Tag: ಟಾಪ್ ಲೇಸ್ ಫೋಟೋ

  • ಟಾಪ್‌ಲೆಸ್ ಅವತಾರದಲ್ಲಿ ಇಷಾ ಗುಪ್ತ – ಹೆಚ್ಚಾಯ್ತು ತುಂಡೈಕ್ಳ ಎದೆ ಬಡಿತ

    ಟಾಪ್‌ಲೆಸ್ ಅವತಾರದಲ್ಲಿ ಇಷಾ ಗುಪ್ತ – ಹೆಚ್ಚಾಯ್ತು ತುಂಡೈಕ್ಳ ಎದೆ ಬಡಿತ

    ಮುಂಬೈ: ಬಾಲಿವುಡ್ ನಟಿ ಇಷಾ ಗುಪ್ತ ಟಾಪ್‌ಲೆಸ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಷಾ ಗುಪ್ತ ಹಾಟ್ ಲುಕ್ ಪಡ್ಡೆ ಹುಡುಗರ ನಿದ್ದೆ ಗೇಡಿಸುತ್ತಿದೆ.

    2007ರಲ್ಲಿ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಟೈಟಲ್ ಗೆದ್ದಿದ್ದ ಇಷಾ ಗುಪ್ತ, ಬಾಲಿವುಡ್‍ನ ಜನ್ನತ್, ರಾಝ್, ರುಸ್ತುಂ, ಕಮಾಂಡೋ, ಬಾದ್ಷಾಹೋ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ಆಲಿಯಾ ಹಾಟ್ ಫಿಟ್ನೆಸ್ ಫೋಟೋ ವೈರಲ್ – ಬೆರಗಾದ ಕತ್ರಿನಾ

    Esha Gupta

    35 ವರ್ಷ ವಯಸ್ಸಿನ ಇಷಾ ಗುಪ್ತ ಇತ್ತೀಚೆಗಷ್ಟೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಟಾಪ್‌ಲೆಸ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ಇಷಾ, ಬ್ಲೂ ಕಲರ್ ಜೀನ್ಸ್ ಪ್ಯಾಂಟ್ ತೊಟ್ಟು, ಟಾಪ್ ಧರಿಸದೇ ಬಾಲ್ಕಾನಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ಲವ್ ಟುಡೇ ಲವ್ ಟೂಮಾರೋ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕತ್ರಿನಾ ಜೊತೆಗಿನ ಎಂಗೇಜ್‍ಮೆಂಟ್ ಬಗ್ಗೆ ಸುಳಿವು ಕೊಟ್ರಾ ವಿಕ್ಕಿ ಕೌಶಲ್ ?

     

    View this post on Instagram

     

    A post shared by Esha Gupta (@egupta)

    ಈ ಫೋಟೋಗೆ ಇಲ್ಲಿಯವರೆಗೂ 6 ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು 9 ಸಾವಿಕ್ಕೂ ಹೆಚ್ಚು ಕಾಮೆಂಟ್ಸ್ ಹರಿದು ಬಂದಿದ್ದು, ಕೆಲವರು ಫೋಟೋ ನೋಡಿ ಸೂಪರ್ ಎಂದು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಸರಿಯಾಗಿ ಬಟ್ಟೆ ಹಾಕಿಕೊಳ್ಳಿ ಎಂದು ಕಾಮೆಂಟ್ ಮಾಡುವ ಮೂಲಕ ಟೀಕಿಸಿದ್ದಾರೆ.

    ಒಟ್ಟಾರೆ ಇಷಾ ಹಾಟ್ ಆ್ಯಂಡ್ ಬೋಲ್ಡ್ ಅವತಾರ ತುಂಡೈಕ್ಳ ಎದೆ ಬಡಿತ ಏರಿಸಿದೆ ಎಂದರೆ ತಪ್ಪಾಗಲಾರದು.