Tag: ಟಿಕೆಟ್ ಆಕಾಂಕ್ಷಿ

  • ನಾನು ಗೆದ್ರೆ ಅಕ್ರಮ ಮರಳು ದಂಧೆಗೆ ಅವಕಾಶ- ಬಿಜೆಪಿ ಟಿಕೆಟ್ ಆಕಾಂಕ್ಷಿ ಘೋಷಣೆ

    ನಾನು ಗೆದ್ರೆ ಅಕ್ರಮ ಮರಳು ದಂಧೆಗೆ ಅವಕಾಶ- ಬಿಜೆಪಿ ಟಿಕೆಟ್ ಆಕಾಂಕ್ಷಿ ಘೋಷಣೆ

    ಬೆಳಗಾವಿ: ಚುನಾವಣೆಯಲ್ಲಿ ಗೆದ್ದರೆ ಭ್ರಷ್ಟಾಚಾರ, ಅಕ್ರಮ ಮಟ್ಟ ಹಾಕ್ತೀನಿ ಅಂತ ಮತದಾರರಿಗೆ ಭರವಸೆ ಕೊಡೋದು ಸಾಮಾನ್ಯ. ಆದ್ರೆ ಇಲ್ಲೊಬ್ಬರು ಟಿಕೆಟ್ ಆಕಾಂಕ್ಷಿ ನಾನೇನಾದ್ರೂ ಗೆದ್ದರೆ ಅಕ್ರಮಕ್ಕೆ ಬೆಂಬಲ ನೀಡುತ್ತೇನೆಂದು ಬಹಿರಂಗವಾಗಿ ಹೇಳಿದ್ದಾರೆ.

    ಹೌದು. ಬೆಳಗಾವಿ ಜಿಲ್ಲೆಯ ಯಮನಕರಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾರುತಿ ಅಷ್ಟಗಿ ಈ ಆಶ್ವಾಸನೆ ನೀಡಿದ್ದಾರೆ. ನನ್ನನ್ನು ಶಾಸಕರ ಚುನಾವಣೆಯಲ್ಲಿ ಗೆಲ್ಲಿಸಿದ್ರೆ 24 ಗಂಟೆಯಲ್ಲಿ ಅಕ್ರಮ ಮರಳು ದಂಧೆಗೆ ಅವಕಾಶ ಮಾಡಿಕೊಡ್ತೀನಿ ಅಂತ ಮಾತುಕೊಟ್ಟಿದ್ದಾರೆ. ಟಿಕೆಟ್ ಆಕಾಂಕ್ಷಿಯ ಈ ಮಾತು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಈ ಮೂಲಕ ವೋಟಿಗಾಗಿ ಘಟಪ್ರಭಾ ನದಿಯ ಒಡಲು ಬಗೆಯೋರ ಬೆನ್ನಿಗೆ ನಿಂತಿದ್ದಾರೆ. ಕಳೆದ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಮಾರುತಿ ಅಷ್ಟಗಿ ಸತೀಶ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

  • ಚಿತ್ರದುರ್ಗದಲ್ಲಿ ತಮಟೆ ಸದ್ದಿಗೆ ಸಖತ್ ಸ್ಟೆಪ್ಸ್ ಹಾಕಿದ ನಟಿ ಭಾವನಾ

    ಚಿತ್ರದುರ್ಗದಲ್ಲಿ ತಮಟೆ ಸದ್ದಿಗೆ ಸಖತ್ ಸ್ಟೆಪ್ಸ್ ಹಾಕಿದ ನಟಿ ಭಾವನಾ

    ಚಿತ್ರದುರ್ಗ: ಮರವಣಿಗೆಯೊಂದರಲ್ಲಿನ ತಮಟೆ ಸದ್ದಿಗೆ ನಟಿ ಭಾವನಾ ಅವರು ಸಖತ್ ಸ್ಟೆಪ್ಸ್ ಹಾಕಿದ್ದಾರೆ.

    ನಗರದಲ್ಲಿಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವದ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ನಟಿ ಭಾವನಾ ಕೂಡ ಭಾಗಿಯಾಗಿದ್ದು, ಕರುವಿನಕಟ್ಟೆ ವೃತ್ತದಲ್ಲಿ ಸಮುದಾಯದ ಮಹಿಳೆಯರೊಂದಿಗೆ ತಾವೂ ಕೂಡ ಹೆಜ್ಜೆ ಹಾಕುವ ಮೂಲಕ ಮನರಂಜಿಸಿದ್ರು. ಜಿಲ್ಲೆಯ ಬುರುಜನಹಟ್ಟಿ ಬಡವಾವಣೆಯ ನಿವಾಸಿಯಾಗಿರೋ ಇವರು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

    ಇತ್ತೀಚೆಗಷ್ಟೇ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಅವಕಾಶ ಕೊಟ್ಟರೆ ಚುನಾವಣೆಯಲ್ಲಿ ಸ್ಫರ್ಧಿಸುವುದಾಗಿ ಭಾವನಾ ಹೇಳಿದ್ದರು. ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಎಲ್ಲರ ರಕ್ತ ಬಿಸಿಯಾಗಿದೆ. ಹಾಗೆಯೇ ನನ್ನ ಎದೆ ಬಡಿತ ಹೆಚ್ಚಾಗಿದೆ. ಕಾಂಗ್ರೆಸ್ ವರಿಷ್ಠರು ಹಾಗು ಕಾರ್ಯಕರ್ತರ ಸಹಕಾರದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕಳಾಗಿದ್ದೇನೆ. ಅಲ್ಲದೇ ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸಿರುವುದಾಗಿ ಕೂಡ ತಿಳಿಸಿದ್ದರು.

    ಆದರೆ ಪಕ್ಷದ ಹಿರಿಯರು, ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗು ವರಿಷ್ಠರ ಸಹಕಾರ, ಮಾರ್ಗದರ್ಶನ ಮತ್ತು ಆಶೀರ್ವಾದದ ಅಗತ್ಯವಿದ್ದು, ಎಲ್ಲರ ಬೆಂಬಲದೊಂದಿಗೆ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಜನರ ಮುಂದೆ ಬರಲು ಇಷ್ಟಪಡುತ್ತೆನೆ ಅಂತ ಹೇಳಿದ್ದರು. ಒಟ್ಟಿನಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಟಿ ತಮ್ಮ ಕ್ಷೇತ್ರದ ಜನರೊಂದಿಗೆ ಬೆರೆಯುತ್ತಿದ್ದಾರೆ.

    https://www.youtube.com/watch?v=Uh0ycSeeXFI&feature=youtu.be