Tag: ಝಡ್ ಭದ್ರತೆ

  • ರಾಜ್ಯಪಾಲ ಗೆಹ್ಲೋಟ್‌ಗೆ ಈಗ Z ಶ್ರೇಣಿಯ ಭದ್ರತೆ

    ರಾಜ್ಯಪಾಲ ಗೆಹ್ಲೋಟ್‌ಗೆ ಈಗ Z ಶ್ರೇಣಿಯ ಭದ್ರತೆ

    ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ (Thawar Chand Gehlot) ಕೇಂದ್ರ ಸರ್ಕಾರ ಭದ್ರತೆ ಹೆಚ್ಚಿಸಿದೆ. ಈಗ ಭದ್ರತೆಯನ್ನು Z ಶ್ರೇಣಿಗೆ ಹೆಚ್ಚಿಸಿದೆ.

    ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್ (Prosecution) ರಾಜ್ಯಪಾಲರು ಅನುಮತಿ ನೀಡಿದ್ದರು. ಪ್ರಾಸಿಕ್ಯೂಷನ್ ಅನುಮತಿ ಬಳಿಕ ರಾಜ್ಯಪಾರು ಬುಲೆಟ್ ಪ್ರೂಫ್ ಕಾರು (Bullet Proof Car) ಪಡೆದಿದ್ದರು. ಗುಪ್ತಚರ ಇಲಾಖೆಯ ಇತ್ತೀಚಿನ ಬೆದರಿಕೆ ವರದಿಯ ನಂತರ ಭದ್ರತೆಯನ್ನು (Security) ಹೆಚ್ಚಿಸಲಾಗಿದೆ.

    ರಾಜ್ಯಪಾಲರು ಅಧಿಕಾರ ಸ್ವೀಕರಿಸಿದಾಗಲೇ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ಕಾರನ್ನು ವಾಪಸ್ ಕಳುಹಿಸಿದ್ದರು. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕ ರಾಜ್ಯದಲ್ಲಿ ಕೆಲವು ಕಡೆ ಪ್ರತಿಭಟನೆಗಳು ನಡೆದಿತ್ತು. ಈ ಪ್ರತಿಭಟನೆಯ ನಂತರ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಲೈನ್‌ನಲ್ಲಿ ನಿಲ್ಲುವ ಕಾಲ ಬರುತ್ತೆ – ಸಿಎಂ ವಿರುದ್ಧ ರೇವಣ್ಣ ಕಿಡಿ

    ಪ್ರತಿಭಟನೆಗಳು ನಡೆದ ಬಳಿಕ ಪೂರ್ವ ನಿಗದಿಯಾಗಿದ್ದ ಹಲವು ಕಾರ್ಯಕ್ರಮಗಳನ್ನು ರಾಜ್ಯಪಾಲರು ರದ್ದು ಮಾಡಿದ್ದರು.

     

  • ರಾಷ್ಟ್ರಪತಿ ಚುನಾವಣೆಯ BJP ಅಭ್ಯರ್ಥಿ ದ್ರೌಪದಿ ಮುರ್ಮುಗೆ ʼZ’ ಭದ್ರತೆ

    ರಾಷ್ಟ್ರಪತಿ ಚುನಾವಣೆಯ BJP ಅಭ್ಯರ್ಥಿ ದ್ರೌಪದಿ ಮುರ್ಮುಗೆ ʼZ’ ಭದ್ರತೆ

    ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರಿಗೆ ʼಝಡ್‌ʼ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರ್ಕಾರ ಕಲ್ಪಿಸಲಿದೆ.

    ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯಿಂದ 24 ಗಂಟೆಗಳ ಕಾಲ ‘Z’ ಶ್ರೇಣಿಯ ಸಶಸ್ತ್ರ ಭದ್ರತೆಯನ್ನು ಸರ್ಕಾರ ಒದಗಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಾರ್ಥನೆ ಸಲ್ಲಿಸುವ ಮೊದಲು ದೇವಸ್ಥಾನದ ನೆಲ ಗುಡಿಸಿದ ದ್ರೌಪದಿ ಮುರ್ಮು

    ಮಂಗಳವಾರ ಸಂಜೆ ಗೃಹ ಸಚಿವಾಲಯದಿಂದ ಬಂದ ಆದೇಶದ ನಂತರ ಸಿಆರ್‌ಪಿಎಫ್ ಬುಧವಾರ ಬೆಳಿಗ್ಗೆಯಿಂದ ಮುರ್ಮು ಅವರಿಗೆ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬಿಜೆಪಿಯು ಜಾರ್ಖಂಡ್‌ನ ಮಾಜಿ ಗವರ್ನರ್ ದ್ರೌಪದಿ ಮುರ್ಮು ಅವರನ್ನು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಾಗಿ ಮಂಗಳವಾರ ಹೆಸರಿಸಿದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

    Live Tv

  • ನಾನು ಸ್ವತಂತ್ರ ಹಕ್ಕಿ, ಮುಕ್ತವಾಗಿ ಜೀವಿಸಲು ಬಯಸುತ್ತೇನೆ: ಓವೈಸಿ

    ನಾನು ಸ್ವತಂತ್ರ ಹಕ್ಕಿ, ಮುಕ್ತವಾಗಿ ಜೀವಿಸಲು ಬಯಸುತ್ತೇನೆ: ಓವೈಸಿ

    ನವದೆಹಲಿ: ಝಡ್ ಶ್ರೇಣಿಯ ಭದ್ರತೆಗೆ ಒಪ್ಪಿಕೊಳ್ಳಿ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನವಿ ಮಾಡಿದ್ದಾರೆ.

    ಇತ್ತೀಚೆಗಷ್ಟೇ ದಾಳಿಗೊಳಗಾಗಿದ್ದ ಅಸಾದುದದ್ಧಿನ್ ಓವೈಸಿ ಅವರಿಗೆ ಸರ್ಕಾರ ಝಡ್ ಶ್ರೇಣಿ ಭದ್ರತೆ ಒಪ್ಪಿಕೊಳ್ಳುವಂತೆ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ಈ ಕುರಿತಾಗಿ ಮಾತನಾಡಿದ, ಒವೈಸಿ ಅವರು ಮಾರಕಾಸ್ತ್ರಗಳನ್ನು ಹೊಂದಿರುವ ಜನರು ನನ್ನ ಸುತ್ತಲೂ ಇರಬೇಕೆಂದು ನಾನು ಬಯಸುವುದಿಲ್ಲ. ನಾನು ಸ್ವತಂತ್ರ ಹಕ್ಕಿ. ಮುಕ್ತವಾಗಿ ಜೀವಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶವನ್ನು ಒಡೆದು ಆಳುವ ಕಾಂಗ್ರೆಸ್‌ ತುಕ್ಡೆ ತುಕ್ಡೆ ಗ್ಯಾಂಗ್‌ ಲೀಡರ್‌: ನರೇಂದ್ರ ಮೋದಿ


    ರಾಜ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ ಅವರು, ಕಾರಿನ ಮೇಲೆ ದಾಳಿ ನಡೆಸಿದ ಬಳಿಕ ಸರ್ಕಾರ ನೀಡಿರುವ ಝಡ್ ಕೆಟಗರಿ ಭದ್ರತೆಯನ್ನು ಸ್ವೀಕರಿಸಿ. ಓವೈಸಿ ಇನ್ನೂ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಸರ್ಕಾರದ ಮೌಲ್ಯಮಾಪನವು ಕಂಡುಹಿಡಿದಿದೆ. ಆದರೆ ಹೈದರಾಬಾದ್ ಸಂಸದರು ಸಿಆರ್‍ಪಿಎಫ್ ರಕ್ಷಣೆ ಪಡೆಯಲು ನಿರಾಕರಿಸಿದ್ದಾರೆ. ಒವೈಸಿ ಅವರು ನಮಗೆ ಕಳುಹಿಸಿದ ಮೌಖಿಕ ಮಾಹಿತಿಯ ಪ್ರಕಾರ, ಅವರು ಭದ್ರತೆಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ತಕ್ಷಣವೇ ಭದ್ರತೆಯನ್ನು ತೆಗೆದುಕೊಳ್ಳುವಂತೆ ಮತ್ತು ನಮ್ಮ ಮತ್ತು ಅವರ ಸುರಕ್ಷತೆಯ ಬಗ್ಗೆ ತಿಳಿಸುವಂತೆ ನಾನು ಈ ಸದನದ ಮೂಲಕ ಓವೈಸಿ ಅವರನ್ನು ವಿನಂತಿಸುತ್ತೇನೆ ಎಂದು ಶಾ ಮೇಲ್ಮನೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಖಡ್ಗ, ಭಯ, ದಬ್ಬಾಳಿಕೆಯಿಂದ ತನ್ವೀರ್ ಸೇಠ್ ಆಗಿದ್ದಾರೆ: ಪ್ರತಾಪ್ ಸಿಂಹ

    ಫೆಬ್ರವರಿ 3, 2022 ರಂದು ಉತ್ತರ ಪ್ರದೇಶದಲ್ಲಿ ಓವೈಸಿ ಅವರ ಕಾರಿನ ಮೇಲೆ ಗುಂಡು ಹಾರಿಸಲಾಗಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಿ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು. ಹೀಗಾಗಿ ಓವೈಸಿ ಅವರಿಗೆ ಕೇಂದ್ರ ಸರ್ಕಾರ ಭದ್ರತೆಯನ್ನು ನೀಡುವುದಾಗಿ ಹೇಳಿತ್ತು. ಆದರೆ ಭದ್ರತೆಯನ್ನು ಓವೈಸಿ ನಿರಾಕರಿಸಿದ್ದಾರೆ.