Tag: ಟಾಕ್ಸಿಕ್‌ ಸಿನಿಮಾ

  • ‘ಜೊತೆಯಲಿ ಇರುವೆನು ಹೀಗೆ ಎಂದು’ ಪತ್ನಿಗಾಗಿ ಹಾಡು ಹಾಡಿದ ಯಶ್

    ‘ಜೊತೆಯಲಿ ಇರುವೆನು ಹೀಗೆ ಎಂದು’ ಪತ್ನಿಗಾಗಿ ಹಾಡು ಹಾಡಿದ ಯಶ್

    ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಬರ್ತ್‌ಡೇ ಪಾರ್ಟಿಯಲ್ಲಿ ಪತಿ ಯಶ್ (Yash) ಅವರು ಹಾಡೊಂದನ್ನು ಹಾಡಿದ್ದಾರೆ. ಶಂಕರ್‌ನಾಗ್ ನಟನೆಯ ಸಿನಿಮಾದ ಹಾಡನ್ನು ಪತ್ನಿಯ ಹುಟ್ಟುಹಬ್ಬದಂದು ಪ್ರೀತಿಯಿಂದ ಹಾಡಿದ್ದಾರೆ. ಪತಿ ಯಶ್ ‘ಜೊತೆಯಲಿ ಇರುವೆನು ಹೀಗೆ’ ಎಂದು ಹಾಡಿದ ಹಾಡನ್ನು ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಯಶ್ ಅವರು ‘ಜೊತೆಯಲಿ ಜೊತೆ ಜೊತೆಯಲಿ’ ಹಾಡನ್ನು ಹಾಡಿದ್ದಾರೆ. ಪತಿ ತಮಗಾಗಿ ಹಾಡು ಹಾಡಿದ ವಿಡಿಯೋವನ್ನು ರಾಧಿಕಾ ಪಂಡಿತ್ ಶೇರ್ ಮಾಡಿದ್ದಾರೆ. ಯಶ್ ಹಾಡುವಾಗ ರಾಧಿಕಾ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ. ಯಾವಾಗಲೂ ಇದು ನಮ್ಮ ಹಾಡು. ಈಗಲೂ ಇದನ್ನು ಕೇಳಿದಾಗ ನನ್ನ ಹೃದಯ ಓಡುತ್ತದೆ ಎಂದು ರಾಧಿಕಾ ಅವರು ರೆಡ್ ಹಾರ್ಟ್ ಎಮೋಜಿ ಹಾಕಿ ದೃಷ್ಟಿ ಎಮೋಜಿಯನ್ನು ಹಾಕಿದ್ದಾರೆ. ಈ ಜೋಡಿಯ ನಡುವಿನ ಪ್ರೀತಿ ನೋಡಿ ಫ್ಯಾನ್ಸ್ ಹಾಡಿ ಹೊಗಳಿದ್ದಾರೆ.

    ಅಂದಹಾಗೆ, ರಾಧಿಕಾ ಪಂಡಿತ್ ಅವರು ಮಾರ್ಚ್ 7ರಂದು ಹುಟ್ಟುಹಬ್ಬದ ಹಿನ್ನೆಲೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಿಸಿಕೊಂಡಿದ್ದರು.

     

    View this post on Instagram

     

    A post shared by iamyashikarsy (@iamyashikarsy_)

    ಆ ನಂತರ ಖಾಸಗಿ ಹೋಟೆಲ್‌ವೊಂದರಲ್ಲಿ ಗ್ರ್ಯಾಂಡ್‌ ಆಗಿ ಪತ್ನಿಯ ಹುಟ್ಟುಹಬ್ಬವನ್ನು ಆಪ್ತರ ಸಮ್ಮುಖದಲ್ಲಿ ಯಶ್ ಆಯೋಜಿಸಿದ್ದಾರೆ. ಲೈಟ್‌ ಕಲರ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಕುಟುಂಬದ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

  • ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌- ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ

    ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌- ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ

    ಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾಗೆ (Nayanthara) ವಯಸ್ಸು 40 ಆದ್ರೂ ಅವರ ಮೇಲಿನ ಕ್ರೇಜ್ ಫ್ಯಾನ್ಸ್‌ಗೆ ಕಮ್ಮಿಯಾಗಿಲ್ಲ. ಮದುವೆಯಾಗಿದ್ರೂ ಅವರಿಗೆ ಸಿನಿಮಾಗಳ ಅವಕಾಶಕ್ಕೆ ಬ್ರೇಕ್ ಬಿದ್ದಿಲ್ಲ. ಹೀಗಿರುವಾಗ ಈ ವರ್ಷ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿದೆ.

    ಸದ್ಯ ಮಕ್ಕಳ ಆರೈಕೆ ನಡುವೆಯೂ ಸಾಲು ಸಾಲು ಸಿನಿಮಾಗಳ ಶೂಟಿಂಗ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮಾಧವನ್ ಹಾಗೂ ಸಿದ್ಧಾರ್ಥ್ ಜೊತೆ ಟೆಸ್ಟ್ ಸಿನಿಮಾದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾದ ಡೇಟ್ ಕೂಡ ಅನೌನ್ಸ್ ಆಗಲಿದೆ.

    ಸುಂದರ್ ಸಿ. ಜೊತೆ ‘ಮೂಕುತಿ ಅಮ್ಮನ್ 2’ ಸಿನಿಮಾದಲ್ಲಿ ನಯನತಾರಾ ನಟಿಸಿದ್ದಾರೆ. ದೇವಿಯಾಗಿ ಮತ್ತೆ ನಟಿ ಅವತಾರ ತಾಳಲಿದ್ದಾರೆ. ಇದನ್ನೂ ಓದಿ:ಮಹಿಳೆಯ ಚಪ್ಪಲಿ ಎತ್ತಿ ಕೊಟ್ಟ ಧ್ರುವ ಸರ್ಜಾ- ಆ್ಯಕ್ಷನ್ ಪ್ರಿನ್ಸ್ ಸರಳತೆಗೆ ಫ್ಯಾನ್ಸ್ ಫಿದಾ

    ಯಶ್ ಜೊತೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಅದಕ್ಕಾಗಿ ಬೆಂಗಳೂರಿಗೆ ಬಂದು ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

    ಇದರೊಂದಿಗೆ ಒಂದಿಷ್ಟು ಸಿನಿಮಾಗಳು ಲೈನ್ ಅಪ್ ಆಗಿದೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯ ಸಿನಿಮಾಗಳಾಗಿದ್ದು, ಇನ್ನೂ ಅನೌನ್ಸ್ ಆಗಬೇಕಿದೆ. ಹೊಸಬರಿಗೆ ಅವಕಾಶ ಕೊಡುವ ಸಲುವಾಗಿ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಅವರು ನಿರ್ಮಾಣ ಮಾಡುತ್ತಿದ್ದಾರೆ.

  • ‘ಟಾಕ್ಸಿಕ್’ ಚಿತ್ರತಂಡಕ್ಕೆ ರಿಲೀಫ್ – ನಿರ್ಮಾಪಕರ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

    ‘ಟಾಕ್ಸಿಕ್’ ಚಿತ್ರತಂಡಕ್ಕೆ ರಿಲೀಫ್ – ನಿರ್ಮಾಪಕರ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ‘ಟಾಕ್ಸಿಕ್’ (Toxic Film) ಸಿನಿಮಾ ತಂಡಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ನಿರ್ಮಾಪಕರ ವಿರುದ್ಧ ಹಾಕಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ (High Court) ಮಧ್ಯಂತರ ತಡೆ ನೀಡಿದೆ. ಇದನ್ನೂ ಓದಿ:Pushpa 2: ಅಲ್ಲು ಅರ್ಜುನ್ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು

    ‘ಟಾಕ್ಸಿಕ್’ ಸಿನಿಮಾದ ಸೆಟ್ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂದು ಕೆವಿಎನ್ ಸಂಸ್ಥೆ ಮತ್ತು ಮಾನ್ ಸ್ಟರ್ ಕ್ರಿಯೆಷನ್ಸ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇಂದು (ಡಿ.5) ಈ ಅರ್ಜಿ ವಿಚಾರಣೆ ಮಾಡಿದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ‘ಟಾಕ್ಸಿಕ್’ ಸಿನಿಮಾ ನಿರ್ಮಾಪಕರ ವಿರುದ್ಧ ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

    ಅರ್ಜಿದಾರರ ವಾದ ಏನಿತ್ತು?

    ‘ಟಾಕ್ಸಿಕ್’ ಚಿತ್ರತಂಡ ಸೆಟ್ ಹಾಕಿದ ಜಾಗವನ್ನು 1963ರಲ್ಲೇ ರಾಜ್ಯ ಸರ್ಕಾರ ಹೆಚ್ ಎಂಟಿ ಸಂಸ್ಥೆಗೆ ನೀಡಿದೆ. ಆಗ ಒಟ್ಟು 400 ಎಕರೆ ಭೂಮಿಯನ್ನು ಹೆಚ್‌ಎಂಟಿ ಸಂಸ್ಥೆಗೆ ನೀಡಲಾಗಿತ್ತು. ಈ ಜಮೀನಿನ ಪೈಕಿ 18 ಎಕರೆಯನ್ನು ಕೆನರಾ ಬ್ಯಾಂಕ್‌ಗೆ ಹೆಚ್‌ಎಂಟಿ ಸಂಸ್ಥೆಯು ಮಾರಾಟ ಮಾಡಿದೆ. ಕೆನರಾ ಬ್ಯಾಂಕ್‌ನಿಂದ ಲೀಸ್ ಪಡೆದು ‘ಟಾಕ್ಸಿಕ್’ ಸಿನಿಮಾ ತಂಡ ಇಲ್ಲಿ 30 ಕೋಟಿ ರೂ. ಹೂಡಿಕೆ ಮಾಡಿ ಸಿನಿಮಾ ಸೆಟ್ ಹಾಕಲಾಗಿದೆ. ಸರ್ಕಾರವೇ ಇದು ಅರಣ್ಯ ಭೂಮಿಯಲ್ಲವೆಂದು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಶೂಟಿಂಗ್ ಸೆಟ್ ನಿರ್ಮಾಣಕ್ಕೆ ಇಲ್ಲಿ ಯಾವುದೇ ಮರಗಳನ್ನು ಕಡಿದಿಲ್ಲ ಎಂದು ‘ಟಾಕ್ಸಿಕ್’ ಚಿತ್ರ ನಿರ್ಮಾಪಕರ ಪರ ವಕೀಲ ಬಿಪಿಎನ್ ಹೆಗ್ಡೆ ವಾದಿಸಿದರು.

    ಅರ್ಜಿದಾರರ ವಾದ ಆಲಿಸಿದ ಕೋರ್ಟ್ ಇದು ‘ಟಾಕ್ಸಿಕ್’ 1, 2, 3 ತೆಗೆಯೋಕೆ ಶಾಶ್ವತ ಸೆಟ್ ಹಾಕಿದ್ದೀರಾ ಎಂದು ಪ್ರಶ್ನಿಸಿ ಎಫ್‌ಆರ್‌ಗೆ ಕೋರ್ಟ್ ಮಧ್ಯಂತರ ತಡೆ ನೀಡಿತು.

  • ರಾಧಿಕಾ ಪಂಡಿತ್, ಮಕ್ಕಳೊಂದಿಗೆ ಮುಂಬೈ ಗಲ್ಲಿ ಸುತ್ತಿದ ರಾಕಿ ಬಾಯ್

    ರಾಧಿಕಾ ಪಂಡಿತ್, ಮಕ್ಕಳೊಂದಿಗೆ ಮುಂಬೈ ಗಲ್ಲಿ ಸುತ್ತಿದ ರಾಕಿ ಬಾಯ್

    ನ್ಯಾಷನಲ್ ಸ್ಟಾರ್ ಯಶ್ ‘ಟಾಕ್ಸಿಕ್’ (Toxic) ಸಿನಿಮಾಗಾಗಿ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಸಿನಿಮಾ ಕೆಲಸಕ್ಕೆ ಬ್ರೇಕ್ ಬೆನ್ನಲ್ಲೇ ಪತ್ನಿ ರಾಧಿಕಾ, ಮಕ್ಕಳೊಂದಿಗೆ ಯಶ್ ಗಲ್ಲಿ ಸುತ್ತಾಡಿದ್ದಾರೆ. ಫ್ಯಾಮಿಲಿ ಜೊತೆ ಯಶ್ (Yash) ಗಲ್ಲಿ ಸುತ್ತಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ‘ಟಾಕ್ಸಿಕ್’ ಸಿನಿಮಾ ಕೆಲಸದ ನಡುವೆ ಫ್ಯಾಮಿಲಿಗೂ ಯಶ್ ಸಮಯ ನೀಡಿದ್ದಾರೆ. ಮುಂಬೈನಲ್ಲಿ ರಾಧಿಕಾ (Radhika Pandit) ಮತ್ತು ಮುದ್ದಿನ ಮಕ್ಕಳೊಂದಿಗೆ ಮುಂಬೈ ಬೀದಿ ಸುತ್ತಾಡಿದ್ದಾರೆ. ಇದು ಮುಂಬೈ ಪಾಪರಾಜಿಗಳ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸಾಮಾನ್ಯರಂತೆ ಮುಂಬೈನಲ್ಲಿ ಓಡಾಡಿದ ಯಶ್ ಫ್ಯಾಮಿಲಿ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಇನ್ನೂ ಬೆಂಗಳೂರಿನಲ್ಲಿ ಕೆಲ ಭಾಗದ ಚಿತ್ರೀಕರಣ ನಡೆದ ಮೇಲೆ ಈಗ ಮುಂಬೈನಲ್ಲಿ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಇತ್ತೀಚೆಗೆ ‘ಟಾಕ್ಸಿಕ್’ ಸೆಟ್‌ನಲ್ಲಿ ಹುಮಾ ಖುರೇಶಿ ಕಾಣಿಸಿಕೊಂಡಿದ್ದರು. ಅವರು ಈ ಸಿನಿಮಾದ ಭಾಗವಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ದರ್ಶನ್ ಸರ್‌ಗೆ ಬೇಲ್ ಸಿಕ್ಕಿದ್ದು ಖುಷಿಯಾಯ್ತು: ‘ಬಿಗ್‌ ಬಾಸ್‌’ ಎಲಿಮಿನೇಷನ್‌ ಬಳಿಕ ಧರ್ಮ ರಿಯಾಕ್ಷನ್

    ಈ ಸಿನಿಮಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಬಹುಭಾಷೆಗಳಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಕೆವಿಎನ್ ಸಂಸ್ಥೆ ಜೊತೆ ಯಶ್ ಕೂಡ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಈ ಸಿನಿಮಾದ ಜೊತೆಗೆ ‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನಾಗಿಯೂ ಅಬ್ಬರಿಸಲಿದ್ದಾರೆ.

  • ಯಶ್ ನಟನೆಯ ‘ರಾಮಾಯಣ’ ಚಿತ್ರದ ಮೊದಲ ಪೋಸ್ಟರ್ ರಿಲೀಸ್

    ಯಶ್ ನಟನೆಯ ‘ರಾಮಾಯಣ’ ಚಿತ್ರದ ಮೊದಲ ಪೋಸ್ಟರ್ ರಿಲೀಸ್

    ನ್ಯಾಷನಲ್ ಸ್ಟಾರ್ ಯಶ್ (Yash) ನಟನೆಯ ‘ರಾಮಾಯಣ’ (Ramayana) ಸಿನಿಮಾದ ಫಸ್ಟ್‌ ಲುಕ್‌ ರಿವೀಲ್‌ ಆಗಿದೆ. ಇದೀಗ ‘ರಾಮಾಯಣ’ ಸಿನಿಮಾ 2 ಭಾಗಗಳಲ್ಲಿ ಮೂಡಿ ಬರಲಿದ್ದು, ಈ ಕುರಿತು ಅಧಿಕೃತವಾಗಿ ಚಿತ್ರತಂಡ ತಿಳಿಸಿದೆ. ಇದನ್ನೂ ಓದಿ:ಯಶ್ ಬೇಗ ಸಿನಿಮಾ ಮಾಡಿ: ‘ಟಾಕ್ಸಿಕ್’ ನೋಡುವ ನಿರೀಕ್ಷೆ ವ್ಯಕ್ತಪಡಿಸಿದ ಶಾರುಖ್ ಖಾನ್

    ರಾಮನಾಗಿ ರಣ್‌ಬೀರ್ ಕಪೂರ್ (Ranbir Kapoor), ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ (Sai Pallavi) ಮತ್ತು ರಾವಣನಾಗಿ ಕನ್ನಡದ ನಟ ಯಶ್ ಅವರು ಜೀವ ತುಂಬಲಿದ್ದಾರೆ. ‘ರಾಮಾಯಣ’ 2 ಭಾಗಗಳಲ್ಲಿ ಮೂಡಿ ಬರಲಿದೆ. ಇದರ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ರಾಮಾಯಣ ಮೊದಲ ಭಾಗ ದೀಪಾವಳಿಯಂದು 2026ರಲ್ಲಿ ರಿಲೀಸ್ ಆಗಲಿದೆ. ಎರಡನೇ ಭಾಗ ದೀಪಾವಳಿಯಂದು 2027ರಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

     

    View this post on Instagram

     

    A post shared by Namit Malhotra (@iamnamitmalhotra)

    ಇನ್ನೂ ರಾವಣನ ಪಾತ್ರದಲ್ಲಿ ನಟಿಸುವ ಬಗ್ಗೆ ಯಶ್ ಅಧಿಕೃತವಾಗಿ ಇತ್ತೀಚೆಗೆ ತಿಳಿಸಿದ್ದಾರೆ. ನಿತೇಶ್ ತಿವಾರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆ ಕೋ- ಪ್ರೊಡ್ಯೂಸರ್ ಆಗಿ ಯಶ್ ಕೂಡ ಕೈಜೋಡಿಸಿದ್ದಾರೆ.

    ಅಂದಹಾಗೆ, ‘ಟಾಕ್ಸಿಕ್’ (Toxic) ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಜೊತೆಗೆ ರಾವಣನ ಪಾತ್ರದಲ್ಲಿ ಯಶ್‌ರನ್ನು ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

  • ವಕೀಲ್ ಸಾಬ್ ಗೆಟಪ್‌ನಲ್ಲಿ ರಾಕಿ ಭಾಯ್- ಇದು ‘ಟಾಕ್ಸಿಕ್‌’ ಚಿತ್ರದಲ್ಲಿನ ಯಶ್‌ ಕ್ಯಾರೆಕ್ಟರ್?

    ವಕೀಲ್ ಸಾಬ್ ಗೆಟಪ್‌ನಲ್ಲಿ ರಾಕಿ ಭಾಯ್- ಇದು ‘ಟಾಕ್ಸಿಕ್‌’ ಚಿತ್ರದಲ್ಲಿನ ಯಶ್‌ ಕ್ಯಾರೆಕ್ಟರ್?

    ರಾಕಿಂಗ್ ಸ್ಟಾರ್ ಯಶ್ ಅವರು ‘ಕೆಜಿಎಫ್ 2’ (KGF 2) ಸಕ್ಸಸ್ ನಂತರ ಟಾಕ್ಸಿಕ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಮುಹೂರ್ತ ಆದ್ಮೇಲೆ ಇದರ ಬಗ್ಗೆ ಏನು ಅಪ್‌ಡೇಟ್ ಸಿಗುತ್ತಿಲ್ಲ ಎಂದು ನಿರಾಸೆಯಲ್ಲಿದ್ದ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ಟಾಕ್ಸಿಕ್’ ಚಿತ್ರದ್ದೇ ಎನ್ನಲಾದ ನಟನ ನಯಾ ಲುಕ್ ರಿವೀಲ್ ಆಗಿದೆ. ವಕೀಲ್ ಸಾಬ್ ಗೆಟಪ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ: ರಿಷಬ್‌ ಶೆಟ್ಟಿ

    ಯಶ್ (Yash) ನಟನೆಯ ಮುಂಬರುವ ಸಿನಿಮಾ ‘ಟಾಕ್ಸಿಕ್’ (Toxic) ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಹೀಗಿರುವಾಗ ಕಪ್ಪು ಕೋಟ್ ಧರಿಸಿ ಲಾಯರ್ ಗೆಟಪ್‌ನಲ್ಲಿ ಸ್ಟೈಲೀಶ್ ಆಗಿ ಯಶ್ ಕಾಣಿಸಿಕೊಂಡಿರುವ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೇಳೆ, ಸೆಟ್‌ಗೆ ತೆರಳಿದ ಸಂದರ್ಭದಲ್ಲಿ ನಟಿ ರಾಧಿಕಾ ಪಂಡಿತ್‌ ಕೂಡ ಯಶ್‌ ಜೊತೆ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ನಟನ ಹೊಸ ಗೆಟಪ್‌ನಲ್ಲಿ ನೋಡಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ.

    ಅಂದಹಾಗೆ, ಟಾಕ್ಸಿಕ್‌ ಚಿತ್ರದ್ದೇ ನಾ? ಅಥವಾ ಜಾಹೀರಾತಿನ ಚಿತ್ರೀಕರಣದ್ದಾ? ಎಂದು ಚಿತ್ರತಂಡವೇ ತಿಳಿಸಬೇಕಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗೆ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಯಶ್‌ಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ತಿದ್ದಾರೆ. ನಯನತಾರಾ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಇನ್ನೂ ‘ಟಾಕ್ಸಿಕ್’ ಸಿನಿಮಾದ ಕೆಲಸದ ನಡುವೆ ‘ರಾಮಾಯಣ’ (Ramayana) ಸಿನಿಮಾದಲ್ಲೂ ಯಶ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಹ ನಿರ್ಮಾಪಕನಾಗಿಯೂ ಯಶ್ ಸಾಥ್ ನೀಡುತ್ತಿದ್ದಾರೆ.

  • ಯಶ್ ನಟನೆಯ ‘ಟಾಕ್ಸಿಕ್’ ಚಿತ್ರತಂಡ ಸೇರಿಕೊಂಡ ಅಮೆರಿಕದ ನಟ

    ಯಶ್ ನಟನೆಯ ‘ಟಾಕ್ಸಿಕ್’ ಚಿತ್ರತಂಡ ಸೇರಿಕೊಂಡ ಅಮೆರಿಕದ ನಟ

    ಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದ ತಾರಾಗಣ ದಿನದಿಂದ ದಿನಕ್ಕೆ ಹಿರಿದಾಗುತ್ತಲೇ ಇದೆ. ತಮಿಳು ನಟ ನಯನತಾರಾ, ಬ್ರಿಟೀಷ್ ನಟ ಡ್ಯಾರೆಲ್ ಡಿಸಿಲ್ವಾ, ಅಕ್ಷಯ್ ಒಬೆರಾಯ್ ಚಿತ್ರತಂಡ ಸೇರಿಕೊಂಡ ಬಳಿಕ ಅಮೆರಿಕದ ನಟ ಕಿಲಿ ಪೌಲ್ (Kyle Paul) ‘ಟಾಕ್ಸಿಕ್’ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಇಂತಹದೊಂದು ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Abir Roy (@1abirroy)

    ಈಗಾಗಲೇ ಯಶ್ ಸಿನಿಮಾಗೆ ನಯನತಾರಾ ಎಂಟ್ರಿ ಕೊಟ್ಟಿದಾಗಿದೆ. ಬೆಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ಭರದಿಂದ ನಡೆಯುತ್ತಿದೆ. ಇದರ ನಡುವೆ ಅಮೆರಿಕದ ಖ್ಯಾತ ನಟ ಕಿಲಿ ಪೌಲ್ ‘ಟಾಕ್ಸಿಕ್’ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ತಂಡದಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ

    ಅಂದಹಾಗೆ, ಯಶ್ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಸಂಸ್ಥೆ ನಿರ್ಮಾಣಕ್ಕೆ ಸಾಥ್ ನೀಡಿದೆ.

  • ಹುಲಿ ಚಿತ್ರವನ್ನೇ ಡಾಲರ್ ಆಗಿ ಧರಿಸಿದ ಯಶ್

    ಹುಲಿ ಚಿತ್ರವನ್ನೇ ಡಾಲರ್ ಆಗಿ ಧರಿಸಿದ ಯಶ್

    ‘ಕೆಜಿಎಫ್ 2′ (KGF 2) ಸಿನಿಮಾದ ಸಕ್ಸಸ್ ನಂತರ ‘ಟಾಕ್ಸಿಕ್’ (Toxic Film)  ಸಿನಿಮಾ ಕೆಲಸದಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹುಲಿ ಚಿತ್ರವನ್ನೇ ಡಾಲರ್ ಆಗಿ ಯಶ್ ಧರಿಸಿದ್ದು, ಇದರ ಮೇಲೆ ಎಲ್ಲರ ಕಣ್ಣಿದೆ. ಯಶ್ ಧರಿಸಿದ ಡಾಲರ್ ಈಗ ಸಖತ್ ಸದ್ದು ಮಾಡುತ್ತಿದೆ.

    ಇತ್ತೀಚೆಗೆ ಯಶ್ (Yash) ಮನೆಯಲ್ಲಿ ಸರಳವಾಗಿ ವರಮಹಾಲಕ್ಷ್ಮಿ ಪೂಜೆ ಜರುಗಿದೆ. ಈ ಕುರಿತ ಸುಂದರ ಫೋಟೋಗಳನ್ನು ಪತ್ನಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವೇಳೆ, ಪಂಚೆ ಮತ್ತು ಶರ್ಟ್‌ ಅನ್ನು ಯಶ್ ಧರಿಸಿಕೊಂಡಿದ್ದಾರೆ. ಅದರ ಜೊತೆಗೆ ಯಶ್ ಅವರು ಧರಿಸಿದ್ದ ಗೋಲ್ಡ್ ಕಲರ್ ಟೈಗರ್ ಡಾಲರ್ ಬಗ್ಗೆ ಚರ್ಚೆ ಶುರುವಾಗಿದೆ.

    ಸದ್ಯ ಎಲ್ಲರ ಕಣ್ಣು ರಾಕಿಭಾಯ್ ಧರಿಸಿದ ಡಾಲರ್ ಮೇಲಿದೆ. ಹುಲಿ ಚಿತ್ರವನ್ನು ಡಾಲರ್ ಆಗಿ ಹಾಕಿಕೊಂಡಿರುವ ಯಶ್‌ರನ್ನು ರಿಯಲ್ ಹುಲಿ ಎಂದೆಲ್ಲಾ ಹಾಡಿಹೊಗಳುತ್ತಿದ್ದಾರೆ ಫ್ಯಾನ್ಸ್. ಇದನ್ನೂ ಓದಿ:‘ಧ್ರುವತಾರೆ’ ಸಿನಿಮಾದಲ್ಲಿ ವಿಲನ್‌ ಆದ ಕಾರ್ತಿಕ್ ಮಹೇಶ್

    ಇನ್ನೂ ‘ಟಾಕ್ಸಿಕ್’ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರೀಕರಣ ಕೂಡ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. 2025ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • 100 ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ: ಯಶ್ ಕುರಿತು ರಾಧಿಕಾ ಲವ್ಲಿ ಪೋಸ್ಟ್

    100 ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ: ಯಶ್ ಕುರಿತು ರಾಧಿಕಾ ಲವ್ಲಿ ಪೋಸ್ಟ್

    ಚಂದನವನದ ಬೆಸ್ಟ್ ಜೋಡಿ ಯಶ್ (Yash) ಮತ್ತು ರಾಧಿಕಾ ಪಂಡಿತ್‌ಗೆ (Radhika Pandit) ಇಂದು (ಆ.12) ಎಂಗೇಜ್‌ಮೆಂಟ್ ಸಂಭ್ರಮವಾಗಿದ್ದು, ಪತಿ ಯಶ್ ಬಗ್ಗೆ ರಾಧಿಕಾ ವಿಶೇಷ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 100 ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಯಶ್ ಕುರಿತು ನಟಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮಾಜಿ ಪತಿಯ ನಿಶ್ಚಿತಾರ್ಥದ ಬೆನ್ನಲ್ಲೇ ಸಮಂತಾಗೆ ಮದುವೆ ಪ್ರಪೋಸಲ್

    8 ವರ್ಷಗಳ ಹಿಂದೆ ಈ ದಿನ ನಾವು ನಿಶ್ಚಿತಾರ್ಥ ಮಾಡಿಕೊಂಡಾಗ ನಾನು ನೂರು ಜನ್ಮದಲ್ಲೂ ನಿಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ನನಗೆ ಮೊದಲೇ ತಿಳಿದಿತ್ತು ಎಂದು ನಟಿ ಬರೆದುಕೊಂಡಿದ್ದಾರೆ. 2016ರ ವೇಳೆ, ಆ.12ರಂದು ತೆಗೆದ ಎಂಗೇಜ್‌ಮೆಂಟ್ ಸಂಭ್ರಮದ ಫೋಟೋಗಳನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಜೋಡಿ ಅಂದರೆ ಹೀಗಿರಬೇಕು ಎಂದಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಅಂದಹಾಗೆ, ಹಲವು ವರ್ಷಗಳು ಪ್ರೀತಿಸಿ ಯಶ್ ಮತ್ತು ರಾಧಿಕಾ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ದಾಂಪತ್ಯಕ್ಕೆ ಇಬ್ಬರೂ ಮುದ್ದಾದ ಮಕ್ಕಳು ಸಾಕ್ಷಿಯಾಗಿದ್ದಾರೆ. ಇನ್ನೂ ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾದ ರಾಧಿಕಾ, ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡರು. ಇದೀಗ ಸಿನಿಮಾಗೆ ವಾಪಸ್ ಬರಲು ತಯಾರಿ ಮಾಡಿಕೊಳ್ತಿದ್ದಾರೆ. ಉತ್ತಮ ಕಥೆ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದಿದ್ದಾರೆ.

    ಇನ್ನೂ ಯಶ್ ಸದ್ಯ ‘ಟಾಕ್ಸಿಕ್’ (Toxic) ಸಿನಿಮಾ ಮುಹೂರ್ತ ನೆರವೇರಿದ ಬಳಿಕ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 2025ರಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ.

  • ಯಶ್ ಸಿನಿಮಾಗಾಗಿ ಬೆಂಗಳೂರಿಗೆ ಬಂದಿಳಿದ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆಜೆ ಪರ್ರಿ

    ಯಶ್ ಸಿನಿಮಾಗಾಗಿ ಬೆಂಗಳೂರಿಗೆ ಬಂದಿಳಿದ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆಜೆ ಪರ್ರಿ

    ಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾಗೆ ಆ.8ರಂದು ಸರಳವಾಗಿ ಮುಹೂರ್ತ ಕಾರ್ಯಕ್ರಮ ಜರುಗಿದೆ. ಈ ಬೆನ್ನಲ್ಲೇ ರಾಕಿ ಬಾಯ್ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್ ಸಿಕ್ಕಿದೆ. ಯಶ್ ಚಿತ್ರಕ್ಕಾಗಿ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆಜೆ ಪರ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

    ಕಥೆಯಾಗಿರಲಿ, ಕ್ವಾಲಿಟಿ ಆಗಿರಲಿ ಎಲ್ಲೂ ರಾಜಿಯಾಗಬಾರದು ಎಂದು ‘ಟಾಕ್ಸಿಕ್’ ಚಿತ್ರಕ್ಕಾಗಿ ಖ್ಯಾತ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆಜೆ ಪರ್ರಿ ಅವರನ್ನು ಬೆಂಗಳೂರಿಗೆ ಕರೆಸಿದ್ದಾರೆ ಯಶ್. ಈ ಸಿನಿಮಾದಲ್ಲಿ ಆ್ಯಕ್ಷನ್ ಎಲಿಮೆಂಟ್‌ಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಜೆಜೆ ಪೆರ್ರಿ ಕೊರಿಯೋಗ್ರಾಫಿಯಲ್ಲಿ ಯಶ್ ಅವರ ಆ್ಯಕ್ಷನ್ ಸೀಕ್ವೆನ್ಸ್ ಮೂಡಿ ಬರಲಿದೆ. ಇದನ್ನೂ ಓದಿ:ಸಮಂತಾ ಪ್ರಪೋಸ್ ಮಾಡಿದ ದಿನಾಂಕದಂದೇ ಶೋಭಿತಾಗೆ ರಿಂಗ್ ತೊಡಿಸಿದ ನಾಗಚೈತನ್ಯ

    ಹಾಲಿವುಡ್ ನಟರುಗಳಿಗೆ ಸ್ಟಂಟ್ ಡಬಲ್ ಆಗಿ ಜೆಜೆ ಪೆರ್ರಿ ಕೆಲಸ ಮಾಡಿದ್ದಾರೆ. 80ರ ದಶಕದ ಸಿನಿಮಾಗಳಲ್ಲಿ ಸ್ಟಂಟ್ ಡಬಲ್ ಆಗಿ, ಸ್ಟಂಟ್ ಮ್ಯಾನ್ ಆಗಿ ಜೆಜೆ ಪೆರ್ರಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಕಟ್ಟುಮಸ್ತಾದ ದೇಹ, ಸ್ಟಂಟ್ ಮಾಡುವ ಪ್ರತಿಭೆಯಿಂದಾಗಿ ಹಲವು ಭಾಷೆಗಳಲ್ಲಿ ಅವರಿಗೆ ಬೇಡಿಕೆ ಇದೆ.

    ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೆಜಿಎಫ್ 1, ಕೆಜಿಎಫ್ 2 ಸಿನಿಮಾದ ಸಕ್ಸಸ್ ಸಿಕ್ಕಿದ್ಮೇಲೆ ಪರಭಾಷೆಗೆ ಹೋಗ್ತೀರಾ ಎಂದು ಯಶ್‌ಗೆ ಪ್ರಶ್ನೆ ಎದುರಾಗುತ್ತಿತ್ತು. ನಾನು ಎಲ್ಲೂ ಹೋಗಲ್ಲ. ಬಾಲಿವುಡ್, ಹಾಲಿವುಡ್ ಅವರನ್ನು ಇಲ್ಲಿಗೆ ಕರೆಸುತ್ತೇನೆ ಎಂದು ಯಶ್ ಆಡಿದ ಮಾತನ್ನು ಮಾಡಿಯೇ ತೋರಿಸಿದ್ದಾರೆ.