ಹೈದರಾಬಾದ್: ಇಂಗ್ಲೆಂಡ್ (England) ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಎರಡು ಪಂದ್ಯಗಳಿಂದ ಟೀಮ್ ಇಂಡಿಯಾ (Team India) ಆಟಗಾರ ವಿರಾಟ್ ಕೊಹ್ಲಿ (Virat Kohli) ಹೊರಗುಳಿದಿದ್ದಾರೆ.
ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಜ.25 ರಂದು ಹೈದರಾಬಾದ್‍ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ವೈಯಕ್ತಿಕ ಕಾರಣದಿಂದ ಕೊಹ್ಲಿ ಈ ಸರಣಿಯ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ತಂಡದಿಂದ ಬಿಡುಗಡೆ ಮಾಡುವಂತೆ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿದ್ದರು. ಈ ಮನವಿಗೆ ಬಿಸಿಸಿಐ ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ಕ್ರಿಕೆಟಿಗ ಆರ್.ಅಶ್ವಿನ್‍ಗೆ ಆಹ್ವಾನ
ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಕೊಹ್ಲಿ ಅಲಭ್ಯರಾದರೂ, ಟೆಸ್ಟ್ ತಂಡದಲ್ಲಿ ಅವರನ್ನು ಉಳಿಸಿಕೊಳ್ಳಲು ನಿರ್ಧಾರ ಮಾಡಿದೆ. ಸರಣಿಯ ಎರಡನೇ ಪಂದ್ಯವು ಫೆ.2 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ ಸರಣಿಯ ಉಳಿದ ಮೂರು ಪಂದ್ಯಗಳಿಗೆ ಮರಳುವ ನಿರೀಕ್ಷೆಯಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಕೆಎಸ್ ಭರತ್ (ವಿ.ಕೀ), ಧ್ರುವ್ ಜುರೆಲ್ (ವಿ.ಕೀ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಟ್ರೀತ್ ಬುಮ್ರಾ (ಉ.ನಾ) ಮತ್ತು ಅವೇಶ್ ಖಾನ್. ಇದನ್ನೂ ಓದಿ: ಸತತ ಹೀನಾಯ ಸೋಲಿನಿಂದ ಬೇಸರ – PCB ಅಧ್ಯಕ್ಷ ಸ್ಥಾನಕ್ಕೆ ಝಾಕಾ ಅಶ್ರಫ್ ಗುಡ್‌ಬೈ
ಇಂದೋರ್: ಅಫ್ಘಾನಿಸ್ತಾನ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಟೀಂ ಇಂಡಿಯಾ ಆಲ್‌ರೌಂಡರ್ ಶಿವಂ ದುಬೆ (Shivam Dube), ತನ್ನ ಯಶಸ್ಸನ್ನು ಎಂ.ಎಸ್ ಧೋನಿ (MS Dhoni) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅರ್ಪಿಸಿದ್ದಾರೆ.
ಪಂದ್ಯದ ಬಳಿಕ ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಶಿವಂ ದುಬೆ, ತಮ್ಮ ವೃತ್ತಿಜೀವನದಲ್ಲಿ ಮೇಲೇಳುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಕೊಡುಗೆ ಅಪಾರ. ನಾಯಕ ಎಂ.ಎಸ್ ಧೋನಿ, ಕೋಚ್ ಸ್ಟೀಫನ್ ಫ್ಲೆಮಿಂಗ್ ಸೇರಿದಂತೆ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರರು ನನ್ನ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ವಿರಾಟ್ ಪಾದ ಮುಟ್ಟಿ, ಅಪ್ಪಿಕೊಂಡ – ಭದ್ರತೆ ಉಲ್ಲಂಘಿಸಿದ ಕೊಹ್ಲಿ ಅಪ್ಪಟ ಅಭಿಮಾನಿಗೆ ಸಂಕಷ್ಟ
ನನಗೆ ಸಲ್ಲುತ್ತಿರುವ ಶ್ರೇಯಸ್ಸು, ಸಿಎಸ್‌ಕೆ ತಂಡ ಮತ್ತು ಮಹಿ ಅಣ್ಣನಿಗೆ ಸಲ್ಲಬೇಕು. ನಾನು ನನ್ನ ಆಟ ಆಡುತಿದ್ದೆ, ಆದರೆ ಸಿಎಸ್‌ಕೆ ನನ್ನ ನಿಜವಾದ ಪ್ರತಿಭೆಯನ್ನು ಹೊರತಂದಿದೆ. ತಂಡವು ನನ್ನಲ್ಲಿ ಆ ಆತ್ಮವಿಶ್ವಾಸ ತುಂಬಿದೆ. ನಾನು ಐಪಿಎಲ್‌ನಲ್ಲಿ ರನ್ ಗಳಿಸಲು ಸಾಧ್ಯವಿದೆ ಎಂಬುದನ್ನು ಅವರು ನನಗೆ ಮನವರಿಕೆ ಮಾಡಿದರು. ಅಲ್ಲದೇ ನನ್ನ ಮೇಲೆ ನಂಬಿಕೆ ಇಟ್ಟರು. ಮೈಕ್ ಹಸ್ಸಿ ಮತ್ತು ಫ್ಲೆಮಿಂಗ್ ಅವರಂಥ ಹಿರಿಯರು ನನ್ನ ಮೇಲೆ ನಂಬಿಕೆಯಿಟ್ಟಿದ್ದಾರೆ ಎಂದು ಭಾವುಕರಾಗಿದ್ದಾರೆ.
ಬ್ಯಾಕ್ ಟು ಬ್ಯಾಕ್ ಫಿಫ್ಟಿ:
ಯುವ ಆಲ್‌ರೌಂಡರ್ ಶಿವಂ ದುಬೆ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಹಿರಿಯ ಆಟಗಾರರ ಗಮನ ಸೆಳೆದಿದ್ದಾರೆ. ಅಫ್ಘಾನ್ ವಿರುದ್ಧ ಮೊದಲ ಪಂದ್ಯದಲ್ಲಿ 40 ಎಸೆತಗಳಲ್ಲಿ 2 ಸಿಕ್ಸರ್, 5 ಬೌಂಡರಿಗಳೊಂದಿಗೆ 60 ರನ್ ಚಚ್ಚಿದ ದುಬೆ, 2ನೇ ಪಂದ್ಯದಲ್ಲಿ 32 ಎಸೆತಗಳಲ್ಲಿ ಸ್ಫೋಟಕ 63 ರನ್ (4 ಸಿಕ್ಸರ್, 5 ಬೌಂಡರಿ) ಬಾರಿಸಿ ಮಿಂಚಿದ್ದಾರೆ. ಅಲ್ಲದೇ ಎರಡೂ ಪಂದ್ಯಗಳಲ್ಲಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದ್ದಾರೆ. ಜನವರಿ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3ನೇ ಪಂದ್ಯ ನಡೆಯಲಿದ್ದು, ಅಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಭಾರತಕ್ಕೆ ಸರಣಿ ಜಯ: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿರುವ ಭಾರತ, ತವರಿನಲ್ಲೇ ವೈಟ್‌ವಾಶ್ ಮಾಡುವ ಗುರಿ ಹೊಂದಿದೆ. ಭಾನುವಾರ ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡವು ಗುಲ್ಬದೀನ್ ನಯೀಬ್ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ್ದ ಭಾರತ ಯಶಸ್ವಿ ಜೈಸ್ವಾಲ್, ಶಿವಂ ದುಬೆ ಸ್ಫೋಟಕ ಅರ್ಧಶತಕಗಳ ನೆರವಿನಿಂದ 15.4 ಓವರ್‌ಗಳಲ್ಲೇ 173 ರನ್ ಗಳಿಸಿ ಗೆಲುವು ಸಾಧಿಸಿತು.
ಗುವಾಹಟಿ: ಟೀಂ ಇಂಡಿಯಾದ (Team India) ಆರಂಭಿಕ ಆಟಗಾರ ಋತುರಾಜ್ ಗಾಯಕ್‌ವಾಡ್ (Ruturaj Gaikwad) ಆಸ್ಟ್ರೇಲಿಯಾ (Australia) ವಿರುದ್ಧ ಶತಕ (Century) ಸಿಡಿಸಿ ಭಾರತದ ಪರ ದಾಖಲೆ ಬರೆದಿದ್ದಾರೆ.
ಟಿ20 (T20) ಪಂದ್ಯದಲ್ಲಿ ಆಸೀಸ್ ವಿರುದ್ಧ ಶತಕ ಹೊಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಗಾಯಕ್‌ವಾಡ್ ಪಾತ್ರರಾಗಿದ್ದಾರೆ.
32 ಎಸೆತಗಳಲ್ಲಿ ಅರ್ಧಶತಕ ಹೊಡೆದ ಗಾಯಕ್‌ವಾಡ್ ನಂತರ 20 ಎಸೆತಗಳಲ್ಲಿ 50 ರನ್ ಸಿಡಿಸಿ ಮೊದಲ ಶತಕ ಹೊಡೆದರು. 52 ಎಸೆತಗಳಲ್ಲಿ 100 ರನ್ ಹೊಡೆದ ಗಾಯಕ್ವಾಡ್ ಮಾಕ್ಸ್‌ವೆಲ್ ಎಸೆದ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸ್ ಮತ್ತು 2 ಬೌಂಡರಿ ಸಿಡಿಸಿದರು. ಅಂತಿಮವಾಗಿ ಗಾಯಕ್‌ವಾಡ್ ಔಟಾಗದೇ 123 ರನ್ (57 ಎಸೆತ, 13 ಬೌಂಡರಿ, 7 ಸಿಕ್ಸ್) ಚಚ್ಚಿದರು. ಇದನ್ನೂ ಓದಿ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕ್‌ನಲ್ಲಿ ನಡೆಯುವುದು ಅನುಮಾನ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 24 ರನ್‌ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್ ಮತ್ತು ಇಶನ್ ಕಿಶನ್ ಔಟಾಗಿದ್ದರು. ನಂತರ ಸೂರ್ಯಕುಮಾರ್ ಯಾದವ್ 39 ರನ್(29 ಎಸೆತ, 5 ಬೌಂಡರಿ, 1 ಸಿಕ್ಸರ್), ತಿಲಕ್ ವರ್ಮಾ ಔಟಾಗದೇ 31 ರನ್ ( 24 ಎಸೆತ, 4 ಬೌಂಡರಿ) ಹೊಡೆದರು.
ಇತರೇ ರೂಪದಲ್ಲಿ 23 ರನ್( ಲೆಗ್ ಬೈ 4, ನೋಬಾಲ್ 1 , ವೈಡ್ 18) ಬಂದಿದ್ದರಿಂದ ಅಂತಿಮವಾಗಿ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು.
ರನ್ ಏರಿದ್ದು ಹೇಗೆ?
50 ರನ್ – 41 ಎಸೆತ
100 ರನ್ – 72 ಎಸೆತ
150 ರನ್ – 97 ಎಸೆತ
200ರನ್ – 116 ಎಸೆತ
ಅಹಮದಾಬಾದ್: ಕ್ರಿಕೆಟ್ (Cricket) ಹಬ್ಬ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇಂಡಿಯಾ ಮತ್ತು ಆಸ್ಟ್ರೇಲಿಯಾ (IND Vs AUS) ವಿಶ್ವಕಪ್ ಗಾಗಿ ಅಖಾಡಕ್ಕೆ ಇಳಿಯಲಿದ್ದು ಎರಡು ದೇಶದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ನಾಡಿಬಡಿತವೂ ಜೋರಾಗಿದೆ. ವಿಶ್ವಕಪ್ ನಲ್ಲಿ ಇಲ್ಲಿವರೆಗೆ ವಿಶೇಷ ಸಾಧನೆ ಮಾಡಿರೋ ಟೀಮ್ ಆಸ್ಟ್ರೇಲಿಯಾ ಈ ಬಾರಿ ಭಾರತವನ್ನ ತವರು ನೆಲದಲ್ಲೇ ಸೋಲಿಸಲು ರೆಡಿಮಾಡಿಕೊಂಡಿದೆ.
ಹೌದು, ವಿಶ್ವಕಪ್ (World Cup 2023) ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಸಾಧನೆಯನ್ನ ಯಾರೂ ಅಲ್ಲಗೆಳೆಯುವಂತೆ ಇಲ್ಲ. ಯಾಕಂದ್ರೆ ಇಲ್ಲಿವರಗೆ ಅತಿಹೆಚ್ಚು ಬಾರಿ ಫೈನಲ್‍ಗೆ ಪ್ರವೇಶ ಪಡೆದಿರೋ ತಂಡ ಮಾತ್ರವಲ್ಲ, 5 ಬಾರಿ ವಿಶ್ವಕಪ್ ಕಿರೀಟವನ್ನ ತನ್ನದಾಗಿಸಿಕೊಂಡಿರೋ ರಾಷ್ಟ್ರವಾಗಿರೋದು ಆಸ್ಟ್ರೇಲಿಯಾ. 2023ರ ವಿಶ್ವಕಪ್‍ನಲ್ಲಿ ಫೈನಲ್‍ಗೆ ಎಂಟ್ರಿ ಕೊಟ್ಟಿರುವ ಆಸ್ಟ್ರೇಲಿಯಾ ಎಂಟನೇ ಬಾರಿ ಫೈನಲ್ ಪಂದ್ಯವನ್ನ ಇಂದು ಆಡಲಿದೆ. ಇದನ್ನೂ ಓದಿ: World Cup 2023: ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ
1987, 1999, 2003, 2007, 2015ರಲ್ಲಿ ಚಾಂಪಿಯನ್ ಆಗಿದ್ರೆ 1975 ಮತ್ತು 1996ರ ಫೈನಲ್‍ನಲ್ಲಿ ಸೋತಿರೋ ಅನುಭವವೂ ಆಸ್ಟ್ರೇಲಿಯಾ ತಂಡಕ್ಕೆ ಆಗಿದೆ. ಎಂಟನೇ ಬಾರಿ ಫೈನಲ್ ಆಡ್ತಿರೋ ಆಸ್ಟ್ರೇಲಿಯಾ ಟೀಂ ಈ ಪಂದ್ಯವನ್ನ ಸಹ ಗೆಲ್ಲುವ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಬಿಗ್ ಬಿಗ್ ಟೂರ್ನಿಯಲ್ಲಿ ಜಯಗಳಿಸೋದು ಹೇಗೆ ಅನ್ನೋದನ್ನ ಕಲಿತಿರೋ ಆಸೀಸ್ ತಂಡವನ್ನ ಸುಲಭವಾಗಿ ಮಣಿಸಲು ಸಾಧ್ಯವಿಲ್ಲ. ಇದನ್ನೂ ಓದಿ: ಶಮಿ ಕೈಯಲ್ಲಿ ಬೆಂಕಿ ಚೆಂಡು- ಕಾಂಗರೂಗಳ ನಿದ್ದೆಗೆಡಿಸಿರೋ ಸ್ವಿಂಗ್ ಮಾಸ್ಟರ್
ಟೀಂ ಇಂಡಿಯಾಗೆ ಸರಿಸಮನಾಗಿ ಸವಾಲು ಹಾಕುವ ಸಾಮರ್ಥ್ಯವಿರೋ ಆಸ್ಟ್ರೇಲಿಯಾ (Australia) ಈ ವಿಶ್ವಕಪ್‍ನಲ್ಲಿ ಮೂರನೇ ತಂಡವಾಗಿ ಸೇಮಿಸ್ ಪ್ರವೇಶ ಮಾಡಿತ್ತು. ಲೀಗ್ ಹಂತದಲ್ಲಿ ಆಡಿದ್ದ 9ರಲ್ಲಿ 7 ಪಂದ್ಯವನ್ನ ಗೆದ್ದು 14 ಅಂಕಗಳಿಸಿ ಮೂರನೇ ತಂಡವಾಗಿ ಆಸ್ಟ್ರೇಲಿಯಾ ಸೇಮಿಸ್‍ಗೆ ಲಗ್ಗೆ ಹಾಕಿತ್ತು. ಸೇಮಿಸ್‍ನಲ್ಲಿ ಸೌಥ್ ಆಫ್ರಿಕಾವನ್ನ (South Africa) ಬಗ್ಗುಬಡಿದು ಫೈನಲ್‍ಗೆ ಎಂಟ್ರಿ ನೀಡಿದೆ. ಮೊದಲ ಎರಡು ಪಂದ್ಯದಲ್ಲಿ ಮಾತ್ರ ಸೋತ ಆಸ್ಟ್ರೇಲಿಯಾ ಬಳಿಕ ಸತತವಾಗಿ 8 ಪಂದ್ಯಗಳಲ್ಲಿ ಜಯಗಳಿಸಿಕೊಂಡಿದೆ.
ಪಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಟೀಂ ಬ್ಯಾಟಿಂಗ್ ಬೌಲಿಂಗ್ ಮತ್ತು ಫೀಲ್ಡಿಂಗ್‍ನಲ್ಲಿ ಫುಲ್ ಸ್ಟ್ರಾಂಗ್ ಆಗಿದೆ. ಬ್ಯಾಟಿಂಗ್ ಲೈನ್ ಆಫ್‍ನಲ್ಲಿ ವಾರ್ನರ್, ಹೆಡ್, ಸ್ಮೀತ್, ಮಾರ್ಶ್ ಮತ್ತು ಮಾಕ್ಸಿ ಟ್ರಂಪ್ ಕಾರ್ಡ್‍ಗಳಾಗಿದ್ರೇ, ಬೌಲರ್ ಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹಷಲ್ಹುಡ್, ಕಮಿಂಗ್ಸ್, ಸ್ಪೀಡ್ ಬೌಲಿಂಗ್‍ನಲ್ಲಿ ಭಾರತದ ಬ್ಯಾಟರ್ ಗಳನ್ನ ಕಟ್ಟಿಹಾಕಲು ಸಜ್ಜಾಗ್ತಿದ್ರೇ ಸ್ಲೀನ್ ಜಾದೂ ಮಾಡಲು ಜಂಪಾ ಕೂಡ ಸಿದ್ಧರಾಗಿದ್ದಾರೆ.
ಒಟ್ಟಿನಲ್ಲಿ 7 ಬಾರಿ ವಿಶ್ವಕಪ್ ಫೈನಲ್ ಆಡಿರೋ ಅನುಭವ ಟೀಂ ಆಸೀಸ್‍ಗೆ ಇದೆ. ಇದೇ ಅನುಭವದಲ್ಲಿ 8ನೇ ಫೈನಲ್‍ಗೆ ಆಸ್ಟ್ರೇಲಿಯಾ ಸಜ್ಜಾಗಿದ್ದು, ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಇದಕ್ಕೆ ಭಾರತ ಕೂಡ ರಣತಂತ್ರವನ್ನ ಹಾಕಿಕೊಂಡಿದ್ದು ಮೂರನೇ ಬಾರಿಗೆ ವರ್ಲ್ಡ್ ಕಪ್ ಗೆಲ್ಲುವ ತವಕದಲ್ಲಿದೆ. ಇದಕ್ಕೆ ಉತ್ತರ ಇವತ್ತಿನ ಮ್ಯಾಚ್‍ನಿಂದ ಸಿಗಲಿದೆ.
ಅಹಮದಾಬಾದ್: ಸೋಲಿಲ್ಲದೆ 2023ರ ಏಕದಿನ ವಿಶ್ವಕಪ್ ಫೈನಲ್‍ಗೆ (World Cup Final 2023) ಲಗ್ಗೆ ಇಟ್ಟಿರುವ ಭಾರತ (India) ತಂಡ, ಮೂರನೇ ಬಾರಿ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ಇಂದು ಅಹ್ಮದಾಬಾದ್‍ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ (Narendra Modi Stadium Ahemadabad) ನಡೆಯುವ ಫೈನಲ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಪ್ರಶಸ್ತಿಗಾಗಿ ಸೆಣಸಲಿದೆ. ಟೀಂ ಸ್ಟ್ರಾಟಜಿ ಏನು, ಪ್ಲೇಯಿಂಗ್ ಲೆವನ್ ಹೇಗಿರುತ್ತೆ. ಪಿಚ್ ರಿಪೋರ್ಟ್ ಏನ್ ಹೇಳುತ್ತೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗೋ ಕಾಲ. 12 ವರ್ಷಗಳ ವನವಾಸಕ್ಕೆ ಮುಕ್ತಿ ಸಿಗೋ ಕಾಲ. ಎಸ್, ಎದೆಬಡಿತ ಹೆಚ್ಚಿರೋ ವಿಶ್ವಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇಡೀ ಜಗತ್ತೇ ಕಾದು ಕುಳಿತಿದೆ. ಅಹಮದಾಬಾದ್‍ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಬಲಿಷ್ಟ ಎರಡು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದಾವೆ. ಒಂದು ದಶಕದ ಬಳಿಕ ಐಸಿಸಿ (ICC) ಟ್ರೋಫಿ ಎತ್ತಿಹಿಡಿಯಲು ಭಾರತ ಕಾಯ್ತಿದ್ರೆ, ಇತ್ತ ಆಸ್ಟ್ರೇಲಿಯಾ ಆರನೇ ವಿಶ್ವಕಪ್ ನ್ನು ತನ್ನದಾಗಿಸಿಕೊಳ್ಳಲು ಎದುರು ನೋಡುತ್ತಿದೆ. ಇದನ್ನೂ ಓದಿ: ಇಂದು IND Vs AUS ಸಮರ – 12 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ತವಕ
ಎರಡು ತಂಡಗಳ ಕಾಳಗ ನಿಜಕ್ಕೂ ಮದಗಜಗಳ ಕಾದಾಟವಿದ್ದಂತೆ. ಎರಡು ತಂಡಗಳಲ್ಲೂ ಸ್ಟಾರ್ ಪ್ಲೇಯರ್ಸ್, ಬಿಗ್ ಬಿಟ್ಟರ್ಸ್, ಪಂದ್ಯದ ಗತಿಯನ್ನೇ ಬದಲಿಸೋ ತಾಕತ್ತಿರೋ ಆಟಗಾರರಿದ್ದಾರೆ. ಯಾರಿಗೆ ಯಾರು ಕಮ್ಮಿ ಇಲ್ಲ, ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲ್ಲ. ಅಂಥದ್ದೊಂದು ಹೈವೋಲ್ಟೇಜ್, ಬಿಗ್‍ಫೈಟ್ ಮ್ಯಾಚ್‍ಗೆ ಸಾಕ್ಷಿಯಾಗಲಿದೆ. ಯಾಕಂದ್ರೆ ಇದು 2 ಬಲಿಷ್ಠ ಚಾಂಪಿಯನ್ಸ್ ತಂಡಗಳ ಸೆಣಸಾಟ.
ಎಸ್, ಎರಡು ತಂಡಗಳಿಗೂ ವಿಶ್ವಕಪ್ ಮೇಲೆಯೇ ಕಣ್ಣು. ಹಾಗಾಗಿ ಉಭಯ ತಂಡಗಳು ಕಠಿಣ ತಾಲೀಮು ನಡೆಸಿವೆ. ಭಾರತ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು, ತವರು ನೆಲದ ಬೆಂಬಲ ಆತ್ಮವಿಶ್ವಾಸವನ್ನ ಹಿಮ್ಮಡಿಗೊಳಿಸಿದೆ. ರೋಹಿತ್ ಶರ್ಮಾ, ಗಿಲ್, ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ತಂಡದ ಟ್ರಂಪ್ ಕಾರ್ಡ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ ಮಿಡಲ್ ಆರ್ಡರ್ ನಲ್ಲಿ ನೆರವಾಗಲಿದ್ದಾರೆ. ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‍ಪ್ರೀತ್ ಬುಮ್ರಾ ಬೌಲಿಂಗ್ ದಾಳಿ ಆಸೀಸ್ ಬ್ಯಾಟ್ಸ್ ಮನ್‍ಗಳ ನಿದ್ದೆಗೆಡಿಸಿದೆ. ಆದರೆ ಪಿಚ್ ಸ್ಪಿನ್ನರ್ ಗೆ ಹೆಚ್ಚು ನೆರವಾಗಿರೋದ್ರಿಂದ ರವಿಚಂದ್ರನ್ ಅಶ್ವಿನ್‍ಗೂ ಸ್ಥಾನ ಸಿಗುತ್ತಾ ಕಾದುನೋಡಬೇಕಿದೆ.
ಆಸ್ಟ್ರೇಲಿಯಾಗೆ (Australia) ಬ್ಯಾಟಿಂಗ್ ಶಕ್ತಿಯೇ ದೊಡ್ಡ ಅಸ್ತ್ರ. ಆರಂಭಿಕ ಬ್ಯಾಟ್ಸ್‍ಮನ್ ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್ ಫಾರ್ಮ್‍ನಲ್ಲಿದ್ದಾರೆ. ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್ ವೆಲ್, ಜಾಶ್ ಇಂಗ್ಲಿಸ್ ಮಿಡಲ್ ಆರ್ಡರ್ ನಲ್ಲಿ ನೆರವಾಗಲಿದ್ದಾರೆ. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಂ ಝಾಂಪ, ಹೇಝಲ್‍ವುಡ್ ಬೌಲಿಂಗ್ ಬಲವಿದೆ. ಇನ್ನು ವಿಶ್ವಕಪ್ ಮಹಾಸಮರಕ್ಕೆ ಸಾಕ್ಷಿಯಾಗುತ್ತಿರುವ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ ನವವಧುವಿನಂತೆ ಸಿಂಗಾರಗೊಂಡಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಪಂದ್ಯ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸೆ (Anthony Albanese), ಬಾಲಿವುಡ್ ತಾರೆಯರು, ಸಚಿನ್ ತೆಂಡೂಲ್ಕರ್ (Sachin Tendulkar) ಸೇರಿದಂತೆ ವಿಶ್ವಕಪ್ ಗೆದ್ದ ತಂಡದ ಮಾಜಿ ನಾಯಕರು ಉಪಸ್ಥಿತಿ ಇರಲಿದ್ದಾರೆ. ಇದಲ್ಲದೆ ಏರ್‍ಶೋ, ಲೇಸರ್ ಶೋ, ಸಂಗೀತ, ನೃತ್ಯ ವೈಭವ ವಿಶ್ವಕಪ್ ಫೈನಲ್ ಮ್ಯಾಚ್‍ನ ಕಿಕ್ಕನ್ನ ಹೆಚ್ಚಿಸಲಿದೆ.
ಅಹಮದಾಬಾದ್: ಅಜೇಯರಾಗಿ ಈ ಬಾರಿ ವಿಶ್ವಕಪ್ ಫೈನಲ್ ತಲುಪಿರೋ ಭಾರತ ತಂಡಕ್ಕೆ, ಕಪ್ ಗೆಲ್ಲೋಕೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇರೋದು. ಕಳೆದ 13 ವರ್ಷಗಳಿಂದ ಕಪ್ ಬರ ಎದುರಿಸಿದ್ದ ಮೆನ್ ಇನ್ ಬ್ಲ್ಯೂ, (Men In Blue) ಈ ಬಾರಿ ಆ ಆಸೆಗೆ ಜೀವ ತುಂಬುವ ತವಕದಲ್ಲಿದೆ.
2011 ಏಪ್ರಿಲ್ 2 ಧೋನಿ (Mahendra Singh Dhoni)) ಸಿಡಿಸಿದ್ದ ಆ ಸಿಕ್ಸರ್, 28 ವರ್ಷಗಳ ಕಪ್ ಬರವನ್ನ ನೀಗಿಸಿ ಇತಿಹಾಸವನ್ನ ನಿರ್ಮಿಸಿತ್ತು. ಆ ಸಂಭ್ರಮಕ್ಕೆ ನೋಡ ನೋಡುತ್ತಿದ್ದಂತೆ 12 ವರ್ಷಗಳು ಕಳೆದು ಹೋಗಿದೆ. ಆದರೆ 2011 ರ ಬಳಿಕ ಯಾಕೋ ಏನು ಭಾರತ ತಂಡ ಎಷ್ಟೇ ಉತ್ತಮ ಪ್ರದರ್ಶನ ನೀಡಿದ್ರು ಕಪ್ ಗೆಲ್ಲೋ ಆಸೆ ಮರಿಚೀಕೆ ಹಾಗೇ ಉಳಿದಿತ್ತು. ಆದರೆ ಈಗ ಕಪ್ ಕನಸನ್ನ ಮತ್ತೆ ನನಸು ಮಾಡೋ ಸಂದರ್ಭ ಒದಗಿ ಬಂದಿದ್ದು, ಆ ಒಂದು ಸಂಭ್ರಮದ ಕ್ಷಣಕ್ಕಾಗಿ ಇಡೀ ದೇಶವೇ ಶುಭ ಹಾರೈಕೆಯೊಂದಿಗೆ ತುದಿಗಾಲಲ್ಲಿ ಕಾದು ನಿಂತಿದೆ.
12 ವರ್ಷಗಳ ಬಳಿಕ ಮತ್ತೆ ಟೀ ಇಂಡಿಯಾಗೆ (Team India) ವರ್ಲ್ಡ್ ಚಾಂಪಿಯನ್ (WorldCup 2023) ಆಗೋ ಅವಕಾಶ ಒದಗಿಬಂದಿದೆ. ವಿಶ್ವಕಪ್ ಆರಂಭಿಕ ಪಂದ್ಯದಿಂದಲೂ ಪ್ರಾಬಲ್ಯ ಸಾಧಿಸಿರೋ ಟೀಂ ಇಂಡಿಯಾ ಫೈನಲ್‍ನಲ್ಲಿ ಇಂದು ಬಲಿಷ್ಠ ತಂಡವನ್ನ ಎದುರಿಸುತ್ತಿದೆ. ಈಗಾಗಲೇ ವಿಶ್ವ ಕ್ರಿಕೆಟ್‍ನಲ್ಲಿ ಮಹಾದಾಖಲೆ ಮೂಲಕ 5 ಬಾರಿ ಚಾಂಪಿಯನ್ ಆಗಿರುವ ಏಕೈಕ ತಂಡ ಅಂದ್ರೆ ಅದು ಆಸ್ಟ್ರೇಲಿಯಾ (Australia) ಮಾತ್ರ. ಈಗ ಸದ್ಯ ಆ ಐದು ಬಾರಿ ಚಾಂಪಿಯನ್ ತಂಡವನ್ನ ಮೆಟ್ಟಿ ನಿಲ್ಲಬೇಕಾದ ಸವಾಲು ಎರಡು ಬಾರಿಯ ಚಾಂಪಿಯನ್ ಭಾರತ ತಂಡಕ್ಕೆ ಎದುರಾಗಿದೆ. ಈ ಸವಾಲನ್ನ ಸದ್ಯ ಮೆನ್ ಇನ್ ಬ್ಲ್ಯೂ ಹೊಡೆದುರಿಳಿಸಿದ್ರೆ ಮೂರನೇ ಬಾರಿಗೆ ಕೋಟಿ ಕೋಟಿ ಭಾರತೀಯರ ಕನಸು ನನಸಾಗಲಿದೆ. ಇದನ್ನೂ ಓದಿ: ಅಂಪೈರ್‌ಗಳ ಆಯ್ಕೆ ಟೀಂ ಇಂಡಿಯಾ ಅಭಿಮಾನಿಗಳ ನಿದ್ದೆಗೆಡಿಸಿದ್ದೇಕೆ? – ಯಾರು ಘಟಾನುಘಟಿಗಳು?
ಇಂದಿನ ಪಂದ್ಯ ಗೆದ್ದರೆ ಭಾರತ ಮತ್ತೊಂದು ಐತಿಹಾಸಿಕ ದಾಖಲೆಗೆ ಪಾತ್ರ ಆಗಲಿದೆ. ಆಸ್ಟ್ರೇಲಿಯಾ ಹೊರತು ಪಡಿಸಿದರೆ ಉಳಿದ ಯಾವ ದೇಶಗಳು 3 ಅಥವಾ 3ಕ್ಕಿಂತ ಹೆಚ್ಚು ಬಾರಿ ವಿಶ್ವಚಾಂಪಿಯನ್ ಆಗಿಲ್ಲ. ವೆಸ್ಟ್ ಇಂಡೀಸ್, ಮತ್ತು ಭಾರತ ತಂಡ ಎರಡು ಬಾರಿ ಮಾತ್ರ ಕಪ್ ಗೆದ್ದಿದ್ರೆ, ಉಳಿದಂತೆ ಇಂಗ್ಲೆಂಡ್ (England), ಪಾಕಿಸ್ತಾನ (Pakistan), ಶ್ರೀಲಂಕಾ (Srilanka), ತಂಡಗಳು ತಲಾ ಒಂದು ಬಾರಿ ಮಾತ್ರ ಗೆದ್ದಿರೋದು. ಸದ್ಯ ಈ ಬಾರಿ ಭಾರತ ಫೈನಲ್ ಪಂದ್ಯ ಗೆದ್ದರೆ ಅತೀ ಹೆಚ್ಚು ವಿಶ್ವಕಪ್ ಗೆದ್ದ ತಂಡಗಳ ಪೈಕಿ ಎರಡನೇ ಸ್ಥಾನಕ್ಕೆ ತಲುಪಲಿದೆ. ಜೊತೆಗೆ ಮೂರನೇ ಬಾರಿಗೆ ಕಪ್ ಗೆಲ್ಲುವ ಎರಡನೇ ತಂಡ ಅನ್ನೋ ಖ್ಯಾತಿಗೂ ಕೂಡ ಒಳಗಾಗಲಿದೆ.
ಒಟ್ಟಾರೆ ಇಡೀ ದೇಶವೇ ಭಾರತದ ಫೈನಲ್ ಪಂದ್ಯ ಜಯಕ್ಕಾಗಿ ಕಾದು ನಿಂತಿದೆ. ಇಂದಿನ ಪಂದ್ಯದಲ್ಲೂ ಮೆನ್ ಇನ್ ಬ್ಲ್ಯೂ ಅಜೇಯ ಓಟ ಮುಂದುವರಿಸುವ ಮೂಲಕ ಮತ್ತೊಮ್ಮೆ ವಿಶ್ವ ಕ್ರಿಕೆಟ್‍ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಲಿ ಅಂತಾ ಶುಭ ಕೋರೋಣ. ಆಲ್ ದಿ ಬೆಸ್ಟ್ ಟೀಂ ಇಂಡಿಯಾ.
ಡಬ್ಲಿನ್: ಐರ್ಲೆಂಡ್ (Ireland) ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ (Team India) 33 ರನ್‌ಗಳಿಂದ ಜಯಗಳಿಸುವ ಮೂಲಕ ಇನ್ನೂ ಒಂದು ಪಂದ್ಯ ಇರುವಂತೆಯೇ ಸರಣಿಯನ್ನು ಗೆದ್ದುಕೊಂಡಿದೆ.
ಗೆಲ್ಲಲು 186 ರನ್‌ಗಳ ಗುರಿಯನ್ನು ಪಡೆದ ಐರ್ಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ತಮ್ಮ ಮೊದಲ ನಾಯಕತ್ವದಲ್ಲಿ ಬುಮ್ರಾ ವಿದೇಶಿ ನೆಲದಲ್ಲಿ ಸರಣಿ ಗೆದ್ದಿದ್ದಾರೆ.
ಐರ್ಲೆಂಡ್ 63 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಾಗ ಭಾರತ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು. ಆದರೆ 5ನೇ ವಿಕೆಟಿಗೆ ಆಂಡಿ ಬಾಲ್ಬಿರ್ನಿ ಮತ್ತು ಜಾರ್ಜ್ ಡಾಕ್ರೆಲ್ 30 ಎಸೆತಗಳಲ್ಲಿ 52 ರನ್ ಜೊತೆಯಾಟವಾಡಿ ಬಿಸಿ ಮುಟ್ಟಿಸಿದರು.
ತಂಡದ ಮೊತ್ತ 115 ರನ್ ಆಗಿದ್ದಾಗ ಜಾರ್ಜ್ ಡಾಕ್ರೆಲ್ ಎರಡನೇ ರನ್ ಓಡಲು ಯತ್ನಿಸಿದಾಗ ರನೌಟ್ ಆದರು. ಜಾರ್ಜ್ ಡಾಕ್ರೆಲ್ 13 ರನ್ ಗಳಿಸಿ ಔಟಾದರು. ಕೇವಲ 39 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಆಂಡಿ ಬಾಲ್ಬಿರ್ನಿ 72 ರನ್ (51 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿ ಔಟಾದರು. ಇವರಿಬ್ಬರು ಔಟಾದ ಬೆನ್ನಲ್ಲೇ ತಂಡದ ರನ್ ವೇಗ ಇಳಿಕೆಯಾಯಿತು. ಬುಮ್ರಾ, ಪ್ರಸಿದ್ಧ್ ಕೃಷ್ಣ, ರವಿ ಬಿಷ್ಣೋಯಿ ತಲಾ ಎರಡು ವಿಕೆಟ್ ಪಡೆದರೆ ಅರ್ಶ್‌ದೀಪ್ ಸಿಂಗ್ 1 ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 34 ರನ್‌ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರ ವಿಕೆಟ್ ಕಳೆದುಕೊಂಡಿತ್ತು. ಮೂರನೇ ವಿಕೆಟಿಗೆ ಸಂಜು ಸ್ಯಾಮ್ಸನ್ (Sanju Samson) ಮತ್ತು ಋತ್‌ರಾಜ್ ಗಾಯಕ್ವಾಡ್ (Ruturaj Gaikwad ) 49 ಎಸೆತಗಳಿಗೆ 71 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಸ್ಯಾಮ್ಸನ್ 40 ರನ್ (26 ಎಸೆತ, 5 ಬೌಂಡರಿ, 1 ಸಿಕ್ಸರ್), ಗಾಯಕ್ವಾಡ್ 58 ರನ್ (43 ಎಸೆತ, 6 ಬೌಂಡರಿ 1 ಸಿಕ್ಸರ್) ಹೊಡೆದು ಔಟಾದರು. ನಂತರ ಶಿವಂ ದುಬೆ ಮತ್ತು ರಿಂಕು ಸಿಂಗ್ (Rinku Singh) 5ನೇ ವಿಕೆಟಿಗೆ 28 ಎಸೆತಗಳಲ್ಲಿ 55 ರನ್ ಜೊತೆಯಾಟವಾಡಿದರು. ರಿಂಕು ಸಿಂಗ್ 38 ರನ್ (21 ಎಸೆತ, 2 ಬೌಂಡರಿ, 3 ಸಿಕ್ಸರ್) ಶಿವಂ ದುಬೆ ಔಟಾಗದೇ 22 ರನ್(16 ಎಸೆತ, 2 ಸಿಕ್ಸರ್) ಹೊಡೆದರು.
ಕೇಪ್‌ಟೌನ್: ಜೆಮಿಮಾ ರಾಡ್ರಿಗಸ್ (Jemimah Rodrigues) ಮತ್ತು ರಿಚಾ ಘೋಷ್ (Richa Ghosh) ಅತ್ಯುತ್ತಮ ಆಟದಿಂದ ಭಾರತ (Team India) ತಂಡ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಪಾಕಿಸ್ತಾನ (Pakistan) ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 3 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಭಾರತ ಇನ್ನೂ 6 ಎಸೆತ ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 151 ರನ್ ಹೊಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಿತು. ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಚೇಸಿಂಗ್ ಇದಾಗಿದ್ದು, ಟೂರ್ನಿಯಲ್ಲಿ ಭಾರತದ ಅತಿ ದೊಡ್ಡ ಚೇಸಿಂಗ್ ಇದಾಗಿದೆ.
ಕೊನೆಯ ನಾಲ್ಕು ಓವರ್‌ನಲ್ಲಿ ಟೀಂ ಇಂಡಿಯಾ ಗೆಲುವಿಗೆ 41 ರನ್ ಅಗತ್ಯವಿತ್ತು. 17ನೇ ಓವರ್‌ನಲ್ಲಿ 13 ರನ್ ಬಂದರೆ 18ನೇ ಓವರ್‌ನಲ್ಲಿ ರಿಚಾ ಘೋಷ್ ಹ್ಯಾಟ್ರಿಕ್ ಫೋರ್ ಹೊಡೆದ ಪರಿಣಾಮ 14 ರನ್ ಬಂದಿತ್ತು. 19ನೇ ಓವರ್‌ನಲ್ಲಿ ರಾಡ್ರಿಗಸ್ 3 ಬೌಂಡರಿ ಹೊಡೆದ ಪರಿಣಾಮ ಪಂದ್ಯವನ್ನು ಭಾರತ ಗೆದ್ದುಕೊಂಡಿತು.
ಜೆಮಿಮಾ ಮತ್ತು ರಿಚಾ ಘೋಷ್ ಮುರಿಯದ ನಾಲ್ಕನೇ ವಿಕೆಟಿಗೆ 33 ಎಸೆತಗಳಲ್ಲಿ 58 ರನ್ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು.
ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಜಯಗಳಿಸಿದ್ದ ಟೀಂ ಇಂಡಿಯಾಗೆ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ಐಸಿಸಿ ಶೇ.20 ರಷ್ಟು ದಂಡವನ್ನು ವಿಧಿಸಿದೆ.
ನಿಗದಿತ ಸಮಯಕ್ಕಿಂತಲೂ ಒಂದು ಓವರ್ ತಡವಾಗಿ ಮುಗಿದ ಹಿನ್ನೆಲೆಯಲ್ಲಿ ಪಂದ್ಯದ ರೆಫ್ರಿ ಜಾವಗಲ್ ಶ್ರೀನಾಥ್ ಭಾರತ ತಂಡಕ್ಕೆ ದಂಡ ವಿಧಿಸಿದ್ದಾರೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ ನಿಗದಿತ ಅವಧಿಯ ಒಳಗಡೆ ತಂಡ ತನ್ನ ಬೌಲಿಂಗ್ ಕೋಟಾವನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ನಿಗದಿತ ಅವಧಿಯ ಒಳಗಡೆ ಬೌಲಿಂಗ್ ಮುಕ್ತಾಯಗೊಳಿಸದಿದ್ದರೆ ಆಟಗಾರರು ತಮ್ಮ ಪಂದ್ಯದ ಶುಲ್ಕದ ಶೇ.20 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ.
ನಾಯಕ ಕೊಹ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಯಾವುದೇ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ಹೇಳಿದೆ.
ಆನ್-ಫೀಲ್ಡ್ ಅಂಪೈರ್‌ಗಳಾದ ಅನಿಲ್ ಚೌಧರಿ, ಕೆ.ಎನ್. ಅನಂತಪದ್ಮನಾಭನ್ ಮತ್ತು ಮೂರನೇ ಅಂಪೈರ್ ವೀರೇಂದ್ರ ಶರ್ಮಾ ಅವರು ರೆಫ್ರಿಗೆ ಭಾರತ ತಂಡದ ವಿರುದ್ಧ ದೂರು ನೀಡಿದ್ದರು.
ಎರಡನೇ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. 165 ರನ್‌ಗಳ ಗುರಿಯನ್ನು ಪಡೆದಿದ್ದ ಭಾರತ 3 ವಿಕೆಟ್ ಕಳೆದುಕೊಂಡು ಜಯವನ್ನು ಸಾಧಿಸಿತ್ತು. ತಾನು ಆಡಿದ ಮೊದಲ ಪಂದ್ಯದಲ್ಲೇ ಇಶಾನ್ ಕಿಶನ್ 56 ರನ್(32 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ವಿರಾಟ್ ಕೊಹ್ಲಿ ಅಜೇಯ 73 ರನ್(49 ಎಸೆತ, 5 ಬೌಂಡರಿ, 3 ಸಿಕ್ಸರ್) ಹೊಡೆದು ಭಾರತಕ್ಕೆ ಜಯವನ್ನು ತಂದುಕೊಟ್ಟರು.
ಒಂದು ಪಂದ್ಯಕ್ಕೆ ಎಷ್ಟು ನಿಮಿಷ?
ಒಂದು ಟಿ 20 ಪಂದ್ಯ 180 ನಿಮಿಷಗಳಲ್ಲಿ ಮುಗಿಯಬೇಕಾಗುತ್ತದೆ. ಒಂದು ಇನ್ನಿಂಗ್ಸ್‌ಗೆ 90 ನಿಮಿಷ ಇರುತ್ತದೆ. ಎರಡು ಇನ್ನಿಂಗ್ಸ್ ನಡುವೆ 10 ನಿಮಿಷ ಬ್ರೇಕ್ ಇರುತ್ತದೆ. 90 ನಿಮಿಷದ ಒಳಗಡೆ ಇನ್ನಿಂಗ್ಸ್ ಮುಗಿಯದೇ ಇದ್ದಲ್ಲಿ ಬೌಲಿಂಗ್ ಹಾಕುವ ತಂಡಕ್ಕೆ ದಂಡವನ್ನು ವಿಧಿಸಲಾಗುತ್ತದೆ.
ನವದೆಹಲಿ: ಒಂದು ಕಡೆ ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಬೌಲಿಂಗ್‍ನಲ್ಲಿ ಮಿಂಚ್ಚುತ್ತಿದ್ದರೆ, ಇನ್ನೊಂದು ಕಡೆ ಭಾರತದಲ್ಲಿ ವೈಯುಕ್ತಿಕ ವಿಚಾರಕ್ಕೆ ಭಾರಿ ಸುದ್ದಿಯಾಗಿದ್ದಾರೆ. ಸ್ವತಃ ಅವರ ಪತ್ನಿಯೇ ಸಾಮಾಜಿಕ ಜಾಲತಾಣಗಳಲ್ಲಿ ಶಮಿಯ ಚಾರಿತ್ರ್ಯಹರಣ ಮಾಡಿದ್ದಾರೆ.
ಈ ಹಿಂದೆ ಅಫ್ಘಾನ್ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಪತಿಯನ್ನು ಪರೋಕ್ಷವಾಗಿ ಪತ್ನಿ ಹೊಗಳಿದ್ದರು. ಆದರೆ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಬೆನ್ನಲ್ಲೇ ಶಮಿಯ ಚಾರಿತ್ರ್ಯಹರಣಕ್ಕೆ ಹಸೀನ್ ಮುಂದಾಗಿದ್ದಾರೆ. ಅತ್ಯುತ್ತಮ ಫಾರ್ಮ್‍ನಲ್ಲಿರುವ ಶಮಿಯ ವೈಯುಕ್ತಿಕ ಜೀವನದ ಬಗ್ಗೆ ಮತ್ತೊಮ್ಮೆ ಪತ್ನಿ ಹಸೀನ್ ಜಹಾನ್ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮೊಹಮ್ಮದ್ ಶಮಿ ಖಾಸಗಿ ವಿಚಾರದ ಬಗ್ಗೆ ಹಸೀನ್ ಜಹಾನ್ ಪೋಸ್ಟ್ ಮಾಡಿ ಸದ್ಯ ಭಾರಿ ಸುದಿಯಲ್ಲಿದ್ದಾರೆ. ಸದು ವಿಶ್ವಕಪ್‍ನಲ್ಲಿ ಭಾರತಕ್ಕೆ ಹೀರೋ ಆಗಿರುವ ಶಮಿಯ ಇನ್ನೊಂದು ಮುಖವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನಕ್ಕೆ ಹಸೀನ್ ಕೈ ಹಾಕಿದ್ದಾರೆ.
ಹೌದು. ಶಮಿ ಅವರ ಟಿಕ್ ಟಾಕ್‍ನಲ್ಲಿ ಫಾಲೋ ಮಾಡುವ ಹುಡುಗಿಯರ ಲೀಸ್ಟ್ ನ ಸ್ಕ್ರೀನ್ ಶಾಟ್ ತೆಗೆದು ಅದನ್ನು ಹಸೀನ್ ಬಹಿರಂಗ ಪಡಿಸಿದ್ದಾರೆ. `ಲಫಂಗ ಮೊಹಮ್ಮದ್ ಶಮಿ ಟಿಕ್ ಟಾಕ್ ಅಕೌಂಟ್ ತೆರೆದಿದ್ದೇನೆ. ಆತ 97 ಮಂದಿಯನ್ನು ಫಾಲೋ ಮಾಡುತ್ತಿದ್ದು, ಅದರಲ್ಲಿ 90 ಹುಡುಗಿಯರು. ಒಂದು ಮಗುವಿನ ತಂದೆಯಾಗಿ ಇದು ನಾಚಿಕೆಗೇಡು’ ಎಂದು ಪೋಸ್ಟ್ ಮಾಡಿ ಮರ್ಯಾದೆ ತೆಗೆದಿದ್ದಾರೆ.
ಭಾರತದ ವೇಗಿ ವಿರುದ್ಧ ಮಾಡಲಾದ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.
ಕಳೆದ ವರ್ಷದ ಐಪಿಎಲ್ ಸೀಸನ್ ವೇಳೆ ಶಮಿ ಇತರೆ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಹಸೀನ್ ದೂರು ದಾಖಲಿಸಿದ್ದರು. ಇದರಿಂದ ಶಮಿ ಮತ್ತು ಹಸೀನ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟುಕೊಂಡು, ಇವರ ಸಂಬಂಧ ಕೋರ್ಟ್ ಮೆಟ್ಟಿಲೇರುವಂತಾಯಿತು. ಈ ಬಳಿಕ ಈ ಜೋಡಿ ದೂರಾಗಿದ್ದರು.
ಆದರೆ ವಿಶ್ವಕಪ್‍ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ಬರೆದ ಶಮಿಯನ್ನು ಪರೋಕ್ಷವಾಗಿ ಶಮಿ ಹೆಸರನ್ನು ಸೂಚಿಸದೇ, ದೇಶದ ಪರ ಯಾರು ಉತ್ತಮವಾಗಿ ಆಡಿದರೂ ಖುಷಿಯ ವಿಚಾರ ಎಂದು ಹೊಗಳಿದ್ದರು. ಇದನ್ನು ಕಂಡು ಇಬ್ಬರ ನಡುವಿನ ಮನಸ್ತಾಪ ಮುಗಿದು ಎಲ್ಲವೂ ಸರಿಯಾಗಿರಬಹುದು ಎಂದು ಭಾವಿಸಿದ್ದರು. ಆದರೆ ಇದೀಗ ಮತ್ತೊಮ್ಮೆ ಹಸೀನ್ ಟೀಂ ಇಂಡಿಯಾ ಆಟಗಾರನ ಮೇಲೆ ಹಸೀನ್ ಸಿಡಿದೆದ್ದಿದ್ದಾರೆ.
ಐಸಿಸಿ ವಿಶ್ವಕಪ್ 2019 ನಲ್ಲಿ ಟೀಂ ಇಂಡಿಯಾದ ಭರ್ಜರಿ ಗೆಲುಗಳಿಂದ ತನ್ನ ಜರ್ನಿ ಮುಂದುವರಿಸಿದೆ. ಭಾರತ ಆಡಿರುವ ಐದು ಪಂದ್ಯಗಳಲ್ಲಿ ಮೂರಲ್ಲಿ ಬ್ಯಾಟ್ಸ್ ಮನ್‍ಗಳು ಮಿಂಚಿದ್ದರೆ, ಎರಡು ಪಂದ್ಯದಲ್ಲಿ ಬೌಲರುಗಳಯ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಅದರಲ್ಲೂ ಅಫ್ಘಾನಿಸ್ತಾನದ ವಿರುದ್ಧ ಹ್ಯಾಟ್ರಿಕ್ ಮೂಲಕ ಅಬ್ಬರಿಸಿದ್ದ ಮೊಹಮ್ಮದ್ ಶಮಿ, ವೆಸ್ಟ್ ಇಂಡೀಸ್ ವಿರುದ್ಧವೂ 4 ವಿಕೆಟ್ ಪಡೆದು ಮಿಂಚಿದ್ದರು.