Tag: ಟಿಎಂಸಿ ನಾಯಕ

  • ಮಸೀದಿಗೆ ತೆರಳುತ್ತಿದ್ದ ಟಿಎಂಸಿ ನಾಯಕನಿಗೆ ಗುಂಡಿಕ್ಕಿ ಹತ್ಯೆ

    ಮಸೀದಿಗೆ ತೆರಳುತ್ತಿದ್ದ ಟಿಎಂಸಿ ನಾಯಕನಿಗೆ ಗುಂಡಿಕ್ಕಿ ಹತ್ಯೆ

    ಕೋಲ್ಕತ್ತಾ: ಮಸೀದಿಗೆ ತೆರಳುತ್ತಿದ್ದ ತೃಣಮೂಲ ಕಾಂಗ್ರೆಸ್‌ (TMC) ನಾಯಕನನ್ನು ಕೆಲ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ.

    ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬಮಂಗಾಚಿ ಪಂಚಾಯತ್ ಸದಸ್ಯ ಮತ್ತು ಟಿಎಂಸಿ ಪ್ರದೇಶದ ಅಧ್ಯಕ್ಷ ಸೈಫುದ್ದೀನ್ ಲಷ್ಕರ್ (43) ಮೇಲೆ ದುಷ್ಕರ್ಮಿಗಳು ಒಂದು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

    ಕೊಲೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಬರುಯಿಪುರ್ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿ ಪಲಾಶ್ ಚಂದ್ರ ಧಾಲಿ ತಿಳಿಸಿದ್ದಾರೆ.

    ಸಿಪಿಎಂ ಗೂಂಡಾಗಳು ಬಿಜೆಪಿಯೊಂದಿಗೆ ಕೈಜೋಡಿಸಿ ಸೈಫುದ್ದೀನ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಸೈಫುದ್ದೀನ್ ಅವರ ತಂದೆ ಇಲ್ಯಾಸ್ ಲಷ್ಕರ್ ಕೂಡ ಸಿಪಿಎಂನತ್ತ ಬೆರಳು ತೋರಿದ್ದಾರೆ. ಯಾರೂ ತಮ್ಮ ಮಗನೊಂದಿಗೆ ಯಾವುದೇ ದ್ವೇಷವನ್ನು ಹೊಂದಿಲ್ಲ. ಇದು ಸಂಚು ರೂಪಿಸಿ ನಡೆಸಿರುವ ಹತ್ಯೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹೋಟೆಲಿನಲ್ಲಿ‌ ನಾಲ್ವರು ಕಾಮುಕರಿಂದ ಗ್ಯಾಂಗ್‌ರೇಪ್‌ – ಸಹಾಯಕ್ಕಾಗಿ ಕಣ್ಣೀರಿಟ್ಟ ಸಂತ್ರಸ್ತೆ, ಐವರು ಅರೆಸ್ಟ್

    ಬೆಳಗಿನ ಜಾವ ಮಸೀದಿಗೆ ತೆರಳುತ್ತಿದ್ದ ಬಮಂಗಚಿ ಪಂಚಾಯತ್ ಅಧ್ಯಕ್ಷೆ ಪತಿ ಸೈಫುದ್ದೀನ್ ಮೇಲೆ ಐವರು ದುಷ್ಕರ್ಮಿಗಳು ಎರಡು ಬೈಕ್‌ಗಳಲ್ಲಿ ಬಂದು ಗುಂಡು ಹಾರಿಸಿದ್ದಾರೆ. ಭುಜಕ್ಕೆ ಗುಂಡು ಬಡಿದ ನಂತರ ಸೈಫುದ್ದೀನ್ ರಸ್ತೆಯಲ್ಲಿ ಕುಸಿದುಬಿದ್ದರು. ಗುಂಡಿನ ಸದ್ದು ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ ಸೈಫುದ್ದೀನ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಜೋಯ್‌ನಗರ 1 ಬ್ಲಾಕ್‌ನಲ್ಲಿರುವ ಪದ್ಮರಹತ್ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೈಫುದ್ದೀನ್‌ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಮಂಗಾಚಿ ಗ್ರಾಮದಲ್ಲಿ ಘಟನೆ ನಡೆದ ನಂತರ, ಕೋಪಗೊಂಡ ಗುಂಪು ಸಿಪಿಎಂ ಕಾರ್ಯಕರ್ತರು ಮತ್ತು ಬೆಂಬಲಿಗರ ಮನೆಗಳನ್ನು ಧ್ವಂಸಗೊಳಿಸಿತು. ಕೆಲವರಿಗೆ ಬೆಂಕಿ ಹಚ್ಚಲಾಗಿದೆ. ಈ ವೇಳೆ ಒಬ್ಬನ ಹತ್ಯೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಜೋಯ್‌ನಗರದಲ್ಲಿ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಸಾಯನಿಕ ಸಂಗ್ರಹದ ಗೋಡೌನ್‍ನಲ್ಲಿ ಅಗ್ನಿ ಅವಘಡ – ಆರು ಮಂದಿ ಸಜೀವ ದಹನ

  • ಡಿಜೆ ನಿಲ್ಲಿಸಿದ್ದಕ್ಕೆ ಜಗಳ – ಟಿಎಂಸಿ ನಾಯಕನನ್ನೇ ಹೊಡೆದು ಕೊಂದ್ರು

    ಡಿಜೆ ನಿಲ್ಲಿಸಿದ್ದಕ್ಕೆ ಜಗಳ – ಟಿಎಂಸಿ ನಾಯಕನನ್ನೇ ಹೊಡೆದು ಕೊಂದ್ರು

    ಕೋಲ್ಕತ್ತಾ: ಡಿಜೆ (DJ) ನಿಲ್ಲಿಸಿದ್ದಕ್ಕಾಗಿ ಜಗಳ ನಡೆದು, ಟಿಎಂಸಿ ನಾಯಕನನ್ನು (TMC leader) ಹೊಡೆದು ಬರ್ಬರವಾಗಿ ಕೊಂದಿರುವ ಘಟನೆ ಪಶ್ಚಿಮ ಬಂಗಾಳದ (West Bengal) ಮಾಲ್ಡಾದಲ್ಲಿ (Malda) ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 14 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ತೃಣಮೂಲ ನಾಯಕ ಅಫ್ಜಲ್ ಮೊಮಿನ್ (Afzal Momin) ಕೊಲೆಯಾದ ವ್ಯಕ್ತಿ. ಇವರು ಕೈಲಾಶ್‌ಜಿ ಬ್ಲಾಕ್‌ನ ರಥ ಬರಿ ಗ್ರಾಮ ಪಂಚಾಯತ್‌ನ ಉಪ ಮುಖ್ಯಸ್ಥರಾಗಿದ್ದರು. ಗ್ರಾಮದಲ್ಲಿ ಕೆಲ ಯುವಕರು ಜೋರಾಗಿ ಡಿಜೆ ಹಾಕಿ, ಡ್ಯಾನ್ಸ್ ಮಾಡುತ್ತಾ ಗಲಾಟೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಮಂಗಳವಾರ ಬೆಳಗ್ಗೆ ಯುವಕರು ಡಿಜೆ ಬಾರಿಸುತ್ತಿದ್ದರು. ಇದನ್ನು ನಿಲ್ಲಿಸುವಂತೆ ಗ್ರಾಮಸ್ಥರು ಕೇಳಿಕೊಂಡಾಗ ಯುವಕರು ಒಪ್ಪಿದ್ದರು. ಆದರೆ ಯುವಕರು ರಾತ್ರಿ ವೇಳೆಯೂ ಜೋರಾಗಿ ಡಿಜೆ ಹಾಕಿದ್ದಕ್ಕೆ ಗ್ರಾಮಸ್ಥರು ಯುವಕರೊಂದಿಗೆ ಜಗಳ ನಡೆಸಿದ್ದಾರೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ- ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೋಗುತ್ತಿದ್ದ 6 ಭಕ್ತರು ಸಾವು

    ಈ ವೇಳೆ ಡಿಜೆ ನಿಲ್ಲಿಸಿದ್ದಕ್ಕಾಗಿ ಯುವಕರು ಅಫ್ಜಲ್ ಮೋಮಿನ್ ಅವರನ್ನು ಮನಬಂದಂತೆ ಥಳಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮೋಮಿನ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 14 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಇಂದು ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ- ಭಕ್ತರಿಗೆ ಕೊಡಲ್ಲ ಪೂಜ್ಯರ ಚಿತಾಭಸ್ಮ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k