Tag: ಟಾಟಾ ಸಮೂಹ

  • ಬೆಂಗ್ಳೂರಿಗೆ ಸೆಡ್ಡು ಹೊಡೆಯಲು ಆಂಧ್ರ ಸರ್ಕಾರದಿಂದ ಭಾರೀ ಆಫರ್ – ಟಿಸಿಎಸ್‌ಗೆ 99 ಪೈಸೆಗೆ 21 ಎಕ್ರೆ ಭೂಮಿ

    ಬೆಂಗ್ಳೂರಿಗೆ ಸೆಡ್ಡು ಹೊಡೆಯಲು ಆಂಧ್ರ ಸರ್ಕಾರದಿಂದ ಭಾರೀ ಆಫರ್ – ಟಿಸಿಎಸ್‌ಗೆ 99 ಪೈಸೆಗೆ 21 ಎಕ್ರೆ ಭೂಮಿ

    -ಐಟಿ ಕಂಪನಿಗಳ ಸೆಳೆಯಲು ಟಿಡಿಪಿ ಪ್ಲ್ಯಾನ್‌

    ಅಮರಾವತಿ: ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಐಟಿ (IT) ಕಂಪನಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಟಾಟಾ ಸಮೂಹದ (Tata Groups) ಒಡೆತನದ ಟಿಸಿಎಸ್ ಕಂಪನಿಗೆ ಆಂಧ್ರ ಸರ್ಕಾರ (Andhra Government) ವಿಶಾಖಪಟ್ಟಣದಲ್ಲಿ ಕಚೇರಿ ತೆರೆಯಲು ಕೇವಲ 99 ಪೈಸೆಗೆ 21.6 ಎಕರೆ ಭೂಮಿಯನ್ನು ನೀಡಿದೆ.

    ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರು ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದಾರೆ. ದೇಶದ ಐಟಿ ಹಬ್ ಆಗಿರುವ ಬೆಂಗಳೂರಿಗೆ ಸೆಡ್ಡುಹೊಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಂಧ್ರ ಸರ್ಕಾರದ ವಿಶ್ಲೇಷಿಸಿದೆ.ಇದನ್ನೂ ಓದಿ: ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ ಹಲವು ರೀಲ್ಸ್‌ ಸ್ಟಾರ್‌ಗಳಿಂದ ಕ್ಷಮೆಯಾಚನೆ

    ವಿಶಾಖಪಟ್ಟಣದ 21.6 ಎಕರೆ ಭೂಮಿಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಂಪನಿಯು ಕಚೇರಿ ತೆರೆಯಲಿದೆ. ಈ ಕಚೇರಿಗೆ ಕಂಪನಿ 1370 ಕೋಟಿ ರೂ. ಹೂಡಿಕೆ ಮಾಡಲಿದ್ದು, ಮುಂದಿನ 2-3 ವರ್ಷದಲ್ಲಿ 12,000 ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯಕ್ಕೆ ಈ ಕಂಪನಿಯನ್ನು ಕರೆತರುವಲ್ಲಿ ಐಟಿ ಸಚಿವ ನಾರಾ ಲೋಕೇಶ್ ಪಾತ್ರ ಅಧಿಕವಾಗಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆಂಧ್ರ ಸರ್ಕಾರದಿಂದ ಈ ಆಫರ್ ಯಾಕೆ?
    ಈ ಹಿಂದೆ ಬೆಂಗಳೂರಿನಲ್ಲಿ ಮಳೆ ಅವಾಂತರವಾಗಿ ಮೂಲಸೌಕರ್ಯದ ಬಗ್ಗೆ ಭಾರೀ ಟೀಕೆ ವ್ಯಕ್ತವಾದಾಗ ಆಂಧ್ರದ ರಾಜಕಾರಣಿಗಳು ಕರ್ನಾಟಕ ಬಿಟ್ಟು ಆಂಧ್ರಕ್ಕೆ ಬನ್ನಿ ಎಂದು ಜಾಲತಾಣದ ಮೂಲಕವೇ ಐಟಿ-ಬಿಟಿ ಕಂಪನಿಗಳಿಗೆ ಆಫರ್ ನೀಡುತ್ತಿದ್ದರು. ಆದರೂ ಯಾವುದೇ ಕಂಪನಿಗಳು ಐಟಿ ಸಿಟಿ ಬಿಟ್ಟಿರಲಿಲ್ಲ. ಹೀಗಾಗಿ ಆಂಧ್ರ ಸರ್ಕಾರವೀಗ ಆಫರ್ ಮೂಲಕ ಐಟಿ ಕಂಪನಿಗಳ ಸೆಳೆಯಲು ಪ್ಲ್ಯಾನ್‌ ಹಾಕಿಕೊಂಡಿದೆ.

    ಮೋದಿ ನೀತಿ ಅನುಸರಿಸಿದ ಆಂಧ್ರ:
    ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟಾಟಾ ಮೋಟರ್ಸ್ ಕಂಪನಿಗೆ ಗುಜರಾತ್‌ನ ಸನ್ನದ್‌ನಲ್ಲಿ ಕೇವಲ 99 ಪೈಸೆಗೆ ಸ್ಥಳ ನೀಡಿದ್ದರು. ಈ ಕ್ರಮದಿಂದಾಗಿ ಗುಜರಾತ್‌ನಲ್ಲಿ ಉದ್ಯಮಗಳ ಹರಿವು ಹೆಚ್ಚಾಗಿತ್ತು. ಹೀಗಾಗಿ ಆಂಧ್ರ ಸರ್ಕಾರದ ಈ ಕ್ರಮವು ಐಟಿ ಕ್ಷೇತ್ರದ ಸನ್ನದ್ ಕ್ಷಣ ಎಂದು ಆಂಧ್ರ ಅಧಿಕಾರಿಗಳು ಕೊಂಡಾಡಿದ್ದಾರೆ.ಇದನ್ನೂ ಓದಿ:ಮೆಟ್ರೋ ಯಡವಟ್ಟಿಗೆ ಮತ್ತೊಂದು ಬಲಿ – ವಯಾಡೆಕ್ಟ್ ಉರುಳಿ ಬಿದ್ದು ಆಟೋ ಅಪ್ಪಚ್ಚಿ, ಚಾಲಕ ಸಾವು!

  • ಅವಕಾಶಕ್ಕಾಗಿ ಕಾಯಬೇಡಿ. ನೀವೇ ಸ್ವಂತ ಅವಕಾಶಗಳನ್ನು ಸೃಷ್ಟಿಸಿ: ರತನ್‌ ಟಾಟಾ ಪ್ರಸಿದ್ದ ಅಣಿಮುತ್ತುಗಳನ್ನು ಓದಿ

    ಅವಕಾಶಕ್ಕಾಗಿ ಕಾಯಬೇಡಿ. ನೀವೇ ಸ್ವಂತ ಅವಕಾಶಗಳನ್ನು ಸೃಷ್ಟಿಸಿ: ರತನ್‌ ಟಾಟಾ ಪ್ರಸಿದ್ದ ಅಣಿಮುತ್ತುಗಳನ್ನು ಓದಿ

    ನಿಮ್ಮ ಬೇರುಗಳನ್ನು ಎಂದಿಗೂ ಮರೆಯಬೇಡಿ, ಮತ್ತು ನೀವು ಎಲ್ಲಿಂದ ಬಂದಿದ್ದೀರಿ ಎಂಬುದರ ಬಗ್ಗೆ ಯಾವಾಗಲೂ ಹೆಮ್ಮೆಪಡಬೇಕು. ಅವಕಾಶ ಬರಬೇಕೆಂದು ಕಾಯಬೇಡಿ. ನೀವೇ ಸ್ವಂತ ಅವಕಾಶಗಳನ್ನು ಸೃಷ್ಟಿಸಿ – ಇದು ರತನ್‌ ಟಾಟಾ (Ratan Tata) ಹೇಳಿದ ಮಾತುಗಳು.

    ಭಾರತದ (India) ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ರತನ್‌ ಟಾಟಾ ಮನಸ್ಸು ದೇಶದ ಅಭಿವೃದ್ಧಿಗೆ ಮಿಡಿಯುತ್ತಿತ್ತು. ಈ ಕಾರಣಕ್ಕೆ ತಮ್ಮ ಶೇ.60 ರಷ್ಟು ಸಂಪತ್ತನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದರು. ಪ್ರಚಾರದಿಂದ ದೂರ ಇದ್ದ ರತನ್‌ ಟಾಟಾ ಕೆಲಸದಲ್ಲಿ ಶ್ರದ್ಧೆ ಹೊಂದಿದ್ದರು.

    ರತನ್‌ ಟಾಟಾ ಅವರಿಗೆ ಭಾರತ ರತ್ನ ನೀಡಬೇಕೆಂದು ಅಭಿಯಾನ ನಡೆಯುತ್ತಿದ್ದಾಗ ದಯವಿಟ್ಟು ಅಭಿಯಾನ ನಿಲ್ಲಿಸಿ ಎಂದು ಮನವಿ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗ ವ್ಯಕ್ತಪಡಿಸುತ್ತಿರುವ ಭಾವನೆಯನ್ನು ನಾನು ಗೌರವಿಸುತ್ತೇನೆ. ಹೀಗಿದ್ದರೂ ಪ್ರಶಸ್ತಿ ವಿಚಾರವಾಗಿ ನಡೆಸುತ್ತಿರುವ ಅಭಿಯಾನವನ್ನು ನಿಲ್ಲಿಸಬೇಕೆಂದು ನಾನು ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ನಾನು ಭಾರತೀಯನಾಗಿರುವುದು ಅದೃಷ್ಟ ಮತ್ತು ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ ಎಂದು ರತನ್‌ ಟಾಟಾ ಹೇಳಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ರತನ್‌ ಟಾಟಾ ಅವರ ಪ್ರಸಿದ್ಧ ನುಡಿ ಮುತ್ತುಗಳು
    ನಾನು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಂಬುವುದಿಲ್ಲ. ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನಂತರ ಆ ನಿರ್ಧಾರವನ್ನು ಸರಿಯಾಗುವಂತೆ ಮಾಡುತ್ತೇನೆ.

    ಯಾರೂ ಕಬ್ಬಿಣವನ್ನು ನಾಶಮಾಡಲು ಸಾಧ್ಯವಿಲ್ಲ. ಆದರೆ ಅದರ ಅದರ ತುಕ್ಕು ಅದನ್ನೇ ನಾಶ ಮಾಡಬಹುದು. ಹಾಗೆಯೇ ಯಾರೂ ಒಬ್ಬ ವ್ಯಕ್ತಿಯನ್ನು ನಾಶಮಾಡಲು ಸಾಧ್ಯವಿಲ್ಲ, ಆದರೆ ಅವರ ಸ್ವಂತ ಮನಸ್ಸೇ ಅವರ  ನಾಶಕ್ಕೆ ಕಾರಣವಾಗಬಹುದು. ಇದನ್ನೂ ಓದಿ: ಭ್ರಷ್ಟಾಚಾರ ನಿರ್ಮೂಲನೆ ಮಾಡೋದು ಹೇಗೆ? – ರತನ್ ಟಾಟಾ ನೀಡಿದ ಖಡಕ್‌ ಉತ್ತರ ಇದು

    ನೀವು ವೇಗವಾಗಿ ನಡೆಯಲು ಬಯಸಿದರೆ ಏಕಾಂಗಿಯಾಗಿ ನಡೆಯಿರಿ. ಆದರೆ ನೀವು ದೂರ ನಡೆಯಲು ಬಯಸಿದರೆ ಒಟ್ಟಿಗೆ ನಡೆಯಿರಿ.

    ಯಾವುದೇ ಅಪಾಯವನ್ನು ತೆಗೆದುಕೊಳ್ಳದಿರುವುದು ದೊಡ್ಡ ಅಪಾಯ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಸೋಲಾಗದೇ ಇರವ ಏಕೈಕ ತಂತ್ರವೆಂದರೆ ಅಪಾಯಗಳನ್ನು ತೆಗೆದುಕೊಳ್ಳದಿರುವುದು.

    ಇತರರೊಂದಿಗೆ ನಿಮ್ಮ ಸಂವಹನದಲ್ಲಿ ದಯೆ, ಸಹಾನುಭೂತಿ ಮತ್ತು ಸಹಾನುಭೂತಿಯ ಶಕ್ತಿಯನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ.

    ನಾಯಕನಾಗುವುದು ಎಂದರೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು, ಮನ್ನಿಸುವಿಕೆಯಲ್ಲ.

    ಜನರು ನಿಮ್ಮ ಮೇಲೆ ಎಸೆಯುವ ಕಲ್ಲುಗಳನ್ನು ತೆಗೆದುಕೊಳ್ಳಿ ಮತ್ತು ಆ ಕಲ್ಲುಗಳ ಬಳಸಿ ಸ್ಮಾರಕವನ್ನು ನಿರ್ಮಿಸಿ.

    ಜೀವನದಲ್ಲಿ ಏರಿಳಿತಗಳು ಇದ್ದಾಗ ಮಾತ್ರ ನಾವು ಮುಂದುವರಿಯಬಹುದು. ಏಕೆಂದರೆ ಇಸಿಜಿಯಲ್ಲಿ ಸರಳ ರೇಖೆ ಇದ್ದರೆ ನಾವು ಜೀವಂತವಾಗಿಲ್ಲ ಎಂದರ್ಥ.

    ಗೆಲುವಿನ ಏಕೈಕ ಮಾರ್ಗವೆಂದರೆ ಸೋಲಿಗೆ ಹೆದರದಿರುವುದು.

    ನಿಮ್ಮ ಬೇರುಗಳನ್ನು ಎಂದಿಗೂ ಮರೆಯಬೇಡಿ, ಮತ್ತು ನೀವು ಎಲ್ಲಿಂದ ಬಂದಿದ್ದೀರಿ ಎಂಬುದರ ಬಗ್ಗೆ ಯಾವಾಗಲೂ ಹೆಮ್ಮೆಪಡಬೇಕು.

     ಕಠಿಣ ಮಾರ್ಗವಾಗಿದ್ದರೂ ಸಹ ನಿಮ್ಮ ಮೌಲ್ಯಗಳು ಮತ್ತು ತತ್ವಗಳ ಮೇಲೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ.

    ನಾಯಕತ್ವವು ಉಸ್ತುವಾರಿಯಲ್ಲಿರುವುದು ಅಲ್ಲ, ಅದು ನಿಮ್ಮ ಉಸ್ತುವಾರಿಯಲ್ಲಿರುವವರನ್ನು ನೋಡಿಕೊಳ್ಳುವುದು.

    ನಾನು ಯಾವಾಗಲೂ ಭಾರತದ ಭವಿಷ್ಯದ ಬಗ್ಗೆ ತುಂಬಾ ಆತ್ಮವಿಶ್ವಾಸ ಮತ್ತು ಲವಲವಿಕೆಯಿಂದ ಇದ್ದೇನೆ.

    ಅಲ್ಪಾವಧಿಯ ಗುರಿಗಳನ್ನು ನಂಬುವುದಿಲ್ಲ. ನಾನು ದೀರ್ಘಾವಧಿಯ ದೃಷ್ಟಿಯನ್ನು ನಂಬುತ್ತೇನೆ.

    ಯಶಸ್ಸನ್ನು ನೀವು ಹೊಂದಿರುವ ಸ್ಥಾನದಿಂದ ಅಳೆಯಲಾಗುವುದಿಲ್ಲ. ಆದರೆ ನೀವು ಇತರರ ಮೇಲೆ ಬೀರುವ ಪ್ರಭಾವದಿಂದ ಅಳೆಯಬಹುದು.

  • ಮೊದಲ ಉದ್ಯಮದಲ್ಲೇ ಯಶಸ್ಸು ಕಂಡಿದ್ದ ಉದ್ಯಮ ಸಾಮ್ರಾಟ

    ಮೊದಲ ಉದ್ಯಮದಲ್ಲೇ ಯಶಸ್ಸು ಕಂಡಿದ್ದ ಉದ್ಯಮ ಸಾಮ್ರಾಟ

    ಮುಂಬೈ: ಉದ್ಯಮಿಯಾಗಿ ಸಾರ್ಥಕ ಬದುಕು ನಡೆಸಿದ ರತನ್‌ ಟಾಟಾ (Ratan Tata) ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಅವರ ಸಾಧನೆಗಳು ಒಂದೊಂದೇ ಬೆಳಕಿಗೆ ಬರುತ್ತಿವೆ.

    1991ರಲ್ಲಿ ಟಾಟಾ ಗ್ರೂಪ್ಸ್‌ ಅಧ್ಯಕ್ಷರಾಗಿ ನೇಮಕಗೊಂಡ ರತನ್ ಟಾಟಾ ಅವರು ಕೈ ಹಾಕಿದ್ದ ಮೊದಲ ಉದ್ಯಮದಲ್ಲಿ ಜಯಭೇರಿ ಬಾರಿಸಿದ್ದರು. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್‌ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?

    ಟಾಟಾ ಸಮೂಹದ ʻದಿ ನ್ಯಾಷನಲ್ ರೇಡಿಯೋʼ ಮತ್ತು ʻಎಲೆಕ್ಟ್ರಾನಿಕ್ ಕಂಪನಿ ಲಿಮಿಟೆಡ್ʼ (Electronic Company Limited) ಅಳಿವಿನಂಚಿನಲ್ಲಿತ್ತು. ಆಗಿನ ಟಾಟಾ ಗ್ರೂಪ್ ಅಧ್ಯಕ್ಷರಾಗಿದ್ದ ಜೆಆರ್‌ಡಿ ಟಾಟಾ ಅವರು ಕಂಪನಿಯ ಪುನಶ್ವೇತನದ ಆಸೆಯನ್ನು ಬಿಟ್ಟಿದ್ದರು. ಅಂತಹ ಸಂದರ್ಭದಲ್ಲಿ ಅಂದರೆ 1971ರಲ್ಲಿ ರತನ್ ಟಾಟಾ ಅವರು ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್ (ಎನ್‌ಇಎಲ್‌ಸಿಒ)ಗೆ ನಿರ್ದೇಶಕರಾಗಿ ನೇಮಕಗೊಂಡರು.

    ಕಂಪನಿಯ ಸಾಂಪ್ರದಾಯಿಕ ಪದ್ಧತಿಗಳಿಗೆ ಅಂಟಿಕೊಂಡು ಕುಳಿತುಕೊಳ್ಳದ ಅವರು ಆಧುನಿಕ ಹಾಗೂ ಉನ್ನತ ತಂತ್ರಜ್ಞಾನ ಹೊಂದಿದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸಲು ಕೈ ಹಾಕಿದರು. ಇದರಿಂದ ಎನ್‌ಇಎಲ್‌ಸಿಒ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಾ ಸಾಗಿತು. ರತನ್ ಟಾಟಾ ಅವರು ಬರುವ ಮುನ್ನ ಶೇ.2 ರಷ್ಟಿದ್ದ ಕಂಪನಿಯ ಮಾರುಕಟ್ಟೆ ಶೇರು ಶೇ.30ಕ್ಕೇರಿತು. ಹಾಗಾಗಿ ಕಂಪನಿ ನಷ್ಟದ ಭಯದಿಂದ ಆಚೆ ಬಂದಿತ್ತು. ಇದನ್ನೂ ಓದಿ: ರತನ್ ಟಾಟಾ ನಿಧನ; ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ – ಏಕನಾಥ್ ಶಿಂಧೆ

    ಬಳಿಕ 1975ರ ತುರ್ತು ಪರಿಸ್ಥಿತಿಯಿಂದಾಗಿ ಕಂಪನಿ ವಹಿವಾಟಿನಲ್ಲಿ ಆರ್ಥಿಕ ಹಿನ್ನಡೆ ಕಂಡುಬಂದಿತು. ಸಮಸ್ಯೆ ಅರ್ಥಮಾಡಿಕೊಳ್ಳದ ಕಾರ್ಮಿಕ ಒಕ್ಕೂಟ ಧರಣಿಯಲ್ಲಿ ನಿರತವಾಯಿತು. ಇದರಿಂದ ಉತ್ಪಾದನೆ ಸ್ಥಗಿತವಾಗಿ ಕಂಪನಿಯನ್ನೇ ಮುಚ್ಚಬೇಕಾಯಿತು. ಇದನ್ನೂ ಓದಿ: ಅವಮಾನಿಸಿದ್ದ ಕಂಪನಿಯನ್ನೇ ಖರೀದಿಸಿ ಮೆರೆದಿದ್ದ ಯಶಸ್ವಿ ಉದ್ಯಮಿ ರತನ್‌ ಟಾಟಾ!

  • ಟಾಟಾ ಸಮೂಹಕ್ಕೆ ಮಾಯಾ ಉತ್ತರಾಧಿಕಾರಿ – ಶೀಘ್ರದಲ್ಲೇ ಘೋಷಣೆ ಸಾಧ್ಯತೆ

    ಟಾಟಾ ಸಮೂಹಕ್ಕೆ ಮಾಯಾ ಉತ್ತರಾಧಿಕಾರಿ – ಶೀಘ್ರದಲ್ಲೇ ಘೋಷಣೆ ಸಾಧ್ಯತೆ

    ಮುಂಬೈ: ಟಾಟಾ ಸಮೂಹದ (Tata Group) ಮುಖ್ಯಸ್ಥ ಹಾಗೂ ಉದ್ಯಮಿಯಾಗಿದ್ದ ರತನ್ ಟಾಟಾ (Ratan Tata) ಅವರ ಉತ್ತರಾಧಿಕಾರಿಯಾಗಿ ಅವರ ಕುಟುಂಬದ ಸದಸ್ಯೆಯೇ ಆಗಿರುವ ಮಾಯಾ ಟಾಟಾ (Maya Tata) ಅವರು ನೇಮಕಗೊಳ್ಳುವ ಸಾಧ್ಯತೆ ಇದೆ.

    ಈ ವಿಚಾರವಾಗಿ ಆ.29ರಂದು ನಡೆಯಲಿರುವ ಟಾಟಾ ಸಮೂಹದ ವಾರ್ಷಿಕ ಮಹಾಸಭೆಯಲ್ಲಿ ನಿಧಾರ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Cauvery Water : ಇಂದು ಸಿಎಂ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ

    34 ವರ್ಷದ ಮಾಯಾ ಟಾಟಾ ಅವರು ರತನ್ ಟಾಟಾ ಅವರ ಮಲಸೋದರ ನಿಯೋಲ್ ಟಾಟಾ ಹಾಗೂ ಆಲೂ ಮಿಸ್ತ್ರಿ ದಂಪತಿಯವರ ಪುತ್ರಿ. ಆಲೂ ಮಿಸ್ತ್ರಿ ಅವರು ಇತ್ತೀಚೆಗೆ ನಿಧನರಾದ ಟಾಟಾ ಸಮೂಹದ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಅವರ ಸಹೋದರಿ.

    ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ಮಾಯಾ ಟಾಟಾ ಅವರು ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್‌ನ  ಆಡಳಿತ ಮಂಡಳಿಯಲ್ಲಿ ಇತ್ತೀಚೆಗೆ ಸ್ಥಾನ ಪಡೆದಿದ್ದಾರೆ. ಇದು ಇಡೀ ಸಮೂಹದ ಮುಖ್ಯಸ್ಥೆಯನ್ನಾಗಿ ಅವರನ್ನು ಘೋಷಿಸಲು ಕೈಗೊಂಡ ತೀರ್ಮಾನ ಎಂದು ವರದಿಯಾಗಿತ್ತು. ಇದನ್ನೂ ಓದಿ: Chandrayaan-3ಕ್ಕೆ ಇಂದು ಕ್ಲೈಮ್ಯಾಕ್ಸ್; ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ

    2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ

    ನವದೆಹಲಿ: 2024ರ ಮಾರ್ಚ್ ವೇಳೆಗೆ ಟಾಟಾ ಒಡೆತನದ ಏರ್ ಇಂಡಿಯಾದೊಂದಿಗೆ (Air India) ವಿಸ್ತಾರಾ ಏರ್‌ಲೈನ್ಸ್ (Vistara Airlines) ಅನ್ನು ವಿಲೀನಗೊಳಿಸುವುದಾಗಿ ಟಾಟಾ ಸಮೂಹ (TaTa Groups) ಅಧಿಕೃತವಾಗಿ ಘೋಷಿಸಿದೆ.

    ವಿಸ್ತಾರಾ ವಿಮಾನಯಾನ ಕಂಪನಿಯನ್ನು ಏರ್ ಇಂಡಿಯಾ  ಜೊತೆ ವಿಲೀನಗೊಳಿಸುವ ಕುರಿತು ಟಾಟಾ ಸಮೂಹದ ಜೊತೆ ಗೌಪ್ಯ ಮಾತುಕತೆ ನಡೆಯುತ್ತಿದೆ ಎಂದು ಸಿಂಗಾಪುರ ಏರ್‌ಲೈನ್ಸ್ (Singapore Airlines) ಕಳೆದ ಅಕ್ಟೋಬರ್‌ನಲ್ಲೇ ತಿಳಿಸಿತ್ತು. ಇದನ್ನೂ ಓದಿ: ಸ್ಯಾಟಲೈಟ್ ಫೋನ್ ಸಾಗಿಸ್ತಿದ್ದ ರಷ್ಯಾದ ಮಾಜಿ ಸಚಿವ ಭಾರತದ ವಿಮಾನ ನಿಲ್ದಾಣದಲ್ಲಿ ಬಂಧನ

    ಪ್ರಸ್ತುತ ವಿಸ್ತಾರಾದಲ್ಲಿ (Vistara Airlines) ಟಾಟಾ ಸಮೂಹವು ಶೇ.51ರಷ್ಟು ಪಾಲು ಹೊಂದಿದೆ. ಉಳಿದ ಶೇ.49 ಷೇರು ಸಿಂಗಾಪುರ ಏರ್‌ಲೈನ್ಸ್‌ನಲ್ಲೇ ಇದೆ. ಇದೀಗ ವಹಿವಾಟಿನ ಭಾಗವಾಗಿ ಎಸ್‌ಐಎ, ಏರ್ ಇಂಡಿಯಾದಲ್ಲಿ 2 ಸಾವಿರ ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಸ್ಟೋರ್ – ಪತಿಯನ್ನು ಹತ್ಯೆ ಮಾಡಿದ್ದು ಯಾಕೆ?

    ಈಗಾಗಲೇ ಏರ್ ಇಂಡಿಯಾದ ಪೂರ್ಣ ಮಾಲೀಕತ್ವ ಹೊಂದಿರುವ ಟಾಟಾ ಸಮೂಹ, ಏರ್‌ಏಷ್ಯಾ ಇಂಡಿಯಾ (AirAsia India) ಕಂಪನಿಯಲ್ಲಿ ಶೇ 83.67ರಷ್ಟು ಪಾಲು ಹೊಂದಿದೆ. ಈ ವರ್ಷದ ಆರಂಭದಲ್ಲಿ ಸರ್ಕಾರಿ ಹೂಡಿಕೆಯ ಭಾಗವಾಗಿ ಏರ್ ಇಂಡಿಯಾವನ್ನು 18 ಸಾವಿರ ಕೋಟಿಗೆ ಖರೀದಿಸಿತು.

    ಸದ್ಯ 2024ರ ಮಾರ್ಚ್ ತಿಂಗಳೊಳಗೆ ವಿಲೀನಗೊಳಿಸುವ ಗುರಿ ಹೊಂದಿದೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]