Tag: ಟಿಕೇಟ್

  • ಟಿಕೆಟ್ ರಹಿತ ಪ್ರಯಾಣ – ನೈರುತ್ಯ ರೈಲ್ವೆ ವಲಯದಿಂದ 5.55 ಕೋಟಿ ದಂಡ ವಸೂಲಿ!

    ಟಿಕೆಟ್ ರಹಿತ ಪ್ರಯಾಣ – ನೈರುತ್ಯ ರೈಲ್ವೆ ವಲಯದಿಂದ 5.55 ಕೋಟಿ ದಂಡ ವಸೂಲಿ!

    ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 3 ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಬರೋಬ್ಬರಿ 5.55 ಕೋಟಿ ದಂಡ ವಸೂಲಿ ಮಾಡಲಾಗಿದೆ.

    ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 1,16,521 ಜನ ಟಿಕೆಟ್ ರಹಿತ ಪ್ರಯಾಣಿಕರನ್ನು ಹಿಡಿಯಲಾಗಿದೆ. ಇವರಿಂದ 5.52 ಕೋಟಿ ದಂಡ ವಸೂಲಿ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2435 ಪ್ರಕರಣಗಳನ್ನು ದಾಖಲಿಸಿ 13.74 ಲಕ್ಷ ದಂಡ ವಸೂಲಿ ಮಾಡಲಾಗಿತ್ತು. ಟಿಕೆಟ್ ತಪಾಸಣಾ ಸಿಬ್ಬಂದಿ ಕಾರ್ಯ ನಿರ್ವಹಣೆ ಈ ಸಲ ಪ್ರಶಂಸನೀಯವಾಗಿದೆ ಎಂದು ವಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:  ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

    ಹುಬ್ಬಳ್ಳಿ ವಿಭಾಗದಲ್ಲಿ 3ತಿಂಗಳಲ್ಲಿ 20457 ಪ್ರಕರಣ ದಾಖಲಿಸಿ 89.57 ಲಕ್ಷ, ಬೆಂಗಳೂರು ವಿಭಾಗದಲ್ಲಿ 61502 ಪ್ರಕರಣಗಳನ್ನು ದಾಖಲಿಸಿ 316.05 ಲಕ್ಷ ಅಂದರೆ 3.16 ಕೋಟಿ, 24659 ಪ್ರಕರಣ ದಾಖಲಿಸಿ 1.03 ಕೋಟಿ, ಸ್ಕಾuಟಿಜeಜಿiಟಿeಜಡ್ ತಂಡವೂ 9903 ಪ್ರಕರಣ ದಾಖಲಿಸಿ 43.33 ಲಕ್ಷ ರೂ. ಸೇರಿದಂತೆ ಒಟ್ಟು 1,16521 ಪ್ರಕರಣ ದಾಖಲಿಸಿದೆ. ಇದರಿಂದ ಒಟ್ಟು 552.27 ಲಕ್ಷ ಅಂದರೆ 5.52 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!

  • ಬಸ್ ಟಿಕೆಟ್ ಪಡೆಯದ ಕೋಳಿಗೆ ದಂಡ!

    ಬಸ್ ಟಿಕೆಟ್ ಪಡೆಯದ ಕೋಳಿಗೆ ದಂಡ!

    ಬೆಂಗಳೂರು: ಟಿಕೆಟ್ ಪಡೆಯದೇ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ ಮೂರು ಕೋಳಿಗಳಿಗೆ ಬಸ್ ತಪಾಸಣೆಗೆ ಬಂದ ತನಿಖಾಧಿಕಾರಿಗಳು ಒಟ್ಟು 500 ರೂ. ದಂಡ ವಿಧಿಸಿದ್ದಾರೆ.

    ಹೌದು, ಸಾರಿಗೆ ಬಸ್ಸುಗಳಲ್ಲಿ ಟಿಕೆಟ್ ರಹಿತ ಪ್ರಯಾಣ ದಂಡಕ್ಕೆ ಆಹ್ವಾನ ಎಂದು ಸಾಮಾನ್ಯವಾಗಿ ಬರೆದಿರುತ್ತಾರೆ. ಬರೀ ಮನುಷ್ಯರು ಮಾತ್ರ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ದಂಡ ಕಟ್ಟಬೇಕು ಅಂತ ಹಲವರು ಅಂದುಕೊಂಡಿರುತ್ತಾರೆ. ಆದ್ರೆ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಕರು ಕರೆದುಕೊಂಡು ಬರುವ ಪ್ರಾಣಿ ಪಕ್ಷಿಗಳಿಗೂ ಟಿಕೆಟ್ ಪಡೆಯಬೇಕು ಎನ್ನುವ ವಿಷಯ ಎಷ್ಟೋ ಜನಕ್ಕೆ ಗೊತ್ತಿರಲ್ಲ. ಹೀಗೆಯೇ ಟಿಕೆಟ್ ಪಡೆಯದೇ ಮೂರು ಕೋಳಿಗಳನ್ನು ಬಸ್ಸಿನಲ್ಲಿ ಸಾಗಿಸುತ್ತಿದ್ದ ಪ್ರಯಾಣಿಕನಿಗೆ ತಪಾಸಣೆಗೆ ಬಂದ ತನಿಖಾಧಿಕಾರಿಗಳು 500 ರೂ. ದಂಡ ಹಾಕಿದ್ದಾರೆ.

    ಕೂಡುರಸ್ತೆಯಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕ ತನಗೆ ಮಾತ್ರ ಟಿಕೆಟ್ ಪಡೆದಿದ್ದ, ಆದ್ರೆ ತನ್ನ ಜೊತೆ ಕರೆದುಕೊಂಡು ಬಂದಿದ್ದ ಕೋಳಿಗಳಿಗೆ ಕಂಡಕ್ಟರ್ ಬಳಿ ಟಿಕೆಟ್ ಪಡೆದಿರಲಿಲ್ಲ. ಈ ವೇಳೆ ಬಸ್ ತಪಾಸಣೆಗೆ ಬಂದ ತನಿಖಾಧಿಕಾರಿಗಳು ಕೋಳಿಗಳಿಗೆ ಅರ್ಧ ಟಿಕೆಟ್ ಪಡೆಯದಕ್ಕೆ ಪ್ರಯಾಣಿಕನಿಗೆ ಭರ್ತಿ 500 ರೂ. ದಂಡ ಹಾಕಿದ್ದಾರೆ. ಒಂದೊಂದು ಕೋಳಿಗೆ ಮಂಗಳೂರಿನವರೆಗೂ ಬಸ್ಸಿನಲ್ಲಿ ಪ್ರಯಾಣಿಸಲು 78. ರೂ ಟಿಕೆಟ್ ಪಡೆಯಬೇಕಾಗಿತ್ತು. ಆದ್ರೆ ಈಗ 78ರ ಬದಲು 500 ರೂ. ಪ್ರಯಾಣಿಕ ದಂಡ ಕಟ್ಟಿದ್ದಾನೆ.

  • ಕೇವಲ 5 ಗಂಟೆಯಲ್ಲಿ ಶಿವಮೊಗ್ಗದಿಂದ ಬೆಂಗ್ಳೂರಿಗೆ ಬರುತ್ತೆ ಜನಶತಾಬ್ಧಿ ಎಕ್ಸ್‌ಪ್ರೆಸ್ ರೈಲು!

    ಕೇವಲ 5 ಗಂಟೆಯಲ್ಲಿ ಶಿವಮೊಗ್ಗದಿಂದ ಬೆಂಗ್ಳೂರಿಗೆ ಬರುತ್ತೆ ಜನಶತಾಬ್ಧಿ ಎಕ್ಸ್‌ಪ್ರೆಸ್ ರೈಲು!

    – ಮುಂಗಡ ಬುಕ್ಕಿಂಗ್ ಮಾಡದೇ ಇದ್ರೆ ಹತ್ತಬೇಡಿ
    – ರೈಲಿಗೆ ಬಿಎಸ್‍ವೈ, ರಾಘವೇಂದ್ರರಿಂದ ಹಸಿರು ನಿಶಾನೆ

    ಶಿವಮೊಗ್ಗ: ಇಂದಿನಿಂದ ನೀವು ಕೇವಲ 5 ಗಂಟೆಯಲ್ಲಿ ಬೆಂಗಳೂರು ತಲುಪಬಹುದು. ಯಶವಂತಪುರ ಮತ್ತು ಶಿವಮೊಗ್ಗ ನಡುವೆ ಜನಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ.

    ನೂತನ ಜನಶತಾಬ್ಧಿ ರೈಲಿಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಅಷ್ಟೇ ಅಲ್ಲದೇ ಯಡಿಯೂರಪ್ಪ, ಆಯನೂರು ಮಂಜುನಾಥ್, ಸಂಸದ ರಾಘವೇಂದ್ರ, ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರ ಜೊತೆಗೂಡಿ, ಭದ್ರಾವತಿಯವರೆಗೆ ರೈಲಿನಲ್ಲಿ ಸಂಚಾರ ಮಾಡಿದ್ದಾರೆ.

    ನಿಲ್ದಾಣದ ಕೌಂಟರ್ ನಲ್ಲಿ ಟಿಕೆಟ್ ಪಡೆದು ಪ್ರಯಾಣಿಸಲು ಸಾಧ್ಯವಿಲ್ಲ. ರೈಲು ನಿಲ್ದಾಣ ಬಿಡುವ ಅರ್ಧಗಂಟೆ ಮೊದಲು ಆನ್ ಲೈನ್ ನಲ್ಲಿ ಅಥವಾ ಹಿಂದಿನ ದಿನ ರಾತ್ರಿ 8 ಗಂಟೆಯವರೆಗೂ ಕೌಂಟರ್ ನಲ್ಲಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಮಾತ್ರ ಈ ರೈಲಿನಲ್ಲಿ ಪ್ರಯಾಣಿಸಬಹುದು.

    ಬೆಂಗಳೂರು ಶಿವಮೊಗ್ಗ ಮಧ್ಯೆ ಈಗ ಸಂಚರಿಸುವ ಪ್ಯಾಸೆಂಜರ್ ರೈಲು 8 ಗಂಟೆ ತೆಗೆದುಕೊಂಡರೆ, ಎಕ್ಸ್‌ಪ್ರೆಸ್ ರೈಲುಗಳು 6.30 ಗಂಟೆ ತೆಗದುಕೊಳ್ಳುತ್ತದೆ. ಆದರೆ ಈ ರೈಲು ಭದ್ರಾವತಿ, ಕಡೂರು, ತುಮಕೂರಿನಲ್ಲಿ ಮಾತ್ರ ನಿಲ್ಲುವ ಕಾರಣ ಕೇವಲ 5 ಗಂಟೆಯಲ್ಲಿ ಶಿವಮೊಗ್ಗ/ಬೆಂಗಳೂರು ತಲುಪುತ್ತದೆ.


    ಸಮಯ-ಮಾರ್ಗ:
    ಈ ರೈಲು (ರೈಲು ಸಂಖ್ಯೆ- 12090) ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಶಿವಮೊಗ್ಗದಿಂದ ಬೆಳಗ್ಗೆ 5.15ಕ್ಕೆ ಹೊರಟು, 10.10ಕ್ಕೆ ಯಶವಂತಪುರ ತಲುಪಲಿದೆ. ಇದೇ ರೀತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಯಶವಂತಪುರದಿಂದ (ರೈಲು ಸಂಖ್ಯೆ- 12089) ಸಂಜೆ 5.30 ಕ್ಕೆ ಹೊರಟು ರಾತ್ರಿ 10.10ಕ್ಕೆ ಶಿವಮೊಗ್ಗ ತಲುಪುತ್ತದೆ.

    ರೈಲಿನ ದರ:
    ಈ ರೈಲಿನಲ್ಲಿ ಎರಡು ಎಸಿ ಬೋಗಿಗಳು, 8 ಕಾರ್ ಚೇರ್, ಎರಡು ಲಗೇಜ್ ಬೋಗಿಗಳು ಇರಲಿವೆ. ಎಸಿ ಕಾರ್ ಚೇರ್ ಗೆ 485 ರೂಪಾಯಿ, ಸೆಕೆಂಡ್ ಕ್ಲಾಸ್ ಚೇರ್ ಕಾರ್ ಗೆ 145 ರೂಪಾಯಿ ದರ ನಿಗದಿಯಾಗಿದೆ. ಇದಲ್ಲದೆ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ ಕೂಡ ಇದೆ.

    ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಶಿವಮೊಗ್ಗ ಈಗ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿದೆ. ಜಿಲ್ಲೆಯಲ್ಲಿ ಹಲವಾರು ಸುಂದರ ನಿಸರ್ಗತಾಣಗಳು ಇದ್ದು, ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿದೆ. ಈಗ ಬೆಂಗಳೂರು- ಶಿವಮೊಗ್ಗ ನಡುವೆ ಹೆಚ್ಚುವರಿ ರೈಲು ಆರಂಭದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸುತ್ತಿರುವ ಎಕ್ಸ್‌ಪ್ರೆಸ್ ರೈಲಿನೊಂದಿಗೆ ಈ ಜನಶತಾಬ್ಧಿ ರೈಲನ್ನು ಹೆಚ್ಚುವರಿಯಾಗಿ ಆರಂಭಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv