Tag: ಟಾಟಾ ಕಂಪನಿ

  • ಕೂದಲು ಉದುರಿದವರು ಫುಲ್ ಶೇವ್ ಮಾಡ್ಬೇಕು- ಏರ್ ಇಂಡಿಯಾ ನ್ಯೂ ರೂಲ್ಸ್

    ಕೂದಲು ಉದುರಿದವರು ಫುಲ್ ಶೇವ್ ಮಾಡ್ಬೇಕು- ಏರ್ ಇಂಡಿಯಾ ನ್ಯೂ ರೂಲ್ಸ್

    ನವದೆಹಲಿ: ಟಾಟಾ ಒಡೆತನದ ಏರ್ ಇಂಡಿಯಾ (Air India) ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೊಸ ವಸ್ತ್ರಸಂಹಿತೆ ಜಾರಿ ಮಾಡಿದೆ.

    ಹೊಸ ನಿಯಮದ ಪ್ರಕಾರ ಕೂದಲು ಉದುರಿರುವ ಪುರುಷ ಸಿಬ್ಬಂದಿ ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡು ಕೆಲಸಕ್ಕೆ ಬರುವಂತೆ ಸೂಚಿಸಿದೆ. ಇನ್ನೂ ಮಹಿಳೆಯರು (Women’s) ಅರಳು ಇರುವ ಕಿವಿ ಓಲೆಗಳನ್ನು ಧರಿಸದಂತೆ ಸೂಚಿಸಿದೆ. ಇದನ್ನೂ ಓದಿ: ವಿದ್ಯಾಭರಣ್ ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು: ನಟಿ ವೈಷ್ಣವಿ ಸ್ಪಷ್ಟನೆ

    ದಶಕಗಳ ಕಾಲದಿಂದ ವಿಮಾನ ಸೇವೆ ಒದಗಿಸುತ್ತಿರುವ ಏರ್ ಇಂಡಿಯಾ ತನ್ನ ಸಿಬ್ಬಂದಿ ವಸ್ತ್ರಸಂಹಿತೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಬದಲಾಯಿಸಲು ತೀರ್ಮಾನಿಸಿದೆ. ತಲೆಯಲ್ಲಿ ಹೆಚ್ಚು ಕೂದಲು ಉದುರಿ ತಲೆ ಬೋಳು-ಬೋಳಾಗಿ ಕಾಣುವ ಸಿಬ್ಬಂದಿ ಪೂರ್ಣವಾಗಿ ತಮ್ಮ ತಲೆಕೂದಲನ್ನು ಪ್ರತಿನಿತ್ಯ ಶೇವ್ ಮಾಡಬೇಕು. ಅಲ್ಲದೇ ಗುಂಪಿನಲ್ಲಿದ್ದಾಗ ಅಸಭ್ಯ ವರ್ತನೆ ನಿಲ್ಲಿಸಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!

    ಮಹಿಳಾ ಸಿಬ್ಬಂದಿ ಕೇವಲ ಚಿನ್ನ (Gold) ಮತ್ತು ವಜ್ರದ ವೃತ್ತಾಕಾರದ ಕಿವಿ ಓಲೆಗಳನ್ನು ಮಾತ್ರ ಧರಿಸಬೇಕು. 0.5 ಸೆಂ.ಮೀ. ಅಗಲದ ಬಿಂದಿ ಮತ್ತು 1 ಸೆಂ.ಮೀ. ಗಿಂತ ಹೆಚ್ಚು ಅಗಲವಿಲ್ಲದ ಉಂಗುರ ಧರಿಸಬೇಕು. 1 ಕೈಗೆ 1 ಉಂಗುರ ಮಾತ್ರ ಧರಿಸಬೇಕು. ಡಿಸೈನ್‌ಗಳಿಲ್ಲದ 1 ಬಳೆ ಮಾತ್ರ ಧರಿಸಬೇಕು ಎಂದು ತನ್ನ ಸಿಬ್ಬಂದಿಗೆ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಟಾಟಾ ಸನ್ಸ್ ಗ್ರೂಪ್‌ಗೆ ಎನ್ ಚಂದ್ರಶೇಖರನ್ ಅಧ್ಯಕ್ಷರಾಗಿ ಮರು ನೇಮಕ

    ಟಾಟಾ ಸನ್ಸ್ ಗ್ರೂಪ್‌ಗೆ ಎನ್ ಚಂದ್ರಶೇಖರನ್ ಅಧ್ಯಕ್ಷರಾಗಿ ಮರು ನೇಮಕ

    ನವದೆಹಲಿ: ಟಾಟಾ ಸನ್ಸ್ ಮಂಡಳಿಯಲ್ಲಿ ಮುಂದಿನ 5 ವರ್ಷಗಳ ವರೆಗೆ ನಟರಾಜನ್ ಚಂದ್ರಶೇಖರನ್ ಅವರು ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

    ಎನ್ ಚಂದ್ರಶೇಖರನ್ 2017ರಲ್ಲಿ ಟಾಟಾ ಸನ್ಸ್ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅವರ 5 ವರ್ಷಗಳ ಅಧಿಕಾರ ಅವಧಿ ಮುಗಿದಿದ್ದು, ಮತ್ತೆ 5 ವರ್ಷಗಳ ಅಧ್ಯಕ್ಷೀಯ ಅವಧಿಯನ್ನು ನವೀಕರಿಸಲಾಗಿದೆ.

    ಚಂದ್ರಶೇಖರನ್ 2016ರ ಅಕ್ಟೋಬರ್‌ನಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿದ್ದರು. ಜನವರಿ 2017ರಲ್ಲಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇವರು 100ಕ್ಕೂ ಅಧಿಕ ಟಾಟಾ ಆಪರೇಟಿಂಗ್ ಕಂಪನಿಗಳ ಪ್ರವರ್ತಕರಾಗಿದ್ದು, 100 ಶತಕೋಟಿ ಡಾಲರ್‌ಗೂ ಹೆಚ್ಚಿನ ಆದಾಯ ಹೊಂದಿದ್ದಾರೆ. ಇದನ್ನೂ ಓದಿ: IPL 2022 Auction: ಲಿವಿಂಗ್‍ಸ್ಟೋನ್ ದುಬಾರಿ ವಿದೇಶಿ ಆಟಗಾರ – ಫಿಂಚ್, ಮಾರ್ಗನ್ ಅನ್‍ಸೋಲ್ಡ್

     

    ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸೇರಿದಂತೆ ಹಲವಾರು ಗ್ರೂಪ್ ಆಪರೇಟಿಂಗ್ ಕಂಪನಿಗಳ ಮಂಡಳಿಗೆ ಅಧ್ಯಕ್ಷರಾಗಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ 15ರ ಸೆಟ್‌ಗೆ ಬೆಂಕಿ!

    ಚಂದ್ರಶೇಖರನ್ ತಮ್ಮ ಅಧಿಕಾರಾವಧಿಯಲ್ಲಿ ಏರ್ ಇಂಡಿಯಾವನ್ನು ಮರಳಿ ಪಡೆದಿದ್ದಾರೆ. ಟಾಟಾ ಗ್ರೂಪ್‌ಗೆ ಏರ್ ಇಂಡಿಯಾವನ್ನು ಮರಳಿ ಪಡೆಯಲು ನಾವು ಉತ್ಸುಕರಾಗಿದ್ದೇವೆ. ಇದನ್ನು ವಿಶ್ವದರ್ಜೆಯ ವಿಮಾನಯಾನ ಮಾಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದರು.

  • ಏರ್ ಇಂಡಿಯಾ ನೌಕರರನ್ನು ಕನಿಷ್ಠ ಒಂದು ವರ್ಷ ಟಾಟಾ ಕಂಪನಿ ಮುಂದುವರಿಸಬೇಕು: ಕೇಂದ್ರ ಸರ್ಕಾರ

    ಏರ್ ಇಂಡಿಯಾ ನೌಕರರನ್ನು ಕನಿಷ್ಠ ಒಂದು ವರ್ಷ ಟಾಟಾ ಕಂಪನಿ ಮುಂದುವರಿಸಬೇಕು: ಕೇಂದ್ರ ಸರ್ಕಾರ

    ಮುಂಬೈ: ಕೇಂದ್ರ ಸರ್ಕಾರದ ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಬಿಡ್ ಗೆದ್ದ ಟಾಟಾ ಸನ್ಸ್ ಗೆ ಕೇಂದ್ರ ಸರ್ಕಾರ ಒಂದು ಷರತ್ತು ವಿಧಿಸಿದೆ. ಟಾಟಾ ಕಂಪನಿ ಕನಿಷ್ಠ ಒಂದು ವರ್ಷದವರೆಗೆ ಈಗಿರುವ ಏರ್ ಇಂಡಿಯಾದ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕೆಂದು ಸ್ಪಷ್ಟಪಡಿಸಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ವಿಮಾನಯಾನ ಸಚಿವಾಲಯ ಕಾರ್ಯದರ್ಶಿ ರಾಜೀವ್ ಬನ್ಸಲ್, ಏರ್ ಇಂಡಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಲ್ಲಾ ನೌಕರರ ಹಿತಾಸಕ್ತಿಗಳನ್ನು ಪರಿಗಣಿಸಿ, ಬಿಡ್ಡಿಂಗ್ ನಲ್ಲಿ ಗೆದ್ದಿರುವ ಟಾಟಾ ಗ್ರೂಪ್ ನೌಕರರನ್ನು ಒಂದು ವರ್ಷ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ತೆಗೆದು ಹಾಕುವಂತಿಲ್ಲ. ಜೊತೆಗೆ ಒಂದು ವರ್ಷ ನಂತರ ಸಂಸ್ಥೆ ಸೇವೆಯಿಂದ ತೆಗೆದುಹಾಕುವ ನೌಕರರಿಗೆ ವಿಆರ್‍ಎಸ್ ಸೌಲಭ್ಯವನ್ನು ನೀಡಬೇಕೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ

    ಈ ಹಿಂದೆ ಏರ್ ಇಂಡಿಯಾದಲ್ಲಿ ಒಟ್ಟು 8 ಸಾವಿರಕ್ಕೂ ಅಧಿಕ ಖಾಯಂ ಮತ್ತು 4 ಸಾವಿರಕ್ಕೂ ಹೆಚ್ಚು ಗುತ್ತಿಗೆ ಸಿಬ್ಬಂದಿಯನ್ನು ಒಳಗೊಂಡು ಒಟ್ಟು 12 ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 5 ಸಾವಿರ ಉದ್ಯೋಗಿಗಳು ಸಂಸ್ಥೆಯಿಂದ ನಿವೃತ್ತರಾಗಲಿದ್ದಾರೆ. ನೌಕರರ ನಿವೃತ್ತಿಯ ನಿಯಮಗಳ ಪ್ರಕಾರ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಸುಮಾರು 55 ಸಾವಿರ ನಿವೃತ್ತ ಸಿಬ್ಬಂದಿ ಏರ್ ಇಂಡಿಯಾದಿಂದ ಕೆಲ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

    ಕೆಲದಿನಗಳ ಹಿಂದೆ ಟಾಟಾ ಕಂಪನಿ ಏರ್ ಇಂಡಿಯಾ ಬಿಡ್ ಗೆದ್ದ ಬಳಿಕ ಏರ್ ಇಂಡಿಯಾ ನೌಕರರ ಒಕ್ಕೂಟ, ನೌಕರರ ನಿವೃತ್ತಿ ಮತ್ತು ಸರ್ಕಾರದಿಂದ ಸಿಗುವ ಇತರ ಸೌಲಭ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು ಇದೀಗ ಸರ್ಕಾರ ಈ ಬಗ್ಗೆ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್‌ ಇಂಡಿಯಾ ಎಂದ ರತನ್‌ ಟಾಟಾ

    ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್‌ ಕಾಂತಾ, ಟಾಟಾ ಸಮೂಹ  ಒಟ್ಟು 18 ಸಾವಿರ ಕೋಟಿ ರೂ. ಬಿಡ್‌ ಮಾಡಿತ್ತು. ಡಿ.10ರ ವೇಳೆ ಸಂಪೂರ್ಣವಾಗಿ ಏರ್‌ ಇಂಡಿಯಾವನ್ನು ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

     

  • ನಷ್ಟದಲ್ಲಿರುವ ʼಮಹಾರಾಜʼನನ್ನು ಖರೀದಿಸಲು ಮುಂದಾದ ಟಾಟಾ ಕಂಪನಿ

    ನಷ್ಟದಲ್ಲಿರುವ ʼಮಹಾರಾಜʼನನ್ನು ಖರೀದಿಸಲು ಮುಂದಾದ ಟಾಟಾ ಕಂಪನಿ

    ನವದೆಹಲಿ: 90 ಸಾವಿರ ಕೋಟಿ ರೂ. ನಷ್ಟದ ಸುಳಿಯಲ್ಲಿ ಸಿಲುಕಿರುವ ʼಮಹಾರಾಜʼನನ್ನು ಖರೀದಿಸಲು ಟಾಟಾ ಕಂಪನಿ ಆಸಕ್ತಿ ತೋರಿಸಿದೆ.

    ʼಮಹಾರಾಜ’ ಲಾಂಛನದಿಂದ ಗುರುತಿಸಿಕೊಂಡಿರುವ ಏರ್‌ ಇಂಡಿಯಾ ಕಂಪನಿಯನ್ನು ಮಾರಾಟ ಮಾಡುವ ಸಂಬಂಧ ಕೇಂದ್ರ ಸರ್ಕಾರ ಬಿಡ್ಡಿಂಗ್‌ ಆಹ್ವಾನಿಸಿದ್ದು ಇಂದು ಸಂಜೆ 5 ಗಂಟೆಗೆ ಅವಧಿ ಮುಕ್ತಾಯವಾಗಿದೆ.

    ಈ ಬಿಡ್ಡಿಂಗ್‌ನಲ್ಲಿ ಟಾಟಾ ಕಂಪನಿ, ಏರ್‌ ಇಂಡಿಯಾ ನೌಕರರ ಒಕ್ಕೂಟ ಮತ್ತು ಅಮೆರಿಕದ ಇಂಟರ್ಅಪ್ಸ್ ಕಂಪನಿ ಖರೀದಿಸಲು ಆಸಕ್ತಿ ತೋರಿಸಿದೆ. ಕೇಂದ್ರ ಸರ್ಕಾರ ಜನವರಿ 5 ರಂದು ಬಿಡ್ಡಿಂಗ್‌ಗೆ ಅರ್ಹತೆ ಪಡೆದವರ ಹೆಸರನ್ನು ಪ್ರಕಟಿಸುವ ಸಾಧ್ಯತೆಯಿದೆ.

    ಏರ್‌ ಇಂಡಿಯಾ ಮಾರಾಟ ಮಾಡುವ ಕೇಂದ್ರ ಸರ್ಕಾರದ ಮೊದಲ ಪ್ರಯತ್ನ ವಿಫಲವಾಗಿತ್ತು. 2018ರಲ್ಲಿ ಕೇಂದ್ರ ಸರ್ಕಾರ ಬಿಡ್‌ ಆಹ್ವಾನಿಸಿತ್ತು. ಆದರೆ ಯಾರೂ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಈ ಸಂದರ್ಭದಲ್ಲಿ ಶೇ.76 ರಷ್ಟು ಪಾಲು ಮಾರಾಟ ಮಾಡುವುದರ ಜೊತೆಗೆ ಸಾಲವನ್ನು ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿತ್ತು.

    ಈ ಬಾರಿ ಬಿಡ್‌ನಲ್ಲಿ ಶೇ.100 ರಷ್ಟು ಷೇರನ್ನು ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸಿ ಖರೀದಿಸಲು ಆಸಕ್ತಿ ತೋರಿಸಿವೆ.

    ಮಾಧ್ಯಮಗಳಲ್ಲಿ ಪ್ರಕಟವಾದಂತೆ ಟಾಟಾ ಗ್ರೂಪ್, ಮಲೇಷ್ಯಾದ ಏರ್ ಏಷ್ಯಾ ಗ್ರೂಪ್‌ ಜೊತೆ ಸೇರಿ ಜಂಟಿಯಾಗಿ ಬಿಡ್‌ನಲ್ಲಿ ಭಾಗವಹಿಸಿದೆ ಎಂದು ವರದಿಯಾಗಿದೆ. ಸದ್ಯ ಏರ್‌ ಏಷ್ಯಾ ಇಂಡಿಯಾದಲ್ಲಿ ಟಾಟಾ ಗ್ರೂಪ್‌ ಶೇ.49ರಷ್ಟು ಪಾಲುದಾರಿಕೆ ಹೊಂದಿದೆ. 2020-21ರ ಅಂತ್ಯದ ವೇಳೆಗೆ ಏರ್‌ಏಷ್ಯಾ ಇಂಡಿಯಾದಲ್ಲಿನ ತನ್ನ ಪಾಲನ್ನು ನಿಧಾನವಾಗಿ ಶೇ.76 ಕ್ಕಿಂತ ಹೆಚ್ಚಿಸಲು ಟಾಟಾ ಸಂಸ್ಥೆ ಯೋಚಿಸುತ್ತಿರುವ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ಖರೀದಿಗೆ ಆಸಕ್ತಿ ತೋರಿಸಿದೆ ಎನ್ನಲಾಗುತ್ತಿದೆ.

    ವಿಶೇಷ ಏನೆಂದರೆ 88 ವರ್ಷದ ಹಿಂದೆ ಟಾಟಾ ಕಂಪನಿಯೇ ಏರ್‌ ಇಂಡಿಯಾ ಕಂಪನಿಯನ್ನು ಆರಂಭಿಸಿತ್ತು. 1932ರಲ್ಲಿ ಟಾಟಾ ಏರ್‌ಲೈನ್ಸ್‌ ಹೆಸರಿನಲ್ಲಿ ಆರಂಭಗೊಂಡ ಕಂಪನಿ ಬಳಿಕ 1946ರಲ್ಲಿ ಏರ್‌ ಇಂಡಿಯಾ ಕಂಪನಿಯಾಗಿ ಬದಲಾಗಿತ್ತು.

  • ಟಾಟಾ ಸ್ಟೀಲ್ಸ್ ಮ್ಯಾನೇಜರ್‌ನನ್ನು ಗುಂಡಿಕ್ಕಿ ಕೊಂದ ಮಾಜಿ ನೌಕರ

    ಟಾಟಾ ಸ್ಟೀಲ್ಸ್ ಮ್ಯಾನೇಜರ್‌ನನ್ನು ಗುಂಡಿಕ್ಕಿ ಕೊಂದ ಮಾಜಿ ನೌಕರ

    ಚಂಡೀಗಡ್: ಟಾಟಾ ಸ್ಟೀಲ್ ಮ್ಯಾನೇಜರ್ ಒಬ್ಬರನ್ನು ಅದೇ ಕಂಪನಿಯ ಮಾಜಿ ನೌಕರ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹರಿಯಾಣದ ಫರಿದಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಅರಿಂದಾಲ್ ಪಾಲ್ (40) ಮೃತ ದುರ್ದೈವಿ. ಶುಕ್ರವಾರ ಮಧ್ಯಾಹ್ನ ಫರಿದಾಬಾದಿನ ಹಾರ್ಡ್ ವೇರ್ ರಸ್ತೆಯಲ್ಲಿರುವ ಟಾಟಾ ಸ್ಟೀಲ್ ತಯಾರಿಕಾ ಘಟಕದಲ್ಲಿ, ಎಂದಿನಂತೆ ಮ್ಯಾನೇಜರ್ ಅರಿಂದಾಲ್ ತನ್ನ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕಚೇರಿಗೆ ನುಗ್ಗಿದ ವ್ಯಕ್ತಿಯೊಬ್ಬ ಏಕಾಏಕಿ ಅವರ ಮೇಲೆ 4-5 ಬಾರಿ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದನು.

    ರಕ್ತದ ಮಡುವಿನಲ್ಲಿ ಬಿದ್ದಿದ್ದ ಪಾಲ್ ರನ್ನು ಕಚೇರಿಯ ಸಿಬ್ಬಂದಿ ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದರು. ಆಸ್ಪತ್ರೆಯಿಂದ ಮ್ಯಾನೇಜರ್ ಹತ್ಯೆ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ, ನಾನು ಆಸ್ಪತ್ರೆಗೆ ಕಡೆ ಹೊರಟೆ, ಆದರೆ ನಾನು ತಲುಪುವಷ್ಟರಲ್ಲಿ ಅರಿಂದಾಲ್ ಪಾಲ್ ಮೃತಪಟ್ಟಿದ್ದರೆಂದು ಮುಜೆಶರ್ ಪೊಲೀಸ್ ಠಾಣಾ ಅಧಿಕಾರಿ ಅಶೋಕ್ ಕುಮಾರ್ ಹೇಳಿದ್ದಾರೆ.

    ಮ್ಯಾನೇಜರ್ ಪಾಲ್‍ಗೆ ಗುಂಡಿನ ದಾಳಿ ನಡೆಸಿದ್ದು, ಅದೇ ಸಂಸ್ಥೆಯ ಮಾಜಿ ನೌಕರ 32 ವರ್ಷದ ವಿಶ್ವಾಸ್ ಪಾಂಡೆಯಾಗಿದ್ದಾನೆ. ಆರೋಪಿ ಪಾಂಡೆ ಟಾಟಾ ಕಂಪನಿಯಲ್ಲಿ ಕಳೆದ 4 ವರ್ಷಗಳಿಂದ (2015-2018) ಕೆಲಸ ನಿರ್ವಹಿಸಿತ್ತಿದ್ದ. ಅಲ್ಲದೇ ಕಳೆದ ಆಗಸ್ಟ್ ತಿಂಗಳಿನಲ್ಲಿ ಆರೋಪಿಯನ್ನು ಕೆಲಸದಿಂದ ಹೊರಹಾಕಲಾಗಿತ್ತು. ಘಟನೆ ಸಂಬಂಧ ಆರೋಪಿ ವಿಶ್ವಾಸ್ ಪಾಂಡೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಪಾಂಡೆಗಾಗಿ ತೀವ್ರ ಶೋಧ ನಡೆಸುತ್ತಿದ್ದೇವೆ. ಸದ್ಯ ಪಾಲ್ ರವರ ಮೃತ ದೇಹವನ್ನ ಫರಿದಾಬಾದ್‍ನ ಬಾದ್‍ಷಾ ಖಾನ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಭಾನುವಾರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.

    ಮ್ಯಾನೇಜರ್ ಅರಿಂದಾಲ್ ಪಾಲ್ ಹತ್ಯೆಯ ಕುರಿತು ಟಾಟಾ ಸ್ಟೀಲ್ಸ್ ಪ್ರೋಸೆಸಿಂಗ್ ಮತ್ತು ಡಿಸ್ಟ್ರಿಬ್ಯೂಶನ್ ಕಂಪನಿ ಸಂತಾಪ ಸೂಚಿಸಿದೆ. ಪಾಲ್ ಅವರು ಹೆಂಡತಿ, ಮಗಳು ಮತ್ತು ತಂದೆ-ತಾಯಿಯನ್ನ ಅಗಲಿದ್ದಾರೆ. ಮೃತ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡಲಿದೆ ಎಂದು ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews