Tag: ಟಿಕೆಟ್‌ ದರ ಏರಿಕೆ

  • ಹಬ್ಬಕ್ಕೆ ಸಾಲು ಸಾಲು ರಜೆ – ಖಾಸಗಿ ಬಸ್ ಪ್ರಯಾಣ ದರ ಏರಿಕೆ, ನಿಮ್ಮೂರಿಗೆ ಎಷ್ಟು ನೋಡಿ!

    ಹಬ್ಬಕ್ಕೆ ಸಾಲು ಸಾಲು ರಜೆ – ಖಾಸಗಿ ಬಸ್ ಪ್ರಯಾಣ ದರ ಏರಿಕೆ, ನಿಮ್ಮೂರಿಗೆ ಎಷ್ಟು ನೋಡಿ!

    ಬೆಂಗಳೂರು: ದೀಪಗಳ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ಕುಟುಂಬದವರೊಂದಿಗೆ ಹಬ್ಬ ಆಚರಿಸಲು ಜನ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಇದೇ ಶುಕ್ರವಾರವೇ ಹೊರಡುತ್ತಿದ್ದಾರೆ. ಆದ್ರೇ ಇದನ್ನೇ ಬಂಡವಾಳವಾಗಿಸಿಕೊಂಡ ಪ್ರೈವೇಟ್‌ ಬಸ್‌ಗಳು ಪ್ರಯಾಣಿಕರಿಂದ ಸುಲಿಗೆಗಿಳಿದಿವೆ.

    ಅಜ್ಞಾನವನ್ನು ಕಳೆದು ಬದುಕಿಗೆ ಬೆಳಕನ್ನು ಕೊಡೋ ಬೆಳಕಿನ ಹಬ್ಬ ದೀಪಾವಳಿಗೆ ಕೌಂಟ್‌ಡೌನ್ ಶುರು ಆಗಿದೆ. ಬೆಂಗಳೂರಿನ ಜನ ತಮ್ಮ ಕುಟುಂಬದವರೊಂದಿಗೆ ಹಬ್ಬ ಆಚರಿಸಲು ಊರುಗಳಿಗೆ ಹೊರಡಲು ಪ್ಲಾನ್‌ ಮಾಡಿಕೊಂಡಿದ್ದಾರೆ. ಒಂದು ವಾರಗಳ ಕಾಲ ರಜೆಯ ಯೋಜನೆ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಇದೇ ಶುಕ್ರವಾರ 17ರಂದು ರಾತ್ರಿಯೇ ಹೊರಡೋ ಪ್ಲಾನ್‌ ಮಾಡಿದ್ದಾರೆ. 18 ಶನಿವಾರ, 19 ಭಾನುವಾರ, 20 ನರಕ ಚತುರ್ದಶಿ, 21 ಅಮಾವ್ಯಾಸೆ, 22 ದೀಪಾವಳಿಯಿದೆ. ಹೀಗಾಗಿ ಸಾಲು ಸಾಲು ರಜೆ ಬಂದಿವೆ. ಇದನ್ನೂ ಓದಿ: ದೀಪಾವಳಿಗೆ ಬೆಂಗಳೂರಿನಿಂದ ಹೆಚ್ಚುವರಿ KSRTC ಬಸ್ – ನಿಮ್ಮ ಊರಿಗೂ ಇದ್ಯಾ ಪರಿಶೀಲಿಸಿ

    ಪ್ರತಿ ಸಲ ಯಾವುದೇ ಹಬ್ಬ ಬಂದ್ರೂ ಖಾಸಗಿ ಬಸ್‌ಗಳ ಟಿಕೆಟ್ ದರ ಹೆಚ್ಚಿಸಿ, ಪ್ರಯಾಣಿಕರ ಜೇಬಿಗೆ ಬರೆ ಹಾಕೋದು ಮಾಮೂಲಿಯಾಗಿದೆ. ಅದ್ರಂತೆ ಇದೇ ಶುಕ್ರವಾರ ಬೆಂಗಳೂರಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ತೆರಳೋ ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ದುಪ್ಪಟು ಮಾಡಿವೆ. ಇನ್ನೂ ಕೆಲ ಬಸ್‌ಗಳು 50% ಟಿಕೆಟ್ ದರ ಏರಿಕೆ ಮಾಡಿದ್ದು, ಈ ಸೀಜನ್ 30%ವರೆಗೂ ಟಿಕೆಟ್ ದರ ಏರಿಕೆ ಮಾಡಿದ್ದೇವೆ ಅಂತಾರೆ ಖಾಸಗಿ ಬಸ್‌ಗಳ ಮಾಲೀಕರು.

    ಖಾಸಗಿ ಬಸ್ ದುಪ್ಪಟ್ಟು ದುಬಾರಿ
    ಬೆಂಗಳೂರು-ಹುಬ್ಬಳ್ಳಿ
    ಹಳೆ ದರ: 900-1,000 ರೂ.
    ಹೊಸ ದರ: 2,500-3,000 ರೂ.

    ಬೆಂಗಳೂರು-ಬೆಳಗಾವಿ
    ಹಳೆ ದರ: 1,500-1,600ರೂ.
    ಹೊಸ ದರ: 2,600-4,000ರೂ.

    ಬೆಂಗಳೂರು-ಗದಗ
    ಹಳೆ ದರ: 1,100-1,200ರೂ.
    ಹೊಸ ದರ: 1,800-2,000ರೂ.

    ಬೆಂಗಳೂರು-ಮಂಗಳೂರು
    ಹಳೆ ದರ: 1,300-1,400ರೂ.
    ಹೊಸ ದರ: 2,300-2,700ರೂ.

    ಬೆಂಗಳೂರು-ಉಡುಪಿ
    ಹಳೆ ದರ: 1,500-1,700ರೂ.
    ಹೊಸ ದರ: 2,000-2,300ರೂ.

    ಬೆಂಗಳೂರು-ಬೀದರ್
    ಹಳೆ ದರ: 1,700-1,800ರೂ.
    ಹೊಸ ದರ:- 2,500-3,500ರೂ.

    ಬೆಂಗಳೂರು-ರಾಯಚೂರು
    ಹಳೆ ದರ: 1,000-1,200ರೂ.
    ಹೊಸ ದರ: 1,900-2,700ರೂ

    ಬೆಂಗಳೂರು-ಕಲಬುರಗಿ
    ಹಳೆ ದರ: 1,700-1,800ರೂ.
    ಹೊಸ ದರ: 2,500-2,600ರೂ.

    ಇನ್ನೂ ಖಾಸಗಿ ಬಸ್‌ಗಳ ಟಿಕೆಟ್ ದರ ಏರಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ಕೊಟ್ಟಿದ್ದಾರೆ. ಈ ಟಿಕೆಟ್ ದರ ಏರಿಕೆ ಸರಿಯಲ್ಲ. ಸಾರಿಗೆ ಇಲಾಖೆಯಿಂದ ಟಿಕೆಟ್ ದರ ಏರಿಕೆ ಮಾಡಿದ ಬಸ್‌ಗಳ ಕಾರ್ಯಾಚರಣೆ ಮಾಡ್ತೇವೆ. ಜನರಿಗೆ ಸಹಾಯವಾಗಲಿ ಅಂತಾನೇ 2,500 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.

    ಹಬ್ಬಕ್ಕೆ ಊರಿಗೆ ಹೋಗೋದೇ ಕಷ್ಟವಾಗಿದೆ. ತಿಂಗಳೆಲ್ಲಾ ಕಷ್ಟಪಟ್ಟು ದುಡಿದ ಹಣವನ್ನು ಬಸ್‌ಗಳಿಗೆ ಹಾಕೋದಾ? ಎಂದು ಪ್ರಯಾಣಿಕರು ಬೇಸರ ಹೊರಹಾಕ್ತಿದ್ದಾರೆ. ಒಟ್ನಲ್ಲಿ ಪ್ರತಿ ಸಲ ಹಬ್ಬ ಬಂದಾಗಲೂ ಖಾಸಗಿ ಬಸ್‌ಗಳ ಟಿಕೆಟ್ ದರ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿರೋದಂತೂ ಸತ್ಯ.

  • ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರ ಹೆಚ್ಚಳ; ರಾಜ್ಯ ಸರ್ಕಾರದಿಂದ ‘ಮಹಿಷಾಸುರ ಟ್ಯಾಕ್ಸ್’: ಜೋಶಿ ಕಿಡಿ

    ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರ ಹೆಚ್ಚಳ; ರಾಜ್ಯ ಸರ್ಕಾರದಿಂದ ‘ಮಹಿಷಾಸುರ ಟ್ಯಾಕ್ಸ್’: ಜೋಶಿ ಕಿಡಿ

    ನವದೆಹಲಿ: ಕರ್ನಾಟಕ ಸರ್ಕಾರ (Congress) ದಸರಾ ಹಬ್ಬದಲ್ಲಿ ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಪ್ರಯಾಣ ದರ ಹೆಚ್ಚಿಸುವ ಮೂಲಕ ‘ಮಹಿಷಾಸುರ ಟ್ಯಾಕ್ಸ್’ (Mahishasura Tax) ಹಾಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿ ಕಾರಿದ್ದಾರೆ.

    ‘ಬೆಂಗಳೂರು-ಮೈಸೂರು’ ಬಸ್ ಪ್ರಯಾಣ ದರ ಹೆಚ್ಚಿಸಿ ಜನರ ಪಾಲಿಗೆ ‘ಮಹಿಷಾಸುರ’ ಸರ್ಕಾರವಾಗಿದೆ. ಈಗಾಗಲೇ 48ಕ್ಕೂ ಹೆಚ್ಚು ವಸ್ತುಗಳ ಬೆಲೆ ಹೆಚ್ಚಿಸಿದೆ. ಇದೀಗ ದಸರಾ ಹಬ್ಬಕ್ಕೂ ಮೊದಲೇ ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರವನ್ನೂ ಬರೋಬ್ಬರಿ 20-30 ರೂ. ಹೆಚ್ಚಿಸುವ ಮೂಲಕ ಜನಸಾಮಾನ್ಯರನ್ನು ಕಿತ್ತು ತಿನ್ನುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬೀದರ್-ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು

    ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ರೀತಿ ಹಗಲು ದರೋಡೆಗೆ ಇಳಿದಿದೆ. ದುರಾಡಳಿತದ ಪರಮಾವಧಿ ಎಲ್ಲೆ ಮೀರಿದೆ. ಭರವಸೆಗಳನ್ನು ನಂಬಿ ಅಧಿಕಾರ ಕೊಟ್ಟ ಶ್ರೀಸಾಮಾನ್ಯರು ಇದೀಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದಿದ್ದಾರೆ ಜೋಶಿ. ಇದನ್ನೂ ಓದಿ: ಪೊಲೀಸ್ ನೇಮಕಾತಿಗಳಿಗೆ ಪ್ರತ್ಯೇಕ ಶಾಶ್ವತ ವಯೋಮಿತಿ ಸಡಿಲಿಕೆ ಮಾಡ್ತೇವೆ – ಪರಮೇಶ್ವರ್

    ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ತಗ್ಗಿಸಿ ಪ್ರತಿಯೊಂದು ವಸ್ತುಗಳ ಬೆಲೆ ಇಳಿಕೆಗೆ ಕ್ರಮ ಕೈಗೊಂಡಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ಒಂದಿಲ್ಲೊಂದು ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರನ್ನು ಗೋಳು ಹೊಯ್ದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೀಕ್‌ ಅವರ್‌ನಲ್ಲಿ ಬೆಂಗಳೂರಿನಲ್ಲಿ ಒಬ್ಬರೇ ಕಾರ್‌ನಲ್ಲಿ ಸಂಚರಿಸಿದ್ರೆ ಟ್ಯಾಕ್ಸ್‌?

    ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಸಾಮಾನ್ಯರ ಏಳಿಗೆ ಬಯಸಿ ಜಿಎಸ್‌ಟಿ ಇಳಿಸಿದರು. ತರುವಾಯ ಪ್ರತಿಯೊಂದು ವಸ್ತುಗಳನ್ನೂ ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಆದರೆ, ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ಜನರನ್ನು ಬೆಲೆ ಏರಿಕೆಯಿಂದ ಬೀದಿಗೆ ತಳ್ಳುತ್ತಿದೆ ಎಂದು ಖಂಡಿಸಿದ್ದಾರೆ. ಇದನ್ನೂ ಓದಿ: ತುಮಕೂರು ದಸರಾ – ಇಂದಿನಿಂದ ಮೂರು ದಿನ ವಾಹನ ಸಂಚಾರ ಬದಲಾವಣೆ

  • ಪ್ರವಾಸಿಗರಿಗೆ ದರ ಏರಿಕೆ ಶಾಕ್‌ – ರಂಗನತಿಟ್ಟು ಪಕ್ಷಿಧಾಮದಲ್ಲಿ ಟಿಕೆಟ್‌ ದರ ಹೆಚ್ಚಳ

    ಪ್ರವಾಸಿಗರಿಗೆ ದರ ಏರಿಕೆ ಶಾಕ್‌ – ರಂಗನತಿಟ್ಟು ಪಕ್ಷಿಧಾಮದಲ್ಲಿ ಟಿಕೆಟ್‌ ದರ ಹೆಚ್ಚಳ

    – ವಿದೇಶಿಗರ ಟಿಕೆಟ್‌ ದರ 600 ರೂ.ಗೆ ಏರಿಕೆ

    ಮಂಡ್ಯ: ವಿಶ್ವವಿಖ್ಯಾತ ಕೃಷ್ಣರಾಜ ಸಾಗರ (KRS) ಬೃಂದಾವನದ ದರ ಹೆಚ್ಚಳ ಬೆನ್ನಲ್ಲೇ, ಪಕ್ಷಿ ಕಾಶಿ ಎಂದೇ ಹೆಸರುವಾಸಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ (Ranganathittu Bird Sanctuary) ಪ್ರವೇಶ ದರ ಹಾಗೂ ಬೋಟಿಂಗ್ ದರ ಹೆಚ್ಚಳ ಮಾಡಿ ಪ್ರವಾಸಿಗರಿಗೆ ಮತ್ತೊಂದು ಬರೆ ಎಳೆದಿದೆ.

    ರಂಗನತಿಟ್ಟು ಪಕ್ಷಿಧಾಮವನ್ನ ಮೈಸೂರು ವನ್ಯಜೀವಿ ವಿಭಾಗ (Mysuru Wiledlife Department) ನಿರ್ವಹಣೆ ಮಾಡುತ್ತಿದ್ದು, ಆಗಸ್ಟ್ 1ರಿಂದ ದರ ಹೆಚ್ಚಿಸಿ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಿದೆ. ಕಾವೇರಿ ಜಲಾನಯದ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಿದ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಪಕ್ಷಿಧಾಮಕ್ಕೆ ಪ್ರವೇಶ ಹಾಗೂ ಬೋಟಿಂಗ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮಳೆ (Rain) ಪ್ರಮಾಣ ಕಡಿಮೆಯಾಗಿದ್ದು, ನಿರ್ಬಂಧ ತೆರವುಗೊಳಿಸಲಾಗಿದೆ. ಇದನ್ನೂ ಓದಿ: RCB ವಿಜಯೋತ್ಸವದ ವೇಳೆ ಕಾಲ್ತುಳಿತ ದುರಂತ – ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಆರ್‌.ಅಶೋಕ್‌ ಆಗ್ರಹ

    ಕಾವೇರಿ ನದಿಯಿಂದ ಸುತ್ತುವರಿಯಲ್ಪಟ್ಟಿರುವ ಶ್ರೀರಂಗಪಟ್ಟಣ (Srirangapatna) ದ್ವೀಪ ನಗರ ಎಂದೇ ಹೆಸರಾಗಿದೆ. ಪ್ರವಾಸಿಗರ ನೆಚ್ಚಿನ ತಾಣ ವಿಶ್ವವಿಖ್ಯಾತ ಕೃಷ್ಣರಾಜ ಸಾಗರ ಸೇರಿದಂತೆ ಚಾರಿತ್ರಿಕ ಮಹತ್ವ ಹೊಂದಿರುವ ಪ್ರಸಿದ್ಧ ಸ್ಥಳಗಳು ಇಲ್ಲಿವೆ. ಆದ್ದರಿಂದ ಇಲ್ಲಿಗೆ ನೆರೆ ರಾಜ್ಯಗಳಿಂದಷ್ಟೇ ಅಲ್ಲದೇ ನಿತ್ಯ ದೇಶ ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದನ್ನೂ ಓದಿ: ಆ.17ಕ್ಕೆ ಬಿಜೆಪಿಯಿಂದ ಧರ್ಮಸ್ಥಳ ಚಲೋ

    ಮೈಸೂರು ದಸರಾ ಸಮೀಪಿಸುತ್ತಿದ್ದಂತೆ ಪಕ್ಷಿಧಾಮದ ಪ್ರವೇಶ ದರ ಹಾಗೂ ಬೋಟಿಂಗ್ ದರ ಹೆಚ್ಚಳ ಮಾಡಿರುವುದು ಪ್ರವಾಸಿಗರನ್ನ ಕೆರಳಿಸಿದೆ. ಮೈಸೂರು ದಸರಾಕ್ಕೆ ಬರುವ ಬಹುತೇಕರು ನೆಚ್ಚಿನ ಪ್ರವಾಸಿ ಸ್ಥಳಗಳಾದ ಶ್ರೀರಂಗಪಟ್ಟಣ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಕಟುಂಬದ ಜತೆ ಒಂದಷ್ಟು ಸಮಯ ಕಳೆಯಲು ಬರುವವರಿಗೆ ದರ ಹೆಚ್ಚಳವಾಗಿರುವುದು ತಮ್ಮ ಕಿಸಿಗೆ ಕತ್ತರಿ ಬೀಳಲಿದೆ.

    ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕೃಷ್ಣರಾಜ ಸಾಗರ (ಕೆಆರ್‌ಎಸ್) ಬೃಂದಾವನ ಪ್ರವೇಶ ದರ ಹೆಚ್ಚಳ ಮಾಡಿ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ನಡುವೆಯೇ ಪ್ರಸಿದ್ದ ಪಕ್ಷಿಧಾಮ ರಂಗನತಿಟ್ಟು ಪಕ್ಷಿಧಾಮ ಪ್ರವೇಶ ದರ ಹಾಗೂ ಬೋಟಿಂಗ್ ದರವನ್ನ ಹೆಚ್ಚಳ ಮಾಡಿದೆ. ಇದು ಪ್ರವಾಸಿಗರಿಗೆ ಬರೆ ಎಳೆದಂತಾಗಿದೆ. ಇದನ್ನೂ ಓದಿ: ಎಥೆನಾಲ್‌ ಪೆಟ್ರೋಲ್‌ನಿಂದ ಮೈಲೇಜ್‌ ಕುಸಿತವಾಗಲ್ಲ, ವಿಮೆ ರದ್ದಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    ಎಂಟ್ರಿ ಟಿಕೆಟ್‌ ದರ ಯಾರಿಗೆ ಎಷ್ಟು?
    ವಯಸ್ಕರಿಗೆ 75 ರೂ. ಇದ್ದ ಪ್ರವೇಶ ದರವನ್ನ 80 ರೂ. ಗಳಿಗೆ ಹೆಚ್ಚಿಸಲಾಗಿದೆ. ಇನ್ನೂ ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ 25 ರೂ. ಇದ್ದ ಪ್ರವೇಶ ದರವನ್ನು 40 ರೂ.ಗೆ ಹೆಚ್ಚಳ ಮಾಡಲಾಗಿದೆ. ವಿದೇಶಿಗರಿಗೆ 500 ರೂ. ಇದ್ದ ಪ್ರವೇಶ ದರವನ್ನು ಪ್ರಸ್ತುತ 600 ರೂ.ಗೆ ಹೆಚ್ಚಳ ಮಾಡಲಾಗಿದೆ. ವಿದೇಶಿ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ 250 ರೂ. ಇದ್ದ ಪ್ರವೇಶ ದರವನ್ನು 300ಕ್ಕೆ ಹೆಚ್ಚಳ ಮಾಡಿ ಆದೇಶಿಸಿದೆ. ಬ್ಯಾಟರಿ ಆಪರೇಟೆಡ್ ವಾಹನದ ದರವನ್ನು 75 ರಿಂದ 100 ಮಕ್ಕಳಿಗೆ 35 ರಿಂದ 50 ರೂ. ಹೆಚ್ಚಿಸಲಾಗಿದೆ. ಮೋಟಾರ್ ಸೈಕಲ್ 15 ರಿಂದ 20, ಆಟೋ ರಿಕ್ಷಾ ದರವನ್ನ ಮಾತ್ರ ಯತಾವತ್ತಾಗಿರಿಸಿದೆ. ಕಾರು, ಜೀಪು 60 ರಿಂದ 70ರೂ.ಗೆ ಹೆಚ್ಚಿಸಿದೆ.

  • ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲೇ ದರ ಏರಿಕೆ ಶಾಕ್!

    ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲೇ ದರ ಏರಿಕೆ ಶಾಕ್!

    ಬೆಂಗಳೂರು: ನಗರದ ನಮ್ಮ ಮೆಟ್ರೋ (Namma Metro) ರೈಲು ಇದೀಗ ದರ ಏರಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದು, ಶೀಘ್ರದಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆಯಿದೆ.

    ಇದಕ್ಕೂ ಮುಂಚೆ ಹಲವಾರು ಬಾರಿ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್‌ಸಿಎಲ್ (Bengaluru Metro Rail Corporation Limited)  ಪ್ರಸ್ತಾಪಿಸಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ದರ ಏರಿಕೆ ಮಾಡಿರಲಿಲ್ಲ. ಸದ್ಯ ಈ ಬಾರಿ ದರ ಏರಿಕೆ ಮಾಡಲು ಮುಂದಾಗಿದೆ.ಇದನ್ನೂ ಓದಿ:

    ಟಿಕೆಟ್ ದರ ಏರಿಕೆಗೆ ಈಗಾಗಲೇ ಮೆಟ್ರೋ ದರ ನಿಗದಿ ಸಮಿತಿಯನ್ನು ರಚಿಸಿದ್ದು 15% ರಿಂದ 20% ರಷ್ಟು ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

    ಈ ಕುರಿತು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾನ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡು ದರ ಏರಿಕೆ ಬಗ್ಗೆ ಕಮಿಟಿ ಆಗಿದೆ. ಇದೊಂದು ಸ್ವತಂತ್ರ ಸಮಿತಿಯಾಗಿದ್ದು, ಒಂದು ಸಭೆ ಕೂಡಾ ಆಗಿದೆ. ಕಮಿಟಿ ಶೀಘ್ರದಲ್ಲೇ ವರದಿ ನೀಡಲಿದ್ದು, ವರದಿ ಆಧಾರದ ಮೇಲೆ ದರ ಏರಿಕೆ ಆಗಲಿದೆ. ಕಮಿಟಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಲಿದೆ. ನಮ್ಮ ಖರ್ಚು ವೆಚ್ಚ ನೋಡಿಕೊಂಡು ದರ ಏರಿಕೆ ಮಾಡಲಿದ್ದೇವೆ. ಇನ್ನೂ ಮೂರು ತಿಂಗಳ ಒಳಗಾಗಿ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಅ.21 ರೊಳಗೆ ಪ್ರಯಾಣಿಕರು ಬಿಎಂಆರ್ಸಿಎಲ್‌ಗೆ ತಮ್ಮ ಅಭಿಪ್ರಾಯ ತಿಳಿಸಲು ಕಾಲಾವಕಾಶ ನೀಡಿದ್ದು, ಸಲಹೆಯನ್ನ ffc@bmrc.co.in ಇಮೇಲ್‌ಗೆ ಕಳಿಸುವಂತೆ ತಿಳಿಸಿದೆ.ಇದನ್ನೂ ಓದಿ: