ಚೆನ್ನೈ: ಕರೂರ್‌ನಲ್ಲಿ (Karur Stampede) ರ‍್ಯಾಲಿ ವೇಳೆ ರ‍್ಯಾಲಿಯಲ್ಲಿ 41 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರನ್ನು ನಟ, ಟಿಎಂಕೆ ಮುಖ್ಯಸ್ಥ ವಿಜಯ್ (Vijay) ಭೇಟಿಯಾಗಲಿದ್ದಾರೆ.
ಅಕ್ಟೋಬರ್ 27 ರಂದು ಚೆನ್ನೈ ಸಮೀಪದ ಮಹಾಬಲಿಂಪುರದಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಮೃತರ ಕುಟುಂಬಸ್ಥರನ್ನು ನಟ ಭೇಟಿ ಮಾಡಲಿದ್ದಾರೆ. ಈ ಹಿನ್ನೆಲೆ ಖಾಸಗಿ ರೆಸಾರ್ಟ್‌ನಲ್ಲಿ 50 ರೂಮ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ಟಿಎಂಕೆ ತಿಳಿಸಿದೆ.

ಪ್ರತಿಯೊಂದು ಕುಟುಂಬವನ್ನು ಖಾಸಗಿಯಾಗಿ ಭೇಟಿಯಾಗಿ ನಟ ಸಾಂತ್ವನ ಹೇಳಲಿದ್ದಾರೆ. ಸ್ಥಳಕ್ಕೆ ಬರಲು ಮೃತರ ಕುಟುಂಬಸ್ಥರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಸೆ.27 ರಂದು ಕರೂರ್‌ನಲ್ಲಿ ನಟ ವಿಜಯ್ ಚುನಾವಣಾ ರ‍್ಯಾಲಿ ನಡೆಸಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದರು.
