Tag: ಟಗರು ನಟಿ

  • `ಟಗರು’ ನಟಿ ಮಾನ್ವಿತಾ ಸ್ನಾತಕೋತ್ತರ ಪದವೀಧರೆ

    `ಟಗರು’ ನಟಿ ಮಾನ್ವಿತಾ ಸ್ನಾತಕೋತ್ತರ ಪದವೀಧರೆ

    ಸ್ಯಾಂಡಲ್‌ವುಡ್‌ಗೆ `ಕೆಂಡಸಂಪಿಗೆ’ ಚಿತ್ರದ ಮೂಲಕ ಪರಿಚಿತರಾದ ನಟಿ ಮಾನ್ವಿತಾ ಹರೀಶ್, ಕನ್ನಡದ ಸಾಕಷ್ಟು ಚಿತ್ರಗಳ ಮೂಲಕ ಸಂಚಲನ ಮೂಡಿಸಿದ್ರು.ಇದೀಗ ಸಿನಿಮಾಗಳ ಮಧ್ಯೆ ತಮ್ಮ ವಿದ್ಯಾಭ್ಯಾಸಕ್ಕೂ ಸಮಯ ಮೀಸಲಿಟ್ಟು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಟಿ ಮಾನ್ವಿತಾ ಹಂಚಿಕೊಂಡಿದ್ದಾರೆ.

    ಕೆಂಡಸಂಪಿಗೆ, ಚೌಕ, ಚಿತ್ರದ ಬಳಿಕ ಶಿವರಾಜ್‌ಕುಮಾರ್‌ಗೆ ನಾಯಕಿಯಾಗುವ ಟಗರು ನಟಿಯಾಗಿ ಸಂಚಲನ ಸೃಷ್ಟಿಸಿದ್ರು. ಬ್ಯೂಟಿ ಜತೆ ಟ್ಯಾಲೆಂಟ್‌ಯಿರೋ ಈ ಕರಾವಳಿ ಕುವರಿ ಮಾನ್ವಿತಾ 2020ರ `ಇಂಡಿಯಾ ವರ್ಸಸ್ ಇಂಗ್ಲೇಡ್’ ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ರು. ಈ ಎರಡು ವರ್ಷ ಎನು ಮಾಡ್ತಿದ್ರು ಎಂಬುದಕ್ಕೆ ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಕೋವಿಡ್ ವೇಳೆಯಲ್ಲಿ ಮಾಸ್ ಕಮ್ಯೂನಿಕೇಷನ್ ಮಾಧ್ಯಮದ ಕುರಿತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    ಕೊವೀಡ್ ಸಂದರ್ಭವನ್ನ ನಟಿ ಮಾನ್ವಿತಾ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದಾರೆ. ವಿದ್ಯಾಭ್ಯಾಸದಲ್ಲಿ ಒಲವಿದ್ದ ಕಾರಣ ಸಿನಿಮಾಗಳ ಜೊತೆಗೆ ಬೆಂಗಳೂರಿನ ಜೈನ್ ಯೂನಿವರ್ಸಿಟಿನಲ್ಲಿ ಮಾಧ್ಯಮ ಕುರಿತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಎರಡು ವರ್ಷಗಳ ಶ್ರಮ ಮತ್ತು ತಾಳ್ಮೆ ತಮಗೆ ಸಿಕ್ಕಿರೋ ಪದವಿ ಕುರಿತು ತಾನೆಷ್ಟು ಖುಷಿಯಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟಗರು ನಟಿ ಹೇಳಿಕೊಂಡಿದ್ದಾರೆ.

    ಇನ್ನು ಮಾನ್ವಿತಾ ನಟನೆಯ ಶಿವ 143, `ರಾಜಸ್ತಾನ ಡೈರೀಸ್’ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ತೆರೆ ಕಾಣಲಿದೆ. ನಟ ಪೃಥ್ವಿ ಅಂಬರ್ ಜೊತೆ `ಹ್ಯಾಪಿಲಿ ಮ್ಯಾರೀಡ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಈ ಮೂರು ಚಿತ್ರಗಳು ತೆರೆಗೆ ಬರಲು ಸಜ್ಜಾಗಿದೆ. ಕನ್ನಡದ ಜತೆಗೆ ಪರಭಾಷಾ ಚಿತ್ರಗಳಿಂದಲೂ ನಟಿಗೆ ಅವಕಾಶಗಳು ಅರಸಿ ಬರುತ್ತಿದೆ. ಒಂದೊಳ್ಳೆ ಕಥೆಯ ಮೂಲಕ ನಟಿ `ಟಗರು’ ಬ್ಯೂಟಿ ಮಾನ್ವಿತಾ ಕಾಣಿಸಿಕೊಳ್ಳಲಿದ್ದಾರೆ.