Tag: ಟಫ್ ರೂಲ್ಸ್

  • ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡೋದು ಅನಿರ್ವಾಯ : ಹಾಲಪ್ಪ ಆಚಾರ್

    ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡೋದು ಅನಿರ್ವಾಯ : ಹಾಲಪ್ಪ ಆಚಾರ್

    ಬೀದರ್: ಕೊರೋನಾ ಸಂಖ್ಯೆ ಹೆಚ್ಚಾದ್ರೆ ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡೋದು ಅನಿರ್ವಾಯ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಟಫ್ ರೂಲ್ಸ್ ಸುಳಿವು ನೀಡಿದ್ದಾರೆ.

    corona

    ಪ್ರಗತಿ ಪರಿಶೀಲನಾ ಸಭೆ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಜೀವ ರಕ್ಷಣೆ ಮಾಡೋದು ನಮ್ಮ ಜವಾಬ್ದಾರಿಯಾಗಿದ್ದು ಆ ಜವಾಬ್ದಾರಿ ನಿರ್ವಹಿಸುವ ಸಮಯದಲ್ಲಿ ಅನಿವಾರ್ಯತೆ ಬಂದರೆ ಟಫ್ ರೂಲ್ಸ್ ಜಾರಿ ಮಾಡುತ್ತೆವೆ ಎಂದರು. ಇದನ್ನೂ ಓದಿ: ಕಾನೂನು ಬಾಹಿರ ಚಟುವಟಿಕೆ ಮಾಡಿದವರನ್ನು ಕ್ಷಮಿಸಲು ಸಾಧ್ಯವಿಲ್ಲ: ಹಾಲಪ್ಪ ಆಚಾರ್

    ಸದ್ಯ ಕೊರೊನಾ ಹೋಗಿದೆ ಎಂದು ಜನ ಕೊರೊನಾವನ್ನು ಮರೆತೇ ಬಿಟ್ಟಿದ್ದು ವಿಶ್ವದಲ್ಲಿ ಹಾಗೂ ದೇಶದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ವಿದ್ಯಮಾನಗಳನ್ನು ನಾವು ನೋಡುತ್ತಿದ್ದು ಚೀನಾ 4ನೇ ಅಲೆಗೆ ಸಿಲುಕಿ ಹೇಗೆ ಒದ್ದಾಡುತ್ತಿದೆ ಎಂದು ನೀವು ನೋಡುತ್ತಿದ್ದೀರಿ ಎಂದು ಎಚ್ಚರಿಕೆ ನೀಡಿದರು.

    CORONA-VIRUS.

    ನಮ್ಮಲ್ಲಿ ಕೂಡಾ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ದ್ವಿಗುಣವಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡೋದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಸರ್ಕಾರ ಪ್ರಾಥಮಿಕ ಹಂತವಾಗಿ ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ ಎಂದರು. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ – ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿ

    ಇನ್ನೂ ಪಿಎಸ್‍ಐ ಅಕ್ರಮ ನೇಮಕಾತಿಯ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ನಾಪತ್ತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ದಿವ್ಯ ಹಾಗರಗಿ ಎಷ್ಟು ದಿನ ತಪ್ಪಿಸಿಕೊಳ್ಳೊಕೆ ಆಗುತ್ತೆ? ಭೂಮಿ ಒಳಗಡೆ ಶಾಶ್ವತವಾಗಿ ಅಲ್ಲೆ ಇರೋಕೆ ಆಗುತ್ತಾ? ಇಂದಿನ ಅಡ್ವಾನ್ಸ್ ಯುಗದಲ್ಲಿ ಮೊಬೈಲ್ ಟ್ರಾಕ್ ಮಾಡಿ ಹಿಡಿಯುತ್ತಾರೆ ಎಂದು ಹೇಳಿದರು.

  • ಬಳ್ಳಾರಿಯಲ್ಲಿ ಇಂದಿನಿಂದ ಟಫ್‍ರೂಲ್ಸ್- ಜನವರಿ 31ರವರೆಗೆ ದೇವಸ್ಥಾನ, ಚರ್ಚ್, ಮಸೀದಿ ಬಂದ್

    ಬಳ್ಳಾರಿಯಲ್ಲಿ ಇಂದಿನಿಂದ ಟಫ್‍ರೂಲ್ಸ್- ಜನವರಿ 31ರವರೆಗೆ ದೇವಸ್ಥಾನ, ಚರ್ಚ್, ಮಸೀದಿ ಬಂದ್

    ಬಳ್ಳಾರಿ: ಗಣಿನಾಡು ಬಳ್ಳಾರಿ ಇದೀಗ ಕೊರೊನಾ ಮಾಹಾಮಾರಿಯ ಬಲೆಯಲ್ಲಿ ಸಿಕ್ಕಿ ನರಳುತ್ತಿದೆ. ಹೀಗಾಗಿ ರಾಜ್ಯದಲ್ಲಿ ಇರೋ ರೂಲ್ಸ್‍ಗಿಂತ ಟಫ್ ಆಗಿ ಬಳ್ಳಾರಿಯಲ್ಲಿ ರೂಲ್ಸ್ ಜಾರಿ ಮಾಡಲಾಗಿದೆ. ಇಂದಿನಿಂದ ಜಿಲ್ಲೆಯಲ್ಲಿ ಪ್ರತ್ಯೇಕ ರೂಲ್ಸ್ ಜಾರಿಯಾಗ್ತಿದೆ.

    ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಯಲ್ಲಿ ಕೊರೊನಾ ಕೇಕೆ ಹಾಕ್ತಿದೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 568 ಪಾಸಿಟಿವ್ ಕೇಸ್ ಬಂದಿವೆ. ಸದ್ಯ ಜಿಲ್ಲೆಯ ಪಾಸಿಟಿವಿಟಿ ರೇಟ್ 15ರಷ್ಟಿದೆ. ಹೀಗಿರುವಾಗ ಜಿಲ್ಲಾಡಳಿತ ಜಿಲ್ಲೆಗೆ ಇಂದಿನಿಂದ ಪ್ರತ್ಯೇಕ ನಿಯಮ ಜಾರಿ ಮಾಡಿದೆ. ರಾಜ್ಯ ಸರ್ಕಾರದ ಗೈಡ್‍ಲೈನ್ಸ್ ಜೊತೆಗೆ ಬಳ್ಳಾರಿ ಜಿಲ್ಲಾಡಳಿತ ಮತ್ತಷ್ಟು ಬಿಗಿ ನಿಯಮ ಜಾರಿ ಮಾಡಿದೆ. ಇಂದಿನಿಂದ ಜ.23ರವರೆಗೆ ಶಾಲಾ-ಕಾಲೇಜು, ವಿವಿ ಬಂದ್ ಆಗಲಿದೆ. ಜ.31ರವರೆಗೆ ದೇವಸ್ಥಾನ, ಚರ್ಚ್, ಮಸೀದಿ ಬಂದ್, ಜ.31ರವರೆಗೆ ಈಜುಕೊಳ, ಥಿಯೇಟರ್ ಕ್ಲೋಸ್, ಮದುವೆಗೆ ಕೇವಲ 50 ಜನರಿಗೆ ಅವಕಾಶ ನೀಡಲಾಗುತ್ತಿದೆ. ಯಾವುದೇ ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲ.

    ಪ್ರಮುಖವಾಗಿ ಪ್ರಾರ್ಥನಾ ಮಂದಿರಗಳಿಗೆ ಬೀಗ ಹಾಕಿರೋ ಜಿಲ್ಲಾಡಳಿತ ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇಷ್ಟು ಮಾತ್ರವಲ್ಲದೇ ನೈಟ್‍ಕಫ್ರ್ಯೂನಲ್ಲೂ ಬದಲಾವಣೆ ಮಾಡಿದೆ. ಇನ್ನು ರಾಜ್ಯದಲ್ಲಿ ನೈಟ್‍ ಕರ್ಫ್ಯೂ ಸಮಯ ಬದಲಾವಣೆ ಮಾತು ಕೇಳಿಬರ್ತಿರೋವಾಗಲೇ ಬಳ್ಳಾರಿಯಲ್ಲಿ ಮೊದಲು ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇಂದಿನಿಂದ ನೈಟ್ ಕರ್ಫ್ಯೂ ಸಮಯದಲ್ಲಿ ಬದಲಾವಣೆ ಆಗಲಿದೆ. ರಾತ್ರಿ 8 ಗಂಟೆಯಿಂದಲೇ ನೈಟ್‍ ಕರ್ಫ್ಯೂ ಆರಂಭವಾಗಲಿದ್ದು, ಬೆಳಗ್ಗೆ 6 ಗಂಟೆವರೆಗೂ ನೈಟ್ ಕರ್ಫ್ಯೂ ಇರಲಿದೆ. ಇದನ್ನೂ ಓದಿಸಾಕುನಾಯಿಯ ಹುಟ್ಟುಹಬ್ಬಕ್ಕೆ 13 ಸಾವಿರ ರೂ. ಹಾಸಿಗೆ ಗಿಫ್ಟ್ ಕೊಟ್ಟ ಮಾಲೀಕ!

    ಇನ್ನು ಥಿಯೇಟರ್ ಬಂದ್ ಮಾಡೋದು ಚಿತ್ರಮಂದಿರ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ 50-50 ರೂಲ್ಸ್ ಇದೆ. ಆದ್ರೆ ಬಳ್ಳಾರಿ ಜಿಲ್ಲೆಯಲ್ಲಿ ಇಂದಿನಿಂದ ಚಿತ್ರಮಂದಿರ ಕ್ಲೋಸ್ ಮಾಡಲು ಜಿಲ್ಲಾಡಳಿತ ಆದೇಶ ನೀಡಿದೆ. ಹೀಗಿರುವಾಗ ಚಿತ್ರಮಂದಿರ ನಂಬಿ ಜಿಲ್ಲೆಯಲ್ಲಿ ಸುಮಾರು 1000 ರಿಂದ 1500 ಜನ ಇದಾರೆ. ಈ ಆದೇಶನ ಪರಿಶೀಲನೆ ಮಾಡಬೇಕು ಅಂತಾ ಚಿತ್ರಮಂದಿರ ಮಾಲೀಕರ ಆಗ್ರಹಿಸಿದ್ದಾರೆ. ಒಟ್ಟಾರೆ ಬಳ್ಳಾರಿ ಜಿಲ್ಲೆಯಲ್ಲಿ ಇಂದಿನಿಂದ ಕಠಿಣ ರೂಲ್ಸ್ ಜಾರಿಯಲ್ಲಿರಲಿದೆ. ಜಿಲ್ಲಾಡಳಿತ ಜಾರಿ ಮಾಡಿದ ಆದೇಶ ಎಷ್ಟರ ಮಟ್ಟಿಗೆ ಪಾಲನೆ ಆಗತ್ತೆ ಅನ್ನೋದನ್ನ ಕಾದು ನೋಡಬೇಕು.

  • ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ – ಶನಿವಾರ, ಭಾನುವಾರ ಕಂಪ್ಲೀಟ್‌  ಬಂದ್

    ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ – ಶನಿವಾರ, ಭಾನುವಾರ ಕಂಪ್ಲೀಟ್‌ ಬಂದ್

    ನವದೆಹಲಿ: ಕೊರೊನಾ, ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೆ ಮುಂದಾಗಿದೆ.

    ದೆಹಲಿಯಲ್ಲಿ ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ, ಭಾನುವಾರ ಕಂಪ್ಲಿಟ್ ಬಂದ್ ಇರಲಿದೆ. ವಾಣಿಜ್ಯ ಚಟುವಟಿಕೆಗಳಿಗೆ ಶೇ. 50 ರಷ್ಟು ಮಾತ್ರ ಅವಕಾಶವನ್ನು ನೀಡಲಾಗಿದೆ. ಕೋವಿಡ್ ನಿಂದಾಗಿ ಕೇಂದ್ರದ ಶೇ. 50 ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ನೀಡಲಾಗಿದೆ. ಕಾರ್ಯದರ್ಶಿ ರ‍್ಯಾಂಕ್‌ಗಿಂತ ಕೆಳಗಿನ ಶೇ.50 ರಷ್ಟು ಮಂದಿಗೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಈ ಪ್ರಕಾರ ದಿವ್ಯಾಂಗರು, ಗರ್ಭಿಣಿಯರು ಕಚೇರಿಗೆ ಹಾಜರಾಗುವುದರಿಂದ ವಿನಾಯ್ತಿ ನೀಡಲಾಗಿದೆ.

    ಕಂಟೈನ್ಮೆಂಟ್ ವಲಯದ ಸಿಬ್ಬಂದಿ ಆ ವಲಯಗಳನ್ನು ಕೋವಿಡ್ ಕಂಟೈನ್ಮೆಂಟ್ ಮುಕ್ತವಾಗಿಸುವವರೆಗೆ ಕಚೇರಿಗೆ ಬರುವಂತಿಲ್ಲ. ಕಚೇರಿಯಲ್ಲಿ ಹೆಚ್ಚಿನ ಜನದಟ್ಟಣೆ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕಚೇರಿಯ ಒಟ್ಟಾರೆ ಸಂಖ್ಯೆಯ ಶೆ. 50 ರಷ್ಟು ಮಂದಿಗೆ ಮಾತ್ರವೇ ಕಚೇರಿಯಲ್ಲಿರಬೇಕು. ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಕೊರೊನಾ

    ಕಳೆದ 24 ಗಂಟೆಗಳಲ್ಲಿ 4,099 ಹೊಸ ಕೇಸ್‍ಗಳು ಪತ್ತೆಯಾಗಿದೆ. ದೆಹಲಿಯ ಪಾಸಿಟಿವ್ ರೆಟ್ ಶೇ.6.46ಕ್ಕೆ ಏರಿದೆ. 6,288 ಕೊರೊನಾ ಸೋಂಕಿತರು ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದವರು ಹೋಂ ಐಸೋಲೇಶನ್‍ಲ್ಲಿ ಇದ್ದಾರೆ. ದೆಹಲಿಯಲ್ಲಿ ನಿನ್ನೆ ದಾಖಲೆ ಮಟ್ಟದಲ್ಲಿ ಕೊರೊನಾ ಸಾವಿನ ಸಂಖ್ಯೆ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂವನ್ನು ಸರ್ಕಾರ ಜಾರಿ ಮಾಡಿದೆ. ಇದನ್ನೂ ಓದಿ: ಕೇಂದ್ರದ ಶೆ.50ರಷ್ಟು ಸಿಬ್ಬಂದಿಗೆ ವರ್ಕ್ ಫ್ರಂ ಹೋಂ

    ದೆಹಲಿ ಸರ್ಕಾರ ನಾಲ್ಕು ಬಣ್ಣಗಳಲ್ಲಿ ಕೊರೊನಾ ಅಪಾಯ ಗುರುತಿಸಿದೆ. ಸೋಂಕಿನ ಪ್ರಮಾಣ ಆಧರಿಸಿ ನಾಲ್ಕು ಹಂತಗಳಲ್ಲಿ ವಿಭಾಗವನ್ನು ಮಾಡಲಾಗಿದೆ. ಹಳದಿ, ಹಳದಿ ಮತ್ತು ಕಿತ್ತಳೆ ಮಿಶ್ರಣ, ಕಿತ್ತಳೆ ಮತ್ತು ರೆಡ್ ಝೋನ್ ಆಗಿ ವಿಂಗಡಿಸಲಾಗಿದೆ. ಸೋಂಕಿನ ಪ್ರಮಾಣ 0.5% ರಷ್ಟಿದ್ದರೇ ಹಳದಿ, 1-2 % ನಷ್ಟಿದ್ದರೇ ಹಳದಿ ಮತ್ತು ಕಿತ್ತಳೆ ಮಿಶ್ರಿತ ಬಣ್ಣ2-5% ವರೆಗೂ ಕಿತ್ತಳೆ, 5% ಹೆಚ್ಚಿದ್ದರೆ ರೆಡ್ ಝೋನ್ ಎಂದು ವಿಭಾಗಿಸಿದೆ. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆ ಶುರುವಾಗಿದೆ. ಟಫ್ ರೂಲ್ಸ್ ಜಾರಿಗೆ ರಾಜ್ಯ ಸರ್ಕಾರದ ಚಿಂತನೆ ಮಾಡುತ್ತಿದ್ದು, ಇಂದು ತಜ್ಞರ ಸಭೆ ಬಳಿಕ ಕಠಿಣ ನಿಯಮಗಳ ಜಾರಿಗೆ ತರಲು ಸರ್ಕಾರ ತಯಾರಿ ನೆಡೆಸಿದೆ. ದೆಹಲಿ, ಮಹಾರಾಷ್ಟ್ರ ಮಾಡೇಲ್ ಆಧರಿಸಿ ರಾಜ್ಯದಲ್ಲಿ ನಿಯಮಗಳು ಜಾರಿ ಸಾಧ್ಯತೆ ಇದೆ.

  • ಓಮಿಕ್ರಾನ್ ತಡೆಗೆ ರಾಜ್ಯದಲ್ಲಿ ಕಟ್ಟೆಚ್ಚರ – ಇಂದು ಸುಧಾಕರ್ ನೇತೃತ್ವದಲ್ಲಿ ಸಭೆ

    ಓಮಿಕ್ರಾನ್ ತಡೆಗೆ ರಾಜ್ಯದಲ್ಲಿ ಕಟ್ಟೆಚ್ಚರ – ಇಂದು ಸುಧಾಕರ್ ನೇತೃತ್ವದಲ್ಲಿ ಸಭೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೊಸ ತಳಿ ಓಮಿಕ್ರಾನ್ ಭೀತಿ ಶುರುವಾಗಿರುವ ಹಿನ್ನೆಲೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ  ಡಾ.ಕೆ.ಸುಧಾಕರ್ ಇಂದು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಲಿದ್ದಾರೆ.

    ಈಗಾಗಲೇ ಸೋಂಕು ತಡೆಗಟ್ಟಲು ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಸಭೆ ಬಳಿಕ ಸುಧಾಕರ್ ಅವರು ಮತ್ತಷ್ಟು ಟಫ್ ರೂಲ್ಸ್ ಜಾರಿ ಮಾಡುವ ಸಾಧ್ಯತೆ ಇದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಯಾವ ರೀತಿಯ ಟಫ್ ರೂಲ್ಸ್ ಜಾರಿಯಾಗಬಹುದು ಎಂಬುವುದಕ್ಕೆ ಈ ಕೆಳಗೆ ನೀಡಿರುವ ಪಟ್ಟಿಯನ್ನು ಕಾಣಬಹುದಾಗಿದೆ. ಇದನ್ನೂ ಓದಿ:  ಕರ್ನಾಟಕ ರತ್ನ ಅಪ್ಪು ಅಗಲಿ ನಾಳೆಗೆ 1 ತಿಂಗಳು- ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

    * ಕೇರಳ, ಮಹಾರಾಷ್ಟ್ರ ಗಡಿಜಿಲ್ಲೆಗಳಲ್ಲಿ ಕಟ್ಟೆಚ್ಚರ
    * ಗಡಿಜಿಲ್ಲೆಗಳಲ್ಲಿ ನಿಗಾ ವಹಿಸಲು ವಿಶೇಷ ತಂಡ ರಚನೆ ಸಾಧ್ಯತೆ
    * ಕೇರಳ, ಮಹಾರಾಷ್ಟ್ರದಿಂದ ಬರುವವರ ಮೇಲಿನ ನಿಗಾಕ್ಕೆ ವಿಶೇಷ ತಂಡ (ಆರ್‍ಟಿಪಿಸಿಆರ್ ರಿಪೋರ್ಟ್ ಪರಿಶೀಲನೆಗೆ)
    * 2ನೇ ಡೋಸ್ ಪಡೆಯಲು ವಿಶೇಷ ಕಾರ್ಯ ರೂಪಿಸುವುದು
    * ಗಡಿಭಾಗದ ಶಾಲಾ-ಕಾಲೇಜುಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚೆ
    * ಹಾಸ್ಟೆಲ್‍ಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ
    * ಮನೋರಂಜನಾ ಚಟುವಟಿಕೆಗಳಿಗೆ ಬಿಗಿಕ್ರಮ ಸಾಧ್ಯತೆ
    * ಸಭೆ ಸಮಾರಂಭಗಳಿಗೆ ಮತ್ತಷ್ಟು ಬಿಗಿಕ್ರಮ ಸಾಧ್ಯತೆ
    * ಜನಸಂದಣಿ ಪ್ರದೇಶಗಳಲ್ಲಿ ಟಫ್‍ರೂಲ್ಸ್
    * ಜಿಮ್, ಥಿಯೇಟರ್, ಹೋಟೆಲ್‍ಗೆ ಕಠಿಣ ನಿಯಮ?
    * ಮಾರುಕಟ್ಟೆ, ಕ್ರೀಡಾ ಚಟುವಟಿಕೆಗಳಿಗೆ ಬಿಗಿನಿಯಮ ಜಾರಿ
    * ಎಲ್ಲಾ ಕಡೆ ಟೆಸ್ಟಿಂಗ್ ಹೆಚ್ಚಿಸುವುದು
    * ಕೊರೋನಾ ಹೆಚ್ಚಿರುವ ಕಡೆ ಹೆಚ್ಚು ಟೆಸ್ಟ್‍ಗೆ ಸೂಚನೆ?
    * ಸರ್ಕಾರಿ ಕಚೇರಿ, ಖಾಸಗಿ ಕಂಪನಿಗಳಲ್ಲಿ ಮತ್ತಷ್ಟು ಕಠಿಣ ನಿಯಮ ಸಾಧ್ಯತೆ
    * ಕ್ರಿಸ್‍ಮಸ್, ಹೊಸವರ್ಷಕ್ಕೆ ಕಠಿಣ ನಿಯಮ ಜಾರಿ ಸಾಧ್ಯತೆ

    ರಾಜ್ಯದಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದ್ದು, 3ನೇ ಅಲೆ ತಡೆಗೆ ಇನ್ನಷ್ಟು ಕಠಿಣ ರೂಲ್ಸ್ ಜಾರಿಗೊಳಿಸಲು ಸರ್ಕಾರಕ್ಕೆ ತಜ್ಞರು ಕೂಡ ಸೀಕ್ರೆಟ್ ರಿಪೋರ್ಟ್ ಸಲ್ಲಿಸಿದ್ದಾರೆ.
    * ವಿದೇಶದಿಂದ ಬರೋ ಪ್ರಯಾಣಿಕರ ಮೇಲೆ ವಿಶೇಷ ನಿಗಾ
    * ಕ್ವಾರಂಟೈನ್, ಟೆಸ್ಟ್ ರಿಸಲ್ಟ್ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸುವುದು
    * ಕೋವಿಡ್ ಟೆಸ್ಟ್‍ಗಳ ಸಂಖ್ಯೆ ಹೆಚ್ಚಿಸುವುದು
    * ವಿಶೇಷ ಗುಂಪುಗಳನ್ನ ಮಾಡಿ ದಿನಕ್ಕೆ 60 ಸಾವಿರದಿಂದ 80 ಸಾವಿರ ಟೆಸ್ಟ್
    * ಕ್ಲಸ್ಟರ್‍ಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು
    * ದಕ್ಷಿಣ ಆಫ್ರಿಕಾ, ಬೋಟ್ಸಾವಾನಾ, ಹಾಂಕಾಂಗ್‍ನಿಂದ ಬರುವವರು ಕಟ್ಟುನಿಟ್ಟಾಗಿ ರೂಲ್ಸ್ ಪಾಲಿಸಬೇಕು
    * ಕೊರೋನಾ ಲಸಿಕೆ ಕಡ್ಡಾಯಗೊಳಿಸೋದು
    * ಸಾರ್ವಜನಿಕ ಸಭೆಗಳಿಗೆ ಜನರ ಮಿತಿ ಬಗ್ಗೆ ನಿರ್ಧರಿಸುವ ಸಾಧ್ಯತೆ

  • ರಾಜ್ಯಕ್ಕೆ ಬೇರೆ ನಿಯಮ, ಬೆಂಗಳೂರಿಗೆ ಲಾಕ್ ರೂಲ್ಸ್: ಆರ್.ಅಶೋಕ್

    ರಾಜ್ಯಕ್ಕೆ ಬೇರೆ ನಿಯಮ, ಬೆಂಗಳೂರಿಗೆ ಲಾಕ್ ರೂಲ್ಸ್: ಆರ್.ಅಶೋಕ್

    ಬೆಂಗಳೂರು: ಸಂಪೂರ್ಣ ಲಾಕ್‍ಡೌನ್ ಮಾಡುವ ಕುರಿತು ರಾಜ್ಯ ಸರ್ಕಾರ ಹಿಂದೇಟು ಹಾಕಿದ್ದು, ಇದಕ್ಕೆ ಬದಲಾಗಿ ಇಡೀ ರಾಜ್ಯಕ್ಕೇ ಬೇರೆ ನಿಯಮ ಹಾಗೂ ಬೆಂಗಳೂರಿನಲ್ಲಿ ಲಾಕ್‍ಡೌನ್ ಬದಲು ಲಾಕ್ ರೂಲ್ಸ್ ಜಾರಿಗೆ ತರಲು ನಿರ್ಧರಿಸಿದೆ. ಹೀಗಾಗಿ ಲಾಕ್ ರೂಲ್ಸ್ ಜಾರಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

    ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ನಾಳೆ ಸಂಜೆ ಸಿಎಂ ಜೊತೆ ಚರ್ಚೆ ಮಾಡಿ ಟಫ್ ರೂಲ್ಸ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯಕ್ಕೆ ಕಾಮನ್ ರೂಲ್ಸ್ ಇರುತ್ತೆ. ಆದರೆ ಬೆಂಗಳೂರಿಗೆ ಪ್ರತ್ಯೇಕ ಬಿಗಿ ರೂಲ್ಸ್ ಇರುತ್ತೆ. ಯಾವ ರೀತಿಯ ರೂಲ್ಸ್ ಎನ್ನುವುದನ್ನು ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡತ್ತೇವೆ. ನಾಳೆ ಬೆಂಗಳೂರು, ಸಚಿವರು, ಶಾಸಕರ ಸಭೆ ಬಳಿಕ ಸಿಎಂ ಜೊತೆಯೂ ಪ್ರತ್ಯೇಕವಾಗಿ ದೂರವಾಣಿ ಮೂಲಕ ಮಾತುಕತೆ ನಡೆಸುತ್ತೇವೆ ಎಂದರು. ಈ ಮೂಲಕ ಮಂಗಳವಾರದಿಂದ ಟಫ್ ರೂಲ್ಸ್ ಜಾರಿಗೆ ಬರುತ್ತೆ ಎಂಬ ಮುನ್ಸೂಚನೆ ನೀಡಿದರು. ಇದನ್ನೂ ಓದಿ: ಲಾಕ್‌ಡೌನ್ ಮಾಡಲ್ಲ, ಬೆಂಗಳೂರಿನಲ್ಲಿ ಕಠಿಣ ಕ್ರಮ ಜಾರಿ – ಸುಧಾಕರ್

    ಸಿನಿಮಾ ಹಾಲ್, ಜಿಮ್, ಮಾರ್ಕೆಟ್, ಮದುವೆ, ಸಮಾರಂಭಗಳಿಗೂ ಬ್ರೇಕ್ ಹಾಕಬೇಕಾಗುತ್ತೆ. ಜನರು ಕೂಡ ಸರ್ಕಾರದ ಟಫ್ ರೂಲ್ಸ್ ಗೆ ಸಹಕರಿಸಬೇಕು. ಕಳೆದ ಲಾಕ್‍ಡೌನ್ ನಿಂದ ಇನ್ನೂ ಸುಧಾರಿಸಿಕೊಳ್ಳಲು ಆಗಿಲ್ಲ, ಹಲವು ಅಂಗಡಿಗಳು ಮುಚ್ಚಿವೆ. ಹೀಗಾಗಿ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಸರ್ಕಾರ ರೂಲ್ಸ್ ಜಾರಿಗೆ ತರುತ್ತೆ. ಅಲ್ಲದೆ ಬೇರೆ ದೇಶಗಳಲ್ಲಿ ಈಗಾಗಲೇ 3ನೇ ಅಲೆ ಶುರುವಾಗಿದೆ. ಇಂದು ನಾವು, ಮಾಸ್ಕ್ ಧರಿಸಿ, ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ 3ನೇ ಅಲೆ ತಡೆಯಬಹದು. ಇಲ್ಲವಾದಲ್ಲಿ 3ನೇ ಅಲೆ ಇನ್ನೂ ಕಷ್ಟವಾಗುತ್ತದೆ ಎಂದು ತಿಳಿಸಿದರು.

    ಈ ಮೂಲಕ ಪೂರ್ಣ ಪ್ರಮಾಣದ ಲಾಕ್ ಡೌನ್‍ಗೆ ಸರ್ಕಾರ ಹಿಂದೇಟು ಹಾಕಿದ್ದು, ವಿನಾಯಿತಿ ನೀಡಿ ಲಾಕ್ ರೂಲ್ಸ್ ಜಾರಿಗೆ ತರಲು ಮುಂದಾಗಿದೆ. ಬೆಂಗಳೂರಲ್ಲಿ ವಿನಾಯಿತಿ ಲಾಕ್ ರೂಲ್ಸ್ ಜಾರಿ ಬಹುತೇಕ ಖಚಿತವಾಗಿದೆ.