Tag: ಟಾಪರ್

  • ಶಾಲೆಯಿಂದ ಗೇಟ್ ಪಾಸ್ – 10ನೇ ಕ್ಲಾಸ್ ಟಾಪರ್ ಆತ್ಮಹತ್ಯೆ

    ಶಾಲೆಯಿಂದ ಗೇಟ್ ಪಾಸ್ – 10ನೇ ಕ್ಲಾಸ್ ಟಾಪರ್ ಆತ್ಮಹತ್ಯೆ

    ಹೈದರಾಬಾದ್: ಹತ್ತನೇ ತರಗತಿಯ ಟಾಪರ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ತೂರಿನ ಪಲಮನೇರ್ ನಡೆದಿದೆ.

    ಸೋಡಾ ವ್ಯಾಪಾರ ಮಾಡುತ್ತಿದ್ದವರ ಪುತ್ರಿ ಮಿಸ್ಬಾ ಫಾತಿಮಾ ಗಂಗಾವರಂನ ಬ್ರಹ್ಮರ್ಷಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಳು. ಪ್ರಾಂಶುಪಾಲ ರಮೇಶ್ ಅವರು ಶೈಕ್ಷಣಿಕ ವರ್ಷ ಮುಗಿಯುವ ಕೆಲವೇ ದಿನಗಳಲ್ಲಿ ಮಿಸ್ಬಾ ಅವರಿಗೆ ವರ್ಗಾವಣೆ ಪ್ರಮಾಣಪತ್ರ (ಟಿಸಿ) ನೀಡಿದ್ದರು. ಪ್ರಾಂಶುಪಾಲರ ಅನುಚಿತ ವರ್ತನೆಯಿಂದ ಬೇಸತ್ತು ಮಿಸ್ಬಾ ಫಾತಿಮಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಮನೆ ಮುಂದೆ ಬುಲ್ಡೋಜರ್ ಪ್ರತ್ಯಕ್ಷ – ಪರಾರಿಯಾಗಿದ್ದ ಯುಪಿ ರೇಪ್ ಆರೋಪಿ ಶರಣು

    ತಾನು ಕ್ಲಾಸ್ ಟಾಪರ್ ಆಗಿದ್ದ ಕಾರಣ ತನ್ನ ಸಹಪಾಠಿಯ ತಂದೆ ಅವರ ಮಗಳು ಕ್ಲಾಸ್ ಟಾಪರ್ ಆಗಬೇಕೆಂಬ ಉದ್ದೇಶದಿಂದ ಶಾಲೆಯ ಆಡಳಿತ ಮಂಡಳಿಗೆ ತನ್ನನ್ನು ತೆಗೆದುಹಾಕಲು ಒತ್ತಾಯಿಸುತ್ತಿದ್ದರು ಎಂದು ಮಿಸ್ಬಾ ಫಾತಿಮಾ ಡೆತ್ ನೋಟ್‍ನಲ್ಲಿ ಉಲ್ಲೇಖಿಸಿದ್ದಾಳೆ.

    ಸದ್ಯ ತೆಲುಗು ದೇಶಂ ಪಕ್ಷದ ನಾಯಕ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್, ಮಿಸ್ಬಾ ಫಾತಿಮಾ ಸಹಪಾಠಿಯ ತಂದೆ ಆಡಳಿತ ಪಕ್ಷದ ನಾಯಕನಾಗಿರುವ ಕಾರಣ ಅವರ ಮೇಲೆ ಪೊಲೀಸರು ಸಹ ಶೀಘ್ರವಾಗಿ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಾತುಬಾರದ ಬಾಲಕನ ಕೊಂದು ಗೋಣಿ ಚೀಲದಲ್ಲಿ ತುಂಬಿ ಎಸೆದ್ರು

    ಮೃತ ಮಿಸ್ಬಾ ಫಾತಿಮಾ ವೈಎಸ್‌ಆರ್‌ಸಿಪಿ ನಾಯಕನ ಮಗಳಿಗಿಂತ ಹೆಚ್ಚು ಅಂಕ ಗಳಿಸಿದ್ದಳು. ಹಾಗಾಗಿ ಆಕೆಗೆ ಕಿರುಕುಳ ನೀಡುವುದರ ಜೊತೆಗೆ ಶಾಲೆಯ ಪ್ರಾಂಶುಪಾಲರ ಬೆದರಿಕೆಯೊಡ್ಡಿದ್ದರಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವೈಎಸ್‌ಆರ್‌ಸಿಪಿ ನಾಯಕ ಸುನಿಲ್ ಅವರು ತಮ್ಮ ಮಗಳು ಪೂಜಿತಾ ಕ್ಲಾಸ್ ಟಾಪರ್ ಆಗಬೇಕೆಂದು ಬಯಸಿದ್ದರು. ಆದರೆ ನಜೀರ್ ಅಹ್ಮದ್ ಮತ್ತು ನಸೀಮಾ ಅವರು ದಿನಗೂಲಿ ಕಾರ್ಮಿಕರಾಗಿದ್ದರೂ ಮಿಸ್ಬಾ ಉತ್ತಮ ಅಂಕಗಳಿಸುತ್ತಿದ್ದಳು ಎಂದು ತಿಳಿದ್ದಾರೆ.

    ಇದೊಂದು ಅಮಾನವೀಯ, ಭಯಾನಕ ಮತ್ತು ಅವಮಾನಕರ ಘಟನೆಯಾಗಿದ್ದು, ಇದರಲ್ಲಿ ಆಕೆಯ ಯಾವುದೇ ತಪ್ಪಿಲ್ಲದೆ ಬಾಲಕಿಯನ್ನು ಶಾಲೆಯಿಂದ ತೆಗೆದುಹಾಕುವುದು ಅತ್ಯಂತ ಖಂಡನೀಯ. ಆಕೆಯ ಸಾವಿಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯ ಕೇಳಿ ಬಂದಿದೆ.

  • ಮುಂದೆ ಸಿಎ ಮಾಡ್ತೀನಿ, ಜಾಸ್ತಿ ತಲೆಕೆಡಿಸಿಕೊಂಡಿಲ್ಲ: ವಾಣಿಜ್ಯ ಟಾಪರ್ ವರ್ಷಿಣಿ

    ಮುಂದೆ ಸಿಎ ಮಾಡ್ತೀನಿ, ಜಾಸ್ತಿ ತಲೆಕೆಡಿಸಿಕೊಂಡಿಲ್ಲ: ವಾಣಿಜ್ಯ ಟಾಪರ್ ವರ್ಷಿಣಿ

    ಬೆಂಗಳೂರು: ಪಿಯು ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು ಟಾಪರ್ ಆಗಿದ್ದಾರೆ. ಮಲ್ಲೇಶ್ವರಂ ವಿದ್ಯಾಮಂದಿರ ಕಾಲೇಜಿನ ವರ್ಷಿಣಿ. ಎಂ ಭಟ್ ಮತ್ತು ರಾಜಾಜಿನಗರ ಎಎಸ್‍ಸಿ ಪಿಯು ಕಾಲೇಜಿನ ಅಮೃತಾ ಎಸ್‍ಆರ್ 595 ಅಂಕಗಳನ್ನು ಗಳಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ವಾಣಿಜ್ಯ ವಿಭಾಗದ ಟಾಪರ್ ವರ್ಷಿಣಿ ಪಬ್ಲಿಕ್ ಟಿವಿಯಂದಿಗೆ ಮಾತನಾಡಿ, ನನಗೆ ತುಂಬಾ ಖುಷಿಯಾಗುತ್ತಿದೆ. ಪ್ರತಿ ವರ್ಷ ಪರೀಕ್ಷೆ ಫಲಿತಾಂಶ ಬಂದಾಗ ನಾನು ಸುದ್ದಿ ವಾಹಿನಿಗಳಲ್ಲಿ ಯಾರೂ ಟಾಪ್ ಬರುತ್ತಾರೆಂದು ನೋಡುತ್ತಿದೆ. ಆದರೆ ಈಗ ನಾನು ಆ ಸ್ಥಾನದಲ್ಲಿರುವುದು ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ.

    ದ್ವಿತೀಯ ಪಿಯುಸಿ ಶುರುವಾದ ಬಳಿಕ ದಿನ 4ರಿಂದ 5 ಗಂಟೆಗಳವರೆಗೂ ಓದುತ್ತಿದೆ. ನಾನು ತುಂಬಾ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಪರಿಶ್ರಮ, ಶಿಕ್ಷಕರ, ಪ್ರಿನ್ಸಿಪಲ್ ಹಾಗೂ ನನ್ನ ಪೋಷಕರ ಸಪೋರ್ಟ್ ಮಾಡಿದ್ದಾರೆ.

    ನಾನು ಈಗ ಸಿಎ ಮಾಡಬೇಕೆಂದುಕೊಂಡಿದ್ದೇನೆ. ಈಗಾಗಲೇ ಸಿಎ ಕೋಚಿಂಗ್ ಕ್ಲಾಸ್‍ಗೆ ಸೇರಿಕೊಂಡಿದ್ದೀನಿ. ನನ್ನ ಫಲಿತಾಂಶ ಬಂದಾಗ ನನ್ನ ತಾಯಿ ನಂಬಲೇ ಇಲ್ಲ, ಅವರಿಗೆ ತುಂಬಾ ಖುಷಿಯಾಗಿದೆ. ನನ್ನ ತಂದೆ ಊರಿನಿಂದ ಹೊರ ಹೋಗಿದ್ದು, ಕರೆ ಮಾಡಿ ತಿಳಿಸಬೇಕೆಂದು ವಾಣಿಜ್ಯ ವಿಭಾಗದ ಟಾಪರ್ ವರ್ಷಿಣಿ ತಿಳಿಸಿದ್ದಾರೆ.

    ವರ್ಷಿಣಿ ಒಟ್ಟು 595 ಅಂಕಗಳನ್ನು ಪಡೆದಿದ್ದು, ಸಂಸ್ಕೃತ, ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಇನ್ನೂ ಅಕೌಂಟ್ಸ್‍ನಲ್ಲಿ 99, ಆಂಗ್ಲ ಭಾಷೆಯಲ್ಲಿ 100ಕ್ಕೆ 96 ಅಂಕಗಳನ್ನು ಪಡೆದು ವಾಣಿಜ್ಯ ಭಾಗದ ಟಾಪರ್ ಆಗಿದ್ದಾರೆ.

  • ಮೂರು ವಿಭಾಗದಲ್ಲೂ ವಿದ್ಯಾರ್ಥಿನಿಯರೇ ಟಾಪರ್: ಟಾಪರ್ ಲಿಸ್ಟ್ ಇಲ್ಲಿದೆ

    ಮೂರು ವಿಭಾಗದಲ್ಲೂ ವಿದ್ಯಾರ್ಥಿನಿಯರೇ ಟಾಪರ್: ಟಾಪರ್ ಲಿಸ್ಟ್ ಇಲ್ಲಿದೆ

     ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಸ್ವಾತಿ(ಎಡ), ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಅಂಕಿತಾ(ಬಲ)

    ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಮೂರು ವಿಭಾಗದಲ್ಲೂ ವಿದ್ಯಾರ್ಥಿನಿಯರೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಕಲಾವಿಭಾಗದಲ್ಲಿ ಇಬ್ಬರು, ವಾಣಿಜ್ಯ ವಿಭಾಗದಲ್ಲಿ ಇಬ್ಬರು ಹಾಗೂ ವಿಜ್ಞಾನ ವಿಭಾಗದಲ್ಲಿ ಒಬ್ಬರು ಪ್ರಥಮ ಸ್ಥಾನ ಪಡೆದಿದ್ದಾರೆ.

    ಕಲಾ ವಿಭಾಗದಲ್ಲಿ ಎಂದಿನಂತೆ ಬಳ್ಳಾರಿ ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಈ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿರುವುದು ವಿಶೇಷ. ಸ್ವಾತಿ ಎಸ್ 595 ಅಂಕ, ರಮೇಶ್ 593 ಅಂಕ, ಕಾವ್ಯಂಜಲಿ ಗೊರವರ 588 ಅಕಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ: ಶೇ.59.56 ವಿದ್ಯಾರ್ಥಿಗಳು ಪಾಸ್, ದಕ್ಷಿಣ ಕನ್ನಡ ಫಸ್ಟ್

    ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು ಟಾಪರ್ ಆಗಿದ್ದಾರೆ. ಮಲ್ಲೇಶ್ವರಂ ವಿದ್ಯಾಮಂದಿರ ಕಾಲೇಜಿನ ವರ್ಷಿಣಿ ಎಂ ಭಟ್ ಮತ್ತು ರಾಜಾಜಿನಗರ ಎಎಸ್‍ಸಿ ಪಿಯು ಕಾಲೇಜಿನ ಅಮೃತಾ ಎಸ್‍ಆರ್ 595 ಅಂಕಗಳನ್ನು ಗಳಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಪೂರ್ವಿಕಾ 594 ಅಂಕಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಬಸವೇಶ್ವರ ನಗರದ ವಿವಿಎಸ್ ಸರ್ದಾರ್ ಪಟೇಲ್ ಕಾಲೇಜಿನ ಕೃತಿ ಮುಟ್ಟಗಿ 597 ಅಂಕಗಳಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಸನದ ಮಾಸ್ಟರ್ಸ್ ಪಿಯು ಕಾಲೇಜಿನ ಮೋಹನ್ ಎಸ್‍ಎಲ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಗೋವಿಂದದಾಸ ಪಿಯು ಕಾಲೇಜಿನ ಅಂಕಿತಾ ಪಿ 595 ಅಂಕಗಳಿಸುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪಿಯುಸಿ ಉತ್ತರ ಪತ್ರಿಕೆ ಸ್ಕ್ಯಾನಿಂಗ್, ಮರು ಮೌಲ್ಯಮಾಪನಕ್ಕೆ ಶುಲ್ಕ ಎಷ್ಟು?

    ಒಟ್ಟು 408421 ವಿದ್ಯಾರ್ಥಿಗಳು ಪಾಸ್ ಆಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ ಸಿಕ್ಕಿದೆ. ಉಡುಪಿ, ಕೊಡಗು ಕ್ರಮವಾಗಿ ಎರಡು, ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಚಿಕ್ಕೋಡಿಗೆ ಕೊನೆ ಸ್ಥಾನ ಸಿಕ್ಕಿದೆ. 52.30% ಬಾಲಕರು, 67.11% ಬಾಲಕಿಯರು ತೇರ್ಗಡೆಯಾಗಿದ್ದಾರೆ.

    ದಕ್ಷಿಣ ಕನ್ನಡ ಮೊದಲ ಸ್ಥಾನ.-91.49%
    ಉಡುಪಿ ಎರಡನೇ ಸ್ಥಾನ-90.67%
    ಕೊಡಗು ಮೂರನೇ ಸ್ಥಾನ-83.94%
    ಚಿಕ್ಕೋಡಿ ಕೊನೆಸ್ಥಾನ -52.20%

     


  • ಹೈಟೆಕ್ ಆಗ್ತಿದೆ ಕೋಲಾರ ಮುನೇಶ್ವರ ನಗರ: ಇದು ಯುಪಿಎಸ್‍ಸಿ ಟಾಪರ್ ನಂದಿನಿ ಎಫೆಕ್ಟ್

    ಹೈಟೆಕ್ ಆಗ್ತಿದೆ ಕೋಲಾರ ಮುನೇಶ್ವರ ನಗರ: ಇದು ಯುಪಿಎಸ್‍ಸಿ ಟಾಪರ್ ನಂದಿನಿ ಎಫೆಕ್ಟ್

    ಕೋಲಾರ: ಯುಪಿಎಸ್‍ಸಿ ಟಾಪರ್ ಆಗಿ ಕೆ.ಆರ್.ನಂದಿನಿ ಅವರು ಹೊರಹೊಮ್ಮಿದ ಬಳಿಕ ಕೋಲಾರದ ಮುನೇಶ್ವರ ನಗರಕ್ಕೆ ಕಾಯಕಲ್ಪ ಸಿಕ್ಕಿದೆ.

    ಹೌದು. ದೇಶಕ್ಕೆ ಟಾಪರ್ ಆಗುವ ಮೂಲಕ ಗಮನ ಸೆಳೆದಿದ್ದ ನಂದಿನಿ ಅವರ ಫಲಿತಾಂಶದಿಂದಾಗಿ ತಂದೆ ತಾಯಿ ವಾಸವಿರುವ, ತಾವು ಹುಟ್ಟಿ ಬೆಳೆದ ವಠಾರದ ಚಿತ್ರಣ ಈಗ ಬದಲಾಗುತ್ತಿದೆ.

    ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿದ್ದ ಮುನೇಶ್ವರ ನಗರ ಈಗ ರಾತ್ರೋರಾತ್ರಿ ಹೈ-ಟೆಕ್ ಸ್ಪರ್ಶ ಪಡೆದುಕೊಂಡಿದೆ. ನಗರಕ್ಕೆ ಕಾಂಕ್ರೀಟ್ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಸೇರಿದಂತೆ ಬೀದಿ ದೀಪ ವ್ಯವಸ್ಥೆಗಳನ್ನು ಮಾಡುವ ಮೂಲಕ ನಗರಸಭೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.

    ಈ ಹಿಂದೆ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಬದಲಾವಣೆಯಾಗದ ವ್ಯವಸ್ಥೆ ಈಗ ನಂದಿನಿ ಅವರಿಂದಾಗಿ ಬದಲಾವಣೆ ಆಗುತ್ತಿದೆ ಎಂದು ಮುನೇಶ್ವರ ನಗರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    https://www.youtube.com/watch?v=uGLO7ROjcVg