Tag: ಟಾಟಾ ಗ್ರೂಪ್‌

  • ತೈವಾನ್‌ ಕಂಪನಿ ಖರೀದಿ – ಶೀಘ್ರವೇ ಟಾಟಾದಿಂದ ಐಫೋನ್‌ ಉತ್ಪಾದನೆ

    ತೈವಾನ್‌ ಕಂಪನಿ ಖರೀದಿ – ಶೀಘ್ರವೇ ಟಾಟಾದಿಂದ ಐಫೋನ್‌ ಉತ್ಪಾದನೆ

    ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಆಪಲ್ (Apple) ಕಂಪನಿಯ ಐಫೋನ್ (iPhone) ಉತ್ಪಾದನೆ ಭಾರತದಲ್ಲಿ (India) ಹೊಸ ಬದಲಾವಣೆಗಳನ್ನು ತಂದಿದೆ. ಈಗಾಗಲೇ ಐಫೋನ್ 14, ಐಫೋನ್ 13 ಹಾಗೂ ಇತರ ಹೊಸ ಫೋನ್‌ಗಳನ್ನು ಭಾರತದಲ್ಲಿ ತಯಾರಿಸಿದೆ. ಭಾರತದಲ್ಲಿ ಐಫೋನ್ ತಯಾರಿಸುವ ಪ್ರಮುಖ ಕಂಪನಿಗಳಲ್ಲಿ ಫಾಕ್ಸ್ಕಾನ್ (Foxconn) ಹಾಗೂ ವಿಸ್ಟ್ರಾನ್ (Wistron) ಸೇರಿದೆ. ಆದರೆ ಇದೀಗ ಭಾರತದಲ್ಲಿ ಆಪಲ್‌ನ ಐಫೋನ್ ತಯಾರಿಸುವ ಜವಾಬ್ದಾರಿಯನ್ನು ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ವಹಿಸಿಕೊಳ್ಳಲು ಸಜ್ಜಾಗುತ್ತಿದೆ.

    ಆಪಲ್ ಕಂಪನಿಗೆ ಐಫೋನ್ ತಯಾರಿಸಿಕೊಡುವ ವಿಸ್ಟ್ರಾನ್ ಭಾರತದಲ್ಲಿ ತನ್ನ ಕಾರ್ಯಗಳನ್ನು ಸ್ಥಗಿತಗೊಳಿಸಲು ಮುಂದಾಗುತ್ತದೆ. ಇದೀಗ ತೈವಾನ್‌ನ ಎಲೆಕ್ಟ್ರಾನಿಕ್ಸ್ ಕಂಪನಿಯನ್ನು ಶೀಘ್ರದಲ್ಲೇ ಟಾಟಾ ಎಲೆಕ್ಟ್ರಾನಿಕ್ಸ್ ಸ್ವಾಧೀನಪಡಿಸಿಕೊಳ್ಳಲಿದ್ದು, ಐಫೋನ್ ತಯಾರಿಕೆಯ ಜವಾಬ್ದಾರಿಯನ್ನೂ ಕೈಗೆತ್ತಿಕೊಳ್ಳಲಿದೆ.

    ಭಾರತದಲ್ಲಿ ವಿಸ್ಟ್ರಾನ್‌ನ ಘಟಕ ಕರ್ನಾಟಕದ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿದೆ. ಸುಮಾರು 4,000 ರಿಂದ 5,000 ಕೋಟಿ ರೂ. ಮೌಲ್ಯದ ಘಟಕ ಇದಾಗಿದ್ದು, ಆಪಲ್ ಐಫೊನ್ ತಯಾರಿಸುವ ದೇಶದ 3 ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

    ಸುಮಾರು 5 ವರ್ಷಗಳ ಹಿಂದೆ ವಿಸ್ಟ್ರಾನ್ ಐಫೋನ್ ಎಸ್‌ಸಿ 2 ನೊಂದಿಗೆ ಐಫೋನ್ ತಯಾರಿಸಲು ಪ್ರಾರಂಭಿಸಿತ್ತು. ಪ್ರಸ್ತುತ ಕಂಪನಿ ಭಾರತದಲ್ಲಿ ಐಫೋನ್ ಎಸ್‌ಸಿ, ಐಫೋನ್ 12, ಐಫೋನ್ 13 ಹಾಗೂ ಐಫೋನ್ 14 ಅನ್ನು ತಯಾರಿಸುತ್ತಿದೆ.

    ಆಪಲ್ ಭಾರತಕ್ಕೆ 20 ವರ್ಷಗಳ ಹಿಂದೆ ಲಗ್ಗೆಯಿಟ್ಟಿದ್ದು, ಸುದೀರ್ಘ ಇತಿಹಾಸವನ್ನು ಹೊಂದಿದೆ. 2020ರ ಸೆಪ್ಟೆಂಬರ್‌ನಲ್ಲಿ ಆಪಲ್ ದೇಶದಲ್ಲಿ ತನ್ನ ಆನ್‌ಲೈನ್ ಸ್ಟೋರ್ ಅನ್ನು ಪ್ರಾರಂಭಿಸಿತು. ಇತ್ತೀಚೆಗಷ್ಟೇ ಭಾರತದ ಮೊದಲ ಆಪಲ್ ಸ್ಟೋರ್ ಮುಂಬೈ ಹಾಗೂ ದೆಹಲಿಯಲ್ಲಿ ಉದ್ಘಾಟನೆಗೊಂಡಿದೆ. ಇದನ್ನೂ ಓದಿ: ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

  • WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು

    WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು

    ಮುಂಬೈ: ಇದೇ ಮೊದಲ ಬಾರಿಗೆ ನಡೆಯುತ್ತಿರುವ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಕ್ರಿಕೆಟ್ ಟೂರ್ನಿ ವೀಕ್ಷಿಸುವವರಿಗೆ ಬಿಸಿಸಿಐ (BCCI) ಬಂಪರ್ ಆಫರ್ ಕೊಟ್ಟಿದೆ. ಮಹಿಳಾ ಕ್ರಿಕೆಟ್ ಬಗ್ಗೆ ಆಸಕ್ತಿ ಹೆಚ್ಚಿಸಲು ಹಾಗೂ ಸ್ಟೇಡಿಯಂಗಳಲ್ಲಿ ಹೆಚ್ಚಿನ ಜನ ಸೇರುವಂತೆ ಮಾಡಲು ಬಿಸಿಸಿಐ ಮಾಸ್ಟರ್ ಪ್ಲಾನ್ ಮಾಡಿದೆ.

    ಮಾರ್ಚ್ 4 ರಿಂದ ಮಾರ್ಚ್ 26ರ ವರೆಗೆ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಬರುವ ಎಲ್ಲ ಮಹಿಳೆಯರು (Womens) ಹಾಗೂ ಹುಡುಗಿಯರಿಗೆ ಉಚಿತ ಪ್ರವೇಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಇದನ್ನೂ ಓದಿ: RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

    WPL 2023 2

    ಚೊಚ್ಚಲ WPL ಆವೃತ್ತಿಯಲ್ಲಿ ಪ್ಲೆ ಆಫ್, ಫೈನಲ್ ಪಂದ್ಯಗಳು ಸೇರಿದಂತೆ ಒಟ್ಟು 22 ಪಂದ್ಯಗಳು ನಡೆಯಲಿವೆ. ಮಾರ್ಚ್ 4ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಅದಾನಿ ನೇತೃತ್ವದ ಗುಜರಾತ್ ಜೈಂಟ್ಸ್ (Gujarat Giants)  ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಸೆಣಸಲಿವೆ. ಇದನ್ನೂ ಓದಿ: ಮೊದಲ ದಿನವೇ 14 ವಿಕೆಟ್‌ ಪತನ – ಪಿಚ್‌ ವಿರುದ್ಧ ಭಾರೀ ಟೀಕೆ

    WPL 2023

    ಈ ಪಂದ್ಯಗಳನ್ನು ವೀಕ್ಷಿಸಲು ಮಹಿಳೆಯರು ಮತ್ತು ಹುಡುಗಿಯರಿಗೆ ಉಚಿತ ಪ್ರವೇಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಇತ್ತೀಚೆಗೆ ಭಾರತ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ನೀಡಿದ್ದ ತಮ್ಮ ನಿರ್ಧಾರಕ್ಕೆ ಅನುಗುಣವಾಗಿ ಡಬ್ಲ್ಯೂಪಿಎಲ್‌ ಸರಣಿಯಲ್ಲೂ ಉಚಿತಪ್ರವೇಶ ನೀಡಲು ನಿರ್ಧರಿಸಿದೆ. ಪುರುಷರು ಹಾಗೂ ಹುಡುಗರಿಗೆ ಕ್ರಮವಾಗಿ 100 ರೂ. ಹಾಗೂ 400 ರೂ. ಟಿಕೆಟ್ ದರ ನಿಗದಿಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

    ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವ ಪಡೆದಿದ್ದ ಟಾಟಾ ಸಮೂಹ ಇದೀಗ ಡಬ್ಲ್ಯೂಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆಯಲು 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ನಮಗೆ ಸಂತೋಷ ಉಂಟುಮಾಡಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಟ್ವೀಟ್ ಮೂಲಕ ತಿಳಿಸಿದ್ದಾರೆ.