Tag: ಟಾರ್ಪಲ್

  • ಲಾರಿ ಟಾರ್ಪಲ್ ಕಿತ್ತು ಆಹಾರಕ್ಕಾಗಿ ಒಂಟಿಸಲಗದ ಚೆಕ್ಕಿಂಗ್

    ಲಾರಿ ಟಾರ್ಪಲ್ ಕಿತ್ತು ಆಹಾರಕ್ಕಾಗಿ ಒಂಟಿಸಲಗದ ಚೆಕ್ಕಿಂಗ್

    ಚಾಮರಾಜನಗರ: ಲಾರಿ ಟಾರ್ಪಲ್ ಕಿತ್ತು ಆಹಾರಕ್ಕಾಗಿ ಒಂಟಿಸಲಗ ಚೆಕ್ಕಿಂಗ್ ಮಾಡಿದ ಪ್ರಸಂಗವೊಂದು ಚಾಮರಾಜನಗರ ಜಿಲ್ಲೆಯ ತಮಿಳುನಾಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ವಸೂಲಿಗೆ ಕಾಡಾನೆ (Wild Elephant) ವಸೂಲಿಗೆ ಇಳಿದಿದೆ. ಲೋಡ್ ಲಾರಿಗಳನ್ನ ಅಡ್ಡಗಟ್ಟಿದ ಕಾಡಾನೆ ಆಹಾರಕ್ಕಾಗಿ ಹುಡುಕಾಟ ನಡೆಸಿದೆ. ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲ ವಾಹನಗಳನ್ನು ತಡೆದು ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ.

     

    ಮೊದಲು ಕಬ್ಬಿನ ಲಾರಿಗಳನ್ನು ಅಡ್ಡಗಟ್ಟುತ್ತಿದ್ದ ಕಾಡಾನೆ, ಇದೀಗ ತರಕಾರಿ ಲಾರಿಗಳು ಹಾಗೂ ಇತರೆ ವಾಹನಗಳನ್ನು ಅಡ್ಡಗಟ್ಟುತ್ತಿದೆ. ಲಾರಿಗಳ ಟಾರ್ಪಾಲ್ ಕೀಳಲು ಸತತ ಪ್ರಯತ್ನ ಮಾಡಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.  ಇದನ್ನೂ ಓದಿ: ಪತ್ನಿಯನ್ನು ರಕ್ಷಿಸಲು ನೀರಿಗೆ ಧುಮುಕಿದ ಪತಿಯೂ ಸಾವು!

     

  • ಧಾರಾಕಾರ ಮಳೆ – ಟಾರ್ಪಲ್ ಬಳಸಿ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬಸ್ಥರು

    ಧಾರಾಕಾರ ಮಳೆ – ಟಾರ್ಪಲ್ ಬಳಸಿ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬಸ್ಥರು

    ಶಿವಮೊಗ್ಗ: ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ವೃದ್ಧೆಯ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ಟಾರ್ಪಲ್ ಬಳಸಿ ನೆರವೇರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾಮದ ನಿವಾಸಿ ವೃದ್ಧೆ ಭವಾನಿ(70) ಅನಾರೋಗ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ. ಆದರೆ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆ ವೃದ್ಧೆಯ ಅಂತಿಮ ವಿಧಿ-ವಿಧಾನವನ್ನು ಅವರ ಕುಟುಂಬಸ್ಥರು ಟಾರ್ಪಲ್ ಸಹಾಯದಿಂದ ನೆರವೇರಿಸಿದ್ದಾರೆ. ಇದನ್ನೂ ಓದಿ: ದಿಯಾ ಖ್ಯಾತಿಯ ಪೃಥ್ವಿ ಅಂಬಾರ್‌ಗೆ ಮಾತೃ ವಿಯೋಗ 

    ಗ್ರಾಮಸ್ಥರು ಮಳೆರಾಯನಿಗೆ ಶಾಪ ಹಾಕುತ್ತಲೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಸರಿಯಾದ ಸ್ಮಶಾನ ಇಲ್ಲದೇ ಗ್ರಾಮಸ್ಥರು ಸಂಸ್ಕಾರ ಮಾಡಲು ಪರದಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]