Tag: ಟಂಟಂ ವಾಹನ

  • ಮಾದಪ್ಪನ ದರ್ಶನಕ್ಕೆಂದು ತೆರಳಿದ್ದ ಟಂಟಂ ವಾಹನ ಪಲ್ಟಿ – ಓರ್ವ ಸಾವು, ಹಲವರಿಗೆ ಗಾಯ

    ಮಾದಪ್ಪನ ದರ್ಶನಕ್ಕೆಂದು ತೆರಳಿದ್ದ ಟಂಟಂ ವಾಹನ ಪಲ್ಟಿ – ಓರ್ವ ಸಾವು, ಹಲವರಿಗೆ ಗಾಯ

    ಮೈಸೂರು: ಮಲೆ ಮಾದಪ್ಪನ ದರ್ಶನಕ್ಕೆಂದು ತೆರಳಿದ್ದ ಟಂಟಂ ವಾಹನ (Tum Tum) ಪಲ್ಟಿಯಾದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.

    ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಘಟನೆಯಲ್ಲಿ ದರ್ಶನ್ (20) ಮೃತಪಟ್ಟಿದ್ದಾನೆ. ಮೈಸೂರಿನ ಟಿ ನರಸೀಪುರ ಮುಖ್ಯರಸ್ತೆಯ ಮೆಗಳಾಪುರ ಬಳಿ ಘಟನೆ ನಡೆದಿದೆ. ದರ್ಶನ್ ಸೇರಿದಂತೆ ಕೆಲ ಯುವಕರು ಮಲೈ ಮಹದೇಶ್ವರ ಬೆಟ್ಟಕ್ಕೆ (Male Mahadeshwara Hills) ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಂಟಂ ವಾಹನ ಪಲ್ಟಿಯಾಗಿದೆ. ಇದನ್ನೂ ಓದಿ: 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿಗೆ ಹಠಾತ್ ಬ್ರೇಕ್ – ಇಬ್ಬರ ದುರ್ಮರಣ

    ಘಟನೆಯಲ್ಲಿ ದರ್ಶನ್ ಸಾವನ್ನಪ್ಪಿದ್ದು, ಸುಮಾರು 10 ಯುವಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಹಾಸನಾಂಬೆ ದೇಗುಲಕ್ಕೆ ದಾಖಲೆಯ ಆದಾಯ- 9 ದಿನಗಳಲ್ಲಿ 4,56,22,580 ರೂ. ಸಂಗ್ರಹ

  • ಕಲಬುರಗಿಯಲ್ಲಿ ಭೀಕರ ಅಪಘಾತ- ಕಾರ್, ಟಂಟಂ ಡಿಕ್ಕಿಯಾಗಿ ಇಬ್ಬರ ದುರ್ಮರಣ

    ಕಲಬುರಗಿಯಲ್ಲಿ ಭೀಕರ ಅಪಘಾತ- ಕಾರ್, ಟಂಟಂ ಡಿಕ್ಕಿಯಾಗಿ ಇಬ್ಬರ ದುರ್ಮರಣ

    ಕಲಬುರಗಿ: ಕಾರ್ ಹಾಗೂ ಟಂಟಂ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪೂರನ ಚವಡಾಪೂರ ಗ್ರಾಮದ ಬಳಿ ನಡೆದಿದೆ.

    ಘಟನೆಯಲ್ಲಿ ಟಂಟಂನಲ್ಲಿದ್ದ ಗಾಣಗಾಪುರ ನಿವಾಸಿಗಳಾದ ಬೋರಮ್ಮ ಶಿರೂರಮಠ ಮತ್ತು ಮಹೇಶ ಶೆಟ್ಟಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಹಲವರಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಂದು ಮುಂಜಾನೆ ಕಲಬುರಗಿಯಿಂದ ಚಿನ್ಮಯಗಿರಿ ದೇವಸ್ಥಾನದ ಜಾತ್ರೆಗೆ ತಮ್ಮ ಟಂಟಂ ವಾಹನದಲ್ಲಿ ಹೊರಟಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

    ಈ ಕುರಿತು ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಟಂಟಂ, ಲಾರಿ ಮುಖಾಮುಖಿ ಡಿಕ್ಕಿ- ಮೂವರ ದುರ್ಮರಣ, 10 ಕುರಿಗಳ ಸಾವು

    ಟಂಟಂ, ಲಾರಿ ಮುಖಾಮುಖಿ ಡಿಕ್ಕಿ- ಮೂವರ ದುರ್ಮರಣ, 10 ಕುರಿಗಳ ಸಾವು

    ರಾಯಚೂರು: ಟಂಟಂ ವಾಹನ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಬಳಿ ನಡೆದಿದೆ.

    ಬೆಳಗಿನ ಜಾವ 6 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಕೊಪ್ಪಳದ ಕುಷ್ಟಗಿ ತಾಲೂಕಿನ ಕನ್ನಾಳ ಗ್ರಾಮದ 40 ವರ್ಷದ ಮೌಲಪ್ಪ, 44 ವರ್ಷದ ಯಮನೂರು ಹಾಗೂ ಸಂಗನಾಳ ಗ್ರಾಮದ ಗಣಪತಿ ಬಾಲಪ್ಪ ಮೃತ ದುರ್ದೈವಿಗಳು.

    ಕನ್ನಾಳದಿಂದ ಸಿಂಧನೂರಿಗೆ ಕುರಿ ಸಂತೆಗೆ ಬರುತ್ತಿದ್ದ ಟಂಟಂ ಹಾಗೂ ತೌಡು ತುಂಬಿಕೊಂಡು ಕೊಪ್ಪಳದ ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಟಂಟಂನಲ್ಲಿದ್ದ 10 ಕುರಿಗಳು ಸಹ ಸ್ಥಳದಲ್ಲೇ ಸಾವನ್ನಪ್ಪಿವೆ. ಅಲ್ಲದೇ ವಾಹನದಲ್ಲಿದ್ದ ನಾಲ್ಕು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ತಾವರಗೇರಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ತುರುವಿಹಾಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

  • ಅಪಘಾತಕ್ಕೀಡಾಗಿ ಅಯ್ಯಯ್ಯೋ ಸಹಾಯ ಮಾಡಿ ಅಂತಾ ನರಳಾಡಿದ್ರೂ ಸಹಾಯಕ್ಕೆ ಜನ ಬರಲೇ ಇಲ್ಲ

    ಅಪಘಾತಕ್ಕೀಡಾಗಿ ಅಯ್ಯಯ್ಯೋ ಸಹಾಯ ಮಾಡಿ ಅಂತಾ ನರಳಾಡಿದ್ರೂ ಸಹಾಯಕ್ಕೆ ಜನ ಬರಲೇ ಇಲ್ಲ

    ಹಾವೇರಿ: ಇತ್ತೀಚೆಗೆ ಅಪಘಾತಗಳು ನಡೆದ ಸಂದರ್ಭದಲ್ಲಿ ಜನರು ಅಪಘಾತಕ್ಕೀಡಾದವರನ್ನು ರಕ್ಷಿಸುವ ಬದಲು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಇಂತದ್ದೇ ಒಂದು ಘಟನೆ ಇದೀಗ ಹಾವೇರಿಯಲ್ಲೂ ನಡೆದಿದೆ.

    ಹೌದು. ಶುಕ್ರವಾರ ಸಂಜೆ ಹಾವೇರಿ ತಾಲೂಕಿನ ತೋಟದ ಯಲ್ಲಾಪುರ ಗ್ರಾಮದ ಬಳಿ ಟಾಟಾ ಅಪೆ ಮತ್ತು ಟಂಟಂ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ನೆಲೋಗಲ್ ಗ್ರಾಮದ 70 ವರ್ಷದ ದಸ್ತಗೀರಸಾಬ ನರಳಾಡುತ್ತಿದ್ರು. ಆದ್ರೂ ಜನ ಅವರ ಸಹಾಯಕ್ಕೆ ಬರದೇ ಕಾಲಹರಣ ಮಾಡುವ ಮೂಲಕ ಮಾನವೀಯತೆ ಮರೆತಿದ್ದರು.

    ಅಯ್ಯಯ್ಯೋ… ಯಪ್ಪಾ… ಎಂದು ಗೋಗರೆಯುತ್ತಿದ್ದರೂ ಜನ ನೋಡ್ತಾ ನಿಂತಿದ್ರೇ ಹೊರತು, ಆಸ್ಪತ್ರೆಗೆ ಸೇರಿಸಲಿಲ್ಲ. ಒಂದು ಗಂಟೆ ನರಳಾಡಿದ್ಮೇಲೆ ಆಂಬುಲೆನ್ಸ್ ಬಂದಿದೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಳಿಕ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಯಿತು.

    ಸದ್ಯಕ್ಕೆ ದಸ್ತಗಿರಸಾಬ್ ಪ್ರಾಣಾಪಾಯದಿಂದ ಪಾರಾಗಿದ್ದು, ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=9HAc3AWyIBg&feature=youtu.be