Tag: ಟವರ್

  • ಟವರ್ ಏರಿದ ಯುವತಿಯನ್ನು ‘ಮಗಳೇ ಕೆಳಗಿಳಿ’ ಎಂದ ಪ್ರಧಾನಿ ಮೋದಿ!

    ಟವರ್ ಏರಿದ ಯುವತಿಯನ್ನು ‘ಮಗಳೇ ಕೆಳಗಿಳಿ’ ಎಂದ ಪ್ರಧಾನಿ ಮೋದಿ!

    ಹೈದರಾಬಾದ್: ಶನಿವಾರ ತೆಲಂಗಾಣದಲ್ಲಿ (Telangana) ಪ್ರಧಾನಿ ನರೇಂದ್ರ ಮೋದಿಯವರ (Narendra Modi) ರ‍್ಯಾಲಿಯಲ್ಲಿ ಯುವತಿಯೊಬ್ಬರು (Young Woman) ಪ್ರಧಾನಿಯ ಗಮನ ಸೆಳೆಯಲು ಮತ್ತು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಲೈಟ್ ಟವರ್ (Tower) ಅನ್ನು ಏರಿದ್ದರು. ಇದನ್ನು ಗಮನಿಸಿ ಗಾಬರಿಗೊಂಡ ಮೋದಿ ಮಗಳೇ ಕೆಳಗಿಳಿ ಎಂದು ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ.

    ಘಟನೆಗೆ ಸಂಬಂಧಿಸಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯುವತಿಯೊಬ್ಬರು ಲೈಟ್ ಟವರ್ ಏರುತ್ತಿರುವುದು ಅದರಲ್ಲಿ ಕಂಡುಬಂದಿದೆ. ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಮೋದಿ ಇದನ್ನು ಗಮನಿಸಿ ತಕ್ಷಣವೇ ಹೀಗೆ ಮಾಡದಂತೆ, ಟವರ್‌ನಿಂದ ಕೆಳಗಿಳಿಯುವಂತೆ ಯುವತಿಗೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಟವರ್‌ನಲ್ಲಿ ಅಳವಡಿಸಲಾಗಿದ್ದ ತಂತಿಗಳಿಂದ ಅವರಿಗೆ ಶಾಕ್ ತಗುಲಬಹುದು ಎಂದು ಭೀತಿ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಮೋದಿ, ಮಗಳೇ ಕೆಳಗೆ ಬಾ, ನಾವು ನಿಮ್ಮೊಂದಿಗಿದ್ದೇವೆ. ಅದರ ತಂತಿಗಳು ಸುರಕ್ಷಿತ ಸ್ಥಿತಿಯಲ್ಲಿಲ್ಲ, ಶಾರ್ಟ್ ಸರ್ಕ್ಯೂಟ್ ಆಗಬಹುದು. ಇದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ನಾನು ನಿಮಗಾಗಿ ಬಂದಿದ್ದೇನೆ. ನಾನು ನಿಮ್ಮ ಮಾತುಗಳನ್ನು ಕೇಳುತ್ತೇನೆ ಎಂದು ವೇದಿಕೆಯಿಂದಲೇ ಯುವತಿಗೆ ಹೇಳಿದ್ದಾರೆ. ತಮ್ಮ ಸಮಸ್ಯೆಗೆ ಪರಿಹಾರ ನೀಡುವುದಾಗಿ ಮೋದಿ ಭರವಸೆ ನೀಡಿದ ಬಳಿಕ ಯುವತಿ ನಿಧಾನವಾಗಿ ಟವರ್‌ನಿಂದ ಕೆಳಗಿಳಿದಿದ್ದಾರೆ. ಇದನ್ನೂ ಓದಿ: ಪಂಚ ರಾಜ್ಯಗಳ ಮತದಾರರು ಕಾಂಗ್ರೆಸ್ ಗ್ಯಾರಂಟಿ ಭಜನೆಗೆ ಮರುಳಾಗಬಾರದು: ಹೆಚ್‍ಡಿಕೆ

    ಸಿಕಂದರಾಬಾದ್‌ನಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಮಾದಿಗ ಸಮುದಾಯ ತೆಲುಗು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳ ಅತಿದೊಡ್ಡ ಘಟಕಗಳಲ್ಲಿ ಒಂದಾಗಿದೆ. ನವೆಂಬರ್ 3 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾದ ನಂತರ ನಗರದಲ್ಲಿ ಮೋದಿಯವರು ಸತತ 2ನೇ ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ. ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೆಲಂಗಾಣದಲ್ಲಿ ಬಿಸಿ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಲೆಪ್ಚಾದಲ್ಲಿ ಸೈನಿಕರೊಂದಿಗೆ ಪ್ರಧಾನಿ ದೀಪಾವಳಿ ಆಚರಣೆ

    
    
  • ಟಿವಿಯವರು ಮುಖ, ಲೋಗೋ ತೋರ್ಸೋವರ್ಗೂ ಕೆಳಗಿಳಿಯಲ್ಲ – ಟಿಕೆಟ್ ಸಿಗದ್ದಕ್ಕೆ ಟವರ್ ಏರಿ ವೀಡಿಯೋ ಮಾಡಿದ ಬಿಜೆಪಿ ಕಾರ್ಯಕರ್ತ

    ಟಿವಿಯವರು ಮುಖ, ಲೋಗೋ ತೋರ್ಸೋವರ್ಗೂ ಕೆಳಗಿಳಿಯಲ್ಲ – ಟಿಕೆಟ್ ಸಿಗದ್ದಕ್ಕೆ ಟವರ್ ಏರಿ ವೀಡಿಯೋ ಮಾಡಿದ ಬಿಜೆಪಿ ಕಾರ್ಯಕರ್ತ

    ಚಿಕ್ಕಮಗಳೂರು: ಟಿಕೆಟ್ ಸಿಗದ ಹಿನ್ನೆಲೆ ಮನನೊಂದು ಬಿಜೆಪಿ ಕಾರ್ಯಕರ್ತನೋರ್ವ (BJP Worker) 100 ಅಡಿ ಎತ್ತರದ ಟವರ್ (Tower) ಏರಿ ಆತ್ಮಹತ್ಯೆಯ ಬೆದರಿಕೆ ಒಡ್ಡಿರುವ ಘಟನೆ ಜಿಲ್ಲೆಯ ಅಜ್ಜಂಪುರ (Ajjampur) ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.

    ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿರುವ ರಂಗಪ್ಪ ಬೋವಿಯನ್ನು ಕೆಳಗಿಳಿಸಲು ಪೊಲೀಸರು ಹಾಗೂ ಸ್ಥಳೀಯರು ಹರಸಹಾಸಪಡುತ್ತಿದ್ದಾರೆ. ಟಿವಿಯವರು ಬಂದು ಮುಖ ಹಾಗೂ ಲೋಗೋ ತೋರಿಸುವವರೆಗೂ ನಾನು ಕೆಳಗೆ ಇಳಿಯುವುದಿಲ್ಲ ಎಂದು ರಂಗಪ್ಪ ಹಠಕಟ್ಟಿದ್ದಾನೆ.

    ನಾನು ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿಯಿಂದಲೇ ಸ್ಪರ್ಧಿಸಬೇಕು. ಎಸ್‌ಸಿ, ಎಸ್‌ಟಿ ಸಮಾಜಕ್ಕೆ ಮುಂದೆ ಆಗುತ್ತದೆ ಎಂದು ಹೇಳುವುದಕ್ಕಿಂತ ಹಿಂದಿನಿಂದಲೂ ಕೂಡ ಅನ್ಯಾಯವಾಗಿದೆ. ದಲಿತ ಜನರಲ್ಲಿ ಒಗ್ಗಟ್ಟಿಲ್ಲ ಎಂಬ ಭಾವನೆ ಮೂಡಿದೆ. ನೀವೆಲ್ಲ ಸೇರಿ ನನ್ನನ್ನು ಉಳಿಸಿಕೊಳ್ಳುವುದಾದರೆ ಉಳಿಸಿಕೊಳ್ಳಿ. ಇಲ್ಲವಾದರೆ ಕೆಳಗೆ ಬೀಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: 10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಕೆ – ನಾಣ್ಯ ಎಣಿಸಿ ಸುಸ್ತಾದ ಅಧಿಕಾರಿಗಳು

    ನನ್ನನು ಏಳುವರೆ ವರ್ಷದ ಹಿಂದೆ ಕರೆದರು. ನೋಡೋದಕ್ಕೆ ಒಳ್ಳೆಯ ಆಳು. ನಿನ್ನನ್ನು ನೋಡಿದರೆ ಜನ ಹೆದರುತ್ತಾರೆ, ಹಣ ಕೊಡುತ್ತಾರೆ. ರೌಡಿಸಂ ಹಾಗೂ ರಿಯಲ್ ಎಸ್ಟೇಟ್‌ಗೆ ಬಾ ಎಂದು ಕರೆದರು. ಆದರೆ ನಾನು ಹೋಗಲಿಲ್ಲ. ನನಗೆ ಡಿಗ್ರಿ ಹಾಗೂ ಡಬಲ್ ಡಿಗ್ರಿ ಓದಿರುವ ಮೂವರು ಮಕ್ಕಳಿದ್ದಾರೆ. ಅವರಿಗೂ ಕೂಡಾ ಫೋನ್ ಆಪರೇಷನ್ ಮೂಲಕ ಕೆಲಸ ಸಿಗದಂತೆ ಮಾಡಿದ್ದಾರೆ. ನನ್ನ ಖಾತೆಯಲ್ಲಿದ್ದ ಹಣವನ್ನೂ ಹ್ಯಾಕ್ ಮಾಡಿದ್ದಾರೆ. ನಾನು ಶಿಕ್ಷಕರು, ಸೈನಿಕರು, ಆರಕ್ಷಕರಿಗೆ ತುಂಬಾ ಬೆಲೆ ಕೊಡುತ್ತೇನೆ. ನಾನು ಸತ್ತರೂ ಕೂಡ ನನ್ನ ಮಕ್ಕಳಿಗಾದರೂ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾನೆ.

    ನನಗಾದ ನೋವು ಬೇರೆ ಯಾವ ಸಣ್ಣ ಹಾಗೂ ಬಡ ಸಮಾಜಗಳಿಗೆ ಆಗಬಾರದು ಎಂದು ಹೇಳಿದ್ದು, ಟವರ್ ಹತ್ತಿ ವೀಡಿಯೋ ರೆಕಾರ್ಡ್ ಮಾಡಿದ್ದಾನೆ. ವೀಡಿಯೋದಲ್ಲಿ ಆತ ಉದ್ಭವ ಆಂಜನೇಯ ಸ್ವಾಮಿ, ನಿರಂಜನ ಸ್ವಾಮೀಜಿಗೆ ವಂದನೆ ತಿಳಿಸಿದ್ದಾನೆ. ಆತನನ್ನು ಟವರ್‌ನಿಂದ ಕೆಳಗಿಳಿಸಲು ಅಜ್ಜಂಪುರ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಶೆಟ್ಟರ್ ನಿರ್ಧಾರದಿಂದ ಉಂಟಾದ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಜೆ.ಪಿ ನಡ್ಡಾ

  • ಟವರ್ ಏರಿ ಕುಳಿತು ಬಿರಿಯಾನಿ, ಸಿಗರೇಟ್‌ಗೆ ಡಿಮ್ಯಾಂಡ್ ಮಾಡಿದ ಭೂಪ

    ಟವರ್ ಏರಿ ಕುಳಿತು ಬಿರಿಯಾನಿ, ಸಿಗರೇಟ್‌ಗೆ ಡಿಮ್ಯಾಂಡ್ ಮಾಡಿದ ಭೂಪ

    ಧಾರವಾಡ: ಬಿರಿಯಾನಿ (Biriyani), ಸಿಗರೇಟ್‌ಗೆ (Cigarette) ಬೇಡಿಕೆಯಿಟ್ಟು ಮೊಬೈಲ್ ಟವರ್ ಏರಿ ಕುಳಿತಿದ್ದ ವ್ಯಕ್ತಿಯನ್ನು ಕೊನೆಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ರಕ್ಷಣಾ ತಂಡದವರು ಕೆಳಗಿಳಿಸುವಲ್ಲಿ ಯಶಸ್ವಿಯಾದರು.

    ಈ ರೀತಿ ಟವರ್ ಏರಿ ಕುಳಿತ ವ್ಯಕ್ತಿ ಧಾರವಾಡ (Dharwad) ಮೂಲದ ಜಾವೇದ್ ಎಂದು ಗೊತ್ತಾಗಿದೆ. ಧಾರವಾಡದ ಜ್ಯುಬಿಲಿ ಸರ್ಕಲ್ ಬಳಿ ಇರುವ ಮೊಬೈಲ್ ಟವರ್‌ನ್ನು ಈತ ಏರಿ ಕುಳಿತಿದ್ದ. ಇದನ್ನೂ ಓದಿ: ದುರಹಂಕಾರಕ್ಕೆ ನಾನು ಅವನ ಹಿಂದೆ ಹೋಗಿದ್ದೆ: ಗಾಯಾಳು

    ಈತ ಪಿಕ್ ಪಾಕೆಟರ್ ಎಂದು ಗೊತ್ತಾಗಿದ್ದು, ಹಲವು ಕಡೆ ಪಿಕ್ ಪಾಕೆಟ್ ಮಾಡಿದ್ದ. ಅಲ್ಲದೇ ಈತನ ಮೇಲೆ ಅರೆಸ್ಟ್ ವಾರೆಂಟ್ ಸಹ ಇದೆ. ಜಿಲ್ಲಾ ನ್ಯಾಯಾಧೀಶರು ಸ್ಥಳಕ್ಕೆ ಬರುವವರೆಗೂ ನಾನು ಟವರ್ ಬಿಟ್ಟು ಇಳಿದು ಬರುವುದಿಲ್ಲ ಎಂದು ಪಟ್ಟು ಹಿಡಿದು ಅಲ್ಲೇ ಕುಳಿತಿದ್ದ.

    ಆತನ ರಕ್ಷಣೆಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರೂ ಮುಂದಾಗಿದ್ದರು. ರಕ್ಷಣಾ ತಂಡದ ಇಬ್ಬರು ಸಿಬ್ಬಂದಿ ಟವರ್ ಏರಿ ಆತನಿಗೆ ನೀರು ಹಾಗೂ ಬಿರಿಯಾನಿ ಕೊಟ್ಟು ಕೆಳಗಿಳಿಯುವಂತೆ ಸೂಚನೆ ನೀಡಿದ್ದರು. ಆದರೆ ಆ ವ್ಯಕ್ತಿ ಊಟ ಕೆಳಗೆ ಎಸೆದು ಕೇವಲ ನೀರು ಮಾತ್ರ ಕುಡಿದು ಕೆಳಗೆ ಇಳಿದು ಬರುವುದಿಲ್ಲ ಎಂದು ಹುಚ್ಚಾಟ ನಡೆಸಿದ್ದ. ಅಲ್ಲದೇ ತನಗೆ ಸಿಗರೇಟ್ ಕೊಡುವಂತೆ ಬೇಡಿಕೆಯನ್ನೂ ಇಟ್ಟಿದ್ದ. ಇದನ್ನೂ ಓದಿ: ಮರಕ್ಕೆ ನೇಣು ಹಾಕಿಕೊಳ್ಳುವಾಗ ಪಂಚೆ ಹರಿದು, ಕೆಳಗೆ ಬಿದ್ದು ಯುವಕ ಸಾವು

    ಸತತ ಮೂರು ಗಂಟೆಗಳ ಬಳಿಕ ರಕ್ಷಣಾ ತಂಡದ ಸಿಬ್ಬಂದಿ ಆತನ ಮನವೊಲಿಸಿ ಸುರಕ್ಷಿತವಾಗಿ ಕೆಳಗಿಳಿಸಿ, ಆತನನ್ನು ಉಪನಗರ ಠಾಣೆ ಪೊಲೀಸ್ ವಶಕ್ಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟಿಕೆಟ್ ಸಿಗದ್ದಕ್ಕೆ ಟವರ್ ಹತ್ತಿ ಬೆದರಿಕೆ ಹಾಕಿದ ಆಪ್ ಮುಖಂಡ

    ಟಿಕೆಟ್ ಸಿಗದ್ದಕ್ಕೆ ಟವರ್ ಹತ್ತಿ ಬೆದರಿಕೆ ಹಾಕಿದ ಆಪ್ ಮುಖಂಡ

    ನವದೆಹಲಿ: ಆಮ್ ಆದ್ಮಿ ಪಕ್ಷದ (Aam Aadmi Party) ಮುಖಂಡನೊಬ್ಬ ದೆಹಲಿಯಲ್ಲಿ (New Delhi) ಮುಂಬರುವ ಪಾಲಿಕೆ ಚುನಾವಣೆಗೆ (Election) ಟಿಕೆಟ್‌ ಸಿಗದ ಕಾರಣ ಟೆಲಿಫೋನ್ ಟವರ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ.

    ಪೂರ್ವ ದೆಹಲಿಯ ಮಾಜಿ ಕೌನ್ಸಿಲರ್ ಹಸೀಬ್-ಉಲ್ ಹಸನ್ ಟವರ್ ಏರಿ ಕುಳಿತ ಆಪ್ ಮುಖಂಡ. ಇನ್ನೂ ಘಟನೆಗೆ ಸಂಬಂಧಿಸಿ ಆತನೇ ಫೇಸ್‍ಬುಕ್ ಲೈವ್ ಮಾಡಿದ್ದಾನೆ. ತನಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿಲ್ಲ ಎಂದು ಪ್ರತಿಭಟನೆ ಮಾಡಿದ್ದಾನೆ.

    ಫೇಸ್‍ಬುಕ್ ಲೈವ್‍ನಲ್ಲಿ ಆಪ್ ನಾಯಕರಾದ ಅತಿಶಿ ಮತ್ತು ದುರ್ಗೇಶ್ ಪಾಠಕ್ ವಿರುದ್ಧ ದೂರಿದ್ದಾರೆ. ಇಂದು ನನಗೆ ಏನಾದರೂ ಆದರೆ ಅದಕ್ಕೆ ಅತಿಶ್ ಹಾಗೂ ದುರ್ಗೇಶ್ ಅವರೇ ಕಾರಣ ಏಕೆಂದರೆ ಅವರು ನನ್ನ ಬ್ಯಾಂಕ್ ಪಾಸ್‍ಬುಕ್ ಸೇರಿದಂತೆ ಅನೇಕ ದಾಖಲೆಯನ್ನು ಅವರೇ ಇಟ್ಟುಕೊಂಡಿದ್ದಾರೆ. ಆದರೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿದೆ. ಆದರೆ ನನಗೆ ಅದ್ಯಾವ ದಾಖಲೆಯನ್ನು ಅವರು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಇಸ್ಲಾಮಿಕ್ ಶಿಕ್ಷಣ ಕೇಂದ್ರದಲ್ಲಿ ಸಂಸ್ಕೃತ, ಉಪನಿಷತ್ ಕಲಿಕೆ- ಕೇಂದ್ರದ ನಡೆಗೆ ನೆಟ್ಟಿಗರ ಮೆಚ್ಚುಗೆ

    ಆದರೆ ಈ ಆರೋಪಗಳಿಗೆ ಆಮ್ ಆದ್ಮಿ ಪಕ್ಷದ ಮುಖಂಡರು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಸಂಬಂಧಿಕರ ಮೇಲಿನ ದ್ವೇಷಕ್ಕೆ ಮಗಳನ್ನೆ ಬಲಿಕೊಟ್ಟ ಪಾಪಿ ತಂದೆ

    Live Tv
    [brid partner=56869869 player=32851 video=960834 autoplay=true]

  • ಜಮೀನು ವಿವಾದ – ಬೆಳ್ಳಂಬೆಳಗ್ಗೆ ಟವರ್ ಏರಿ ವೃದ್ಧನ ಹೈಡ್ರಾಮಾ

    ಜಮೀನು ವಿವಾದ – ಬೆಳ್ಳಂಬೆಳಗ್ಗೆ ಟವರ್ ಏರಿ ವೃದ್ಧನ ಹೈಡ್ರಾಮಾ

    ಚಿಕ್ಕಬಳ್ಳಾಪುರ: ಜಮೀನು ವಿವಾದ ಹಿನ್ನೆಲೆ ವೃದ್ಧನೋರ್ವ ಬೆಳ್ಳಂಬೆಳಗ್ಗೆ ಟವರ್ ಏರಿ ಕುಳಿತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ ಮಾಡಿದ್ದಾನೆ.

    ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದ ಮುಂಭಾಗ ಘಟನೆ ನಡೆದಿದ್ದು, ವೃದ್ಧನನ್ನು ನಲ್ಲಕದಿರೇನಹಳ್ಳಿ ಗ್ರಾಮದ ನರಸಿಂಹಪ್ಪ ಎಂದು ಗುರುತಿಸಲಾಗಿದೆ. ಜಮೀನು ವಿವಾದ ಕುರಿತಂತೆ ಸಮಸ್ಯೆ ಬಗೆಹರಿಸುವಂತೆ ವೃದ್ಧನೋರ್ವ ಟವರ್ ಏರಿ ಕುಳಿತುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದನು. ಅಲ್ಲದೇ ಈ ವೇಳೆ ಸ್ಥಳಕ್ಕೆ ಎಸಿ ಸಂತೋಷ್ ಕುಮಾರ್ ಹಾಗೂ ಹಾಗೂ ತಹಶೀಲ್ದಾರ್ ಗಣಪತಿ ಶಾಸ್ತ್ರೀ ಬರುವಂತೆ ವೃದ್ಧ ಪಟ್ಟು ಹಿಡಿದಿದ್ದನು. ಇದನ್ನೂ ಓದಿ: ಪೊಲೀಸರಿಗಿಂತ ಇಡಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ: ಮೋದಿ ವಿರುದ್ಧ ಅಶೋಕ್ ಗೆಹ್ಲೋಟ್ ಕಿಡಿ

    ನಂತರ ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸರು, ಹರಸಾಹಸ ಪಟ್ಟು, ವೃದ್ಧನ ಮನವೊಲಿಕೆ ಮಾಡಿ ಕೆಳಗಿಳಿಸಿದರು. ಬಳಿಕ ವೃದ್ಧ ನರಸಿಂಹಯ್ಯನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದರು. ಇದೀಗ ವೃದ್ಧ ಟವರ್ ಏರಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ನಾಗರಪಂಚಮಿಗೆ ಅರಿಶಿಣ ಎಲೆಯ ಸಿಹಿ ಕಡುಬು ಮಾಡಿ ಸವಿಯಿರಿ

    Live Tv
    [brid partner=56869869 player=32851 video=960834 autoplay=true]

  • ಫಿಕ್ಸ್ ಆಗಿ ತಿಂಗಳು ಕಳೆದ್ರೂ ಮದುವೆ ಮಾಡಿಸದ್ದಕ್ಕೆ ಟವರ್ ಏರಿದ ಭೂಪ..!

    ಫಿಕ್ಸ್ ಆಗಿ ತಿಂಗಳು ಕಳೆದ್ರೂ ಮದುವೆ ಮಾಡಿಸದ್ದಕ್ಕೆ ಟವರ್ ಏರಿದ ಭೂಪ..!

    ಬಳ್ಳಾರಿ: ಹುಡುಗಿ ಫಿಕ್ಸ್ ಆಗಿ ತಿಂಗಳುಗಳು ಕಳೆದರೂ ಮನೇಲಿ ಬೇಗ ಮದುವೆ ಮಾಡದಿದ್ದಕ್ಕೆ ಮನನೊಂದು ಯುವಕನೊಬ್ಬ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಷಕರಿಗೆ ಬೆದರಿಕೆ ಹಾಕಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ.

    ಚಿರಂಜೀವಿ (23) ಎಂಬ ಯುವಕ ಯಾರೂ ಇಲ್ಲದ ಸಮಯದಲ್ಲಿ ಸಿನಿಮಾ ಟಾಕೀಸ್ ರಸ್ತೆಯಲ್ಲಿರುವ ಟವರ್ ಏರಿ ಕುಳಿತು ನನಗ ಬೇಗ ಮದುವೆ ಮಾಡಿಸಿ ಇಲ್ಲವಾದಲ್ಲಿ ನಾನು ಇಲ್ಲಿಂದ ಹಾರಿ ಪ್ರಾಣ ಬಿಡುತ್ತೆನೆ ಎಂದು ಬೇದರಿಕೆ ಹಾಕಿದ್ದಾನೆ.

    ಈಗಾಗಲೇ ಮದುವೆಗೆಂದು ಹುಡುಗಿ ಫಿಕ್ಸ್ ಮಾಡಿ ಪೋಷಕರೊಂದಿಗೆ ಮಾತುಕತೆ ಕೂಡ ಮುಗಿದಿದೆ. ಆದರೆ ಈ ಯುವಕನಿಗೆ ಒಬ್ಬ ಅಣ್ಣ ನಿದ್ದಾನೆ ಅವನಿಗೂ ಹುಡುಗಿ ಫಿಕ್ಸ್ ಮಾಡಿಕೊಂಡು ಇಬ್ಬರಿಗೂ ಒಟ್ಟಿಗೆ ಮದುವೆ ಮಾಡುವ ನಿರೀಕ್ಷೆಯಲ್ಲಿ ಕುಟುಂಬವಿದೆ. ಆದರೆ ಈತನ ಅಣ್ಣನಿಗೆ ಬೇಗ ಹುಡುಗಿ ಸಿಗುತ್ತಿಲ್ಲ. ಹೀಗಾಗಿ ಮದುವೆ ಡಿಲೇ ಆಗುತ್ತಿದೆ. ಆದರೆ ಈತ ಮಾತ್ರ ನನಗೆ ಬೇಗ ಮದುವೆ ಮಾಡಿಸಿ ಎಂದು ಹಠ ಹಿಡಿದಿದ್ದಾನೆ.

    ಈ ಹಿಂದೆ ಕೂಡ ಚಿರಂಜೀವಿ ಮದುವೆಗಾಗಿ ಹಠ ಮಾಡಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಜೆಸ್ಕಾಂ ಗೆ ಕರೆ ಮಾಡಿ ಟವರ್ ಕಂಬಕ್ಕೆ ಇದ್ದ ವಿದ್ಯುತ್ ಸಂಪರ್ಕ ವನ್ನ ಕಟ್ ಮಾಡಿಸಿದ್ದಾರೆ. ತದನಂತರ ಹುಡುಗನೊಂದಿಗೆ ಮಾತನಾಡಿ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಆಶ್ರಯ ಮನೆ ಹಂಚಿಕೆಯಲ್ಲಿ ಅಕ್ರಮ ಆರೋಪ- ನ್ಯಾಯಕ್ಕಾಗಿ ಟವರ್ ಏರಿ ಕುಳಿತ ದಂಪತಿ

    ಆಶ್ರಯ ಮನೆ ಹಂಚಿಕೆಯಲ್ಲಿ ಅಕ್ರಮ ಆರೋಪ- ನ್ಯಾಯಕ್ಕಾಗಿ ಟವರ್ ಏರಿ ಕುಳಿತ ದಂಪತಿ

    ಹಾಸನ: ಆಶ್ರಯ ಮನೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಎಂದು ದಂಪತಿಗಳು ಮೊಬೈಲ್ ಟವರ್ ಏರಿ ಕುಳಿತ ಘಟನೆ ಜಿಲ್ಲೆಯ ಬೇಲೂರಿನ ನೆಹರು ನಗರದಲ್ಲಿ ನಡೆದಿದೆ.

    ಮೋಹನ್ ರಾಜ್ ಮತ್ತು ಚಂದನ ಮೊಬೈಲ್ ಟವರ್ ಏರಿ ಕುಳಿತ ದಂಪತಿ. ಬಂಟೇನಹಳ್ಳಿ ಗ್ರಾಮ ಪಂಚಾತಿಯಲ್ಲಿ ಆಶ್ರಯ ಮನೆ ನೀಡುವುದಾಗಿ ದಂಪತಿಯಿಂದ ಒಂದು ಸಾವಿರ ಹಣ ಪಡೆದಿರುವ ಆರೋಪ ಕೇಳಿ ಬಂದಿದೆ. ಆದರೆ ಕೊನೆಗೆ ದಂಪತಿಗೆ ಆಶ್ರಯ ಮನೆ ನೀಡದೆ ವಂಚನೆ ಮಾಡಿರುವುದಾಗಿ ಆರೋಪ ಮಾಡುತ್ತಿದ್ದಾರೆ.

    ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ದಂಪತಿ ಟವರ್ ಏರಿ ಕುಳಿತಿದ್ದಾರೆ. ಈ ಕುರಿತ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಟವರ್ ನಿಂದ ಕೆಳಗಿಳಿಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

  • ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಪರಿಹಾರಕ್ಕೆ ಕ್ರಮ – ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಸಭೆಯಲ್ಲಿ ಸಿಎಂ ಭರವಸೆ

    ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಪರಿಹಾರಕ್ಕೆ ಕ್ರಮ – ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಸಭೆಯಲ್ಲಿ ಸಿಎಂ ಭರವಸೆ

    ಬೆಂಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಹೆಚ್ಚಿದ್ದು, ಖಾಸಗಿ ಕಂಪನಿಗಳ ಜೊತೆಗೂಡಿ ಹೆಚ್ಚಿನ ಟವರ್ ಕಂಬಗಳನ್ನು ನಿರ್ಮಾಣ ಮಾಡಬೇಕು. ಈ ಕುರಿತು ವಿವಿಧ ಕಂಪನಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

    ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರೊಂದಿಗೆ ಸಿಎಂ ಸಭೆ ನಡೆಸಿ ಶಿವಮೊಗ್ಗ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು. ಈ ವೇಳೆ ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಮಲೆನಾಡು ಭಾಗದಲ್ಲಿ ತಲೆದೋರಿರುವ ನೆಟ್ ವರ್ಕ್ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿದರು.

    ಮಲೆನಾಡಿನ ಹೆಚ್ಚಿನ ಭಾಗದಲ್ಲಿ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಮಾತ್ರ ಇದೆ. ಇದರಿಂದ ನೆಟ್‍ವರ್ಕ್ ಸಮಸ್ಯೆ ಉಲ್ಬಣಿಸುತ್ತಿದೆ. ಹೀಗಾಗಿ ಖಾಸಗಿ ಕಂಪನಿಗಳು ಸಹ ಮಲೆನಾಡು ಭಾಗದಲ್ಲಿ ಟವರ್ ಹೆಚ್ಚಿಸಲು ಜೊತೆಗೂಡಬೇಕು. ಇದರಿಂದ ರಜೆ ಸಂದರ್ಭದಲ್ಲಿ ಬೆಂಗಳೂರಿನಿಂದ ತಮ್ಮ ಊರಿಗೆ ಬರುವ ಯುವಕರಿಗೆ ಸಹಾಯವಾಗಲಿದೆ ಎಂದು ತಿಳಿಸಿದರು. ತಕ್ಷಣವೇ ಸಿಎಂ ಪ್ರತಿಕ್ರಿಯಿಸಿ, ಮಲೆನಾಡು ಭಾಗದಲ್ಲಿ ಯಾವುದೇ ರೀತಿಯಲ್ಲಿ ನೆಟ್‍ವರ್ಕ್ ಸಮಸ್ಯೆ ತಲೆದೂರದಂತೆ ಟವರ್ ಗಳನ್ನು ಅಳವಡಿಸಬೇಕು. ಇದಕ್ಕೆ ಬೇಕಾದ ನೆರವನ್ನು ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಹಾಜರಿದ್ದ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಭರವಸೆ ನೀಡಿದರು.

    ತುಮಕೂರು ಶಿವಮೊಗ್ಗ ಹೆದ್ದಾರಿ ಯೋಜನೆಗೆ ತೊಡಕಾಗಿರುವ ತುಮಕೂರು ಪಟ್ಟಣದ ಭೂ ಸ್ವಾಧೀನ ಪ್ರಕ್ರಿಯೆಗೆ ಇದ್ದ ಸಮಸ್ಯೆಗಳನ್ನು ಬಗೆಹರಿಸಲಾಯಿತು. ಹೆದ್ದಾರಿಯಲ್ಲಿ ಹಾದು ಹೋಗುವ ಜಾಗದಲ್ಲಿರುವ ಕೆರೆಗಳನ್ನು ಹೂಳೆತ್ತಿ ಅದರ ಮಣ್ಣನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಯಿತು. ಹೈವೇ ನಿರ್ಮಾಣ ಕಾಮಗಾರಿಗಳುನ್ನು ತ್ವರಿತವಾಗಿ ಮುಗಿಸಲು ಹೆಚ್ಚಿನ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳುವಂತೆ ಇದೇ ವೇಳೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

    ಸಿಗಂಧೂರು ಸೇತುವೆ ನಿರ್ಮಾಣದ ಕುರಿತು ಸಹ ಚರ್ಚಿಸಿದ್ದು, ಒಟ್ಟು 2.4 ಕಿ.ಮೀ. ಉದ್ದ ಇದ್ದು ಈ ಸೇತುವೆಯನ್ನು ಪ್ರವಾಸಿ ತಾಣಕ್ಕೆ ಅನುಕೂಲವಾಗುವಂತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆದಷ್ಟು ಬೇಗ ಕೆಲಸ ಆರಂಭ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಯಿತು. ಶಿವಮೊಗ್ಗ ಸುತ್ತ 2 ಲೈನ್ ರಿಂಗ್ ರಸ್ತೆಗೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲ್ವೇ ಭೂಸ್ವಾದೀನಕ್ಕೆ ಇದ್ದ ಸಮಸ್ಯೆ ಬಗೆಹರಿಸಲಾಯಿತು. ಆದಷ್ಟು ಬೇಗ ರಿಂಗ್ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.

  • ಯುವತಿಗಾಗಿ ಟವರ್ ಏರಿ ಕುಳಿತ ಯುವಕ – ತಾಯಿ ಕಣ್ಣೀರಿಟ್ಟರೂ ಕೆಳಗಿಳಿಯದ ಮಗ

    ಯುವತಿಗಾಗಿ ಟವರ್ ಏರಿ ಕುಳಿತ ಯುವಕ – ತಾಯಿ ಕಣ್ಣೀರಿಟ್ಟರೂ ಕೆಳಗಿಳಿಯದ ಮಗ

    ರಾಯಚೂರು: ಯುವಕನೊಬ್ಬ ತಾನು ಪ್ರೀತಿಸಿದ ಯುವತಿಗಾಗಿ ಟವರ್ ಏರಿ ಕುಳಿತ ಘಟನೆ ರಾಯಚೂರು ನಗರದ ಪಿಎನ್ ಟಿ ಕ್ವಾಟ್ರಸ್‍ನಲ್ಲಿ ನಡೆದಿದೆ.

    ಶಾಂತಕುಮಾರ (32) ಟವರ್ ಏರಿದ ಯುವಕ. ಶಾಂತಕುಮಾರ್ ಸೆಲ್ಫಿ ವಿಡಿಯೋ ಮಾಡಿ ಸುಮಾರು 120 ಅಡಿ ಎತ್ತರವಿರುವ ಟವರ್ ಏರಿ ಕುಳಿತಿದ್ದಾನೆ. ಅಲ್ಲದೆ ಪ್ರೀತಿಸಿದ ಯುವತಿ ಬರುವವರೆಗೂ ಟವರ್ ನಿಂದ ಇಳಿಯುವುದಿಲ್ಲ ಎಂದು ಹೇಳುತ್ತಿದ್ದಾನೆ.

    ವಿಡಿಯೋದಲ್ಲಿ ಏನಿದೆ?
    ನಾನು ಹಾಗೂ ಕವಿತಾ ತುಂಬಾ ದಿನದಿಂದ ಪ್ರೀತಿಸುತ್ತಿದ್ದೇವೆ. ಕವಿತಾ ನನಗಾಗಿ ತನ್ನ ಮನೆ ಬಿಟ್ಟು ಬಂದಿದ್ದಳು. ಆಕೆ ಮನೆ ಬಿಟ್ಟು ಬಂದಾಗ ನಾವಿಬ್ಬರು ಮದುವೆ ಆಗಿದ್ದೇವೆ. ನನ್ನ ಬಳಿ ಮದುವೆಯ ದಾಖಲೆಗಳು ಇದೆ. ಆದರೆ ಈಗ ಕವಿತಾ ಪೋಷಕರು ನಾವು ಸಾಯುತ್ತೇವೆ ಎಂದು ಹೆದರಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅವರು ಕರೆದುಕೊಂಡು ಹೋಗಿ ಕವಿತಾಳನ್ನು ಎಲ್ಲಿ ಇಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಈಗ ಅವರ ಪೋಷಕರು ನಾನು ಕಟ್ಟಿದ್ದ ತಾಳಿಯನ್ನು ತೆಗೆದು ಬೇರೆ ಮದುವೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ದಯವಿಟ್ಟು ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮದವರು ಬೆಂಬಲ ನೀಡಬೇಕೆಂದು ವಿಡಿಯೋದಲ್ಲಿ ಹೇಳಿದ್ದಾನೆ.

    ಈ ಬಗ್ಗೆ ಪೊಲೀಸರು ಕವಿತಾ ಮನೆಯವರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಕವಿತಾ ಮನೆಯವರು ಮಹಾರಾಷ್ಟ್ರಕ್ಕೆ ಹೋಗಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ. ಇತ್ತ ಕವಿತಾ ನಾನು ಶಾಂತಕುಮಾರನನ್ನು ಮದುವೆ ಆಗಿಲ್ಲ ಎಂದು ಹೇಳುತ್ತಿದ್ದಾಳೆ.

    ತಾಯಿ, ಕುಟುಂಬದವರು ಬಂದು ಮನವೊಲಿಕೆಗೆ ಪ್ರಯತ್ನಿಸಿದರೂ ಶಾಂತಕುಮಾರ್ ಮೊಬೈಲ್ ಟವರ್ ನಿಂದ ಕೆಳಗೆ ಇಳಿಯುತ್ತಿಲ್ಲ. ಮಗನನ್ನು ತಾಯಿ ಕರೆಯುವ ದೃಶ್ಯ ಮನಕಲುಕುವಂತಿದ್ದು, ಸ್ಥಳದಲ್ಲಿ ನೆರೆದಿದ್ದ ಜನ ತಾಯಿಯ ವೇದನೆ ನೋಡಿ ಮರುಕಪಟ್ಟಿದ್ದಾರೆ. ಅಲ್ಲದೆ ತಾಯಿ ನೀನು ಕೆಳಗಿಳಿಯದಿದ್ದರೆ, ನಾನು ಸಾಯುವೆ ಎಂದು ಕಣ್ಣೀರಿಟ್ಟು ಕೆಳಗಿಳಿ ಎಂದರೂ ಶಾಂತಕುಮಾರ್ ತನ್ನ ತಾಯಿಯ ಮಾತನ್ನು ಕೇಳುತ್ತಿಲ್ಲ. ಕವಿತಾಳನ್ನು ಕರೆ ತಂದರೆ ಮಾತ್ರ ಕೆಳಗಿಯುವುದಾಗಿ ಪಟ್ಟು ಹಿಡಿದಿದ್ದಾನೆ. ಶಾಂತಕುಮಾರ್ ಟವರ್ ಏರಿದ ವಿಷಯ ತಿಳಿದು ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರ ದೌಡಾಯಿಸಿ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.

  • ಟವರ್ ಏರಿ ಹಾಸ್ಟೆಲ್ ಹುಡುಗಿಯರ ಕೋಣೆ ಇಣುಕಿ ನೋಡ್ತಾನೆ – ಹಾಸನದಲ್ಲೊಬ್ಬ ಸೈಕೋ

    ಟವರ್ ಏರಿ ಹಾಸ್ಟೆಲ್ ಹುಡುಗಿಯರ ಕೋಣೆ ಇಣುಕಿ ನೋಡ್ತಾನೆ – ಹಾಸನದಲ್ಲೊಬ್ಬ ಸೈಕೋ

    ಹಾಸನ: ಟವರ್ ಏರಿ ಹಾಸ್ಟೆಲ್ ಕೋಣೆಯನ್ನು ಇಣುಕಿ ನೋಡುವ ಸೈಕೋ ವ್ಯಕ್ತಿಯ ಕಾಟಕ್ಕೆ ನಗರದ ವಿದ್ಯಾರ್ಥಿನಿಯರು ಭಯಗೊಂಡಿದ್ದಾರೆ.

    ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‍ಗೆ ತಡರಾತ್ರಿ ನುಗ್ಗಿದ್ದಾನೆ. ಕಟ್ಟಡದ ಪಕ್ಕದಲ್ಲಿರುವ ಮೊಬೈಲ್ ಟವರ್ ಮುಖಾಂತರ ಸರಾಗವಾಗಿ ಮೇಲ್ಭಾಗಕ್ಕೆ ಹತ್ತಿ ಬರುವ ಅಪರಿಚಿತ ವ್ಯಕ್ತಿಯೊಬ್ಬ ಹಾಸ್ಟೆಲ್ ವಿದ್ಯಾರ್ಥಿನಿಯರ ಕೊಠಡಿಗಳ ಒಳಗೆ ಇಣುಕಿ ನೋಡಿದ್ದಾನೆ.

    ಹಾಸ್ಟೆಲ್‍ನ ಓರ್ವ ವಿದ್ಯಾರ್ಥಿನಿ ಸೈಕೋನ ಚಲನವಲಗಳನ್ನು ಗಮನಿಸಿ ಕೂಡಲೇ ಮೇಲ್ವಿಚಾರಕರಿಗೆ ವಿಷಯ ತಿಳಿಸಿದ್ದಾಳೆ. ಸಿಸಿಟಿವಿ ಕ್ಯಾಮೆರಾದಲ್ಲಿ ಮುಖಕ್ಕೆ ಬಟ್ಟೆ ಬರುವ ಅಪರಿಚಿತನ ವ್ಯಕ್ತಿಯ ಗುರುತು ಪತ್ತೆಯಾಗಿದೆ.

    ವಸತಿ ನಿಲಯಕ್ಕೆ ಹೈಸ್ಪೀಡ್ ಇಂಟರ್ ನೆಟ್ ಕಲ್ಪಿಸಲು ಟವರ್ ಹಾಕಲಾಗಿದೆ. ವ್ಯಕ್ತಿಯೊಬ್ಬ ಅದನ್ನು ಹತ್ತಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ನುಗ್ಗಿದ್ದಾನೆ. ಇದನ್ನು ನೋಡಿದ ಓರ್ವ ವಿದ್ಯಾರ್ಥಿನಿ ಕಿರುಚಾಡಿದ್ದಾಳೆ. ತಕ್ಷಣವೇ ಆ ವ್ಯಕ್ತಿ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸತೀಶ್ ತಿಳಿಸಿದ್ದಾರೆ.

    ನಗರದಲ್ಲಿ ಮಹಿಳಾ ಹಾಸ್ಟೆಲ್‍ಗಳಿಗೆ ಸೈಕೋ ವ್ಯಕ್ತಿಗಳು ಪ್ರವೇಶ ಮಾಡುವುದು ಹೊಸದೆನಲ್ಲ ಈ ಹಿಂದೆ ನಗರದ ಪಶುವೈದ್ಯಕೀಯ ಕಾಲೇಜು ಮಹಿಳಾ ಹಾಸ್ಟೆಲ್‍ಗೆ ಸೈಕೋ ಎಂಟ್ರಿ ಕೊಟ್ಟಿದ್ದ. ಇದಾದ ಬಳಿಕ ಕೆಆರ್ ಪುರಂ ಬಡಾವಣೆಯ ಹಾಸ್ಟೆಲ್‍ಗೂ ಕಾಮುಕ ವ್ಯಕ್ತಿ ನುಗ್ಗಿದ್ದ. ಅಷ್ಟೇ ಅಲ್ಲದೆ ವಿದ್ಯಾನಗರದಲ್ಲಿ ಲೇಡಿಸ್ ಪಿಜಿಗೂ ಎಂಟ್ರಿ ಕೊಟ್ಟಿದ್ದ.

    ಈ ಸಂಬಂಧ ಕೆ.ಆರ್ ಪುರಂ ಬಡಾವಣೆಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.