Tag: ಟಾಟಾ ನಗರ

  • ಮಳೆಯಾರ್ಭಟಕ್ಕೆ ತತ್ತರಿಸಿ ಹೋದ ಟಾಟಾ ನಗರ – 300ಕ್ಕೂ ಹೆಚ್ಚು ಮನೆಗಳು ಜಲಾವೃತ

    ಮಳೆಯಾರ್ಭಟಕ್ಕೆ ತತ್ತರಿಸಿ ಹೋದ ಟಾಟಾ ನಗರ – 300ಕ್ಕೂ ಹೆಚ್ಚು ಮನೆಗಳು ಜಲಾವೃತ

    ಬೆಂಗಳೂರು: ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿ (Silicon City) ತತ್ತರಿಸಿ ಹೋಗಿದ್ದು, ಬ್ಯಾಟರಾಯನಪುರ (byatarayanapura) ವ್ಯಾಪ್ತಿಯ ಟಾಟಾ ನಗರ (Tata Nagar) ಸಂಪೂರ್ಣ ಮುಳುಗಡೆಯಾಗಿದೆ.ಇದನ್ನೂ ಓದಿ: ಹಾಸನ| ನಕಲಿ ಆಧಾರ್ ಕಾರ್ಡ್ ಹೊಂದಿದ್ದ ಮೂವರು ಬಾಂಗ್ಲಾ ಪ್ರಜೆಗಳ ಬಂಧನ

    ಬೆಂಗಳೂರಿನಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಇಡೀ ಏರಿಯಾನೇ ಜಲಾವೃತಗೊಂಡಿದೆ. 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಕಾರು, ಬೈಕ್ ಎಲ್ಲವೂ ಸಂಪೂರ್ಣ ಮುಳುಗಿ ಹೋಗಿದೆ. ಟಾಟಾ ನಗರದಲ್ಲಿರುವ ಸಬ್ ರಿಜಿಸ್ಟರ್ ಕಛೇರಿ ನೆರೆಯಿಂದ ಆವೃತವಾಗಿದೆ.

    ಗ್ರೌಂಡ್ ಫ್ಲೋರ್‌ನಲ್ಲಿರುವ ಎಲ್ಲಾ ಮನೆಗಳು ಸಂಪೂರ್ಣ ಜಲಾವೃತಗೊಂಡಿದೆ. ಅಗ್ನಿಶಾಮಕ ದಳದಿಂದ ಬೋಟ್ ಮೂಲಕ ಕಾರ್ಯಚರಣೆ ನಡೆಯುತ್ತಿದ್ದು, ಟಾಟಾ ನಗರದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸದಲ್ಲಿ ತೊಡಗಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ – ಸಿಪಿವೈ ಪಕ್ಷ ಸೇರುವ ಮುನ್ಸೂಚನೆ ಕೊಟ್ಟ ಸಿಎಂ

  • ಬೆಂಗಳೂರಿಗೆ ಬಂತು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು

    ಬೆಂಗಳೂರಿಗೆ ಬಂತು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು

    – ಜಾರ್ಖಂಡ್‍ನ ಟಾಟಾನಗರದಿಂದ ಹೊರಟಿದ್ದ ರೈಲು
    – 30 ಗಂಟೆ ಪ್ರಯಾಣಿಸಿ ಬೆಳಗ್ಗೆ ಬೆಂಗಳೂರಿಗೆ ಆಗಮನ

    ಬೆಂಗಳೂರು: ಕರ್ನಾಟಕದ ಕೋವಿಡ್ 19 ಸೋಂಕಿತರಿಗೆ ಸಹಾಯವಾಗಲೆಂದು ಜಾರ್ಖಂಡ್ ನಿಂದ ಹೊರಟಿದ್ದ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿಗೆ ಇಂದು ಬೆಳಗ್ಗೆ 9 ಗಂಟೆಗೆ ಆಗಮಿಸಿದೆ.

    ಜಾರ್ಖಂಡ್‍ ರಾಜ್ಯದ ಟಾಟಾ ನಗರದಿಂದ ಸೋಮವಾರ ಬೆಳಗ್ಗೆ 3 ಗಂಟೆಗೆ ಹೊರಟಿದ್ದ ರೈಲು 30 ಗಂಟೆಯಲ್ಲಿ ಕ್ರಮಿಸಿ ಬೆಂಗಳೂರಿಗೆ ಆಗಮಿಸಿದೆ. ಆಕ್ಸಿಜನ್ ಹೊತ್ತ ರೈಲಿನ ಸಂಚಾರಕ್ಕೆ ಗ್ರಿನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು.

    ಪ್ರತಿ ಕಂಟೇನರ್20 ಟನ್ ಸಾಮರ್ಥ್ಯ ಹೊಂದಿದ್ದು, ಒಟ್ಟು 120 ಟನ್ ಲಿಕ್ವಿಡ್ ಆಕ್ಸಿಜನ್ ಹೊತ್ತುಕೊಂಡು ಬಂದಿದ್ದ ರೈಲು ಇಂದು ಬೆಳಗ್ಗೆ ವೈಟ್ ಫೀಲ್ಡ್ ನಲ್ಲಿರುವ ಕಂಟೇನರ್ ಕಾರ್ಪೋರೇಷನ್  ಆಫ್ ಇಂಡಿಯಾ ಡಿಪೋವನ್ನು ತಲುಪಿದೆ.

    6 ಕಂಟೈನರ್ ಮೆಡಿಕಲ್ ಆಕ್ಸಿಜನ್ ಹೊತ್ತುಕೊಂಡು ಬರುತ್ತಿರುವ ರೈಲಿನ ವಿಡಿಯೋವನ್ನು ಕೇಂದ್ರ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ.

    ಕರ್ನಾಟಕಕ್ಕೆ ನಿತ್ಯ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವಂತೆ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಕಳೆದ ವಾರ ಎತ್ತಿ ಹಿಡಿದಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾ. ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಅತ್ಯುತ್ತಮ ಆದೇಶ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

    ರಾಜ್ಯದಲ್ಲಿ ಜನರು ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಹೈಕೋರ್ಟ್ ನೀಡಿರುವ ಆದೇಶಕ್ಕೆ ನಾವು ತಡೆ ನೀಡುವುದಿಲ್ಲ. ಒಂದು ವೇಳೆ ತಡೆ ನೀಡಿದರೆ ಕರ್ನಾಟಕದ ಜನರು ಆಕ್ಸಿಜನ್ ಇಲ್ಲದೇ ತತ್ತರಿಸಿ ಹೋಗಲಿದ್ದಾರೆ. ಹೀಗಾಗಿ ಕರ್ನಾಟಕಕ್ಕೆ ಆಕ್ಸಿಜನ್ ಕೋಟಾವನ್ನು ನಾಲ್ಕು ದಿನಗಳಲ್ಲಿ ಹೆಚ್ಚಿಸಬೇಕು ಎಂದು ಮೇ 7 ರಂದು ಕೇಂದ್ರಕ್ಕೆ ಆದೇಶಿಸಿತ್ತು.