Tag: ಟಿಎಂಸಿ

  • ಅತ್ಯಾಚಾರಿಗಳಿಗೆ ಲಡ್ಡು ತಿನ್ನಿಸುತ್ತೀರಿ: ಗೂಂಡಾಗಳನ್ನ ತಲೆಕೆಳಗೆ ನೇತಾಕ್ತೀವಿ ಎಂದಿದ್ದ ಶಾಗೆ ಮಹುವಾ ತಿರುಗೇಟು

    ಅತ್ಯಾಚಾರಿಗಳಿಗೆ ಲಡ್ಡು ತಿನ್ನಿಸುತ್ತೀರಿ: ಗೂಂಡಾಗಳನ್ನ ತಲೆಕೆಳಗೆ ನೇತಾಕ್ತೀವಿ ಎಂದಿದ್ದ ಶಾಗೆ ಮಹುವಾ ತಿರುಗೇಟು

    ಕೋಲ್ಕತ್ತಾ: ಬಿಜೆಪಿ (BJP) ಆಡಳಿತದಲ್ಲಿ ಗೂಂಡಾಗಳು, ಗಲಭೆಕೋರರನ್ನ ತಲೆಕೆಳಗೆ ಮಾಡಿ ನೇತು ಹಾಕ್ತೀವಿ ಎಂದಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ವಿರುದ್ಧ ತೃಣಮೂಲ ಕಾಂಗ್ರೆಸ್‌ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ತಿರುಗೇಟು ನೀಡಿದ್ದಾರೆ.

    ಗುಜರಾತ್‌ ಪ್ರಕರಣವನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಮಹುವಾ ಅವರು, ಬಿಹಾರದಲ್ಲಿ ಗಲಭೆಕೋರರನ್ನು ತಲೆಕೆಳಗಾಗಿ ಗಲ್ಲಿಗೇರಿಸುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಕೊಲೆಗಾರರು ಮತ್ತು ಅತ್ಯಾಚಾರಿಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತಾರೆ. ಅವರಿಗೆ ಲಡ್ಡು ತಿನ್ನಿಸುತ್ತಾರೆ ಎಂದು ಅಮಿತ್‌ ಶಾಗೆ ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಗಲಭೆಕೋರರನ್ನ ತಲೆಕೆಳಗಾಗಿ ನೇತು ಹಾಕ್ತೀವಿ – ಅಮಿತ್ ಶಾ ಗುಡುಗು

    ಗುಜರಾತ್‌ನ ಬಿಲ್ಕಿಸ್‌ ಬಾನೋ ಅತ್ಯಾಚಾರ (Bilkis Bano Rape Case) ಅಪರಾಧಿಗಳ ಬಿಡುಗಡೆ ಪ್ರಕರಣ ಉಲ್ಲೇಖಿಸಿ ಬಿಜೆಪಿ ವಿರುದ್ಧ ಮಹುವಾ ಕಿಡಿಕಾರಿದ್ದಾರೆ. “ಕಳೆದ ವರ್ಷ ಗುಜರಾತ್ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮುಂಚೆ ರಾಜ್ಯ ಸರ್ಕಾರ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿತು. ಟಿಎಂಸಿಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಹೌರಾದಲ್ಲಿ ನಡೆದ ಶಿವಪುರ ಭಯೋತ್ಪಾದಕ ಘಟನೆಯ ವಿಚಾರವಾಗಿ ಕೇಂದ್ರ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹೌರಾದಲ್ಲಿ ನಡೆದ ಹಿಂಸಾಚಾರದ ಹಿಂದೆ ಶಾ ಇದ್ದಾರೆಂದು ಹೇಳಿದ್ದರು” ಎಂದು ಮಹುವಾ ತಿಳಿಸಿದ್ದಾರೆ.

    ಅಮಿತ್‌ ಶಾ ಅವರು ಶನಿವಾರ ಬಿಹಾರದಲ್ಲಿ ನಡೆದ ರ‍್ಯಾಲಿಯಲ್ಲಿ, ರಾಮನವಮಿ ಆಚರಣೆಯ ಸಂದರ್ಭದಲ್ಲಿ ರಾಜ್ಯದ ಹಲವಾರು ಪ್ರದೇಶಗಳಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ನಿತೀಶ್‌ ಕುಮಾರ್‌ ಸರ್ಕಾರ ವಿಫಲವಾಗಿದೆ. 2025ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂಸಾಚಾರ ನಡೆಸುತ್ತಿರುವ ಗಲಭೆಕೋರರನ್ನು ತಲೆಕೆಳಗಾಗಿ ನೇತುಹಾಕಿ ಗಲ್ಲಿಗೇರಿಸುತ್ತೇವೆ ಎಂದಿದ್ದರು. ಇದನ್ನೂ ಓದಿ: ಮಾನಹಾನಿ ಪ್ರಕರಣ – ಏಪ್ರಿಲ್ 13 ರವರೆಗೂ ರಾಗಾಗೆ ರಿಲೀಫ್

    ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಅಮಿತ್‌ ಶಾ, ರಾಜ್ಯದಲ್ಲಿ ಭಯೋತ್ಪಾದನೆಯನ್ನು ಹರಡಲು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕಾರಣ. ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಎಂದಿಗೂ ಬಿಹಾರದಲ್ಲಿ ಶಾಂತಿಯನ್ನು ತರಲು ಸಾಧ್ಯವಿಲ್ಲ. ಬಿಹಾರವನ್ನು ಶಾಂತಿಯುತ ರಾಜ್ಯವನ್ನಾಗಿ ಮಾಡಲು “ಮಹಾಘಟಬಂಧನ್” ಕಿತ್ತುಹಾಕಬೇಕು ಎಂದು ಜನತೆಗೆ ಕರೆ ನೀಡಿದ್ದರು.

  • ಬಿಜೆಪಿಯಿಂದಲೇ ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ – 9 ಪ್ರತಿಪಕ್ಷ ನಾಯಕರಿಂದ ಮೋದಿಗೆ ಪತ್ರ

    ಬಿಜೆಪಿಯಿಂದಲೇ ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ – 9 ಪ್ರತಿಪಕ್ಷ ನಾಯಕರಿಂದ ಮೋದಿಗೆ ಪತ್ರ

    ನವದೆಹಲಿ: ಬಿಜೆಪಿಯು (BJP) ತಮ್ಮ ತಮ್ಮ ನಾಯಕರನ್ನ ಬಂಧಿಸಲು ಕೇಂದ್ರೀಯ ತನಿಖಾ ದಳ (CBI), ಜಾರಿ ನಿರ್ದೇಶನಾಲಯ (ED) ಅಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ 9 ಪ್ರತಿಪಕ್ಷ ನಾಯಕರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದಾರೆ.

    ಭಾರತ್ ರಾಷ್ಟ್ರ ಸಮಿತಿಯ (BRS) ಮುಖ್ಯಸ್ಥ ಚಂದ್ರಶೇಖರ್ ರಾವ್, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (JKNC) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಟಿಎಂಸಿ ಮುಖ್ಯಸ್ಥೆ ಹಾಗೂ ಸಿಎಂ ಮಮತಾ ಬ್ಯಾನರ್ಜಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪತ್ರದ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮ ಕಲ್ಲಿದ್ದಲಿನಿಂದ ಭಾರತದ ಲಕ್ಷಾಂತರ ಮಂದಿಗೆ ವಿದ್ಯುತ್‌: ಅದಾನಿ ಪರ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಬ್ಯಾಟಿಂಗ್‌

    2014ರಿಂದಲೂ ಬಿಜೆಪಿ ಆಡಳಿತದಲ್ಲಿ ತನಿಖಾ ಸಂಸ್ಥೆಗಳಿಂದ ಪ್ರಕರಣ ದಾಖಲಿಸಿದ, ಬಂಧಿಸಿದ, ದಾಳಿ ಮಾಡಿದ ಅಥವಾ ವಿಚಾರಣೆಗೆ ಒಳಗಾದ ಹೆಚ್ಚಿನ ರಾಜಕಾರಣಿಗಳು ವಿರೋಧ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಆದ್ರೆ ಬಿಜೆಪಿ ಸೇರ್ಪಡೆಗೊಂಡ ವಿರೋಧ ಪಕ್ಷದ ರಾಜಕಾರಣಿಗಳ ವಿರುದ್ಧದ ಮಾತ್ರ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಂದು ಕೇಸ್ – ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ

    ಉದಾಹರಣೆಗೆ, ಕಾಂಗ್ರೆಸ್ ಮಾಜಿ ಸದಸ್ಯ ಮತ್ತು ಪ್ರಸ್ತುತ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರನ್ನ ಚಿಟ್‌ಫಂಡ್ ಹಗರಣದಲ್ಲಿ 2014, 2015 ರಲ್ಲಿ ಸಿಬಿಐ ಮತ್ತು ಇ.ಡಿ ತನಿಖೆ ನಡೆಸಿತ್ತು. ಆದ್ರೆ ಅವರು ಬಿಜೆಪಿ ಸೇರಿದ ನಂತರ ಪ್ರಕರಣ ಪ್ರಗತಿ ಕಾಣಲಿಲ್ಲ. ಅದೇ ರೀತಿ, ಟಿಎಂಸಿ ಮಾಜಿ ನಾಯಕರಾದ ಸುವೇಂದು ಅಧಿಕಾರಿ, ಮುಕುಲ್ ರಾಯ್ ಅವರ ವಿರುದ್ಧ ಇ.ಡಿ ಮತ್ತು ಸಿಬಿಐ ತನಿಖಾ ಸಂಸ್ಥೆಗಳನ್ನು ಚೂ ಬಿಡಲಾಗಿತ್ತು. ಆದ್ರೆ ಅವರು ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ನಂತರ ಪ್ರಕರಣಗಳು ಮುಚ್ಚಿಹೋದವು ಇನ್ನೂ ಅನೇಕ ಉದಾಹರಣೆಗಳಿವೆ ಎಂದು ಪ್ರತಿಪಕ್ಷ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.

  • ಟಿಎಂಸಿ ಕಾರ್ಯಕರ್ತರ 2 ಗುಂಪಿನ ನಡುವೆ ಗಲಾಟೆ, ಗುಂಡಿನ ದಾಳಿ – ಹಲವರಿಗೆ ಗಾಯ

    ಟಿಎಂಸಿ ಕಾರ್ಯಕರ್ತರ 2 ಗುಂಪಿನ ನಡುವೆ ಗಲಾಟೆ, ಗುಂಡಿನ ದಾಳಿ – ಹಲವರಿಗೆ ಗಾಯ

    ಕೋಲ್ಕತ್ತಾ: ಭಾನುವಾರ ಪಶ್ಚಿಮ ಬಂಗಾಳದ (West Bengal) ಮಾಲ್ಡಾದಲ್ಲಿ (Malda) ತೃಣಮೂಲ ಕಾಂಗ್ರೆಸ್ ಪಕ್ಷದ (TMC) ಕಾರ್ಯಕರ್ತರ 2 ಗುಂಪುಗಳ ನಡುಗೆ ಘರ್ಷಣೆ (Clash) ಏರ್ಪಟ್ಟಿದ್ದು, ಗುಂಡಿನ ದಾಳಿ ಹಾಗೂ ಸ್ಫೋಟಗಳು ನಡೆದು ಹಲವರಿಗೆ ಗಾಯಗಳಾಗಿರುವುದಾಗಿ ವರದಿಯಾಗಿದೆ.

    ಮಾಲ್ಡಾ ಜಿಲ್ಲೆಯ ರಟುವಾದಲ್ಲಿ ಮದರಸಾ ಆಡಳಿತ ಸಮಿತಿಯ ಚುನಾವಣೆಗೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ಚುನಾವಣೆಗೆ ಟಿಎಂಸಿ ಹೊರತುಪಡಿಸಿ ಇತರ ಯಾವುದೇ ರಾಜಕೀಯ ಪಕ್ಷಗಳ ನಾಮನಿರ್ದೇಶನ ಮಾಡಿಲ್ಲ ಎನ್ನಲಾಗಿದೆ.

    ಟಿಎಂಸಿ ಕಾಂಗ್ರೆಸ್‌ನ 2 ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಗುಂಡಿನ ದಾಳಿಗಳು ನಡೆದಿವೆ. ಘಟನೆಯಲ್ಲಿ ಮೂವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅದರಲ್ಲಿ ಒಬ್ಬರಿಗೆ ಗುಂಡು ತಗುಲಿದೆ. ಗಾಯಾಳುಗಳನ್ನು ಮಾಲ್ಡಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೀತಾಮಾತೆಗೂ ಅಗ್ನಿಪರೀಕ್ಷೆ ತಪ್ಲಿಲ್ಲ, ಇನ್ನು ನಾನ್ಯಾವ ಲೆಕ್ಕ: ಲಕ್ಷ್ಮೀ ಹೆಬ್ಬಾಳ್ಕರ್

    ಗಲಾಟೆ ನಡೆಸಿದ ಎರಡೂ ಕಡೆಯವರು ಕಬ್ಬಿಣದ ರಾಡ್ ಹಾಗೂ ಬಿದಿರಿನ ಕೋಲುಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಘರ್ಷಣೆಯಲ್ಲಿ ವಾಹನಗಳು ಸೇರಿದಂತೆ ಹಲವು ಆಸ್ತಿಗಳು ಧ್ವಂಸವಾಗಿದೆ. ಪ್ರದೇಶದಲ್ಲಿ ಇದೀಗ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಳೆ ದೋಸ್ತಿಗಳ ಹೊಸ ಕುಸ್ತಿ – ಮಾತೃ ಪಕ್ಷವನ್ನು ಟಾರ್ಗೆಟ್ ಮಾಡಿದ ಗುರು, ಶಿಷ್ಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ

    ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ

    ಅಹಮದಾಬಾದ್: ಗುಜರಾತಿನ ಮೋರ್ಬಿ ಸೇತುವೆ ದುರಂತದ (Morbi Bridge Collapse) ಕುರಿತು ಟ್ವೀಟ್ ಮಾಡಿದ ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ (Saket Gokhale) ಅವರನ್ನ ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಮಮತಾ ಬ್ಯಾನರ್ಜಿ (Saket Gokhale) ಅವರು ಬಿಜೆಪಿ (BJP) ಹಾಗೂ ಪ್ರಧಾನಿ ಮೋದಿ (Narendra Modi) ವಿರುದ್ಧ ಆಕ್ರೋಶ ಹೊರಹಾಕಿದ್ದು, ಇದು ರಾಜಕೀಯ ಸೇಡು ಎಂದು ಕಿಡಿ ಕಾರಿದ್ದಾರೆ.

    ಗೋಖಲೆ ಅವರನ್ನು ಬಂಧಿಸಲು ಕಾರಣವಾದ ಟ್ವೀಟ್ ಯಾವುದೆಂದು ನಿರ್ದಿಷ್ಟಪಡಿಸಿಲ್ಲ. ಆದರೆ ಗುಜರಾತ್ ಸರ್ಕಾರದ ಸತ್ಯ ಪರಿಶೀಲನಾ ಘಟಕವು ಗೋಖಲೆ ಅವರ ಇತ್ತೀಚಿನ ಟ್ವೀಟ್ ವೊಂದನ್ನು ಗುರುತಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

    ಇತ್ತೀಚಿನ ಟ್ವೀಟ್‌ನಲ್ಲಿ ಸಾಕೇತ್ ಗೋಖಲೆ `ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಮಾಹಿತಿ ಪ್ರಕಾರ ಪ್ರಧಾನಿ ಅವರು ಮೋರ್ಬಿಗೆ ಭೇಟಿ ನೀಡಲು ಖರ್ಚಾಗಿದ್ದು 30 ಕೋಟಿ ರೂ.’ ಎಂದು ಉಲ್ಲೇಖಿಸಿದ್ದರು. ಈ ಕುರಿತು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಸತ್ಯ ಪರಿಶೀಲನೆ ನಡೆಸಿ ಆರ್‌ಟಿಐ ಮಾಹಿತಿ ಸುಳ್ಳು ಎಂದು ಹೇಳಿತ್ತು. ಇದನ್ನೂ ಓದಿ: ಮೋರ್ಬಿ ದುರಂತ: 1 ಲಕ್ಷ ರೂ. ದಂಡ ಪಾವತಿಸಿ – ಪುರಸಭೆ ವಿರುದ್ಧ ಹೈಕೋರ್ಟ್ ಗರಂ

    ಸಾಕೇತ್ ಗೋಖಲೆ ಅವರು ನಿನ್ನೆ ರಾತ್ರಿ ದೆಹಲಿಯಿಂದ ರಾಜಸ್ಥಾನದ ಜೈಪುರಕ್ಕೆ ವಿಮಾನದಲ್ಲಿ ತೆರಳಿದ್ದರು. ಅಲ್ಲಿಂದ ಗುಜರಾತ್ ಪೊಲೀಸರ್ ಬಂಧಿಸಿ ಕರೆದೊಯ್ದಿದ್ದಾರೆ ಎಂದು ಟಿಎಂಸಿ ನಾಯಕರೊಬ್ಬರು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಬಿಜೆಪಿಯಾಗಲಿ ಅಥವಾ ಗುಜರಾತ್ ಸರ್ಕಾರವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಕಳೆದ ಅಕ್ಟೋಬರ್ 30 ರಂದು ಗುಜರಾತಿನ ಮೋರ್ಬಿ ಜಿಲ್ಲೆಯಲ್ಲಿ ತೂಗು ಸೇತುವೆ ಕುಸಿದು 135 ಜನರು ಮೃತಪಟ್ಟಿದರು. ಬಳಿಕ ತನಿಖೆಯಲ್ಲಿ 9 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಸಂತ್ರಸ್ತರ ಆರೋಗ್ಯ ವಿಚಾರಿಸಿ, ಪರಿಹಾರ ಘೋಷಣೆ ಮಾಡಿದ್ದಾರೆ. ನಂತರದಲ್ಲಿ ಮೋರ್ಬಿ ಪುರಸಭೆಯನ್ನು ತರಾಟೆಗೆ ತೆಗೆದುಕೊಂಡಿದ್ದ ಗುಜರಾತ್ ಹೈಕೋರ್ಟ್ 1 ಲಕ್ಷ ದಂಡ ಸಹ ವಿಧಿಸಿದೆ.

    Live Tv
    [brid partner=56869869 player=32851 video=960834 autoplay=true]

  • TMC ನಾಯಕನ ಮನೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ – ರಾಜಕೀಯ ಕೆಸರೆರಚಾಟಕ್ಕೆ ಗ್ರಾಸವಾದ ಘಟನೆ

    TMC ನಾಯಕನ ಮನೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ – ರಾಜಕೀಯ ಕೆಸರೆರಚಾಟಕ್ಕೆ ಗ್ರಾಸವಾದ ಘಟನೆ

    ಕೊಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಪೂರ್ವ ಮೇದಿನಿಪುರ ಜಿಲ್ಲೆಯ ಮನೆಯೊಂದರಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು (Bomb Blast) ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ (Suvendu Adhikari) ಪೂರ್ವಜರ ನಿವಾಸದ ಬಳಿಯೇ ಈ ಸ್ಫೋಟ ಸಂಭವಿಸಿದ್ದು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ.

    ಟಿಎಂಸಿ (TMC) ನಾಯಕ ರಾಜ್‍ಕುಮಾರ್ ಮನ್ನಾ ಅವರ ಮನೆಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದ್ದು, ಸ್ಫೋಟದಲ್ಲಿ ಮೃತಪಟ್ಟ ಮೂವರಲ್ಲಿ ರಾಜ್‍ಕುಮಾರ್ ಮನ್ನಾ ಕೂಡ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಫೋಟದ ಹಿಂದೆ ಟಿಎಂಸಿಯ ಕೈವಾಡವಿದೆ ಎಂದು ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಇದನ್ನೂ ಓದಿ: ಊರು ಬಿಡುವಂತೆ ರೌಡಿಗಳಿಗೆ ಸಿಸಿಬಿ ಖಡಕ್ ಸೂಚನೆ – ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರೆ ಕ್ರಮದ ಎಚ್ಚರಿಕೆ

    ಸ್ಫೋಟದಲ್ಲಿ ಸಾವನ್ನಪ್ಪಿದ ಇತರ ಇಬ್ಬರನ್ನು ಬಿಸ್ವಜಿತ್ ಗಯೆನ್, ದೇಬ್‍ಕುಮಾರ್ ಮನ್ನಾ ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸ್ ಮೂಲಗಳ ಪ್ರಕಾರ, ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಪಕ್ಕದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಭೂಮಿ ಫಲವತ್ತಾಗಿದ್ರೆ ಉತ್ತಮ ಬೆಳೆ – ಚಿಕ್ಕವಯಸ್ಸಿಗೆ ಮದುವೆ ಮಾಡುವಂತೆ ಹಿಂದೂಗಳಿಗೆ ಬದ್ರುದ್ದೀನ್ ಸಲಹೆ

    ಘಟನೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಸುವೇಂದು ಅಧಿಕಾರಿ ಬಂಗಾಳದಲ್ಲಿ ಟಿಎಂಸಿ ನಾಯಕರ ಮನೆಗಳಲ್ಲಿ ವ್ಯಾಪಕವಾಗಿ ಬಾಂಬ್ ಉತ್ಪಾದಿಸಲ್ಪಡುತ್ತವೆ ಎಂದು ವ್ಯಂಗ್ಯವಾಡಿದ್ದಾರೆ. ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಬಾಂಬ್ ತಯಾರಿಕೆಯು ಬಂಗಾಳದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಏಕೈಕ ಗುಡಿ ಕೈಗಾರಿಕೆಯಾಗಿದೆ ಎಂದು ಹೇಳಿದ್ದಾರೆ.

    ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರ ಮೇಲ್ವಿಚಾರಣೆಯಲ್ಲಿ ಇದೆಲ್ಲವೂ ನಿರ್ಭಯದಿಂದ ನಡೆಯುತ್ತದೆ. ಈ ಬಾಂಬ್‍ಗಳನ್ನು ಯಾವುದಕ್ಕೆ ಬಳಸುತ್ತಾರೆ? ಟಾರ್ಗೆಟ್ ಯಾರು ಎಂಬುದು ಪ್ರಶ್ನೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.

    ತೃಣಮೂಲ ಕಾಂಗ್ರೆಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ವಕ್ತಾರ ಕುನಾಲ್ ಘೋಷ್ ಅವರು ಆರೋಪಗಳನ್ನು ನಿರಾಕರಿಸಿದ್ದು, ಅಭಿಷೇಕ್ ಬ್ಯಾನರ್ಜಿ ಅವರ ರ‍್ಯಾಲಿಗಿಂತ ಮೊದಲು ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ನಡೆಸಿದ ಈ ಸ್ಫೋಟಕ್ಕೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹೊಣೆಗಾರರು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ರಾಷ್ಟ್ರಪತಿಗಳು ಸುಂದರವಾಗಿಲ್ಲ’ ಎಂದ TMC ನಾಯಕನ ಪರವಾಗಿ ಕ್ಷಮೆ ಕೋರಿದ ಮಮತಾ ಬ್ಯಾನರ್ಜಿ

    `ರಾಷ್ಟ್ರಪತಿಗಳು ಸುಂದರವಾಗಿಲ್ಲ’ ಎಂದ TMC ನಾಯಕನ ಪರವಾಗಿ ಕ್ಷಮೆ ಕೋರಿದ ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಕುರಿತು ಟಿಎಂಸಿ (TMC) ಸಚಿವರು ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ರಾಷ್ಟ್ರಪತಿಯವರಲ್ಲಿ (President Of India) ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ವೈಯಕ್ತಿಕವಾಗಿ ಟೀಕಿಸುವುದು ಪಕ್ಷದ ಸಂಸ್ಕೃತಿಯಲ್ಲ ಎಂದಿದ್ದು, ಸಚಿವರಿಗೂ ಎಚ್ಚರಿಕೆ ನೀಡಿದ್ದಾರೆ.

    ನಾವು ರಾಷ್ಟ್ರಪತಿಗಳನ್ನು ತುಂಬಾ ಗೌರವಿಸುತ್ತೇವೆ. ಅವರು ತುಂಬಾ ಒಳ್ಳೆಯವರು ಅಂಥವರನ್ನು ಟೀಕಿಸಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಸೌಂದರ್ಯವು ನಾವು ಬಾಹ್ಯವಾಗಿ ಹೇಗೆ ಕಾಣುತ್ತೇವೆ ಎಂಬುದಲ್ಲ, ಆಂತರಿಕವಾಗಿ ಹೇಗಿದ್ದೀವಿ ಎಂಬುದರ ಮೇಲೆ ಇದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ಟಿಎಂಸಿ (TMC) ಸಚಿವ ಅಖಿಲ್ ಗಿರಿ, ನಂದಿಗ್ರಾಮ್‌ನ ಹಳ್ಳಿಯೊಂದರಲ್ಲಿ ನಡೆದ ರ‍್ಯಾಲಿಯಲ್ಲಿ ರಾಷ್ಟ್ರಪತಿಗಳ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅವರು ಮಾತನಾಡಿದ ಅವರ 17 ಸೆಕೆಂಡ್‌ಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಈ ವೀಡಿಯೋನಲ್ಲಿ `ನಾವು ಯಾರನ್ನು ನೋಟದಿಂದ ನಿರ್ಣಯಿಸುವುದಿಲ್ಲ. ಆದರೆ ನಮ್ಮ ರಾಷ್ಟ್ರಪತಿಗಳು ನೋಡಲು ಹೇಗೆ ಕಾಣುತ್ತಾರೆ? ಅವರು ಸುಂದರವಾಗಿಲ್ಲ’ ಎಂದು ಹೇಳಿದ್ದರು. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ ರೇಪ್ – ವಿಪರೀತ ರಕ್ತಸ್ರಾವದಿಂದ ಗೆಳತಿ ಸಾವು

    ಟಿಎಂಸಿ ಸಚಿವರ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ರಾಜಭವನಕ್ಕೆ ಮೆರವಣಿಗೆ ನಡೆಸಿದ್ದರು. ಸಚಿವ ಅಖಿಲ್ ಗಿರಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

    ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

    ಗಾಂಧಿನಗರ: ಗುಜರಾತಿನ ಮೋರ್ಬಿ (Gujarat Morbi Bridge) ಜಿಲ್ಲೆಯಲ್ಲಿ ಸಂಭವಿಸಿದ ತೂಗು ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಇದರೊಂದಿಗೆ 100 ಮಂದಿ ನಾಪತ್ತೆಯಾಗಿದ್ದು, ತೀವ್ರ ಶೋಧಕಾರ್ಯ ನಡೆಯುತ್ತಿದೆ. ಈ ವೇಳೆ ಪ್ರಧಾನಿ ಮೋದಿ (Narendra Modi) ತವರಿನಲ್ಲಿ ನಡೆದ ಭೀಕರ ದುರಂತವನ್ನು 2016ರ ಮಧ್ಯ ಕೋಲ್ಕತ್ತಾದಲ್ಲಿ ನಡೆದ ಮೇಲ್ಸೇತುವೆ (Flyover) ಕುಸಿತಕ್ಕೆ ಹೋಲಿಸಿ ಟೀಕೆ ಮಾಡಲಾಗುತ್ತಿದೆ.

    ಈ ಕುರಿತು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

    2016ರಲ್ಲಿ ಪಶ್ಚಿಮ ಬಂಗಾಳದ ಚುನಾವಣಾ (West Bengal Election) ಸಂದರ್ಭದಲ್ಲಿ ಕೋಲ್ಕತ್ತಾದ ವಿವೇಕಾನಂದ ನಗರದ ಮೇಲ್ಸೇತುವೆ ಕುಸಿತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿ ಅವರು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಸೇತುವೆ ಕುಸಿದ ಬಳಿಕ ಇದು ದೇವರ ಕಾರ್ಯ. ಇದು ಮೋಸದ ಕೃತ್ಯ, ವಂಚನೆಯ ಪರಿಣಾಮ, ಚುನಾವಣೆಯ ಸಮಯದಲ್ಲೇ ಕುಸಿದು ಬಿದ್ದಿದೆ. ನೀವು ಯಾವ ರೀ ಸರ್ಕಾರ ನಡೆಸುತ್ತೀದ್ದೀರಿ. ಇದು ನಿಜವಾಗಿಯೂ ಜನರಿಗೆ ದೇವರು ಕೊಟ್ಟ ಸಂದೇಶವಾಗಿದೆ ಎಂದು ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನ ಟೀಕಿಸಿದ್ದರು.

    ಅವರು ಎಡಪಂಥೀಯರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಎಡ-ಬಲ ಹೇಗಾದರೂ ಇರಲಿ. ಮೊದಲು ಸಾಯುತ್ತಿರುವವರ ಬಗ್ಗೆ ಯೋಚಿಸಿ, ಸತ್ತವರನ್ನು ಗೌರವಿಸಿ ಎಂದು ಮೋದಿ ಕಿಡಿಕಾರಿದ್ದರು. ಈ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪ್ರತಿಪಕ್ಷದ ನಾಯಕರು ಪ್ರಧಾನಿ ಮೋದಿ ಅವರೇ ಇಂದು ನಿಮ್ಮ ತವರಿನಲ್ಲೇ ನಡೆದಿರುವ ಘಟನೆಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಜಯಪುರ ನಗರಪಾಲಿಕೆ ಚುನಾವಣೆ – ಬಿಜೆಪಿಗೆ ಸಿಂಹಪಾಲು

    ಟಿಎಂಸಿ (TMC) ನಾಯಕ ಮತ್ತು ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಟ್ವೀಟ್ (Twitter) ಮಾಡಿದ್ದು, ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ನಿಂದಿಸಿದ್ದೀರಿ. ಈಗ ಗುಜರಾತ್‌ನಲ್ಲಿ ಹೊಸದಾಗಿ ನವೀಕರಿಸಿದ ಸೇತುವೆ ಕುಸಿತು 141 ಜನ ಸಾವನ್ನಪ್ಪಿದ್ದಾರೆ. ಮೋದಿ ಜೀ ಅವರೇ ಸತ್ತವರ ಬಗ್ಗೆ ಕೆಲವು ಹನಿ ಕಣ್ಣೀರು ಇರಲಿ ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ.

    ಇನ್ನೂ 2016ರ ಘಟನೆಯನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಶಿವಸೇನಾ (Shivsena) ಸಂಸದೆ ಪ್ರಿಯಾಂಕಾ ಚತುರ್ವೇದಿ (Priyanka Chaturvedi), ಪಶ್ಚಿಮ ಬಂಗಾಳದಲ್ಲಿ ಸೇತುವೆ ಕುಸಿದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇದು ದೇವರ ಕಾರ್ಯ, ವಂಚನೆಯ ಕೃತ್ಯ ಎಂದು ಹೇಳಿದ್ದನ್ನು ಗುಜರಾತಿನ ಘಟನೆ ನೆನಪಿಸುತ್ತದೆ ಎಂದು ಬರೆದು, 2016 ಘಟನೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ಸೇತುವೆಯನ್ನು ಅಲುಗಾಡಿಸಿದ್ದೆ ದುರಂತಕ್ಕೆ ಕಾರಣ: ಪ್ರತ್ಯಕ್ಷದರ್ಶಿ

    2016ರ ಮಾರ್ಚ್ 31ರಂದು ಮಧ್ಯ ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು 30 ಜನರು ಸಾವನ್ನಪ್ಪಿದ್ದರು. ಚುನಾವಣಾ ಸಂದರ್ಭದಲ್ಲಿ ನಡೆದಿದ್ದರಿಂದ ಪ್ರತಿ ಪಕ್ಷಗಳು ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದವು.

    Live Tv
    [brid partner=56869869 player=32851 video=960834 autoplay=true]

  • ಬಿರಿಯಾನಿಗೆ ಬಳಸೋ ಮಸಾಲೆಗಳು ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಮಾಡ್ತಿವೆ – TMC ನಾಯಕ ಆರೋಪ

    ಬಿರಿಯಾನಿಗೆ ಬಳಸೋ ಮಸಾಲೆಗಳು ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಮಾಡ್ತಿವೆ – TMC ನಾಯಕ ಆರೋಪ

    ಕೊಲ್ಕತ್ತಾ: ಬಿರಿಯಾನಿಗೆ (Biriyani) ಬಳಸುವ ಮಸಾಲೆ ಪದಾರ್ಥಗಳಿಂದ ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಬಿರಿಯಾನಿ ಅಂಗಡಿಗಳನ್ನು ಮುಚ್ಚಬೇಕು ಎಂದು ಟಿಎಂಸಿ ನಾಯಕ ನಾಯಕ ರವೀಂದ್ರ ನಾಥ್ ಘೋಷ್ (Rabindra Nath Ghosh) ಒತ್ತಾಯಿಸಿದ್ದಾರೆ.

    ಬಂಗಾಳದ ಕೂಚ್ ಬೆಹಾರ್‌ನಲ್ಲಿರುವ ಎರಡು ಸ್ಥಳೀಯ ಬಿರಿಯಾನಿ ಅಂಗಡಿಗಳನ್ನೂ (Biriyani Stores) ಮುಚ್ಚುವಂತೆ ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಾನು ನನ್ನ ತಂದೆ ಬಗ್ಗೆ ಮಾತ್ರ ಯೋಚಿಸುತ್ತೇನೆ – ಗ್ರೌಂಡ್‌ನಲ್ಲೇ ಕಣ್ಣೀರಿಟ್ಟ ಪಾಂಡ್ಯ

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಸರ್ಕಾರದ ಮಾಜಿ ಸಚಿವ ರವೀಂದ್ರ ನಾಥ್ ಘೋಷ್ ಪ್ರಕಾರ, ಬಿರಿಯಾನಿ ತಯಾರಿಸಲು ಬಳಸುವ ಪದಾರ್ಥಗಳು ಮತ್ತು ಮಸಾಲೆಗಳು ಪುರುಷರಲ್ಲಿ ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತಿವೆ ಎಂದು ಜನರಿಂದ ಆರೋಪಗಳು ಕೇಳಿ ಬಂದಿವೆ. ಪುರುಷನ ಲೈಂಗಿಕ ಉತ್ಸಾಹ (Sexual Interest) ತಡೆಯಲು ಯಾವ ಮಸಾಲೆಗಳನ್ನು ಬಳಸಲಾಗುತ್ತಿದೆ ಎಂದು ತಿಳಿದಿಲ್ಲ. ಆದರೆ ಜನರಿಂದ ಬರುವ ದೂರುಗಳ ಸಂಖ್ಯೆ ಹೆಚ್ಚಿದೆ ಎಂದಿದ್ದಾರೆ. ಇದನ್ನೂ ಓದಿ: ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ: ಮೋದಿ

    ಬಿಹಾರ ಮತ್ತು ಉತ್ತರ ಪ್ರದೇಶದಂತಹ (UttarPradesh) ರಾಜ್ಯಗಳ ಜನರು ನಮ್ಮ ಪ್ರದೇಶದಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದಾರೆ ಮತ್ತು ಪರವಾನಗಿ ಇಲ್ಲದೇ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ದೂರುಗಳ ನಂತರ ಪರಿಶೀಲಿಸಿದಾಗ ಅಂಗಡಿಗಳಿಗೆ ಟ್ರೇಡ್ ಲೈಸೆನ್ಸ್ ಇಲ್ಲದಿರುವುದು ಗೊತ್ತಾಗಿದೆ. ಹೀಗಾಗಿ ಅಂಗಡಿಗಳನ್ನು ಮುಚ್ಚಲು ಆಗ್ರಹಿಸಿದ್ದೇವೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಂಗೂಲಿ ಬಿಜೆಪಿ ಸೇರಲು ನಿರಾಕರಿಸಿದ್ದರಿಂದ್ಲೇ 2ನೇ ಬಾರಿಗೆ BCCI ಸ್ಥಾನ ಕೈತಪ್ಪಿದೆ – TMC

    ಗಂಗೂಲಿ ಬಿಜೆಪಿ ಸೇರಲು ನಿರಾಕರಿಸಿದ್ದರಿಂದ್ಲೇ 2ನೇ ಬಾರಿಗೆ BCCI ಸ್ಥಾನ ಕೈತಪ್ಪಿದೆ – TMC

    ಕೋಲ್ಕತ್ತಾ: ಸೌರವ್ ಗಂಗೂಲಿ (SouravGanguly) ಅವರು ಬಿಜೆಪಿ (BJP) ಸೇರಲು ನಿರಾಕರಿಸಿದ್ದರಿಂದಲೇ 2ನೇ ಬಾರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಆಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (TMC) ಹೇಳಿದೆ.

    ಈ ಕುರಿತು ಮಾತನಾಡಿರುವ ಟಿಎಂಸಿ (TMC) ವಕ್ತಾರ ಕುನಾಲ್ ಘೋಷ್ (Kunal Ghosh), ಕಳೆದ ವಿಧಾನಸಭೆ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ (West Bengal) ಜನಪ್ರಿಯತೆ ಗಳಿಸಿರುವ ಸೌರವ್ ಗಂಗೂಲಿ ಅವರು ಪಕ್ಷಕ್ಕೆ ಸೇರುತ್ತಾರೆ ಎಂದು ಬಿಜೆಪಿ ಬಿಂಬಿಸಿತ್ತು. ಆದರೆ ಗಂಗೂಲಿ ಅವರು ಪಕ್ಷಕ್ಕೆ ಸೇರಲು ನಿರಾಕರಿಸಿದ್ದರಿಂದ ಬಿಜೆಪಿ ಅವರನ್ನು ಅವಮಾನಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಬಿಸಿಸಿಐ ಅಧ್ಯಕ್ಷರನ್ನಾಗಿ (BCCI President) ರೋಜರ್ ಬಿನ್ನಿ (Roger Binny) ಅವರನ್ನ ಬದಲಿಸಲು ಮುಂದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡಿಗ ರೋಜರ್ ಬಿನ್ನಿಗೆ BCCI ಅಧ್ಯಕ್ಷ ಪಟ್ಟ?

    1983ರ ವಿಶ್ವಕಪ್ (WorldCup) ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಮಂಗಳವಾರ ಬಿಸಿಸಿಐ  ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಪುತ್ರ ಜಯ್ ಶಾ ಸಹ ನಾಮಪತ್ರ ಸಲ್ಲಿಸಿದ್ದಾರೆ. ಜಯ್ ಶಾ (Jay Shah) 2ನೇ ಬಾರಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಬಹುದು. ಆದರೆ ಗಂಗೂಲಿ ಅವರನ್ನು ಹಾಗೆ ಮಾಡುತ್ತಿಲ್ಲ. ಇದು ಸೇಡಿನ ರಾಜಕಾರಣದ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.

    ಇಂತಹ ವಿಷಯಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಬಿಜೆಪಿಯು ಇಂತಹ ಪ್ರಚಾರವನ್ನು ಮಾಡಿದ್ದರಿಂದ, ಊಹಾಪೋಹಗಳಿಗೆ ಪ್ರತಿಕ್ರಿಯಿಸುವುದು ನಮ್ಮ ಜವಾಬ್ದಾರಿ. ಗಂಗೂಲಿ ಅವರು 2ನೇ ಬಾರಿಗೆ ಬಿಸಿಸಿಐಗೆ ಆಯ್ಕೆಯಾಗದಿರುವ ಹಿಂದೆ ರಾಜಕೀಯವಿದೆ. ಸೌರವ್ ಅವರನ್ನು ಅವಮಾನಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌ ಭರ್ಜರಿ ಬ್ಯಾಟಿಂಗ್‌ – ಭಾರತಕ್ಕೆ 7 ವಿಕೆಟ್‌ಗಳ ಜಯ

    ಈ ಆರೋಪ ತಳ್ಳಿಹಾಕಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್, ಟಿಎಂಸಿ ಆರೋಪ ಆಧಾರ ರಹಿತವಾಗಿದೆ. ಬಿಜೆಪಿ ಎಂದಿಗೂ ಗಂಗೂಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಯಸಿಲ್ಲ. ಗಂಗೂಲಿ ಒಂದು ದಂತಕತೆ. ಆದರೆ ಬಿಸಿಸಿಐ ಅಧ್ಯಕ್ಷರಾದ ಮೇಲೆ ಅವರ ಪಾತ್ರ ಏನಾದರೂ ಇದೆಯೇ? ಟಿಎಂಸಿ ಪ್ರತಿಯೊಂದು ವಿಷಯವನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕರ ನೇಮಕಾತಿ ಹಗರಣ- ಮತ್ತೋರ್ವ ಟಿಎಂಸಿ ಶಾಸಕ ಬಂಧನ

    ಶಿಕ್ಷಕರ ನೇಮಕಾತಿ ಹಗರಣ- ಮತ್ತೋರ್ವ ಟಿಎಂಸಿ ಶಾಸಕ ಬಂಧನ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ (Trinamool Congress) ಶಾಸಕ ಮಾಣಿಕ್ ಭಟ್ಟಾಚಾರ್ಯ (Manik Bhattacharya) ಅವರನ್ನು ಜಾರಿ ನಿರ್ದೇಶನಾಲಯ (ED) ರಾತ್ರೋ ರಾತ್ರಿ ವಿಚಾರಣೆ ನಡೆಸಿತ್ತು. ಈ ಬೆನ್ನಲ್ಲೇ ಇಂದು ಮುಂಜಾನೆ ಅವರನ್ನು ಬಂಧಿಸಿದೆ.

    ಶಿಕ್ಷಕರ ನೇಮಕಾತಿ ಹಗರಣಕ್ಕೆ (Teachers Recruitment Scam) ಸಂಬಂಧಿಸಿ ತನಿಖೆ ನಡೆಸುತ್ತಿರುವ ಇಡಿ, ಪಾರ್ಥ ಚಟರ್ಜಿ ಅವರ ವಾಟ್ಸಪ್ ಹಿಸ್ಟರಿಯನ್ನು ತೆಗೆದಿದೆ. ಈ ಸಂದರ್ಭದಲ್ಲಿ ಭಟ್ಟಾಚಾರ್ಯರೊಂದಿಗೆ ಲಂಚ ವಸೂಲಿಯಲ್ಲಿ ತೊಡಗಿರುವ ಕುರಿತು ಸಂಭಾಷಣೆ ನಡೆಸಿರುವ ಆಡಿಯೋ ಬೆಳಕಿಗೆ ಬಂದಿದೆ.

    ಈ ಹಿನ್ನೆಲೆಯಲ್ಲಿ ನಿನ್ನೆ ತೀವ್ರ ವಿಚಾರಣೆ ನಡೆಸಿ ಇಂದು ಬಂಧಿಸಿದೆ. ಘಟನೆಗೆ ಸಂಬಂಧಿಸಿ ಭಟ್ಟಾಚಾರ್ಯ ಅವರನ್ನು ಇಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ

    ಈ ಮೂಲಕ ಹಗರಣದಲ್ಲಿ ಬಂಧಿತರಾದ ಎರಡನೇ ತೃಣಮೂಲ ನಾಯಕರಾಗಿದ್ದಾರೆ. ಜುಲೈನಲ್ಲಿ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಬಂಧಿಸಲಾಗಿತ್ತು. ಅಷ್ಟೇ ಅಲ್ಲದೇ ಅವರ ಸಹಾಯಕಿ ಅರ್ಪಿತಾ ಮುಖರ್ಜಿಗೆ ಸಂಬಂಧಿಸಿದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದನ್ನೂ ಓದಿ: ಡಿಸಿ ಕಚೇರಿಗೆ ಬೀಗ ಹಾಕಿ ರೈತರಿಂದ ಪ್ರತಿಭಟನೆ

    Live Tv
    [brid partner=56869869 player=32851 video=960834 autoplay=true]