Tag: ಟಗರು ಸಿನಿಮಾ

  • ಮದುವೆಯ ಬಳಿಕ ಪತಿ ಜೊತೆ ಬಾಲಿಯಲ್ಲಿ ಮಾನ್ವಿತಾ

    ಮದುವೆಯ ಬಳಿಕ ಪತಿ ಜೊತೆ ಬಾಲಿಯಲ್ಲಿ ಮಾನ್ವಿತಾ

    ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಮದುವೆಯ ಬಳಿಕ ಪತಿ ಜೊತೆ ಬಾಲಿಗೆ ಹಾರಿದ್ದಾರೆ. ಬಾಲಿಯಲ್ಲಿ (Bali) ತೆಗೆದ ಸುಂದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಗೂಢಚಾರಿ’ ಚಿತ್ರಕ್ಕೆ 6 ವರ್ಷದ ಸಂಭ್ರಮ- ಸೀಕ್ವೆಲ್ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್‌ ಅಪ್‌ಡೇಟ್

    ನವದಂಪತಿ ಮಾನ್ವಿತಾ ಮತ್ತು ಅರುಣ್ ಜೋಡಿ ಬಾಲಿಯಲ್ಲಿ ಕಾಫಿ ಕಿಚನ್ ಸೇರಿದಂತೆ ಹಲವು ಕಡೆ ಭೇಟಿ ಕೊಟ್ಟಿದ್ದಾರೆ. ಪತಿ ಜೊತೆ ಚೆಂದದ ಫೋಟೋ ಕ್ಲಿಕ್ಕಿಸಿಕೊಂಡು ನಟಿ ಸಂಭ್ರಮಿಸಿದ್ದಾರೆ. ಮದುವೆಯ ನಂತರ ಗೋವಾ, ಥೈಲ್ಯಾಂಡ್ ಸೇರಿದಂತೆ ಹಲವು ಕಡೆ ಪ್ರವಾಸ ಕೈಗೊಂಡಿದ್ದಾರೆ. ಸದ್ಯ ಈ ಜೋಡಿಯ ಕಲರ್‌ಫುಲ್‌ ಫೋಟೋ ನೋಡಿ, ಇವರ ಮೇಲೆ ಯಾರ್‌ ಕಣ್ಣು ಬೀಳದೇ ಇರಲಿ ಎಂದು ಫ್ಯಾನ್ಸ್‌ ಆಶಿಸುತ್ತಿದ್ದಾರೆ.

    ಅಂದಹಾಗೆ, ಮೇ 1ರಂದು ಅರುಣ್ ಜೊತೆ ಮಾನ್ವಿತಾ ಕಾಮತ್ ಮದುವೆಯಾದರು. ಅಮ್ಮನ ಆಸೆಯಂತೆಯೇ ಅವರು ಮೆಚ್ಚಿದ ಹುಡುಗನನ್ನೇ ನಟಿ ಹೊಸ ಬಾಳಿಗೆ ಕಾಲಿಟ್ಟರು. ಈಗ ವೈವಾಹಿಕ ಜೀವನ ಮತ್ತು ಕೆರಿಯರ್ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

    ಸದ್ಯ ಮಾನ್ವಿತಾ ನಟನೆಯ ‘ರಾಜಸ್ತಾನ ಡೈರೀಸ್’ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದು ಕನ್ನಡದ ಜೊತೆ ಮರಾಠಿಯಲ್ಲೂ ರಿಲೀಸ್ ಆಗಲಿದೆ. ಪೃಥ್ವಿ ಅಂಬರ್ ಜೊತೆ ‘ಹ್ಯಾಪಿಲಿ ಮ್ಯಾರೀಡ್’ ಸಿನಿಮಾದಲ್ಲಿ ನಾಯಕಿಯಾಗಿ ಮಾನ್ವಿತಾ ನಟಿಸಿದ್ದಾರೆ.

  • ‘ಟಗರು’ ಬ್ಯೂಟಿ ಮಾನ್ವಿತಾ ಮದುವೆಯ ಸುಂದರ ಫೋಟೋಗಳು

    ‘ಟಗರು’ ಬ್ಯೂಟಿ ಮಾನ್ವಿತಾ ಮದುವೆಯ ಸುಂದರ ಫೋಟೋಗಳು

    ಸ್ಯಾಂಡಲ್‌ವುಡ್ (Sandalwood) ನಟಿ ಮಾನ್ವಿತಾ ಕಾಮತ್ (Manvita Kamath) ಮೇ 1ರಂದು ಚಿಕ್ಕಮಗಳೂರಿನ ಕಳಸದ ದೇವಸ್ಥಾನವೊಂದರಲ್ಲಿ ಅದ್ಧೂರಿಯಾಗಿ ಮದುವೆ ಜರುಗಿದೆ. ಟಗರು ನಟಿಯ ಮದುವೆ ಸುಂದರ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಕೊಂಕಣಿ ಸಾಂಪ್ರದಾಯದಂತೆ ಮಾನ್ವಿತಾ- ಅರುಣ್ ಕುಮಾರ್ (Arun Kumar) ಮದುವೆ ಜರುಗಿದೆ. ಮಾನ್ವಿತಾರ ಕುಟುಂಬಸ್ಥರು ಮತ್ತು ಆಪ್ತರಷ್ಟೇ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ

    ಮಾನ್ವಿತಾ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ವರ ಅರುಣ್ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಂಗೊಳಿಸಿದ್ದಾರೆ. ಸಿಂಪಲ್ ಮೇಕಪ್‌ನಲ್ಲಿ ನಟಿ ಕಂಗೊಳಿಸಿದ್ದಾರೆ.

    ಮದುವೆ ಸಂಭ್ರಮದಲ್ಲಿ ನಿಧಿ ಸುಬ್ಬಯ್ಯ, ಶ್ರುತಿ ಹರಿಹರನ್, ಅನುಶ್ರೀ, ನಿರಂಜನ್ ದೇಶಪಾಂಡೆ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇದನ್ನೂ ಓದಿ:‘ರುದ್ರ ಗರುಡ ಪುರಾಣ’ ಫಸ್ಟ್ ಲುಕ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

    ಅಂದಹಾಗೆ, ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ. ನನ್ನ ಮದುವೆ ನೋಡೋದು ಅಮ್ಮನ ಕನಸಾಗಿತ್ತು. ಅದರಂತೆಯೇ ಮದುವೆ ನೆರವೇರುತ್ತಿದೆ ಎನ್ನುತ್ತಾರೆ ಮಾನ್ವಿತಾ. ನನ್ನ ಅಮ್ಮ ನನ್ನ ಮದುವೆ ಪ್ರೊಫೈಲ್ ಅನ್ನು ನಮ್ಮ ಸಮುದಾಯದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿದ್ದರು.

    ಆಗ ಅರುಣ್ ತಾಯಿಗೆ ನಮ್ಮ ತಾಯಿ ನಿಧನದ ಬಗ್ಗೆ ತಿಳಿದಿರಲಿಲ್ಲ. ಅವರು ನಮ್ಮನ್ನು ತಲುಪಲು ತುಂಬ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ನನ್ನ ನಂಬರ್ ಪಡೆದುಕೊಂಡು ಕರೆ ಮಾಡಿದ್ದಾರೆ. ಈಗ ಇದೆಲ್ಲವೂ ಸಾಧ್ಯವಾಗಿದೆ ಎಂದು ಖುಷಿಯಿಂದ ಹೇಳಿದ್ದರು ಮಾನ್ವಿತಾ. ಮದುವೆ ಸುದ್ದಿ ಸಂಭ್ರಮದ ನಡುವೆ ಮತ್ತೊಂದು ವಿಶೇಷ ಅಂದರೆ, ಮಾನ್ವಿತಾ ತಾಯಿ ಸುಜಾತಾ ಅವರ ಹುಟ್ಟುಹಬ್ಬ ಅಕ್ಟೋಬರ್ 14 ಅದೇ ದಿನ ಅರುಣ್ ಹುಟ್ಟುಹಬ್ಬವಂತೆ. ಇಲ್ಲಿಂದ ಪಾಸಿಟಿವ್ ಸೂಚನೆ ಸಿಕ್ಕಿದೆ. ಅಂದಹಾಗೆ, ನಿಧನಕ್ಕೂ ಮುನ್ನವೇ ಮಾನ್ವಿತಾ ಅವರ ತಾಯಿ ಸುಜಾತಾ ಅವರು ಅರುಣ್ ತಾಯಿಯೊಂದಿಗೆ ಮಾತನಾಡಿದ್ದರು.

  • ಗ್ಲ್ಯಾಮರ್‌ ಗೊಂಬೆಯಂತೆ ಮಿಂಚಿದ ‘ಟಗರು’ ಬ್ಯೂಟಿ ಮಾನ್ವಿತಾ

    ಗ್ಲ್ಯಾಮರ್‌ ಗೊಂಬೆಯಂತೆ ಮಿಂಚಿದ ‘ಟಗರು’ ಬ್ಯೂಟಿ ಮಾನ್ವಿತಾ

    ಗರು (Tagaru) ಬ್ಯೂಟಿ ಮಾನ್ವಿತಾ ಕಾಮತ್ (Manvitha) ಹೊಸ ಫೋಟೋಶೂಟ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಸದ್ಯ ಕರಾವಳಿ ನಟಿಯ ಫೋಟೋಸ್ ಸೋಶಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಕಲರ್‌ಫುಲ್ ಮಾಡ್ರನ್ ಡ್ರೆಸ್‌ನಲ್ಲಿ ಮಸ್ತ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಮಾನ್ವಿತಾ ಗ್ಲ್ಯಾಮರಸ್ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ನಟಿಯ ನಯಾ ಲುಕ್‌ಗೆ ಬಗೆ ಬಗೆಯ ಕಾಮೆಂಟ್ಸ್‌ ಹರಿದು ಬರುತ್ತಿವೆ. ಇದನ್ನೂ ಓದಿ:‘ಲಿಯೋ’ ಬಿಡುಗಡೆಗೂ ಮುನ್ನ ಮತ್ತೊಂದು ಸಿನಿಮಾ ಘೋಷಿಸಿದ ವಿಜಯ್

    ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಮಾನ್ವಿತಾ ಪಾದಾರ್ಪಣೆ ಮಾಡಿದರು. ಟಗರು, ಶಿವ 143, ಕನಕ, ರಿಲಾಕ್ಸ್ ಸತ್ಯ, ಚೌಕ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:‘ಲಿಯೋ’ ಬಿಡುಗಡೆಗೂ ಮುನ್ನ ಮತ್ತೊಂದು ಸಿನಿಮಾ ಘೋಷಿಸಿದ ವಿಜಯ್

    ಶಿವರಾಜ್‌ಕುಮಾರ್ (Shivarajkumar) ನಟನೆಯ ‘ಟಗರು’ ಸಿನಿಮಾದಲ್ಲಿ ಮಾನ್ವಿತಾ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಕೆಂಡಸಂಪಿಗೆ ಮತ್ತು ಟಗರು ಈ ಎರಡು ಸಿನಿಮಾ, ಮಾನ್ವಿತಾ ವೃತ್ತಿಬದುಕಿನಲ್ಲಿ ಹೈಲೆಟ್ ಆಗಿರುವ ಚಿತ್ರಗಳು.

    2022ರಲ್ಲಿ ಧೀರೆನ್ ರಾಮ್‌ಕುಮಾರ್‌ಗೆ ನಾಯಕಿಯಾಗಿ ‘ಶಿವ 143’ ಚಿತ್ರದಲ್ಲಿ ನಟಿಸಿದ್ದರು. ರಾಜಸ್ಥಾನ ಡೈರೀಸ್, ಹ್ಯಾಪಿ ಮ್ಯಾರೀಡ್ ಇವು ಮುಂಬರುವ ಸಿನಿಮಾಗಳಾಗಿವೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿನ್ನಸ್ವಾಮಿಯಲ್ಲಿ ʻಕಾಂತಾರʼ ಸಾಂಗ್‌ – RCB ಗೆಲುವಿಗೆ ದೈವ ಕಾರಣ ಅಂದ್ರು ಫ್ಯಾನ್ಸ್‌

    ಚಿನ್ನಸ್ವಾಮಿಯಲ್ಲಿ ʻಕಾಂತಾರʼ ಸಾಂಗ್‌ – RCB ಗೆಲುವಿಗೆ ದೈವ ಕಾರಣ ಅಂದ್ರು ಫ್ಯಾನ್ಸ್‌

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಹಾಗೂ ರಾಜಸ್ಥಾನ್‌ ರಾಯಲ್ಸ್‌ (RR) ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ 7 ರನ್‌ಗಳ ರೋಚಕ ಜಯ ಸಾಧಿಸಿತು.

    ಕೊನೆ ಕ್ಷಣದಲ್ಲಿ ಪಿಂಕ್‌ Vs ಗ್ರೀನ್‌ ಆರ್ಮಿ ನಡುವಿನ ಕದನ ಅತ್ಯಂತ ರೋಚಕತೆಯಿಂದ ಕೂಡಿತ್ತು. ಕ್ರೀಡಾಂಗಣದ ತುಂಬಾ ನೆರೆದಿದ್ದ ಅಭಿಮಾನಿಗಳು ಕೊನೆಯವರೆಗೂ ʻಆರ್‌ಸಿಬಿ, ಆರ್‌ಸಿಬಿ, ಕೊಹ್ಲಿ, ಕೊಹ್ಲಿʼ ಎಂದು ಕೂಗುತ್ತಾ ಆಟಗಾರರನ್ನ ಹುರಿದುಂಬಿಸಿದರು. ಇದನ್ನೂ ಓದಿ: BCCIಗೆ ಲಕ್ಷ ಲಕ್ಷ ನಷ್ಟ – ಅರ್ಷ್‌ದೀಪ್‌ ಮುರಿದ 2 ಸ್ಟಂಪ್ಸ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ..

    ಇದೇ ವೇಳೆ ಆರ್‌ಸಿಬಿ ಅಭಿಮಾನಿಗಳನ್ನ ರಂಜಿಸಲು ಕನ್ನಡ ಗೀತೆಗಳನ್ನ (Kannada Song) ಪ್ರಸಾರ ಮಾಡಲಾಗಿತ್ತು. ಮೊದಲಿಗೆ ನಟ ಶಿವರಾಜ್‌ ಕುಮಾರ್‌ ಅಭಿನಯದ ಟಗರು (Tagaru) ಚಿತ್ರದ ʻಟಗರು ಬಂತು ಟಗರುʼ ಗೀತೆ ಪ್ರಸಾರ ಮಾಡಲಾಗಿತ್ತು. ಕೆಲ ಹೊತ್ತು ಕಳೆದ ಬಳಿಕ ಕಾಂತಾರ ಚಿತ್ರದ ʻವರಾಹ ರೂಪಂʼ ಗೀತೆಯ ಮ್ಯೂಸಿಕ್‌ ಪ್ರಸಾರ ಮಾಡಲಾಯಿತು. ಕಾಂತಾರ ಚಿತ್ರದ ಗೀತೆಯ ಮ್ಯೂಸಿಕ್‌ ಪ್ರಸಾರ ಮಾಡುತ್ತಿದ್ದಂತೆ ಕ್ರೀಸ್‌ನಲ್ಲಿದ್ದ ರಾಜಸ್ಥಾನ್‌ ತಂಡದ ಆಟಗಾರ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಕೈಚೆಲ್ಲಿದರು. ಇದು ಆರ್‌ಸಿಬಿಗೆ ಬೆನಿಫಿಟ್‌ ಆಯಿತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಹುಟ್ಟಿಕೊಂಡಿದ್ದು, ಆರ್‌ಸಿಬಿ ಗೆಲುವಿಗೆ ದೈವವೇ ಕಾರಣ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ.

    ಕೊಹ್ಲಿ ಸಂಜುಗೆ ಸ್ಪೆಷಲ್‌ ಗಿಫ್ಟ್‌: ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಗ್ರೀನ್‌ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದ ಆರ್‌ಸಿಬಿ ತಂಡದ ನಾಯಕತ್ವ ವಹಿಸಿದ್ದ ವಿರಾಟ್‌ ಕೊಹ್ಲಿ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ಗಿಡಗಳನ್ನು ನೀಡಿ ಸ್ವಾಗತಿಸಲಾಯಿತು. ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (Royal Challengers Bangalore) 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿತ್ತು. 190 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.