಮಿಸಲಾಗುತ್ತಿದೆ.

    ಈಗಾಗಲೇ ಟಿಕ್ರಿ ಬಾರ್ಡರ್ ನಲ್ಲಿ 25 ಮನೆಗಳನ್ನ ನಿರ್ಮಿಸಲಾಗಿದೆ. ಬಿಸಿಲು ಹೆಚ್ಚಾಗುತ್ತಿರೋದರಿಂದ ರೈತರು ಒಂದು ಸಾವಿರದಿಂದ ಎರಡು ಸಾವಿರದವರೆಗೆ ಮನೆ ನಿರ್ಮಿಸಲು ಚಿಂತನೆ ನಡೆಸಿದ್ದಾರೆ. ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಹೆಚ್ಚಿನ ಮನೆಗಳು ನಿರ್ಮಾಣವಾಗಲಿವೆ ಎಂದು ವರದಿಯಾಗಿದೆ.

    ಪ್ರತಿಭಟನಾ ನಿರತ ರೈತರ ಇಚ್ಛಾಶಕ್ತಿಗೆ ಸಮಾನವಾದ ಭದ್ರವಾದ ಮನೆಗಳನ್ನ ನಿರ್ಮಿಸಲಾಗುತ್ತಿದೆ. ಸರ್ಕಾರ ಮುಂದೊಂದು ದಿನ ತನ್ನ ವಿವಾದಾತ್ಮಕ ಕಾನೂನುಗಳನ್ನು ಹಿಂಪಡೆದುಕೊಳ್ಳುವ ಭರವಸೆ ನಮಗಿದೆ. ಈ ಹೋರಾಟ ದೀರ್ಘವಾಗಿದ್ದು, ರೈತರಿಗೆ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಬೇಕಿದೆ. ಬಿಸಿಲು ಹೆಚ್ಚಾಗುತ್ತಿದ್ದು, ಎಸಿ ಮತ್ತು ಕೂಲರ್ ವ್ಯವಸ್ಥೆ ಸಹ ಮಾಡಲಾಗುತ್ತಿದೆ ಎಂದು ಕಿಸಾನ್ ಸೋಶಿಯಲ್ ಆರ್ಮಿ ನಾಯಕ ಅನಿಲ್ ಮಲೀಕ್ ಹೇಳುತ್ತಾರೆ.

    ಬಿಸಿಲಿನಿಂದ ರಕ್ಷಿಸಿಕೊಳ್ಳಲು ಭದ್ರವಾದ ಮನೆಗಳು ಅವಶ್ಯಕತೆ ಇದೆ. ಈ ಹೋರಾಟದಲ್ಲಿ ವೃದ್ಧರು, ಮಹಿಳೆಯರು ಸಹ ಪಾಲ್ಗೊಂಡಿದ್ದಾರೆ. ಆದ್ದರಿಂದ ಈ ಎಲ್ಲ ಸೌಕರ್ಯಗಳು ಅನಿವಾರ್ಯ. ಆದ್ರೆ ಸರ್ಕಾರ ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದೆ. ಸರ್ಕಾರ ಪೊಲೀಸರು ಮತ್ತು ಅಧಿಕಾರಿಗಳ ಮೂಲಕ ನಮಗೆ ಮನೆಗಳನ್ನ ನಿರ್ಮಿಸದಂತೆ ಒತ್ತಡ ಹಾಕುತ್ತಿದೆ. ಆದ್ರೆ ನಾವು ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಮನ್‍ಜಿತ್ ಸಿಂಗ್ ರಾಯ್ ಗುಡುಗಿದ್ದಾರೆ.