‘ಟಾಕ್ಸಿಕ್’ (Toxic Film) ಸಿನಿಮಾ ಪಯಣ ಶುರುವಾಗಿದೆ ಎಂದು ಬೆಳ್ಳಂಬೆಳಗ್ಗೆ ಯಶ್ (Yash) ಮುಂದಿನ ಸಿನಿಮಾ ಕುರಿತು ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ಕೆಜಿಎಫ್ 2’ (KGF 2) ಸಕ್ಸಸ್ ನಂತರ ಕನಸಿನ ಪ್ರಾಜೆಕ್ಟ್ ‘ಟಾಕ್ಸಿಕ್’ ಚಿತ್ರಕ್ಕೆ ಇಂದು (ಆ.8) ಸರಳವಾಗಿ ಚಾಲನೆ ನೀಡಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೆ ಮದುವೆ ಆಮಂತ್ರಣ ನೀಡಿದ ‘ಕಾಟೇರ’ ಡೈರೆಕ್ಟರ್

ಮೊನ್ನೆಯಷ್ಟೇ (ಆ.6) ಉಜಿರೆಯ ಸುರ್ಯ ದೇವಸ್ಥಾನದಲ್ಲಿ ಯಶ್ ದಂಪತಿ ಮತ್ತು ಕೋ ಪ್ರೊಡ್ಯೂಸರ್ ವೆಂಕಟ್ ಕೋಣಂಕಿ ಸ್ಟ್ರಿಪ್ಟ್ ಪೂಜೆ ಮಾಡಿದ್ದರು. ಈ ಬೆನ್ನಲ್ಲೇ ಸರಳವಾಗಿ ಮುಹೂರ್ತ ಕಾರ್ಯಕ್ರಮ ಜರುಗಿದೆ. ಈ ವೇಳೆ, ಹಾಲಿವುಡ್ ತಂತ್ರಜ್ಞರು ಮತ್ತು ಚಿತ್ರತಂಡ ಹೊರತಾಗಿ ಬೇರೆ ಗಣ್ಯರಿಗೆ ಅವಕಾಶವಿರಲಿಲ್ಲ.

ಇನ್ನೂ ಈ ಚಿತ್ರಕ್ಕೆ ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ. ಯಶ್ ನಟನೆಯ ಈ ಸಿನಿಮಾವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸದ್ಯ ಯಶ್ ಹೊಸ ಸಿನಿಮಾದ ಶೂಟಿಂಗ್‌ಗೆ ಚಾಲನೆ ಸಿಕ್ಕಿರುವ ವಿಷ್ಯ ತಿಳಿದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.
ಅಂದಹಾಗೆ, ಕೆಜಿಎಫ್ 2 ಸೂಪರ್ ಸಕ್ಸಸ್ ನಂತರ ಅಂದರೆ 3 ವರ್ಷಗಳ ಬಳಿಕ ಟಾಕ್ಸಿಕ್ ಸಿನಿಮಾದಿಂದ ಯಶ್ ಬರುತ್ತಿದ್ದಾರೆ. ಹಾಗಾಗಿಯೇ ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.






ಅಂದಹಾಗೆ, ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಗೆ ಯಶ್ (Yash) ದಂಪತಿ ಹಾಜರಿ ಹಾಕಿದ್ದರು. ಈ ವೇಳೆ, ಯಶ್ ಹೊಸ ಲುಕ್ ಭಾರೀ ವೈರಲ್ ಆಗಿತ್ತು. ಅದರಂತೆ ರಾಧಿಕಾ ಪಂಡಿತ್, ಸೀರೆಯುಟ್ಟು ಸಿಂಪಲ್ ಆಗಿ ಭಾಗಿಯಾಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿತ್ತು.
ಸೆಲೆಬ್ರಿಟಿ ಹೇರ್ ಸ್ಟೈಲೀಸ್ಟ್ ಅಲೆಕ್ಸ್ ವಿಜಯಕಾಂತ್ ಅವರು ರಾಕಿ ಬಾಯ್ ಲುಕ್ ಬಗ್ಗೆ ಪ್ರತಿಕ್ರಿಯಿಸಿ, ಯಶ್ ಅವರ ಹೊಸ ಲುಕ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಬಗ್ಗೆ ಫ್ಯಾನ್ ಚರ್ಚೆ ಮಾಡಿದರು. ಈ ಲುಕ್ ‘ಟಾಕ್ಸಿಕ್’ ಮಾಡಿರೋದು. ನಾನು ಕೂಡ ಕಥೆ ಕೇಳಿದಾಗ ಈ ಹೇರ್ ಸ್ಟೈಲ್ ಯಶ್ ಪಾತ್ರಕ್ಕೆ ಸೂಕ್ತವಾಗಿದೆ ಎಂದು ನನಗೆ ತಿಳಿದಿತ್ತು. ಯಶ್ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವ ‘ಪಾಂಪಡೋರ್’ ಶೈಲಿಯಲ್ಲಿ ಸ್ಟೈಲ್ ಮಾಡಿದ್ದೇವೆ ಎಂದಿದ್ದಾರೆ.
ಯಶ್ ಹೇರ್ ಸ್ಟೈಲ್ ಯಾವುದು ಅಂದರೆ ‘ಪಾಂಪಡೋರ್’ ಎಂದು ಕರೆಯಲಾಗುತ್ತದೆ ಎಂದಿದ್ದಾರೆ. ಈ ಸಿನಿಮಾದಲ್ಲಿ ನಿರ್ವಹಿಸುತ್ತಿರುವ ಪಾತ್ರಕ್ಕೆ ಸಖತ್ ಟ್ವಿಸ್ಟ್ ಕೂಡ ಇದೆ ಎಂದು ಅಲೆಕ್ಸ್ ಮಾತನಾಡಿದ್ದಾರೆ. ಇದನ್ನೂ ಓದಿ:

ತಡವಾದರೂ ಸರಿ ಅಂತ ಸಕಲ ಸಿದ್ಧತೆ ಮಾಡಿಕೊಂಡೆ ಯಶ್ ಅಖಾಡಕ್ಕೆ ಇಳಿಯುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾಗಾಗಿ ಬೆಂಗಳೂರಿನಲ್ಲಿ ಈಗಾಗಲೇ ಬೃಹತ್ ಸೆಟ್ ಹಾಕಿದ್ದಾರೆ. ಇನ್ನೇನು ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ. ಇದನ್ನೂ ಓದಿ:




