Tag: ಝಮು ಜಾತ್ರೆ

  • ಜಾತ್ರೆಯಲ್ಲಿ ಕೆಂಡದ ಮೇಲೆ ನಡೆದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ

    ಜಾತ್ರೆಯಲ್ಲಿ ಕೆಂಡದ ಮೇಲೆ ನಡೆದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ

    ಭುವನೇಶ್ವರ: ಬಿಜೆಪಿ (BJP) ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ (Sambit Patra) ಅವರು ಉರಿಯುತ್ತಿರುವ ಕೆಂಡದ ಮೇಲೆ ನಡೆದು ದೇವರ ಸೇವೆ ಮಾಡಿದ್ದಾರೆ.

    ಘಟನೆ ಒಡಿಶಾದ ಪುರಿ ಜಿಲ್ಲೆಯ ಝಮು ಜಾತ್ರೆಯಲ್ಲಿ (Jhamu Jatra) ಸುಮಾರು 10 ಮೀಟರ್ ಉದ್ದದ ಉರಿಯುತ್ತಿರುವ ಕೆಂಡದ ಹಾಸಿನ ಮೇಲೆ ಅವರು ನಡೆದಾಡಿದ್ದಾರೆ. ಇದನ್ನೂ ಓದಿ: ಸತ್ತು ಮಲಗಿದ ನನ್ನ ಮೇಲೆ ಬಿಜೆಪಿಯ ಬಾವುಟ ಇರಬೇಕು: ರಘುಪತಿ ಭಟ್

    ಬೆಂಕಿಯ ಮೇಲೆ ನಡೆದ ದೃಶ್ಯವನ್ನು ಟ್ವಟ್ಟರ್‍ನಲ್ಲಿ ಹಂಚಿಕೊಂಡಿರುವ ಅವರು, ರೆಬಾಟಿ ರಾಮನ್ (Rebati Raman) ಗ್ರಾಮದ ಜಾತ್ರೆಯಲ್ಲಿ ಭಾಗವಹಿಸಿದ್ದೇನೆ. ನನ್ನ ತಾಯಿಗೆ ಬೆಂಕಿಯ ಮೇಲೆ ನಡೆಯುವ ಮೂಲಕ ಪೂಜೆ ಸಲ್ಲಿಸಿದ್ದೇನೆ. ದೇವಿಯ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ. ಗ್ರಾಮಸ್ಥರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡುವಂತೆ ಪ್ರಾರ್ಥನೆ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡರು, ಜನರ ಕಲ್ಯಾಣ ಮತ್ತು ಕ್ಷೇತ್ರದಲ್ಲಿ ಶಾಂತಿಗಾಗಿ ಬೆಂಕಿಯ ಮೇಲೆ ನಡೆಯುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಝಮು ಜಾತ್ರೆಯ ಸಂಪ್ರದಾಯದ ಪ್ರಕಾರ, ಮಾತೃ ದೇವತೆ ದುಲನ್ (Maa Dulan) ದೇವಿಗೆ ಬೆಂಕಿಯ ಮೇಲೆ ನಡೆಯುವುದು ಹಾಗೂ ಉಗುರುಗಳಿಂದ ತಮ್ಮ ದೇಹಕ್ಕೆ ಚುಚ್ಚುವ ಮೂಲಕ ಭಕ್ತರು ವಿಶಿಷ್ಟವಾಗಿ ಪ್ರಾರ್ಥಿಸುತ್ತಾರೆ ಎಂದಿದ್ದಾರೆ.

    ಸಂಬಿತ್ ಪಾತ್ರಾ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅವರು ಬಿಜೆಡಿಯ (BJD) ಪಿನಾಕಿ ಮಿಶ್ರಾ ವಿರುದ್ಧ 10,000 ಮತಗಳಿಂದ ಸೋತಿದ್ದರು. ಇದನ್ನೂ ಓದಿ: ನನಗೆ ಟಿಕೆಟ್ ಮಿಸ್ ಆಗಿದ್ರಿಂದ ಇಲ್ಲಿವರೆಗೆ ಬೆಂಬಲಿಗರು ಊಟನೂ ಮಾಡಿಲ್ಲ: ದೊಡ್ಡಪ್ಪಗೌಡ ನರಿಬೋಳ್