Tag: ಜ್ವರ

  • ಮಣಿಪಾಲ ಆಸ್ಪತ್ರೆಯಿಂದ ಸಿದ್ದರಾಮಯ್ಯ ಡಿಸ್ಚಾರ್ಜ್

    ಮಣಿಪಾಲ ಆಸ್ಪತ್ರೆಯಿಂದ ಸಿದ್ದರಾಮಯ್ಯ ಡಿಸ್ಚಾರ್ಜ್

    ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಮಣಿಪಾಲ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದರಾಮಯ್ಯ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಹೊರಟ ಸಿದ್ದರಾಮಯ್ಯ ವರನ್ನು ವೈದ್ಯರು ಹಾಗೂ ಸಿಬ್ಬಂದಿ ಬೀಳ್ಕೊಟ್ಟರು.

    ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಜೂನ್ 1 ರಂದು ಸಿದ್ದರಾಮಯ್ಯ  ಆಸ್ಪತ್ರೆಗೆ ದಾಖಲಾಗಿದ್ದರು. ಈ ಮಧ್ಯೆ ಒಟ್ಟು ಮೂರು ಬಾರಿ ಸಿದ್ದರಾಮಯ್ಯ ಕೊರೊನಾ ಟೆಸ್ಟ್ ಗೆ ಒಳಗಾಗಿದ್ದು ಟೆಸ್ಟ್ ರಿಪೋರ್ಟ್  ನೆಗೆಟಿವ್ ಬಂದಿದೆ. ಇದನ್ನೂ ಓದಿ: ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ – ಸಿದ್ದರಾಮಯ್ಯ

    ಸಿದ್ದರಾಮಯ್ಯ ವೈರಲ್ ಫೀವರ್ ನಿಂದ ಬಳಲುತ್ತಿದ್ದು ವೈದ್ಯರ ಸಲಹೆ ಮೇರೆಗೆ 6  ದಿನಗಳ ಕಾಲ ಮಣಿಪಾಲ್ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆದಿದ್ದಾರೆ. ಪುತ್ರ ಶಾಸಕ ಯತೀಂದ್ರ ಜೊತೆಗಿದ್ದು ಸಿದ್ದರಾಮಯ್ಯ ಯೋಗಕ್ಷೇಮ ನೋಡಿಕೊಂಡಿದ್ದರು.  ಒಂದು ವಾರಗಳ ಕಾಲ ಸಿದ್ದರಾಮಯ್ಯ ತಮ್ಮ ನಿವಾಸದಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.

    ಈ ಹಿಂದೆ ಸಿದ್ದರಾಮಯ್ಯನವರಿಗೆ ಕೊರೊನಾ ಸೋಂಕು ತಗುಲಿದ್ದು, ಬಳಿಕ ಗುಣಮುಖರಾಗಿದ್ದರು.

  • ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ: ನಾಡಿದ್ದು ಡಿಸ್ಚಾರ್ಜ್

    ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ: ನಾಡಿದ್ದು ಡಿಸ್ಚಾರ್ಜ್

    ಬೆಂಗಳೂರು: ಅನಾರೋಗ್ಯದಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಗ್ಯದಲ್ಲಿ ಬಹಳಷ್ಟು ಚೇತರಿಕೆ ಕಂಡುಬಂದಿದೆ. ಜ್ವರ ಲಕ್ಷಣ ಈಗ ಇಲ್ಲವಾಗಿದ್ದು ನಿನ್ನೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿಯೂ ನೆಗೆಟಿವ್ ವರದಿ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ವೈದ್ಯರ ಸಲಹೆ ಮೇರೆಗೆ ಇಂದು ಮತ್ತು ನಾಳೆ ಆಸ್ಪತ್ರೆಯಲ್ಲಿಯೇ ಸಿದ್ದರಾಮಯ್ಯ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಬಹುತೇಕ ನಾಡಿದ್ದು ಸಿದ್ದರಾಮಯ್ಯ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ವೆಂಕಯ್ಯ ನಾಯ್ಡು ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಮಾಯಕ್ಕೆ ಅಸಲಿ ಕಾರಣವೇನು ಗೊತ್ತಾ?

    ಜೂನ್ 1ರಂದು ಜ್ವರ ಕಂಡುಬಂದ ಕಾರಣಕ್ಕೆ ಸಿದ್ದರಾಮಯ್ಯ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಅಗತ್ಯ ಕಂಡುಬಂದರೆ ವೈದ್ಯರ ಸೂಚನೆ ಅನುಸರಿಸಿ ದಾಖಲಾಗುವ ಬಗ್ಗೆ ಹೇಳಿದ್ದರು. ಆ ಬಳಿಕ, ಸಿದ್ದರಾಮಯ್ಯ ಅವರಿಗೆ ಸಿಟಿ ಸ್ಕ್ಯಾನ್ ಮಾಡಲಾಗಿತ್ತು. ಸ್ಕ್ಯಾನಿಂಗ್ ರಿಪೋರ್ಟ್ ನಾರ್ಮಲ್ ಬಂದಿತ್ತು. ಆದರೂ ವೈರಲ್ ಫಿವರ್​ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದರು. ಸಿದ್ದರಾಮಯ್ಯ ಜತೆ ಆಸ್ಪತ್ರೆಯಲ್ಲಿ ಪುತ್ರ ಡಾ.ಯತೀಂದ್ರ ಸಹ ಇದ್ದಾರೆ.

    ಕೊರೊನಾ ಸೋಂಕಿನಿಂದಾಗಿ ಸಿದ್ದರಾಮಯ್ಯ ಕಳೆದ ವರ್ಷ ಆಗಸ್ಟ್​ನಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ವಾರದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು. ಸೋಂಕಿನಿಂದ ಗುಣಮಖರಾದ ಬಳಿಕ, ಕೋವಿಡ್‌ ಮಾರ್ಗಸೂತ್ರಗಳಂತೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ನಂತರ ನಿಯಮದಂತೆ ಮನೆಯಲ್ಲಿ ಕ್ವಾರಂಟೈನ್‌ ಆಗಿದ್ದರು.

  • ಜ್ವರ ಕಡಿಮೆಯಾಗಿದ್ದು, ಆಸ್ಪತ್ರೆಯಲ್ಲಿಯೇ ಸಿದ್ದರಾಮಯ್ಯ ವಿಶ್ರಾಂತಿ

    ಜ್ವರ ಕಡಿಮೆಯಾಗಿದ್ದು, ಆಸ್ಪತ್ರೆಯಲ್ಲಿಯೇ ಸಿದ್ದರಾಮಯ್ಯ ವಿಶ್ರಾಂತಿ

    ಬೆಂಗಳೂರು: ತೀವ್ರ ಜ್ವರ ಬಂದಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಜ್ವರದ ತೀವ್ರತೆ ಕೊಂಚ ಕಡಿಮೆಯಾಗಿದೆ.

    ಸೋಮವಾರ ರಾತ್ರಿಯಿಂದಲೇ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಪುತ್ರ ಯತೀಂದ್ರ ಅವರು ನಿನ್ನೆ ಮಧ್ಯಾಹ್ನ ನಗರದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಸಿದ್ದರಾಮಯ್ಯ ಅವರು ಎರಡು ದಿನಗಳ ಕಾಲ ವಿಶ್ರಾಂತಿಯಲ್ಲಿ ಇರಲಿದ್ದು, ಹೀಗಾಗಿ ಸದ್ಯ ಅವರ ಕಾರ್ಯಕ್ರಮಗಳು ರದ್ದಾಗಿವೆ.

    ಜ್ವರ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್ ಕೂಡ ಮಾಗಿದೆ. ಅದರ ನೆಗೆಟಿವ್ ರಿಪೋರ್ಟ್ ಬಂದಿದೆ. ಸಿಟಿ ಸ್ಕ್ಯಾನಿಂಗ್ ಸಹ ರಿಪೋರ್ಟ್ ನಾರ್ಮಲ್ ಎಂದು ವರದಿ ಬಂದಿತ್ತು. ವೈರಲ್ ಫೀವರ್ ಆದ ಕಾರಣ 2 ದಿನ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರ ಸಲಹೆ ನೀಡಿದ್ದರು. ಈ ಹಿಂದೆ ಸಿದ್ದರಾಮಯ್ಯನವರಿಗೆ ಕೊರೊನಾ ಸೋಂಕು ತಗುಲಿದ್ದು, ಬಳಿಕ ಗುಣಮುಖರಾಗಿದ್ದರು.

  • ವೈದ್ಯರ ಸಲಹೆ ಮೇರೆಗೆ ಸಿದ್ದರಾಮಯ್ಯ 2 ದಿನ ಆಸ್ಪತ್ರೆಗೆ ದಾಖಲು

    ವೈದ್ಯರ ಸಲಹೆ ಮೇರೆಗೆ ಸಿದ್ದರಾಮಯ್ಯ 2 ದಿನ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎರಡು ದಿನ ಆಸ್ಪತ್ರೆಗೆ ದಾಖಲಾಗಿ ವಿಶ್ರಾಂತಿಯನ್ನು ಪಡೆಯಲಿದ್ದಾರೆ.

    ನಿನ್ನೆ ರಾತ್ರಿಯಿಂದ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಫ್ಯಾಮಿಲಿ ಡಾಕ್ಟರ್ ಸಲಹೆ ಮೇರೆಗೆ ಮಣಿಪಾಲ್ ಆಸ್ಪತ್ರೆಗೆ ಸಿದ್ದರಾಮಯ್ಯ ಇಂದು ಚಿಕಿತ್ಸೆಗಾಗಿ ಕರೆದುಕೊಂಡ ಹೋಗಲಾಗಿತ್ತು. ಸಿದ್ದರಾಮಯ್ಯ ಅವರು ಎರಡು ದಿನಗಳ ಕಾಲ ವಿಶ್ರಾಂತಿಯಲ್ಲಿ ಇರಲಿದ್ದಾರೆ. ಹೀಗಾಗಿ ಇಂದು ಮತ್ತು ನಾಳಿನ ಅವರ ಕಾರ್ಯಕ್ರಮಗಳು ರದ್ದಾಗಿದೆ.  ಇದನ್ನೂ ಓದಿ: ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ಕರೆದೊಯ್ದ ಪುತ್ರ ಯತೀಂದ್ರ

    ಕೊರೊನಾ ನೆಗೆಟಿವ್ ರಿಪೋರ್ಟ್ ಬಂದಿದೆ. ಸಿಟಿ ಸ್ಕ್ಯಾನಿಂಗ್ ಸಹ ರಿಪೋರ್ಟ್ ನಾರ್ಮಲ್ ಎಂದು ವರದಿ ಬಂದಿದೆ. ವೈರಲ್ ಫೀವರ್ ಆದ ಕಾರಣ 2 ದಿನ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರ ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಸಿದ್ದರಾಮಯ್ಯ ಜೊತೆ ಆಸ್ಪತ್ರೆಯಲ್ಲಿ ಪುತ್ರ ಡಾ.ಯತೀಂದ್ರ ಉಳಿದುಕೊಂಡಿದ್ದಾರೆ.

  • ಮದುವೆಯಾಗಿ  ಮೂರೇ ದಿನಕ್ಕೆ ಪ್ರಾಣಬಿಟ್ಟ ನವವಿವಾಹಿತ

    ಮದುವೆಯಾಗಿ ಮೂರೇ ದಿನಕ್ಕೆ ಪ್ರಾಣಬಿಟ್ಟ ನವವಿವಾಹಿತ

    ಲಕ್ನೋ: ಮದುವೆಯಾಗಿ ಮೂರೇ ದಿನಕ್ಕೆ ಯುವಕ ಕೊರೊನಾ ಮಾಹಾಮಾರಿಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಜಾಟಾನ್ ನಿವಾಸಿ ಅರ್ಜುನ್ ಮದುವೆಯಾಗಿ ಮೂರೇ ದಿನಕ್ಕೆ ಕೊರೊನಾಗೆ ಬಲಿಯಾಗಿದ್ದಾನೆ. ಏ,25 ರಂದು ಅರ್ಜುನ್ ಬಬಲಿ ಎನ್ನುವ ಯುವತಿಯ ಜೊತೆಗೆ ಹಸೆಮಣೆ ಏರಿದ್ದರು. ಮದುವೆ ಮುಗಿಸಿ ಮನೆಗೆ ಬಂದ ದಿನವೇ ಅರ್ಜುನ್ ಆರೋಗ್ಯದಲ್ಲಿ ಏರುಪೇರಾಗಿತ್ತು.

    ಅರ್ಜುನ್‍ಗೆ ರಾತ್ರಿ ಜ್ವರ ಕಣಿಸಿಕೊಂಡಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅರ್ಜುನನ್ನು ಕುಟುಂಬಸ್ಥರು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೂಡಲೇ ಅರ್ಜುನ್‍ನನ್ನು ಜಿಲ್ಲಾಸ್ಪತ್ರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅರ್ಜುನ್ ಆರೋಗ್ಯ ಕ್ಷಿಣಿಸುತ್ತಲೇ ಹೋಯಿತ್ತು.

    ಏಪ್ರಿಲ್29 ರಂದು ಆಕ್ಸಿಜನ್ ಕೊರತೆಯಿಂದಾಗಿ ಅರ್ಜುನ್ ಪ್ರಾಣಬಿಟ್ಟುನು. ಮಗನನ್ನು ಕಳೆದುಕೊಂಡ ಕುಟುಂಬ, ಆಗ ತಾನೇ ಹಸೆಮಣೆ ಏರಿದ್ದ ಮಗಳು ಪತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

  • ಕಿಚ್ಚನ ಚೇತರಿಕೆಗಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ

    ಕಿಚ್ಚನ ಚೇತರಿಕೆಗಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ಸದ್ಯ ಕಿಚ್ಚ ಅನಾರೋಗ್ಯದ ಸಮಸ್ಯೆ ಇರುವುದರಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

    ಆದ್ರೆ ಅಭಿಮಾನಿಗಳು ಮಾತ್ರ ಕಿಚ್ಚ ಸುದೀಪ್ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ದೇವಾಲಯವೊಂದರಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ವೀಡಿಯೋವನ್ನು ಕಿಚ್ಚ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚೆನ್ನಗಿರಿಯ ತಾಲೂಕಿನ ಅಖಿಲ ಕರ್ನಾಟಕ ವಾಲ್ಮೀಕಿ ರತ್ನ ಬಾದ್ ಷಾ ಕಿಚ್ಚ ಸುದೀಪ್ ಸೇನೆ ಸದಸ್ಯರು ಆಂಜನೇಯ ದೇವಸ್ಥಾನದಲ್ಲಿ ಸುದೀಪ್ ಅವರು ಚೇತರಿಸಿಕೊಳ್ಳಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಅದರಲ್ಲೂ ವಿಕಲಚೇತನ ಅಭಿಮಾನಿಯೊಬ್ಬ ಸುದೀಪ್ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಸನ್ನಧಿಯಲ್ಲಿ ಬೇಡಿಕೊಳ್ಳುತ್ತಿರುವ ವೀಡಿಯೋವನ್ನು ಸಹ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವುದರ ಜೊತೆಗೆ ಈ ಪ್ರೀತಿಗೆ ಸದಾ ಚಿರಋಣಿ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

    ಕಳೆದ ವಾರ ಬಿಗ್‍ಬಾಸ್ ಸೀಸನ್-8 ಕಾರ್ಯಕ್ರಮಕ್ಕೂ ಕೂಡ ಕಿಚ್ಚ ಗೈರಾಗಿದ್ದರು.

  • ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‍ಗೆ ಕೊರೊನಾ ದೃಢ

    ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‍ಗೆ ಕೊರೊನಾ ದೃಢ

    ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‍ಗೆ ಕೊರೊನಾ ಸೋಂಕು ದೃಢವಾಗಿದೆ.

    ಪೂರ್ಣಿಮಾ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಅವರೊಂದಿಗೆ ಅವರ ಸಂಪರ್ಕದಲ್ಲಿದ್ದ ಪತಿ ಶ್ರೀನಿವಾಸ್, ಆಪ್ತಕಾರ್ಯದರ್ಶಿ ನಿರಂಜನ್ ಸೇರಿದಂತೆ ಐವರಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಅವರಲ್ಲಿ ಓರ್ವ ಸಂಬಂಧಿ ಸೇರಿದಂತೆ ನಾಲ್ವರ ವರದಿ ನೆಗೆಟಿವ್ ಎಂದು ಬಂದಿದೆ.

    ಕಾರು ಚಾಲಕ ಹಾಗೂ ಶಾಸಕಿ ಪೂರ್ಣಿಮಾಗೆ ಸೋಂಕು ದೃಢವಾಗಿದೆ. ಹೀಗಾಗಿ ಬೆಂಗಳೂರಿನ ನಿವಾಸದಲ್ಲಿ ಶಾಸಕರು ಹೋಂ ಐಸೊಲೇಷನ್‍ನಲ್ಲಿದ್ದಾರೆ. ಆದ್ದರಿಂದ ಕ್ಷೇತ್ರದ ಜನರು ಆತಂಕಕ್ಕೀಡಾಗದಂತೆ ಶಾಸಕರು ಮನವಿ ಮಾಡಿದ್ದಾರೆ. ಶಾಸಕಿ ಪೂರ್ಣಿಮಾ ಕ್ಷೇತ್ರದ ಜನರಲ್ಲಿ ತಮಗೆ ಪಾಸಿಟಿವ್ ಬಂದಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಸಿದ್ದೂ, ಟೆಸ್ಟ್‍ಗೆ ಒಳಪಟ್ಟಿರುವ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.

    ಇದರಿಂದಾಗಿ ಹಿರಿಯೂರು ಕ್ಷೇತ್ರದ ಜನರು ಕೂಡ ಶಾಸಕಿ ಪೂರ್ಣಿಮಾ ಬೇಗ ಗುಣಮುಖರಾಗಿ ಬರಲೆಂದು ದೇವರನ್ನು ಪ್ರಾರ್ಥಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

  • ಕಾರ್ಕಳದಲ್ಲಿ 10 ತಿಂಗಳ ವಿಜಯಪುರದ ಮಗು ಸಂಶಯಾಸ್ಪದ ಸಾವು

    ಕಾರ್ಕಳದಲ್ಲಿ 10 ತಿಂಗಳ ವಿಜಯಪುರದ ಮಗು ಸಂಶಯಾಸ್ಪದ ಸಾವು

    – ಲ್ಯಾಬ್ ವರದಿಗಾಗಿ ಕಾಯುತ್ತಿರುವ ವೈದ್ಯರು

    ಉಡುಪಿ: ಜ್ವರ ಮತ್ತು ತೊಂದರೆಯಿಂದ ಹತ್ತು ತಿಂಗಳ ಮಗು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

    ಸಾವನ್ನಪ್ಪಿದ ಮಗುವನ್ನು ಕಾರ್ಕಳದ ಮಿಯಾರು ಗ್ರಾಮದಲ್ಲಿ ನೆಲೆಸಿರುವ ಮೂಲತಃ ವಿಜಯಪುರ ಜಿಲ್ಲೆಯ ದಂಪತಿಯ ಮಗು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಏಪ್ರಿಲ್ ತಿಂಗಳಲ್ಲಿ ವಿಜಯಪುರಕ್ಕೆ ಹೋದ ದಂಪತಿ ಹತ್ತು ದಿನಗಳ ಹಿಂದೆ ವಾಪಸ್ ಆಗಿದ್ದರು.

    ಜೂನ್ 28 ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿತ್ತು. ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ತಾಲೂಕು ಆಸ್ಪತ್ರೆಗೆ ಮಗುವನ್ನು ಕರೆ ತರುವಾಗ ಸಾವು ಸಂಭವಿಸಿದೆ. ಕೊರೊನಾ ಸಂದರ್ಭದಲ್ಲಿ ಮೃತಪಟ್ಟಿರುವ ಕಾರಣ ಮಗುವಿನ ಗಂಟಲ ದ್ರವ ಪರೀಕ್ಷೆಗಾಗಿ ರವಾನಿಸಲಾಗಿದೆ. ಕೆಎಂಸಿ ಲ್ಯಾಬ್‍ನ ವರದಿಗಾಗಿ ಆರೋಗ್ಯಾಧಿಕಾರಿಗಳು ಕಾಯುತ್ತಿದ್ದಾರೆ.

  • ಜ್ವರದಿಂದ ಬಳಲಿ ಫ್ಲೈಓವರ್ ಮೇಲೆ ಬಿದ್ದಿರುವ ವ್ಯಕ್ತಿ- ಪೊಲೀಸ್ರು ಕಾಲ್ ಮಾಡಿದ್ರೂ ಬರ್ತಿಲ್ಲ ಅಂಬುಲೆನ್ಸ್

    ಜ್ವರದಿಂದ ಬಳಲಿ ಫ್ಲೈಓವರ್ ಮೇಲೆ ಬಿದ್ದಿರುವ ವ್ಯಕ್ತಿ- ಪೊಲೀಸ್ರು ಕಾಲ್ ಮಾಡಿದ್ರೂ ಬರ್ತಿಲ್ಲ ಅಂಬುಲೆನ್ಸ್

    ಬೆಂಗಳೂರು: ತೀವ್ರ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಫ್ಲೈಓವರ್ ಮೇಲೆ ಬಿದ್ದಿದ್ದು, ಪೊಲೀಸರು ಕಾಲ್ ಮಾಡಿದರೂ ಅಂಬುಲೆನ್ಸ್ ಬರದಿರುವ ಪ್ರಸಂಗವೊಂದು ನಡೆದಿದೆ.

    ವ್ಯಕ್ತಿ ಜ್ವರದಿಂದ ಬಳಲಿ ತುಮಕೂರು ರಸ್ತೆ ಫ್ಲೇಓವರ್ ಮೇಲೆ ಕುಸಿದು ಬಿದ್ದಿದ್ದಾರೆ. ವ್ಯಕ್ತಿಗೆ ಜ್ವರ ಇರುವುದರಿಂದ ಯಾರೊಬ್ಬರೂ ಹತ್ತಿರ ಕೂಡ ಸುಳಿದಿಲ್ಲ. ಇತ್ತ ಕಳೆದ ಮೂರು ಗಂಟೆಯಿಂದ ಅಂಬುಲೆನ್ಸ್ ಗೆ ಎಷ್ಟೇ ಕಾಲ್ ಮಾಡಿದರೂ ಪ್ರಯೋಜನವಾಗುತ್ತಿಲ್ಲ.

    ಪ್ಲೇ ಓವರ್ ಮೇಲೆ ಬಿದ್ದಿರುವ ವ್ಯಕ್ತಿ ರಕ್ಷಣೆಗೆ ಪೀಣ್ಯಾ ಪೊಲೀಸರು ಹರಸಾಹಸ ಪಡುತ್ತಿದ್ದು, ಪೊಲೀಸರು ಕಾಲ್ ಮಾಡಿದರೂ ಅಂಬುಲೆನ್ಸ್ ಬರುತ್ತಿಲ್ಲ. ಹೀಗಾಗಿ ಬೆಂಗಳೂರಂತ ಸಿಟಿಯಲ್ಲಿ ಒಂದು ಆಂಬ್ಯೂಲೆನ್ಸ್ ಬರಲು ಗಂಟೆಗಳು ಬೇಕಾ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಮುಂಜಾನೆಯಿಂದ ಇಲ್ಲಿಯವರೆಗೂ ವ್ಯಕ್ತಿ ರಸ್ತೆಯಲ್ಲಿಯೇ ಬಿದ್ದಿದ್ದಾರೆ. ಯಾರೊಬ್ಬರು ವ್ಯಕ್ತಿಯ ರಕ್ಷಣೆಗೆ ಮುಂದಾಗುತ್ತಿಲ್ಲ. ಹೀಗಾಗಿ ಬಿದ್ದಿರುವ ವ್ಯಕ್ತಿಗೆ ಹೊಯ್ಸಳ ವಾಹನವನ್ನೇ ಅಡ್ಡಲಾಗಿ ನಿಲ್ಲಿಸಿ ಕಾವಲು ಕಾಯಲಾಗಿದೆ.

  • ಸೋಂಕು ಜೊತೆ ಬೆಂಗ್ಳೂರಿನಲ್ಲಿ ಮರಣದ ಸಂಖ್ಯೆಯೂ ಹೆಚ್ಚಳ – ಇಂದು 8 ಸಾವು, 51ಕ್ಕೆ ಏರಿಕೆ

    ಸೋಂಕು ಜೊತೆ ಬೆಂಗ್ಳೂರಿನಲ್ಲಿ ಮರಣದ ಸಂಖ್ಯೆಯೂ ಹೆಚ್ಚಳ – ಇಂದು 8 ಸಾವು, 51ಕ್ಕೆ ಏರಿಕೆ

    – ರಾಜ್ಯದಲ್ಲಿ 12 ಮಂದಿ ಬಲಿ
    – 12 ದಿನದ ಬಳಿಕ ಸಾವಿನ ವರದಿ

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಒಂದು ಕಡೆ ಸೋಂಕು ಹೆಚ್ಚಳವಾಗುತ್ತಿದ್ದರೆ ಇನ್ನೊಂದು ಕಡೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಗುರುವಾರ ಒಂದೇ ದಿನ ರಾಜ್ಯದಲ್ಲಿ 12 ಸಾವಿನ ಪ್ರಕರಣ ವರದಿಯಾಗಿದ್ದು ಈ ಪೈಕಿ 8 ಮಂದಿ ಬೆಂಗಳೂರಿನವರೇ ಆಗಿದ್ದಾರೆ. ಒಟ್ಟು ರಾಜ್ಯದಲ್ಲಿ 114 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಬೆಂಗಳೂರಿನಲ್ಲಿ ಇಲ್ಲಿಯವರೆಗೆ 844 ಮಂದಿಗೆ ಸೋಂಕು ಬಂದಿದ್ದು, 51 ಮಂದಿ ಮೃತಪಟ್ಟಿದ್ದಾರೆ. ಇಂದು 14 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು408 ಸಕ್ರಿಯ ಪ್ರಕರಣಗಳಿದ್ದು, 384 ಮಂದಿ ಬೆಂಗಳೂರಿನಲ್ಲಿ ಬಿಡುಗಡೆಯಾಗಿದ್ದಾರೆ. ಇಂದು ಬಿಡುಗಡೆಯಾದ ವರದಿಯಲ್ಲಿ ಜೂನ್‌ 6ಕ್ಕೆ ಮೃತಪಟ್ಟ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಲಾಗಿದೆ.

    ಮೃತರ ವಿವರ:
    1. ಬಿಹಾರ್‌ನಿಂದ ಮರಳಿದ ಹಿನ್ನೆಲೆ ಹೊಂದಿದ್ದ 57 ವರ್ಷದ ರೋಗಿ ಜೂನ್‌ 3 ರಂದು ಆಸ್ಪತ್ರೆಗೆ ದಾಖಲಾಗಿದ್ದು ಜೂನ್‌ 6 ರಂದು ಮೃತಪಟ್ಟಿದ್ದಾರೆ.

    2. ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದ 58 ವರ್ಷದ ಬೆಂಗಳೂರಿನ ವ್ಯಕ್ತಿ ಬಳ್ಳಾರಿಗೆ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದು, ಜೂನ್‌ 6 ರಂದು ಆಸ್ಪತ್ರೆಗೆ ದಾಖಲಾಗಿ ಜೂನ್‌ 13 ರಂದು ಸಾವನ್ನಪ್ಪಿದ್ದಾರೆ.

    3. ವಿಷಮಶೀತ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ 39 ವರ್ಷದ ಬೆಂಗಳೂರಿನ ವ್ಯಕ್ತಿ ಜೂನ್‌ 6 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜೂನ್‌ 14 ರಂದು ಮರಣ ಹೊಂದಿದ್ದಾರೆ.

    4. 40 ವರ್ಷದ ಬೆಂಗಳೂರಿನ ಮಹಿಳೆ ಜೂನ್‌ 8 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ಮೃತಪಟ್ಟಿದ್ದಾರೆ.

    5. 68 ವರ್ಷದ ವ್ಯಕ್ತಿ ಉಸಿರಾಟದ ಸಮಸ್ಯೆ ಮತ್ತು ಜ್ವರದಿಂದ ಬಳಲುತ್ತಿದ್ದರು. ಜೂನ್‌ 11 ರಂದು ಆಸ್ಪತ್ರೆಗೆ ಅಡ್ಮಿಟ್‌ ಆಗಿದ್ದ ಇವರು ಜೂನ್‌ 13 ರಂದು ಸಾವನ್ನಪ್ಪಿದ್ದಾರೆ.

    6. ಉಸಿರಾಟ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ 50 ವರ್ಷದ ಕೊಪ್ಪಳ ಜಿಲ್ಲೆಯ ಮಹಿಳೆ ಜೂನ್‌ 13 ರಂದು ಆಸ್ಪತ್ರೆಗೆ ದಾಖಲಾಗಿ ಜೂನ್‌ 17 ರಂದು ಮೃತಪಟ್ಟಿದ್ದಾರೆ.

    7. ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದ ಬೆಂಗಳೂರಿನ ವ್ಯಕ್ತಿ ಜೂನ್‌ 14 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜೂನ್‌ 15ರಂದು ಮೃತಪಟ್ಟಿದ್ದಾರೆ.

    8. ಬೆಂಗಳೂರಿನ 65 ವರ್ಷದ ಮಹಿಳೆಗೆ ಜ್ವರ ಮತ್ತು ರಕ್ತದೊತ್ತಡ ಇತ್ತು. ಜೂನ್‌ 13 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಜೂನ್‌ 17 ರಂದು ಮರಣ ಹೊಂದಿದ್ದಾರೆ.

    9. ವಿಷಮಶೀತ ಜ್ವರದಿಂದ ಬಳಲುತ್ತಿದ್ದ 31 ವರ್ಷದ ಬೆಂಗಳೂರಿನ ವ್ಯಕ್ತಿ ಜೂನ್‌ 13 ರಂದು ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ದು, ಜೂನ್‌ 18 ರಂದು ಮೃತಪಟ್ಟಿದ್ದಾರೆ.

    10. ಬೀದರ್‌ ಕಂಟೈನ್‌ಮೆಂಟ್‌ ಜೋನ್‌ನ 55 ವರ್ಷದ ವ್ಯಕ್ತಿಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜೂನ್‌ 8 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಜೂನ್‌ 17 ರಂದು ನಿಧನರಾಗಿದ್ದಾರೆ.

    11. ಉಸಿರಾಟದ ತೊಂದರೆ, ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದ 66 ವರ್ಷದ ವಿಜಯಪುರದ ಜಿಲ್ಲೆಯ ಮಹಿಳೆ ಜೂನ್‌ 15 ರಂದು ದಾಖಲಾಗಿದ್ದು, ಜೂನ್‌ 17 ರಂದು ಮೃತಪಟ್ಟಿದ್ದಾರೆ.

    12. ಜ್ವರ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರಗಿಯ 50 ವರ್ಷದ ವ್ಯಕ್ತಿ ಜೂನ್‌ 13 ರಂದು ದಾಖಲಾಗಿ ಜೂನ್‌ 15 ರಂದು ಮೃತಪಟ್ಟಿದ್ದಾರೆ.

    ಐಸಿಯುನಲ್ಲಿ ಒಟ್ಟು 73 ಮಂದಿ ಇದ್ದು ಬೆಂಗಳೂರು ನಗರದಲ್ಲೇ 33 ಮಂದಿ ಇದ್ದಾರೆ. ಕಲಬರುಗಿ 12, ಬೀದರ್‌ 5, ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ತಲಾ 4, ಧಾರವಾಡ, ದಾವಣಗೆರೆ, ಉಡುಪಿ ಯಲ್ಲಿ ತಲಾ 3, ವಿಜಯಪುರ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 2, ಹಾಸನ ಮತ್ತು ಗದಗ್‌ನಲ್ಲಿ ತಲಾ ಒಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.