Tag: ಟಂಟಂ

  • ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ – ಟಂಟಂ ಚಾಲಕ ಅರೆಸ್ಟ್

    ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ – ಟಂಟಂ ಚಾಲಕ ಅರೆಸ್ಟ್

    – ಮಗುವನ್ನು ಹಿಡ್ಕೊಂಡು ಹೊಲದ ಕಡೆ ಓಡೋದ ಚಾಲಕ

    ರಾಯಚೂರು: ಸಹಾಯ ಕೇಳಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ಮೇಲೆ ಚಾಲಕ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ ಬಳಿ ಘಟನೆ.

    ಟಂಟಂ ವಾಹನ ಚಾಲಕ ಬಾಗಲಕೋಟೆ ಮೂಲದ ಶಂಕರಪ್ಪ ಮುಳಗುಂದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಾನೆ. ಮೂರು ವರ್ಷದ ಮಗುವನ್ನ ಆಸ್ಪತ್ರೆಗೆ ತೋರಿಸಲು ಲಿಂಗಸುಗೂರಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಯತ್ನ ನಡೆದಿದೆ.

    ಮಾರ್ಗ ಮಧ್ಯೆ ಮೂತ್ರ ವಿಸರ್ಜನೆ ನೆಪದಲ್ಲಿ ವಾಹನ ನಿಲ್ಲಿಸಿ ಮಹಿಳೆ ಜೊತೆಗಿದ್ದ ಮಗುವನ್ನು ಕಸಿದುಕೊಂಡು ಜೋಳದ ಹೊಲದತ್ತ ಚಾಲಕ ಓಡಿದ್ದಾನೆ. ಮಗುವನ್ನು ಆತನಿಂದ ಬಿಡಿಸಿಕೊಳ್ಳಲು ತೆರಳಿದಾಗ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಅಂತ ಮಹಿಳೆ ಆರೋಪಿಸಿದ್ದಾಳೆ.

    ರಸ್ತೆಯಲ್ಲಿ ತೆರಳುತ್ತಿದ್ದ ಜನ ಕೂಗಾಟದ ಶಬ್ದ ಕೇಳಿ ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ. ತಪ್ಪಿಸಿಕೊಂಡು ಹೋಗುತ್ತಿದ್ದ ಚಾಲಕನನ್ನ ವಾಹನ ಸಮೇತ ಹಿಡಿದು ಸಾರ್ವಜನಿಕರು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ತಡ ರಾತ್ರಿ ಪ್ರಕರಣ ದಾಖಲಾಗಿದ್ದಕ್ಕೆ ಮಹಿಳೆ ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

    ಆರೋಪಿ ಬಾಗಲಕೋಟೆಯ ಶಂಕರಪ್ಪ ಮುಳಗುಂದ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಅಪಘಾತ ಸ್ಥಳಕ್ಕೆ ಬಂದ ಪೊಲೀಸರಿಗೆ ಕಲ್ಲು ಹೊಡೆದು ಓಡಿಸಿದ ಜನ

    ಅಪಘಾತ ಸ್ಥಳಕ್ಕೆ ಬಂದ ಪೊಲೀಸರಿಗೆ ಕಲ್ಲು ಹೊಡೆದು ಓಡಿಸಿದ ಜನ

    ವಿಜಯಪುರ: ಜಿಲ್ಲೆಯ ಕೊಲ್ಹಾರ ಪ್ರದೇಶದ ಬಳಿ ಸರ್ಕಾರಿ ಬಸ್ಸಿಗೆ ಟಂಟಂ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅವರ ವಾಹನದ ಮೇಲೆ ಕಲ್ಲು ತೂರಾಟ ನಡಿಸಿದ್ದಾರೆ.

    ಕೊಲ್ಹಾರ ಬಳಿ ಪೊಲೀಸರ ದಂಡ ತಪ್ಪಿಸಲು ಹೋಗಿ ಸರ್ಕಾರಿ ಬಸ್‍ಗೆ ಟಂಟಂ ಡಿಕ್ಕಿಯಾಗಿತ್ತು. ಈ ಭೀಕರ ಅಪಘಾತದಲ್ಲಿ ಟಂಟಂನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, 7 ಮಂದಿ ಗಾಯಗೊಂಡಿದ್ದರು. ಈ ವೇಳೆ ಸ್ಥಳದಲ್ಲಿದ್ದವರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದರು. ಆಗ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರನ್ನು ಕೊಂತಿಕಲ್ ಗ್ರಾಮದ ಕಸ್ತೂರಿ ಸುರೇಶ ಗುಳದಾಳ(32), ಬಾಗಲಕೋಟೆ ಜಿಲ್ಲೆಯ ಸಿಂದಗಿ ಗ್ರಾಮದ ಲಕ್ಷ್ಮಿ ನಿಂಗಪ್ಪ ಆಲಗುಂಡಿ(5), ಗಿರಿಸಾಗರದ ರಾಮಣ್ಣ ಯಮನಪ್ಪ ಮುತ್ತಲದಿನ್ನಿ(70) ಎಂದು ಗುರುತಿಸಲಾಗಿದೆ.

    ಟಂಟಂ ಚಾಲಕ ವಾಹನದಲ್ಲಿ ಹೆಚ್ಚು ಮಂದಿ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ. ಈ ವೇಳೆ ಕೊಲ್ಹಾರ ಬಳಿ ಇದ್ದ ಪೊಲೀಸರು ಟಂಟಂ ನಿಲ್ಲಿಸುವಂತೆ ಕೈ ಮಾಡಿದ್ದಾರೆ. ಇದನ್ನು ಕಂಡ ಚಾಲಕ ವಾಹನ ನಿಲ್ಲಿಸಿದರೆ ಪೊಲೀಸರಿಗೆ ದಂಡ ಕಟ್ಟಬೇಕಲ್ಲ ಎನ್ನುವ ಕಾರಣಕ್ಕೆ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಆತುರದಲ್ಲಿ ಮುಂದೆ ಬರುತ್ತಿದ್ದ ಬಸ್ಸಿಗೆ ಟಂಟಂ ವಾಹನವನ್ನು ಡಿಕ್ಕಿ ಹೊಡಿಸಿದ್ದಾನೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು.

    ಪೊಲೀಸರು ಹಾಕುವ ಭಾರೀ ದಂಡದಿಂದಲೇ ಈ ಅಪಘಾತ ನಡೆದಿದೆ. ಜನರ ಜೀವ ಹೋಗಲು ಪೊಲೀಸರೇ ಕಾರಣವೆಂದು ಆರೋಪಿಸಿ ಸಾರ್ವಜನಿಕರು ರೊಚ್ಚಿಗೆದ್ದು, ಸ್ಥಳಕ್ಕೆ ಬಂದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಪಿಐ ವಾಹನ ಹಾಗೂ ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಪಿಎಸ್‍ಐ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ ಪಿಎಸ್‍ಐ ಹಾಗೂ ಪೇದೆಗಳ ಮೇಲೆ ಹಲ್ಲೆ ನಡೆಸಿ ಪೊಲೀಸರನ್ನು ಸ್ಥಳದಿಂದ ಓಡಿಸಿದ್ದಾರೆ. ಆದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

  • ಲಾರಿ, ಟಂಟಂ ಆಟೋ ಡಿಕ್ಕಿ – ಮಹಿಳೆ ಸಾವು, 8 ಮಂದಿಗೆ ಗಾಯ

    ಲಾರಿ, ಟಂಟಂ ಆಟೋ ಡಿಕ್ಕಿ – ಮಹಿಳೆ ಸಾವು, 8 ಮಂದಿಗೆ ಗಾಯ

    ಯಾದಗಿರಿ: ಲಾರಿ ಹಾಗೂ ಟಂಟಂ ಆಟೋ ಪರಸ್ಪರ ಡಿಕ್ಕಿ ಹೊಡೆದು, ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಯಾದಗಿರಿಯಲ್ಲಿ ಇಂದು ನಡೆದಿದೆ.

    ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಶಿಬಿರ ಬಂಡಿ ರಾಜ್ಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ನಿಂಗಮ್ಮ (45) ಎಂಬ ಮಹಿಳೆ ಮೃತಪಟ್ಟಿದ್ದು, ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ. ಘಟನೆಯಿಂದಾಗಿ ಮಲ್ಲಮ್ಮ, ಅಂಬ್ರಮ್ಮ ಎಂಬವರ ಸ್ಥಿತಿ ಚಿಂತಾಜನಕವಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಉಳಿದ ಗಾಯಾಳುಗಳಿಗೆ ಸುರಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಪಘಾತಕ್ಕಿಡಾದವರು ಸುರಪುರದ ನಿವಾಸಿಗಳಾಗಿದ್ದು, ಶಹಾಪೂರ ತಾಲೂಕಿನ ಬಿರನೂರು ಗ್ರಾಮಕ್ಕೆ ಟಂಟಂನಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಲಾರಿವೊಂದು ವೇಗವಾಗಿ ಬಂದು ಟಂಟಂಗೆ ಡಿಕ್ಕಿ ಹೊಡೆದಿದೆ.

    ಘಟನೆ ನಡೆಯುತ್ತಿದ್ದಂತೆಯೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟಂಟಂಗೆ ಲಾರಿ ಡಿಕ್ಕಿ- ಮಕ್ಕಳು ಸೇರಿ ಐವರು ಸ್ಥಳದಲ್ಲೇ ಸಾವು

    ಟಂಟಂಗೆ ಲಾರಿ ಡಿಕ್ಕಿ- ಮಕ್ಕಳು ಸೇರಿ ಐವರು ಸ್ಥಳದಲ್ಲೇ ಸಾವು

    – ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯ ನೋವು ಕೇಳಿ ಕಣ್ಣೀರಿಟ್ಟ ಸ್ಥಳೀಯರು

    ವಿಜಯಪುರ: ಟಂಟಂಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮಕ್ಕಳು, ಮಹಿಳೆಯರು ಸೇರಿ ಐವರು ಮೃತಪಟ್ಟ ದುರ್ಘಟನೆ ವಿಜಯಪುರ ತಾಲೂಕಿನ ಬರಟಗಿ ತಾಂಡಾ ಬಳಿ ಸಂಭವಿಸಿದೆ.

    ಬಸವನ ಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ಟಂಟಂ ಚಾಲಕ ಅರವಿಂದ್ ಅಗಸರ(32), ಉಳಿದ ನಾಲ್ವರು ಮೃತರು ಅದೇ ಗ್ರಾಮದವರಾಗಿದ್ದಾರೆ. ಈ ಅವಘಡದಲ್ಲಿ ಬದುಕುಳಿದ ಓರ್ವ ವಿದ್ಯಾರ್ಥಿಯ ಕಾಲಿಗೆ ಭಾರೀ ಹೊಡೆತ ಬಿದ್ದಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರಗೆ ಕರೆದುಯೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಡೋಣುರ ಗ್ರಾಮ ಮಕ್ಕಳು, ಮಹಿಳೆಯರು ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 13ರ ಮಾರ್ಗವಾಗಿ ಇಂಚಗೇರಿ ಜಾತ್ರೆಗಾಗಿ ತೆರಳುತ್ತಿದ್ದರು. ವಿಜಯಪುರ ತಾಲೂಕಿನ ಬರಟಗಿ ತಾಂಡಾ ಎದುರಿಗೆ ಬಂದ ಲಾರಿ ಚಾಲಕ ಟಂಟಂಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಸ್ತೆಯಿಂದ ಹಾರಿ ಕೆಳಗೆ ಟಂಟಂ ಬಿದ್ದಿದ್ದು, ಅದರಲ್ಲಿದ್ದ ಐವರು ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಸ್ಥಳೀಯರು ಹಾಗೂ ಪ್ರಯಾಣಿಕರು ತಕ್ಷಣವೇ ಘಟನಾ ಸ್ಥಳಕ್ಕೆ ಬಂದು ಗಂಭೀರವಾಗಿ ಗಾಯಗೊಂಡಿದ್ದ ಓರ್ವ ವಿದ್ಯಾರ್ಥಿಯನ್ನು ಸಮೀಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ ನೋವನ್ನು ಕಂಡು ಸ್ಥಳೀಯರು ಕಣ್ಣೀರಿಟ್ಟಿದ್ದಾರೆ.

    ಘಟನೆಯಿಂದಾಗಿ ಕೆಲಹೊತ್ತು ವಾಹನ ಸಂಚಾರ ಅಸ್ತವ್ಯವಾಗಿತ್ತು. ಇತ್ತ ಚಾಲಕ ಘಟನಾ ಸ್ಥಳದಲ್ಲಿಯೇ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ವಿಜಯಪುರ ಗ್ರಾಮೀಣ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತರಲ್ಲಿ ಓರ್ವನ ಹೆಸರು ಮಾತ್ರ ತಿಳಿದು ಬಂದಿದ್ದು, ಉಳಿದವರ ಗುರುತು ಪತ್ತೆಯಾಗಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲಾ ಬಸ್ಸಿಗೆ ಹಿಂಬದಿಯಿಂದ ಲಾರಿ ಡಿಕ್ಕಿ- ಕ್ಷಣಾರ್ಧದಲ್ಲಿ ತಪ್ಪಿತು ಭಾರೀ ಅನಾಹುತ

    ಶಾಲಾ ಬಸ್ಸಿಗೆ ಹಿಂಬದಿಯಿಂದ ಲಾರಿ ಡಿಕ್ಕಿ- ಕ್ಷಣಾರ್ಧದಲ್ಲಿ ತಪ್ಪಿತು ಭಾರೀ ಅನಾಹುತ

    ಬಾಗಲಕೋಟೆ: ನಗರದ ಮುಚಖಂಡಿ ಕ್ರಾಸ್‍ನಲ್ಲಿ ಲಾರಿಯೊಂದು ಶಾಲಾ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸು ಟಂಟಂಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿ ಇದ್ದ ಶಾಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬೆಳಂಬೆಳಗ್ಗೆ ನಗರದ ವಿದ್ಯಾಗಿರಿಯ ಲಯನ್ಸ್ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು ಇದ್ದ ಶಾಲಾ ಬಸ್ಸಿಗೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸು ಪಕ್ಕದಲ್ಲಿ ಚಲಿಸುತ್ತಿದ್ದ ಟಂಟಂಗೆ ಡಿಕ್ಕಿ ಹೊಡೆದಿದೆ. ತಕ್ಷಣ ಚಾಲಕ ಬಸ್ಸನ್ನು ನಿಲ್ಲಿಸಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತದಿಂದ ವಿದ್ಯಾರ್ಥಿಗಳು ಪಾರಾಗಿದ್ದಾರೆ.

    ಘಟನಾ ಸ್ಥಳಕ್ಕೆ ಬಾಗಲಕೋಟೆ ಸಂಚಾರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಸುರಕ್ಷಿತವಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಎಸ್.ಆರ್ ಪಾಟೀಲ್

    ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಎಸ್.ಆರ್ ಪಾಟೀಲ್

    – ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ

    ಬಾಗಲಕೋಟೆ: ಜಿಲ್ಲೆಯ ವಿದ್ಯಾಗಿರಿ ಬಳಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಶಾಲಾ ಮಕ್ಕಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್ ಪಾಟೀಲ್ ಭೇಟಿ ನೀಡಿ ಆರೋಗ್ಯಸ್ಥಿತಿ ವಿಚಾರಿಸಿದ್ದಾರೆ.

    ಮಕ್ಕಳ ಆರೋಗ್ಯ ಹಾಗೂ ಚಿಕಿತ್ಸೆಯ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಈ ಅಪಘಾತದಲ್ಲಿ ಗಾಯಗೊಂಡ ಮಕ್ಕಳು ಶೀಘ್ರ ಗುಣಮುಖರಾಗ್ಲೀ ಎಂದು ದೇವರಲ್ಲಿ ಪಾರ್ಥಿಸಿದ್ರು. ಇದೇ ವೇಳೆ ಎಸ್.ಆರ್. ಪಾಟೀಲ್ ಮಕ್ಕಳ ವೈದ್ಯಕೀಯ ಖರ್ಚಿಗಾಗಿ ವೈಯಕ್ತಿಕವಾಗಿ 2 ಲಕ್ಷ ರೂ ಸಹಾಯಧನ ನೀಡಿದ್ರು. 6 ಜನ ಮಕ್ಕಳ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಲು ಸಿಎಂಗೆ ಮನವಿ ಮಾಡೋದಾಗಿ ಭರವಸೆ ನೀಡಿದ್ರು. ಇದನ್ನೂ ಓದಿ: ಟಂಟಂ ಹಿಂಬದಿಗೆ ಬೊಲೆರೊ ಡಿಕ್ಕಿ – ವಿದ್ಯಾರ್ಥಿಯ ಕೈ ಕಟ್, 6 ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

    ಇಂತಹ ಅಪಘಾತ ನಡೆಯದಂತೆ ಪೋಷಕರು ಹಾಗೂ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು. ಅಲ್ಲದೇ ಕರ್ತವ್ಯ ಪ್ರಜ್ಞೆ ಮರೆತು ವಾಹನ ಚಲಾಯಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

    ವಿದ್ಯಾಗಿರಿ ಬಳಿ ಟಂಟಂ ಹಾಗೂ ಬೊಲೆರೋ ವಾಹನದ ಮಧ್ಯೆ ಮಂಗಳವಾರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಕೆರೂಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  • ನಾಯಿಗೆ ಡಿಕ್ಕಿ ಆಗೋದನ್ನು ತಪ್ಪಿಸಲು ಹೋಗಿ ಟಂಟಂ ಪಲ್ಟಿ- ಇಬ್ಬರ ಸ್ಥಿತಿ ಗಂಭೀರ

    ನಾಯಿಗೆ ಡಿಕ್ಕಿ ಆಗೋದನ್ನು ತಪ್ಪಿಸಲು ಹೋಗಿ ಟಂಟಂ ಪಲ್ಟಿ- ಇಬ್ಬರ ಸ್ಥಿತಿ ಗಂಭೀರ

    ರಾಯಚೂರು: ನಾಯಿಗೆ ಡಿಕ್ಕಿ ಆಗೋದನ್ನು ತಪ್ಪಿಸಲು ಹೋಗಿ ಟಂಟಂ ವೊಂದು ಪಲ್ಟಿಯಾಗಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗರಾಳ ಕ್ರಾಸ್ ಹತ್ತಿರ ನಡೆದಿದೆ.

    ಗಾಯಾಳುಗಳಾದ ಹನುಮಂತ, ಲಕ್ಷ್ಮವ್ವ ಸ್ಥಿತಿ ಗಂಭೀರವಾಗಿದ್ದು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಮೂವರು ಗಾಯಾಳುಗಳಿಗೆ ಮುದಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಆಶಿಹಾಳ ತಾಂಡದಿಂದ ಮುದಗಲ್ ಗೆ ಬರುತ್ತಿದ್ದ ಟಂಟಂಗೆ ನಾಯಿ ಅಡ್ಡ ಬಂದಿದೆ. ಹೀಗಾಗಿ ನಾಯಿಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಚಾಲಕ ಪ್ರಯತ್ನಿಸಿದ್ದಾನೆ. ಈ ವೇಳೆ ನಿಯಯಂತ್ರಣ ಕಳೆದುಕೊಂಡ ಟಂಟಂ ಪಲ್ಟಿ ಹೊಡೆದಿದೆ. ಈ ಬಗ್ಗೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.