Tag: ಟಿಎಂಸಿ

  • ಅನುಮಾನಸ್ಪದವಾಗಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ

    ಅನುಮಾನಸ್ಪದವಾಗಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ

    ಕೋಲ್ಕತ್ತಾ: ಬಿಜೆಪಿ ಕಾರ್ಯಕರ್ತರೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಉತ್ತರ ಕೋಲ್ಕತ್ತಾದ ಕಾಶಿಪುರ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.

    ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಅರ್ಜುನ್ ಚೌರಾಸಿಯಾ ಅವರ ಮೃತದೇಹವು ಘೋಷ್ ಬಗಾನ್ ಪ್ರದೇಶದ ಕಟ್ಟಡವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಕುರಿತು ಬಿಜೆಪಿಯು ಆಡಳಿತಾರೂಢ ಟಿಎಂಸಿ ವಿರುದ್ಧ ಕೊಲೆಗೈದಿದ್ದಾರೆ ಎಂದು ಆರೋಪಿಸಿದೆ. ಆದರೆ ಈ ಆರೋಪವನ್ನು ಟಿಎಂಸಿಯು ನಿರಾಕರಿಸಿದೆ.

    ಈ ಮಧ್ಯೆ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಶಾ ಇಂದು ಮಧ್ಯಾಹ್ನ ಚೌರಾಸಿಯಾ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಅವರು ಪಕ್ಷದ ದಕ್ಷ ಕಾರ್ಯಕರ್ತರಾಗಿದ್ದರು ಎಂದು ರಾಜ್ಯ ಬಿಜೆಪಿ ವಕ್ತಾರ ಸಾಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ. ಈ ಸುದ್ದಿ ಕೇಳಿದ ನಂತರ ಅಮಿತ್ ಶಾ ಬೇಸರಗೊಂಡಿದ್ದಾರೆ. ಘಟನೆ ಹಿನ್ನೆಲೆ ಎನ್‍ಎಸ್‍ಸಿ ಬೋಸ್ ವಿಮಾನ ನಿಲ್ದಾಣದಲ್ಲಿ ಅವರ ಭವ್ಯ ಸ್ವಾಗತವನ್ನು ರದ್ದುಗೊಳಿಸಲು ಅವರು ನಮಗೆ ಹೇಳಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಪೊಲೀಸರ ಜಂಟಿ ಸಭೆ

    ಶಾ ಅವರು ತಮ್ಮ ಎರಡು ದಿನಗಳ ಭೇಟಿಯ ಎರಡನೇ ಹಂತದಲ್ಲಿ ಉತ್ತರ ಬಂಗಾಳದಿಂದ ನಗರಕ್ಕೆ ಆಗಮಿಸಲಿದ್ದಾರೆ. ಬಿಜೆಪಿ ಆರೋಪವನ್ನು ತಳ್ಳಿಹಾಕಿದ ಟಿಎಂಸಿ ಸಂಸದ ಸಂತಾನು ಸೇನ್, ನಮ್ಮ ವಿರುದ್ಧದ ಆರೋಪಗಳು ಆಧಾರ ರಹಿತವಾಗಿವೆ. ಪೊಲೀಸರು ಈ ವಿಷಯವನ್ನು ತನಿಖೆ ಮಾಡಲಿ ಎಂದು ಹೇಳಿದ್ದಾರೆ.

    ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚೌರಾಸಿಯಾ ಅವರ ಕುಟುಂಬದವರು ಅವರ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಆದರೆ ಪೊಲೀಸರು ಸ್ಥಳದಿಂದ ಶವವನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಬಿಜೆಪಿ ನಾಯಕನನ್ನು ದೆಹಲಿ ಪೊಲೀಸರಿಗೆ ಮಾತ್ರ ಹಸ್ತಾಂತರಿಸುತ್ತೇವೆ: ಹರಿಯಾಣ ಗೃಹ ಸಚಿವ

    ಘಟನಾ ಸ್ಥಳಕ್ಕೆ ದೌಡಾಯಿಸಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದಾರೆ. ಕೇಂದ್ರ ಗೃಹ ಸಚಿವರು ರಾಜ್ಯದಲ್ಲಿದ್ದಾಗ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಹೇಳಿದ್ದಾರೆ.

    ಶಾ ಅವರ ಭೇಟಿಯ ಸಂದರ್ಭದಲ್ಲಿ ಸಮಸ್ಯೆಯನ್ನು ಸೃಷ್ಟಿಸಲು ಕೇಸರಿ ಪಾಳಯದಲ್ಲಿನ ಆಂತರಿಕ ಕಲಹದಿಂದ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೇಸರಿ ಪಾಳಯದವರು ನಿರ್ಮಿಸಿರುವ ಚಿತ್ರಕಥೆ ಇದು ಎಂದರು. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆಗಳ ಕುರಿತು ಶಾ ಗುರುವಾರ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

  • ಉಪಚುನಾವಣಾ ಫಲಿತಾಂಶ, ಬಿಜೆಪಿಗೆ ಮುಖಭಂಗ – ಕಾಂಗ್ರೆಸ್, ಟಿಎಂಸಿಗೆ ಜಯ

    ಉಪಚುನಾವಣಾ ಫಲಿತಾಂಶ, ಬಿಜೆಪಿಗೆ ಮುಖಭಂಗ – ಕಾಂಗ್ರೆಸ್, ಟಿಎಂಸಿಗೆ ಜಯ

    ನವದೆಹಲಿ: 4 ರಾಜ್ಯಗಳಲ್ಲಿ ನಡೆದ 4 ವಿಧಾನಸಭಾ ಕ್ಷೇತ್ರ, 1 ಲೋಕಸಭಾ ಕ್ಷೇತ್ರದ ಉಪಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಗೆ ಮುಖಭಂಗವಾಗಿದೆ. 5 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲೂ ಬಿಜೆಪಿಗೆ ಗೆಲುವು ಲಭಿಸಿಲ್ಲ.

    ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಟಿಎಂಸಿಯ ಶತ್ರುಘ್ನ ಸಿನ್ಹಾ ವಿಜಯ ಸಾಧಿಸಿದ್ದಾರೆ. ಬ್ಯಾಲಿಗುಂಗೆ ಎಂಎಲ್‌ಎ ಕ್ಷೇತ್ರದಲ್ಲಿ ಟಿಎಂಸಿಯ ಬಬುಲ್ ಸುಪ್ರಿಯೋ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಹಾರದ ಬೋಚಹಾನ್‌ನಲ್ಲಿ ಆರ್‌ಜೆಡಿ ಗೆದ್ದಿದ್ದು, ಛತ್ತೀಸ್‌ಗಢದ ಖೈರಾಘಡ ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಇದನ್ನೂ ಓದಿ: ದೆಹಲಿಯಲ್ಲಿ ಹನುಮಜಯಂತಿ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ, ಹಿಂಸಾಚಾರ

    ಈ ಬಾರಿಯ ಉಪಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನೆಲಕಚ್ಚಿದ್ದು, ಕಾಂಗ್ರೆಸ್ ಗೆಲುವಿನ ಸಂಭ್ರಮಾಚರಣೆ ನಡೆಸಿದೆ. ಫಲಿತಾಂಶದ ಮಧ್ಯೆ ಸೋನಿಯಾ ಗಾಂಧಿಯನ್ನು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಭೇಟಿ ಮಾಡಿದ್ದು, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 4ನೇ ದಿನವೂ ಭಾರೀ ಮಳೆ

     

  • ಬಿರ್ಭೊಮ್ ಹಿಂಸಾಚಾರ – ಪ್ರತಿಭಟನೆ ವೇಳೆ ಸುವೆಂದು ಅಧಿಕಾರಿಗೆ ಗಾಯ

    ಬಿರ್ಭೊಮ್ ಹಿಂಸಾಚಾರ – ಪ್ರತಿಭಟನೆ ವೇಳೆ ಸುವೆಂದು ಅಧಿಕಾರಿಗೆ ಗಾಯ

    ಕೋಲ್ಕತ್ತಾ: ಬಿರ್ಭೊಮ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೆಂದು ಅಧಿಕಾರಿಗೆ ಗಾಯವಾಗಿದೆ.

    ಪಶ್ಚಿಮ ಬಂಗಾಳದಲ್ಲಿ ಕೆಲದಿನಗಳ ಹಿಂದೆ ನಡೆದ ಹಿಂಸಾಚಾರ ಪ್ರಕರಣದಲ್ಲಿ ಇಬ್ಬರು ಮಕ್ಕಳು ಮತ್ತು ಆರು ಮಂದಿ ಮಹಿಳೆಯರನ್ನು ಜೀವಂತ ಸುಟ್ಟು ಹಾಕಲಾಗಿತ್ತು. ಈ ಘಟನೆ ಬಳಿಕ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಪ್ರತಿಪಕ್ಷಗಳು ಕಿಡಿಕಾರಿದ್ದವು. ಈ ಬಗ್ಗೆ ಬಿಜೆಪಿ ಇಂದು ಬಿರ್ಭೊಮ್‍ನ ಬಿಡಿಒ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿತ್ತು. ಈ ವೇಳೆ ಬಿಡಿಒ ಕಚೇರಿಗೆ ಮುತ್ತಿಗೆ ಹಾಕಲು ಸುವಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಮುಂದಾಗಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಈ ವೇಳೆ ಅಲ್ಲಿದ್ದ ಕಬ್ಬಿಣದ ಬ್ಯಾರಿಕೇಡ್ ಬಿದ್ದು ಸುವೆಂದು ಅಧಿಕಾರಿ ಕಾಲಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ದಿದಿ ನಾಡಿನಲ್ಲಿ ಹಿಂಸಾಚಾರ; ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

    ಬ್ಯಾರಿಗೇಡ್ ಬಿದ್ದ ಕಾರಣ ಸುವೆಂದು ಅಧಿಕಾರಿ ಕಾಲಿಗೆ ಗಾಯವಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಬಿಜೆಪಿ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಪ.ಬಂಗಾಳ ಬದುಕಲು ಯೋಗ್ಯವಾಗಿಲ್ಲ – ಬಿರ್ಭೂಮ್ ಹಿಂಸಾಚಾರ ನೆನೆದು ಕಣ್ಣೀರಿಟ್ಟ ಸಂಸದೆ ರೂಪಾ ಗಂಗೂಲಿ

    ಏನಿದು ಬಿರ್ಭೊಮ್ ಹಿಂಸಾಚಾರ ಪ್ರಕರಣ:
    ಪಶ್ಚಿಮ ಬಂಗಾಳದ ಬಗುಟಿ ಗ್ರಾಮ ಪಂಚಾಯತ್ ಮುಖಂಡ ಭಾದು ಶೇಖ್ ಅವರ ಮೇಲೆ ದಾಳಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ-60ರ ಅಂಗಡಿಯೊಂದರಲ್ಲಿ ಇರುವಾಗ ಶೇಖ್ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು 10 ರಿಂದ 12 ಮನೆಗೆ ಬೆಂಕಿ ಹಚ್ಚಿದ್ದರು.

    ಇದರಿಂದಾಗಿ 8 ಮಂದಿ ಸಜೀವ ದಹನವಾಗಿದ್ದರು. ಇದರಲ್ಲಿ ಇಬ್ಬರು ಮಕ್ಕಳೂ ಸಹ ಇದ್ದರು ಎಂಬುದಾಗಿ ಬಿರ್ಭೂಮ್ ಎಸ್‍ಪಿ ನಾಗೇಂದ್ರ ತ್ರಿಪಾಟಿ ಮಾಹಿತಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಸ್ವಯಂಪ್ರೇರಿತವಾಗಿಯೇ ವಿಚಾರಣೆ ನಡೆಸಲು ಮುಂದಾಗಿತ್ತು. ಈ ನಡುವೆ ಜಿಲ್ಲೆಯ ಕೆಲ ಕುಟುಂಬಗಳು ಹಿಂಸಾಚಾರಕ್ಕೆ ಬೆಚ್ಚಿಬಿದ್ದಿದ್ದು, ತಮ್ಮ ಮನೆಗಳನ್ನು ತೊರೆದು ಹೋಗಿದ್ದರು.

  • ಇದು ಅತ್ಯಾಚಾರವೋ? ಅಥವಾ ಅವಳು ಗರ್ಭಿಣಿಯೋ?: ಮಮತಾ ಬ್ಯಾನರ್ಜಿ ಪ್ರಶ್ನೆ

    ಇದು ಅತ್ಯಾಚಾರವೋ? ಅಥವಾ ಅವಳು ಗರ್ಭಿಣಿಯೋ?: ಮಮತಾ ಬ್ಯಾನರ್ಜಿ ಪ್ರಶ್ನೆ

    ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರದಂದು ನಾಡಿಯಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೊಳಗಾದ ವರದಿಗಳ ಬಗ್ಗೆ ಇದು ಅತ್ಯಾಚಾರವೋ? ಅಥವಾ ಅವಳು ಗರ್ಭಿಣಿಯಾಗಿದ್ದಾಳೋ? ಎಂದು ಬಿಜೆಪಿ ಮತ್ತು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

    ಅತ್ಯಾಚಾರದಿಂದ ಅಪ್ರಾಪ್ತ ಬಾಲಕಿ ಸಾವನ್ನಪ್ಪಿದ್ದಾರೆ ಎಂದು ಬಿಜೆಪಿಯವರು ತೋರಿಸುತ್ತಿರುವ ಈ ಕಥೆಯನ್ನು ನೀವು ಅತ್ಯಾಚಾರ ಎಂದು ಕರೆಯುತ್ತೀರಾ? ಅವಳು ಗರ್ಭಿಣಿಯಾಗಿದ್ದಳೋ ಅಥವಾ ಪ್ರೇಮ ಸಂಬಂಧ ಹೊಂದಿದ್ದಾಳೋ? ಅವರು ವಿಚಾರಿಸಿದ್ದಾರೆಯೇ? ಈ ಕುರಿತು ನಾನು ಸ್ವತಃ ಪೊಲೀಸರನ್ನು ಕೇಳಿದೆ. ಅವರು ಈಗಾಗಲೇ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆ ಬಾಲಕಿಗೆ ಹುಡುಗನ ಜೊತೆ ಅನೈತಿಕ ಸಂಬಂಧ ಇದೆ ಅಂತಾನೂ ತಿಳಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್- ಟಿಎಂಸಿ ಮುಖಂಡನ ಮಗ ಬಂಧನ

    STOP RAPE

    ಹುಟ್ಟುಹಬ್ಬದ ಪಾರ್ಟಿಗೆ ಹೋದಾಗ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಬಾಲಕಿಯು ಇದೇ ಮಂಗಳವಾರ ನಿಧನರಾಗಿದ್ದಾಳೆ. ಸಂತ್ರಸ್ತೆಯ ಕುಟುಂಬವು ಸ್ಥಳೀಯ ತೃಣಮೂಲ ಕಾಂಗ್ರೆಸ್ ಪಂಚಾಯತ್ ನಾಯಕನ ಒತ್ತಡದ ಮೇರೆಗೆ ಶವಪರೀಕ್ಷೆ ಇಲ್ಲದೆ ಶವವನ್ನು ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಮಗ ಬ್ರಜ್ ಗೋಪಾಲ್ ಗೋಲಾ (21) ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಘಟನೆ ನಡೆದ ಐದು ದಿನಗಳ ನಂತರ ಪೊಲೀಸ್ ದೂರು ದಾಖಲಾಗಿದೆ.

    ಎಪ್ರಿಲ್ 5 ರಂದು ಆಕೆ ಸಾವನ್ನಪ್ಪಿದ್ದು, ಅವಳ ಕುಟುಂಬ ಘಟನೆ ನಡೆದ ದಿನ ಪೊಲೀಸರ ಹತ್ತಿರ ಯಾಕೆ ಹೋಗಲಿಲ್ಲ? ಈಗಾಗಲೇ ಅವಳ ಶವವನ್ನು ಅವರು ಸುಟ್ಟುಹಾಕಿದ್ದಾರೆ. ಹಾಗಾದರೆ ಪೊಲೀಸರಿಗೆ ಎಲ್ಲಿ ಸಾಕ್ಷಿ ಸಿಗುತ್ತದೆ ಎಂದು ಮಮತಾ ಪ್ರಶ್ನಿಸಿದರು. ಇದನ್ನೂ ಓದಿ: ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ ಮಸ್ಕ್

    ಇದು ಒಂದು ಪ್ರೇಮ ಸಂಬಂಧವಾಗಿತ್ತು. ಕುಟುಂಬಕ್ಕೆ ತಿಳಿದಿದ್ದರಿಂದ ಅದು ದೃಢೀಕರಿಸಲ್ಪಟ್ಟಿದೆ. ದಂಪತಿ ಸಂಬಂಧದಲ್ಲಿದ್ದರೆ ನಾನು ಅದನ್ನು ನಿಲ್ಲಿಸಬಹುದೇ? ಇದು ಯುಪಿ ಅಲ್ಲ. ನಾವು ಇಲ್ಲಿ ಲವ್ ಜಿಹಾದ್ ಮಾಡುವುದಿಲ್ಲ. ಇದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಯಾವುದೇ ಅವ್ಯವಹಾರ ನಡೆದರೆ ಪೆÇಲೀಸರು ಆರೋಪಿಗಳನ್ನು ಬಂಧಿಸುತ್ತಾರೆ. ಒಬ್ಬ ಶಂಕಿತನನ್ನು ಈಗಾಗಲೇ ಬಂಧಿಸಲಾಗಿದೆ ಎಂದು ತಿಳಿಸಿದರು.

    ಬಿಜೆಪಿ ಮತ್ತು ಮಾಧ್ಯಮಗಳನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡ ಅವರು ಬೆಳಗ್ಗೆ ಬಿಜೆಪಿ ಮುಖ್ಯಾಂಶ ಏನೆಂದು ನಿರ್ಧರಿಸುತ್ತದೆ. ಸುದ್ದಿ ವಾಹಿನಿಗಳು ಅದನ್ನು ಅನುಸರಿಸುತ್ತವೆ. ಇಂಧನ ಬೆಲೆ ಏರಿಕೆ ಕುರಿತು ಅವರು ಎಷ್ಟು ಬಾರಿ ಚರ್ಚಿಸಿದ್ದಾರೆ ಹೇಳಿ? ದೆಹಲಿ ಗಲಭೆ, ಎನ್‍ಆರ್‌ಸಿ ಕುರಿತು ಅವರು ಎಷ್ಟು ಬಾರಿ ಚರ್ಚಿಸಿದ್ದಾರೆ ಹೇಳಿ ಎಂದು ಪ್ರಶ್ನೆಗಳ ಸುರಿಮಳೆಗೈದರು.

    ಈ ನಡುವೆ ಮೃತರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಸೋಮವಾರ ರಾಣಾಘಾಟ್‍ನಲ್ಲಿ ಬಿಜೆಪಿ 12 ಗಂಟೆಗಳ ಬಂದ್‍ಗೆ ಕರೆ ನೀಡಿದ್ದು, ಮೌನ ಪ್ರತಿಭಟನೆ ನಡೆಸುತ್ತಿದೆ. ಬಿಜೆಪಿ ನಾಯಕಿ ಅರ್ಚನಾ ಮಜುಂದಾರ್ ಕೂಡ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ್ದಾರೆ.

  • ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್- ಟಿಎಂಸಿ ಮುಖಂಡನ ಮಗ ಬಂಧನ

    ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್- ಟಿಎಂಸಿ ಮುಖಂಡನ ಮಗ ಬಂಧನ

    ಕೋಲ್ಕತ್ತಾ: ಹುಟ್ಟುಹಬ್ಬದ ಪಾರ್ಟಿಯೊಂದರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ.

    ತೃಣಮೂಲ ಕಾಂಗ್ರೆಸ್ ಪಂಚಾಯತ್ ಸದಸ್ಯನ ಮಗ ಬಂಧಿತ ಆರೋಪಿ. ಬಾಲಕಿಯು ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಹೋಗಿದ್ದಳು. ಆದರೆ ಅವಳು ಅಸ್ವಸ್ಥವಾಗಿ ಮನೆಗೆ ಮರಳಿದ್ದಾಳೆ. ಇದರಿಂದಾಗಿ ಆತಂಕಗೊಂಡ ಮನೆಯವರು ಆಸ್ಪತ್ರೆಗೆ ಸೇರಿಸಲು ಕರೆದೊಯ್ಯುವ ಮೊದಲೇ ಸಾವನ್ನಪ್ಪಿದ್ದಾಳೆ.

    STOP RAPE

    ಈ ಬಗ್ಗೆ ಬಾಲಕಿಯ ಪೋಷಕರು ಮಾತನಾಡಿ ನಮ್ಮ ಮಗಳು ಸ್ಥಳೀಯ ಟಿಎಂಸಿ ನಾಯಕನ ಮಗನ ನಿವಾಸದ ಪಾರ್ಟಿಯಿಂದ ಹಿಂದಿರುಗಿದ ನಂತರ ತೀವ್ರವಾಗಿ ರಕ್ತಸ್ರಾವವಾಗಿತ್ತು ಜೊತೆಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ನಾವು ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಅವಳು ಸಾವನ್ನಪ್ಪಿದ್ದಳು ಎಂದು ತಿಳಿಸಿದ್ದಾರೆ.

    ಈ ಬಗ್ಗೆ ಪಾರ್ಟಿಯಲ್ಲಿ ಹಾಜರಿದ್ದ ಜನರೊಂದಿಗೆ ಮಾತನಾಡಿದ ನಂತರ ಆರೋಪಿ ಮತ್ತು ಅವನ ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ನಮಗೆ ಖಚಿತವಾಗಿದೆ. ಅಷ್ಟೇ ಅಲ್ಲದೇ ಬಾಲಕಿಯ ಪೋಸ್ಟ್ ಮಾರ್ಟಮ್ ಬರುವ ಮುನ್ನವೇ ಜನರ ಗುಪೊಂದು ಬಲವಂತಾಗಿ ಅಂತ್ಯಸಂಸ್ಕಾರ ಮಾಡಿಸಿದ್ದಾರೆ ಎಂದು ಆರೋಪಿಸಿದರು.

    ಘಟನೆ ಸಂಬಂಧಿಸಿ ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ಪಂಚಾಯತ್ ಸದಸ್ಯನ ಮಗ ಎಂದು ಬಾಲಕಿಯ ಕುಟುಂಬ ಹೇಳಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಆತನನ್ನು ಬಂಧಿಸಲಾಗಿದೆ. ಘಟನೆ ನಡೆದ ನಾಲ್ಕು ದಿನಗಳ ನಂತರ 9ನೇ ತರಗತಿಯ ವಿದ್ಯಾರ್ಥಿ ಅಪ್ರಾಪ್ತ ಬಾಲಕಿಯ ಪೋಷಕರು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಆಸ್ತಿಗಾಗಿ ಜಗಳ- ಮಲಗಿದ್ದ ತಮ್ಮನ ಮೇಲೆ ಹಲ್ಲೆ ಮಾಡಿ ಕೊಂದ ಅಣ್ಣ

    POLICE

    ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿಯ ಹಿರಿಯ ನಾಯಕ ಮತ್ತು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಶಶಿ ಪಂಜ ಅವರು, ಘಟನೆಯಲ್ಲಿ ಯಾವುದೇ ರಾಜಕೀಯ ಮಾಡಬಾರದು. ಪೊಲೀಸರು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು. ಘಟನೆಯನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಹಂಸಖಾಲಿಯಲ್ಲಿ 12 ಗಂಟೆಗಳ ಬಂದ್‍ಗೆ ಕರೆ ನೀಡಿದೆ. ಇದನ್ನೂ ಓದಿ: ಆರಗ ಜ್ಞಾನೇಂದ್ರ ಸಮರ್ಥರಿದ್ದಾರೆ: ಎಸ್.ಟಿ.ಸೋಮಶೇಖರ್

  • ನನಗೆ ಇಷ್ಟವಾದಾಗ ಮಾಂಸ ತಿನ್ನಲು ಅವಕಾಶವಿದೆ: ಮೊಯಿತ್ರಾ

    ನನಗೆ ಇಷ್ಟವಾದಾಗ ಮಾಂಸ ತಿನ್ನಲು ಅವಕಾಶವಿದೆ: ಮೊಯಿತ್ರಾ

    ನವದೆಹಲಿ: ಕರ್ನಾಟಕ ರಾಜ್ಯಾದ್ಯಂತ ಹಲಾಲ್‌ಕಟ್, ಝಟ್ಕಾಕಟ್ ವಿವಾದದ ನಡುವೆ ಇದೀಗ ರಾಷ್ಟ್ರಮಟ್ಟದಲ್ಲಿ `ಮೀಟ್ ಬ್ಯಾನ್’ (ಮಾಂಸ ನಿಷೇಧ) ಅಭಿಯಾನ ತಲೆ ಎತ್ತಿದೆ. ಒಂದೆಡೆ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧಿಸುವಂತೆ ದೆಹಲಿಯಲ್ಲಿ ಮೀಟ್ ಬ್ಯಾನ್ ಅಭಿಯಾನ ನಡೆಯುತ್ತಿದೆ. ಇನ್ನೊಂದೆಡೆ ಮುಸ್ಲಿಂ ಬಾಂದವರು ಸಹ ಪವಿತ್ರ ರಂಜಾನ್ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹಿಸುತ್ತಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ, ಸಂವಿಧಾನವು ತನಗೆ ಇಷ್ಟವಾದಾಗ ಮಾಂಸ ತಿನ್ನಲು ಅವಕಾಶ ನೀಡುತ್ತದೆ. ಅದೇ ರೀತಿ ಅಂಗಡಿಯವರಿಗೆ ವ್ಯಾಪಾರ ನಡೆಸಲೂ ಸ್ವಾತಂತ್ರ್ಯ ನೀಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಇಸ್ಲಾಂ ಸ್ಲೀಪರ್ ಸೆಲ್ ಕೆಲಸ ಮಾಡ್ತಿದೆ: ಚಕ್ರವರ್ತಿ ಸೂಲಿಬೆಲೆ

    meat ban

    ನವರಾತ್ರಿ ಸಂದರ್ಭದಲ್ಲಿ ದಕ್ಷಿಣ ದೆಹಲಿಯ ಕೆಲ ಭಾಗಗಳಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮೇಯರ್ ಮುಖೇಶ್ ಸೂರ್ಯನ್ ಅವರು ಸೂಚಿಸಿರುವ ಬೆನ್ನಲ್ಲೇ ಮೊಯಿತ್ರಾ ಈ ಹೇಳಿಕೆ ನೀಡಿದ್ದಾರೆ.

    ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪ್ರತಿಯೊಬ್ಬರು ರಂಜಾನ್ ಸಮಯದಲ್ಲಿ ಸಾರ್ವಜನಿಕವಾಗಿ ಮಾಂಸಾಹಾರ ಸೇವನೆ ಮಾಡುವುದನ್ನು ನಿಷೇಧಿಸಬೇಕು. ರಂಜಾನ್ ಸಮಯದಲ್ಲಿ ನಾವು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಊಟ ಮಾಡುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ಮುಸ್ಲಿಮೇತರರು, ಪ್ರವಾಸಿಗರು ಹಾಗೂ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾಂಸಾಹಾರ ಸೇವನೆ ಮಾಡುವುದನ್ನು ನಿಷೇಧಿಸುವುದು ಸರಿಯೆಂದು ನಾನು ಭಾವಿಸುತ್ತೇನೆ ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ನಗದು ಬಹುಮಾನ – ಹಲಾಲ್ ವಿರುದ್ಧ ಅಭಿಯಾನ: ಎರಡಕ್ಕೂ ನಂಟೇನು?

    ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ವರ್ಮಾ, ಇದು ದೆಹಲಿಗೆ ಮಾತ್ರವಲ್ಲ, ಭಾರತದ ಇತರ ಭಾಗಗಳಿಗೂ ವಿಸ್ತರಿಸಬೇಕು. ನವರಾತ್ರಿ ಹಬ್ಬದ ಸಂದರ್ಭದಲ್ಲಿ ವ್ರತ ಹಿಡಿದು ದೇವಿಯನ್ನು ಪೂಜಿಸುತ್ತಾರೆ. ಮುಸ್ಲಿಮರೇ ಆಗಲಿ, ಬೇರೆಯವರೇ ಆಗಲಿ ನಮ್ಮ ಸಂಸ್ಕೃತಿ ಹೇಳುವುದನ್ನು ನಾವು ಗೌರವಿಸಬೇಕು ಹಾಗಾಗಿ ಈ ಕ್ರಮ ದೇಶಾದ್ಯಂತ ಜಾರಿಯಾಗಬೇಕು ಎಂದು ಅವರು ಹೇಳಿದ್ದಾರೆ.

    ಕಾಂಗ್ರೆಸ್ ನಾಯಕ ಸಲ್ಮಾನ್ ನಿಜಾಮಿ ಅವರು, ದಕ್ಷಿಣ ದೆಹಲಿಯಲ್ಲಿ ಮಾಂಸ ನಿಷೇಧಿಸುವ ಬಿಜೆಪಿಯ ಕ್ರಮವು ಬೂಟಾಟಿಕೆಯಾಗಿದೆ. ನವರಾತ್ರಿಯಲ್ಲಿ ಮಾಂಸ ಮಾರಾಟ ನಿಷೇಧಿಸುವುದಾದರೆ ಪವಿತ್ರ ರಂಜಾನ್ ತಿಂಗಳಲ್ಲಿ ಮದ್ಯವನ್ನು ಏಕೆ ನಿಷೇಧಿಸಬಾರದು? ನೀವು ನವರಾತ್ರಿಯಲ್ಲಿ ಈರುಳ್ಳಿ ಅಥವಾ ಮಾಂಸವನ್ನು ತಿನ್ನದಿದ್ದರೆ ಇತರರನ್ನು ಏಕೆ ನಿಲ್ಲಿಸಬೇಕು? ಇದು ಪ್ರಜಾಪ್ರಭುತ್ವವೇ? ನಮ್ಮ ಭಾವನೆಗಳು ಮತ್ತು ಸಂವಿಧಾನದ ಬಗ್ಗೆ ಹಕ್ಕುಗಳು ಹೇಳುವುದು ಇದನ್ನೆಯೇ ಎಂದು ಎಂದು ಪ್ರಶ್ನಿಸಿದ್ದಾರೆ.

  • ಇದು ಉತ್ತರ ಪ್ರದೇಶ ಅಲ್ಲ, ಬಂಗಾಳ: ಬಿಜೆಪಿಗೆ ಮಮತಾ ತಿರುಗೇಟು

    ಇದು ಉತ್ತರ ಪ್ರದೇಶ ಅಲ್ಲ, ಬಂಗಾಳ: ಬಿಜೆಪಿಗೆ ಮಮತಾ ತಿರುಗೇಟು

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್‌ಭೂಮ್‌ ಜಿಲ್ಲೆಯ ರಾಮ್‌ಪುರಹಾಟ್‌ನಲ್ಲಿ ಮನೆಗಳಿಗೆ ಬೆಂಕಿ ಹೊತ್ತಿ ಎಂಟು ಮಂದಿ ಸಜೀವ ದಹನ ಪ್ರಕರಣವನ್ನು ಹಿಂಸಾಚಾರ ಎಂದು ಬಿಜೆಪಿ ಕಾರ್ಯಕರ್ತರು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಆರೋಪಕ್ಕೆ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

    ಇದು ಉತ್ತರ ಪ್ರದೇಶ ಅಲ್ಲ, ಬಂಗಾಳ. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಿಯೋಗವನ್ನು ಕಳಿಹಿಸಿದ್ದೆವು. ಭೇಟಿಗೆ ನಮ್ಮ ನಿಯೋಗಕ್ಕೆ ಅವಕಾಶವನ್ನೇ ನೀಡಲಿಲ್ಲ. ಆದರೆ ನಮ್ಮ ರಾಜ್ಯಕ್ಕೆ ಬರುವ ಯಾರನ್ನೂ ನಾವು ತಡೆಯುವುದಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ದಿದಿ ನಾಡಿನಲ್ಲೇ ಹಿಂಸಾಚಾರ – ಹೆದರಿ ಮನೆ ತೊರೆಯುತ್ತಿರುವ ಜನರು

    ಗುಜರಾತ್‌, ರಾಜಸ್ಥಾನ ರಾಜ್ಯಗಳಲ್ಲೂ ಇಂತಹ ಘಟನೆಗಳು ನಡೆದಿವೆ. ಹಾಗಂತ ನಾನು ರಾಮ್‌ಪುರಹಾಟ್‌ನಲ್ಲಿ ನಡೆದ ಘಟನೆಯನ್ನು ಸಮರ್ಥಿಸುತ್ತಿಲ್ಲ. ನ್ಯಾಯಯುತವಾಗಿ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿರುವುದು ನಮ್ಮ ಸರ್ಕಾರ. ರಾಜ್ಯದ ಜನರ ಬಗ್ಗೆ ನಮಗೆ ಕಾಳಜಿ ಇದೆ. ಯಾರೊಬ್ಬರೂ ನೋವು ಅನುಭವಿಸುವುದನ್ನು ನಾವು ಎಂದಿಗೂ ಬಯಸುವುದಿಲ್ಲ. ರಾಮ್‌ಪುರಹಾಟ್‌ ಘಟನೆ ದುರದೃಷ್ಟಕರ. ಕೂಡಲೇ ಒಸಿ, ಡಿಪಿಒ ಅವರನ್ನು ವಜಾ ಮಾಡಿದ್ದೇನೆ. ನಾನು ನಾಳೆ ರಾಮ್‌ಪುರಹಾಟ್‌ಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.

    ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯ ರಾಮ್‌ಪುರಹಾಟ್‌ ಎಂಬಲ್ಲಿ ಮಂಗಳವಾರ ನಸುಕಿನಲ್ಲಿ ಮನೆಗಳಿಗೆ ಬೆಂಕಿಹತ್ತಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಘಟನೆ ಸಂಬಂಧ 11 ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಟಿಎಂಸಿ ಮುಖಂಡನ ಹತ್ಯೆ – ಹಲವು ಮನೆಗಳಿಗೆ ಬೆಂಕಿ, 10 ಮಂದಿ ಸಜೀವ ದಹನ

    ಈ ಘಟನೆಗೆ ಕೆಲವೇ ಗಂಟೆಗಳ ಮುನ್ನ, ಸ್ಥಳೀಯ ಪಂಚಾಯಿತಿ ಮುಖಂಡನ ಹತ್ಯೆಯಾಗಿತ್ತು ಎಂದು ಡಿಜಿಪಿ ಮನೋಜ್ ಮಾಳವೀಯ ಅವರು ಹೇಳಿದ್ದಾರೆ. ಪಂಚಾಯಿತಿ ಮುಖಂಡ ಟಿಎಂಸಿ ಪಕ್ಷದವರು. ಟಿಎಂಸಿಯ ಎರಡು ಗುಂಪುಗಳ ನಡುವಣ ದ್ವೇಷವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಆದರೆ, ಇದನ್ನು ಪೊಲೀಸರು ದೃಢಪಡಿಸಿಲ್ಲ.

  • ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಲು ಪ್ರತಿ ಮನೆಯಲ್ಲೂ ಕೋಟೆ ಕಟ್ಟಬೇಕು: ಮಮತಾ ಬ್ಯಾನರ್ಜಿ

    ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಲು ಪ್ರತಿ ಮನೆಯಲ್ಲೂ ಕೋಟೆ ಕಟ್ಟಬೇಕು: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: 2024ರಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಬೇಕಾದರೆ ಪ್ರತಿ ಮನೆಯಲ್ಲೂ ಕೋಟೆ ಕಟ್ಟಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    2024ರಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಬೇಕಾದರೆ ಪ್ರತಿ ಮನೆಯಲ್ಲೂ ಕೋಟೆ ಕಟ್ಟಬೇಕು. ಉತ್ತರ ಪ್ರದೇಶ, ಬಿಹಾರ, ತ್ರಿಪುರಾ, ಅಸ್ಸಾಂ, ರಾಜಸ್ಥಾನ ಮತ್ತು ಹರಿಯಾಣ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಇಂತಹ ಕೋಟೆಗಳನ್ನು ನಿರ್ಮಿಸಬೇಕಾಗುತ್ತದೆ. ನೀವು ಸಕ್ರಿಯರಾಗಿರಬೇಕು. ಬೆಳಗ್ಗೆ ಒಂದು ಟ್ವೀಟ್‌ ಇದ್ದರೆ, ಮಧ್ಯಾಹ್ನ ಮತ್ತೊಂದು ವೈರಲ್‌ ಆಗಬಹುದು. ಹೀಗೆ ವ್ಯರ್ಥ ಮಾಡಲು ಸಮಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಾರಣಾಸಿಯಲ್ಲಿ EVM ಕಳವು: ಅಖಿಲೇಶ್‌ ಯಾದವ್‌ ಗಂಭೀರ ಆರೋಪ

    ಬಿಜೆಪಿ ವಿರುದ್ಧ ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂದು ಮಮತಾ ಬ್ಯಾನರ್ಜಿ ಒತ್ತಿ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪರ್ಯಾಯವಿಲ್ಲದ ಕಾರಣ ನೀವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದೀರಿ. ಪರ್ಯಾಯ ಶಕ್ತಿ ಬಂದ ಮೇಲೆ ನೀವು ಅಧಿಕಾರದಲ್ಲಿ ಉಳಿಯುವುದಿಲ್ಲ. ಪರ್ಯಾಯ ಶಕ್ತಿ ರೂಪಿಸಲು ರಾಜಕೀಯ ಪಕ್ಷಗಳು ಒಗ್ಗೂಡಬೇಕಿದೆ. ಕೇವಲ ಹೇಳಿಕೆಗಳನ್ನು ನೀಡುವುದರಿಂದ ಯಾವುದೇ ಉದ್ದೇಶವನ್ನು ಪೂರೈಸಲಾಗದು ಎಂದು ಪ್ರತಿಪಕ್ಷಗಳಿಗೆ ಸಲಹೆ ನೀಡಿದ್ದಾರೆ.

    ಒಂದು ದಶಕದಿಂದ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳವನ್ನು ಮೀರಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಲು ತೃಣಮೂಲ ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷಗಳು ಒಂದಾಗುವ ಅಗತ್ಯವಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೈಲಾದಷ್ಟು ಹೋರಾಡಿದ್ದೇವೆ, ಫಲಿತಾಂಶವನ್ನು ಕಾದು ನೋಡುತ್ತೇವೆ: ಪ್ರಿಯಾಂಕಾ ಗಾಂಧಿ

    ಮೂರು ತಿಂಗಳ ಅವಧಿಯಲ್ಲಿ ಟಿಎಂಸಿಯ ಚಿಹ್ನೆ ಹಲವು ಮನೆಗಳಿಗೆ ತಲುಪಿರುವುದು ನಮಗೆ ಸಂತಸ ತಂದಿದೆ. ನಾವು ಮೊದಲೇ ಇದನ್ನು ಪ್ರಾರಂಭಿಸಿದ್ದರೆ ಮತ್ತಷ್ಟು ಉತ್ತಮ ಫಲಿತಾಂಶ ಸಿಗುತ್ತಿತ್ತು ಎಂದು ತಿಳಿಸಿದ್ದಾರೆ.

    2024ರಲ್ಲಿ ಸಂಸತ್‌ ಹಾಗೂ 2023ರಲ್ಲಿ ರಾಜ್ಯ ಪಂಚಾಯತ್‌ ಚುನಾವಣೆಗಳು ನಡೆಯಲಿವೆ. ಹೀಗಾಗಿ ಟಿಎಂಸಿ ವರಿಷ್ಠರು ಚುನಾವಣಾ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂಬುದರ ಕುರಿತು ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಮಹಿಳೆಯರು ತಮ್ಮ ಶಕ್ತಿಯಿಂದ ಸಮಾಜವನ್ನು ಪರಿವರ್ತಿಸಬಲ್ಲರು: ರಾಹುಲ್

  • ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್‍ಗೆ ನಮ್ಮ ಬೆಂಬಲ: ಮಮತಾ ಬ್ಯಾನರ್ಜಿ

    ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್‍ಗೆ ನಮ್ಮ ಬೆಂಬಲ: ಮಮತಾ ಬ್ಯಾನರ್ಜಿ

    ಲಕ್ನೋ: ಉತ್ತರ ಪ್ರದೇಶ ಚುನಾವಣೆಯಲ್ಲಿ ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಬೆಂಬಲಿಸುತ್ತೇವೆ. ಆದರೆ ನಾವು ಬಿಜೆಪಿಯನ್ನು ಓಡಿಸಬೇಕು ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದರು.

    ಯುಪಿ ಚುನಾವಣೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಬೆಂಬಲಿಸುವುದಾಗಿ ಖಚಿತಪಡಿಸಿದರು. ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನರೇಗಾ ವಿಶ್ವಕ್ಕೆ ಮಾದರಿ: ಕೆ.ಎಸ್.ಈಶ್ವರಪ್ಪ

    Akhilesh Yadav

    ಉತ್ತರ ಪ್ರದೇಶಕ್ಕೆ ಈಗ ಚುನಾವಣೆ ದೃಷ್ಟಿಯಿಂದ ನಾವು ಹೋಗುವುದಿಲ್ಲ. ಆದರೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರನ್ನು ಬೆಂಬಲಿಸಲಿದ್ದೇವೆ. ನಮ್ಮ ಟಿಎಂಸಿ ಪಕ್ಷ 2024 ರ ಲೋಕಸಭೆ ಚುನಾವಣೆಯಲ್ಲಿ ಯುಪಿಯಿಂದ ಸ್ಪರ್ಧಿಸಲಿದೆ ಎಂದು ಹೇಳಿದರು.

    ಇತರ ರಾಜ್ಯಗಳ ಚುನಾವಣೆ ಕುರಿತು ಮಾತನಾಡುವಾಗ ಅವರು, ಹಿಂದೆ ಜನರು ಟಿಎಂಸಿ ಎಂದರೆ ಪಶ್ಚಿಮ ಬಂಗಾಳ ಎಂದು ಕರೆಯುತ್ತಿದ್ದರು. ಆದರೆ ನಾವು ನಮ್ಮ ಪಕ್ಷವನ್ನು ವಿಸ್ತರಿಸಿದ್ದೇವೆ. ದೇಶದ ಇತರ ಭಾಗಗಳಿಗೂ ನಮ್ಮ ಪಕ್ಷವನ್ನು ವಿಸ್ತರಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

    ತ್ರಿಪುರಾದಲ್ಲಿ ನಮ್ಮ ಪಕ್ಷದ ಪರವಾಗಿ 20% ಕ್ಕಿಂತ ಹೆಚ್ಚು ಮತದಾರರಿದ್ದಾರೆ. ನಾವು ಮುಂದಿನ ಎರಡು ವರ್ಷಗಳಲ್ಲಿ ಬಂಗಾಳವನ್ನು ಬಲಿಷ್ಠಗೊಳಿಸುತ್ತೇವೆ. ಇದರಿಂದ 2024 ರ ಲೋಕಸಭಾ ಚುನಾವಣೆಯಲ್ಲಿ ನಾವು ಎಲ್ಲ 42 ಸ್ಥಾನಗಳನ್ನು ಗೆಲ್ಲುತ್ತೇವೆ. ಇಲ್ಲಿಂದ ಬಿಜೆಪಿಯನ್ನು ಓಡಿಸಬೇಕು. ಟಿಎಂಸಿಯಲ್ಲಿ ಏಕರೂಪತೆ ಇದೆ. ನಾನು ಎಲ್ಲರಿಗೂ ಕೇಳಿಕೊಳ್ಳುವುದು ಇಷ್ಟೆ, ನಮ್ಮ ಪಕ್ಷವನ್ನು ಬಲಪಡಿಸಿ ಎಂದು ಮನವಿ ಮಾಡಿದರು.

    ಮೇಘಾಲಯ ಮತ್ತು ಪಂಜಾಬ್‍ನಲ್ಲಿ ಬಿಜೆಪಿಯ ಆಜ್ಞೆಯ ಮೇರೆಗೆ ಕಾಂಗ್ರೆಸ್ ಕೆಲಸ ಮಾಡುತ್ತಿರುವುದಕ್ಕೆ ನನಗೆ ಬೇಸರವಾಗಿದೆ. ನಾನು ರವೀಂದ್ರನಾಥ ಟ್ಯಾಗೋರ್ ಅವರ ಹಾದಿಯನ್ನು ಅನುಸರಿಸಲಿದ್ದೇನೆ. ಎಕ್ಲಾ ಚೋಲೋ ರೇ(ನಾವು ಏಕಾಂಗಿಯಾಗಿ ಮುಂದುವರಿಯೋಣ) ನಾವು ಹೋರಾಡಬೇಕಾಗಿದೆ ಎಂದು ಕರೆ ನೀಡಿದರು. ಇದನ್ನೂ ಓದಿ:  ಜನಸ್ನೇಹಿ ಬಜೆಟ್, ಎಲ್ಲರಿಗೂ ಸಹಾಯವಾಗುವ ಕಾರ್ಯಕ್ರಮಗಳು: ಆರ್.ಅಶೋಕ್

    ಮಮತಾ ಬ್ಯಾನರ್ಜಿ ಅವರು 1998 ರಲ್ಲಿ  ಕಾಂಗ್ರೆಸ್‍ನಿಂದ ಹೊರಬಂದ ನಂತರ ಟಿಎಂಸಿ ಪಕ್ಷ ಸ್ಥಾಪಿಸಿದರು. ಆಗಿನಿಂದ ಪಕ್ಷದ ನೇತೃತ್ವವನ್ನು ಅವರೇ ವಹಿಸಿಕೊಂಡಿದ್ದಾರೆ. 2001 ಮತ್ತು 2006 ರ ವಿಧಾನಸಭಾ ಚುನಾವಣೆಗಳಲ್ಲಿ ಎರಡು ವಿಫಲ ಪ್ರಯತ್ನಗಳ ನಂತರ, ಪಕ್ಷವು 2011 ರಲ್ಲಿ ಅಧಿಕಾರಕ್ಕೆ ಬಂದಿತು. ರಾಜ್ಯ ವಿಧಾನಸಭೆಯ 294 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗಳಿಸಿದ ನಂತರ ಕಳೆದ ವರ್ಷ ಮೇ ತಿಂಗಳಲ್ಲಿ ಅಧಿಕಾರಕ್ಕೆ ಮತ್ತೆ ಬಂದಿತು.

  • ನೇತಾಜಿ ಕಾರ್ಯಕ್ರಮದಲ್ಲಿ TMC, BJP ಬೆಂಬಲಿಗರ ನಡುವೆ ಘರ್ಷಣೆ – ಕಲ್ಲು ತೂರಾಟ, 2 ಕಾರು ಧ್ವಂಸ

    ನೇತಾಜಿ ಕಾರ್ಯಕ್ರಮದಲ್ಲಿ TMC, BJP ಬೆಂಬಲಿಗರ ನಡುವೆ ಘರ್ಷಣೆ – ಕಲ್ಲು ತೂರಾಟ, 2 ಕಾರು ಧ್ವಂಸ

    ಕೋಲ್ಕತ್ತಾ: ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನವಾದ ಕಾರಣ ಎಲ್ಲೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಕೋಲ್ಕತ್ತಾ ಬಳಿಯ ಪಶ್ಚಿಮ ಬಂಗಾಳದ ಭಟ್ಪರಾ ಪಟ್ಟಣದಲ್ಲಿ ನೇತಾಜಿ ಕಾರ್ಯಕ್ರಮದಲ್ಲಿ ನಡೆಯುತ್ತಿ ವೇಳೆ ಟಿಎಂಸಿ (ತೃಣಮೂಲ ಕಾಂಗ್ರೆಸ್) ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿದೆ.

    ಭಾಟ್ಪಾರಾದಲ್ಲಿ ನೇತಾಜಿಗೆ ಪುಷ್ಪ ನಮನ ಸಲ್ಲಿಸುತ್ತಿದ್ದಾಗ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಮೇಲೆ ಕಲ್ಲು ತೂರಿದರು. ಪರಿಣಾಮ ಈ ಘರ್ಷಣೆಯನ್ನು ತಡೆಯಲು ಅರ್ಜುನ್ ಸಿಂಗ್ ಅವರ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಬ್ಯಾರಕ್‍ಪುರ ಸಂಸದ ಅರ್ಜುನ್ ಸಿಂಗ್ ಆರೋಪಿಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಫಾರ್ಮ್‍ಹೌಸ್‍ನಲ್ಲಿ ಸೆಲೆಬ್ರಿಟಿಗಳ ಶವ, ಮಕ್ಕಳ ಕಳ್ಳ ಸಾಗಾಣಿಕೆ ನಡೆಯುತ್ತೆ ಎಂದ ನೆರೆಮನೆಯವ!

    ಈ ಗಲಾಟೆಯ ವೇಳೆ ಪೊಲೀಸ್ ವಾಹನ ಸೇರಿದಂತೆ ಎರಡು ಕಾರುಗಳನ್ನು ಧ್ವಂಸಗೊಳಿಸಲಾಗಿದೆ. ಬಿಜೆಪಿ ಸಂಸದರನ್ನು ರಕ್ಷಿಸಿ ಸುರಕ್ಷಿತವಾಗಿ ಅವರ ನಿವಾಸಕ್ಕೆ ಕಳುಹಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಧ್ರುಬಾ ಜ್ಯೋತಿ ಡೇ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಜೊತೆಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದರು.

    ಏನಿದು ಘಟನೆ?
    ಈ ಕುರಿತು ಅರ್ಜುನ್ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇಂದು ಬೆಳಗ್ಗೆ 10:30ಕ್ಕೆ, ನಮ್ಮ ಶಾಸಕ ಪವನ್ ಸಿಂಗ್ ನೇತಾಜಿಗೆ ಶ್ರದ್ಧಾಂಜಲಿ ಸಲ್ಲಿಸಲು ಹೋಗಿದ್ದರು. ಟಿಎಂಸಿಯ ಕಾರ್ಯಕರ್ತರು ಅವರ ಮೇಲೆ ದಾಳಿ ಮಾಡಿದ್ದು, ಅವರ ಮೇಲೆ ಗುಂಡು ಹಾರಿಸಿದರು. ಇಟ್ಟಿಗೆಗಳನ್ನು ಎಸೆದು ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ನಾನು ಅಲ್ಲಿಗೆ ಹೋದಾಗ ನನ್ನ ಮೇಲೂ ದಾಳಿ ಮಾಡಿದರು. ನನ್ನ ಕಾರಿನ ಮೇಲೆಯೂ ದಾಳಿ ಮಾಡಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಜಿಲ್ಲೆಗೊಂದು ಮಠ ಮಾಡಲಿ ಮೂರನೇ ಪಂಚಮಸಾಲಿ ಪೀಠಕ್ಕೆ ನಮ್ಮ ಬೆಂಬಲ: ವಚನಾನಂದ ಸ್ವಾಮೀಜಿ

    ಶನಿವಾರ ರಾತ್ರಿ, ಪಾನಿಹಟಿ ಪ್ರದೇಶದ ಬಿಟಿ ರಸ್ತೆಯಲ್ಲಿರುವ ಟಿಎಂಸಿ ಪಕ್ಷದ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ಬಾಂಬ್‍ಗಳನ್ನು ಎಸೆದು ದಾಳಿ ಮಾಡಿದ್ದಾರೆ. ಈ ಹಿನ್ನೆಲೆ ಅವರು ಬಿಜೆಪಿ ಮೇಲೆ ದಾಳಿ ಮಾಡಿಸಿದ್ದಾರೆ. ಎರಡೂ ಘಟನೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಇನ್ನೂ ಯಾರನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದರು.