Tag: ಟಿಕೆಟ್ ವಂಚನೆ

  • ರಾಣಿಝರಿ, ಬಂಡಾಜೆ ಫಾಲ್ಸ್ ಬಳಿ ಟಿಕೆಟ್ ಗೋಲ್ಮಾಲ್‌ – ಸರ್ಕಾರದ ಹಣ ಪ್ರಿಯತಮೆ ಖಾತೆಗೆ

    ರಾಣಿಝರಿ, ಬಂಡಾಜೆ ಫಾಲ್ಸ್ ಬಳಿ ಟಿಕೆಟ್ ಗೋಲ್ಮಾಲ್‌ – ಸರ್ಕಾರದ ಹಣ ಪ್ರಿಯತಮೆ ಖಾತೆಗೆ

    ಚಿಕ್ಕಮಗಳೂರು: ಸರ್ಕಾರದ ಹಣವನ್ನು ಪ್ರಿಯತಮೆ ಖಾತೆಗೆ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನಲ್ಲಿ ನಡೆದಿದೆ.

     ಸರ್ಕಾರಕ್ಕೆ ಮೋಸ ಮಾಡಿರುವುದು ಸಾಬೀತಾಗಿದ್ದು, 9 ಸಾವಿರ ರೂ. ಸರ್ಕಾರದ ಹಣವನ್ನು ಪ್ರಿಯತಮೆಯ ಖಾತೆಗೆ ವರ್ಗಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕಳಸ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಚಂದನ್ ಗೌಡ ಅವರನ್ನು ಅಮಾನತುಗೊಳಿಸಿ ಕೊಪ್ಪ ಡಿ.ಎಫ್.ಓ. ಉಪೇಂದ್ರ ಪ್ರತಾಪ್ ಸಿಂಗ್ ಆದೇಶಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನ ಪ್ರವೇಶ ವೇಳೆ ಹಿಂದೂ ಎಂಬುದಕ್ಕೆ ಸಾಕ್ಷಿ ತೋರಿಸಿ ಎಂದರು-‘ನೀಲಕಂಠ’ ನಟಿ ನಮಿತಾ

    ಆನ್‌ಲೈನ್ ಟಿಕೆಟ್ ಫೋರ್ಜರಿ ಮಾಡುವ ಮೂಲಕ ಈ ಹಣವನ್ನು ವಂಚನೆ ಮಾಡಲಾಗಿದೆ. ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಬಳಿ ಟಿಕೆಟ್ ಗೋಲ್ಮಾಲ್‌ ಮಾಡಿರುವುದು ಬೆಳಕಿಗೆ ಬಂದಿದೆ.

    ಬೆಳಕಿಗೆ ಬಂದಿದ್ದು ಹೇಗೆ?
    ಬಂಡಾಜೆ ಫಾಲ್ಸ್ ಬಳಿ 200ಕ್ಕೂ ಅಧಿಕ ಜನರು ಬಂಡಾಜೆ ಫಾಲ್ಸ್ ನೋಡಲು ತೆರಳಿದ್ದರು.ಮಧ್ಯೆ ಚೆಕ್ ಮಾಡಲು ಹೋಗಿದ್ದ ಪೊಲೀಸರಿಗೆ ಪ್ರವಾಸಿಗರು ಸಿಕ್ಕಿ ಬಿದ್ದಿದ್ದಾರೆ. ವಿಚಾರಣೆ ಮಾಡಿದಾಗ ಜೂನ್ ತಿಂಗಳ ಆನ್‌ಲೈನ್ ಟಿಕೆಟ್ ಬುಕ್ಕಿಂಗ್, ಪ್ರವಾಸಿಗರ ನೋಂದಣಿ ಪುಸ್ತಕಕ್ಕೂ ತಾಳೆ ಆಗುತ್ತಿರಲಿಲ್ಲ. ಪೊಲೀಸರು ಪ್ರವಾಸಿಗರನ್ನು ವಿಚಾರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ.ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾ ಹಿಂಡಲಗಾ ಜೈಲಿಗೆ ಶಿಫ್ಟ್

    ಈಗ ಇಲಾಖೆ ವಿಚಾರಣೆ ನಡೆಸುತ್ತಿದೆ. ಇಲಾಖೆಯ ಲಕ್ಷಗಟ್ಟಲೇ ಹಣ ಮೋನಿಕಾ ಎಂಬ ಯುವತಿಯ ಖಾತೆಗೆ ಜಮಾ ಆಗಿರುವ ಕುರಿತು ಅನುಮಾನ ವ್ಯಕ್ತವಾಗಿದೆ.

  • ಬಿಜೆಪಿ ಟಿಕೆಟ್‍ಗಾಗಿ ಕೋಟಿ ಕೋಟಿ ಡೀಲ್ – ಚೈತ್ರಾ ಮಾದರಿ ಮತ್ತೊಂದು ಪ್ರಕರಣ ಬಯಲಿಗೆ

    ಬಿಜೆಪಿ ಟಿಕೆಟ್‍ಗಾಗಿ ಕೋಟಿ ಕೋಟಿ ಡೀಲ್ – ಚೈತ್ರಾ ಮಾದರಿ ಮತ್ತೊಂದು ಪ್ರಕರಣ ಬಯಲಿಗೆ

    ವಿಜಯನಗರ: ವಿಧಾನಸಭಾ ಚುನಾವಣೆ ಮುಗಿದು ತಿಂಗಳುಗಳೇ ಕಳೆದರೂ ಬಿಜೆಪಿ ಟೆಕೆಟ್ (BJP Ticket) ಹೆಸರಲ್ಲಿ ನಡೆದ ವಂಚನೆ ಪ್ರಕರಣಗಳು (Fraud Case) ಮತ್ತೆ ಮತ್ತೆ ಬೆಳಕಿಗೆ ಬರುತ್ತಿವೆ. ಇದೀಗ ಹಗರಿಬೊಮ್ಮನಹಳ್ಳಿ ಟಿಕೆಟ್ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ನಿವೃತ್ತ ಇಂಜಿನಿಯರ್ ಶಿವಮೂರ್ತಿ ಎಂಬವರಿಗೆ 2 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಚೈತ್ರಾ ಪ್ರಕರಣದ ಮಾದರಿಯಲ್ಲೇ ವಂಚನೆ ಮಾಡಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಲ್ಲಿದ್ದ ಅವರಿಗೆ ಬಿಜೆಪಿ (BJP) ನಾಯಕರು ಪರಿಚಯ ಮಾಡಿಕೊಂಡು ಟಿಕೆಟ್ ಕೊಡಿಸುವುದಾಗಿ ಹೇಳಿದ್ದಾರೆ. ಬಳಿಕ ಬಿಜೆಪಿ ಮುಖಂಡರ ಹೆಸರನ್ನು ಬಳಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ನಗರಸಭಾ ಸದಸ್ಯನ ಹತ್ಯೆಗೆ ಯತ್ನ – ಮೂವರು ವಶಕ್ಕೆ

    ಬಿಜೆಪಿ ಮಾಜಿ ಮುಖಂಡ ಮತ್ತು ಹಾಲಿ ಕೆಆರ್‌ಪಿಪಿ ಪಕ್ಷದ ವಿಜಯನಗರ (Vijayanagar) ಜಿಲ್ಲಾಧ್ಯಕ್ಷ ರೇವಣ್ಣ ಸಿದ್ದಪ್ಪ ಹಗರಿಬೊಮ್ಮನ ಟಿಕೆಟ್ ಕೊಡಿಸುವ ನೆಪದಲ್ಲಿ ಬಿಜೆಪಿಯ ಕೆಲ ನಾಯಕರನ್ನು ಪರಿಚಯ ಮಾಡಿಸುತ್ತಾರೆ. ಟಿಕೆಟ್‍ಗಾಗಿ ಹಣ ನೀಡಬೇಕೆಂದು ಹೇಳಿ ರೇವಣ್ಣ ಸಿದ್ದಪ್ಪ ಮತ್ತು ಪುತ್ತೂರಿನ ಶೇಖರ್ ಎಂಬಾತ ಹಂತ ಹಂತವಾಗಿ ಎರಡು ಕೋಟಿ ರೂ.ಗೂ ಹೆಚ್ಚು ಹಣ ವಸೂಲಿ ಮಾಡಿದ್ದಾರೆ.

    ಚುನಾವಣೆ ವೇಳೆ ಟಿಕೆಟ್ ಬ್ಯಾಲ ಹುಣಸಿ ರಾಮಣ್ಣ ಅವರಿಗೆ ಸಿಗುತ್ತದೆ. ಈ ವೇಳೆ ಆಕ್ರೋಶಗೊಂಡ ಶಿವಮೂರ್ತಿ ಹಣ ವಾಪಸ್ ಕೇಳಿದ್ದರು. ಆಗ ವಾಗ್ವಾದ ನಡೆದು ಗಲಾಟೆಯಾಗಿತ್ತು. ಆರಂಭದಲ್ಲಿ ಮರ್ಯಾದೆಗೆ ಅಂಜಿ ವಿಷಯ ಬಹಿರಂಗಪಡಿಸದೆ ಸುಮ್ಮನಿದ್ದರು. ಬಳಿಕ ಕೊಟ್ಟೂರಿನ ಕೆಲವು ಪ್ರಮುಖರು ರಾಜಿ ಪಂಚಾಯಿತಿ ಮಾಡಿ ವಿಚಾರ ಮುಚ್ಚಿಡಲು ಯತ್ನಿಸಿದ್ದಾರೆ.

    ಇದೀಗ ಮೂರು ತಿಂಗಳಾದರೂ ಹಣ ವಾಪಾಸ್ ನೀಡಿಲ್ಲ. ನೀಡಿದ್ದ ಎರಡು ಚೆಕ್‍ಗಳೂ ಬೌನ್ಸ್ ಆಗಿವೆ. ಇದೇ ಕಾರಣಕ್ಕೆ ಶಿವಮೂರ್ತಿ, ಇದೀಗ ಕೊಟ್ಟೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೂ ದೂರನ್ನು ನೀಡಿದ್ದಾರೆ.

    ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಸಿದ್ದಪ್ಪ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಪೊಲೀಸರು (Police) ಕೂಡ ಅವರನ್ನು ವಿಚಾರಣೆಗೆ ಕರೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಪುರುಷರಿಗೂ ಪ್ರಯಾಣ ಉಚಿತ ಮಾಡಿ: ವಾಟಾಳ್ ಆಗ್ರಹ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಪ್ಪಳದಲ್ಲೂ ಟಿಕೆಟ್ ಹೆಸರಲ್ಲಿ ವಂಚನೆ – 21 ಲಕ್ಷ ಕಳೆದುಕೊಂಡ ಬಿಜೆಪಿ ಮುಖಂಡ

    ಕೊಪ್ಪಳದಲ್ಲೂ ಟಿಕೆಟ್ ಹೆಸರಲ್ಲಿ ವಂಚನೆ – 21 ಲಕ್ಷ ಕಳೆದುಕೊಂಡ ಬಿಜೆಪಿ ಮುಖಂಡ

    – ಅಮಿತ್ ಶಾ ಪರಿಚಯವೆಂದು ಹೇಳಿ ದೋಖಾ

    ಕೊಪ್ಪಳ: ಉದ್ಯಮಿ ಗೋವಿಂದ ಪೂಜಾರಿ ಮಾದರಿಯಲ್ಲೇ ಕೊಪ್ಪಳ (Koppala) ಜಿಲ್ಲೆಯಲ್ಲೂ ಒಬ್ಬ ಬಿಜೆಪಿ (BJP) ಟಿಕೆಟ್ ಆಕಾಂಕ್ಷಿ ಲಕ್ಷಾಂತರ ರೂ. ಟೋಪಿ ಹಾಕಿಸಿಕೊಂಡಿದ್ದಾರೆ.

    ಕೊಪ್ಪಳದ ಕನಕಗಿರಿ ಎಸ್‌ಸಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಗಾಯತ್ರಿ ತಿಮ್ಮಾರೆಡ್ಡಿ ಹಣ ಕೊಟ್ಟು ಕೈ ಸುಟ್ಟುಕೊಂಡಿದ್ದಾರೆ. ಹಿಂದೂ ಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ವಂಚನೆ (Fraud) ಪ್ರಕರಣ ಸದ್ದು ಮಾಡಿದ ಹಿನ್ನೆಲೆ ಗಾಯತ್ರಿ ಪ್ರಕರಣ ಮುನ್ನೆಲೆಗೆ ಬಂದಿದೆ. ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಬಿಜೆಪಿ ಮುಖಂಡ ತಿಮ್ಮಾರೆಡ್ಡಿ ಗಿಲ್ಲೇಸುಗೂರ ಲಕ್ಷಾಂತರ ರೂ. ಹಣ ಕೊಟ್ಟು ವಂಚನೆ ಒಳಗಾಗಿದ್ದಾರೆ.

    ದೆಹಲಿ ಮೂಲದ ವಿಶಾಲ್ ನಾಗ್ ಹಾಗೂ ಬೆಂಗಳೂರಿನ ಜೀತು ಮತ್ತು ಗೌರವ್ ಎಂಬುವವರು ಬರೋಬ್ಬರಿ 21 ಲಕ್ಷ ರೂ. ಮುಂಗಡ ಹಣ ಪಡೆದು, ವಂಚನೆ ಮಾಡಿದ್ದಾರೆ. ಚೈತ್ರಾ ಕುಂದಾಪುರ ಗ್ಯಾಂಗ್ ರೀತಿಯಲ್ಲೇ ವಂಚನೆ ನಡೆದಿದ್ದು, ಈ ಬಗ್ಗೆ ತಿಮ್ಮಾರೆಡ್ಡಿ ಗಿಲ್ಲೇಸುಗೂರ ಕಳೆದ 2 ತಿಂಗಳ ಹಿಂದೆಯೇ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

    ಆರೋಪಿಗಳು ತಾವು ಅಮಿತ್ ಶಾಗೆ ಆತ್ಮೀಯರಾಗಿದ್ದು, ಅವರ ಟೀಂನಲ್ಲೇ ಕೆಲಸ ಮಾಡುತ್ತಿರೋದಾಗಿ ಹೇಳಿಕೊಂಡಿದ್ದರು. ಜೊತೆಗೆ ರಾಜ್ಯದಲ್ಲಿ ಸಮೀಕ್ಷೆ ಮಾಡಿದ್ದು, ಕನಕಗಿರಿ ವಿಧಾನಸಭೆ ಕ್ಷೇತ್ರಕ್ಕೆ ನಿಮ್ಮ ಹೆಸರು ಮುಂಚೂಣಿಗೆ ತರುತ್ತೇವೆ. ಜೊತೆಗೆ ಟಿಕೆಟ್ ಕೊಡಿಸುತ್ತೇವೆ ಎಂದು ವಂಚಿಸಿದ್ದರು. ತಮ್ಮ ರೀತಿಯಲ್ಲೇ ಬಹಳ ಆಕಾಂಕ್ಷಿಗಳಿಗೆ ವಂಚನೆ ಆಗಿದೆ ಎಂದು ತಿಮ್ಮಾರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಹೊಗಳಿಕೆಯನ್ನೇ ತಮ್ಮ ಮೈಲೇಜ್‍ಗೆ ಬಳಸಿಕೊಂಡ್ರಾ ಚೈತ್ರಾ?

    ವಿಶಾಲ್ ನಾಗ್ ಎಂಬಾತ ತಾನು ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ಮುಖ್ಯಸ್ಥ ಎಂದು ಪರಿಚಯಿಸಿಕೊಂಡಿದ್ದ. ಇದನ್ನು ನಂಬಿದ್ದ ತಿಮ್ಮಾರೆಡ್ಡಿ ಅವರು ವಿಶಾಲ್ ಬ್ಯಾಂಕ್ ಖಾತೆಗೆ 2 ಲಕ್ಷ ಸೇರಿ ಒಟ್ಟು 21 ಲಕ್ಷ ರೂ. ನಗದು ನೀಡಿದ್ದಾರೆ. ಟಿಕೆಟ್ ಸಿಗದಿದ್ದರಿಂದ ಹಣ ವಾಪಸ್ ಕೇಳಿದ್ದು, ಹಣ ವಾಪಾಸ್ ನೀಡದ್ದರಿಂದ ಆಕಾಂಕ್ಷಿ ಪತಿ ತಿಮ್ಮಾರೆಡ್ಡಿ ದೂರು ನೀಡಿದ್ದಾರೆ. ಇದರಿಂದ ಬಿಜೆಪಿ ಟಿಕೆಟ್‌ಗಾಗಿ ನಡೆದ ಡೀಲ್ ಪ್ರಕರಣ ಬಗೆದಷ್ಟೂ ಹೊರ ಬರಲಿವೆ. ಇದನ್ನೂ ಓದಿ: ಎಲ್ಲಾ ಪರೀಕ್ಷೆಗಳ ರಿಪೋರ್ಟ್ ನಾರ್ಮಲ್- ಚೈತ್ರಾ ಹೆಲ್ತ್ ಬುಲೆಟಿನ್ ರಿಪೋರ್ಟ್ ಇಲ್ಲಿದೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]