Tag: ಟಬು ರಾವ್

  • ವ್ಯವಸ್ಥೆ ಬದಲಾಗದ ಹೊರತು ಏನು ಮಾಡಲು ಆಗಲ್ಲ: ಟಬು ರಾವ್

    ವ್ಯವಸ್ಥೆ ಬದಲಾಗದ ಹೊರತು ಏನು ಮಾಡಲು ಆಗಲ್ಲ: ಟಬು ರಾವ್

    ಬೆಂಗಳೂರು: ವ್ಯವಸ್ಥೆ ಬದಲಾಗದ ಹೊರತು ಮಾಡಲು ಆಗುವುದಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಹೇಳಿದ್ದಾರೆ.

    ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿದ ಅವರು ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಪಕ್ಷದ ಕುರಿತಾಗಿ ಹಂಚಿಕೊಂಡಿದ್ದಾರೆ. ಅದರಲ್ಲೂ ಪಂಜಾಬ್‍ನಲ್ಲಿ ಆಮ್ ಆದ್ಮಿ ಪಕ್ಷದ ಗೆಲುವನ್ನು ಬಗ್ಗೆ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣಾ ಫಲಿತಾಂಶ ಕರ್ನಾಟಕ ಕಾಂಗ್ರೆಸ್‌ಗೆ ಪಾಠವಾಗುತ್ತಾ?

    ಟ್ವೀಟ್‍ನಲ್ಲಿ ಏನಿದೆ?
    ಬಿಜೆಪಿಯೂ ಮತ್ತೊಮ್ಮೆ ಎಲ್ಲವನ್ನು ಧೂಳಿಪಟ ಮಾಡಿದೆ. ಆದರೆ ಆಮ್ ಆದ್ಮಿ ಪಕ್ಷವು ಅಸಾಧಾರಣ ಗೆಲುವು ಸಾಧಿಸಿದ್ದು, ನಿಜಕ್ಕೂ ಅರವಿಂದ್ ಕೇಜ್ರಿವಾಲ್ ಅವರು ಸಮರ್ಥ ನಾಯಕರಾಗಿ ಹೊರಹೊಮ್ಮಿದ್ದಾರೆ. ವ್ಯವಸ್ಥೆ ಬದಲಾಗದೇ ಜನರೂ ಎಷ್ಟೇ ಕಷ್ಟ ಪಟ್ಟರೂ ಯಾವುದೇ ಪ್ರಯೋಜನವಿಲ್ಲ. ವ್ಯವಸ್ಥೆ ಬದಲಾಗದ ಹೊರತು ಏನನ್ನು ತರಲಾಗುವುದಿಲ್ಲ ಎಂದು ಕಾಂಗ್ರೆಸ್ ಕುರಿತಾಗಿ ತಿಳಿಸಿದರು. ಇದನ್ನೂ ಓದಿ:  Bulldozer is Back – ಟ್ರೆಂಡ್‌ ಆಯ್ತು ಬುಲ್ಡೋಜರ್‌

  • ‘ಕೈ’ ಪಾಳಯದಲ್ಲಿ ಶುರುವಾಯ್ತು ‘ಟಬು’ ಸುನಾಮಿ – ಟಬು ರಾವ್‍ರಿಂದ ಸ್ಫೋಟಕ ಸತ್ಯ

    ‘ಕೈ’ ಪಾಳಯದಲ್ಲಿ ಶುರುವಾಯ್ತು ‘ಟಬು’ ಸುನಾಮಿ – ಟಬು ರಾವ್‍ರಿಂದ ಸ್ಫೋಟಕ ಸತ್ಯ

    ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಯುದ್ಧ ಜೋರಾಗಿದೆ ಎಂದು ಕೆಪಿಸಿಸಿ ದಿನೇಶ್ ಗುಂಡೂರಾವ್ ಅವರು ಪತ್ನಿ ಟಬು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಕೆಲ ಕಾಂಗ್ರೆಸ್ಸಿಗರು ತಮ್ಮ ಪಕ್ಷದವರಿಗೇ ಹಳ್ಳ ತೋಡಿದ್ದಾರೆ. ಪಕ್ಷದಲ್ಲಿ ಹೊಗಳುಭಟರು, ಚಾಡಿಕೋರರು, ಹಿತ್ತಾಳೆ ಕಿವಿ ನಾಯಕರೇ ತುಂಬಿದ್ದಾರೆ. ಪರಿಣಾಮ ಕಾಂಗ್ರೆಸ್ ಪಕ್ಷದ ಯುವ ಮುಖಂಡರಲ್ಲಿಯೂ ಒಗ್ಗಟ್ಟಿಲ್ಲ. ಇದು ಕಾಂಗ್ರೆಸ್ ಪಕ್ಷದ ಅತೀ ದೊಡ್ಡ ಸಮಸ್ಯೆಯಾಗಿದೆ ಎಂದು ಟಬು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ಸಿದ್ದರಾಮಯ್ಯಗೋಸ್ಕರ ಕಾಂಗ್ರೆಸ್ ಪಕ್ಷವಿಲ್ಲ, ಪಕ್ಷಕ್ಕಾಗಿ ನಾವಿದ್ದೇವೆ: ಮಾಜಿ ಡಿಸಿಎಂ

    ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದು, ಪಕ್ಷದ ಉಳಿವಿಗಾಗಿ ಯುವ ನಾಯಕರಿಗೆ ಅವಕಾಶ ಕೊಡಬೇಕು. ಹಿರಿಯ ಅನುಭವದಿಂದ ಪಕ್ಷ ಲಾಭ ಪಡೆದುಕೊಳ್ಳಬಹುದು. ಆದರೆ ಯುವ ಮತ್ತು ಕ್ರಿಯಾತ್ಮಕ ನಾಯಕರನ್ನ ಮುಂಚೂಣಿಗೆ ತರಬೇಕಿದೆ. ಆ ಮೂಲಕ ಹಿರಿಯ ನಾಯಕರು ಸೈಡಲ್ಲಿ ನಿಂತು ಮಾರ್ಗದರ್ಶನ ನೀಡಬೇಕು ಎಂದು ಟಬು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಓದಿ: ದಿನೇಶ್ ಗುಂಡೂರಾವ್ ಅಯೋಗ್ಯ, ಸಿದ್ದರಾಮಯ್ಯನ ಚೇಲಾ: ಸೋಮಶೇಖರ್ ಕಿಡಿ

    ನಿನ್ನೆಯಷ್ಟೇ ಕೆಪಿಸಿಸಿ ಸಭೆಯಲ್ಲಿ ಹಿರಿಯ ನಾಯಕರ ನಡುವೆ ಜಗಳ ಆಗಿತ್ತು ಎಂಬ ಬಗ್ಗೆ ಟಬು ಅವರ ಪೋಸ್ಟ್ ಪೂರಕವಾಗಿದೆ. ನಿನ್ನೆಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟಬು ಅವರು ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಈ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಮಾತ್ರ ನಿನ್ನೆಯ ಸಭೆಯಲ್ಲಿ ಯಾವುದೇ ರೀತಿಯ ಅಸಮಾಧಾನಕರ ಚರ್ಚೆಗಳು ನಡೆದಿಲ್ಲ ಎಂದು ಹೇಳಿದ್ದಾರೆ.

    ಸದ್ಯ ಟಬು ಅವರ ಈ ಪೋಸ್ಟ್ ಗೆ ಕಾಂಗ್ರೆಸ್ ವಲಯದಿಂದಲೇ ಭಾರೀ ವಿರೋಧ ಕೇಳಿ ಬರುತ್ತಿದ್ದು, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ಟಬು ಯಾರು? ಪದೇ ಪದೇ ಅವರು ಏಕೆ ಪಕ್ಷದ ವಿಚಾರ ಮಾತನಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ದಿನೇಶ್ ಗುಂಡೂರಾವ್ ಅವರ ಅಥವಾ ಟಬು ರಾವ್ ಅವರ ಎಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆದಿದೆ. ಈ ಕುರಿತು ಹೈಕಮಾಂಡ್ ಗಮನಕ್ಕೆ ತರಲು ಮೂಲ ಕಾಂಗ್ರೆಸ್ಸಿಗರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ರಾಜ್ಯದ ಬೆಳವಣಿಗಳ ಬಗ್ಗೆ ಹೈಕಮಾಂಡ್‍ಗೆ ಮಾಹಿತಿ ನೀಡಲು ಮುಂದಾಗಿದ್ದ ಸಂದರ್ಭದಲ್ಲೇ ಟಬು ಅವರ ಈ ಪೋಸ್ಟ್ ಹೊಸ ಅಸ್ತ್ರವಾಗಿ ಲಭಿಸಿದೆ ಎನ್ನಲಾಗಿದೆ. ಇದನ್ನು ಓದಿ: ಸೈಲೆಂಟ್ ಚಕ್ರವ್ಯೂಹ- ಟಗರು ವಿರುದ್ಧ ವಾರ್?

  • ಅಧಿಕಾರವನ್ನು ಅನುಭವಿಸಿದವರೇ ಕೈ ಕೊಟ್ಟರೆ ಹೇಗೆ – ಟಬು ರಾವ್ ಪ್ರಶ್ನೆ

    ಅಧಿಕಾರವನ್ನು ಅನುಭವಿಸಿದವರೇ ಕೈ ಕೊಟ್ಟರೆ ಹೇಗೆ – ಟಬು ರಾವ್ ಪ್ರಶ್ನೆ

    ಬೆಂಗಳೂರು: ರಾಜ್ಯದ ರಾಜಕಾರಣದಲ್ಲಿ ಕ್ಷಿಪ್ರ ಕ್ರಾಂತಿ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಯುರೋಪ್ ಪ್ರವಾಸದಲ್ಲಿದ್ದಾರೆ. ಅವರ ಪತ್ನಿ ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.

    “ಇಂದು ಕರ್ನಾಟಕದಲ್ಲಿ ರಾಜಕೀಯ ಎಂತಹ ದುರಂತ ಪರಿಸ್ಥಿತಿಗೆ ತಲುಪಿದೆ. ಅವಕಾಶವಾದವೂ ಒಂದು ಮಾನದಂಡವಾಗಿದ್ದು, ಅಧಿಕಾರವನ್ನು ಅನುಭವಿಸುವವರು ಈ ರೀತಿ ಕಾಂಗ್ರೆಸ್ಸಿಗೆ ಕೈಕೊಟ್ಟು ಹೋದರೆ ಯಾರನ್ನು ದೂಷಿಸುವುದು. ಇದಕ್ಕೆ ರಾಹುಲ್ ಗಾಂಧಿ ಕಾರಣ ಎಂದು ದೂಷಿಸುವುದೇ ಅಥವಾ ಇದು ಕಾಂಗ್ರೆಸ್ಸಿನಲ್ಲಿರುವ ಜನರ ಗುಣಮಟ್ಟ ಎಂದು ಕೊಳ್ಳುವುದೇ?” ಎಂದು ಪ್ರಶ್ನೆ ಮಾಡಿದ್ದಾರೆ.

     

    ಸಿಎಂ ಅಮೆರಿಕ, ದಿನೇಶ್ ಗುಂಡೂರಾವ್ ಯುರೋಪ್ ಪ್ರವಾಸಕ್ಕೆ ತೆರಳಿದಾಗ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿಯಲ್ಲಿ ಕಾಂಗ್ರೆಸ್ಸಿನ 10, ಜೆಡಿಎಸ್‍ನ ಮೂವರು ಶಾಸಕರು ರಾಜೀನಾಮೆ ನೀಡಿದ್ದಾರೆ. ಈ ಪಟ್ಟಿಗೆ ಮತ್ತಷ್ಟು ಶಾಸಕರು ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಸಿಎಂ ಅಮೆರಿಕದಿಂದ ಬಂದ ಬಳಿಕ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸರ್ಕಾರ ಇರುತ್ತಾ? ಪತನಗೊಳ್ಳುತ್ತಾ ಎನ್ನುವುದು ಗೊತ್ತಾಗಲಿದೆ.