Tag: ಝಹೀರ್‌

  • ಸೋನಾಕ್ಷಿ ಸಿನ್ಹಾ, ಝಹೀರ್ ಆರತಕ್ಷತೆಯಲ್ಲಿ ಬಾಲಿವುಡ್‌ ಸೆಲೆಬ್ರಿಟೀಸ್

    ಸೋನಾಕ್ಷಿ ಸಿನ್ಹಾ, ಝಹೀರ್ ಆರತಕ್ಷತೆಯಲ್ಲಿ ಬಾಲಿವುಡ್‌ ಸೆಲೆಬ್ರಿಟೀಸ್

    ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ (Sonakshi Sinha) ಜೂನ್ 23ರಂದು ಝಹೀರ್ ಇಕ್ಬಾಲ್ (Zaheer Iqbal) ಜೊತೆ ಸರಳವಾಗಿ ಮದುವೆಯಾದರು. ನಟಿಯ ಆರತಕ್ಷತೆ (Reception) ಸಂಭ್ರಮದಲ್ಲಿ ಬಾಲಿವುಡ್ ನಟ-ನಟಿಯರು ಭಾಗಿಯಾಗಿ ಶುಭಹಾರೈಸಿದರು.

    7 ವರ್ಷಗಳ ಪ್ರೀತಿಗೆ ಸೋನಾಕ್ಷಿ, ಝಹೀರ್ ಮದುವೆಯ ಮುದ್ರೆ ಒತ್ತಿದ್ದಾರೆ. ಸೋನಾಕ್ಷಿ ಮದುವೆ ಆರತಕ್ಷತೆಯಲ್ಲಿ ಹಿರಿಯ ನಟ ಅನಿಲ್ ಕಪೂರ್ ಡ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದ ಚಿತ್ರಾಲ್ ರಂಗಸ್ವಾಮಿ

     

    View this post on Instagram

     

    A post shared by Viral Bhayani (@viralbhayani)

    ನಟಿ ಅದಿತಿ ರಾವ್ ಹೈದರಿ ಜೊತೆ ತಮಿಳು ನಟ ಸಿದ್ಧಾರ್ಥ್ (Siddarth)ಕೂಡ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ. ಇವರ ಜೊತೆ ಹಿರಿಯ ನಟಿ ರೇಖಾ (Rekha) ಕೂಡ ಫೋಟೋಗೆ ಪೋಸ್ ನೀಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ರವೀನಾ ಟಂಡನ್, ಕಾಜೋಲ್(Kajol), ವಿದ್ಯಾ ಬಾಲನ್ (Vidya Balan), ಡೈಸಿ ಷಾ, ಆದಿತ್ಯಾ ರಾಯ್ ಕಪೂರ್, ಹುಮಾ ಖುರೇಶಿ, ಟಬು, ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.

    ಅಂದಹಾಗೆ, 7 ವರ್ಷಗಳ ಹಿಂದೆ 23-06-2017ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಎರಡು ಕುಟುಂಬದ ಮತ್ತು ದೇವರ ಹಾರೈಕೆಯಿಂದ ನಾವು ಇಂದು ಸತಿ- ಪತಿ ಆಗಿದ್ದೇವೆ ಎಂದು ಕೂಡ ಬರೆದುಕೊಂಡಿದ್ದಾರೆ. ಮಗಳ ಮದುವೆಯ ವೇಳೆ, ಸೋನಾಕ್ಷಿ ಜೊತೆ ನಿಂತು ತಂದೆ ಶತ್ರುಘ್ನ ಸಂಭ್ರಮಿಸಿದ್ದಾರೆ. ಈ ಮೂಲಕ ಮಗಳ ಮದುವೆ ಅವರಿಗೆ ಇಷ್ಟವಿಲ್ಲ ಎಂಬ ಗಾಸಿಪ್‌ಗೆ ಬ್ರೇಕ್ ಹಾಕಿದ್ದಾರೆ.

    ಅಂದಹಾಗೆ, ಸೋನಾಕ್ಷಿ ಮತ್ತು ಝಹೀರ್ ಹಿಂದೂ ಅಥವಾ ಇಸ್ಲಾಂ ಸಂಪ್ರದಾಯದಂತೆ ಮದುವೆಯಾಗದೇ ತಮ್ಮ ಮದುವೆಯನ್ನು ಕಾನೂನಾತ್ಮಕವಾಗಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಈ ವೇಳೆ, ಕ್ರೀಮ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.

  • ಝಹೀರ್ ಜೊತೆಗಿನ ಮದುವೆ ನನ್ನ ಆಯ್ಕೆ- ಟ್ರೋಲಿಗರ ಬಾಯಿ ಮುಚ್ಚಿಸಿದ ಸೋನಾಕ್ಷಿ

    ಝಹೀರ್ ಜೊತೆಗಿನ ಮದುವೆ ನನ್ನ ಆಯ್ಕೆ- ಟ್ರೋಲಿಗರ ಬಾಯಿ ಮುಚ್ಚಿಸಿದ ಸೋನಾಕ್ಷಿ

    ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಝಹೀರ್ ಇಕ್ಬಾಲ್ (Zaheer Iqbal) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಟಿ ಸಜ್ಜಾಗಿದ್ದಾರೆ. ನಟಿಯ ಮದುವೆ (Wedding) ಬಗ್ಗೆ ಟ್ರೋಲ್ ಮಾಡಿದವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ.

    ಬಾಲಿವುಡ್ ನಟ ಝಹೀರ್ ಜೊತೆ ‘ದಬಾಂಗ್’ ನಟಿ ಮದುವೆ ಆಗುತ್ತಿದ್ದಾರೆ ಎನ್ನುತ್ತಿದ್ದಂತೆ ಸೋನಾಕ್ಷಿರನ್ನು ಭಾರೀ ಟ್ರೋಲ್ ಮಾಡಲಾಗಿದೆ. ಅದಕ್ಕೆ ನಟಿ, ನನ್ನ ಮದುವೆ ನನ್ನ ಆಯ್ಕೆ ಎಂದು ಖಡಕ್ ಆಗಿ ಉತ್ತರ ನೀಡಿ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ. ಇದನ್ನೂ ಓದಿ:ಇಂದಿನಿಂದ ಡಾಲಿ ನಟನೆಯ ‘ಕೋಟಿ’ ಸಿನಿಮಾ ಅಬ್ಬರ

    ಜೂನ್ 23ರಂದು ಝಹೀರ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆಯಾಗುತ್ತಿದ್ದಾರೆ. ಮುಂಬೈನಲ್ಲಿ ನಡೆಯಲಿರುವ ಈ ಮದುವೆ ಬಾಲಿವುಡ್ ನಟ-ನಟಿಯರಿಗೆ ಸೋನಾಕ್ಷಿ ಆಹ್ವಾನ ನೀಡಿದ್ದಾರೆ.

    ಕಳೆದ 7 ವರ್ಷಗಳಿಂದ ಝಹೀರ್ ಜೊತೆ ನಟಿ ಡೇಟಿಂಗ್ ಮಾಡುತ್ತಿದ್ದಾರೆ. ಈಗ ಹಸೆಮಣೆ ಏರೋಕೆ ನಟಿ ರೆಡಿಯಾಗಿದ್ದಾರೆ.

  • ಇಂದಿನ ಮಕ್ಕಳಿಗೆ ಪೋಷಕರ ಒಪ್ಪಿಗೆ ಬೇಕಿಲ್ಲ: ಸೋನಾಕ್ಷಿ ಮದುವೆ ಬಗ್ಗೆ ತಂದೆ ಪ್ರತಿಕ್ರಿಯೆ

    ಇಂದಿನ ಮಕ್ಕಳಿಗೆ ಪೋಷಕರ ಒಪ್ಪಿಗೆ ಬೇಕಿಲ್ಲ: ಸೋನಾಕ್ಷಿ ಮದುವೆ ಬಗ್ಗೆ ತಂದೆ ಪ್ರತಿಕ್ರಿಯೆ

    ಬಾಲಿವುಡ್‌ನಲ್ಲಿ ಮತ್ತೊಂದು ಜೋಡಿಯ ಮದುವೆ ಸಂಭ್ರಮ ಮನೆ ಮಾಡಿದೆ. ಝಹೀರ್ ಇಖ್ಬಾಲ್ (Zaheer Iqbal) ಜೊತೆ ಸೋನಾಕ್ಷಿ ಸಿನ್ಹಾ (Sonakshi Sinha) ಇದೇ ಜೂನ್ 23ರಂದು ಮದುವೆಯಾಗಲಿದ್ದಾರೆ. ಇದೀಗ ಮಗಳ ಮದುವೆ ಬಗ್ಗೆ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ಬಗ್ಗೆ ನಮ್ಮ ಬಳಿ ಮಗಳು ಏನು ಹೇಳಿಲ್ಲ. ಆದರೆ ಇಂದಿನ ಕಾಲದ ಮಕ್ಕಳು ಮದುವೆಗೆ ಒಪ್ಪಿಗೆ ಕೇಳುವುದಿಲ್ಲ. ಬದಲಿಗೆ ತಮ್ಮ ನಿರ್ಧಾರವನ್ನು ಪೋಷಕರಿಗೆ ತಿಳಿಸುತ್ತಾರೆ ಎಂದು ಶತ್ರುಘ್ನ ಸಿನ್ಹಾ (Shatrughan Sinha) ಮಾತನಾಡಿದ್ದಾರೆ.

    ಮಗಳ ಮದುವೆ (Wedding) ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಚುನಾವಣೆ ಫಲಿತಾಂಶದ ನಂತರ ನಾನೀಗ ದೆಹಲಿಯಲ್ಲಿದ್ದೇನೆ. ಮಗಳ ಮದುವೆ ಬಗ್ಗೆ ನನಗೆ ಏನನ್ನೂ ಹೇಳಿಲ್ಲ. ಮಾಧ್ಯಮದಲ್ಲಿ ಏನು ವರದಿ ಆಗಿದೆಯೋ ನನಗೂ ಅಷ್ಟೇ ತಿಳಿದಿದೆ. ಅವಳು ನಮಗೆ ಆಮಂತ್ರಣ ನೀಡಿದರೆ ನಾನು ಮತ್ತು ನನ್ನ ಪತ್ನಿ ಇಬ್ಬರೂ ಹೋಗಿ ಹಾರೈಸಿ ಬರುತ್ತೇವೆ. ಅವಳ ಸಂತೋಷವನ್ನು ಎಂದಿಗೂ ನಾವು ಬಯಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಬಾಲಯ್ಯಗೆ ‘ಅಖಂಡ’ ಚಿತ್ರದ ನಿರ್ದೇಶಕ ಆ್ಯಕ್ಷನ್ ಕಟ್

    ಮಗಳು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಶತ್ರುಘ್ನ ಸಿನ್ಹಾ ಮಾತನಾಡಿದ್ದಾರೆ. ನಮ್ಮ ಮಗಳ ನಿರ್ಧಾರ ಯಾವತ್ತೂ ಸರಿಯಾಗಿರುತ್ತದೆ ಎನ್ನುವ ವಿಶ್ವಾಸವಿದೆ. ಅವಳು ಎಂದಿಗೂ ಕಾನೂನುಬಾಹಿರ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಮಗಳು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ ಎಂದಿದ್ದಾರೆ. ನನ್ನ ಮಗಳ ಮದುವೆಯಲ್ಲಿ ಡ್ಯಾನ್ಸ್ ಮಾಡಲು ಇಷ್ಟಪಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

    ಅಂದಹಾಗೆ, 2020ರಿಂದ ಸಲ್ಮಾನ್ ಖಾನ್ ಆಪ್ತ ನಟ ಝಹೀರ್ ಜೊತೆ ಸೋನಾಕ್ಷಿ ಡೇಟಿಂಗ್ ಮಾಡುತ್ತಿದ್ದಾರೆ. ಈಗ ಮದುವೆ ತಯಾರಿಯಲ್ಲಿ ನಟಿ ಬ್ಯುಸಿಯಾಗಿದ್ದಾರೆ.