Tag: ಟಿಕೆಟ್ ಬುಕ್ಕಿಂಗ್

  • ಗಮನಿಸಿ, ರೈಲ್ವೇ ಮುಂಗಡ  ಟಿಕೆಟ್‌ ಬುಕ್ಕಿಂಗ್‌ ಅವಧಿ 120 ದಿನದಿಂದ 60 ದಿನಕ್ಕೆ ಕಡಿತ

    ಗಮನಿಸಿ, ರೈಲ್ವೇ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಅವಧಿ 120 ದಿನದಿಂದ 60 ದಿನಕ್ಕೆ ಕಡಿತ

    ನವದೆಹಲಿ: ಇನ್ನು ಮುಂದೆ 4 ತಿಂಗಳು ಮುಂಚಿತವಾಗಿ ರೈಲ್ವೇ ಟಿಕೆಟ್‌ ಬುಕ್‌ (Ticket Booking) ಮಾಡಲು ಸಾಧ್ಯವಿಲ್ಲ. ಭಾರತೀಯ ರೈಲ್ವೇ (Indian Railways) ಬುಕ್ಕಿಂಗ್‌ಗಾಗಿ ಮುಂಗಡ ಕಾಯ್ದಿರಿಸುವಿಕೆಯ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಕಡಿತಗೊಳಿಸಿದೆ.

    ಹೊಸ ಬದಲಾವಣೆ ನ.1 ರಿಂದ ಜಾರಿಯಾಗಲಿದೆ. ಅಕ್ಟೋಬರ್ 31 ರ ಮೊದಲು 120 ದಿನಗಳ ಬುಕ್ಕಿಂಗ್‌ ಮಾನ್ಯವಾಗಿರುತ್ತದೆ ಎಂದು ರೈಲ್ವೇ ಸ್ಪಷ್ಟಪಡಿಸಿದೆ.

    ಅಧಿಕೃತ ಸೂಚನೆಯ ಪ್ರಕಾರ, ಪರಿಷ್ಕೃತ ಬದಲಾವಣೆಗಳು ವಿಭಿನ್ನ ಮುಂಗಡ ಕಾಯ್ದಿರಿಸುವಿಕೆಯ ಮಿತಿಗಳನ್ನು ಹೊಂದಿರುವ ತಾಜ್ ಎಕ್ಸ್‌ಪ್ರೆಸ್ ಮತ್ತು ಗೋಮತಿ ಎಕ್ಸ್‌ಪ್ರೆಸ್‌ನಂತಹ ಕೆಲವು ಹಗಲಿನ ಎಕ್ಸ್‌ಪ್ರೆಸ್ ರೈಲುಗಳಿಗೆ ಅನ್ವಯಿಸುವುದಿಲ್ಲ.  ಇದನ್ನೂ ಓದಿ: ದೀಪಾವಳಿಗೆ ರಾಜ್ಯದಲ್ಲಿ ವಿಶೇಷ ರೈಲು ಸಂಚಾರ: ಸೋಮಣ್ಣ


    ವಿದೇಶಿ ಪ್ರವಾಸಿಗರಿಗೆ ಇರುವ 365 ದಿನಗಳ ಮುಂಗಡ ಬುಕ್ಕಿಂಗ್‌ ಆಯ್ಕೆ ಹಾಗೆಯೇ ಮುಂದುವರಿಯಲಿದೆ. ರೈಲ್ವೇ ಯಾವ ಕಾರಣಕ್ಕೆ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಅವಧಿಯನ್ನು ಕಡಿತ ಮಾಡಿದೆ ಎನ್ನುವನ್ನು ತಿಳಿಸಿಲ್ಲ.

    ಅಧಿಕೃತ ಟಿಕೆಟ್ ಬುಕಿಂಗ್ ಪಾಲುದಾರ IRCTC ಜೊತೆಗೆ, ಮೇಕ್‌ಮೈಟ್ರಿಪ್, ಪೇಟಿಎಂ ಮತ್ತು ರೈಲ್ ಯಾತ್ರಿ ಮುಂತಾದ ಥರ್ಡ್-ಪಾರ್ಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.

    ರೈಲ್ವೇ ಟಿಕೆಟ್‌ ಕಡಿತ ಮಾಡಿದ ನಿರ್ಧಾರ ಪ್ರಕಟಗೊಂಡ ಬೆನ್ನಲ್ಲೇ IRCTC ಷೇರು ಮೌಲ್ಯ ಇಂದು 21.70 ರೂ.(2.4%) ಇಳಿಕೆಯಾಗಿ 870.90 ರೂ. ವ್ಯವಹಾರ ಮುಗಿಸಿತು.

  • ತಾಂತ್ರಿಕ ಸಮಸ್ಯೆ; IRCTC ಯಲ್ಲಿ ಟಿಕೆಟ್ ಬುಕ್ಕಿಂಗ್ ಸ್ಥಗಿತ

    ತಾಂತ್ರಿಕ ಸಮಸ್ಯೆ; IRCTC ಯಲ್ಲಿ ಟಿಕೆಟ್ ಬುಕ್ಕಿಂಗ್ ಸ್ಥಗಿತ

    ನವದೆಹಲಿ: ತಾಂತ್ರಿಕ ಕಾರಣಗಳಿಂದ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಐಆರ್‌ಸಿಟಿಸಿ (IRCTC) ಹೇಳಿದೆ. ಸಮಸ್ಯೆ ಬಗೆಹರಿಯುವವರೆಗೂ ಮೇಕ್‌ಮೈಟ್ರಿಪ್ ಮತ್ತು ಅಮೆಜಾನ್‌ನಂತಹ ಆನ್‌ಲೈನ್ ಟ್ರಾವೆಲ್ ಏಜೆನ್ಸಿಗಳ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಅದು ಹೇಳಿದೆ.

    ನಮ್ಮ ತಾಂತ್ರಿಕ ತಂಡ ಸಮಸ್ಯೆಯನ್ನು ಇತ್ಯರ್ಥಪಡಿಸುವ ಕೆಲಸ ಆರಂಭಿಸಿದ್ದು, ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸಲಾಗವುದು ಎಂದು ಟ್ವೀಟ್ ಮಾಡಿ ಐಆರ್‌ಸಿಟಿಸಿ ತಿಳಿಸಿದೆ. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ಚಿಂತನೆ

    IRCTC ವೆಬ್ ಪೋರ್ಟಲ್ ಮತ್ತು ಅಪ್ಲಿಕೇಶನ್‌ನಲ್ಲಿನ ಸೇವೆಗಳು ಬೆಳಿಗ್ಗೆ 8 ರಿಂದ ಸ್ಥಗಿತಗೊಂಡಿವೆ. ಟಿಕೆಟ್ ಬುಕ್ಕಿಂಗ್ ಸ್ವೀಕಾರವಾಗದಿದ್ದರೂ, ಹಲವಾರು ಜನರು ತಮ್ಮ ಹಣವನ್ನು ಬೆಳಿಗ್ಗೆ 10 ಗಂಟೆಯವರೆಗೆ ಕಳೆದುಕೊಂಡೊದ್ದಾರೆ ಎಂದು ದೂರಿದರು.

    ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸಿದ ಜನರಿಗೆ ಭಾರತೀಯ ರೈಲ್ವೆ ಹಣವನ್ನು ಹಿಂದಿರುಗಿಸುತ್ತದೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದೆ. ಸತತ ಮೂರು ಗಂಟೆಗಳ ನಂತರ ಸಮಸ್ಯೆಯನ್ನು ಬಗೆಹರಿಸಲಾಯಿತು. ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಸಿಕ್ಕಿ ಬೀಳುತ್ತಲೇ 5,000 ರೂ. ಲಂಚವನ್ನು ಜಗಿದು ನುಂಗಿದ ಕಂದಾಯ ಅಧಿಕಾರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೈಲ್ವೆ, ವಿಮಾನಗಳ ಟಿಕೆಟ್ ಬುಕ್ಕಿಂಗ್ ಮಾದರಿಯಲ್ಲೇ ಸ್ಥಳೀಯ ನಗರ ಸಾರಿಗೆಗೂ ಇ-ಟಿಕೆಟ್

    ರೈಲ್ವೆ, ವಿಮಾನಗಳ ಟಿಕೆಟ್ ಬುಕ್ಕಿಂಗ್ ಮಾದರಿಯಲ್ಲೇ ಸ್ಥಳೀಯ ನಗರ ಸಾರಿಗೆಗೂ ಇ-ಟಿಕೆಟ್

    ನವದೆಹಲಿ: ದೆಹಲಿಯ ಸ್ಥಳೀಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಪ್ರಯಾಣಿಕರು, ಸಿಬ್ಬಂದಿಯ ನಡುವೆ ದೈಹಿಕ ಸಂಪರ್ಕ ತಪ್ಪಿಸುವ ಹಿನ್ನೆಲೆಯಲ್ಲಿ ಇ-ಟಿಕೆಟ್ ವ್ಯವಸ್ಥೆ ಮಾಡಲು ತಿರ್ಮಾನಿಸಿದೆ. ಆರಂಭದಲ್ಲಿ ಇದು ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಜಾರಿ ಬರಲಿದ್ದು ಬಳಿಕ ಪೂರ್ಣ ದೆಹಲಿಗೆ ವಿಸ್ತರಿಸುವ ಚಿಂತನೆ ಇದೆ.

    ರೈಲ್ವೆ ಮತ್ತು ವಿಮಾನಗಳ ಟಿಕೆಟ್ ಬುಕ್ಕಿಂಗ್ ಮಾದರಿಯಲ್ಲೇ ಸ್ಥಳೀಯ ಬಸ್‍ಗಳ ಟಿಕೆಟ್ ಬುಕ್ಕಿಂಗ್ ಮಾಡಲು ತಂತ್ರಜ್ಞಾನ ರೂಪಿಸಿದ್ದು, ಇದರ ಹೊಣೆಯನ್ನು ರಾಜ್ಯ ಸರ್ಕಾರ ಇಂದ್ರಪ್ರಸ್ಥ ಇನ್‍ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಅಂಡ್ ಟೆಕ್ನಾಲಜಿ (ಐಐಐಟಿ)ಗೆ ವಹಿಸಿದೆ.

    ಡಿಟಿಸಿ ಬಸ್‍ಗಳಲ್ಲಿ ಟಿಕೆಟ್ ಬಳಕೆಯಿಂದ ದೈಹಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಟ್ಟಂತೆ ಮತ್ತು ಪೇಪರ್ ಮೂಲಕವೂ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಐಐಐಟಿಯ ಸಹಾಯಕ ಪ್ರಾಧ್ಯಾಪಕ ಡಾ.ಪ್ರವೀಶ್ ಬಿಯಾನಿ ಹೇಳಿದ್ದಾರೆ.

    ಈ ಹಿನ್ನೆಲೆ ಇ-ಟಿಕೆಟ್ ವ್ಯವಸ್ಥೆ ಮಾಡಿದ್ದು ಪ್ರಯಾಣ ವಿವರಗಳನ್ನು ಮತ್ತು ಪ್ರಾಥಮಿಕ ವೈಯಕ್ತಿಕ ಮಾಹಿತಿ ಭರ್ತಿ ಮಾಡಿ ಭೀಮ್ ಯುಪಿಐ, ಪೇಟಿಎಂ, ಗೂಗಲ್-ಪೇ ಮುಂತಾದ ಡಿಜಿಟಲ್ ಪಾವತಿಯ ಮೂಲಕ ಮೊತ್ತವನ್ನು ಪಾವತಿಸಬೇಕು. ಇದು ಸಂಪೂರ್ಣ ಸಂಪರ್ಕವಿಲ್ಲದ ಪ್ರಕ್ರಿಯೆಯಾಗಿದ್ದು, ಇದರಿಂದ ಸೋಂಕು ಹರಡುವ ವೇಗಕ್ಕೆ ಕಡಿವಾಣ ಹಾಕಬಹುದು ಎನ್ನುವುದು ತಜ್ಞರ ಅಭಿಪ್ರಾಯ.

    ಈಗಾಗಲೇ ಕಂಟೈನ್ಮೆಂಟ್ ಝೋನ್ ನಲ್ಲಿ ಸಂಚರಿಸುವ ಕೆಲವು ಬಸ್‍ಗಳಲ್ಲಿ ಪ್ರಯೋಗ ನಡೆಸಿದ್ದು ಮುಂದಿನ ದಿನಗಳಲ್ಲಿ ಹಾಟಸ್ಫಾಟ್‍ಗಳಲ್ಲಿ ವಿಸ್ತರಣೆಯಾಗಲಿದೆ. ಬಳಿಕ ಪೂರ್ಣ ದೆಹಲಿಗೆ ಈ ತಂತ್ರಜ್ಞಾನ ಪರಿಚಯಿಸಲು ತಿರ್ಮಾನಿಸಿದೆ.

  • ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ – ಜೂನ್ 1ರಿಂದ 200 ನಾನ್ ಎಸಿ ರೈಲು ಸಂಚಾರ

    ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ – ಜೂನ್ 1ರಿಂದ 200 ನಾನ್ ಎಸಿ ರೈಲು ಸಂಚಾರ

    – 1.7 ಲಕ್ಷ ಕೌಂಟರ್‌ಗಳಲ್ಲಿ ಟಿಕೆಟ್ ಬುಕ್ಕಿಂಗ್ ಪುನಾರಂಭ

    ನವದೆಹಲಿ: ಶೀಘ್ರದಲ್ಲಿ ಮತ್ತಷ್ಟು ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಇನ್ನೇರಡು ಅಥವಾ ಮೂರು ದಿನಗಳಲ್ಲಿ ದೇಶದ 1.7 ಲಕ್ಷ ಕೌಂಟರ್‌ಗಳಲ್ಲಿ ಟಿಕೆಟ್ ಬುಕ್ಕಿಂಗ್ ಪುನಾರಂಭಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಪಿಯೂಷ್ ಗೋಯಲ್ ಅವರು, ಶ್ರಮಿಕ್-ರಾಜಧಾನಿ ಹೊರತಾಗಿ 200 ಎಸಿ ರಹಿತ ರೈಲುಗಳು ಜೂನ್ ಒಂದರಿಂದ ಸಂಚಾರ ಆರಂಭಿಸಲಿದೆ. ದೇಶವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಮತ್ತಷ್ಟು ರೈಲುಗಳ ಸಂಚಾರ ಆರಂಭಿಸುವುದಾಗಿ ಹೇಳಿದರು.

    ಜೂನ್ ಒಂದರಿಂದ 200 ನಾನ್ ಎಸಿ ರೈಲು ಸಂಚಾರ ಮಾಡಲಿದ್ದು, ಮೊದಲ ಹಂತದಲ್ಲಿ 73 ರೈಲುಗಳು ಸಂಚಾರ ಆರಂಭಿಸಲಿದೆ. ಬುಕ್ಕಿಂಗ್ ಆರಂಭವಾದ ಎರಡು ಗಂಟೆಯಲ್ಲಿ 1,49,025 ಟಿಕೆಟ್‍ಗಳು ಬುಕ್ ಆಗಿದೆ. ಬುಕ್ಕಿಂಗ್ ಹೆಚ್ಚಿಸಲು ರೈಲು ನಿಲ್ದಾಣ ಕೌಂಟರ್‌ಗಳಲ್ಲಿ ಬುಕ್ಕಿಂಗ್ ಆರಂಭಿಸಲಿದ್ದು, ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಪಿಯೂಷ್ ಗೋಯಲ್ ತಿಳಿಸಿದರು.

    ಮೇ 20 ವರೆಗೂ 279 ಶ್ರಮಿಕ್ ರೈಲುಗಳು ದೇಶಾದ್ಯಂತ ಸಂಚರಿಸಿದ್ದು, ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಸೇರಿದಂತೆ ಹಲವು ಜನರನ್ನು ಊರು ತಲುಪಿಸುವ ಕಾರ್ಯ ರೈಲ್ವೆ ಇಲಾಖೆ ಮಾಡಿದೆ ಎಂದರು.

  • ರೈಲ್ವೇ ಪ್ರಯಾಣಿಕರಲ್ಲಿ ‘ಆರೋಗ್ಯ ಸೇತು’ ಇರಲೇಬೇಕು

    ರೈಲ್ವೇ ಪ್ರಯಾಣಿಕರಲ್ಲಿ ‘ಆರೋಗ್ಯ ಸೇತು’ ಇರಲೇಬೇಕು

    ನವದೆಹಲಿ: ಕೋವಿಡ್ 19 ಸಮಯದಲ್ಲಿ ವಿಶೇಷ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

    ಪ್ರಯಾಣಿಕರು ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ರೈಲ್ವೇ ಸಚಿವಾಲಯ ಟ್ವೀಟ್ ಮಾಡಿದೆ. ಈಗಾಗಲೇ ಒಟ್ಟು 54 ಸಾವಿರ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದಾರೆ.

    ಆರೋಗ್ಯ ಸೇತು ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಓಎಸ್ ಸ್ಟೋರ್ ನಲ್ಲಿ ಲಭ್ಯವಿದೆ. ಬ್ಲೂ ಟೂತ್ ಮತ್ತು ಜಿಪಿಎಸ್ ಬಳಸಿಕೊಂಡು ಈ ಆ್ಯಪ್ ಕೋವಿಡ್ ವಲಯವಾರು ಪ್ರದೇಶಗಳ ಮಾಹಿತಿಯನ್ನು ಜನರ ಕೈಗೆ ನೀಡುತ್ತದೆ.

    ಪ್ರಯಾಣಿಕರ ರೈಲುಗಳನ್ನು ಇಂದಿನಿಂದ ಹಂತ ಹಂತವಾಗಿ ಪ್ರಾರಂಭಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಆರಂಭದಲ್ಲಿ 15 ಜೋಡಿ ರೈಲುಗಳು ಓಡಾಡಲಿವೆ. ಈ ವಿಶೇಷ ರೈಲುಗಳು ನವದೆಹಲಿ ನಿಲ್ದಾಣದಿಂದ ಬೆಂಗಳೂರು, ದಿಬ್ರುಗರ್, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ಪುರ್, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಗೆ ಸಂಪರ್ಕ ಕಲ್ಪಿಸಲಿವೆ.

    ವಿಶೇಷ ರೈಲುಗಳ ಟಿಕೆಟ್ ಬುಕಿಂಗ್ ಮೇ 11ರಂದು ಸಂಜೆ 4 ಗಂಟೆಗೆ ಪ್ರಾರಂಭವಾಗಿದೆ. ಐಆರ್‌ಸಿಟಿಸಿ ವೆಬ್‍ಸೈಟ್‍ನಲ್ಲಿ ಮಾತ್ರ ಟಿಕೆಟ್ ಲಭ್ಯವಿರುತ್ತದೆ. ರೈಲ್ವೆ ನಿಲ್ದಾಣಗಳ ಕೌಂಟರ್ ಗಳಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

    ಪ್ರಯಾಣಿಕರು ಮಾಸ್ಕ್ ಹಾಕಿಕೊಳ್ಳುವುದು, ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡುವುದು ಕಡ್ಡಾಯವಾಗಿದೆ. ಕೊರೊನಾ ಸೋಂಕಿನ ಲಕ್ಷಣವಿಲ್ಲದ ಪ್ರಯಾಣಿಕರಿಗೆ ಮಾತ್ರ ರೈಲು ಹತ್ತಲು ಅವಕಾಶವಿರುತ್ತದೆ. ರೈಲು ವೇಳಾಪಟ್ಟಿ ಸೇರಿದಂತೆ ಹೆಚ್ಚಿನ ವಿವರಗಳನ್ನು ಸರಿಯಾದ ಸಮಯದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದೆ.

    ವಿದೇಶದಿಂದ ರಾಜ್ಯಗಳಿಗೆ ಬರುತ್ತಿರುವ ವ್ಯಕ್ತಿಗಳಿಗೂ ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯಗೊಳಿಸಲಾಗಿದೆ. ಭಾರತದ ಸಿಮ್ ಇಲ್ಲದೇ ಇದ್ದಲ್ಲಿ ಅವರಿಗೆ ಬಿಎಸ್‍ಎನ್‍ಎಲ್ ಸಿಮ್ ನೀಡಿ  ಅಪ್ಲಿಕೇಶನ್ ಇನ್ ಸ್ಟಾಲ್ ಮಾಡುವಂತೆ ಸೂಚಿಸಲಾಗುತ್ತದೆ.

  • ರೈಲ್ವೆ ಟಿಕೆಟ್ ಬುಕ್ಕಿಂಗ್ ಶುರು

    ರೈಲ್ವೆ ಟಿಕೆಟ್ ಬುಕ್ಕಿಂಗ್ ಶುರು

    ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಮಹತ್ವ ಆದೇಶ ಹೊರಡಿಸಿದ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಸೋಮವಾರದಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ.

    ಪ್ರಯಾಣಿಕರ ರೈಲುಗಳನ್ನು ಮೇ 12ರಿಂದ ಹಂತ ಹಂತವಾಗಿ ಪ್ರಾರಂಭಿಸಲು ಭಾರತೀಯ ರೈಲ್ವೆ ಯೋಜಿಸಿದೆ. ಆರಂಭದಲ್ಲಿ 15 ಜೋಡಿ ರೈಲುಗಳು ಓಡಾಡಲಿವೆ. ಈ ವಿಶೇಷ ರೈಲುಗಳು ನವದೆಹಲಿ ನಿಲ್ದಾಣದಿಂದ ದಿಬ್ರುಗರ್, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ಪುರ್, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮುಮ ರಾವಿಗೆ ಸಂಪರ್ಕ ಕಲ್ಪಿಸಲಿವೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

    ವಿಶೇಷ ರೈಲುಗಳ ಟಿಕೆಟ್ ಬುಕಿಂಗ್ ಮೇ 11ರಂದು ಸಂಜೆ 4 ಗಂಟೆಗೆ ಪ್ರಾರಂಭವಾಗಲಿದ್ದು, ಐಆರ್‌ಸಿಟಿಸಿ ವೆಬ್‍ಸೈಟ್‍ನಲ್ಲಿ ಮಾತ್ರ ಟಿಕೆಟ್ ಲಭ್ಯವಿರುತ್ತದೆ. ರೈಲ್ವೆ ನಿಲ್ದಾಣಗಳ ಕೌಂಟರ್ ಗಳಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

    ಪ್ರಯಾಣಿಕರು ಮಾಸ್ಕ್ ಹಾಕಿಕೊಳ್ಳುವುದು, ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡುವುದು ಕಡ್ಡಾಯವಾಗಿದೆ. ಕೊರೊನಾ ಸೋಂಕಿನ ಲಕ್ಷಣವಿಲ್ಲದ ಪ್ರಯಾಣಿಕರಿಗೆ ಮಾತ್ರ ರೈಲು ಹತ್ತಲು ಅವಕಾಶವಿರುತ್ತದೆ. ರೈಲು ವೇಳಾಪಟ್ಟಿ ಸೇರಿದಂತೆ ಹೆಚ್ಚಿನ ವಿವರಗಳನ್ನು ಸರಿಯಾದ ಸಮಯದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದೆ.

  • ಏ.30ರವರೆಗೂ ರೈಲ್ವೆ ಟಿಕೆಟ್ ಬುಕ್ಕಿಂಗ್ ಇಲ್ಲ

    ಏ.30ರವರೆಗೂ ರೈಲ್ವೆ ಟಿಕೆಟ್ ಬುಕ್ಕಿಂಗ್ ಇಲ್ಲ

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಸ್ತಬ್ಧಗೊಂಡಿದ್ದ ರೈಲು ಸೇವೆ ಸದ್ಯಕ್ಕೆ ಆರಂಭಗೊಳ್ಳುವುದಿಲ್ಲ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಐಆರ್‌ಸಿಟಿಸಿ, ರೈಲುಗಳ ಬುಕಿಂಗ್ ಅನ್ನು ಏಪ್ರಿಲ್ 30 ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

    ಈ ಮಧ್ಯೆ ಐಆರ್‌ಸಿಟಿಸಿ ಸದ್ಯ ಮೂರು ರೈಲುಗಳನ್ನು ಓಡಿಸಲಿದೆ. 2 ತೇಜಸ್ ರೈಲುಗಳು ಮತ್ತು 1 ಕಾಶಿ ಮಹಕಲ್ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ.

    ತೇಜಸ್ ಎಕ್ಸ್‌ಪ್ರೆಸ್‌ ರೈಲು ಅಹಮದಾಬಾದ್ – ಮುಂಬೈ ಮಧ್ಯ ಸಂಚರಿಸಿದರೆ, ಕಾಶಿ ಮಹಕಲ್ ಎಕ್ಸ್‌ಪ್ರೆಸ್‌ ದೆಹಲಿ-ಲಕ್ನೋ ಮಧ್ಯ ಸಂಚರಿಸಲಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡಿರುವ ಪ್ರಯಾಣಿಕರ ಹಣವನ್ನು ವಾಪಸ್ ಬ್ಯಾಂಕ್ ಖಾತೆಗೆ ಮರು ಪಾವತಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

    ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಭಾರತೀಯ ರೈಲ್ವೆಯ 2,500 ಬೋಗಿಗಳಲ್ಲಿ 40,000 ಪ್ರತ್ಯೇಕ ಹಾಸಿಗೆಗಳನ್ನು ಸಿದ್ಧಪಡಿಸಿದೆ. ರೈಲ್ವೆ ಇಲಾಖೆ ಪ್ರತಿದಿನ 375 ಪ್ರತ್ಯೇಕ ಹಾಸಿಗೆಗಳನ್ನು ತಯಾರಿಸುತ್ತಿದೆ ಮತ್ತು ಇದು ದೇಶಾದ್ಯಂತ 133 ಸ್ಥಳಗಳಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದರು.