Tag: ಝೀವಾ

  • ಮೆಸ್ಸಿ ಹಸ್ತಾಕ್ಷರ ಹಾಕಿ ಕೊಟ್ಟ ಜೆರ್ಸಿ ಇದು ಎಂದ ಝೀವಾ

    ಮೆಸ್ಸಿ ಹಸ್ತಾಕ್ಷರ ಹಾಕಿ ಕೊಟ್ಟ ಜೆರ್ಸಿ ಇದು ಎಂದ ಝೀವಾ

    ಮುಂಬೈ: ಫಿಫಾ ವಿಶ್ವಕಪ್ (Fifa World Cup) ಗೆದ್ದ ಫುಟ್‍ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ (Lionel Messi) ತಮ್ಮ ಜೆರ್ಸಿಯೊಂದಕ್ಕೆ (Signed Argentina Jersey) ಸೈನ್ ಮಾಡಿ ಟೀಂ ಇಂಡಿಯಾದ ಮಾಜಿ ನಾಯಕ ಧೋನಿ (M.S Dhoni) ಅವರ ಪುತ್ರಿ ಝೀವಾಗೆ ಗಿಫ್ಟ್ ನೀಡಿದ್ದಾರೆ.

    7ರ ಹರೆಯದ ಪುಟ್ಟ ಹುಡುಗಿ ಝೀವಾ ತಂದೆ ಧೋನಿಯಂತೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ ಹುಡುಗಿ. ಫಿಫಾ ವಿಶ್ವಕಪ್ ವೇಳೆ ಫುಟ್‍ಬಾಲ್ ನೋಡುತ್ತಿದ್ದ ಝೀವಾ ಮೆಸ್ಸಿಯ ಆಟ ನೋಡಿದ್ದರು. ಮೆಸ್ಸಿ ವಿಶ್ವಕಪ್ ಗೆದ್ದಾಗ ಸಂಭ್ರಮಿಸಿದ್ದರು. ಇದೀಗ ಮೆಸ್ಸಿ ತಮ್ಮ ಜೆರ್ಸಿಯೊಂದಕ್ಕೆ ಹಸ್ತಾಕ್ಷರ ಹಾಕಿ ಇದು ಝೀವಾಗೆ ಎಂದು ಭಾರತಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ಝೀವಾ, ಮೆಸ್ಸಿ ಹಸ್ತಾಕ್ಷರವಿರುವ ಜೆರ್ಸಿ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಧೋನಿ ಕ್ರಿಕೆಟರ್ ಆಗುವ ಮುನ್ನ ಫುಟ್‍ಬಾಲ್‍ನಲ್ಲಿ ಗೋಲ್ ಕೀಪರ್ ಆಗಿದ್ದರು. ಅಂದಿನಿಂದ ಇಂದಿನವರೆಗೆ ಧೋನಿಗೆ ಕ್ರಿಕೆಟ್ ಜೊತೆ ಫುಟ್‍ಬಾಲ್‍ನಲ್ಲೂ ಹೆಚ್ಚು ಒಲವಿದೆ. ಧೋನಿ ಮೆಸ್ಸಿ ಹಾಗೂ ಮ್ಯಾಚೆಂಸ್ಟರ್‌ ಯುನೈಟೆಡ್ ಕ್ಲಬ್‍ನ ಅಭಿಮಾನಿ ಹಾಗಾಗಿ ಮೆಸ್ಸಿ ವಿಶ್ವಕಪ್ ಗೆದ್ದ ಬಳಿಕ ಜೆರ್ಸಿಗೆ ಸೈನ್ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಟಿ20ಯಿಂದ ಟಿ10ನತ್ತ ಕ್ರಿಕೆಟ್

     

    View this post on Instagram

     

    A post shared by ZIVA SINGH DHONI (@ziva_singh_dhoni)

    ಲಿಯೋನೆಲ್ ಮೆಸ್ಸಿಯ ಫಿಫಾ ವಿಶ್ವಕಪ್ ಗೆಲ್ಲುವ ಹಲವು ವರ್ಷಗಳ ಕನಸು 2022ರಲ್ಲಿ ನನಸಾಗಿದೆ. ಕತಾರ್‌ನಲ್ಲಿ ನಡೆದ ಫೈನಲ್‍ನಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಮೆಸ್ಸಿ ಫಿಫಾ ವಿಶ್ವಕಪ್‍ಗೆ ಮುತ್ತಿಕ್ಕಿದ್ದರು.

    Live Tv
    [brid partner=56869869 player=32851 video=960834 autoplay=true]

  • ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ – ಗುಜರಾತ್‍ನಲ್ಲಿ ವ್ಯಕ್ತಿ ಅರೆಸ್ಟ್

    ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ – ಗುಜರಾತ್‍ನಲ್ಲಿ ವ್ಯಕ್ತಿ ಅರೆಸ್ಟ್

    ನವದೆಹಲಿ: ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣಕ್ಕೆ ಅವರ ಮಗಳಿಗೆ ಅತ್ಯಾಚಾರಕ್ಕೆ ಬೆದರಿಕೆ ಹಾಕಿದ್ದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಈ ಬಾರಿಯ ಐಪಿಎಲ್‍ನಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಅವರ ಮಗಳಿಗೆ ಬೆದರಿಕೆ ಹಾಕಿದ್ದ ಗುಜರಾತ್‍ನ ಕಚ್ ಜಿಲ್ಲೆಯ ನಿವಾಸಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್‍ನ ರಾಂಚಿಯಲ್ಲಿರುವ ರತು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

    ಯುಎಇ ನಡೆಯುತ್ತಿರುವ ಐಪಿಎಲ್-2020 ಈಗಾಗಲೇ 26 ಪಂದ್ಯಗಳನ್ನು ಪೂರ್ಣಗೊಳಿಸಿದೆ. ಈ ಟೂರ್ನಿಯಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇದರ ಜೊತೆಗೆ ನಾಯಕನಾಗಿ ಮತ್ತು ಬ್ಯಾಟ್ಸ್ ಮ್ಯಾನ್ ಅಗಿ ಕೂಡ ಎಂಎಸ್ ಧೋನಿಯವರು ನೀರಸ ಪ್ರದರ್ಶನ ತೋರುತ್ತಿದ್ದಾರೆ. ನಿನ್ನೆ ನಡೆದ ಬೆಂಗಳೂರು ವಿರುದ್ಧಪಂದ್ಯದಲ್ಲಿ ಚೆನ್ನೈ ಸೋತಿತ್ತು.

    ಕಳೆದ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ಗೆಲುವಿನ ಹಾದಿಯಲ್ಲಿ ಇದ್ದ ಚೆನೈ ತಂಡ ದಿಢೀರ್ ಕುಸಿತದಿಂದ 10 ರನ್‍ಗಳ ಅಂತರದಲ್ಲಿ ಸೋಲನ್ನು ಒಪ್ಪಿಕೊಂಡಿತ್ತು. ಈ ನಂತರ ಟ್ವಿಟ್ಟರಿನಲ್ಲಿ ಕಮೆಂಟ್ ಮಾಡಿರುವ ವಿಜಯ್ ಎಂಬ ವ್ಯಕ್ತಿ ಧೋನಿ ಮಗಳನ್ನು ಅತ್ಯಾಚಾರ ಮಾಡುವುದಾಗಿ ಹೇಳಿದ್ದನು. ಜೊತೆಗೆ ಅಸಭ್ಯ ಪದಗಳನ್ನು ಬಳಸಿ ಐದು ವರ್ಷದ ಕಂದಮ್ಮನನ್ನು ನಿಂದಿಸಿದ್ದನು.

    ಚೆನ್ನೈ ಐಪಿಎಲ್-2020ಯಲ್ಲಿ 7 ಪಂದ್ಯಗಳನ್ನು ಆಡಿ ಕೇವಲ ಎರಡಲ್ಲಿ ಗೆದ್ದು ಐದು ಪಂದ್ಯದಲ್ಲಿ ಸೋತು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಜೊತೆಗೆ ಧೋನಿಯವರು ಕೀಪಿಂಗ್‍ನಲ್ಲಿ ಮಿಂಚುತ್ತಿದ್ದರು ನಾಯಕನಾಗಿ ಮತ್ತು ಬ್ಯಾಟ್ಸ್ ಮ್ಯಾನ್ ಆಗಿ ವಿಫಲರಾಗಿದ್ದಾರೆ. ಬುಧವಾರದ ಪಂದ್ಯದಲ್ಲಿ ಕೋಲ್ಕತ್ತಾ ನೀಡಿದ 167 ರನ್‍ಗಳ ಸಾಧಾರಣ ಮೊತ್ತ ಚೇಸ್ ಮಾಡುವಲ್ಲಿ ಚೆನ್ನೈ ವಿಫಲವಾಗಿತ್ತು. ಇದರಿಂದ ಚೆನ್ನೈ ಅಭಿಮಾನಿಗಳಿಗೆ ತುಂಬ ನಿರಾಸೆಯುಂಟಾಗಿತ್ತು.

  • ಐಪಿಎಲ್‍ನಲ್ಲಿ ಧೋನಿ ವೈಫಲ್ಯ – ಮಗಳು ಝೀವಾಗೆ ಅತ್ಯಾಚಾರ ಬೆದರಿಕೆ

    ಐಪಿಎಲ್‍ನಲ್ಲಿ ಧೋನಿ ವೈಫಲ್ಯ – ಮಗಳು ಝೀವಾಗೆ ಅತ್ಯಾಚಾರ ಬೆದರಿಕೆ

    ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಐಪಿಎಲ್-2020ಯಲ್ಲಿ ವಿಫಲವಾಗಿದ್ದಕ್ಕೆ ವ್ಯಕ್ತಿಯೋರ್ವ ಅವರ ಮಗಳು ಝೀವಾ ಮೇಲೆ ಅತ್ಯಾಚಾರ ಮಾಡುವ ಬೆದರಿಕೆ ಹಾಕಿದ್ದಾನೆ.

    ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‍ನಲ್ಲಿ ಧೋನಿ ನೇತೃತ್ವದ ತಂಡ ಆರಂಭದಲ್ಲೇ ಎಡವಿದೆ. ಟೂರ್ನಿಯ ಆರಂಭದ ಮೊದಲ ಪಂದ್ಯವನ್ನು ಗೆದ್ದರೂ ನಂತರ ಅದೇ ಲಯದಲ್ಲಿ ತಂಡವನ್ನು ತೆಗೆದುಕೊಂಡು ಹೋಗುವಲ್ಲಿ ಧೋನಿ ಎಡವಿದ್ದಾರೆ. ಹೀಗಾಗಿ ವ್ಯಕ್ತಿಯೋರ್ವ ಧೋನಿಯ ಐದು ವರ್ಷದ ಮಗಳನ್ನು ಅತ್ಯಾಚಾರ ಮಾಡುವುದಾಗಿ ಟ್ವಿಟ್ಟರಿನಲ್ಲಿ ಕಮೆಂಟ್ ಮಾಡಿದ್ದಾನೆ.

    ಕಳೆದ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ಗೆಲುವಿನ ಹಾದಿಯಲ್ಲಿ ಇದ್ದ ಚೆನೈ ತಂಡ ದಿಢೀರ್ ಕುಸಿತದಿಂದ 10 ರನ್‍ಗಳ ಅಂತರದಲ್ಲಿ ಸೋಲನ್ನು ಒಪ್ಪಿಕೊಂಡಿತ್ತು. ಈ ನಂತರ ಟ್ವಿಟ್ಟರಿನಲ್ಲಿ ಕಮೆಂಟ್ ಮಾಡಿರುವ ವಿಜಯ್ ಎಂಬ ವ್ಯಕ್ತಿ ಧೋನಿ ಮಗಳನ್ನು ಅತ್ಯಾಚಾರ ಮಾಡುವುದಾಗಿ ಹೇಳಿದ್ದಾನೆ. ಜೊತೆಗೆ ಅಸಭ್ಯ ಪದಗಳನ್ನು ಬಳಸಿ ಐದು ವರ್ಷದ ಕಂದಮ್ಮನನ್ನು ನಿಂದಿಸಿದ್ದಾನೆ.

    ಜೊತೆಗೆ ಟ್ವಿಟ್ಟರ್ ನಂತರ ಬೇರೆ ಬೇರೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಧೋನಿ ಮಗಳು ಝೀವಾ ಅವರ ಹೆಸರಿನಲ್ಲಿ ಕಮೆಂಟ್‍ಗಳು ಬಂದಿವೆ. ಇಲ್ಲೂ ಕೂಡ ಝೀವಾಳಿಗೆ ಜೀವ ಬೆದರಿಕೆ ಮತ್ತು ಅತ್ಯಾಚಾರ ಬೆದರಿಕೆ ಹಾಕಿದ್ದಾರೆ. ಭಾರತಕ್ಕಾಗಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟ, ಬೆಸ್ಟ್ ನಾಯಕನಿಗೆ ಒಂದು ಟೂರ್ನಿಯಲ್ಲಿ ಕೆಟ್ಟ ಪ್ರದರ್ಶನ ನೀಡಿದಕ್ಕೆ ಈ ರೀತಿ ಮಾತನಾಡಬಾರದು ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪುಟ್ಟ ಮಗುವಿನ ವಿಚಾರ ಮಾತನಾಡಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.

    ಚೆನ್ನೈ ಐಪಿಎಲ್-2020ಯಲ್ಲಿ 6 ಪಂದ್ಯಗಳನ್ನು ಆಡಿ ಕೇವಲ ಎರಡಲ್ಲಿ ಗೆದ್ದು ನಾಲ್ಕು ಪಂದ್ಯದಲ್ಲಿ ಸೋತು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಜೊತೆಗೆ ಧೋನಿಯವರು ಕೀಪಿಂಗ್‍ನಲ್ಲಿ ಮಿಂಚುತ್ತಿದ್ದರು ನಾಯಕನಾಗಿ ಮತ್ತು ಬ್ಯಾಟ್ಸ್ ಮ್ಯಾನ್ ಆಗಿ ವಿಫಲರಾಗಿದ್ದಾರೆ. ಬುಧವಾರದ ಪಂದ್ಯದಲ್ಲಿ ಕೋಲ್ಕತ್ತಾ ನೀಡಿದ 167 ರನ್‍ಗಳ ಸಾಧಾರಣ ಮೊತ್ತ ಚೇಸ್ ಮಾಡುವಲ್ಲಿ ಚೆನ್ನೈ ವಿಫಲವಾಗಿತ್ತು. ಇದರಿಂದ ಚೆನ್ನೈ ಅಭಿಮಾನಿಗಳಿಗೆ ತುಂಬ ನಿರಾಸೆಯುಂಟಾಗಿತ್ತು.

  • ಅಪ್ಪನಿಗೆ ಮಸಾಜ್ ಮಾಡಿದ ಧೋನಿ ಪುತ್ರಿ ಝೀವಾ: ವಿಡಿಯೋ

    ಅಪ್ಪನಿಗೆ ಮಸಾಜ್ ಮಾಡಿದ ಧೋನಿ ಪುತ್ರಿ ಝೀವಾ: ವಿಡಿಯೋ

    ನವದೆಹಲಿ: ಕ್ರಿಕೆಟ್‍ನಿಂದ ಸ್ವಲ್ಪ ದೂರ ಉಳಿದಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪುತ್ರಿ ಝೀವಾ ಜೊತೆಗೆ ಕಾಲ ಕಳೆಯುತ್ತಿದ್ದಾರೆ.

    ಅಪ್ಪನಿಗೆ ಹೊಸ ಜೀಪ್ ತೊಳೆಯಲು ಸಹಾಯ ಮಾಡಿದ್ದ ಝೀವಾ, ಈ ಬಾರಿ ತಂದೆಗೆ ಮಸಾಜ್ ಮಾಡಿದ್ದಾಳೆ. ಝೀವಾಳ ಇನ್‍ಸ್ಟಾಗ್ರಾಮ್‍ನಲ್ಲಿ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದ್ದು, ಒಂದರಲ್ಲಿ ಝೀವಾ ಅಪ್ಪನ ಭುಜವನ್ನು ಒತ್ತಿ ಮಸಾಜ್ ಮಾಡುತ್ತಿದ್ದರೆ, ಧೋನಿ ಕಣ್ಣು ಮುಚ್ಚಿ ಮಗಳ ಕಾಳಜಿಯನ್ನು ಸ್ವೀಕರಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಝೀವಾ ಅಪ್ಪನನ್ನು ತಬ್ಬಿಕೊಂಡು ಮುದ್ದಾಡಿದ್ದಾಳೆ.

    https://www.instagram.com/p/B4AC2SDnEAF/

    ಈ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ನೆಟ್ಟಿಗರು ಲೈಕ್ ಮಾಡಿದ್ದಾರೆ. ಅಪ್ಪನ ಮೇಲೆ ವಿಶೇಷ ಕಾಳಜಿ ತೋರಿದ ಝೀವಾಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

    ಎಂ.ಎಸ್.ಧೋನಿ ಮನೆಗೆ ಹೊಸ ಅತಿಥಿಯಾಗಿ ಭಾರತೀಯ ಸೇನೆಯಲ್ಲಿ ಬಳಸುವ ನಿಸ್ಸಾನ್ ಕಂಪನಿಯ ಜೊಂಗಾ ಜೀಪ್ ಬಂದಿದೆ. ಹೊಸ ಜೀಪ್‍ನಲ್ಲಿ ಜಾಲಿ ರೈಡ್ ಹೋಗಿದ್ದ ಧೋನಿ, ಅದನ್ನು ತೊಳೆಯುತ್ತಿರುವ ವಿಡಿಯೋ ಒಂದನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವೇಳೆ ಅಪ್ಪನಿಗೆ ಪುತ್ರಿ ಝೀವಾ ಕೂಡ ಸಹಾಯ ಮಾಡಿದ್ದರು.

    https://www.instagram.com/p/B3_xwpuF9A9/?utm_source=ig_embed

    ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ ಧೋನಿ, ಚಿಕ್ಕ ಸಹಾಯವು ನಿಮ್ಮನ್ನ ಹೆಚ್ಚು ದೂರದವೆರಗು ಕರೆದುಕೊಂಡು ಹೋಗುತ್ತದೆ. ಇಂತಹ ದೊಡ್ಡ ಜೀಪ್ ಎಂದು ಭಾವಿಸಿದಾಗಲೂ ಎಂದು ಬರೆದುಕೊಂಡಿದ್ದರು.

    ಅಪ್ಪನಿಗೆ ಸಹಾಯ ಮಾಡಿದ ಝೀವಾಳ ಬಗ್ಗೆ ಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಪೋಸ್ಟ್ ಆಗ ಕೇವಲ ಒಂದು ಗಂಟೆಯಲ್ಲಿ 9 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, 7 ಲಕ್ಷಕ್ಕೂ ಅಧಿಕ ನೆಟ್ಟಿಗರು ಲೈಕ್ ಮಾಡಿದ್ದಾರೆ. ಅನೇಕರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದರು.

    ಏಕದಿನ ವಿಶ್ವಪಕ್ ಟೂರ್ನಿ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‍ನಿಂದ ದೂರ ಉಳಿದಿದ್ದು, ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಧೋನಿ ಯಾವಾಗ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಮರಳುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿ ಗುಡ್ ನ್ಯೂಸ್ ಸಿಕ್ಕಿದೆ.

    ಸ್ಪರ್ಧಾತ್ಮಕ ಕ್ರಿಕೆಟ್‍ಗೆ ಎಂ.ಎಸ್.ಧೋನಿ ಅವರನ್ನು ಮರಳಿ ತರುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷ ಸೌರವ್ ಗಂಗೂಲಿ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಆಯ್ಕೆ ಸಮಿತಿ ಹಾಗೂ ಟೀಂ ಮ್ಯಾನೇಜ್‍ಮೆಂಟ್ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಟಿ-20 ವಿಶ್ವಕಪ್‍ಗೆ ಧೋನಿ ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

    2020ರಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಗೂ ಐಸಿಸಿ ಟಿ-20 ವಿಶ್ವಕಪ್‍ನಲ್ಲಿ ಎಂ.ಎಸ್.ಧೋನಿ ಭಾಗವಹಿಸಲಿದ್ದಾರೆ. ಇದು ಧೋನಿ ಹಾಗೂ ಕ್ರಿಕೆಟ್ ಅಭಿಮಾನಿಗಳಲ್ಲಿ ಖುಷಿ ತಂದಿದೆ.

  • ಧೋನಿ ಪುತ್ರಿಯ ಸನ್‍ಗ್ಲಾಸ್ ಕದ್ದರಂತೆ ರಣ್‍ವೀರ್ ಸಿಂಗ್

    ಧೋನಿ ಪುತ್ರಿಯ ಸನ್‍ಗ್ಲಾಸ್ ಕದ್ದರಂತೆ ರಣ್‍ವೀರ್ ಸಿಂಗ್

    ನವದೆಹಲಿ: ನನ್ನ ಸನ್‍ಗ್ಲಾಸ್ ಅನ್ನು ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹೊತ್ತೊಯ್ದಿದ್ದಾರೆ ಎಂದು ಪುತ್ರಿ ಝೀವಾ ತಂದೆ ಟೀಂ ಇಂಡಿಯಾ ಕ್ರಿಕೆಟರ್ ಎಂ.ಎಸ್.ಧೋನಿ ಅವರಿಗೆ ದೂರಿದ್ದಾಳೆ.

    ಬಾಲಿವುಡ್ ನಟ ರಣವೀರ್ ಸಿಂಗ್ ಆಗಾಗ ವಿಭಿನ್ನ ಕಾಸ್ಟ್ಯೂಮ್‍ಗಳಲ್ಲಿ ಕಾಣಿಸಿಕೊಂಡು, ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅಂತಹ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಸನ್‍ಗ್ಲಾಸ್ ಹಾಕಿಕೊಂಡು ಕ್ಲಿಕ್ಕಿಸಿಕೊಂಡ ಫೋಟೋ ಮೂಲಕ ರಣ್‍ವೀರ್ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ರಣ್‍ವೀರ್ ಸಿಂಗ್‍ ನೋಡಿ ಹೆದರಿಕೊಂಡು ಅತ್ತ ಪುಟ್ಟ ಬಾಲಕಿ: ವಿಡಿಯೋ

    https://www.instagram.com/p/B3UXzFPFvnM/?utm_source=ig_embed&utm_campaign=dlfix

    ರಣ್‍ವೀರ್ ಸಿಂಗ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಭಾನುವಾರ ಸನ್‍ಗ್ಲಾಸ್ ಹಾಕಿಕೊಂಡು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಈ ಫೋಟೋಗಳನ್ನು ನೋಡಿದ ಧೋನಿ ಪುತ್ರಿ ಝೀವಾ, ಇವರು ನನ್ನ ಕನ್ನಡಕವನ್ನು ಏಕೆ ಹಾಕಿಕೊಂಡಿದ್ದಾರೆ. ಅವರಿಗ್ಯಾಕೆ ಸನ್‍ಗ್ಲಾಸ್ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾಳೆ. ಆಗ ಧೋನಿ ಅದು ನಿನ್ನ ಸನ್‍ಗ್ಲಾಸ್ ಅಲ್ಲ ಎಂದರೂ ಝೀವಾ ಕೂಡಲೇ ತನ್ನ ಸನ್‍ಗ್ಲಾಸ್ ಮನೆಯಲ್ಲಿ ಇದೆಯಾ ಎಂಬುದನ್ನು ಖಚಿತಪಡಿಸಿಕೊಂಡಿದ್ದಾಳೆ.

    ಈ ವಿಚಾರವನ್ನು ಸ್ವತಃ ಎಂ.ಎಸ್.ಧೋನಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಝೀವಾ ನಾಲ್ಕೂವರೆ ವರ್ಷದ ಬಾಲಕಿ. ಇಷ್ಟು ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಇಷ್ಟು ಬುದ್ಧಿ ಇರುತ್ತದೆ ಎಂದುಕೊಂಡಿರಲಿಲ್ಲ. ಒಂದು ವೇಳೆ ಝೀವಾ ಮುಂದಿನ ಬಾರಿ ರಣ್‍ವೀರ್ ಅವರನ್ನು ಭೇಟಿ ಆದರೆ, ನನ್ನ ಬಳಿಯೂ ನಿಮ್ಮ ರೀತಿಯ ಸನ್‍ಗ್ಲಾಸ್ ಇದೆ ಎಂದು ಹೇಳಿಕೊಳ್ಳುತ್ತಾಳೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

    https://www.instagram.com/p/B3PomOLhUMC/

  • ಧೋನಿ ಪುತ್ರಿ ಝೀವಾಳ ಪ್ಲಾಂಕ್‍ಗೆ ನೆಟ್ಟಿಗರು ಫಿದಾ -ವಿಡಿಯೋ

    ಧೋನಿ ಪುತ್ರಿ ಝೀವಾಳ ಪ್ಲಾಂಕ್‍ಗೆ ನೆಟ್ಟಿಗರು ಫಿದಾ -ವಿಡಿಯೋ

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪುತ್ರಿ ಝಿವಾ ಈಗಾಗಲೇ ವಿಶ್ವ ಕ್ರೀಡಾ ಅಭಿಮಾನಿಗಳ ಮನಸೆಳೆದಿದ್ದು, ಜೀವಾಳೊಂದಿಗೆ ಧೋನಿ ಕಳೆಯುವ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಖುಷಿ ಪಡುತ್ತಾರೆ. ಸದ್ಯ ಝೀವಾ ಪ್ಲಾಕ್ ಮಾಡುತ್ತಿರುವ ವಿಡಿಯೋವನ್ನು ಸಾಕ್ಷಿ ಧೋನಿ ಶೇರ್ ಮಾಡಿದ್ದಾರೆ.

    ಹೌದು, ಸಾಕ್ಷಿ ಧೋನಿ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಮುದ್ದಾಗಿ ಕಾಣುವ ಝೀವಾ ವ್ಯಾಯಾಮ ಮಾಡುವುದನ್ನು ಕಾಣಬಹುದಾಗಿದೆ. ಲೀಲಾಜಾಲವಾಗಿ ಪ್ಲಾಂಕ್ ಮಾಡುತ್ತಿರುವ ಝೀವಾ, ಎಷ್ಟು ಸಮಯ ಕಾಲ ಬ್ಯಾಲೆನ್ಸ್ ಮಾಡಿದ್ದಾಳೆ ನೋಡಿ. ನಾನು ಫೋನ್ ತೆಗೆದುಕೊಂಡು ಫೋಟೋ ಸೆರೆಹಿಡಿಯುವವರೆಗೂ ಹಾಗೇ ಇದ್ದಳು ಎಂದು ಬರೆದುಕೊಂಡಿದ್ದಾರೆ.

    https://www.instagram.com/p/Bo87xwrFmS5/?utm_source=ig_embed

    ಝೀವಾ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಫಾಲೋ ಮಾಡುತ್ತಿದ್ದು, ಈ ಹಿಂದೆ ಝೀವಾ ಮಾಡಿದ್ದ ಡಾನ್ಸ್ ವಿಡಿಯೋ ಸಖತ್ ವೈರಲ್ ಆಗಿತ್ತು. ಸದ್ಯ ಝೀವಾ ಪ್ಲಾಂಕ್ ಮಾಡುವ ರೀತಿ ನೋಡಿ ಹಲವರು ಫಿದಾ ಆಗಿದ್ದು, ತಮ್ಮದೇ ಅಭಿಪ್ರಾಯ ತಿಳಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಇದುವರೆಗೂ ವಿಡಿಯೋವನ್ನ 4 ಲಕ್ಷಕ್ಕೂ ಅಧಿಕ ಬಾರಿ ವಿಕ್ಷೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BmvM8ypHbEe/?hl=en&taken-by=mahi7781

    https://www.instagram.com/p/BiJkeWeney1/?hl=en&taken-by=mahi7781

  • ಧೋನಿಗೆ ತನ್ನ ಕೈಯಾರೆ ಮೈದಾನದಲ್ಲೇ ನೀರು ಕುಡಿಸಿದ ಪುತ್ರಿ ಝೀವಾ – ವಿಡಿಯೋ ವೈರಲ್

    ಧೋನಿಗೆ ತನ್ನ ಕೈಯಾರೆ ಮೈದಾನದಲ್ಲೇ ನೀರು ಕುಡಿಸಿದ ಪುತ್ರಿ ಝೀವಾ – ವಿಡಿಯೋ ವೈರಲ್

    ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ನಾಯಕ ಕೊಹ್ಲಿ ಜೊತೆ ಮುದ್ದು ಮುದ್ದಾಗಿ ಆಟವಾಡಿ ಸುದ್ದಿಯಾದ ಮಹೇಂದ್ರ ಸಿಂಗ್ ಧೋನಿ ಮಗಳು ಇದೀಗ ಮತ್ತೆ ಸುದ್ದಿಯಾಗಿದ್ದಾಳೆ.

    ಹೌದು. ಅಂಧೇರಿಯ ಫುಟ್ಬಾಲ್ ಮೈದಾನದಲ್ಲಿ ಭಾನುವಾರ ಸೆಲೆಬ್ರಿಟಿ ಲೀಗ್ ಫುಟ್ಬಾಲ್ ನಡೆದಿತ್ತು. ಈ ವೇಳೆ ಧೋನಿ ಮಗಳು ತನ್ನ ಅಪ್ಪನಿಗೆ ಮೈದಾನದಲ್ಲೇ ನೀರು ಕುಡಿಸಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇದನ್ನೂ ಓದಿ: ಧೋನಿ ಮಗಳೊಂದಿಗೆ ಕೊಹ್ಲಿಯ ಮುದ್ದು ಮುದ್ದು ಮಾತು-ವಿಡಿಯೋ ನೋಡಿ 

    ಆಟವನ್ನು ವೀಕ್ಷಿಸಲೆಂದು ಅಂತಿಮ ಸುತ್ತಿನ ವೇಳೆ ಧೋನಿ ಪತ್ನಿ ಸಾಕ್ಷಿ ಹಾಗೂ ಮಗಳು ಝೀವಾ ಮೈದಾನಕ್ಕೆ ಬಂದಿದ್ದರು. ಆಟಗಾರರೆಲ್ಲ ಮೈದಾನದಲ್ಲಿ ನೆರೆದಿದ್ದ ಸಂದರ್ಭದಲ್ಲಿ ಧೋನಿ ಮಗಳು ಝೀವಾ ನೇರವಾಗಿ ಮೈದಾನಕ್ಕೆ ಇಳಿದು ತನ್ನ ಅಪ್ಪನಿಗೆ ಬಾಟಲಿಯಲ್ಲಿದ್ದ ನೀರನ್ನು ಕುಡಿಸಿದ್ದಾಳೆ. ಅಲ್ಲದೇ ಖುಷಿ ಖುಷಿಯಿಂದ ಮೈದಾನದಲ್ಲಿ ಓಡಾಡಿದ್ದಾಳೆ. ಈ ವೇಳೆ ಉಳಿದ ಆಟಗಾರರು ಕೂಡ ಆಕೆಗೆ ಸಾಥ್ ನೀಡಿದ್ದಾರೆ.

    https://twitter.com/iamKohli_FC/status/919764643807154177

    https://twitter.com/ViratKohIiFC/status/919713934919155712

    https://twitter.com/Ranbir_Kingdom/status/919613509964574720