Tag: ಟಾಸ್

  • ದಾಖಲೆಗಾಗಿ ಆಡದೇ ಇದ್ದರೂ ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    ದಾಖಲೆಗಾಗಿ ಆಡದೇ ಇದ್ದರೂ ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    ಅಹಮದಾಬಾದ್‌: ಸಿಕ್ಸರ್‌, ಬೌಂಡರಿ ಸಿಡಿಸಿ ವಿಶ್ವಕಪ್‌ ಕ್ರಿಕೆಟ್‌ (World Cup Cricket) ಟೂರ್ನಿಯಲ್ಲಿ ಅಭಿಮಾನಿಗಳನ್ನು ರಂಜಿಸಿದ್ದ ಟೀಂ ಇಂಡಿಯಾ (Team India) ನಾಯಕ ರೋಹಿತ್‌ ಶರ್ಮಾ (Rohit Sharma) ವಿಶ್ವ ದಾಖಲೆ (World Record) ಬರೆದಿದ್ದಾರೆ.

    ಹೌದು. ಈ ಟೂರ್ನಿಯ 11 ಪಂದ್ಯಗಳಿಂದ 597 ರನ್‌ ಸಿಡಿಸಿ ಇತಿಹಾಸ ಸೃಷ್ಟಿದ್ದಾರೆ. ಈ ಮೂಲಕ ತಂಡ ಒಂದರ ನಾಯಕನಾಗಿ ಅತಿ ಹೆಚ್ಚು ರನ್‌ ಸಿಡಿಸಿದ ಬ್ಯಾಟರ್‌ ಆಗಿ ರೋಹಿತ್‌ ಹೊರಹೊಮ್ಮಿದ್ದಾರೆ.

     

     

    ಈ ಹಿಂದೆ 2019ರಲ್ಲಿ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ 578 ರನ್‌, 2007ರಲ್ಲಿ ಶ್ರೀಲಂಕಾದ ಜಯವರ್ಧನೆ 548 ರನ್‌, 2007 ರಲ್ಲಿ ಆಸ್ಟ್ರೇಲಿಯಾ ರಿಕ್ಕಿ ಪಾಂಟಿಂಗ್‌ 539 ರನ್‌, 2019 ರಲ್ಲಿ ಆಸ್ಟ್ರೇಲಿಯಾದ ಆರನ್‌ ಫಿಂಚ್‌ 507 ರನ್‌ ಹೊಡೆದಿದ್ದರು. ಇದನ್ನೂ ಓದಿ: ಮೂರು ಫೈನಲ್‌ ಪೈಕಿ ಟಾಸ್‌ ಸೋತ ಎರಡರಲ್ಲಿ ಭಾರತ ಚಾಂಪಿಯನ್‌ – ಈ ಬಾರಿ ಏನಾಗಬಹುದು?

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ  ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಫೈನಲ್‌ನಲ್ಲಿ ರೋಹಿತ್‌ ಶರ್ಮಾ 31 ಎಸೆತಗಳಲ್ಲಿ 47 ರನ್‌( 3 ಸಿಕ್ಸರ್‌, 4 ಬೌಂಡರಿ) ಸಿಡಿಸಿ ಔಟಾದರು. ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ ರೋಹಿತ್‌ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. 7ನೇ ಸ್ಥಾನದಲ್ಲಿರುವ ಡೇವಿಡ್‌ ವಾರ್ನರ್‌ ಫೈನಲ್‌ ಪಂದ್ಯವನ್ನು ಹೊರತುಪಡಿಸಿ 10 ಪಂದ್ಯಗಳಿಂದ 528 ರನ್‌ ಹೊಡೆದಿದ್ದಾರೆ.

    ನಾನು ದಾಖಲೆಗಾಗಿ ಆಡುವುದಿಲ್ಲ. ನಾನು ಬ್ಯಾಟ್‌ ಮಾಡಲು ಬರುವಾಗ ತಂಡದ ಸ್ಕೋರ್‌ ಸೊನ್ನೆ ಆಗಿರುತ್ತದೆ. ಆರಂಭಿಕ ಆಟಗಾರನಾಗಿರುವ ಕಾರಣ ನನಗೆ ತಂಡದ ಖಾತೆಯನ್ನು ತೆರೆಯಲು ಅವಕಾಶ ಸಿಗುತ್ತದೆ. ನಾನು ವೇಗವಾಗಿ ರನ್‌ ಗಳಿಸಿದಷ್ಟು ನಂತರ ಬರುವ ಆಟಗಾರರಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದರು.

    125.94 ಸ್ಟ್ರೇಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ರೋಹಿತ್ ಶರ್ಮಾ 1 ಶತಕ, 3 ಅರ್ಧಶತಕ, 66 ಬೌಂಡರಿ, 31 ಸಿಕ್ಸರ್‌ ಸಿಡಿಸಿದ್ದಾರೆ.

     

  • ಮೂರು ಫೈನಲ್‌ ಪೈಕಿ ಟಾಸ್‌ ಸೋತ ಎರಡರಲ್ಲಿ ಭಾರತ ಚಾಂಪಿಯನ್‌ – ಈ ಬಾರಿ ಏನಾಗಬಹುದು?

    ಮೂರು ಫೈನಲ್‌ ಪೈಕಿ ಟಾಸ್‌ ಸೋತ ಎರಡರಲ್ಲಿ ಭಾರತ ಚಾಂಪಿಯನ್‌ – ಈ ಬಾರಿ ಏನಾಗಬಹುದು?

    ಅಹಮದಾಬಾದ್‌: ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ (World Cup Cricket Final) ಪಂದ್ಯದಲ್ಲಿ ಭಾರತ (India) ಟಾಸ್‌ (Toss) ಸೋತಿದೆ. ಆಸ್ಟ್ರೇಲಿಯಾ (Australia) ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಟಾಸ್‌ ಗೆದ್ದು ಫೀಲ್ಡಿಂಗ್‌ (Fielding) ಆಯ್ಕೆ ಮಾಡಿಕೊಂಡಿದ್ದಾರೆ.

    ಭಾರತ ಇಲ್ಲಿಯವರೆಗೆ 4 ಬಾರಿ ಫೈನಲ್‌ ಪ್ರವೇಶಿಸಿದ್ದು ಮೂರು ಬಾರಿ ಟಾಸ್‌ ಸೋತರೆ ಒಂದು ಬಾರಿ ಟಾಸ್‌ ಗೆದ್ದುಕೊಂಡಿದೆ.

    1983ರ ಫೈನಲ್‌ನಲ್ಲಿ ಕಪಿಲ್‌ ದೇವ್‌ ಟಾಸ್‌ ಸೋತಿದ್ದರು. ಮೊದಲು ಬ್ಯಾಟ್‌ ಮಾಡಿದ್ದ ಭಾರತ 183 ರನ್‌ಗಳಿಗೆ  ಆಲೌಟ್‌ ಆಗಿತ್ತು. ವಿಂಡೀಸ್‌ 140 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಮೊದಲ ಬಾರಿಗೆ ಭಾರತ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

    2003 ರಲ್ಲಿ ನಾಯಕ ಸೌರವ್‌ ಗಂಗೂಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆರಿಸಿಕೊಂಡಿದ್ದರು. ಆಸ್ಟ್ರೇಲಿಯಾ 2 ವಿಕೆಟ್‌ ನಷ್ಟಕ್ಕೆ 359 ರನ್‌ ಗಳಿಸಿದ್ದರೆ ಭಾರತ 234 ರನ್‌ಗಳಿಗೆ ಆಲೌಟ್‌ ಆಗಿತ್ತು.

     

    2011 ರಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್‌ ಮಾಡಿ 6 ವಿಕೆಟ್‌ ನಷ್ಟಕ್ಕೆ 274 ರನ್‌ ಹೊಡೆದಿತ್ತು. ನಂತರ ಬ್ಯಾಟ್‌ ಮಾಡಿದ ಭಾರತ 48.2 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 277 ರನ್‌ ಹೊಡೆಯುವ ಮೂಲಕ 6 ವಿಕೆಟ್‌ಗಳ ಜಯ ಸಾಧಿಸಿ ಎರಡನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದನ್ನೂ ಓದಿ: ಶಮಿ ಕೈಯಲ್ಲಿ ಬೆಂಕಿ ಚೆಂಡು- ಕಾಂಗರೂಗಳ ನಿದ್ದೆಗೆಡಿಸಿರೋ ಸ್ವಿಂಗ್ ಮಾಸ್ಟರ್

    ಟಾಸ್‌ ಸೋತ ಎರಡು ಫೈನಲ್‌ ಪಂದ್ಯಗಳನ್ನು ಭಾರತ ಗೆದ್ದುಕೊಂಡರೆ, ಟಾಸ್‌ ಗೆದ್ದ ಒಂದು ಫೈನಲ್‌ ಪಂದ್ಯವನ್ನು ಭಾರತ ಸೋತಿದೆ. ಹೀಗಾಗಿ ಈ ಬಾರಿ ಯಾವ ಫಲಿತಾಂಶ ಬರಬಹುದು ಎಂಬ ಕುತೂಹಲ ಹೆಚ್ಚಾಗಿದೆ.

     

  • ಡೆಲ್ಲಿ ಟಾಸ್ ವೇಳೆ ಶ್ರೇಯಸ್ ನೋಡಿ ಧೋನಿ ನಕ್ಕಿದ್ದು ಏಕೆ ಗೋತ್ತಾ? ವಿಡಿಯೋ ನೋಡಿ

    ಡೆಲ್ಲಿ ಟಾಸ್ ವೇಳೆ ಶ್ರೇಯಸ್ ನೋಡಿ ಧೋನಿ ನಕ್ಕಿದ್ದು ಏಕೆ ಗೋತ್ತಾ? ವಿಡಿಯೋ ನೋಡಿ

    ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಡೆಲ್ಲಿ, ಚೆನ್ನೈ ತಂಡಗಳ ನಡುವಿನ ಪಂದ್ಯದ ಟಾಸ್ ವೇಳೆ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಚಿಮ್ಮಿದನ್ನು ನೋಡಿದ ಧೋನಿ ನಕ್ಕು ಸುಮ್ಮನಾಗಿದ್ದಾರೆ.

    ಈ ಮುನ್ನ ಇಬ್ಬರು ನಾಯಕರನ್ನು ಸಾಂಪ್ರದಾಯದಂತೆ ನ್ಯೂಜಿಲೆಂಡ್ ಕ್ರಿಕೆಟರ್ ಸೈಮನ್ ಪರಿಚಯಿಸಿದರು. ಬಳಿಕ ಡೆಲ್ಲಿ ಕ್ಯಾಪ್ಟನ್ ಶ್ರೇಯಸ್ ಕೈಗೆ ನಾಣ್ಯ ನೀಡಲಾಯಿತು. ಈ ವೇಳೆ ನಾಣ್ಯವನ್ನು ಚಿಮ್ಮಲು ಪ್ರಯಾಸ ಪಟ್ಟ ಶ್ರೇಯಸ್ ನೇರವಾಗಿ ಕ್ಯಾಮೆರಾ ಮುಂದೆ ಎಸೆದರು. ಇದನ್ನು ಕಂಡ ಧೋನಿ ಕ್ಷಣ ಕಾಲ ನಗೆ ಬೀರಿದ್ದರು. ಧೋನಿ ನಗು ಕಂಡ ಶ್ರೇಯಸ್ ಸಹ ಮುಗುಳ್ನಗೆ ಬೀರಿದರು.

    ಈ ಪಂದ್ಯದಲ್ಲಿ ಡೆಲ್ಲಿ ಬೌಲಿಂಗ್ ದಾಳಿಗೆ ಸಿಲುಕಿದ ಚೆನ್ನೈ ಬ್ಯಾಟಿಂಗ್ ಪಡೆ ಸೋಲುಂಡಿತ್ತು. ಪಂದ್ಯದ ಬಳಿಕ ಶ್ರೇಯಸ್ ಅಯ್ಯರ್, ಧೋನಿ ತಮ್ಮ ನಡುವೆ ನಡೆದ ಘಟನೆಯ ಫೋಟೋವನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ.

    ಮಹೀ ಬಾಯ್ ಅವರು ಟೀಂ ಇಂಡಿಯಾ ಪದಾರ್ಪಣೆ ಮಾಡಿದ್ದ ವೇಳೆ ತನಗೆ ಕೇವಲ 13 ವರ್ಷ. ನಾವು ಅವರನ್ನು ಅದರ್ಶವಾಗಿ ತೆಗೆದುಕೊಂಡಿದ್ದೇವೆ. ಆದ್ರೆ ಪಂದ್ಯದಲ್ಲಿ ಧೋನಿ ಅವರ ಪಕ್ಕ ನಿಂತು ಟಾಸ್ ಮಾಡುವುದು ಊಹೆಯೂ ಮಾಡಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.