Tag: ಟಾಸ್ಕ್ ಫೋರ್ಸ್

  • ಡ್ರಗ್ಸ್ ಹಾವಳಿ ತಡೆಗೆ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ: ಸಿಎಂ ಘೋಷಣೆ

    ಡ್ರಗ್ಸ್ ಹಾವಳಿ ತಡೆಗೆ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ: ಸಿಎಂ ಘೋಷಣೆ

    ಬೆಂಗಳೂರು: ಕರ್ನಾಟಕದಲ್ಲಿ ಡ್ರಗ್ಸ್ ಹಾವಳಿ (Drugs Trafficking) ಮಟ್ಟ ಹಾಕಲು ಸರ್ಕಾರ ಟಾಸ್ಕ್ ಫೋರ್ಸ್ (Task Force) ರಚನೆಗೆ ಮುಂದಾಗಿದೆ. ಇಂದು (ಬುಧವಾರ) ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಮಾದಕ ವಸ್ತುಗಳ ಹಾವಳಿ ಮತ್ತು ನಿಯಂತ್ರಣ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಹೊಸ ಕಾನೂನು ತರುವುದು ಮತ್ತು ಡ್ರಗ್ಸ್ ಹಾವಳಿ ತಡೆಗೆ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡುವ ನಿರ್ಧಾರ ಮಾಡಲಾಯಿತು.

    ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಡ್ರಗ್ಸ್ ಹಾವಳಿ ಜಾಸ್ತಿ ಆಗಿದೆ. 50% ಡ್ರಗ್ಸ್ ಹಾವಳಿ ಬೆಂಗಳೂರಿನಲ್ಲೇ ಇದ್ದು, ಮಂಗಳೂರಿನಲ್ಲಿ 22% ಡ್ರಗ್ಸ್ ಹಾವಳಿ ಜಾಸ್ತಿ ಇದೆ. ಡ್ರಗ್ಸ್ ಹಾವಳಿ ತಡೆಯಲು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಾಜ್ಯಮಟ್ಟದ ಸಮಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಡಿಸಿ ನೇತೃತ್ವದಲ್ಲಿ ಸಮಿತಿ ಇದೆ. ಇದನ್ನ ಹೊರತುಪಡಿಸಿ ಮತ್ತಷ್ಟು ಪರಿಣಾಮಕಾರಿಗೆ ಡ್ರಗ್ಸ್ ವಿರುದ್ಧ ಸಮರ ಸಾರಲು ಗೃಹ ಸಚಿವ ಪರಮೇಶ್ವರ್ (G Parameshwar) ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜಾಮೀನು ಭವಿಷ್ಯ ಗುರುವಾರ ನಿರ್ಧಾರ: ಅಟ್ರಾಸಿಟಿ ಕಾಯ್ದೆ ಅನ್ವಯವಾಗಲ್ಲ – ಮುನಿರತ್ನ ವಕೀಲರ ವಾದ ಏನು?

    ಈ ಸಮಿತಿಯಲ್ಲಿ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ ಸೇರಿ ಸಂಬಂಧಪಟ್ಟ ಇಲಾಖೆಗಳ ಸಚಿವರು ಸದಸ್ಯರಾಗಿರುತ್ತಾರೆ. ಬೆಂಗಳೂರು ಪೂರ್ವದಲ್ಲಿ ಡ್ರಗ್ಸ್ ಹಾವಳಿ ಜಾಸ್ತಿ ಇರೋ ಮಾಹಿತಿ ಬಂದಿದೆ. ಇದರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬಾಯಲ್ಲೂ ಪಕ್ಷದ ಸಿದ್ಧಾಂತ ಬಂದಿರೋದು ಒಳ್ಳೆಯ ಬೆಳವಣಿಗೆ: ವಿಜಯೇಂದ್ರ

    ಡ್ರಗ್ಸ್ ದಂಧೆ ಪೊಲೀಸರಿಗೆ ಗೊತ್ತಿಲ್ಲದೆ ನಡೆಯಲ್ಲ. ಹೀಗಾಗಿ ಇನ್ನು ಮುಂದೆ ಡಿವೈಎಸ್ಪಿ, ಎಸಿಪಿ, ಡಿಸಿಪಿ, ಎಸ್ಪಿಗಳಿಗೆ ಜವಾಬ್ದಾರಿ ಫಿಕ್ಸ್ ಮಾಡುವ ನಿರ್ಧಾರ ಮಾಡಿದ್ದೇವೆ. ಡ್ರಗ್ಸ್ ನಿಯಂತ್ರಣಕ್ಕೆ ಹೊಸ ಕಾನೂನು ತರಲು ಮುಂದಾಗಿದ್ದೇವೆ. ಡ್ರಗ್ಸ್ ಅಪರಾಧಕ್ಕೆ ಜಾಮೀನು ಸಿಗದಂತೆ ನಿಯಮ ಮಾಡುತ್ತೇವೆ. ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಜಾರಿ ಮಾಡೋದಾಗಿ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮಾಗಡಿ ಪುರಸಭೆ ಗದ್ದುಗೆ ಏರಿದ ಕಾಂಗ್ರೆಸ್

    ಎನ್‌ಸಿಸಿ, ಎನ್‌ಎಸ್‌ಎಸ್ ಸೇರಿದಂತೆ ಸ್ಟೂಡೆಂಟ್ ಪೊಲೀಸ್ ಸಹಾಯ ಪಡೆಯುವುದು, ಎನ್‌ಜಿಓಗಳ ಸಹಕಾರ ಪಡೆಯುವ ತೀರ್ಮಾನ ಮಾಡಲಾಗಿದೆ. ಡ್ರಗ್ಸ್ ಅಪರಾಧ ಕೇಸ್ ವೇಗವಾಗಿ ಇತ್ಯರ್ಥ ಮಾಡಲು ವಿಶೇಷ ಕೋರ್ಟ್ ಸ್ಥಾಪನೆ ಮಾಡುತ್ತೇವೆ. ಇದಲ್ಲದೆ ಜಿಲ್ಲಾ ಸಮಿತಿ ಮತ್ತು ರಾಜ್ಯ ಸಮಿತಿ ಕಡ್ಡಾಯವಾಗಿ ಪ್ರತಿ ತಿಂಗಳು ಸಭೆ ಮಾಡುವಂತೆ ಆದೇಶ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಶಾಸಕ ಮುನಿರತ್ನ ಕೇಸ್‌ನಲ್ಲಿ ದ್ವೇಷದ ರಾಜಕೀಯ ಮಾಡ್ತಿಲ್ಲ: ಸಿದ್ದರಾಮಯ್ಯ

  • ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಸಮಗ್ರ ಕಾರ್ಯಾಚರಣೆಗೆ ಟಾಸ್ಕ್‌ ಫೋರ್ಸ್‌ ರಚನೆ

    ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಸಮಗ್ರ ಕಾರ್ಯಾಚರಣೆಗೆ ಟಾಸ್ಕ್‌ ಫೋರ್ಸ್‌ ರಚನೆ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಸಮಗ್ರ ಕಾರ್ಯಾಚರಣೆ, ಮೇಲ್ವಿಚಾರಣೆಗಾಗಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ (Tushar Giri Nath) ಅವರು ವಲಯ ಮಟ್ಟದಲ್ಲಿ ‘ಟಾಸ್ಕ್ ಫೋರ್ಸ್” ಸಮಿತಿ ರಚಿಸಿ ಆದೇಶಿಸಿದ್ದಾರೆ.

    ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 12,878 ಕಿಮೀ ರಸ್ತೆ ಜಾಲವಿದ್ದು, ಈ ರಸ್ತೆಗಳ ಪೈಕಿ 1,344.84 ಕಿಮೀ ಉದ್ದದ ರಸ್ತೆಗಳನ್ನು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳೆಂದು ಪರಿಗಣಿಸಲಾಗಿದೆ. ಈ ರಸ್ತೆಗಳನ್ನು, ರಸ್ತೆ ಮೂಲಭೂತ ಸೌಕರ್ಯ ಶಾಖೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಉಳಿಕೆ 11,533.16 ಕಿಮೀ ರಸ್ತೆಗಳನ್ನು ವಲಯ ಮಟ್ಟದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ಪ್ರಣಾಳಿಕೆ ಭರವಸೆಯಿಂದಾಗುವ ಆರ್ಥಿಕ ಲಾಭ ಅಭ್ಯರ್ಥಿಯ ಭ್ರಷ್ಟಾಚಾರವಲ್ಲ – ಜಮೀರ್‌ಗೆ ಸುಪ್ರೀಂ ರಿಲೀಫ್

    ಗುಂಡಿ ಬಿದ್ದಿರುವ ರಸ್ತೆಗಳನ್ನು (Pothole Roads) ನಿಗಧಿತ ಅವಧಿಯಲ್ಲಿ ನಿರ್ವಹಣೆ ಮಾಡಲು ವಲಯ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡುವುದು ಸೂಕ್ತವೆಂದು ತೀರ್ಮಾನಿಸಿ, ಸದರಿ ಟಾಸ್ಕ್ ಫೋರ್ಸ್‌ ಅನ್ನು ವಲಯ ಮಟ್ಟದ ವಲಯ ಆಯುಕ್ತರು ಅವರ ನೇತೃತ್ವದಲ್ಲಿ ರಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಇದನ್ನೂ ಓದಿ: T20 World Cup: ಚುಟುಕು ಕ್ರಿಕೆಟ್ ಯುಗದ ಆರಂಭ – ಚೊಚ್ಚಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್!

    ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?
    1. ವಲಯ ಆಯುಕ್ತರು – ಅಧ್ಯಕ್ಷರು.
    2. ವಲಯ ಜಂಟಿ ಆಯುಕ್ತರು – ಸದಸ್ಯರು.
    3. ವಲಯ ಮುಖ್ಯ ಅಭಿಯಂತರರು – ಸದಸ್ಯರು.
    4. ವಲಯ ಸಹಾಯಕ ಸಂಚಾರ ಪೊಲೀಸ್ ಆಯುಕ್ತರು – ಸದಸ್ಯರು.
    5. ವಲಯದ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು – ಸದಸ್ಯರು.
    6. ವಲಯ ವ್ಯಾಪ್ತಿಗೆ ಬರುವ ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ ಅಭಿಯಂತರರು – ಸದಸ್ಯರು.
    7. ವಲಯ ಆಯುಕ್ತರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಉಪ ನಿಯಂತ್ರಕರು (ಹಣಕಾಸು) – ಸದಸ್ಯರ ಕಾರ್ಯದರ್ಶಿ.

  • ಆನೆ ಹಾವಳಿ ತಪ್ಪಿಸಲು ಟಾಸ್ಕ್ ಫೋರ್ಸ್ ರಚನೆ – ಅತಿ ಹೆಚ್ಚು ಆನೆ ಹೊಂದಿರುವ ಜಿಲ್ಲೆಯನ್ನೇ ಕೈಬಿಟ್ಟ ಸರ್ಕಾರ

    ಆನೆ ಹಾವಳಿ ತಪ್ಪಿಸಲು ಟಾಸ್ಕ್ ಫೋರ್ಸ್ ರಚನೆ – ಅತಿ ಹೆಚ್ಚು ಆನೆ ಹೊಂದಿರುವ ಜಿಲ್ಲೆಯನ್ನೇ ಕೈಬಿಟ್ಟ ಸರ್ಕಾರ

    ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಅದರಲ್ಲೂ ಆನೆ ಹಾವಳಿ ಕೂಡ ಹೆಚ್ಚಾಗಿದೆ. ಇದನ್ನ ಪರಿಹರಿಸಲು ಸರ್ಕಾರ ಅಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದೆ.‌ ಆದರೆ ಅತಿ ಹೆಚ್ಚು ಆನೆಗಳಿರುವ ಚಾಮರಾಜನಗರ (Chamarajanagar) ಜಿಲ್ಲೆಯನ್ನೇ ಟಾಸ್ಕ್ ಫೋರ್ಸ್‌ನಿಂದ ಕೈಬಿಟ್ಟಿದೆ.

    ಚಾಮರಾಜನಗರ ಶೇ.50% ರಷ್ಟು ಅರಣ್ಯದಿಂದಲೇ ಕೂಡಿರುವ ಜಿಲ್ಲೆ.‌ ಅದರಲ್ಲೂ ಸುಮಾರು 2 ಸಾವಿರಕ್ಕೂ ಹೆಚ್ಚು ಆನೆಗಳು ಜಿಲ್ಲೆ ಕಾಡಿನಲ್ಲಿ ವಾಸಿಸುತ್ತಿವೆ. ಇದರಿಂದಾಗಿ ಜಿಲ್ಲೆಯಲ್ಲಿ‌ ನಿರಂತರವಾಗಿ ವನ್ಯಜೀವಿ ಮಾನವ ಸಂಘರ್ಷ ಉಂಟಾಗುತ್ತಿದೆ. ಅದರಲ್ಲೂ ಆನೆಗಳ ಹಾವಳಿಯಿಂದ ಅನೇಕರು ಜೀವ ಕಳೆದುಕೊಂಡಿದ್ದಾರೆ. ಇದೇ ರೀತಿಯ ಸಮಸ್ಯೆ ಬೇರೆ ಜಿಲ್ಲೆಗಳಲ್ಲೂ ಇದೆ. ಇದನ್ನ ಮನಗಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು, ಪರಿಹಾರ ಮಾಡುವ ನಿಟ್ಟಿನಲ್ಲಿ ವಿಶೇಷ ಕಾರ್ಯಪಡೆಯನ್ನ ರಚನೆ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದು ಪ್ರವಾಸದ ಬಳಿಕ ಕೋಲಾರ ಕ್ಷೇತ್ರದಲ್ಲಿ ಚುರುಕಾದ ಬಿಜೆಪಿ

    ಕಾರ್ಯಪಡೆಯಲ್ಲಿ ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ ಒಳಗೊಂಡಿದೆ. ಆದರೆ ಸರ್ಕಾರ ಈ ಟಾಸ್ಕ್ ಫೋರ್ಸ್‌ನಲ್ಲಿ ಚಾಮರಾಜನಗರ ಜಿಲ್ಲೆಯನ್ನೇ ಕೈಬಿಟ್ಟಿದೆ. ಇದರಿಂದ ಜಿಲ್ಲೆಯ ಶಾಸಕರು ಈ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಪ್ರಮುಖವಾಗಿ ಚಾಮರಾಜನಗರ ಜಿಲ್ಲೆಯ ಹನೂರು ಮಹದೇಶ್ವರ ಬೆಟ್ಟದ ಭಾಗದಲ್ಲಿ ಸಾಕಷ್ಟು ಆನೆ ಹಾವಳಿ ಇದೆ. ಆನೆ ಹಾವಳಿಯಿಂದ ಜೀವ ಹಾನಿ, ಜಮೀನಿನಲ್ಲಿ ಬೆಳೆಯಾನಿಯಂತಹ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ‌ಹಾನಿ ಸಮಸ್ಯೆ ಇರುವ ಕಾರಣ ರೇಡಿಯೋ ಕಾಲರ್‌ಗಳನ್ನು ಮಹದೇಶ್ವರ ಬೆಟ್ಟ ಭಾಗದಲ್ಲಿ ಆನೆಗಳಿಗೆ ಹಾಕಲಾಗಿದೆ.‌ ಇಷ್ಟೊಂದು ಸಮಸ್ಯೆ ಇದ್ದರೂ ಸರ್ಕಾರ ಜಿಲ್ಲೆಯನ್ನ ಟಾಸ್ಕ್ ಫೋರ್ಸ್‌ನಿಂದ ಕೈಬಿಟ್ಟಿರುವುದಕ್ಕೆ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

    ಅಷ್ಟೇ ಅಲ್ಲದೇ ಟಾಸ್ಕ್‌ ಫೋರ್ಸ್‌ನಲ್ಲಿರುವ ಅಧಿಕಾರಿಗಳ ಬಗ್ಗೆಯು ವನ್ಯಜೀವಿ ತಜ್ಞರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಎಂಟು ಜನರ ಕಾರ್ಯಪಡೆಯಲ್ಲಿರುವ ಅಧಿಕಾರಿಗಳಿಗೆ ಆನೆ-ಮಾನವ ಸಂಘರ್ಷ ತಡೆಗಟ್ಟಬೇಕಾದ ಅನುಭವವೇ ಇಲ್ಲವಂತೆ. ಇಲ್ಲಿರುವ ಅರ್ಧಕ್ಕಿಂತ ಹೆಚ್ಚು ಅಧಿಕಾರಿಗಳು ಸಾಮಾಜಿಕ ಅರಣ್ಯದಲ್ಲಿ ಕೆಲಸ ಮಾಡಿರುವ ಅನುಭವ ಇದೆ. ಆದರೆ ಸಂಘರ್ಷ ತಡೆಗಟ್ಟಲು ಏನು ಮಾಡಬೇಕು ಎಂಬ ಅನುಭವ ಇಲ್ಲ. ಟಾಸ್ಕ್ ಫೋರ್ಸ್‌ ಮಾಡಿರುವುದು ಒಳ್ಳೆಯ ನಿರ್ಧಾರ‌. ಆದರೆ ಅದನ್ನ ಸರಿಯಾಗಿ ಮಾಡಿದರೆ ಒಳ್ಳೆಯದಾಗುತ್ತೆ ಅನ್ನೋ ಅಭಿಪ್ರಾಯ ಕೇಳಿಬರುತ್ತಿದೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯಕ್ಕಿರುವ 4% ಮೀಸಲಾತಿಯನ್ನು 12% ಅಥವಾ 15%ಕ್ಕೆ ಏರಿಸಿ – ಸರ್ಕಾರಕ್ಕೆ ಡೆಡ್‌ಲೈನ್

    ಸರ್ಕಾರ ಜನರ ಒಳಿತಿಗೆ ಒಂದೊಂದೇ ಯೋಜನೆ ರೂಪಿಸುತ್ತಿದೆ. ಒಂದು ಕಡೆ ಸಮಸ್ಯೆ ಎದುರಿಸುತ್ತಿರುವವರಿಗೆ ಪರಿಹಾರ ಸಿಗುತ್ತಿಲ್ಲ ಎನ್ನುವ ಕೂಗಿದೆ. ಯೋಜನೆಯನ್ನೇ ಸರಿಯಾಗಿ ಕಾರ್ಯರೂಪಕ್ಕೆ ತರುತ್ತಿಲ್ಲ ಅನ್ನೋದು ಇಂತಹ ತಪ್ಪುಗಳಿಂದಲೇ ಸಾಬೀತಾಗುತ್ತಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಟಾಸ್ಕ್ ಫೋರ್ಸ್‌ನಲ್ಲಿ ಚಾಮರಾಜನಗರಕ್ಕೂ ಸ್ಥಾನ ಕಲ್ಪಿಸಲಿ ಎಂದು ಶಾಸಕರು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜನರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ: ಸಚಿವ ಈಶ್ವರಪ್ಪ

    ಜನರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ: ಸಚಿವ ಈಶ್ವರಪ್ಪ

    ಶಿವಮೊಗ್ಗ: ಸರ್ಕಾರದ ಮಾರ್ಗಸೂಚಿ ಪ್ರಕಾರ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನರು ಗೊಂದಲಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಎದುರಿಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ. ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲಾಗಿದ್ದು, ಎಲ್ಲಾ ತಾಲೂಕುಗಳಲ್ಲಿ ಸೂಕ್ತ ಬೆಡ್ ವ್ಯವಸ್ಥೆ, ಆಕ್ಸಿಜನ್ ಲಭ್ಯತೆಯನ್ನು ಖಾತ್ರಿಪಡಿಸಲು ಸೂಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜನರು ಗುಂಪು ಸೇರುವುದನ್ನು ತಪ್ಪಿಸಲು ವಾರಾಂತ್ಯ ಕಫ್ರ್ಯೂ ವಿಧಿಸಲಾಗಿದ್ದು, ಜನರು ಭಯಪಡುವ ಅಗತ್ಯ ಇಲ್ಲ ಎಂದರು.

    ಟಾಸ್ಕ್ ಫೋರ್ಸ್: ಗ್ರಾಮೀಣ ಮಟ್ಟದಲ್ಲಿ ಈಗಾಗಲೇ ರಚಿಸಲಾಗಿರುವ ಟಾಸ್ಕ್ ಫೋರ್ಸ್ ಮತ್ತೆ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಅದರಲ್ಲಿರುವ ಅಧಿಕಾರಿಗಳು ಸಕ್ರಿಯವಾಗಿ ಸಭೆಗಳಲ್ಲಿ ಭಾಗವಹಿಸುವುದು ಸೇರಿದಂತೆ ಕರ್ತವ್ಯ ನಿರ್ವಹಿಸಬೇಕು. ಈ ಕುರಿತು ಯಾವುದೇ ದೂರುಗಳು ಬರಬಾರದು ಎಂದರು.

    ಲಸಿಕೆ ಅಭಿಯಾನ: 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆಗೆ ಜ.10 ರಿಂದ ಜಿಲ್ಲೆಯಾದ್ಯಂತ ಚಾಲನೆ ನೀಡಲಾಗುವುದು. ಈಗಾಗಲೇ ಎರಡನೇ ಡೋಸ್ ಪಡೆದು 90 ದಿನ ಕಳೆದಿರುವವರು ಬೂಸ್ಟರ್ ಡೋಸ್ ಪಡೆಯಬಹುದಾಗಿದೆ. ಬೂಸ್ಟರ್ ಡೋಸ್ ಪಡೆಯಲು ಜಿಲ್ಲೆಯಲ್ಲಿ ಒಟ್ಟು 2 ಲಕ್ಷ ಫಲಾನುಭವಿಗಳಿದ್ದಾರೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ನೀಡಲು ವ್ಯವಸ್ಥೆ ಮಾಡಲಾಗುವುದು. ಇದೇ ರೀತಿ ಈಗಾಗಲೇ 15-18 ವರ್ಷದ ಒಳಗಿನವರಿಗೆ ಲಸಿಕೆ ನೀಡುವ ಕಾರ್ಯ ನಡೆಯುತ್ತಿದ್ದು, ಡಿಸೆಂಬರ್ 12ರ ಒಳಗಾಗಿ ಎಲ್ಲಾ 83,831 ಮಂದಿಗೆ ಲಸಿಕೆ ನೀಡುವ ಕಾರ್ಯ ಪೂರ್ಣಗೊಳಿಸಬೇಕು ಎಂದರು. ಇದನ್ನೂ ಓದಿ: ಸಶಸ್ತ್ರಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ಹೆಚ್ಚಿಸಲು ನೂರು ಸೈನಿಕ ಶಾಲೆಗಳ ಸ್ಥಾಪನೆ: ರಾಜನಾಥ್ ಸಿಂಗ್

    ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮಾತನಾಡಿ, ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 1382 ಬೆಡ್ ಗಳು ಲಭ್ಯವಿದ್ದು, 640 ಬೆಡ್ ಗಳನ್ನೂ ಕೋವಿಡ್ ಗಾಗಿ ಮೀಸಲಿರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 94 ಸಾವಿರ ಕಿಲೋ ಲೀಟರ್ ಆಕ್ಸಿಜನ್ ಸಂಗ್ರಹಣಾ ಸಾಮರ್ಥ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ದೆ, ಈಗ ಮೇಕೆದಾಟು ಹೋರಾಟ: ಡಿಕೆಶಿಗೆ ಕಾರಜೋಳ ಟಾಂಗ್

    ಸಭೆಯಲ್ಲಿ ಶಾಸಕರಾದ ಅಶೋಕ್ ನಾಯ್ಕ್, ರುದ್ರೇಗೌಡ, ಡಿ. ಎಸ್. ಅರುಣ್, ಜಿ.ಪಂ. ಸಿಇಒ ಎಂ.ಎಲ್. ವೈಶಾಲಿ, ಎಸ್.ಪಿ. ಲಕ್ಷ್ಮಿ ಪ್ರಸಾದ್ ಇತರರಿದ್ದರು.

  • ಮಳೆ ಅವಾಂತರ ತಡೆಗೆ ಟಾಸ್ಕ್ ಫೋರ್ಸ್ ರಚನೆ

    ಮಳೆ ಅವಾಂತರ ತಡೆಗೆ ಟಾಸ್ಕ್ ಫೋರ್ಸ್ ರಚನೆ

    ಬೆಂಗಳೂರು: ಮಳೆ ಸೃಷ್ಟಿಸುತ್ತಿರುವ ಅವಾಂತರಗಳನ್ನು ತಡೆಯಲು ಬೆಂಗಳೂರಿನ ಬೊಮ್ಮನಹಳ್ಳಿ ಬಿಬಿಎಂಪಿ ಅಧಿಕಾರಿಗಳು ಟಾಸ್ಕ್ ಫೋರ್ಸ್ ರಚನೆಗೆ ಮುಂದಾಗಿದ್ದಾರೆ.

    ಕಳೆದ 15 ದಿನಗಳಿಂದ ಮಳೆ ಪ್ರತಿನಿತ್ಯ ಒಂದಲ್ಲೊಂದು ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ. ಬೊಮ್ಮನಹಳ್ಳಿಯ ಸುತ್ತಮುತ್ತ ಅನೇಕ ಸಮಸ್ಯೆಗಳು ಉಂಟಾಗಿದೆ ಇದನ್ನು ತಡೆಯಲು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ನೇತೃತ್ವದಲ್ಲಿ ಇಂದು ನಗರದ ಎಚ್‍ಎಸ್‍ಆರ್ ಬಡಾವಣೆ ಬಿಡಿಎ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಟಾಸ್ಕ್ ಫೋರ್ಸ್ ಗೆ ಚಾಲನೆ ನೀಡಲಾಯಿತು. ಇದನ್ನೂ ಓದಿ: ರಾಜ್ಯದಲ್ಲಿ ಚಳಿಗಾಲವೋ..? ಮಳೆಗಾಲವೋ..?- ಮಳೆಗಾಲ ಮುಗಿದ್ರೂ ತಗ್ಗದ ವರುಣಾರ್ಭಟ

    ಟಾಸ್ಕ್ ಫೋರ್ಸ್ ನಲ್ಲಿ 6 ಮಂದಿ ಬಿಬಿಎಂಪಿ ಸಿಬ್ಬಂದಿ 60 ಮಂದಿ ಸಿವಿಲ್ ಡಿಫೆನ್ಸ್ ಸಿಬ್ಬಂದಿ, 40 ಮಂದಿ ಹೋಂಗಾರ್ಡ್‍ಗಳು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬೆಸ್ಕಾಮ್ ಅಧಿಕಾರಿಗಳು ಎಲ್ಲರೂ ಸಹ ಕಾರ್ಯಪ್ರವೃತ್ತರಾಗಿದ್ದಾರೆ ಮೂರು ಶಿಫ್ಟ್ ಗಳಲ್ಲಿ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಿಸಲಿದ್ದು ಮಳೆ ಸಂಪೂರ್ಣವಾಗಿ ನಿಲ್ಲುವವರೆಗೆ ಈ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಿಸಲಿದೆ ಮಳೆ ಸಮಯದಲ್ಲಿ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗುವ ಸಿಬ್ಬಂದಿ ಯಾವುದೇ ಸಮಯದಲ್ಲಾದರೂ ಸಹ ಸ್ಥಳಕ್ಕೆ ತಲುಪುವಂತಹ ಎಲ್ಲಾ ಸಿದ್ಧತೆಗಳು ಹಾಗೂ ಕ್ರಮಗಳು ಮೊದಲೇ ತೆಗೆದುಕೊಂಡು ಸಿದ್ಧರಿರುತ್ತಾರೆ ಎಂದು ಸತೀಶ್ ರೆಡ್ಡಿ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಉಗ್ರಗಾಮಿ ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿ

  • ಸಿಎಂ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಭೆ- ಕೊರೊನಾ ನಿಯಂತ್ರಣಕ್ಕೆ ಯಾವ ಸಚಿವರಿಗೆ ಏನು ಜವಾಬ್ದಾರಿ?

    ಸಿಎಂ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಭೆ- ಕೊರೊನಾ ನಿಯಂತ್ರಣಕ್ಕೆ ಯಾವ ಸಚಿವರಿಗೆ ಏನು ಜವಾಬ್ದಾರಿ?

    – ಸೋಂಕು ಪ್ರದೇಶಗಳ ಕಟ್ಟುನಿಟ್ಟಿನ ಸೀಲ್‍ಡೌನ್‍ಗೆ ಸಿಎಂ ಸೂಚನೆ

    ಬೆಂಗಳೂರು: ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ತೀವ್ರ ಗೊಂದಲಕ್ಕೊಳಗಾಗಿದೆ, ಸಚಿವರಲ್ಲೇ ಹೊಂದಾಣಿಕೆ ಇಲ್ಲ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೊನಾ ಕಟ್ಟಿ ಹಾಕಲು ಟಾಸ್ಕ್‌ಫೋರ್ಸ್ ಸಭೆ ನಡೆಸಿದ್ದು, ಸಚಿವರಿಗೆ ವ್ಯವಸ್ಥಿತವಾಗಿ ಜಚಾಬ್ದಾರಿ ಹಂಚಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದು, ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚು ಕಾಣಿಸಿಕೊಂಡಿರುವ ಪ್ರದೇಶಗಳನ್ನು ಕಟ್ಟುನಿಟ್ಟಾಗಿ ಸೀಲ್‍ಡೌನ್ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಬೆಂಗಳೂರು ನಗರದ ಕೆಲವೆಡೆ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಅಂತಹ ಪ್ರದೇಶಗಳನ್ನು ಗುರುತಿಸಿ ಸೀಲ್‍ಡೌನ್ ಮಾಡುವಂತೆ ಇಂದು ಮಧ್ಯಾಹ್ನ ನಡೆದ ಕೋವಿಡ್-19 ನಿಗ್ರಹ ಕಾರ್ಯಪಡೆ ಸಭೆಯಲ್ಲಿ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

    ಅಧಿಕಾರಿಗಳು, ವೈದ್ಯರು ಮತ್ತು ಎಲ್ಲ ಸಿಬ್ಬಂದಿ ಪರಿಶ್ರಮದಿಂದ ಕೆಲಸ ಮಾಡಿದ್ದರಿಂದಲೇ ಕರ್ನಾಟಕ ಇಂದು ಸಮಾಧಾನಕರ ಸ್ಥಿತಿಯಲ್ಲಿದೆ. ಇತ್ತೀಚೆಗೆ ಬೆಂಗಳೂರು ನಗರ ಮತ್ತು ಕೆಲ ಜಿಲ್ಲೆಗಳಲ್ಲಿ ಅನೇಕ ಕಾರಣಗಳಿಂದ ಸೋಂಕು ಹೆಚ್ಚಿದೆ. ಅದನ್ನು ನಿಯಂತ್ರಿಸಿ ಕೋವಿಡ್-19 ಹಿಮ್ಮೆಟ್ಟಿಸಲು ಮುಂದಿನ ದಿನಗಳಲ್ಲಿ ಎಲ್ಲರೂ ಇನ್ನಷ್ಟು ಪರಿಶ್ರಮದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದಾರೆ ಎಂದರು.

    ಜವಾಬ್ದಾರಿ ಹಂಚಿಕೆ: ಇಡೀ ವ್ಯವಸ್ಥೆ ಅಚ್ಚುಕಟ್ಟಾಗಿ, ಪಾರದರ್ಶಕ ರೀತಿಯಲ್ಲಿ ಕಾರ್ಯಾಚರಣೆ ನಡೆಸಬೇಕು. ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುವ ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ಸಚಿವರು ಸಂಘಟಿತವಾಗಿ ಕೆಲಸ ಮಾಡಬೇಕು ಎಂದಿದ್ದಾರೆ. ಅಲ್ಲದೆ ಕೋವಿಡ್ ವಿಷಯಕ್ಕೆ ಸಂಬಂಧಿಸಿದ ಎಲ್ಲ ನೀತಿ, ನಿರೂಪಣೆ, ಮಾರ್ಗಸೂಚಿ, ಮಾಧ್ಯಮಗಳಿಗೆ ಮಾಹಿತಿ ನೀಡುವುದು, ವಾರ್ ರೂಮ್ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಕೋವಿಡ್ ಕೇರ್ ಸೆಂಟರ್ ಗಳ ಸ್ಥಾಪನೆ ಮತ್ತು ನಿರ್ವಹಣೆಯನ್ನು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರಿಗೆ ಹಂಚಿಕೆ ಮಾಡಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದಶಿ ವಿಶ್ವನಾಥ್ ಅವರಿಗೆ ಖಾಸಗಿ ಆಸ್ಪತ್ರೆಗಳ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಎಲ್ಲರೂ ಸಮನ್ವಯದಿಂದ ಕೆಲಸ ಮಾಡಲು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ ಎಂದರು.

    ಕಾನೂನು ಕ್ರಮ: ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳಪೆ ಪಿಪಿಇ ಕಿಟ್ ನೀಡಲಾಗಿದೆ ಎಂಬ ವರದಿ ಮತ್ತು ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಬಿಸಾಡಲಾಗಿತ್ತು ಎಂಬ ವಿಷಯ ಗಮನಕ್ಕೆ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗೆ ಮುಂದೆ ಇಂತಹ ಘಟನೆ ಮರುಕಳಿಸದಂತೆ ಸೂಚನೆ ನೀಡಲಾಗಿದೆ. ಇಷ್ಟರ ಮೇಲೂ ಅಂತಹ ಪ್ರಕರಣ ಮರುಕಳಿಸಿದರೆ ಎಚ್ಚರಿಕೆ ನೀಡಲಾಗುವುದು. ಆಗಲೂ ಪರಿಸ್ಥಿತಿ ಸರಿಯಾಗದಿದ್ದಲ್ಲಿ ಕಾನೂನು ಮೂಲಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಟಾಸ್ಕ್‌ಫೋರ್ಸ್ ಸಭೆಯಲ್ಲಿ ಲಾಕ್‍ಡೌನ್ ವಿಚಾರವು ಚರ್ಚೆಗೆ ಬಂತು. ಈ ಸನ್ನಿವೇಶದಲ್ಲಿ ಲಾಕ್‍ಡೌನ್ ಬೇಕಿಲ್ಲ ಎಂದು ನಾನು ಮತ್ತು ಡಿಸಿಎಂ ಅಶ್ವತ್ಥನಾರಾಯಣ ಸಿಎಂಗೆ ಹೇಳಿದ್ದೇವೆ. ಈ ಕುರಿತು ಮುಂದೆ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ಸಿಎಂ ಪ್ರಕಟಿಸಿದ್ದಂತೆ ಭಾನುವಾರ ಮತ್ತು ರಾತ್ರಿ ಕಫ್ರ್ಯೂ ಮುಂದಿನ ಆದೇಶದವರೆಗೆ ಮುಂದುವರಿಯಲಿದೆ ಎಂದರು.

    ಸಿಎಂ ನೇತೃತ್ವದಲ್ಲಿ ನಡೆದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ, ಸಚಿವರಾದ ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಮತ್ತು ಹಿರಿಯ ಅಧಿಕಾರಿಗಳು ಹಾಜರಿದ್ದರು ಎಂದು ವಿವರಿಸಿದರು.

    ಟೆಲಿ ಮೆಡಿಸನ್ ಕಾರ್ಟ್‍ಗೆ ಚಾಲನೆ: ಕಾರ್ಯಕ್ರಮದಲ್ಲಿ ಸಿಸ್ಕೊ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ಅಡಿ ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಡುಗೆ ನೀಡಿರುವ ಟೆಲಿ ಮೆಡಿಸನ್ ಕಾರ್ಟ್‍ಗೆ ಸಚಿವ ಸುಧಾಕರ್ ವಿಧಾನಸೌಧದಲ್ಲಿ ಚಾಲನೆ ನೀಡಿದರು. ಬಳಿಕ ಕೋವಿಡ್-19 ಆಸ್ಪತ್ರೆಯಲ್ಲಿ ಕಳೆದ 7 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿ ಜೊತೆ ಮಾತನಾಡಿ ಎಲ್ಲ ವಿವರ ಪಡೆದರು.