Tag: ಟಿಎಂಸಿ

  • ಟಿಎಂಸಿಯ 21 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಆದರೆ ಬಿಜೆಪಿಯಲ್ಲಿ ಆಕ್ಷೇಪವಿದೆ: ಮಿಥುನ್ ಚಕ್ರವರ್ತಿ

    ಟಿಎಂಸಿಯ 21 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಆದರೆ ಬಿಜೆಪಿಯಲ್ಲಿ ಆಕ್ಷೇಪವಿದೆ: ಮಿಥುನ್ ಚಕ್ರವರ್ತಿ

    ಕೋಲ್ಕತ್ತಾ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ (TMC) 21 ಶಾಸಕರು (MLA) ತಮ್ಮೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ (BJP) ನಾಯಕ ಮತ್ತು ನಟ ಮಿಥುನ್ ಚಕ್ರವರ್ತಿ (Mithun Chakraborty) ಮತ್ತೊಮ್ಮೆ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ.

    ಕೋಲ್ಕತ್ತಾದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಿಥುನ್ ಚಕ್ರವರ್ತಿ, 21 ಟಿಎಂಸಿ ಶಾಸಕರು ಇನ್ನೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ನಾನು ಇದನ್ನು ಮೊದಲೇ ಹೇಳಿದ್ದೇನೆ. ಮತ್ತೆ ಮತ್ತೆ ಹೇಳುತ್ತಿದ್ದೇನೆ ಎಂದು ಹೇಳಿದರು.

    ಟಿಎಂಸಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದರೂ ಅವರನ್ನು ತೆಗೆದುಕೊಳ್ಳುವ ಬಗ್ಗೆ ನಮ್ಮ ಪಕ್ಷದೊಳಗೆ ಆಕ್ಷೇಪಗಳಿವೆ ಎಂದು ನನಗೆ ತಿಳಿದಿದೆ. ಕೊಳೆತ ಆಲೂಗಡ್ಡೆಯನ್ನು ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಹಲವರು ಹೇಳಿದ್ದಾರೆ. ಆದರೆ ನಾನು ಇದನ್ನು ಹೇಳುವುದಿಲ್ಲ. ಹಾಗೂ ಅದೇ ತಪ್ಪನ್ನು ಮತ್ತೆ ಪುನರಾವರ್ತಿಸುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 30 ಕೇಸ್‌ ಎದುರಿಸಿದ್ದೇವೆ, ಯಾವನಿಗೂ ಹೆದರಿ ಓಡಿ ಹೋಗುವ ಪ್ರಶ್ನೆಯೇ ಇಲ್ಲ: ವಿಜಯೇಂದ್ರ

    ಇತ್ತೀಚೆಗೆ ಮಿಥುನ್ ಚಕ್ರವರ್ತಿ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಿ, ಟಿಎಂಸಿ ಶಾಸಕರು ತಮ್ಮ ಸಂಪರ್ಕದಲ್ಲಿರುವ ಬಗ್ಗೆ ತಿಳಿಸಿದ್ದರು. ಅವರು 21ಕ್ಕೂ ಹೆಚ್ಚು ಶಾಸಕರು ಸಂಪರ್ಕದಲ್ಲಿದ್ದಾರೆ ಆದರೆ ನಿಖರವಾದ ಸಂಖ್ಯೆ ತಿಳಿಸಲು ಸಾಧ್ಯವಿಲ್ಲ ಎಂದಿದ್ದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಸರ್ಕಾರ ಉರುಳಿಸುವ ಶಕ್ತಿ ಇದೆ – ಸತೀಶ್ ಜಾರಕಿಹೊಳಿ

    Live Tv
    [brid partner=56869869 player=32851 video=960834 autoplay=true]

  • ಮೋದಿ ತನಿಖಾ ಸಂಸ್ಥೆಗಳನ್ನು ಛೂ ಬಿಡುವ ಕೆಲಸ ಮಾಡಲ್ಲ: ಮಮತಾ ಮೃದು ಮಾತು

    ಮೋದಿ ತನಿಖಾ ಸಂಸ್ಥೆಗಳನ್ನು ಛೂ ಬಿಡುವ ಕೆಲಸ ಮಾಡಲ್ಲ: ಮಮತಾ ಮೃದು ಮಾತು

    ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಸತತವಾಗಿ ದಾಳಿ ನಡೆಸುತ್ತಿದ್ದ ಪಶ್ಚಿಮ ಬಂಗಾಳದ (West Bengal) ಸಿಎಂ ಮಮತಾ ಬ್ಯಾನರ್ಜಿ (Mamata BanerJee) ಇಂದು ಮೃದು ಮಾತುಗಳನ್ನಾಡಿದ್ದು, ಅಚ್ಚರಿ ಮೂಡಿಸಿದ್ದಾರೆ.

    MAMATHA BANERJEE

    ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ (CBI) ಹಾಗೂ ಇ.ಡಿ ಯನ್ನು ರಾಜ್ಯ ಪ್ರವೇಶಿಸದಂತೆ ನಿರ್ಬಂಧಿಸುವ ಕುರಿತಾದ ನಿರ್ಣಯವನ್ನು ಇಂದು ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ (Rahul Gandhi), ಅರವಿಂದ್ ಕೇಜ್ರಿವಾಲ್ ಮುಂತಾದ ಅನೇಕ ವಿಪಕ್ಷಗಳ ನೇತಾರರು ಪ್ರಧಾನಿಯವರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ತಮ್ಮ ವಿರೋಧಿಗಳನ್ನು ಹದ್ದುಬಸ್ತಿನಲ್ಲಿ ಇಡಲು ಬಳಸುತ್ತಾರೆ ಎಂದು ಆರೋಪಿಸಿದರು. ಇದನ್ನೂ ಓದಿ:  ರಾಹುಲ್ ಗಾಂಧಿಯೇ ಮುಂದಿನ ಕಾಂಗ್ರೆಸ್ ಅಧ್ಯಕ್ಷ – TNCC ಸಭೆ ನಿರ್ಣಯ

    ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ವಿರುದ್ಧ ಛೂ ಬಿಡುತ್ತಿರುವ ಹಿಂದೆ, ಪ್ರಧಾನಿ ಮೋದಿಯವರ ಹಸ್ತಕ್ಷೇಪವಿಲ್ಲ ಎಂದೆನಿಸುತ್ತದೆ. ಈ ಷಡ್ಯಂತ್ರದ ಹಿಂದೆ, ಬಿಜೆಪಿಯ ಪ್ರತ್ಯೇಕ ತಂಡವೊಂದಿದೆ ಎಂದೆನಿಸುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಪ್ರಧಾನಿ ಬಗ್ಗೆ ಮೃದುವಾಗಿಯೇ ಮಾತನಾಡಿದ ಮಮತಾ ಬ್ಯಾನರ್ಜಿ, ಜಾರಿ ನಿರ್ದೇಶನಾಲಯ (ED), ಸಿಬಿಐ (ಕೇಂದ್ರೀಯ ತನಿಖಾ ದಳ) ಹಾಗೂ ಇನ್ನಿತರ ತನಿಖಾ ಸಂಸ್ಥೆಗಳನ್ನು ಪ್ರಧಾನಿ ಮೋದಿಯವರು, ತಮ್ಮ ವಿರೋಧಿಗಳನ್ನು ನಿಯಂತ್ರಣದಲ್ಲಿ ಇಡಲು ಬಳಸಿಕೊಳ್ಳುತ್ತಿದ್ದಾರೆ ಎಂದು ನನಗನ್ನಿಸುತ್ತಿಲ್ಲ ಎಂದು ಹೇಳಿದರು.

    ಇಡಿ, ಸಿಬಿಐ (CBI) ತನಿಖಾ ಸಂಸ್ಥೆಗಳ ದುರುಪಯೋಗದಿಂದ ಅನೇಕ ಉದ್ಯಮಿಗಳು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಆದರೆ ಇದನ್ನು ಮೋದಿ ಮಾಡಿಲ್ಲ ಎಂದು ನಾನು ನಂಬುತ್ತೇನೆ. ಆಗಾಗ್ಗೆ ನಿಜಾಮ್ ಅರಮನೆಗೆ ಹೋಗುವ ಕೆಲವು ಬಿಜೆಪಿ ನಾಯಕರು (BJP Leader) ಹೀಗೆ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು, ಕೇಂದ್ರ ಸಚಿವ ಅಮಿತ್ ಶಾ (Amit Shah) ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದರು.

    ಅಂದಹಾಗೆ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ನಿರ್ಬಂಧಿಸುವ ಕುರಿತಾಗಿ ಮಮತಾ ಬ್ಯಾನರ್ಜಿಯವರ ಸರ್ಕಾರ ಮಂಡಿಸಿದ್ದ ಠರಾವಿಗೆ, ವಿಧಾನಸಭೆಯಲ್ಲಿ ಮತದಾನ ನಡೆಸಲಾಗಿದ್ದು, ಅದರಲ್ಲಿ ಠರಾವು ಪರವಾಗಿ 189 ಮತಗಳು ಹಾಗೂ ವಿರುದ್ಧವಾಗಿ 69 ಮತಗಳು ಬಂದಿವೆ.

    Live Tv
    [brid partner=56869869 player=32851 video=960834 autoplay=true]

  • ದೀದಿ ವಿರುದ್ಧ ಬಿಜೆಪಿ ಪ್ರತಿಭಟನೆ – ಪೊಲೀಸರಿಂದ ಜಲಫಿರಂಗಿ ಅಸ್ತ್ರ ಬಳಕೆ

    ದೀದಿ ವಿರುದ್ಧ ಬಿಜೆಪಿ ಪ್ರತಿಭಟನೆ – ಪೊಲೀಸರಿಂದ ಜಲಫಿರಂಗಿ ಅಸ್ತ್ರ ಬಳಕೆ

    ಕೋಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿಯಿಂದ(BJP) ಇಂದು ಬೃಹತ್ ಪ್ರತಿಭಟನೆ(Protest) ನಡೆಯಿತು. ಆದರೆ ಸರ್ಕಾರ ಈ ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ, ಪರಿಣಾಮ ಇಂದು ಕೋಲ್ಕತ್ತಾದಲ್ಲಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ದೊಡ್ಡ ಸಂಘರ್ಷ ನಡೆಯಿತು.

    ಕೋಲ್ಕತ್ತಾ(Kolkata) ನಗರದಲ್ಲಿ ಟಿಎಂಸಿ(TMC) ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಬಿಜೆಪಿ ಇಂದು ನಬಣ್ಣ ಚಲೋ ಹೆಸರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಕಾರ್ಯಕರ್ತರಿಗೆ ಬುಲಾವ್ ನೀಡಲಾಗಿತ್ತು. ಬಸ್, ರೈಲು, ಖಾಸಗಿ ವಾಹನಗಳ ಮೂಲಕ ಕೋಲ್ಕತ್ತಾ ನಗರವನ್ನು ಪ್ರವೇಶ ಮಾಡಲು ಪ್ರಯತ್ನಿಸಿದರು. ಆದರೆ ಪ್ರತಿಭಟನೆಗೆ ಸರ್ಕಾರ ಅನುಮತಿ ನೀಡದ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಕರ್ತರ ಪ್ರವೇಶ ನಿರ್ಬಂಧಿಸಿದರು. ಆದರೂ ಬಿಜೆಪಿ ಧ್ವಜ ಹಿಡಿದು ಕಾರ್ಯಕರ್ತರು ನುಗ್ಗಿ ಬಂದಿದ್ದಾರೆ. ಈ ವೇಳೆ ಕಾರ್ಯಕರ್ತರನ್ನು ಚೆದುರಿಸಲು ಪೊಲೀಸರ ಲಾಠಿ ಜಾರ್ಜ್ ನಡೆದಿದೆ. ಅಷ್ಟೇ ಅಲ್ಲದೇ ಪರಿಸ್ಥಿತಿ ನಿಯಂತ್ರಣಕ್ಕೆ ಜಲಫಿರಂಗಿ ಅಸ್ತ್ರವನ್ನು ಉಪಯೋಗಿಸಲಾಯಿತು.

    ಕೋಲ್ಕತ್ತಾಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಪನಾಗಢ್, ದುರ್ಗಾಪುರ್, ರಾಣಿಗಂಜ್ ರೈಲ್ವೆ ನಿಲ್ದಾಣ ಸೇರಿದಂತೆ ಬೇರೆ ನಿಲ್ದಾಣಗಳಲ್ಲಿ ಬಂಧಿಸಲಾಯಿತು. ಪೊಲೀಸರು ಕೋಲ್ಕತ್ತಾ ರೈಲ್ವೆ ನಿಲ್ದಾಣದಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆ ಹಿಡಿದರು. ರಾಣಿಗಂಜ್ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕರ್ತರನ್ನು ತಡೆದ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ದುರ್ಗಾಪುರ್ ರೈಲ್ವೆ ನಿಲ್ದಾಣದಲ್ಲಿ ಸುಮಾರು 20 ಮಂದಿ ಬಿಜೆಪಿ ಕಾರ್ಯಕರ್ತರನ್ನು ತಡೆದು ನಿಲ್ಲಿಸಲಾಯಿತು. ಈ ವೇಳೆ ಪೊಲೀಸರು, ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದನ್ನೂ ಓದಿ: ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ನಲಪಾಡ್‌ ಅಕಾಡೆಮಿಗೆ ಜೆಸಿಬಿ ಗುನ್ನಾ!

    POLICE JEEP

    ಇದೇ ಸಂದರ್ಭದಲ್ಲಿ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ, ಪಕ್ಷದ ನಾಯಕ ರಾಹುಲ್ ಸಿನ್ಹಾ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಒಟ್ಟಿನಲ್ಲಿ ಟಿಎಂಸಿ ವಿರುದ್ಧ ಬಿಜೆಪಿ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಿದರೇ ಇತ್ತ ದೀದಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಿದೇ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ಹೂಡಿಕೆಯ ಸೆಮಿಕಂಡಕ್ಟರ್‌ ಘಟಕ ತನ್ನದಾಗಿಸಿಕೊಂಡ ಗುಜರಾತ್‌

    Live Tv
    [brid partner=56869869 player=32851 video=960834 autoplay=true]

  • ಸುವೆಂದು ಅಧಿಕಾರಿಗೆ ಕಪ್ಪು ಬಾವುಟ ಪ್ರದರ್ಶನ – ಟಿಎಂಸಿ, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

    ಸುವೆಂದು ಅಧಿಕಾರಿಗೆ ಕಪ್ಪು ಬಾವುಟ ಪ್ರದರ್ಶನ – ಟಿಎಂಸಿ, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

    ಕೋಲ್ಕತ್ತಾ: ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ನಡೆದ ರ್‍ಯಾಲಿ ವೇಳೆ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರಿಗೆ ಕಪ್ಪು ಬಾವುಟವನ್ನು ತೋರಿಸಿದ ಹಿನ್ನೆಲೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ.

    ಘಟನೆ ವೇಳೆ ಸುಮಾರು 10 ಮಂದಿ ಗಾಯಗೊಂಡಿದ್ದು, ಈ ಪೈಕಿ ಮೂವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ತಾರಕೇಶ್ವರ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಳು ಮಂದಿಗೆ ಪ್ರಥಮ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ. ಇದನ್ನೂ ಓದಿ: ಸಮಸ್ತ್ರದಲ್ಲೇ ಮಲ ವಿಸರ್ಜನೆ ಮಾಡಿದ್ದಕ್ಕೆ ಬಾಲಕನ ಮೇಲೆ ಬಿಸಿನೀರು ಸುರಿದ ಶಿಕ್ಷಕ

    ಬಿಜೆಪಿ ನಾಯಕ ಸುವೇಂದು ಅಧಿಕಾರಿ ತಾರಕೇಶ್ವರಕ್ಕೆ ರಾಜಕೀಯ ಸಭೆಯನ್ನುದ್ದೇಶಿಸಿ ಮಾತನಾಡಲು ಮುಂದಾದಾಗ ಟಿಎಂಸಿ ವ್ಯಕ್ತಿಗಳು ಕಪ್ಪು ಬಾವುಟವನ್ನು ತೋರಿಸಿದ್ದು, ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: 12 ವರ್ಷಗಳ ಬಳಿಕ ಕೋಡಿ ಬಿದ್ದ ಬೃಹತ್ ಕೆರೆ – ರೈತರ ಮೊಗದಲ್ಲಿ ಮಂದಹಾಸ

    ಈ ಕುರಿತಂತೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು, ಕಪ್ಪು ಬಾವುಟ ತೋರಿಸಿ ಗಲಾಟೆ ಹಬ್ಬಿಸಿದ್ದರು. ಇದರಿಂದ ಗುಂಪು ಚದುರಿಸಿ ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಡುವಂತಾಯಿತು. ಅಲ್ಲದೇ ಘಟನೆಯಲ್ಲಿ ಹಿರಿಯ ನಾಯಕ ರಾಹುಲ್ ಸಿನ್ಹಾ ಅವರು ಮೇಲೂ ಕಲ್ಲು ತೂರಾಟ ನಡೆಸಲಾಗಿದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಣದ ವಿಚಾರಕ್ಕೆ ಟಿಎಂಸಿ ಬೆಂಬಲಿಗನನ್ನು ಹಿಗ್ಗಾಮುಗ್ಗಾ ಥಳಿಸಿದ ಬಿಜೆಪಿ ಮುಖಂಡ

    ಹಣದ ವಿಚಾರಕ್ಕೆ ಟಿಎಂಸಿ ಬೆಂಬಲಿಗನನ್ನು ಹಿಗ್ಗಾಮುಗ್ಗಾ ಥಳಿಸಿದ ಬಿಜೆಪಿ ಮುಖಂಡ

    ಕೋಲ್ಕತ್ತಾ: ಹಣ ನೀಡದೇ ವಂಚಿಸಿದ್ದಕ್ಕೆ ಟಿಎಂಸಿ ಕಾರ್ಯಕರ್ತನನ್ನು ಬಿಜೆಪಿ ಯುವ ಘಟಕದ ಮುಖಂಡರೊಬ್ಬರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಶನಿವಾರ ಕೋಲ್ಕತ್ತಾದ ಐಸಿಸಿಆರ್ ಸಭಾಂಗಣದಲ್ಲಿ ‘ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕ ಕುರಿತಂತೆ ಚರ್ಚೆ ನಡೆಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರ ಭಾಷಣ ಮುಗಿಯುತ್ತಿದ್ದಂತೆ ಬಿಜೆಪಿ ಯುವ ಮುಖಂಡ ಅಭಿಜಿತ್ ನಹಾ ಅವರು, ರಾಯ್ ಚೌಧರಿ ಎಂಬವರನ್ನು ಸಭಾಂಗಣದ ಹೊರಗೆ ಎಳೆದುಕೊಂಡು ಹೋಗಿ ಥಳಿಸಿದ್ದಾರೆ. ಈ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ತೃಣಮೂಲ ಕಾಂಗ್ರೆಸ್ ಬೆಂಬಲಿಗನಾಗಿರುವ ರಾಯ್ ಚೌಧರಿ ತನ್ನ ಬಳಿ ಹಣ ಪಡೆದು ವಂಚಿಸಿದ್ದಾನೆ. ಅಲ್ಲದೇ ತನ್ನ ಪಕ್ಷದಲ್ಲಿ ಇಲ್ಲದೇ ಇರುವ ಇತರರ ಬಳಿಯೂ ಹಣ ಪಡೆದು ಹಿಂತಿರುಗಿಸಿಲ್ಲ. ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ಹಣ ಪಡೆದು ಹೀಗೆ ಹಲವರಿಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಡ್ಯೂಟಿ ಬಿಟ್ಟು ಸಮವಸ್ತ್ರದಲ್ಲೇ ಬ್ಯೂಟಿ ಕಡೆ ವಾಲಿ ಕೆಲಸ ಕಳೆದುಕೊಂಡ ಇನ್ಸ್‌ಪೆಕ್ಟರ್!

    ರಾಯ್ ಚೌಧರಿ ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಬಿಜೆಪಿ ನಾಯಕ ಸಮಿಕ್ ಭಟ್ಟಾಚಾರ್ಯ ಅವರನ್ನು ಭೇಟಿಯಾಗಲು ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಈ ವೇಳೆ ಘಟನೆ ಜರುಗಿದೆ. ಅಲ್ಲದೇ ಚೌಧರಿ ಅವರ ಪರಿಚಯವಿರುವುದಾಗಿ ಸಮಿಕ್ ಭಟ್ಟಾಚಾರ್ಯರು ಸಹ ಒಪ್ಪಿಕೊಂಡರು. ಇದನ್ನೂ ಓದಿ: ಮಲಗಿದ್ದ ತಾಯಿಯ ಪಕ್ಕದಿಂದ ಮಗು ಕದ್ದು ಓಡಿದ – ಖತರ್ನಾಕ್ ಕಳ್ಳನ ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಟಿಎಂಸಿ ನಾಯಕನಿಗೆ ಶೂನಲ್ಲಿ ಹೊಡೆಯುತ್ತೇವೆ: ವಿವಾದ ಸೃಷ್ಟಿಸಿದ ದಿಲೀಪ್ ಘೋಷ್ ಹೇಳಿಕೆ

    ಟಿಎಂಸಿ ನಾಯಕನಿಗೆ ಶೂನಲ್ಲಿ ಹೊಡೆಯುತ್ತೇವೆ: ವಿವಾದ ಸೃಷ್ಟಿಸಿದ ದಿಲೀಪ್ ಘೋಷ್ ಹೇಳಿಕೆ

    ಕೋಲ್ಕತ್ತಾ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅವರು, ತಮ್ಮ ಪಕ್ಷದ ವಿರೋಧಿಗಳನ್ನು ಟೀಕಿಸಿ ಭಾಷಣ ಮಾಡುವ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸುಗತ ರಾಯ್ ಬೂಟುಗಳಿಂದ ಹೊಡೆತ ತಿನ್ನಬೇಕಾಗುತ್ತದೆ ಎಂದು ಹೇಳುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

    ಬಿಜೆಪಿ ನಾಯಕರಿಗೆ ಔಪಚಾರಿಕ ಶಿಕ್ಷಣ ಸಿಕ್ಕಿಲ್ಲ ಎಂದು ಸುಗತ ರಾಯ್ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ದಿಲೀಪ್ ಘೋಷ್ ಅವರು, ಬಿಜೆಪಿ ಪಕ್ಷದ ಬೆಂಬಲ ಕಳೆದುಕೊಂಡ ನಂತರ ಅವರು ಟಿಎಂಸಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣೆ ಹಿನ್ನೆಲೆಯಲ್ಲಿ ಸದ್ಯದಲ್ಲೇ ದಿಲೀಪ್ ಘೋಷ್ ಬಿಜೆಪಿ ಬಿಟ್ಟು ಟಿಎಂಸಿ ಸೇರಲು ಪ್ಲಾನ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪತ್ನಿ ಜೊತೆಗೆ ದೇವಾಲಯಕ್ಕೆ ರಿಷಿ ಸುನಕ್ ಭೇಟಿ

    ಟಿಎಂಸಿಯ ನಾಯಕರಾದ ಪಾರ್ಥ ಚಟರ್ಜಿ ಮತ್ತು ಅನುಬ್ರತಾ ಮೊಂಡಲ್ ಅವರನ್ನು ಬೇರೆ, ಬೇರೆ ಪ್ರಕರಣಗಳಲ್ಲಿ ಬಂಧಿಸಿದ ನಂತರ ಸುಗತ ರಾಯ್ ಪ್ರತಿಭಟನೆಯ ನೆಪದಲ್ಲಿ ಪಕ್ಷವನ್ನು ಕೆಡಿಸುವ ಮೂಲಕ ತಪ್ಪಿಸಿಕೊಳ್ಳಬಹುದು ಎಂದು ಅಂದುಕೊಂಡಿರುವವರ ಚರ್ಮವನ್ನು ಸುಲಿದು ಶೂಗಳನ್ನು ತಯಾರಿಸಲಾಗುವುದು ಎಂದು ಹೇಳಿದ್ದರು. ವಿರೋಧ ಪಕ್ಷವಾದ ಬಿಜೆಪಿ ವಿರುದ್ಧ ಟೀಕಿಸುವವರು ಕೊನೆಗೆ ಅವರೇ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.

    ಸೌಗತಾ ರಾಯ್ ಒಬ್ಬ ಹಿರಿಯ ರಾಜಕಾರಣಿ. ಅವರು ಒಂದು ಕಾಲದಲ್ಲಿ ಪ್ರಾಧ್ಯಾಪಕರಾಗಿದ್ದರು. ಆದರೆ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಭಾಷೆ ಸರಿಯಿಲ್ಲ. ಚರ್ಮ ಸುಲಿದು ಶೂ ತಯಾರಿಸಲಾಗುವುದು ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳುತ್ತಿದ್ದಾರೆ. ಜನ ಅವರಿಗೆ ಚಪ್ಪಲಿಯಿಂದ ಹೊಡೆಯುವ ದಿನ ದೂರವಿಲ್ಲ. ರಾಜ್ಯದ ವಿವಿಧೆಡೆ ಟಿಎಂಸಿ ನಾಯಕರನ್ನು ಶೂಗಳಿಂದ ಥಳಿಸಲಾಗುವುದು ಎಂದು ಘೋಷ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಮುಗಿಸಲಾಗುವುದು- ಎನ್‍ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆಗೆ ಜೀವ ಬೆದರಿಕೆ

    ಈ ಬಗ್ಗೆ ಮಾತನಾಡಿದ ಸುಗತ ರಾಯ್, ದಿಲೀಪ್ ಘೋಷ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಔಪಚಾರಿಕ ಶಿಕ್ಷಣವಿಲ್ಲದ ವ್ಯಕ್ತಿ ಏನು ಹೇಳುತ್ತಿದ್ದಾರೆ ಎಂಬುದರ ಕುರಿತು ಪ್ರತಿಕ್ರಿಯಿಸುವುದು ನನ್ನ ಘನತೆಗೆ ತಕ್ಕದ್ದಲ್ಲ. ದಿಲೀಪ್ ಘೋಷ್ ಅವರಿಗೆ ಬಿಜೆಪಿ ನಾಯಕತ್ವದ ವಿಶ್ವಾಸವಿಲ್ಲದ ಕಾರಣ ನಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಶಾಲಾ ನೇಮಕಾತಿ ವಂಚನೆಯಲ್ಲಿನ ಅಕ್ರಮಕ್ಕಾಗಿ ಪಾರ್ಥ ಚಟರ್ಜಿ ಅವರನ್ನು ಇಡಿ ಬಂಧಿಸಿತ್ತು. ದನ ಕಳ್ಳಸಾಗಣೆ ಪ್ರಕರಣದಲ್ಲಿ ಅನುಬ್ರತಾ ಮೊಂಡಲ್ ಅವರನ್ನು ಸಿಬಿಐ ಬಂಧಿಸಿತ್ತು. ಇವರಿಬ್ಬರ ಬಂಧನದ ನಂತರ ಬಿಜೆಪಿ ಮತ್ತು ಟಿಎಂಸಿ ನಾಯಕರ ನಡುವೆ ಈ ಕೆಸರೆರಚಾಟ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಜಾನುವಾರು ಅಕ್ರಮ ಸಾಗಣೆ ಪ್ರಕರಣ – ಟಿಎಂಸಿ ಹಿರಿಯ ನಾಯಕನಿಗೆ ಸಿಬಿಐ ಸಮನ್ಸ್‌

    ಜಾನುವಾರು ಅಕ್ರಮ ಸಾಗಣೆ ಪ್ರಕರಣ – ಟಿಎಂಸಿ ಹಿರಿಯ ನಾಯಕನಿಗೆ ಸಿಬಿಐ ಸಮನ್ಸ್‌

    ಕೋಲ್ಕತ್ತಾ: ಜಾನುವಾರು ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಿರಿಯ ನಾಯಕ ಅನುಬ್ರತಾ ಮೊಂಡಲ್‌ಗೆ ಸಿಬಿಐ ಸಮನ್ಸ್‌ ನೀಡಿದೆ.

    ಅನಾರೋಗ್ಯ ಕಾರಣ ನೆಪ ಹೇಳಿ ಸೋಮವಾರ ಸಿಬಿಐ ಅಧಿಕಾರಿಗಳನ್ನು ಭೇಟಿ ಮಾಡದೆಯೇ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದ ಮೊಂಡಲ್ ಅವರನ್ನು ಬುಧವಾರ ಕೇಂದ್ರ ಏಜೆನ್ಸಿಯ ಅಧಿಕಾರಿಗಳ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಬೋಲ್ಪುರ್‌ನಲ್ಲಿರುವ ಮೊಂಡೊಲ್‌ ನಿವಾಸಕ್ಕೆ ನೋಟಿಸ್‌ ನೀಡಲು ಸಿಬಿಐ ಅಧಿಕಾರಿಗಳು ಹೋಗಿದ್ದಾರೆ. ಇದನ್ನೂ ಓದಿ: ಮೂರು ದಿನದಲ್ಲಿ ಯೋಗಿ ಮೇಲೆ ಬಾಂಬ್‌ ದಾಳಿ – ಕಂಟ್ರೋಲ್‌ ರೂಂಗೆ ಸಂದೇಶ

    ಇಂದು ಅನುಬ್ರತಾ ಮೊಂಡಲ್‌ಗೆ ಅಗತ್ಯ ಸೂಚನೆ ನೀಡಲಾಗುವುದು. ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ನಿಜಾಮ್ ಅರಮನೆ ಕಚೇರಿಗೆ ಬರುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಕೇಂದ್ರ ತನಿಖಾ ಸಂಸ್ಥೆಯು ಸೋಮವಾರ ವಿಚಾರಣೆಗೆ ಹಾಜರಾಗಲು ಆಗಸ್ಟ್ 5 ರಂದು ಟಿಎಂಸಿಯ ಬಿರ್ಭುಮ್ ಜಿಲ್ಲಾಧ್ಯಕ್ಷ ಮೊಂಡಲ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ ವೈದ್ಯಕೀಯ ತಪಾಸಣೆಯ ಕಾರಣಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿ ಮೊಂಡೆಲ್‌ ಇ-ಮೇಲ್‌ ಮಾಡಿದ್ದರು. ಇದನ್ನೂ ಓದಿ: ಮಹಿಳೆ ನಿಂದನೆ, ಹಲ್ಲೆ ಆರೋಪ – ಬಿಜೆಪಿ ನಾಯಕ ಅರೆಸ್ಟ್‌

    ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಕೆಲವು ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ ನಂತರ ಮೊಂಡಲ್‌ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಇದಾದ ಬಳಿಕ ಇಬ್ಬರು ಸಿಬಿಐ ಅಧಿಕಾರಿಗಳು ಸೋಮವಾರ ಸಂಜೆ ಮೊಂಡಲ್ ಅವರ ಚಿನಾರ್ ಪಾರ್ಕ್ ನಿವಾಸಕ್ಕೆ ಹೋಗಿದ್ದರು. ಆದರೆ ಟಿಎಂಸಿ ನಾಯಕ ಆ ಹೊತ್ತಿಗೆ ಬೋಲ್ಪುರಕ್ಕೆ ಹೋಗಿದ್ದರು.

    ಮೊಂಡಲ್ ಅವರನ್ನು ಕೇಂದ್ರ ತನಿಖಾ ದಳ ಎರಡು ಬಾರಿ ಪ್ರಶ್ನಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿತು. ಅವರ ಅಂಗರಕ್ಷಕ ಸೈಗಲ್ ಹುಸೇನ್‌ನನ್ನು ತನಿಖಾ ಸಂಸ್ಥೆ ಬಂಧಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಲೆ ಏರಿಕೆ ವಿರೋಧಿಸಿ ಸದನದಲ್ಲಿ ಹಸಿ ಬದನೆಕಾಯಿ ತಿಂದ ಸಂಸದೆ

    ಬೆಲೆ ಏರಿಕೆ ವಿರೋಧಿಸಿ ಸದನದಲ್ಲಿ ಹಸಿ ಬದನೆಕಾಯಿ ತಿಂದ ಸಂಸದೆ

    ನವದೆಹಲಿ: ಬೆಲೆ ಏರಿಕೆ ವಿರೋಧಿಸಿ ತೃಣಮೂಲ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಲೋಕಸಭೆಯಲ್ಲಿ ಎದ್ದು ನಿಂತು ಹಸಿ ಬದನೆಕಾಯಿಯನ್ನು ತಿಂದಿದ್ದಾರೆ.

    ಮಳೆಗಾಲದ ಸಂಸತ್ ಅಧಿವೇಶನ ಶುರುವಾಗಿ ಎರಡು ವಾರ ಮುಗಿದ ನಂತರ ಸುಗಮ ಕಲಾಪ ನಡೆದಿದೆ. ಕಾಂಗ್ರೆಸ್‍ನ ನಾಲ್ವರು ಸಂಸದರ ಮೇಲಿನ ಅಮಾನತು ರದ್ದು ಬೆನ್ನಲ್ಲೇ ಸುಗಮ ಕಲಾಪಕ್ಕೆ ವಿಪಕ್ಷಗಳು ಅವಕಾಶ ಮಾಡಿಕೊಟ್ಟಿದೆ. ಇಂದು ಜಿಎಸ್‍ಟಿ ಹೇರಿಕೆ, ಹಣದುಬ್ಬರ ಮೇಲೆ ಚರ್ಚೆಗೆ ಕೇಂದ್ರ ಸರ್ಕಾರ ಕೊನೆಗೂ ಅವಕಾಶ ಮಾಡಿಕೊಟ್ಟಿದೆ. ಇವತ್ತು ಬೆಳಗ್ಗೆ ಕಲಾಪ ಶುರುವಾಗುತ್ತಲೇ ದರ ಏರಿಕೆ ಪ್ರಸ್ತಾಪಿಸಿ ಸಂಸತ್‍ನ ಉಭಯ ಸದನಗಳಲ್ಲೂ ವಿಪಕ್ಷಗಳು ಗದ್ದಲ ಎಬ್ಬಿಸಿದರು.

    ಹಣದುಬ್ಬರ, ತೈಲ ಬೆಲೆ ಏರಿಕೆ ಪ್ರಸ್ತಾಪಿಸಿದ ಕಾಂಗ್ರೆಸ್‍ನ ಮನೀಶ್ ತಿವಾರಿ, ಡಿಎಂಕೆಯ ಕನಿಮೋಳಿ, ಟಿಎಂಸಿಯ ಕಕೊಳಿ ಘೋಷ್ ದಸ್ತಿದಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಕೊಳಿ ಘೋಷ್ ಅವರಂತೂ, ಹಸಿ ಬದನೆ ಕಚ್ಚಿ, ಜನ ಹಸಿ ತರಕಾರಿ ತಿನ್ನಬೇಕೆಂದು ಬಯಸ್ತಿದ್ಯಾ ಎಂದು ಆಕ್ರೋಶ ಹೊರಹಾಕಿದರು.

    ಇತ್ತೀಚಿಗೆ ಕಡಿಮೆ ಅವಧಿಯಲ್ಲಿಯೇ ಸಿಲಿಂಡರ್ ದರ ನಾಲ್ಕು ಬಾರಿ ಹೆಚ್ಚಾಗಿದೆ. ಒಂದೊಮ್ಮೆ 600 ರೂ. ಇದ್ದ ಗ್ಯಾಸ್ ಬೆಲೆ ಈಗ 1,100 ರೂಪಾಯಿ ದಾಟಿದೆ. ಸಾಮಾನ್ಯರಿಗೆ ಅಡುಗೆ ಮಾಡಿಕೊಳ್ಳುವುದು ಭಾರವಾಗಿದೆ. ನಾವು ಹಸಿ ತರಕಾರಿಗಳನ್ನು ತಿನ್ನಬೇಕೆಂದು ಸರ್ಕಾರ ಬಯಸುತ್ತದೆಯೇ ಎಂದು ಪ್ರಶ್ನಿಸಿದ ಅವರು, ಕಳೆದ ಕೆಲವು ತಿಂಗಳುಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಬಡವರಿಗೆ ಹಾಗೂ ಸಾಮಾನ್ಯರಿಗೆ ತೊಂದರೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ಸಿಲಿಂಡರ್ ದರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪರ್ವತಮುಖಿಯಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಐವರು – ನಾಗರಪಂಚಮಿಯಂದು ಸುಬ್ರಹ್ಮಣ್ಯಕ್ಕೆ ಪ್ರವೇಶವಿಲ್ಲ

    ಬಿಜೆಪಿಯ ನಿಶಿಕಾಂತ್ ದುಬೇ, ಕೇಂದ್ರದ ಕ್ರಮಗಳನ್ನು ಸಮರ್ಥನೆ ಮಾಡಿಕೊಂಡರು. ಶ್ರೀಲಂಕಾ, ಬಾಂಗ್ಲಾ, ಭೂತಾನ್, ಬಾಂಗ್ಲಾ ನೋಡಿ. ನಮ್ಮಲ್ಲಿನ ಬಡವರಿಗೆ ಎರಡು ಹೊತ್ತಿನ ಊಟವಾದರೂ ಸಿಗುತ್ತದೆ. ಅದಕ್ಕೆ ನಾವು ಪ್ರಧಾನಿ ಮೊದಿಗೆ ಧನ್ಯವಾದ ಹೇಳ್ಬೇಕು ಎಂದರು. ಇದನ್ನೂ ಓದಿ: ಕಸದ ಜೊತೆ ಡಂಪಿಂಗ್ ಯಾರ್ಡ್‍ಗೆ ಡಂಪ್ ಆದ ಗಾರ್ಬೇಜ್ ಆಟೋ – ಚಾಲಕ ಅಪಾಯದಿಂದ ಪಾರು

    Live Tv
    [brid partner=56869869 player=32851 video=960834 autoplay=true]

  • ಬ್ರೇಕಿಂಗ್ ನ್ಯೂಸ್ ಬೇಕಾ? TMCಯ 38 ಶಾಸಕರು ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ: ಮಿಥುನ್ ಚಕ್ರವರ್ತಿ

    ಬ್ರೇಕಿಂಗ್ ನ್ಯೂಸ್ ಬೇಕಾ? TMCಯ 38 ಶಾಸಕರು ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ: ಮಿಥುನ್ ಚಕ್ರವರ್ತಿ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ 38 ಶಾಸಕರೊಂದಿಗೆ ಬಿಜೆಪಿ ಸಂಪರ್ಕದಲ್ಲಿದೆ ಹಾಗೂ ಅವರು ವಿರೋಧ ಪಕ್ಷದವರಾಗಿದ್ದರೂ ಬಿಜೆಪಿಯೊಂದಿಗೆ ಅತ್ಯಂತ ಉತ್ತಮ ಸಂಬಂಧವನ್ನೇ ಹೊಂದಿದ್ದಾರೆ ಎಂದು ನಟ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಹೇಳಿಕೆ ನೀಡಿದ್ದಾರೆ.

    ಕೋಲ್ಕತ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮಗೆ ಬ್ರೇಕಿಂಗ್ ನ್ಯೂಸ್ ಬೇಕಾ? 38 ಶಾಸಕರು ಬಿಜೆಪಿಯೊಡನೆ ಉತ್ತಮ ಸಂಬಂಧ ಹೊಂದಿದ್ದು, ಅವರ ಪೈಕಿ 21 ಶಾಸಕರು ಬಿಜೆಪಿಯೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.

    ಕಳೆದ ವರ್ಷ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ನಟನಾದ ನನ್ನನ್ನು ಬಿಜೆಪಿ ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಗೆಲುವು ಸಾಧಿಸುವ ಪ್ರಯತ್ನದಲ್ಲಿತ್ತು. ಆದರೆ ಬಿಜೆಪಿ ಮುಸ್ಲಿಂ ವಿರೋಧಿ ಎಂದು ವಾದಿಸಿದ ಇತರ ಪಕ್ಷದವರಿಂದಾಗಿ ಹಿನ್ನಡೆಯಾಯಿತು ಎಂದರು. ಇದನ್ನೂ ಓದಿ: ಕಾಶ್ಮೀರಿ ಪಂಡಿತರ‍್ಯಾರು ಕಣಿವೆಯನ್ನು ತೊರೆದಿಲ್ಲ: ಕೇಂದ್ರ ಸಚಿವ

    ಬಿಜೆಪಿ ನಿಜವಾಗಿಯೂ ಮುಸ್ಲಿಂ ವಿರೋಧಿಯೇ ಆಗಿದ್ದರೆ, ದೇಶದ 3 ಮುಸ್ಲಿಂ ತಾರೆಗಳ(ಸಲ್ಮಾನ್ ಖಾನ್, ಶಾರೂಕ್ ಖಾನ್, ಅಮೀರ್ ಖಾನ್) ಸಿನಿಮಾಗಳು ಹಿಟ್ ಆಗಲು ಹೇಗೆ ಸಾಧ್ಯ? 18 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಆ 3 ತಾರೆಗಳನ್ನು ದ್ವೇಷಿಸಿದರೆ ಅಥವಾ ಹಿಂದೂಗಳು ಅವರನ್ನು ಪ್ರೀತಿಸದೇ ಹೋದರೆ ಅವರ ಚಿತ್ರಗಳು ದೊಡ್ಡದಾಗಿ ಕಲೆಕ್ಷನ್ ಮಾಡುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.

    ಒಬ್ಬ ವ್ಯಕ್ತಿ ತನ್ನ ತಪ್ಪಿನ ಯಾವುದೇ ಪುರಾವೆಗಳಿಲ್ಲದೇ ಹೋದರೆ ಆತ ಜಗತ್ತಿಗೆ ಹೆದರಲು ಯಾವುದೇ ಕಾರಣಗಳಿರುವುದಿಲ್ಲ. ಆದರೆ ಆತ ತಪ್ಪು ಮಾಡಿದ್ದರೆ, ಜಗತ್ತಿನ ಯಾವ ಶಕ್ತಿಯೂ ಆತನನ್ನು ರಕ್ಷಿಸಲು ಸಾಧ್ಯವಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೇ ಪಾರ್ಥ ಚಟರ್ಜಿ. ಅವರ ಆಪ್ತೆಯ ಮನೆಯಿಂದ 21 ಕೋಟಿ ರೂ. ಇಡಿ ವಶಪಡಿಸಿಕೊಂಡ ಬಳಿಕ ಚಟರ್ಜಿ ಹಾಗೂ ಅವರ ಆಪ್ತೆಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚಟರ್ಜಿ ನನ್ನ ಮನೆಯನ್ನು ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದರು: ಆಪ್ತೆ ಅರ್ಪಿತಾ

    Live Tv
    [brid partner=56869869 player=32851 video=960834 autoplay=true]

  • 1 ಟಿಎಂಸಿ ನೀರು ತುಂಬಿದ್ರೆ KRS ಡ್ಯಾಂ ಸಂಪೂರ್ಣ ಭರ್ತಿ

    1 ಟಿಎಂಸಿ ನೀರು ತುಂಬಿದ್ರೆ KRS ಡ್ಯಾಂ ಸಂಪೂರ್ಣ ಭರ್ತಿ

    ಮಂಡ್ಯ: ರಾಜ್ಯದಲ್ಲಿ ಕಳೆದ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಕೆಆರ್‌ಎಸ್ ಡ್ಯಾಂ ಬಹುತೇಕ ಭರ್ತಿಯಾಗಿದೆ.

    krs dam

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ 124.80 ಅಡಿ ಇದೆ. ಈಗಾಗಲೇ ಈ ಡ್ಯಾಂ 124.00 ಅಡಿ ಭರ್ತಿಯಾಗಿದೆ. ಡ್ಯಾಂಗೆ 65,635 ಕ್ಯೂಸೆಕ್ ಒಳಹರಿವು ಮತ್ತು 46,518 ಕ್ಯೂಸೆಕ್ ನೀರು ಹೊರಹರಿವು ಇದೆ. ಇದನ್ನೂ ಓದಿ:  ಚಾಟ್ಸ್ ಪ್ರಿಯರು ಮಾಡಿ ಸವಿಯಿರಿ ‘ಮಸಾಲಾ ಕಾರ್ನ್ ಚಾಟ್’

    49.452 ಟಿಎಂಸಿ ಸಾಂದ್ರತೆ ಇರುವ ಡ್ಯಾಂನಲ್ಲಿ 48.336 ಟಿಎಂಸಿ ಸಂಗ್ರಹವಾಗಿದೆ. ಇನ್ನು 1 ಟಿಎಂಸಿ ನೀರು ತುಂಬಿದ್ರೆ ಈ ಡ್ಯಾಂ ಸಂಪೂರ್ಣ ಭರ್ತಿಯಾಗುತ್ತೆ.

    Live Tv
    [brid partner=56869869 player=32851 video=960834 autoplay=true]