Tag: ಝೊಮ್ಯಾಟೊ

  • ಝೊಮ್ಯಾಟೊ ತಾಂತ್ರಿಕ ಮುಖ್ಯಸ್ಥ ಹುದ್ದೆಗೆ ಸಹ ಸಂಸ್ಥಾಪಕ ಗುಂಜನ್ ಗುಡ್‌ಬೈ

    ಝೊಮ್ಯಾಟೊ ತಾಂತ್ರಿಕ ಮುಖ್ಯಸ್ಥ ಹುದ್ದೆಗೆ ಸಹ ಸಂಸ್ಥಾಪಕ ಗುಂಜನ್ ಗುಡ್‌ಬೈ

    ನವದೆಹಲಿ: ಆನ್‌ಲೈನ್ ಪ್ರಮುಖ ಆಹಾರ ವಿತರಣಾ ವೇದಿಕೆ ಆಗಿರುವ ಝೊಮ್ಯಾಟೊ (Zomato) ಸಹ ಸಂಸ್ಥಾಪಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿ ಗುಂಜನ್ ಪಾಟಿದಾರ್ (Gunjan Patidar) ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ಝೊಮ್ಯಾಟೊ ಸ್ಥಾಪನೆಯಾದ ಮೊದಲ ಕೆಲ ಉದ್ಯೋಗಿಗಳಲ್ಲಿ (Employees) ಪಾಟಿದಾರ್ ಸಹ ಒಬ್ಬರು. ಅಲ್ಲದೇ ಪಾಟಿದಾರ್ ಕಂಪನಿಗಾಗಿ ಕೋರ್ ಟೆಕ್ ಸಿಸ್ಟಮ್‌ಗಳನ್ನ ನಿರ್ಮಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ತಾಂತ್ರಿಕ ಕಾರ್ಯವನ್ನು ಮುನ್ನಡೆಸಿದ್ದಾರೆ. ಝೊಮ್ಯಾಟೊ ನಿರ್ಮಾಣಕ್ಕೆ ಅವರ ಕೊಡುಗೆ ಅತ್ಯಮೂಲ್ಯವಾಗಿದೆ. ಆದ್ರೆ ಅವರು ರಾಜೀನಾಮೆಗೆ ಕಾರಣವನ್ನ ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಆರ್ಡರ್‌ ಮಾಡಿದ 10 ನಿಮಿಷಕ್ಕೆ ನಿಮ್ಮ ಮನೆ ಬಾಗಿಲಿಗೆ ಫುಡ್‌ ಡೆಲಿವರಿ- ಝೊಮ್ಯಾಟೊ ಹೊಸ ಫೀಚರ್‌

    ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯ ಮತ್ತೊಬ್ಬ ಸಹ-ಸಂಸ್ಥಾಪಕರಾಗಿದ್ದ ಮೋಹಿತ್ ಗುಪ್ತಾ (Mohit Gupta) ರಾಜೀನಾಮೆ ನೀಡಿದ್ದರು. ನಾಲ್ಕೂವರೆ ವರ್ಷಗಳ ಹಿಂದೆ ಝೊಮ್ಯಾಟೊಗೆ ಸೇರಿದ್ದ ಗುಪ್ತಾ 2020ರಲ್ಲಿ ಸಿಇಒ (CEO) ಸ್ಥಾನದಿಂದ ಸಹ ಸಂಸ್ಥಾಪಕರಾದರು. ಇದನ್ನೂ ಓದಿ: ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!

    ಅಲ್ಲದೇ ಕಳೆದ ವರ್ಷ ನೂತನ ಉಪಕ್ರಮಗಳ ಮುಖ್ಯಸ್ಥ ರಾಹುಲ್ ಗಂಜೂ, ಮಾಜಿ ಅಧ್ಯಕ್ಷ ಸಿದ್ಧಾರ್ಥ್ ಝವಾರ್ ಸೇರಿ ಹಲವು ಉನ್ನತ ಮಟ್ಟದ ಅಧಿಕಾರಿಗಳು ಝೊಮ್ಯಾಟೊದಿಂದ ನಿರ್ಗಮಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರ್ಡರ್‌ ಮಾಡಿದ 10 ನಿಮಿಷಕ್ಕೆ ನಿಮ್ಮ ಮನೆ ಬಾಗಿಲಿಗೆ ಫುಡ್‌ ಡೆಲಿವರಿ- ಝೊಮ್ಯಾಟೊ ಹೊಸ ಫೀಚರ್‌

    ಆರ್ಡರ್‌ ಮಾಡಿದ 10 ನಿಮಿಷಕ್ಕೆ ನಿಮ್ಮ ಮನೆ ಬಾಗಿಲಿಗೆ ಫುಡ್‌ ಡೆಲಿವರಿ- ಝೊಮ್ಯಾಟೊ ಹೊಸ ಫೀಚರ್‌

    ನವದೆಹಲಿ: ಆರ್ಡರ್‌ ಮಾಡಿದರೆ ತಡವಾಗಿ ಫುಡ್‌ ಡೆಲಿವರಿ ಮಾಡ್ತಾರೆ ಅಂತ ಡೆಲಿವರಿ ಬಾಯ್ಸ್‌ ಮೇಲೆ ಗ್ರಾಹಕರು ಜಗಳಕ್ಕೆ ಬೀಳುವುದು, ಹಣ ಕೊಡದೇ ಸತಾಯಿಸುವಂತಹ ಹಲವಾರು ಪ್ರಕರಣಗಳನ್ನು ಗಮನಿಸಿದ್ದೇವೆ. ಇಂತಹ ಸನ್ನಿವೇಶಗಳಿಗೆ ಅಂತ್ಯವಾಡಬೇಕು ಎಂಬ ದೃಷ್ಟಿಯಿಂದ ಝೊಮ್ಯಾಟೊ (ZOMATO) ಹೊಸ ಯೋಜನೆಯೊಂದನ್ನು ರೂಪಿಸಿದೆ.

    ಫುಡ್‌ ಡೆಲಿವರಿ ಆ್ಯಪ್‌ ಝೊಮ್ಯಾಟೊ, ಆರ್ಡರ್‌ ಮಾಡಿದ ಕ್ಷಣದಿಂದ ಕೇವಲ 10 ನಿಮಿಷದಲ್ಲಿ ಗ್ರಾಹಕರ ಮನೆಗೆ ಆರ್ಡರ್‌ ತಲುಪಿಸುವ ಹೊಸ ಫೀಚರ್‌ ಅನ್ನು ಪರಿಚಯಿಸುವುದಾಗಿ ಘೋಷಿಸಿದೆ. ಇದನ್ನೂ ಓದಿ: ಪದ್ಮ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ಪ್ರಧಾನಿ ಕಾಲಿಗೆ ನಮಸ್ಕರಿಸಿದ 125 ವಯಸ್ಸಿನ ಯೋಗಿ

    ಝೊಮ್ಯಾಟೊ ಸಹ ಸಂಸ್ಥಾಪಕ ದೀಪಿಂದರ್ ಗೋಯಲ್ ಹೊಸ ಫೀಚರ್‌ ಕುರಿತು ಟ್ಟಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಝೊಮ್ಯಾಟೊದಿಂದ ಕೇವಲ 10 ನಿಮಿಷದಲ್ಲಿ ಫುಡ್‌ ಡೆಲಿವರಿ ಮಾಡುವ ಯೋಜನೆ ಶೀಘ್ರವೇ ಬರಲಿದೆ. ಇದು ಮೊದಲು ಮುಂದಿನ ತಿಂಗಳು ಗುರ್ಗಾಂವ್‌ನಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

    ಆಹಾರ ತ್ವರಿತ ವಿತರಣೆಯಿಂದ, ನಿಮ್ಮ ಆಹಾರವು ತಾಜಾ, ಬಿಸಿಯಾಗಿರುತ್ತದೆ. ಇದು ನಿಜಕ್ಕೂ ಗ್ರಾಹಕ ಸ್ನೇಹಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ

    ಈವರೆಗೆ ಝೊಮ್ಯಾಟೊ ಮೂಲಕ ಫುಡ್‌ ಡೆಲಿವರಿ ಸಮಯವನ್ನು 30 ನಿಮಿಷಕ್ಕೆ ಸರಾಸರಿಗೊಳಿಸಲಾಗಿತ್ತು. ಆದರೆ ಅದು ತುಂಬಾ ನಿಧಾನ ಎಂಬುದು ಗ್ರಾಹಕರ ಆಕ್ಷೇಪವಾಗಿತ್ತು. ಹೊಸ ಫೀಚರ್‌ನಿಂದ ಹೆಚ್ಚು ಅನುಕೂಲ ಆಗಲಿದೆ ಎಂದು ಅವರು ಹೇಳಿದ್ದಾರೆ.

    ಕೇವಲ 10 ನಿಮಿಷದಲ್ಲಿ ಫುಡ್‌ ಡೆಲಿವರಿ ಏಕೆ ಮಾಡಬೇಕು, ಹೇಗೆ ಮಾಡವುದು ಎಂಬ ಬಗ್ಗೆ ದೀಪಿಂದರ್‌ ಗೋಯಲ್‌ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯಾರಿಗೆ ಬೇಕು ʼದಿ ಕಾಶ್ಮೀರ್‌ ಫೈಲ್ಸ್‌ʼ: ತೆಲಂಗಾಣ ಸಿಎಂ ಪ್ರಶ್ನೆ

  • ಗೂಗಲ್ ಮೀಟ್‍ನಲ್ಲಿ ಮದುವೆ – ಝೊಮ್ಯಾಟೊ ಊಟ

    ಗೂಗಲ್ ಮೀಟ್‍ನಲ್ಲಿ ಮದುವೆ – ಝೊಮ್ಯಾಟೊ ಊಟ

    ಕೋಲ್ಕತ್ತಾ: ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಷ್ಟೋ ಮದುವೆ, ಸಭೆ, ಸಮಾರಂಭಗಳು ಮುಂದೂಡಲಾಗಿದೆ. ಆದರೆ ಇಲ್ಲೋಂದು ಜೋಡಿಯು  ಅದ್ದೂರಿಯಾಗಿ ಮದವೆ ಆಗಿ ಕುಟುಂಬಸ್ಥರಿಗೆ ಊಟವನ್ನು ಹಾಕಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

    ಸಂದೀಪನ್ ಹಾಗೂ ಅಧಿತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ 200 ಜನರ ಮಿತಿಯನ್ನು ನಿಗದಿಪಡಿಸಿದೆ. ಈ ಜೋಡಿ ಇದೇ ಜನವರ 24ರಂದು ಹಸೆಮಣೆ ಏರಲು ನಿರ್ಧರಿಸಿದ್ದಾರೆ ಗೂಗಲ್ ಮೀಟ್ ಮೂಲಕ ಸಂಬಂಧಿಕರನ್ನು ಆಹ್ವಾನಿಸಿ, ಊಟವನ್ನು ಝೊಮ್ಯಾಟೊ ಮೂಲಕ ಅವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.  ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ಮದುವೆಯ ಕುರಿತಾಗಿ ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ವರ ಸಂದೀಪ ಕಳೆದ ವರ್ಷವೇ ಮದುವೆಯಾಗಲು ನಿರ್ಧರಿಸಿದ್ದೆವು. ಈ ಬಾರಿಯೂ ಕೊರೊನಾ ಕಾಡುತ್ತಿದೆ. ಹೀಗಾಗಿ ವರ್ಚುವಲ್ ಮೂಲಕ ಮದುವೆಯಾಗಲು ನಿರ್ಧರಿಸದ್ದೇವೆ. ಮದುವೆಗೆ 450 ಜನರಿಗೆ ಗೂಗಲ್ ಮೀಟ್ ಲಿಂಕ್‍ಅನ್ನು ಕಳುಹಿಸಲಾಗುವುದು. ಊಟವನ್ನು ಝೊಮ್ಯಾಟೊ ಮೂಲಕ ಸಂಬಂಧಿಕರ ಮನೆಗಳಿಗೇ ತಲುಪಿಸುವ ವ್ಯಸವಸ್ಥೆ ಮಾಡಲಾಗಿದೆ ಮದುವೆಯನ್ನು ಗೂಗಲ್ ಮೀಟ್‍ನಲ್ಲಿ ಪ್ರಸಾರ ಮಾಡಲು ಅಧಿತಿ ಹಾಗೂ ಸಂದೀಪ್ ಟೆಕ್ನಿಕಲ್ ಟೀಮ್ ಅನ್ನು ನೇಮಿಸಿದ್ದಾರೆ ಎಂದು ಮದುವೆ ಕುರಿತಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

     

  • ಝೊಮ್ಯಾಟೊ, ಸ್ವಿಗ್ಗಿಗೆ ಟಕ್ಕರ್ ಕೊಡಲು ಫೀಲ್ಡಿಗಿಳಿದ ಅಮೆಜಾನ್ ಫುಡ್

    ಝೊಮ್ಯಾಟೊ, ಸ್ವಿಗ್ಗಿಗೆ ಟಕ್ಕರ್ ಕೊಡಲು ಫೀಲ್ಡಿಗಿಳಿದ ಅಮೆಜಾನ್ ಫುಡ್

    – ಬೆಂಗಳೂರಿನಿಂದಲೇ ಸೇವೆ ಆರಂಭ
    – ಮದ್ಯ ಡೆಲಿವರಿ ಸೇವೆ ಆರಂಭಿಸಿದ ಸ್ವಿಗ್ಗಿ, ಝೊಮ್ಯಾಟೊ

    ನವದೆಹಲಿ: ಇ-ಕಾಮರ್ಸ್ ಫೇಮಸ್ ಕಂಪನಿ ಅಮೆಜಾನ್ ಇದೀಗ ಫುಡ್ ಡೆಲಿವರಿಗೂ ಲಗ್ಗೆ ಇಟ್ಟಿದ್ದು, ಝೊಮ್ಯಾಟೊ, ಸ್ವಿಗ್ಗಿಯಂತೆ ಹೊಸ ಅಮೆಜಾನ್ ಫುಡ್ ಎಂಬ ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನಿಂದಲೇ ತನ್ನ ಸೇವೆಯನ್ನು ಪ್ರಾರಂಭ ಮಾಡಿದ್ದು, ಝೊಮ್ಯಾಟೊ, ಸ್ವಿಗ್ಗಿಗೆ ಟಕ್ಕರ್ ಕೊಡಲು ಸಜ್ಜಾಗಿದೆ.

    ನಮ್ಮ ಗ್ರಾಹಕರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸುರಕ್ಷತೆಯ ಉನ್ನತ ಮಾನದಂಡಗಳಿಗೆ ಬದ್ಧರಾಗಿದ್ದೇವೆ. ಶುಚಿತ್ವದ ಖಾತ್ರಿಯಿರುವ ರೆಸ್ಟೊರೆಂಟ್‍ಗಳಿಂದ ಯಾರ ಸಂಪರ್ಕಕ್ಕೂ ಬಾರದಂತೆ ಸುರಕ್ಷಿತವಾಗಿ ಆರ್ಡರ್ ಮಾಡಿದ ಆಹಾರವನ್ನು, ಬೆಂಗಳೂರಿನ ಆಯ್ದ ಪಿನ್‍ಕೋಡ್‍ಗಳಲ್ಲಿ ನಾವು ಅಮೆಜಾನ್ ಫುಡ್ ಸೇವೆಯನ್ನು ಪ್ರಾರಂಭಿಸುತ್ತಿದ್ದೇವೆ. ಸ್ಥಳೀಯ ರೆಸ್ಟೋರೆಂಟ್‍ಗಳಿಂದ ಮತ್ತು ನಮ್ಮ ಉನ್ನತ ನೈರ್ಮಲ್ಯ ಪ್ರಮಾಣೀಕರಣವನ್ನು ದೃಢೀಕರಿಸಿದ ಕ್ಲೌಡ್ ಅಡುಗೆ ಮನೆಗಳಿಂದ ಗ್ರಾಹಕರಿಗೆ ಆಹಾರವನ್ನು ಆರ್ಡರ್ ಮಾಡಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತದೆ ಎಂದು ಅಮೆಜಾನ್ ತನ್ನ ಆ್ಯಪ್‍ನಲ್ಲಿ ಪ್ರಕಟಿಸಿದೆ.

    ಕಳೆದ ಫೆಬ್ರವರಿಯಲ್ಲಿಯೇ ಆರಂಭಿಸಬೇಕಾಗಿದ್ದ ಅಮೆಜಾನ್ ಫುಡ್ ಸೇವೆಯನ್ನು ಕೊರೊನಾ ವೈರಸ್ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಸಾಂಕ್ರಾಮಿಕ ರೋಗದ ಹಿನ್ನೆಲೆ ಆನ್‍ಲೈನ್ ಡೆಲಿವರಿ ಆ್ಯಪ್‍ಗಳಾದ ಸ್ವಿಗ್ಗಿ, ಝೊಮ್ಯಾಟೊ, ಬಿಗ್ ಬಾಸ್ಕೆಟ್ ಮತ್ತು ಗ್ರೋಫರ್ಸ್ ನಂತಹ ಇತರ ಸೇವೆಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ವಸ್ತುಗಳ ಡೆಲಿವರಿಯಲ್ಲಿ ಬ್ಯುಸಿಯಾಗಿವೆ. ಅಲ್ಲದೇ ಸ್ವಿಗ್ಗಿ ಮತ್ತು ಝೊಮ್ಯಾಟೊ ಜಾರ್ಖಂಡ್ ರಾಜಧಾನಿ ರಾಂಚಿನಲ್ಲಿ ಮದ್ಯ ಮತ್ತು ಮದ್ಯಯುಕ್ತ ಪಾನೀಯಗಳ ಸೇವೆಗಳ ಡೆಲಿವರಿ ಆರಂಭಿಸಿದೆ.

    ಮದ್ಯ ಆರ್ಡರ್ ಮಾಡುವ ಗ್ರಾಹಕರು ತಮ್ಮ ವಯಸ್ಸು, ಸರ್ಕಾರ ವಿತರಿಸಿರುವ ಗುರುತಿನ ಪತ್ರ ಮತ್ತು ಸೆಲ್ಫಿಯೊಂದಿಗೆ ದೃಢೀಕರಿಸಬೇಕು. ಸ್ವಿಗ್ಗಿಯಲ್ಲಿ ‘ವೈನ್ ಶಾಪ್ಸ್’ ಎಂಬ ಹೊಸ ಆಪ್ಷನ್ ಅನ್ನು ಹೊಂದಿದ್ದು, ಗ್ರಾಹಕರು ಮನೆಯಿಂದಲೇ ಮದ್ಯವನ್ನು ಆರ್ಡರ್ ಮಾಡಿದರೆ ಡೆಲಿವರಿಯನ್ನು ಮನೆ ಬಾಗಲಿದೆ ತಲುಪಿಸಲಾಗುತ್ತದೆ.

    ಸದ್ಯ ಬೆಂಗಳೂರಿನ ಬೆಳ್ಳಂದೂರು, ಹರಳೂರು, ಮಾರತ್‍ಹಳ್ಳಿ ಮತ್ತು ವೈಟ್‍ಫೀಲ್ಡ್ ನ ಕೆಲವು ಭಾಗಗಳಲ್ಲಿ ಈ ಸೇವೆಯನ್ನು ಅಮೆಜಾನ್ ಫುಡ್ ಶುರು ಮಾಡಿದೆ. ಕಂಪನಿಯು ತನ್ನ ಆಹಾರ ಸೇವೆಗಳನ್ನು ನಗರದ ಉಳಿದ ಭಾಗಗಳಲ್ಲಿ ವಿಸ್ತರಿಸುವುದೇ ಎಂಬ ಬಗ್ಗೆ ಇನ್ನೂ ಸ್ಪಷ್ಟೀಕರಣ ಸಿಕ್ಕಿಲ್ಲ.

  • ಮದ್ಯ ಡೆಲಿವರಿಗೆ ಝೊಮ್ಯಾಟೊ ಪ್ಲ್ಯಾನ್

    ಮದ್ಯ ಡೆಲಿವರಿಗೆ ಝೊಮ್ಯಾಟೊ ಪ್ಲ್ಯಾನ್

    ನವದೆಹಲಿ: ಆಹಾರ ಪದಾರ್ಥ ಡೆಲಿವರಿ ಮಾಡುತ್ತಿದ್ದ ಝೊಮ್ಯಾಟೊ ಕಂಪನಿ ಲಾಕ್‍ಡೌನ್ ಹಿನ್ನೆಲೆ ದಿನಸಿ ಪದಾರ್ಥಗಳನ್ನೂ ಡೆಲಿವರಿ ಮಾಡುತ್ತಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮದ್ಯವನ್ನೂ ಡೆಲಿವರಿ ಮಾಡಲು ನಿರ್ಧರಿಸಿದೆ.

    ಸುಮಾರು 40 ದಿನಗಳ ಲಾಕ್‍ಡೌನ್ ಬಳಿಕ ಇದೀಗ ಸಡಿಲಿಕೆ ನೀಡಲಾಗಿದ್ದು, ಬಾರ್‍ಗಳ ಮುಂದೆ ಮದ್ಯ ಪ್ರಿಯರು ಕ್ಯೂನಲ್ಲಿ ನಿಂತು ಮದ್ಯ ಖರೀದಿಸಬೇಕಿದೆ. ಅಲ್ಲದೆ ಈ ವೇಳೆ ಹೆಚ್ಚಿನ ಗಲಾಟೆಗಳು ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಪಾಡುವುದು ಸಾಹಸವಾಗಿದೆ. ಹೀಗಾಗಿ ಮದ್ಯಪ್ರಿಯರನ್ನು ನಿರ್ವಹಿಸುವುದು ಸವಾಲಾಗಿದೆ. ಇದನ್ನರಿತ ಝೊಮ್ಯಾಟೊ ಮದ್ಯವನ್ನೂ ಡೆಲಿವರಿ ಮಾಡಲು ಮುಂದಾಗಿದ್ದು, ಇದಕ್ಕೆ ಸರ್ಕಾರದ ಒಪ್ಪಿಗೆ ಸಿಗಬೇಕಿದೆ.

    ಲಾಕ್‍ಡೌನ್ ಹಿನ್ನೆಲೆ ದೇಶದ ಬಹುತೇಕ ನಗರಗಳಲ್ಲಿ ನೂರಾರು ಜನ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದು, ಉದ್ದದ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ. ಮಹಿಳೆಯರು ಸಹ ಸಾಲಿನಲ್ಲಿ ನಿಂತು ಮದ್ಯ ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ ಬಹುತೇಕ ಕಡೆ ಗಲಾಟೆ ಹೆಚ್ಚುತ್ತಿದೆ. ಇದೆಲ್ಲದರ ಮದ್ಯೆ ದೆಹಲಿಯಲ್ಲಿ ಕೊರೊನಾ ವಿಶೇಷ ಶುಲ್ಕವೆಂದು ಪ್ರತಿ ಬಾಟಲಿ ಮೇಲೆ ಶೇ.70ರಷ್ಟು ದರವನ್ನು ಹೆಚ್ಚಿಸಲಾಗಿದೆ. ಕೊರೊನಾ ಹಾಟ್‍ಸ್ಪಾಟ್ ಆಗಿರುವ ಮುಂಬೈನಲ್ಲಿ ಬಾರ್‍ಗಳನ್ನು ತೆರೆದ ಎರಡೇ ದಿನಗಳಲ್ಲಿ ಮತ್ತೆ ಮುಚ್ಚಲಾಗಿದೆ.

    ಮದ್ಯವನ್ನು ಹೋಮ್ ಡೆಲಿವರಿ ಮಾಡಲು ಭಾರತದ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಈ ಕುರಿತು ಕೈಗಾರಿಕಾ ವಿಭಾಗ ಹಾಗೂ ಅಂತರಾಷ್ಟ್ರೀಯ ಸ್ಪಿರಿಟ್ಸ್ ಆ್ಯಂಡ್ ವೈನ್ಸ್ ಅಸೋಷಿಯೇಶನ್ ಆಫ್ ಇಂಡಿಯಾ(ಐಎಸ್‍ಡಬ್ಲ್ಯೂಎಐ) ಲಾಬಿ ನಡೆಸುತ್ತಲೇ ಇವೆ.

    ಕಡಿಮೆ ಸೋಂಕು ಹೊಂದಿರುವ ಪ್ರದೇಶಗಳಲ್ಲಿ ಮದ್ಯ ವಿತರಿಸಲು ಝೊಮ್ಯಾಟೊ ಪ್ಲ್ಯಾನ್ ಮಾಡಿದ್ದು, ಈ ಕುರಿತು ಝೊಮ್ಯಾಟೊ ಸಿಇಒ ಮೋಹಿತ್ ಗುಪ್ತಾ ಅವರು ಐಎಸ್‍ಡಬ್ಲ್ಯೂಎಐಗೆ ಪತ್ರ ಬರೆದಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

  • ಝೊಮ್ಯಾಟೊದಿಂದ ಮಧ್ಯರಾತ್ರಿ ಮನೆ ತಲುಪಿದ-ಯುವಕನ ಪ್ಲಾನ್‍ಗೆ ಜನರು ಫಿದಾ

    ಝೊಮ್ಯಾಟೊದಿಂದ ಮಧ್ಯರಾತ್ರಿ ಮನೆ ತಲುಪಿದ-ಯುವಕನ ಪ್ಲಾನ್‍ಗೆ ಜನರು ಫಿದಾ

    ಹೈದರಾಬಾದ್: ಝೊಮ್ಯಾಟೊ ಆಹಾರ ಪೂರೈಕೆ ಮಾಡುವ ಜೊತೆಗೆ ಒಂದಿಲ್ಲ ಒಂದು ವಿಷಯಗಳಿಂದ ಸುದ್ದಿಯಾಗುತ್ತಲೇ ಇರುತ್ತಿದೆ. ಇದೀಗ ಹೈದರಾಬಾದ್ ಯುವಕನೋರ್ವ ಝೊಮ್ಯಾಟೊದ ಸಹಾಯದಿಂದ ಮಧ್ಯರಾತ್ರಿ ತನ್ನ ಮನೆಯನ್ನು ತಲುಪಿದ್ದಾನೆ. ಯುವಕ ಮನೆ ತಲುಪಲು ಕಂಡುಕೊಂಡ ಮಾರ್ಗಕ್ಕೆ ಜನರು ಫಿದಾ ಆಗಿದ್ದಾರೆ. ಅಂದು ಮಧ್ಯರಾತ್ರಿ ತಾನು ಹೇಗೆ ತಲುಪಿದೆ ಎಂಬುದರ ಮಾಹಿತಿಯನ್ನು ಯುವಕ ತನ್ನ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾನೆ.

    ಓಬೇಶ್ ಕೊಮಿರಿಶೆಟ್ಟಿ ಝೊಮ್ಯಾಟೊ ಆ್ಯಪ್ ಬಳಸಿ ಮನೆ ತಲುಪಿದ ಯುವಕ. ಅಂದು ರಾತ್ರಿ 11.50ರ ಸಮಯ. ನಾನು ಇನ್ರೊಬಿಟ್ ಮಾಲ್ ಬಳಿ ಆಟೋಗಾಗಿ ಕಾಯುತ್ತಾ ನಿಂತಿದ್ದೆ. ಆದರೆ ಸ್ಥಳದಲ್ಲಿ ಯಾವ ಆಟೋ ಕಾಣಿಸುತ್ತಿರಲಿಲ್ಲ. ಊಬರ್ ಆ್ಯಪ್ ನೋಡಿದರೆ ಮನೆ ತಲುಪಲು 300 ರೂ. ಚಾರ್ಜ್ ತೋರಿಸುತ್ತಿತ್ತು. ಆ ಸಮಯದಲ್ಲಿ ಸ್ವಲ್ಪ ಹಸಿವು ಸಹ ಆಗಿತ್ತು. ಝೊಮ್ಯಾಟೊ ಆ್ಯಪ್ ಓಪನ್ ಮಾಡಿ ಸುತ್ತಮುತ್ತ ಇರುವ ಹೋಟೆಲ್, ಫುಡ್ ಸೆಂಟರ್ ಗಳನ್ನು ಹುಡುಕಲಾರಂಭಿಸಿದೆ. ದೋಸೆ ಸೆಂಟರ್ ಕಾಣಿಸಿದಾಗ ಝೊಮ್ಯಾಟೊದಲ್ಲಿ ಎಗ್ ದೋಸೆ ಆರ್ಡರ್ ಮಾಡಿದೆ. ಸ್ವಲ್ಪ ಸಮಯದ ಬಳಿಕ ದೋಸೆ ಸೆಂಟರ್ ಗೆ ಝೊಮ್ಯಾಟೊ ಡೆಲಿವರಿ ಬಾಯ್ ಬಂದು ನಾನು ಹೇಳಿದ ಆರ್ಡರ್ ತೆಗೆದುಕೊಳ್ಳುತ್ತಿದ್ದರು. ಆತನ ಬಳಿಗೆ ಹೋಗಿ ಈ ದೋಸೆಯನ್ನು ಆರ್ಡರ್ ಮಾಡಿದ್ದು ನಾನು, ನೀವು ತಲುಪಿಸಬೇಕಾದ ವಿಳಾಸವೇ ನನ್ನ ಮನೆ ಎಂದು ತಿಳಿಸಿದೆ.

    ಆರ್ಡರ್ ನೀಡಲು ನೀವು ಹೋಗುವಾಗ ನನಗೆ ಡ್ರಾಪ್ ನೀಡಿ ಎಂದು ಕೇಳಿಕೊಂಡಿದ್ದಕ್ಕೆ ಡೆಲಿವರಿ ಬಾಯ್ ಒಪ್ಪಿಕೊಂಡರು. ಹೀಗೆ ಮಧ್ಯರಾತ್ರಿ ಹಣ ನೀಡದೇ ಊಟದೊಂದಿಗೆ ಸುರಕ್ಷಿತವಾಗಿ ಮನೆ ತಲುಪಿದೆ. ಡೆಲಿವರಿ ಬಾಯ್ ತನಗೆ 5 ಸ್ಟಾರ್ ನೀಡಿ ಎಂದು ಕೇಳಿಕೊಂಡಿದ್ದಕ್ಕೆ ಓಕೆ ಎಂದು ಮನೆ ಸೇರಿದೆ ಎಂದು ಓಬೇಶ್ ಬರೆದುಕೊಂಡಿದ್ದಾರೆ.

    ಓಬೇಶ್ ಪ್ಲಾನ್ ಕೇಳಿದ ನೆಟ್ಟಿಗರು ಫಿದಾ ಆಗಿದ್ದು, ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಲೆಜೆಂಡ್ ಅಂದ್ರೆ, ಇನ್ನೂ ಕೆಲವರು ನಿಮ್ಮ ಈ ಯೋಚನೆಗೆ ಪ್ರಶಸ್ತಿ ನೀಡಬೇಕು. ಮತ್ತೆ ಹಲವರು ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರ ಎಂದು ಕಮೆಂಟ್ ಮಾಡುವ ಮೂಲಕ ಓಬೇಶ್ ಬುದ್ಧಿವಂತಿಕೆಯನ್ನು ಜಾಲತಾಣಿಗರು ಕೊಂಡಾಡಿದ್ದಾರೆ.

  • ಹಿಂದೂವಲ್ಲದ ವ್ಯಕ್ತಿ ತಂದ ಆಹಾರ ಸ್ವೀಕರಿಸಲಾರೆ- ಝೊಮ್ಯಾಟೊ ಖಡಕ್ ತಿರುಗೇಟು

    ಹಿಂದೂವಲ್ಲದ ವ್ಯಕ್ತಿ ತಂದ ಆಹಾರ ಸ್ವೀಕರಿಸಲಾರೆ- ಝೊಮ್ಯಾಟೊ ಖಡಕ್ ತಿರುಗೇಟು

    ನವದೆಹಲಿ: ಹಿಂದೂ ಅಲ್ಲದ ವ್ಯಕ್ತಿ ತಂದಿರುವ ಆಹಾರವನ್ನು ನಾನು ಸೇವಿಸಲಾರೆ. ಹಾಗಾಗಿ ನನ್ನ ಆರ್ಡರ್ ಕ್ಯಾನ್ಸಲ್ ಮಾಡುತ್ತೇನೆ ಎಂದು ಹೇಳಿದ್ದ ವ್ಯಕ್ತಿಗೆ ಝೊಮ್ಯಾಟೊ ಕಂಪನಿ ಖಡಕ್ ತಿರುಗೇಟು ನೀಡಿದೆ.

    ಅಮಿತ್ ಶುಕ್ಲಾ ತಮ್ಮ ಆರ್ಡರ್ ಕ್ಯಾನ್ಸಲ್ ಮಾಡಿ ಝೊಮ್ಯಾಟೊ ಆ್ಯಪ್ ಅನ್ ಇನ್ಸಟಾಲ್ ಮಾಡಿಕೊಂಡು ಈ ಸಂಬಂಧ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು. ಝೊಮ್ಯಾಟೊ ಆರ್ಡರ್ ನಾನು ಕ್ಯಾನ್ಸಲ್ ಮಾಡಿದ್ದೇನೆ. ಕಾರಣ ಹಿಂದೂ ಅಲ್ಲದ ವ್ಯಕ್ತಿಯ ಕೈಯಲ್ಲಿ ನನಗೆ ಆಹಾರ ಕಳುಹಿಸಲಾಗುತ್ತಿತ್ತು. ನಾನು ಡೆಲಿವರಿ ಬಾಯ್ ನನ್ನು ಬದಲಿಸಿ ಎಂದು ಕೇಳಿದ್ದಕ್ಕೆ ಆಗಲ್ಲ ಎಂದರು.

    ಕೊನೆಗೆ ಆರ್ಡರ್ ಕ್ಯಾನ್ಸಲ್ ಮಾಡಿದ್ದರಿಂದ ಹಣ ರಿಫಂಡ್ ಮಾಡಲು ಸಾಧ್ಯವಿಲ್ಲ ಎಂದು ಕಂಪನಿ ತಿಳಿಸಿತು. ನೀವು ಡೆಲಿವರಿ ತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹಾಕುವಂತಿಲ್ಲ ಮತ್ತು ನನಗೆ ರಿಫಂಡ್ ಬೇಕಾಗಿಲ್ಲ. ಹಾಗಾಗಿ ಆರ್ಡರ್ ಕ್ಯಾನ್ಸಲ್ ಮಾಡಿ ಎಂದು ಅಮಿತ್ ಟ್ವಿಟ್ಟರ್ ನಲ್ಲಿ ಝೊಮ್ಯಾಟೊಗೆ ಟ್ಯಾಗ್ ಮಾಡಿಕೊಂಡಿದ್ದರು.

    ಮತ್ತೊಂದು ಟ್ವೀಟ್‍ನಲ್ಲಿ ಝೊಮ್ಯಾಟೊ ಆ್ಯಪ್ ಅನ್ ಇನ್ಸಟಾಲ್ ಬಗ್ಗೆ ಹೇಳಿಕೊಂಡಿರುವ ಅಮಿತ್, ನಾನು ಆ ವ್ಯಕ್ತಿಯಿಂದ ಆಹಾರ ಸ್ವೀಕರಿಸಲ್ಲ ಎಂದು ಹೇಳುತ್ತಿದ್ದರೂ ಕಂಪನಿ ನನ್ನ ಮೇಲೆ ಒತ್ತಡ ಹಾಕುತ್ತಿದೆ. ಆರ್ಡರ್ ಕ್ಯಾನ್ಸಲ್ ಮಾಡಿದ್ರೂ ರಿಫಂಡ್ ಮಾಡಿಲ್ಲ. ಈ ಸಂಬಂಧ ನಮ್ಮ ವಕೀಲರ ಬಳಿ ಚರ್ಚಿಸುತ್ತೇನೆ ಎಂದು ಹೇಳುವ ಮೂಲಕ ಕೋರ್ಟ್ ಮೊರೆ ಹೋಗುವ ಮಾಹಿತಿ ನೀಡಿದ್ದಾರೆ.

    ಝೊಮ್ಯಾಟೊ ತಿರುಗೇಟು:
    ಅಮಿತ್ ಶುಕ್ಲಾ ಟ್ವೀಟಿಗೆ ಪ್ರತಿಕ್ರಿಯಿಸಿರುವ ಝೊಮ್ಯಾಟೊ, ಆಹಾರಕ್ಕೆ ಯಾವುದೇ ಧರ್ಮವಿರಲ್ಲ. ಆಹಾರವೇ ಒಂದು ಧರ್ಮ ಎಂದು ಚಿಕ್ಕದಾಗಿ ಬರೆದು ಖಡಕ್ ತಿರುಗೇಟು ನೀಡಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಝೊಮ್ಯಾಟೊ ಸ್ಥಾಪಕ ದೀಪೇಂದ್ರ ಗೊಯಲ್, ನಮಗೆ ಐಡಿಯಾ ಆಫ್ ಇಂಡಿಯಾ, ಗೌರವಯುತ ಗ್ರಾಹಕರು ಮತ್ತು ಪಾಟ್ರ್ನನರ್ ಗಳ ವಿವಿಧತೆಯ ಬಗ್ಗೆ ಹೆಮ್ಮೆ ಇದೆ. ಆದರೆ ನಮ್ಮ ಮೌಲ್ಯಗಳಿಗೆ ಅಡ್ಡಿಯುಂಟು ಮಾಡುವ ವ್ಯವಹಾರವನ್ನು ಕಳೆದುಕೊಳ್ಳುವುದರಿಂದ ನಮಗೆ ಯಾವುದೇ ರೀತಿಯಲ್ಲಿ ದುಃಖ ಆಗಲಾರದು ಎಂದು ಬರೆದು ಕೊನೆಗೆ ತ್ರಿವರ್ಣ ಧ್ವಜದ ಟಿಕ್ಕರ್ ಹಾಕಿಕೊಂಡಿದ್ದಾರೆ.

  • ಪನೀರ್ ಆರ್ಡರ್ ಮಾಡಿದ್ರೆ ಚಿಕನ್ ಡೆಲಿವರಿ: ಝೊಮ್ಯಾಟೊಗೆ 55 ಸಾವಿರ ರೂ. ದಂಡ

    ಪನೀರ್ ಆರ್ಡರ್ ಮಾಡಿದ್ರೆ ಚಿಕನ್ ಡೆಲಿವರಿ: ಝೊಮ್ಯಾಟೊಗೆ 55 ಸಾವಿರ ರೂ. ದಂಡ

    ಪುಣೆ: ಪನೀರ್ ಡೆಲಿವರಿ ಮಾಡುವ ಬದಲು ಚಿಕನ್ ಡೆಲಿವರಿ ಮಾಡಿದ್ದಕ್ಕೆ ಗ್ರಾಹಕರ ನ್ಯಾಯಾಲಯ ಆನ್‍ಲೈನ್ ಆಹಾರ ಮಾರಾಟ ಸಂಸ್ಥೆ ಝೊಮ್ಯಾಟೊ ಹಾಗೂ ಹೋಟೆಲ್‍ಗೆ 55 ಸಾವಿರ ರೂ. ದಂಡ ವಿಧಿಸಿದೆ.

    ವಕೀಲರೊಬ್ಬರು ಆನ್‍ಲೈನ್ ಆಹಾರ ಮಾರಾಟ ಜಾಲತಾಣ ಝೊಮ್ಯಾಟೊದಲ್ಲಿ ಪನೀರ್ ಆರ್ಡರ್ ಮಾಡಿದ್ದಾನೆ. ಆದರೆ ಡೆಲಿವರಿ ಬಾಯ್ ಮಾತ್ರ ಚಿಕನ್ ತಂದು ಕೊಟ್ಟಿದ್ದಾನೆ. ಈ ಕುರಿತು ವಕೀಲ ಷಣ್ಮುಖ ದೇಶಮುಖ್ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರು.

    ಪ್ರಕರಣದ ವಿಚಾರಣೆ ನಡೆಸಿದ ಶುಭಾಂಗಿ ದುನಾಖೆ ಮತ್ತು ಅನಿಲ್ ಜವಲೇಕರ್ ಅವರಿದ್ದ ಪೀಠ, ಪುಣೆಯ ಕೇಂದ್ರ ಕಚೇರಿ, ಗುರ್ಗಾಂವ್ ಕೇಂದ್ರ ಕಚೇರಿ ಹಾಗೂ ಪುಣೆಯ ಹೋಟೆಲ್ ಪ್ರೀತ್ ಪಂಜಾಬಿ ಸ್ವಾದ್ ಹೋಟೆಲ್‍ಗೆ 55 ಸಾವಿರ ರೂ. ದಂಡ ವಿಧಿಸಿದ್ದು, 45 ದಿನಗಳಲ್ಲಿ ದಂಡವನ್ನು ಗ್ರಾಹಕರಿಗೆ ಪಾವತಿಸವಂತೆ ಸೂಚಿಸಿದೆ. ತಡವಾದರೆ ಅದಕ್ಕೆ ಅನ್ವಯವಾಗುವ ಬಡ್ಡಿಯನ್ನು ಸೇರಿಸಿ ಹಣ ನಿಡುವಂತೆ ಸೂಚಿಸಿದೆ.

    ಸಂಸ್ಥೆಯು ಕೇವಲ ಒಂದು ಬಾರಿಯಲ್ಲ ಎರಡು ಬಾರಿ ಇದೇ ರೀತಿ ಮಾಡಿದ್ದು, ವಕೀಲ ದೇಶಮುಖ್ ಅವರು ಪನೀರ್ ಬಟರ್ ಮಸಾಲಾ ಆರ್ಡರ್ ಮಾಡಿದ್ದಾರೆ. ಆದರೆ, ಸಂಸ್ಥೆ ಬಟರ್ ಚಿಕನ್ ಡೆಲಿವರಿ ಮಾಡಿದೆ. ಎರಡೂ ಒಂದೇ ರೀತಿ ಕಾಣುವುದರಿಂದ ಅರಿವಾಗದೆ ಗ್ರಾಹಕ ಅದನ್ನು ತಿಂದಿದ್ದಿದ್ದಾರೆ ಎಂದು ವರದಿಯಾಗಿದೆ.

    ಈ ಕುರಿತು ಝೊಮ್ಯಾಟೊ ಸ್ಪಷ್ಟಪಡಿಸಿದ್ದು, ವಕೀಲರು ಆಪ್‍ನಲ್ಲಿಯೇ ದೂರು ನೀಡಿದ್ದರು. ಈಗಾಗಲೇ ಅವರ ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಬೇರೆ ಪದಾರ್ಥ ಡೆಲಿವರಿ ಮಾಡಿರುವುದು ಹೋಟೆಲ್ ತಪ್ಪು ಎಂದು ಝೊಮ್ಯಾಟೊ ವಾದಿಸಿದೆ. ಹೋಟೆಲ್‍ನಷ್ಟೇ ತಪ್ಪು ಸಂಸ್ಥೆಯದ್ದೂ ಇದೆ ಎಂದು ಗ್ರಾಹಕರ ನ್ಯಾಯಾಲಯ ತಿಳಿಸಿದೆ. ಹೋಟೆಲ್ ಸಹ ತನ್ನ ತಪ್ಪನ್ನು ಒಪ್ಪಿಕೊಂಡಿದೆ.

    ಝೊಮ್ಯಾಟೊ ಹಾಗೂ ಹೋಟೆಲ್ ಎರಡೂ ಸೇರಿ ಕೆಲಸದಲ್ಲಿನ ಎಡವಟ್ಟು ಹಾಗೂ ಮಾನಸಿಕ ಕಿರುಕುಳ ನೀಡಿದ್ದಕ್ಕೆ 50 ಸಾವಿರ ರೂ. ದಂಡ ನೀಡುವಂತೆ ಸೂಚಿಸಿದೆ.