Tag: ಝೀರೋ

  • ‘ಝೀರೋ’ ಗೆ ಭರ್ಜರಿ ಫೈಟ್ ನೀಡಿದ ‘ಕೆಜಿಎಫ್’

    ‘ಝೀರೋ’ ಗೆ ಭರ್ಜರಿ ಫೈಟ್ ನೀಡಿದ ‘ಕೆಜಿಎಫ್’

    – 3 ದಿನದಲ್ಲಿ 60 ಕೋಟಿ ಕಲೆಕ್ಷನ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ದೇಶ-ವಿದೇಶದಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಮಾಡಿದ್ದು, ಬಾಲಿವುಡ್‍ನ ನಟ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾಗೆ ಭರ್ಜರಿ ಫೈಟ್ ನೀಡಿದೆ.

    ‘ಕೆಜಿಎಫ್’ ಸಿನಿಮಾ ಪಂಚಭಾಷೆಯಲ್ಲಿ ಇದೇ ಶುಕ್ರವಾರ ಬಿಡುಗಡೆಗೊಂಡಿತ್ತು. ಅದೇ ದಿನ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾ ಕೂಡ ಬಿಡುಗಡೆಯಾಗಿತ್ತು. ಆದರೆ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ‘ಝೀರೋ’ ಸಿನಿಮಾವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಇದನ್ನೂ ಓದಿ: ಗಲ್ಲಾ ಪೆಟ್ಟಿಗೆಯಲ್ಲೂ ರಾಕಿಯ ಆರ್ಭಟ- ಹಿಂದಿಯಲ್ಲಿ ಫಸ್ಟ್ ಡೇ 2.10 ಕೋಟಿ

    ‘ಕೆಜಿಎಫ್’ ಸಿನಿಮಾ ಬಿಡುಗಡೆಯಾದ ಮೊದಲ ದಿವವೇ ಸುಮಾರು 30 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಬಳಿಕ ಶನಿವಾರ ಮತ್ತು ಭಾನುವಾರ ವೀಕೆಂಡ್ ಇದ್ದ ಕಾರಣ ಮೂರು ದಿನಗಳಲ್ಲಿ ‘ಕೆಜಿಎಫ್’ ಸಿನಿಮಾ 60 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕ ವಿಜಯ ಕಿರಗಂದೂರು ತಿಳಿಸಿದ್ದಾರೆ. ಇದನ್ನೂ ಓದಿ:’ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್

    ಮೊದಲನೇ ದಿನ 24 ಕೋಟಿ ರೂ. ಗಳಿಸಿದರೆ, ಎರಡನೇ ದಿನ ಮತ್ತು ಮೂರನೇ ದಿನ 20-21 ಕೋಟಿ ರೂ. ಗಳಿಸಿದ್ದು, ಮೂರು ದಿನಗಳಲ್ಲಿ ಸುಮಾರು 60 ಕೋಟಿ ರೂ. ಗಳಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೇ ಹಿಂದಿಯಲ್ಲೂ ಕೂಡ ಕಲೆಕ್ಷನ್ ಅಧಿಕವಾಗಿದ್ದು, ಕನ್ನಡ ಸಿನಿಮಾಗೆ ಬೇರೆ ಭಾಷೆಯಲ್ಲೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

    ಕನ್ನಡದ ಕೆಜಿಎಫ್ ಸಿನಿಮಾ ಝೀರೋ ಸಿನಿಮಾಗೆ ತೀವ್ರ ಪೈಪೋಟಿ ಕೊಟ್ಟಿದ್ದು, ಇದರಿಂದ ಝೀರೋ ಸಿನಿಮಾದ ಕಲೆಕ್ಷನ್ ಕಡಿಮೆಯಾಗಿದೆ. ಮೊದಲ ದಿನವೇ ಕೆಜಿಎಫ್ 24 ಕೋಟಿ ರೂ. ಗಳಿಸಿತ್ತು. ಭಾರತದಲ್ಲಿ 18 ಕೋಟಿ, ಕನ್ನಡದಲ್ಲಿಯೇ 12.5 ಕೋಟಿ ರೂ ಗಳಿಸಿತ್ತು. ವೀಕೆಂಡ್ ಇದ್ದ ಕಾರಣ ಸುಮಾರು 40 ಕೋಟಿ ಹಣವನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಝೀರೋ ಸಿನಿಮಾ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಕೇವಲ 38 ಕೋಟಿ ರೂ. ಕೆಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

    ದಿನದಿಂದ ದಿನಕ್ಕೆ ಪ್ರೇಕ್ಷಕರು ಕೂಡ ಹೆಚ್ಚಾಗುತ್ತಿದ್ದಾರೆ. ಆದ್ದರಿಂದ ಪರಭಾಷೆ ಸಿನಿಮಾಗೆ ಕನ್ನಡ ಸಿನಿಮಾ ಪೈಪೋಟಿ ನೀಡಿದೆ. ಹಿಂದಿ ಭಾಷೆಯಲ್ಲಿ ಕೆಜಿಎಫ್ ಮೊದಲ ದಿನವೇ 2.1 ಕೋಟಿ ರೂ. ಗಳಿಸಿದ್ದು, ಎರಡನೇ ದಿನ 3 ಕೋಟಿ ರೂ. ಗಳಿಸಿತ್ತು ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್’

    ‘ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್’

    ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಸಿನಿಮಾ ‘ಝೀರೋ’ ಸಿನಿಮಾವನ್ನು ಕೆಜಿಎಫ್ ಹಿಂದಿಕ್ಕಿ ಮುನ್ನುಗ್ಗುತ್ತಿದೆ.

    ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾಗಿಂತಲೂ ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್’ ಸಿನಿಮಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಲೈಕ್ಸ್ ಬಂದಿದೆ. ಬುಕ್ ಮೈ ಶೋದಲ್ಲಿ ‘ಕೆಜಿಎಫ್’ ಸಿನಿಮಾ 3 ಲಕ್ಷದ 57 ಸಾವಿರ ಲೈಕ್ಸ್ ಪಡೆದಿದೆ. ಇನ್ನು ಶಾರೂಕ್ ಖಾನ್ ನಟನೆಯ ‘ಝೀರೋ’ ಸಿನಿಮಾ 2 ಲಕ್ಷದ 59 ಸಾವಿರ ಲೈಕ್ಸ್ ಪಡೆದಿದೆ.

    ಎಲ್ಲಾ ಅಡೆತಡೆಗಳನ್ನು ಮೀರಿ ದೇಶಾದ್ಯಂತ ಹವಾ ಎಬ್ಬಿಸಿದ್ದ ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ತೆರೆಗೆ ಅಪ್ಪಳಿಸಿದ್ದು, ವಿಶ್ವಾದ್ಯಂತ 2 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಐದು ಭಾಷೆಗಳಲ್ಲಿ ತೆರೆ ಕಂಡಿದೆ.

    ರಾಜ್ಯದೆಲ್ಲೆಡೆ 350 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಯಶ್ ಅಭಿಮಾನಿಗಳು ಮಧ್ಯರಾತ್ರಿಯಿಂದ ಚಳಿಯಲ್ಲೇ ಕಾದು ಕುಳಿತಿದ್ದರು. ಆನ್‍ಲೈನ್ ಟಿಕೆಟ್ ಬುಕ್ಕಿಂಗ್‍ಗೆ ಭಾರೀ ಬೇಡಿಕೆ ಬಂದಿದ್ದು, ಈಗಾಗಲೇ ಟಿಕೆಟ್‍ಗಳು ಸೇಲ್ ಆಗುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಕೆಜಿಎಫ್ ರಿಲೀಸ್ ಆಗಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಯಶ್ ಚಿತ್ರ ರಿಲೀಸ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎದುರಾಗುತ್ತಿರೋ ಝೀರೋ ಬಗ್ಗೆ ಯಶ್ ಹೇಳಿದ್ದು ಹೀಗೆ

    ಎದುರಾಗುತ್ತಿರೋ ಝೀರೋ ಬಗ್ಗೆ ಯಶ್ ಹೇಳಿದ್ದು ಹೀಗೆ

    ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಇದೇ ತಿಂಗಳು 21ರಂದು ರಿಲೀಸ್ ಆಗಲಿದೆ. ಇದೇ ದಿನ ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ‘ಝೀರೋ’ ಬಿಡುಗಡೆಯಾಗುತ್ತಿದ್ದು, ಈ ಬಗ್ಗೆ ನಟ ಯಶ್ ಅವರು ಮಾತನಾಡಿದ್ದಾರೆ.

    ನಟ ಯಶ್ ಕೆಜಿಎಫ್ ಸಿನಿಮಾದ ಡ್ಯಾನ್ಸ್ ಶೂಟಿಂಗ್ ಗೆಂದು ಮುಂಬೈಗೆ ಹೋಗಿದ್ದರು. ಈ ವೇಳೆ ಸಂದರ್ಶನದಲ್ಲಿ ತಮ್ಮ ಸಿನಿಮಾಗೆ ಎದುರಾಗುತ್ತಿರುವ ನಟ ಶಾರೂಖ್ ಖಾನ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

    ಸಂದರ್ಶನದಲ್ಲಿ ಯಶ್ ಗೆ ನಿಮ್ಮ ಸಿನಿಮಾದ ದಿನವೇ ಬಾಲಿವುಡ್ ನ ‘ಝೀರೋ’ ಸಿನಿಮಾ ರಿಲೀಸ್ ಆಗಲಿದೆ. ಈ ಬಗ್ಗೆ ನೀವು ಏನು ಹೇಳುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಯಶ್ ಇದು ಸ್ಯಾಂಡಲ್‍ವುಡ್, ಬಾಲಿವುಡ್ ಸಿನಿಮಾ ಅಂತ ಅಲ್ಲ. ಎಲ್ಲವೂ ಭಾರತೀಯ ಸಿನಿಮಾವಾಗಿದೆ. ಪೈಪೋಟಿ ನೀಡಲು ಸಿನಿಮಾ ಬಿಡುಗಡೆ ಮಾಡುತ್ತಿಲ್ಲ. ಪ್ರೇಕ್ಷಕರು ಎರಡು ಸಿನಿಮಾವನ್ನು ವೀಕ್ಷಣೆ ಮಾಡಲಿ ಎಂದು ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ.

    ಒಂದು ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾದರೆ ಅದೇ ಖುಷಿಯಲ್ಲಿ ಇನ್ನೊಂದು ಸಿನಿಮಾವನ್ನು ನೋಡುತ್ತಾರೆ. ಒಂದು ವೇಳೆ ಒಂದು ಸಿನಿಮಾ ಇಷ್ಟವಾಗದೇ ಇದ್ದರೂ ಆಗಲೂ ಬೇರೆ ಸಿನಿಮಾ ನೋಡುತ್ತಾರೆ. ಒಟ್ಟಿನಲ್ಲಿ ಎರಡು ಭಾರತೀಯ ಸಿನಿಮಾಗಳಾಗಿದ್ದು, ಅಭಿಮಾನಿಗಳು ನೋಡುತ್ತಾರೆ. ಅಷ್ಟೇ ಅಲ್ಲದೇ ಶಾರೂಖ್ ಖಾನ್ ಅವರು ನನಗೆ ಸ್ಪೂರ್ತಿಯಾಗಿದ್ದಾರೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

    ಇದೇ ಡಿಸೆಂಬರ್ 21 ರಂದು ಕೆಜಿಎಫ್ ಪಂಚಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಸ್ಯಾಂಡಲ್‍ವುಡ್‍ನಲ್ಲಿ ರಾಕಿಂಗ್ ಸ್ಟಾರ್ ದಾಖಲೆ ಬರೆಯಲು ಸಿದ್ಧವಾಗುತ್ತಿದೆ. ಈಗಾಗಲೇ ಸಿನಿಮಾದ ಎರಡು ಟ್ರೇಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಸದ್ದು ಮಾಡುತ್ತಿದ್ದು, ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾರೂಖ್ ಖಾನ್ ನಟನೆಯ ಝೀರೋ ಸಿನಿಮಾ ಹಿಂದಿಕ್ಕಿದ ಕೆಜಿಎಫ್

    ಶಾರೂಖ್ ಖಾನ್ ನಟನೆಯ ಝೀರೋ ಸಿನಿಮಾ ಹಿಂದಿಕ್ಕಿದ ಕೆಜಿಎಫ್

    -ದೇಶಾದ್ಯಂತ ಕೆಜಿಎಫ್ ಸಂಚಲನ

    ಬೆಂಗಳೂರು: ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಸಿನಿಮಾ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಳ್ಳುವ ಮೂಲಕ ದೇಶಾದ್ಯಂತ ಸಂಚಲನ ಮೂಡಲಾರಂಭಿಸಿದೆ.

    ಖ್ಯಾತ ಸಿನಿಮಾ ಡೇಟಾಬೇಸ್ ವೆಬ್‍ಸೈಟ್ ಇಂಟರ್ ನೆಟ್ ಮೂವಿ ಡೇಟಾ ಬೇಸ್(ಐಎಂಡಿಬಿ) ಪಟ್ಟಿಯಲ್ಲಿ ಕೆಜಿಎಫ್ ಎರಡನೇ ಸ್ಥಾನ ಪಡೆದುಕೊಳ್ಳುವ ಮೂಲಕ ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಅಭಿನಯದ ಸಿನಿಮಾವನ್ನು ಹಿಂದಿಕ್ಕಿದೆ. ತೆಲುಗಿನ ವಿಜಯ್ ದೇವರಕೊಂಡ ಅಭಿನಯದ ಟ್ಯಾಕ್ಸಿವಾಲಾ ಮೂರನೇ ಸ್ಥಾನದಲ್ಲಿದೆ. ಝೀರೋ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ರಜಿನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ಮೊದಲ ಸ್ಥಾನದಲ್ಲಿದೆ.

    ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಕೆಜಿಎಫ್ ಒಟ್ಟು ಐದು ಭಾಷೆಗಳಲ್ಲಿ ನಿರ್ಮಾಣಗೊಂಡಿವೆ. ಡಿಸೆಂಬರ್ 21ರಂದು ಚಿತ್ರ ತೆರೆಕಾಣಲಿದೆ. ಶಾರೂಖ್ ಖಾನ್ ಅಭಿನಯದ ಝೀರೋ ಸಿನಿಮಾ ಸಹ ಡಿಸೆಂಬರ್ 21ರಂದು ತೆರೆಕಾಣಲಿದೆ. ಈಗಾಗಲೇ ಎರಡು ಚಿತ್ರಗಳು ಟ್ರೇಲರ್ ಮೂಲಕ ತನ್ನದೇ ಗುರುತನ್ನು ಸಿನಿ ಅಂಗಳದಲ್ಲಿ ಮೂಡಿಸುವ ಪ್ರಯತ್ನ ಮಾಡಿವೆ. ನವೆಂಬರ್ 9ರಂದು ಬಿಡುಗಡೆ ಆಗಿರುವ ಕನ್ನಡದ ಕೆಜಿಎಫ್ ಟ್ರೇಲರ್ ಇದೂವರೆಗೂ 71 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ತೆಲುಗು ಭಾಷೆಯ ಟ್ರೇಲರ್ 45 ಲಕ್ಷಕ್ಕೂ ಅಧಿಕ ಮತ್ತು ಹಿಂದಿ ಭಾಷೆಯ ಟ್ರೇಲರ್ 95 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.

    ನವೆಂಬರ್ 2ರಂದು ಬಿಡುಗಡೆ ಆಗಿರುವ ಝೀರೋ ಸಿನಿಮಾ ಇದೂವರೆಗೂ 8 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಯಶ್ ಅಭಿನಯದ ಈ ಚಿತ್ರ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅಭಿನಯದ ಝೀರೋ ಚಿತ್ರಕ್ಕೆದುರಾಗಿ ಬಿಡುಗಡೆಯಾಗಲಿದೆ ಎಂಬ ವಿಚಾರ ತಿಳಿಯುತ್ತಲೇ ಅನೇಕರು ಲೇವಡಿಯಾಡಿದ್ದೂ ಇದೆ. ಆದರೆ ಇದೀಗ ಕೆಜಿಎಫ್ ಟ್ರೇಲರ್ ಬಾಲಿವುಡ್ ಮಟ್ಟದಲ್ಲಿಯೂ ಸಂಚಲನ ಸೃಷ್ಟಿಸಿದೆ. ಇದುವೇ ಈ ಚಿತ್ರದ ಗೆಲುವಿನ ಭವಿಷ್ಯವನ್ನೂ ಹೇಳುತ್ತಿದೆ.

    ಭೂಗತ ಲೋಕದ ಕರಾಳ ಸತ್ಯವನ್ನು ಕೆಜಿಎಫ್ ತೋರಿಸಲಿದೆ ಎಂಬುವುದನ್ನು ಟ್ರೇಲರ್ ಸಾರಿ ಸಾರಿ ಹೇಳುತ್ತಿದೆ. ಓರ್ವ ಕಥಾನಾಯಕನ ಜೀವನದ ಏರುಪೇರುಗಳನ್ನು ತುಂಬಾ ಸ್ಪಷ್ಟವಾಗಿ ಪ್ರಶಾಂತ್ ನೀಲ್ ತೋರಿಸುವ ಪ್ರಯತ್ನ ಟ್ರೇಲರ್ ನಲ್ಲಿ ಕಾಣುತ್ತಿದೆ. ಇನ್ನು ಟೀಸರ್ ಆರಂಭದಲ್ಲಿ ಕೇಳಿಬರುವ ಹಿನ್ನೆಲೆ ಧ್ವನಿ ಟ್ರೇಲರ್ ನಲ್ಲಿ ನೋಡುಗರಲ್ಲಿ ರೋಮ ರೋಮಗಳಲ್ಲಿ ರೋಮಾಂಚನ ಮಾಡುವಲ್ಲಿ ಯಶ್ವಸಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬರ್ತ್‌ಡೇಯಂದೇ ಬಾದ್‍ಶಾನ ಝೀರೋ ಸಿನಿಮಾದ ನ್ಯೂ ಲುಕ್ ರಿವೀಲ್!

    ಬರ್ತ್‌ಡೇಯಂದೇ ಬಾದ್‍ಶಾನ ಝೀರೋ ಸಿನಿಮಾದ ನ್ಯೂ ಲುಕ್ ರಿವೀಲ್!

    ನವದೆಹಲಿ: ಬಾಲಿವುಡ್ ನಟ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರು ಇಂದು 53 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ತಾವೇ ಅಭಿನಯಿಸಿರುವ ಝೀರೋ ಸಿನಿಮಾದ ನ್ಯೂ ಲುಕ್ ರಿವೀಲ್ ಮಾಡಿದ್ದಾರೆ.

    ಈ ಸಿನಿಮಾದಲ್ಲಿ ಶಾರುಕ್ ಅವರು ಮೊದಲ ಬಾರಿಗೆ ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇಂದು ಸಂಜೆ ಟ್ರೇಲರ್ ಬಿಡುಗಡೆಯಾಗಲಿದೆ.

    ಝೀರೋ ಚಿತ್ರವನ್ನು ಆನಂದ್ ಎಲ್ ರೈ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಾರೂಖ್‍ಗೆ ನಾಯಕಿಯಾಗಿ ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ನಟಿಸಿದ್ದಾರೆ. ಗುರುವಾರ ಚಿತ್ರತಂಡ ಎರಡು ಫೋಟೋ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿತ್ತು.

    ಈ ಹಿಂದೆ 2012 ರಲ್ಲಿ ‘ಜಬ್ ತಕ್ ಹೈ ಜಾನ್’ ಸಿನಿಮಾದಲ್ಲಿ ಶಾರೂಖ್ ಖಾನ್, ಅನುಷ್ಕಾ ಮತ್ತು ಕತ್ರಿನಾ ಕೈಫ್ ತೆರೆಯನ್ನು ಹಂಚಿಕೊಂಡಿದ್ದರು. ಇದೀಗ ಮತ್ತೆ ಝೀರೋ ಸಿನಿಮಾದ ಮೂಲಕ ಮೂವರು ಸಿನಿ ಪರದೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. 21 ಡಿಸೆಂಬರ್ 2018 ರಂದು ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಂಜಾನ್ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಶಾರುಖ್ ಖಾನ್!

    ರಂಜಾನ್ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಶಾರುಖ್ ಖಾನ್!

    ನವದೆಹಲಿ: ರಂಜಾನ್ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಶಾರುಖ್ ಖಾನ್ ಗಿಫ್ಟ್ ನೀಡಿದ್ದು ತಮ್ಮ `ಝೀರೋ’ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಾರೆ.

    ಝೀರೋ ಚಿತ್ರವು ಬಾಲಿವುಡ್‍ನ ಖ್ಯಾತ ನಟ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಖಾನ್‍ರವರರು ಬಾಬು ಸಿಂಗ್ ಎಂಬ ಕುಳ್ಳ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಖಾನ್‍ಗಳು ಒಟ್ಟಿಗೆ ಸೇರಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

    ಚಿತ್ರದ ಟೀಸರ್ ನಲ್ಲಿ  ಬಾಬು ಸಿಂಗ್ ಒಂದು ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಸಲ್ಮಾನ್ ಖಾನ್‍ರವರನ್ನು ಭೇಟಿ ಮಾಡುತ್ತಾರೆ. ಆಗ ಸಲ್ಮಾನ್ ಖಾನ್ “ಸುನಾ ಹೈ ಜಿಸ್ಕೆ ಪೀಚೆ ಲಗ್ ಜಾತೆ ಹೋ, ಉಸ್ಕ ಲೈಫ್ ಬನಾ ದೇತಾ ಹೋ? (ನಾವು ಯಾವುದರ ಹಿಂದೆ ಹೋಗುತ್ತೇವೋ ಅದರ ಜೀವನ ನಿರ್ಮಾಣವಾಗುತ್ತದೆ) ಎಂದು ಹೇಳುತ್ತಾರೆ. ಆಗ ಬಾಬುಸಿಂಗ್ ಸಲ್ಮಾನ್‍ಗೆ ವಂದಿಸುತ್ತಾರೆ. ಅಲ್ಲದೇ ಇಬ್ಬರೂ ಒಂದೇ ತರಹದ ಬಟ್ಟೆ ಧರಿಸಿ ವೇದಿಕೆಯ ಮೇಲೆ ಕುಣಿದು ಕುಪ್ಪಳಿಸುತ್ತಾರೆ. ಬಾಬುಸಿಂಗ್ ಸಲ್ಮಾನ್‍ರನ್ನು ತಬ್ಬಿಕೊಂಡು ಚುಂಬಿಸುವ ಟೀಸರ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಚಿತ್ರದಲ್ಲಿ ಕತ್ರೀನಾ ಕೈಫ್ ಕೂಡ ನಟಿಸಿದ್ದು, ಬಾಬು ಸಿಂಗ್ ಟೀ ಶರ್ಟ್ ಮೇಲೆ ಅವರ ಚಿತ್ರ ಕಾಣಿಸಿಕೊಂಡಿದೆ.

    ಶಾರುಖ್ ಖಾನ್‍ರವರು ಸೋಶಿಯಲ್ ಮಿಡಿಯಾಗಳಲ್ಲಿ ಝೀರೋ ಚಿತ್ರದ ಟೀಸರ್ ಗಳನ್ನು ಶೇರ್ ಮಾಡಿದ್ದಾರೆ. ಚಿತ್ರತಂಡದ ಪರವಾಗಿ ಎಲ್ಲಾ ಅಭಿಮಾನಿಗಳಿಗೆ ರಂಜಾನ್ ಹಬ್ಬದ ಶುಭಕೋರಿದ್ದಾರೆ. ಈ ಟೀಸರ್ ನಿಮಗೆ ಇಷ್ಟ ಆಗುತ್ತದೆ ಎಂದು ತಮ್ಮ ಟ್ಟಿಟ್ಟರ್ ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಇದೂವರೆಗೂ ನೀವು ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಾರೂಖ್ ಖಾನ್

    ಝೀರೋ ಚಿತ್ರದಲ್ಲಿ ಶಾರುಖ್ ಖಾನ್, ಅನುಷ್ಕಾ ಶರ್ಮ ಅಭಿನಯಿಸಿದ್ದು ವಿಶೇಷ ಪಾತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಕಾಣಿಸಿಕೊಂಡಿದ್ದಾರೆ. ಆನಂದ್ ಎಲ್ ರೈರವರು ಚಿತ್ರ ನಿರ್ದೇಶಿಸಿದ್ದು, ಇದೇ ವರ್ಷ ಡಿಸೆಂಬರ್ ನಲ್ಲಿ ಚಿತ್ರ ತೆರೆಕಾಣಲಿದೆ ಎಂದು ಚಿತ್ರ ತಂಡ ತಿಳಿಸಿದೆ.

  • ಮಗಳ ಮೊದಲ ಸಿನಿಮಾ ನೋಡೋ ಮೊದಲೇ ಬಾರದ ಲೋಕಕ್ಕೆ ಪಯಣಿಸಿದ ಶ್ರೀದೇವಿ

    ಮಗಳ ಮೊದಲ ಸಿನಿಮಾ ನೋಡೋ ಮೊದಲೇ ಬಾರದ ಲೋಕಕ್ಕೆ ಪಯಣಿಸಿದ ಶ್ರೀದೇವಿ

    ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟಿ ಶ್ರೀದೇವಿ ಶನಿವಾರ ರಾತ್ರಿ 11.30 ರ ಸುಮಾರಿಗೆ ವಿಧಿವಶರಾಗಿದ್ದಾರೆ. ದುಬೈನ ಸಂಬಂಧಿಕರ ಮದುವೆಗೆಂದು ತನ್ನ ಮಗಳು ಖುಷಿ ಕಪೂರ್ ಮತ್ತು ಪತಿ ಬೋನಿ ಕಪೂರ್ ಜೊತೆ ತೆರಳಿದ್ದ ಅವರು, ಶನಿವಾರ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

    ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಭಾರತಕ್ಕೆ ವಿಶೇಷ ವಿಮಾನದಲ್ಲಿ ತರಲು ಸಿದ್ಧತೆ ನಡೆದಿದ್ದು ಮಧ್ಯಾಹ್ನ  ಮೃತದೇಹ  ಮುಂಬೈ ತಲುಪುವ ಸಾಧ್ಯತೆಯಿದೆ.

    ಶ್ರೀದೇವಿಯವರ ಹಿರಿಯ ಮಗಳು ಜಾನ್ವಿ ಕಪೂರ್ ‘ಧಡಕ್’ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಇದು ಮರಾಠಿಯ ‘ಸೈರಾಟ್’ ಸಿನಿಮಾದ ರಿಮೇಕ್ ಆಗಿದೆ. ಮಗಳು ನಟಿಸಿದ್ದ ಸಿನಿಮಾವನ್ನು ನೋಡುವ ಮೊದಲೇ ಶ್ರೀದೇವಿ ಅವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಬಹು ನಿರೀಕ್ಷಿತ ಧಡಕ್ ಸಿನಿಮಾ ಈ ವರ್ಷದ ಜುಲೈನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

    ಶ್ರೀದೇವಿ ಅವರು 2017 ರಲ್ಲಿ ಬಾಲಿವುಡ್ `ಮಾಮ್’ ಎಂಬ ಚಿತ್ರದಲ್ಲಿ ನಟಿಸಿ ಭಾರೀ ಪ್ರಶಂಸೆಯನ್ನ ಗಳಿಸಿದ್ದರು. ಈಗ ಶಾರೂಖ್ ಖಾನ್ ನಟನೆಯ ಝೀರೋ ಸಿನಿಮಾದಲ್ಲಿ ಶ್ರೀದೇವಿಯವರು ನಟಿಸುತ್ತಿದ್ದು, ಇದು ಅವರ ಕೊನೆ ಚಿತ್ರವಾಗಿದೆ. ಈ ಚಿತ್ರವು ಡಿಸೆಂಬರ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

    ನಾಲ್ಕನೇ ವಯಸ್ಸಿಗೇ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀದೇವಿಯವರು ಆಗಸ್ಟ್ 13ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದರು. ಶ್ರೀದೇವಿಯವರ ಹುಟ್ಟು ಹೆಸರು ಶ್ರೀ ಅಮ್ಮಾಯಂಗಾರ್ ಅಯ್ಯಪ್ಪನ್. ಆರು ಫಿಲ್ಮ್ ಫೇರ್ ಅವಾರ್ಡ್‍ಗಳನ್ನ ಪಡೆದುಕೊಂಡಿರುವ ಶ್ರೀದೇವಿಯವರು, ಪದ್ಮಶ್ರೀ ಪ್ರಶಸ್ತಿಯನ್ನೂ ಸಹ ಪಡೆದಿದ್ದರು.

    https://youtu.be/nALnWAlRZC8