Tag: ಟರ್ಬನ್

  • ರಾಹುಲ್‌ ಹೇಳಿಕೆ ಉಲ್ಲೇಖಿಸಿ ಪ್ರತ್ಯೇಕ ಖಲಿಸ್ತಾನ ರಾಷ್ಟ್ರ ಬೇಡಿಕೆ ಮುಂದಿಟ್ಟ ಉಗ್ರ ಪನ್ನುನ್

    ರಾಹುಲ್‌ ಹೇಳಿಕೆ ಉಲ್ಲೇಖಿಸಿ ಪ್ರತ್ಯೇಕ ಖಲಿಸ್ತಾನ ರಾಷ್ಟ್ರ ಬೇಡಿಕೆ ಮುಂದಿಟ್ಟ ಉಗ್ರ ಪನ್ನುನ್

    ನವದೆಹಲಿ: ಭಾರತ ಸರ್ಕಾರ ನಿಷೇಧಿಸಿದ ಖಲಿಸ್ತಾನಿ ಪರ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಸ್ಥಾಪಕ ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ರಾಹುಲ್‌ ಗಾಂಧಿ (Rahul Gandhi) ಹೇಳಿಕೆಯನ್ನು ಉಲ್ಲೇಖಿಸಿ ಪ್ರತ್ಯೇಕ ಖಲಿಸ್ತಾನ್‌ ರಾಷ್ಟ್ರ (Khalistan Nation) ಬೇಡಿಕೆಯನ್ನು ಮತ್ತೊಮ್ಮೆ ಮುಂದಿಟ್ಟಿದ್ದಾನೆ.

    ವಾಷಿಂಗ್ಟನ್‌ನಲ್ಲಿರುವ ಗುರುಪತ್‌ವಂತ್ ಸಿಂಗ್ ಪನ್ನುನ್ ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾನೆ.

    ಹೇಳಿಕೆಯಲ್ಲಿ ಏನಿದೆ?
    ಅನೇಕ ಖಲಿಸ್ತಾನ್ ಪರ ಸಿಖ್ಖರು ಹಾಜರಿದ್ದ ವಾಷಿಂಗ್ಟನ್ ಡಿಸಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು SFJ ಯ ಜಾಗತಿಕ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹ ಅಭಿಯಾನವನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತದಲ್ಲಿ ಸಿಖ್ಖರಿಗೆ ಪೇಟ, ಕಡವನ್ನು ಧರಿಸಿ ಗುರುದ್ವಾರಕ್ಕೆ ಹೋಗುವುದಕ್ಕೆ ಅನುಮತಿ ನೀಡಲಾಗುತ್ತದೆಯೇ ಎಂಬುದರ ಬಗ್ಗೆ ಯೋಚಿಸಬೇಕಿದೆ ಎಂದು ಹೇಳಿದ್ದಾರೆ.

    ಭರತದ ಸಿಖ್ಬರ್‌ ಬಗ್ಗೆ ರಾಹುಲ್‌ ಆಡಿರುವ ಮಾತು ದಿಟ್ಟತನದಿಂದ ಕೂಡಿರುವುದು ಮಾತ್ರವಲ್ಲ 1947 ರಿಂದ ಭಾರತದಲ್ಲಿ ಸಿಖ್ಖರು ಎದುರಿಸುತ್ತಿರುವ ವಾಸ್ತವಿಕ ಇತಿಹಾಸದಲ್ಲಿ ಎದುರಿಸುತ್ತಿರವ ಸಮಸ್ಯೆಯನ್ನು ತಿಳಿಸಿದೆ. ಸಿಖ್ಸ್ ಫಾರ್ ಜಸ್ಟಿಸ್‌ ಸಂಘಟನೆ ಸಿಖ್ಖರ ತಾಯ್ನಾಡಾಗಿ ಖಲಿಸ್ತಾನ ಪ್ರತ್ಯೇಕ ರಾಷ್ಟ್ರ ಸ್ಥಾಪಿಸಬೇಕೆಂಬ ಪಂಜಾಬ್ ಸ್ವಾತಂತ್ರ್ಯದ ಜನಾಭಿಪ್ರಾಯ ಸಂಗ್ರಹಣೆಯ ಸಮರ್ಥನೆಯನ್ನು ದೃಢೀಕರಿಸುತ್ತದೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಕೋರ್ಟ್‌ಗೆಳೆಯುತ್ತೇವೆ; ಸಿಖ್ ಸಮುದಾಯದ ಬಗ್ಗೆ ಹೇಳಿಕೆಗೆ ಎಚ್ಚರಿಕೆ ನೀಡಿ ಕೇಂದ್ರ ಸಚಿವ ಪುರಿ

    ರಾಹುಲ್‌ ಹೇಳಿದ್ದೇನು?
    ಸಿಖ್ಖರು (Sikhs) ಟರ್ಬನ್, ಖಡಗ ಧರಿಸುವುದಕ್ಕೆ ಹೆದರುವಂತಾಗಿದೆ. ಇದು ಒಬ್ಬ ವ್ಯಕ್ತಿ ಮತ್ತು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಧರ್ಮಗಳಲ್ಲೂ ಇಂತಹ ಸ್ಥಿತಿ ಇದೆ. ಸ್ವಾತಂತ್ರ್ಯಾನಂತರದ ಇತಿಹಾಸದಲ್ಲಿ, ಸಿಖ್‌ ಸಮುದಾಯದ ಮೇಲೆ ಹತ್ಯಾಕಾಂಡ ನಡೆದ ಸಂದರ್ಭವಿತ್ತು. ಆಗ 3,000 ಅಮಾಯಕ ಸಿಖ್ಖರನ್ನು ಕೊಲ್ಲಲಾಯಿತು. ಆ ಸಂದರ್ಭದಲ್ಲಿ ನನ್ನ ಕೆಲವು ಸಹೋದರರು ಪೇಟ ಧರಿಸುವುದನ್ನೇ ಬಿಟ್ಟರು ಎಂದು ರಾಹುಲ್‌ ಹೇಳಿದ್ದರು.

    ಗುರುಪತ್‌ವಂತ್ ಸಿಂಗ್ ಪುನ್ನುನ್‌ ಹೇಳಿಕೆ ಬಂದ ಹಿನ್ನೆಲೆಯಲ್ಲಿ ಬಿಜೆಪಿ ರಾಹುಲ್‌ ಗಾಂಧಿಯನ್ನು ಟೀಕಿಸಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ನಿಜಕ್ಕೂ ಭಾರತದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅವರು ಭಾರತದ ಸಾಮಾಜಿಕ ರಚನೆಯನ್ನು ನಾಶಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅಮಿತ್‌ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

    ಪನ್ನುನ್ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಅಮೆರಿಕ ಮೂಲದ ಸಿಖ್ ಫಾರಿ ಜಸ್ಟಿಸ್‌ನ (ಎಸ್‌ಎಫ್‌ಜೆ) ಮುಖ್ಯಸ್ಥನಾಗಿದ್ದಾನೆ. ಮಾತ್ರವಲ್ಲದೇ ಭಾರತೀಯ ತನಿಖಾ ಸಂಸ್ಥೆಗಳಿಗೆ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದಾನೆ.

     

  • ಟರ್ಬನ್ ಬಿಚ್ಚಿಟ್ಟು, ಸನ್‌ಗ್ಲಾಸ್, ಜಾಕೆಟ್ ತೊಟ್ಟು ದೆಹಲಿ ಬೀದಿಯಲ್ಲಿ ಕಂಡುಬಂದ ಅಮೃತ್‌ಪಾಲ್ ಸಿಂಗ್

    ಟರ್ಬನ್ ಬಿಚ್ಚಿಟ್ಟು, ಸನ್‌ಗ್ಲಾಸ್, ಜಾಕೆಟ್ ತೊಟ್ಟು ದೆಹಲಿ ಬೀದಿಯಲ್ಲಿ ಕಂಡುಬಂದ ಅಮೃತ್‌ಪಾಲ್ ಸಿಂಗ್

    – ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿರೋ ಖಲಿಸ್ತಾನ್ ಹೋರಾಟಗಾರ

    ನವದೆಹಲಿ: ಪಂಜಾಬ್‌ನಿಂದ (Punjab) ಪರಾರಿಯಾಗಿ ಒಂದು ವಾರಕ್ಕೂ ಹೆಚ್ಚು ಕಾಲ ತಲೆಮರೆಸಿಕೊಂಡಿರುವ ಮೂಲಭೂತವಾದಿ ಸಿಖ್ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ (Amritpal Singh) ಇದೀಗ ದೆಹಲಿಯಲ್ಲಿ (Delhi) ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

    ಅಮೃತ್‌ಪಾಲ್ ಸಿಂಗ್ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದು, ತಮ್ಮ ಗುರುತು ಯಾರಿಗೂ ಸಿಗದಂತೆ ವೇಷವನ್ನು ಬದಲಿಸಿ ತಪ್ಪಿಸಿಕೊಳ್ಳುತ್ತಿದ್ದಾನೆ. ಇದೀಗ ದೆಹಲಿ ಬೀದಿಯಲ್ಲಿ ಕಂಡುಬಂದಿರುವ ಸಿಂಗ್ ಟರ್ಬನ್ (Turban) ಅನ್ನು ತೆಗೆದು, ಸನ್‌ಗ್ಲಾಸ್ ಹಾಗೂ ಜಾಕೆಟ್ ಧರಿಸಿ ಓಡಾಡಿದ್ದಾನೆ. ಸಿಸಿಟಿವಿ ದೃಶ್ಯದಲ್ಲಿ ಅಮೃತ್‌ಪಾಲ್ ಸಿಂಗ್ ಜೊತೆಗೆ ಆತನ ಸಹಾಯಕ ಪಾಪಲ್‌ಪ್ರೀತ್ ಸಿಂಗ್ ಕೂಡಾ ಕಾಣಿಸಿಕೊಂಡಿದ್ದಾನೆ. ಇಬ್ಬರೂ ತಮ್ಮ ಗುರುತುಗಳನ್ನು ಮರೆಮಾಚಲು ಮಾಸ್ಕ್‌ಗಳನ್ನು ಧರಿಸಿದ್ದಾರೆ.

    ವರದಿಗಳ ಪ್ರಕಾರ ಈ ಸಿಸಿಟಿವಿ ದೃಶ್ಯ ಮಾರ್ಚ್ 21ನೇ ತಾರೀಖಿನದ್ದಾಗಿದೆ. ಪಂಜಾಬ್‌ನಲ್ಲಿ ಪೊಲೀಸರು ಆತನನ್ನು ಬಂಧಿಸಲು ಕಾರ್ಯಾಚರಣೆ ಪ್ರಾರಂಭಿಸಿರುವ 3 ದಿನಗಳ ಬಳಿಕದ ದೃಶ್ಯಗಳಾಗಿವೆ. ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್

    ಅಮೃತ್‌ಪಾಲ್ ಸಿಂಗ್ ಹಾಗೂ ಪಾಪಲ್‌ಪ್ರೀತ್ ಸಿಂಗ್ ಇಬ್ಬರೂ ಹರಿಯಾಣದ ಕುರುಕ್ಷೇತ್ರದ ಮೂಲಕ ದೆಹಲಿಗೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತ ಇನ್ನು ಕೂಡಾ ದೆಹಲಿಯಲ್ಲಿಯೇ ತಲೆಮರೆಸಿಕೊಂಡಿದ್ದಾನೆಯೇ ಅಥವಾ ಅಲ್ಲಿಂದ ಬೇರೆಡೆಗೆ ಓಡಿಹೋಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

    ಇದೀಗ ನೆರೆಯ ನೇಪಾಳದಲ್ಲಿ ಅಮೃತ್‌ಪಾಲ್ ಸಿಂಗ್‌ನನ್ನು ತನ್ನ ಕಣ್ಗಾವಲು ಪಟ್ಟಿಗೆ ಸೇರಿಸಿದೆ. ಏಕೆಂದರೆ ಆತ ನಕಲಿ ಪಾಸ್‌ಪೋರ್ಟ್ ಬಳಸಿ ಗಡಿ ದಾಟಲು ಯತ್ನಿಸುವ ಸಾಧ್ಯತೆಯಿದೆ. ಕಳೆದ ವಾರದಿಂದ ಆತ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗಿ ಮನೆಯೊಂದರಲ್ಲಿ ಆಶ್ರಯ ಪಡೆದಿರುವುದು ಹಲವು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಸಿಕ್ಕಿವೆ. ಇದನ್ನೂ ಓದಿ: ನೀವು ಮಾಡಿದ್ದೆಲ್ಲಾ ಸಹಿಸಿಕೊಂಡು ಬಿರಿಯಾನಿ ಹಾಕುವ 47ರ ಕಾಲವಲ್ಲ- SDPI ಮುಖಂಡನಿಗೆ ಸಿ.ಟಿ ರವಿ ವಾರ್ನಿಂಗ್

  • ಗಮನ ಸೆಳೆದ ಮೋದಿಯ ರಾಷ್ಟ್ರ ಧ್ವಜ ವಿನ್ಯಾಸದ ಟರ್ಬನ್, ಸಾಂಪ್ರದಾಯಿಕ ಉಡುಗೆ

    ಗಮನ ಸೆಳೆದ ಮೋದಿಯ ರಾಷ್ಟ್ರ ಧ್ವಜ ವಿನ್ಯಾಸದ ಟರ್ಬನ್, ಸಾಂಪ್ರದಾಯಿಕ ಉಡುಗೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮೇಲೆ ಭಾಷಣ ಮಾಡುವಾಗ ಅವರ ಸಾಂಪ್ರದಾಯಿಕ ಉಡುಗೆಯೂ ಪ್ರತಿಬಾರಿಯಂತೆ ಈ ಬಾರಿಯೂ ಜನರ ಗಮನ ಸೆಳೆದಿದೆ.

    ಸ್ವಾತಂತ್ರ್ಯ ದಿನಾಚರಣೆ ಹಾಗೂ ಭಾಷಣಗಳ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ವಿಶಿಷ್ಟ ಉಡುಪುಗಳು ಯಾವಾಗಲೂ ರಾಷ್ಟ್ರದ ಜನತೆಯ ಗಮನವನ್ನು ಸೆಳೆಯುತ್ತವೆ. ಅದೇ ಈ ರೀತಿ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರ ಧ್ವಜದ ಬಣ್ಣವಿರುವ ವಿಶೇಷ ವಿನ್ಯಾಸದ ಬಿಳಿಯ ಟರ್ಬನ್ ತೊಟ್ಟು, ಬಿಳಿ ಜುಬ್ಬಾ- ಪೈಜಾಮ ಹಾಗೂ ಅದರ ಮೇಲೆ ನೀಲಿ ಬಣ್ಣದ ಜಾಕೆಟ್ ತೊಟ್ಟು ಮೋದಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

    ಸ್ವಾತಂತ್ರ್ಯೋತ್ಸವದ ದಿನವಾದ ಇಂದು ಕೆಂಪುಕೋಟೆಯ ಆವರಣದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಅವರು ಧರಿಸಿದ್ದ ಕೆಸರಿ, ಬಿಳಿ, ಹಸಿರು ಬಣ್ಣದ ಟರ್ಬನ್ ಎಲ್ಲರ ಗಮನವನ್ನು ಸೆಳೆಯಿತು. ಸಾಂಪ್ರದಾಯಿಕ ಉಡುಪು ಧರಿಸಿದ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜ ಹಾರಿಸಿ ಸತತ 9ನೇ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಆಡಳಿತವಾಗಲಿ ಕಾಲಕ್ಕೆ ತಕ್ಕಂತೆ ಕೆಲಸ ಮಾಡಬೇಕು: ಮೋದಿ

    ಈ ಸಂದರ್ಭದಲ್ಲಿ ದೇಶದ ಎಲ್ಲ ಭಾಗದಲ್ಲೂ ಒಂದಲ್ಲ ಒಂದು ರೂಪದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತೀಯರು ಧ್ವಜಾರೋಹಣ ಮಾಡುತ್ತಿದ್ದಾರೆ. ಅನಿವಾಸಿ ಭಾರತೀಯರಿಗೂ ನಾನು ಶುಭಾಶಯ ಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ತಿಳಿಸಿದರು. ಇದನ್ನೂ ಓದಿ: ಭಾರತ, ಅಮೆರಿಕ ಆತ್ಮೀಯ ಪಾಲುದಾರರು- ಸ್ವಾತಂತ್ರ್ಯ ದಿನಕ್ಕೆ ಶುಭ ಕೋರಿದ ಬೈಡನ್

    Live Tv

  • ಕೇಸರಿ ಶಾಲು, ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸಿ – ರಾಜಧಾನಿಯಲ್ಲಿ ಟರ್ಬನ್ ಸಂಘರ್ಷ

    ಕೇಸರಿ ಶಾಲು, ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸಿ – ರಾಜಧಾನಿಯಲ್ಲಿ ಟರ್ಬನ್ ಸಂಘರ್ಷ

    ಬೆಂಗಳೂರು: ರಾಜ್ಯದಲ್ಲಿ ಹಿಜಬ್ ಸಂಘರ್ಷದ ನಡುವೆ ಇದೀಗ ರಾಜಧಾನಿಯಲ್ಲಿ ಟರ್ಬನ್ ಚರ್ಚೆ ಭಾರೀ ಸದ್ದು ಮಾಡುತ್ತಿದೆ.

    ಹೈಕೋರ್ಟ್ ಆದೇಶದಂತೆ ವಿದ್ಯಾರ್ಥಿಗಳ ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸಿ ಎಂದು ನಗರದ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರಿನ್ಸಿಪಾಲ್‍ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ; ಗಗನಕ್ಕೇರಿದ ತೈಲ, ಚಿನ್ನದ ಬೆಲೆ – ಭಾರತದ ಶೇರು ಮಾರುಕಟ್ಟೆಯಲ್ಲಿ ತಲ್ಲಣ

    2000ಕ್ಕೂ ಹೆಚ್ಚು ವಿದ್ಯಾರ್ಥಿ ಇರುವ ಈ ಕಾಲೇಜಿನಲ್ಲಿ ಸಿಖ್ ಸಮುದಾಯದ ಒಬ್ಬರು ವಿದ್ಯಾರ್ಥಿನಿ, ಅದು ಸ್ಟೂಡೆಂಟ್ ಯೂನಿಯನ್  ಅಧ್ಯಕ್ಷೆಯಾಗಿರುವ ಯುವತಿ ಮಾತ್ರ ಟರ್ಬನ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಹೀಗಾಗಿ ವಿದ್ಯಾರ್ಥಿಗಳು ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸುವಂತೆ ಕಾಲೇಜ್ ಪ್ರಿನ್ಸಿಪಾಲ್‍ಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್

    ನಂತರ ಪ್ರಿನಿಪಾಲ್ ಮತ್ತು ಆಡಳಿತ ಮಂಡಳಿ ಟರ್ಬನ್ ತೆಗೆಯುವಂತೆ ವಿದ್ಯಾರ್ಥಿನಿಗೆ ಮನವಿ ಮಾಡಿದ್ದಾರೆ. ಬಳಿಕವೂ ವಿದ್ಯಾರ್ಥಿನಿ ಟರ್ಬನ್ ತೆಗೆಯಲ್ಲ ಇದು ಸಿಖ್ ಸಮುದಾಯದ ಸಂಕೇತ ಎಂದು ಹೇಳಿದ್ದಾರೆ. ಕೊನೆಗೆ ಪೋಷಕರಿಗೆ ಟರ್ಬನ್ ತೆಗೆಯಬಹುದಾ ಎಂದು ಮೇಲ್ ಮಾಡಿದ್ದಾರೆ. ಜೊತೆಗೆ ಕಾಲೇಜಿನ ಆಡಳಿತ ಮಂಡಳಿ ಕೂಡ ಟರ್ಬನ್ ತೆಗೆಸಬಹುದೆ ಎಂದು ಕರೆಮಾಡಿ ಕೇಳಿದ್ದಾರೆ. ಇದಕ್ಕೆ ವಿದ್ಯಾರ್ಥಿ ಪೋಷಕರು ಹೈಕೋರ್ಟ್‍ನಲ್ಲಿ ಟರ್ಬನ್ ಬಗ್ಗೆ ಉಲ್ಲೇಖ ಆಗಿಲ್ಲ. ಸಿಖ್ ಸಮುದಾಯದ ಸಂಕೇತವನ್ನು ನಾವು ತೆಗೆಯಲ್ಲ ಎಂದು ಹೇಳಿದ್ದಾರೆ. ಇದೀಗ ವಿದ್ಯಾರ್ಥಿನಿ ಕಾಲೇಜಿಗೆ ಟರ್ಬನ್ ಹಾಕಿಕೊಂಡೇ ಆಗಮಿಸುತ್ತಿದ್ದಾರೆ.

    ಸದ್ಯ ಈ ಕುರಿತಂತೆ ಪ್ರತಿಕ್ರಿಯಿಸಿರುವ ಮೌಂಟ್ ಕಾರ್ಮೆಲ್ ಕಾಲೇಜ್ ಪ್ರಿನ್ಸಿಪಾಲ್ ಭಬಿತಾ ಅವರು, ಹೈಕೋರ್ಟ್ ಆದೇಶವನ್ನು ನಾವು ಪಾಲನೆ ಮಾಡುತ್ತಿದ್ದೇವೆ. ಹೈಕೋರ್ಟ್ ಆದೇಶದಂತೆ ಹಿಜಬ್ ತೆಗೆಸಿ ವಿದ್ಯಾರ್ಥಿಗಳು ಒಳಗಡೆ ಬರುತ್ತಿದ್ದರು. ಈ ವೇಳೆ ಸಿಖ್ ಸಮುದಾಯದ ಒಂದು ವಿದ್ಯಾರ್ಥಿನಿ ಟರ್ಬನ್ ಹಾಕಿದ್ದರು. ನಮ್ಮ ಹಿಜಬ್ ತೆಗೆಸಿದಂತೆ ಅವರ ಟರ್ಬನ್ ತೆಗೆಸಿ ಅಂತ ಇತರೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಟರ್ಬನ್ ಹಾಕಿದ್ದ ವಿದ್ಯಾರ್ಥಿನಿ ನಮ್ಮ ಕಾಲೇಜಿನ ಸ್ಟೂಡೆಂಟ್ ಯೂನಿಯನ್ ನಾ ಪ್ರೆಸಿಡೆಂಟ್ ಆಗಿದ್ದು, ಟರ್ಬನ್ ತೆಗೆಸಿ ಅಂತ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ. ನೀನು ಟರ್ಬನ್ ತೆಗೆಯಲು ಸಾಧ್ಯತೆವೇ ಅಂತ ವಿದ್ಯಾರ್ಥಿಯನ್ನು ಕೇಳಿದೆವು. ನಾನು ಟರ್ಬನ್ ತೆಗೆಯೋಕೆ ಆಗಲ್ಲ ಇದು ನಮ್ಮ ಸಿಖ್ ಸಮುದಾಯದ ಸಂಕೇತ ಎಂದು ಹೇಳಿದ್ದರು. ನಾವು ಅವರ ಪೋಷಕರನ್ನು ಕಾಲೇಜ್‍ಗೆ ಬರಬಹುದ ಅಂತ ಕೇಳಿದೇವು. ಅವರು ನಾವು ಬ್ಯುಸಿ ಇದ್ದೇವೆ ಬರುವುದಕ್ಕೆ ಆಗಲ್ಲ ಅಂದರು. ಹಾಗಾಗಿ ನಾವು ಕರೆ ಮಾಡಿಯೇ ಟರ್ಬನ್ ತೆಗೆಸುವ ಸಾಧ್ಯತೆ ಇದೆಯೇ ಎಂದು ಕೇಳಿದೇವು. ಅದಕ್ಕೆ ವಿದ್ಯಾರ್ಥಿನಿ ಪೋಷಕರು ಕೂಡ ಸಿಖ್ ಧರ್ಮದ ಸಂಕೇತ ತೆಗೆಯಲ್ಲ ಎಂದಿರುವುದಾಗಿ ತಿಳಿಸಿದ್ದಾರೆ.