ನವದೆಹಲಿ: ನಿರ್ವಹಣಾ ಕಾಮಗಾರಿ ಹಿನ್ನೆಲೆ ಏ. 15ರಿಂದ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 (T 2) ಬಂದ್ ಆಗಲಿದೆ. ಟರ್ಮಿನಲ್ 2ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ವಿಮಾನಗಳನ್ನು ಟರ್ಮಿನಲ್ 1 ಮತ್ತು 3ಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಡಿಐಎಎಲ್ (Delhi International Airport Limited) ತಿಳಿಸಿದೆ.
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ( Indira Gandhi International Airport) ಟರ್ಮಿನಲ್ 2ರಲ್ಲಿ ದುರಸ್ತಿ ಮತ್ತು ನವೀಕರಣ ಕಾರ್ಯಗಳಿಗೆ ಅನುಕೂಲವಾಗುವಂತೆ 4 ತಿಂಗಳ ಕಾಲ ಮುಚ್ಚಲಾಗುವುದು. ಆದ್ದರಿಂದ ಟರ್ಮಿನಲ್ 1 ಮತ್ತು ಟರ್ಮಿನಲ್ 3ರಲ್ಲಿ ಮಾತ್ರ ವಿಮಾನಗಳು ಕಾರ್ಯನಿರ್ವಹಿಸಲಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮೊದಲು ತಮ್ಮ ವಿಮಾನದ ಟರ್ಮಿನಲ್ ಮಾಹಿತಿಯನ್ನು ಪರಿಶೀಲಿಸಿ ಎಂದು ದೆಹಲಿ ಅಂತರಾಷ್ಟ್ರೀಯ ಏರ್‌ಪೋರ್ಟ್ ಲಿಮಿಟೆಡ್ ಪ್ರಯಾಣಿಕರಿಗೆ ಸೂಚನೆ ನೀಡಿದೆ.
ಇಂಡಿಗೋ ಸಂಸ್ಥೆಯಿಂದ ಪ್ರಯಾಣಿಕರಿಗೆ ಸೂಚನೆ
ಟರ್ಮಿನಲ್ 2ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಇಂಡಿಗೋ ವಿಮಾನಗಳು (Indigo Flights) ಏಪ್ರಿಲ್ 15ರಿಂದ ಟರ್ಮಿನಲ್ 1ರಿಂದ ಕಾರ್ಯನಿರ್ವಹಿಸುತ್ತವೆ ಎಂದು ಇಂಡಿಗೋ ಸಂಸ್ಥೆ ಘೋಷಿಸಿದೆ.
ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಕರೆ ಮತ್ತು ಇಮೇಲ್‌ಗಳ ಮೂಲಕ ಮುಂಚಿತವಾಗಿ ಮಾಹಿತಿ ನೀಡುತ್ತದೆ. ಪ್ರಯಾಣಿಕರು ಇಂಡಿಗೋ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಮ್ಮ ಹೆಸರಿನ ದಾಖಲೆಯನ್ನು ಪಡೆಯುವ ಮೂಲಕ ನಿರ್ಗಮನ ಮತ್ತು ಆಗಮನದ ಟರ್ಮಿನಲ್‌ಗಳನ್ನು ಪರಿಶೀಲಿಸುವಂತೆ ಸೂಚಿಸಿದೆ.
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIAL) ಟರ್ಮಿನಲ್ 2 (Terminal 2) ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ (Beautiful Airport Terminals in the World) ಒಂದೆಂಬ ಗೌರವಕ್ಕೆ ಪಾತ್ರವಾಗಿದೆ.
ಈ ಮೂಲಕ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದ ಪ್ರತಿಷ್ಠಿತ ವಾಸ್ತುಶಿಲ್ಪ ಸ್ಪರ್ಧೆಯ ಪ್ರಿಕ್ಸ್ ವರ್ಸೈ (Prix Versailles) ಗೌರವಕ್ಕೆ ಬೆಂಗಳೂರು ವಿಮಾನ ನಿಲ್ದಾಣ (Bengaluru Airport) ಪಾತ್ರವಾಗಿದೆ. ಟಿ2ನಲ್ಲಿರುವ ಒಳಾಂಗಣ ವಿನ್ಯಾಸಕ್ಕಾಗಿ ಈ ವರ್ಷದ ಗೌರವ ಸಿಕ್ಕಿದೆ. ಅಷ್ಟೇ ಅಲ್ಲದೇ ಈ ಗೌರವಕ್ಕೆ ಪಾತ್ರವಾದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯೂ ಈಗ ಕೆಐಎಎಲ್‌ಗೆ ಸಿಕ್ಕಿದೆ.
ಪ್ಯಾರಿಸ್ ಮೂಲದ ಪ್ರಿಕ್ಸ್ ವರ್ಸೈಲ್ಸ್ 2015 ರಲ್ಲಿ ಸ್ಥಾಪಿಸಲಾಗಿದ್ದು ವಿಮಾನ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು, ಕ್ಯಾಂಪಸ್‌ಗಳು ಮತ್ತು ಪ್ರಯಾಣಿಕರ ನಿಲ್ದಾಣಗಳು ಸೇರಿದಂತೆ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡುತ್ತದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಟರ್ಮಿನಲ್ 2 ಉದ್ಘಾಟಿಸಿದ್ದರು. ಈ ವರ್ಷದ ಜನವರಿ 15 ದಿಂದ ದೇಶೀಯ ಕಾರ್ಯಾಚರಣೆ ಆರಂಭಗೊಂಡಿತ್ತು. ಸೆಪ್ಟೆಂಬರ್ 12 ರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಜೊತೆ ದೇಶೀಯ ಸೇವೆ ನೀಡುವ ಏರ್ ಏಷ್ಯಾ, ಏರ್ ಇಂಡಿಯಾ, ಸ್ಟಾರ್ ಏರ್, ವಿಸ್ತಾರಾ ಕಂಪನಿಗಳ ವಿಮಾನ ಕಾರ್ಯಾಚರಣೆ ಟರ್ಮಿನಲ್ 2 ನಿಂದ ನಡೆಯುತ್ತಿದೆ.
ಹೊಸದಾಗಿ ಟರ್ಮಿನಲ್ 2 (Bengaluru Terminal 2) ಎರಡನೇ ರನ್ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಏರ್‌ಪೋರ್ಟ್ ಒಳಾಂಗಣವು ಸಂಪೂರ್ಣ ವುಡ್ ಡಿಸೈನ್, ಹಸಿರಿನೊಂದಿಗೆ ವಿನ್ಯಾಸಗೊಂಡಿದೆ. ಗ್ರೌಂಡ್ ಎಸಿ ಆಟೋಮ್ಯಾಟಿಕ್ ಪಾಸ್‍ಪೋರ್ಟ್ ವೆರಿಫಿಕೇಷನ್, ಆಕರ್ಷಕ ಫ್ಲೋರಿಂಗ್ ಹಾಗೂ ಅತ್ಯಾಧುನಿಕ ಟೆಕ್ನಾಲಜಿಯನ್ನು ಹೊಂದಿದೆ. ಇದನ್ನೂ ಓದಿ: ಸಂಜು ಸ್ಯಾಮ್ಸನ್ ಚೊಚ್ಚಲ ಶತಕ – ಸಂಭ್ರಮದಲ್ಲಿ ತೋಳ್ಬಲ ಪ್ರದರ್ಶನ!
ವಿಮಾನ ಪ್ರಯಾಣಿಕರು ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸಂದರ್ಭದಲ್ಲಿ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕಗ್ನಿಷನ್, ಫಿಂಗರ್ ಪ್ರಿಂಟ್ ಸೆನ್ಸರ್ ಸೌಲಭ್ಯವಿದೆ. ಕೆಐಎಎಲ್ ನೂತನ ಟರ್ಮಿನಲ್‍ನಲ್ಲಿ ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳ ಬಗ್ಗೆ ಪ್ಯಾಸೆಂಜರ್‌ಗಳಿಗೆ ಮಾಹಿತಿ ಪಡೆಯಲು ಇನ್ ಬಿಲ್ಟ್ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ತಂತ್ರಜ್ಞಾನ ರೂಪಿಸಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಂಪಸ್ ಅನ್ನು ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು 100% ಸುಸ್ಥಿರತೆಯೊಂದಿಗೆ ರಚಿಸಲಾಗಿದೆ.
ಟರ್ಮಿನಲ್-2 ಅನ್ನು ಗಾರ್ಡನ್ ಟರ್ಮಿನಲ್ (Garden Terminal) ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದೆ. ಬೆಂಗಳೂರನ್ನು ಭಾರತದ ʼಗಾರ್ಡನ್ ಸಿಟಿʼಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ. ಪ್ರಯಾಣಿಕರಿಗೆ ಉದ್ಯಾನವನದ ಅನುಭವ ನೀಡಲು ಕೃತಕ ಮರಗಿಡಗಳು, ಹಕ್ಕಿಗಳ ಕಲರವ-ಚಿಲಿಪಿಲಿ ನಾದವನ್ನು ಇಲ್ಲಿ ಕೇಳಬಹುದು.
ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್‌ಮೋರ್, ಓವಿಂಗ್ಸ್ & ಮೆರಿಲ್ (SOM) ಕಂಪನಿ ಟರ್ಮಿನಲ್ ವಿನ್ಯಾಸ ಮಾಡಿದೆ. ಏಕಕಾಲದಲ್ಲಿ 6 ಸಾವಿರ ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲಿ ಇರುವುದು ವಿಶೇಷ. ಹೊಸ ಟರ್ಮಿನಲ್‌ನ ಮೊದಲ ಹಂತವು ಒಂದು ವರ್ಷದಲ್ಲಿ 2.5 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ ಎರಡನೇ ಟರ್ಮಿನಲ್‌ನ ಮೊದಲ ಹಂತದ ನಿರ್ಮಾಣದ ಅಂದಾಜು ವೆಚ್ಚ 13,000 ಕೋಟಿ ರೂ. ಆಗಿದ್ದು ಈ ಟರ್ಮಿನಲ್ ಸರಿಸುಮಾರು 2.5 ಲಕ್ಷ ಚದರ ಮೀಟರ್‌ನ ಪ್ರದೇಶವನ್ನು ಹೊಂದಿದೆ. ಎರಡನೇ ಹಂತದಲ್ಲಿ ಈ ಟರ್ಮಿನಲ್‌ಗೆ ಇನ್ನೂ 4.41 ಲಕ್ಷ ಚ.ಮೀ ಹೊಸದಾಗಿ ಸೇರ್ಪಡೆಗೊಳ್ಳಲಿದೆ.
ಬೆಂಗಳೂರು: ಮಂಗಳವಾರದಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳು (International Flight) ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ (Kempegowda Airport) ಟರ್ಮಿನಲ್ 2ನಿಂದ (Terminal-2) ಟೇಕಾಫ್ ಮತ್ತು ಲ್ಯಾಂಡಿಂಗ್ ಆಗಲಿದೆ. ಅಂತಾರಾಷ್ಟ್ರೀಯ ವಿಮಾನಗಳ ಜೊತೆ ದೇಶೀಯ ವಿಮಾನಗಳು ಸಹ ಈ ಟರ್ಮಿನಲ್‌ನಿಂದಲೇ ಕಾರ್ಯಾಚರಣೆ ನಡೆಸಲಿವೆ.
ಈ ಸಂಬಂಧ ಬಿಎಲ್‌ಆರ್ ಏರ್‌ಪೋರ್ಟ್ ಟ್ವೀಟ್ ಮಾಡಿದ್ದು, ಸೆ.12ರ ಬೆಳಗ್ಗೆ 10:45 ರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಜೊತೆ ದೇಶೀಯ ಸೇವೆ ನೀಡುವ ಏರ್ ಏಷ್ಯಾ, ಏರ್ ಇಂಡಿಯಾ, ಸ್ಟಾರ್ ಏರ್, ವಿಸ್ತಾರಾ ಕಂಪನಿಗಳ ವಿಮಾನ ಕಾರ್ಯಾಚರಣೆ ಟರ್ಮಿನಲ್ 2 ನಿಂದ ಆಗಲಿದೆ. ಆಕಾಸಾ ಏರ್, ಅಲೈಯನ್ಸ್ ಏರ್, ಇಂಡಿಗೋ, ಸ್ಪೈಸ್ ಜೆಟ್ ವಿಮಾನಗಳು ಟರ್ಮಿನಲ್ 1 ರಲ್ಲಿ ಟೇಕಾಫ್, ಲ್ಯಾಂಡಿಂಗ್ ಆಗಲಿದೆ ಎಂದು ತಿಳಿಸಿದೆ.
ನಿಗದಿ ಪ್ರಕಾರ ಆಗಸ್ಟ್ 31 ರಿಂದಲೇ ಟರ್ಮಿನಲ್ 2 ರಿಂದ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ಆರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣ ಮತ್ತು ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಕೊನೆ ಕ್ಷಣದಲ್ಲಿ ವಿಮಾನ ನಿಲ್ದಾಣದ ನಿರ್ವಹಣಾ ಮಂಡಳಿ ಕಾರ್ಯಾಚರಣಾ ದಿನಾಂಕವನ್ನು ಮುಂದೂಡಿತ್ತು. ಇದನ್ನೂ ಓದಿ: ಇಂಡಿಯಾ ಪಾಕ್ ಪಂದ್ಯಕ್ಕೆ ಮಳೆ ಕಾಟ – ಅಲ್ಲಾ ನಮ್ಮನ್ನು ಕಾಪಾಡಿದ ಎಂದ ಅಖ್ತರ್
ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸುಮಾರು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟಿಸಿದ್ದರು. ಈ ವರ್ಷದ ಜನವರಿ 15 ದಿಂದ ದೇಶೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
ಟರ್ಮಿನಲ್-2 ಅನ್ನು ಗಾರ್ಡನ್ ಟರ್ಮಿನಲ್(Garden Terminal) ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದೆ. ಬೆಂಗಳೂರನ್ನು ಭಾರತದ ʼಗಾರ್ಡನ್ ಸಿಟಿʼಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ. ಪ್ರಯಾಣಿಕರಿಗೆ ಉದ್ಯಾನವನದ ಅನುಭವ ನೀಡಲು ಕೃತಕ ಮರಗಿಡಗಳು, ಹಕ್ಕಿಗಳ ಕಲರವ-ಚಿಲಿಪಿಲಿ ನಾದವನ್ನು ಇಲ್ಲಿ ಕೇಳಬಹುದು.
ಬೆಂಗಳೂರು: ಆಗಸ್ಟ್ 31 ರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳು (International Flight) ಕೆಂಪೇಗೌಡ ವಿಮಾನ ನಿಲ್ದಾಣದ (Kempegowda Airport) ಟರ್ಮಿನಲ್ 2ನಿಂದ (Terminal-2) ಟೇಕಾಫ್ ಮತ್ತು ಲ್ಯಾಂಡಿಂಗ್ ಆಗಲಿದೆ.
ಆಗಸ್ಟ್ 31, 2023 ರಂದು ಬೆಳಗ್ಗೆ 10:45 ರಿಂದ ಎಲ್ಲಾ ನಿಗದಿತ ಅಂತರರಾಷ್ಟ್ರೀಯ ವಿಮಾನಗಳು ಟರ್ಮಿನಲ್ 2 ರಿಂದ ಆಗಮಿಸುತ್ತವೆ ಮತ್ತು ನಿರ್ಗಮಿಸುತ್ತವೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಹೇಳಿದೆ.
ಸೆಪ್ಟೆಂಬರ್ 1 ರಂದು ಅಂತರಾಷ್ಟ್ರೀಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಬಿಐಎಎಲ್ ಯೋಜಿಸಿತ್ತು. ಆದರೆ ಈಗ ಒಂದು ದಿನ ಮೊದಲೇ ಆರಂಭಿಸಲು ನಿರ್ಧರಿಸಿದೆ.
ಇನ್ನು ಮುಂದೆ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಟರ್ಮಿನಲ್-2ಗೆ ಸ್ಥಳಾಂತರವಾಗಲಿದೆ. ಟರ್ಮಿನಲ್-1 ಪ್ರತ್ಯೇಕವಾಗಿ ದೇಶೀಯ ಟರ್ಮಿನಲ್ (Domestic Operations) ಆಗಿ ಕಾರ್ಯನಿರ್ವಹಿಸಲಿದೆ. ಸಿಂಗಾಪುರ್ ಏರ್‌ಲೈನ್ಸ್ ಆಗಸ್ಟ್ 31 ರಂದು ಟರ್ಮಿನಲ್- 2 ನಲ್ಲಿ ಇಳಿಯುವ ಮೊದಲ ಅಂತರರಾಷ್ಟ್ರೀಯ ವಿಮಾನವಾಗಿದೆ. ಇದನ್ನೂ ಓದಿ: ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು
ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸುಮಾರು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟಿಸಿದ್ದರು. ಈ ವರ್ಷದ ಜನವರಿ 15 ದಿಂದ ದೇಶೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
ಟರ್ಮಿನಲ್-2 ಅನ್ನು ಗಾರ್ಡನ್ ಟರ್ಮಿನಲ್(Garden Terminal) ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದೆ. ಬೆಂಗಳೂರನ್ನು ಭಾರತದ ʼಗಾರ್ಡನ್ ಸಿಟಿʼಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ. ಪ್ರಯಾಣಿಕರಿಗೆ ಉದ್ಯಾನವನದ ಅನುಭವ ನೀಡಲು ಕೃತಕ ಮರಗಿಡಗಳು, ಹಕ್ಕಿಗಳ ಕಲರವ-ಚಿಲಿಪಿಲಿ ನಾದವನ್ನು ಇಲ್ಲಿ ಕೇಳಬಹುದು.
ಹೊಸದಾಗಿ ಟರ್ಮಿನಲ್ 2 (Bengaluru Terminal 2) ಎರಡನೇ ರನ್ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಏರ್‌ಪೋರ್ಟ್ ಒಳಾಂಗಣವು ಸಂಪೂರ್ಣ ವುಡ್ ಡಿಸೈನ್, ಹಸಿರಿನೊಂದಿಗೆ ವಿನ್ಯಾಸಗೊಂಡಿದೆ. ಗ್ರೌಂಡ್ ಎಸಿ ಆಟೋಮ್ಯಾಟಿಕ್ ಪಾಸ್‍ಪೋರ್ಟ್ ವೆರಿಫಿಕೇಷನ್, ಆಕರ್ಷಕ ಫ್ಲೋರಿಂಗ್ ಹಾಗೂ ಅತ್ಯಾಧುನಿಕ ಟೆಕ್ನಾಲಜಿಯನ್ನು ಹೊಂದಿದೆ.
ವಿಮಾನ ಪ್ರಯಾಣಿಕರು ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸಂದರ್ಭದಲ್ಲಿ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕಗ್ನಿಷನ್, ಫಿಂಗರ್ ಪ್ರಿಂಟ್ ಸೆನ್ಸರ್ ಸೌಲಭ್ಯವಿದೆ. ಕೆಐಎಎಲ್ ನೂತನ ಟರ್ಮಿನಲ್‍ನಲ್ಲಿ ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳ ಬಗ್ಗೆ ಪ್ಯಾಸೆಂಜರ್‌ಗಳಿಗೆ ಮಾಹಿತಿ ಪಡೆಯಲು ಇನ್ ಬಿಲ್ಟ್ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ತಂತ್ರಜ್ಞಾನ ರೂಪಿಸಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಂಪಸ್ ಅನ್ನು ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು 100% ಸುಸ್ಥಿರತೆಯೊಂದಿಗೆ ರಚಿಸಲಾಗಿದೆ.
ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್‌ಮೋರ್, ಓವಿಂಗ್ಸ್ & ಮೆರಿಲ್ (SOM) ಕಂಪನಿ ಟರ್ಮಿನಲ್ ವಿನ್ಯಾಸ ಮಾಡಿದೆ. ಏಕಕಾಲದಲ್ಲಿ 6 ಸಾವಿರ ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲಿ ಇರುವುದು ವಿಶೇಷ. ಹೊಸ ಟರ್ಮಿನಲ್‌ನ ಮೊದಲ ಹಂತವು ಒಂದು ವರ್ಷದಲ್ಲಿ 2.5 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ ಎರಡನೇ ಟರ್ಮಿನಲ್‌ನ ಮೊದಲ ಹಂತದ ನಿರ್ಮಾಣದ ಅಂದಾಜು ವೆಚ್ಚ 13,000 ಕೋಟಿ ರೂ. ಆಗಿದ್ದು ಈ ಟರ್ಮಿನಲ್ ಸರಿಸುಮಾರು 2.5 ಲಕ್ಷ ಚದರ ಮೀಟರ್‌ನ ಪ್ರದೇಶವನ್ನು ಹೊಂದಿದೆ. ಎರಡನೇ ಹಂತದಲ್ಲಿ ಈ ಟರ್ಮಿನಲ್‌ಗೆ ಇನ್ನೂ 4.41 ಲಕ್ಷ ಚ.ಮೀ ಹೊಸದಾಗಿ ಸೇರ್ಪಡೆಗೊಳ್ಳಲಿದೆ.
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ನಮ್ಮ ವಿಮಾನ ನಿಲ್ದಾಣ ನಮ್ಮ ಹೆಮ್ಮೆ ಅನ್ನೋ ಹಾಗೆ ಸದಾ ಸಾಧನೆಯ ಹಾದಿಯಲ್ಲಿ ಸಾಗುತ್ತಿದೆ. ಉದ್ಯಾನನಗರಿ ಬೆಂಗಳೂರಿನ (Bengaluru) ಖ್ಯಾತಿಗೆ ಪ್ರತೀಕವೆಂಬಂತೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ಮಾದರಿಯ ಹಚ್ಚ ಹಸಿರಿನ ಪರಿಸರ ಸ್ನೇಹಿ ಟರ್ಮಿನಲ್-2 (Terminal 2) ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿದೆ.
ಹೌದು, ಕಳೆದ ವರ್ಷ ನವೆಂಬರ್ 11 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ್ದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಇದೀಗ ಕಾರ್ಯಾರಂಭ ಮಾಡಲು ಸಕಲ ಸನ್ನದ್ಧವಾಗಿದೆ. ಉದ್ಯಾನನಗರಿ ಬೆಂಗಳೂರಿನ ಪ್ರತೀಕವೆಂಬಂತೆ ತಲೆ ಎತ್ತಿರುವ ಪರಿಸರ ಸ್ನೇಹಿ ಟರ್ಮಿನಲ್-2 ಇದೇ ಜನವರಿ 15 ಸಂಕ್ರಾಂತಿ ಹಬ್ಬದ ನಂತರ ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿದೆ.
ಜನವರಿ 15 ರಂದು ಬೆಳಗ್ಗೆ 8 ಗಂಟೆ 40 ನಿಮಿಷಕ್ಕೆ ಕೆಂಪೇಗೌಡ ಏರ್‌ಪೋರ್ಟ್‌ನ ಟರ್ಮಿನಲ್-2 ರನ್‌ವೇಯಿಂದ ಸ್ಟಾರ್ ಏರ್‌ಲೈನ್ಸ್ ಮೊಟ್ಟ ಮೊದಲ ವಿಮಾನ ಕಲಬುರಗಿಗೆ ಹಾರಲಿದೆ. ಹೀಗಾಗಿ ಟರ್ಮಿನಲ್-2 ಕಡೆಯಿಂದ ಮೊಟ್ಟ ಮೊದಲ ಪ್ರಯಾಣ ಮಾಡಲು ಬಯಸುವ ಹಾಗೂ ಕಲಬುರಗಿಗೆ ಹೋಗಲಿಚ್ಛಿಸುವ ಪ್ರಯಾಣಿಕರು ತಮ್ಮ ಟಿಕೆಟ್ ಅನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಚಂಡೀಗಢ ಕೇಸ್‌ನಲ್ಲಿ ಪ್ರತಿಧ್ವನಿಸಿದ ಬೆಂಗಳೂರಿನ ಅವ್ಯವಸ್ಥಿತ ನಗರೀಕರಣ ಯೋಜನೆ
ಈ ಬಗ್ಗೆ ಸ್ವತಃ ಕೆಂಪೇಗೌಡ ಅಂತಾರಾಷ್ಟ್ರೀಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಟರ್ಮಿನಲ್-2 ಇಂದ ಮೊದಲ ವಿಮಾನ ಕಲಬುರಗಿಗೆ ಹಾರಾಟ ಮಾಡಲಿದ್ದು, ದೇಶಿಯ ವಿಮಾನಗಳ ಹಾರಾಟಕ್ಕೆ ಮಾತ್ರವೇ ಅನುಮತಿ ನೀಡಲಾಗುತ್ತಿದೆ. ಇನ್ನೂ ಹಂತ ಹಂತವಾಗಿ ದೇಶಿಯ ಹಾಗೂ ವಿದೇಶಿ ವಿಮಾನಗಳ ಮೂಲಕ ಹೊರಡುವ ಹಾಗೂ ಬರುವ ಪ್ರಯಾಣಿಕರಿಗೂ ಟರ್ಮಿನಲ್-2 ಸೇವೆ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.
ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಐ ಸ್ಟ್ಯಾಂಡರ್ಡ್ಸ್‌ನಲ್ಲಿ ನಿರ್ಮಾಣ ಮಾಡಲಾಗಿರುವ ಟರ್ಮಿನಲ್-2 ಕಣ್ತುಂಬಿಕೊಳ್ಳುವುದೇ ಒಂದು ರೀತಿಯ ಹಬ್ಬವಿದ್ದಂತೆ. ಹಚ್ಚ ಹಸಿರಿನ ತೂಗುಯ್ಯಾಲೆಯಂತೆ ನೇತಾಡುವ ಹಸಿರಿನ ಸಿರಿ, ಕೃತಕ ಜಲಪಾತ, ಬಿದಿರಿನಿಂದಲೇ ಮೂಡಿ ಬಂದಿರುವ ಮೇಲ್ಚಾವಣಿ ಟರ್ಮಿನಲ್-2ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಟರ್ಮಿನಲ್-2ನ ಎಂಟ್ರಿ ಹೊಸ ಲೋಕಕ್ಕೆ ಹೋದಂತಹ ಅನುಭವ ನೀಡಲಿದ್ದು, ಇದನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ತುದಿಗಾಲಲ್ಲಿ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಟರ್ಮಿನಲ್-2 ಕಾರ್ಯಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಚಳಿ ಮತ್ತಷ್ಟು ಹೆಚ್ಚಳ – ಶೀತ ಮಾರುತಗಳ ಅಲರ್ಟ್
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಅವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport) ನಿರ್ಮಾಣವಾಗಿರು ಏಷ್ಯಾದ ಮೊದಲ ಗಾರ್ಡನ್ ಟರ್ಮಿನಲ್ ಲೋಕಾರ್ಪಣೆ ಮಾಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವರ್ಷಕ್ಕೆ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಹಾಗಾಗಿ ವಿಮಾನ ನಿಲ್ದಾಣ ತನ್ನ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿ ಇದೀಗ ಟರ್ಮಿನಲ್-2(Terminal 2) ಸಿದ್ಧಗೊಂಡಿದೆ.
ಟರ್ಮಿನಲ್ 2 ವನ್ನು ಗಾರ್ಡನ್ ಟರ್ಮಿನಲ್(Garden Terminal) ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದೆ. ಬೆಂಗಳೂರನ್ನು ಭಾರತದ ʼಗಾರ್ಡನ್ ಸಿಟಿʼಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ. ಪ್ರಯಾಣಿಕರಿಗೆ ಉದ್ಯಾನವನದ ಅನುಭವ ನೀಡಲು ಕೃತಕ ಮರಗಿಡಗಳು, ಹಕ್ಕಿಗಳ ಕಲರವ-ಚಿಲಿಪಿಲಿ ನಾದವನ್ನು ಇಲ್ಲಿ ಕೇಳಬಹುದು.
ಹೊಸದಾಗಿ ಟರ್ಮಿನಲ್ 2 (Bengaluru Terminal 2) ಎರಡನೇ ರನ್ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಏರ್‌ಪೋರ್ಟ್ ಒಳಾಂಗಣವು ಸಂಪೂರ್ಣ ವುಡ್ ಡಿಸೈನ್, ಹಸಿರಿನೊಂದಿಗೆ ವಿನ್ಯಾಸಗೊಂಡಿದೆ. ಗ್ರೌಂಡ್ ಎಸಿ ಆಟೋ ಮೆಟಿಕ್ ಪಾಸ್‍ಪೋರ್ಟ್ ವೆರಿಫಿಕೇಷನ್, ಆಕರ್ಷಕ ಫ್ಲೋರಿಂಗ್ ಹಾಗೂ ಅತ್ಯಾಧುನಿಕ ಟೆಕ್ನಾಲಜಿಯನ್ನು ಹೊಂದಿದೆ.
ವಿಮಾನ ಪ್ರಯಾಣಿಕರು ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸಂದರ್ಭದಲ್ಲಿ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕಗ್ನಿಷನ್, ಫಿಂಗರ್ ಪ್ರಿಂಟ್ ಸೆನ್ಸಾರ್ ಸೌಲಭ್ಯ. ಕೆಐಎಎಲ್ ನೂತನ ಟರ್ಮಿನಲ್‍ನಲ್ಲಿ ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳ ಬಗ್ಗೆ ಪ್ಯಾಸೆಂಜರ್‌ಗಳಿಗೆ ಮಾಹಿತಿ ಪಡೆಯಲು ಇನ್ ಬಿಲ್ಟ್ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ತಂತ್ರಜ್ಞಾನ ರೂಪಿಸಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ವಿಮಾನ ನಿಲ್ದಾಣವನ್ನು ಕ್ಯಾಂಪಸ್‌ನಾದ್ಯಂತ ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು 100% ಸುಸ್ಥಿರತೆಯೊಂದಿಗೆ ರಚಿಸಲಾಗಿದೆ. ಇದನ್ನೂ ಓದಿ: ಮೋದಿಯಿಂದ ವಂದೇ ಭಾರತ್, ಕಾಶಿ ದರ್ಶನ್ ರೈಲಿಗೆ ಚಾಲನೆ
ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್‌ಮೋರ್, ಓವಿಂಗ್ಸ್ & ಮೆರಿಲ್ (SOM) ಕಂಪನಿ ಟರ್ಮಿನಲ್ ವಿನ್ಯಾಸ ಮಾಡಿದೆ. ಏಕಕಾಲದಲ್ಲಿ 6 ಸಾವಿರ ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇರವುದು ವಿಶೇಷ. ಹೊಸ ಟರ್ಮಿನಲ್‌ನ ಮೊದಲ ಹಂತವು ಒಂದು ವರ್ಷದಲ್ಲಿ 2.5 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ ಎರಡನೇ ಟರ್ಮಿನಲ್‌ನ ಮೊದಲ ಹಂತದ ನಿರ್ಮಾಣದ ಅಂದಾಜು ವೆಚ್ಚ 13,000 ಕೋಟಿ ರೂ. ಆಗಿದ್ದು ಈ ಟರ್ಮಿನಲ್ ಸರಿಸುಮಾರು 2.5 ಲಕ್ಷ ಚದರ ಮೀಟರ್‌ನ ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿದೆ. ಎರಡನೇ ಹಂತದಲ್ಲಿ ಈ ಟರ್ಮಿನಲ್‌ಗೆ ಇನ್ನೂ 4.41 ಲಕ್ಷ ಚ.ಮೀ ಹೊಸದಾಗಿ ಸೇರ್ಪಡೆಗೊಳ್ಳಲಿದೆ.
Live Tv
[brid partner=56869869 player=32851 video=960834 autoplay=true]