Tag: ಜ್ವರ

  • ತೆಲುಗು ನಟ ಶ್ರೀವಿಷ್ಣು ಆರೋಗ್ಯ ಗಂಭೀರ : ಐಸಿಯುನಲ್ಲಿ ಚಿಕಿತ್ಸೆ

    ತೆಲುಗು ನಟ ಶ್ರೀವಿಷ್ಣು ಆರೋಗ್ಯ ಗಂಭೀರ : ಐಸಿಯುನಲ್ಲಿ ಚಿಕಿತ್ಸೆ

    ತೆಲುಗಿನ ಹೆಸರಾಂತ ಯುವ ನಟ ಶ್ರೀವಿಷ್ಣು ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಿತಿ ಗಂಭೀರವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ದಿನಗಳಿಂದ ಅವರು ಜ್ವರದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಸಾಮಾನ್ಯ ಜ್ವರ ಎಂದು ನೆಗ್ಲೆಟ್ ಮಾಡಿದ್ದರಿಂದ ಅವರು ಗಂಭೀರ ಸ್ಥಿತಿಗೆ ತಲುಪಿದ್ದಾರಂತೆ. ಸಾಮಾನ್ಯ ಜ್ವರದಿಂದ ಈಗವರಿಗೆ ಡೆಂಗ್ಯು ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಸಾಮಾನ್ಯ ಜ್ವರವೆಂದು ನಿರ್ಲಕ್ಷ್ಯ ಮಾಡಿದ್ದ ಶ್ರೀವಿಷ್ಣು ಜ್ವರ ಕಡಿಮೆ ಆಗದೇ ಇರುವ ಕಾರಣಕ್ಕಾಗಿ ನೆನ್ನೆಯಷ್ಟೇ ರಕ್ತಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಡೆಂಗ್ಯು ಖಾತ್ರಿಯಾಗಿದೆ. ಅವರಿಗೆ ಪ್ಲೇಟ್ ಲೇಟ್ಸ್ ಸಂಖ್ಯೆ ತುಂಬಾ ಕಡಿಮೆ ಆಗಿದ್ದು, ಆರೋಗ್ಯ ಸ್ಥಿತಿ ಸುಧಾರಿಸಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪ್ರಾಣಕ್ಕೆ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದು ಆರೋಗ್ಯ ಸ್ಥಿತಿ ಮಾತ್ರ ಗಂಭೀರವಾಗಿದೆ ಎಂದು ತಿಳಿಸಿದ್ದಾರಂತೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ವಸಂತ ರಾಯಲು, ಅರ್ಜುನ ಪಾಲ್ಗುಣ, ರಾಜರಾಜ ಚೋರ, ಮೆಂಟ್ ಮದಿಲೋ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಶ್ರೀವಿಷ್ಣು, ಈಗಷ್ಟೇ ಅಲ್ಲೂರಿ ಸಿನಿಮಾದಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಈ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ತೆಲುಗು ಸಿನಿಮಾ ರಂಗದಲ್ಲು ಭರವಸೆಯ ಕಲಾವಿದ ಎಂದೇ ಖ್ಯಾತರಾಗಿರುವ ಇವರು, ಅಲ್ಲೂರಿ ಸಿನಿಮಾ ರಿಲೀಸ್ ಹೊತ್ತಿಗೆ ಆರೋಗ್ಯವನ್ನು ಹದಗೆಡಿಸಿಕೊಂಡಿದ್ದಾರೆ.

     

    Live Tv
    [brid partner=56869869 player=32851 video=960834 autoplay=true]

  • ಜ್ವರ, ತಾಳಲಾರದ ಹೊಟ್ಟೆ ನೋವು ಸಮಸ್ಯೆ – ಕರುಳಕುಡಿ ಕೊಂದು ತಾಯಿಯೂ ಸೂಸೈಡ್

    ಜ್ವರ, ತಾಳಲಾರದ ಹೊಟ್ಟೆ ನೋವು ಸಮಸ್ಯೆ – ಕರುಳಕುಡಿ ಕೊಂದು ತಾಯಿಯೂ ಸೂಸೈಡ್

    ಬೆಂಗಳೂರು: ಜ್ವರ ಹಾಗೂ ಹೊಟ್ಟೆ ನೋವು ತಾಳಲಾರದೆ ತಾಯಿಯೊಬ್ಬಳು ತನ್ನ ಮಗುವನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಈ ಘಟನೆ ಆರ್ ಆರ್ ನಗರದ ಮಂತ್ರಿ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ಮೃತರನ್ನು ದೀಪಾ (31) ಮತ್ತು ಈಕೆಯ ಪುತ್ರಿ ರೀಯಾ(3) ಎಂದು ಗುರುತಿಸಲಾಗಿದೆ. ಚಿಕಿತ್ಸೆ ಪಡೆದರೂ ಅನಾರೋಗ್ಯ ಕಮ್ಮಿಯಾಗಿರಲಿಲ್ಲ. ಹೀಗಾಗಿ ಜಿಗುಪ್ಸೆಗೊಳಗಾಗಿದ್ದ ದೀಪ ರಾತ್ರಿ ಮಲಗಿದ್ದ ವೇಳೆ ಮಗುವಿನ ಕುತ್ತಿಗೆಗೆ ವೇಲ್ ಬಿಗಿದು ನೇಣು ಹಾಕಿದ್ದಾರೆ. ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬ್ರಹ್ಮವರ ಮೂಲದ ದೀಪ ಹಾಗೂ ಅವರು ಸಾಫ್ಟ್ ವೇರ್ ಎಂಜಿನಿಯರ್ ಆಗಿರೋ ಆದರ್ಶ್ ಅವರನ್ನು 2017 ರಲ್ಲಿ ವರಿಸಿದ್ದರು. ಮದ್ವೆಯಾದಗಿನಿಂದಲೂ ಮಂತ್ರಿ ಅಪಾಟ್ರ್ಮೆಂಟ್ ನಲ್ಲಿ ದಂಪತಿ ವಾಸವಾಗಿದ್ದಾರೆ. ಇದನ್ನೂ ಓದಿ: ಸುಳ್ಳಾದ ಆತ್ಮಹತ್ಯೆ ನಾಟಕ – ಪತಿಗೆ ಮೂಹೂರ್ತ ಇಟ್ಟಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಮಗುವನ್ನು ಕೊಂದು ದೀಪ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ “Nobody is responsible for it i just felt life is full of shits i am sorry mom and divya Love you shona” ಎಂದು ಉಲ್ಲೇಖಿಸಿದ್ದಾರೆ.

    Live Tv

  • ನಿಗೂಢ ಜ್ವರಕ್ಕೆ ಕಾನಕಟ್ಟೆ ಗ್ರಾಮಸ್ಥರು ಹೈರಾಣು- 250ಕ್ಕೂ ಹೆಚ್ಚು ಜನರಲ್ಲಿ ಕಾಡ್ತಿದೆ ಜ್ವರ

    ನಿಗೂಢ ಜ್ವರಕ್ಕೆ ಕಾನಕಟ್ಟೆ ಗ್ರಾಮಸ್ಥರು ಹೈರಾಣು- 250ಕ್ಕೂ ಹೆಚ್ಚು ಜನರಲ್ಲಿ ಕಾಡ್ತಿದೆ ಜ್ವರ

    ದಾವಣಗೆರೆ: ಕಳೆದ 20 ದಿನಗಳಿಂದ ನಿಗೂಢ ಜ್ವರದಿಂದ ಶೇ. 70ರಷ್ಟು ಮಂದಿ ಜ್ವರದಿಂದ ಬಳಲುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗ್ರಾಪಂ ವ್ಯಾಪ್ತಿಯ ಕಾನನಕಟ್ಟೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಜಗಳೂರು ತಾಲೂಕಿನ ಅಣಬೂರು ಗ್ರಾಪಂ ವ್ಯಾಪ್ತಿಯ ಕಾನನಕಟ್ಟೆ ಗ್ರಾಮದಲ್ಲಿ ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಗ್ರಾಮದ ಪ್ರತಿಯೊಂದು ಮನೆಯಲ್ಲೂ ಜನ ನಿಗೂಢ ಜ್ವರದಿಂದ ಬಳಲುತ್ತಿದ್ದಾರೆ. ಜ್ವರ, ಕಾಲುನೋವು, ಮೂಗಿನ ಹತ್ತಿರ ಕಪ್ಪು ಕಲೆ, ಕೈಕಾಲು ಬಾವು ಬರುವುದು, ಚರ್ಮದ ಪೊರೆ ಸುಲಿಯುವುದು, ಗುಳ್ಳೆಗಳು, ಸುಸ್ತು ಸೇರಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿಲ್ಲ.

    ಸೊಳ್ಳೆ ಕಾಟ ಹಾಗೂ ಗ್ರಾಮಕ್ಕೆ ಸರಬರಾಜು ಆಗುತ್ತಿರುವ ನೀರು ಸೇವನೆಯಿಂದ ಈ ರೀತಿ ಆಗಿರುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಾನನಕಟ್ಟೆ ಗ್ರಾಮಕ್ಕೆ ವೈದ್ಯರು ತೆರಳಿ ಜ್ವರದಿಂದ ಬಳಲುತ್ತಿರುವವರ ಪರೀಕ್ಷೆ ನಡೆಸಿದ್ದಾರೆ. ಇದನ್ನೂ ಓದಿ: ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ನ್ಯೂ ರೂಲ್ಸ್

    ನಿತ್ಯ ದಾವಣಗೆರೆ, ಜಗಳೂರು ಆಸ್ಪತ್ರೆಗೆ ಅಲೆದಾಡುತ್ತಿರುವ ಬಡವರ್ಗದ ಜನರು, ಕಳೆದ ಒಂದು ತಿಂಗಳುಗಳಿಂದ ಈ ನಿಗೂಢ ಜ್ವರ ಸಾಕಷ್ಟು ಜನರನ್ನು ಹೈರಾಣಾಗಿಸಿದೆ. ಇದರಿಂದ ಕಾನನಕಟ್ಟೆ ಗ್ರಾಮಸ್ಥರು ನಿತ್ಯ ಜಗಳೂರು, ದಾವಣಗೆರೆ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ. ಮೈ, ಕೈ, ಕೀಲುನೋವು ಜೊತೆಗೆ ವಿಪರೀತ ಜ್ವರದಿಂದ ಬಳಲುತ್ತಿರುವ ಜನಕ್ಕೆ ಆರೋಗ್ಯ ಇಲಾಖೆ ಆಸರೆಯಾಗಬೇಕಾಗಿದೆ. ಇನ್ನೂ ಗ್ರಾಮದಲ್ಲಿ ವೈದ್ಯರ ಕ್ಯಾಂಪ್ ಹಾಕಿ ಸೂಕ್ತ ಚಿಕಿತ್ಸೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೂಲಿ ಕೆಲಸ ಮಾಡಿ ಕೋಟಿ-ಕೋಟಿ ಸಂಪಾದನೆ ಮಾಡ್ತಿದ್ದ ಕೋಟ್ಯಧಿಪತಿ ಜೈಲುಪಾಲು

    Live Tv

  • ಒಂದೇ ದಿನ 1.74 ಲಕ್ಷ ಮಂದಿಗೆ ಜ್ವರ- ಉತ್ತರ ಕೊರಿಯಾದಲ್ಲಿ 21 ಸಾವು

    ಒಂದೇ ದಿನ 1.74 ಲಕ್ಷ ಮಂದಿಗೆ ಜ್ವರ- ಉತ್ತರ ಕೊರಿಯಾದಲ್ಲಿ 21 ಸಾವು

    ಪೋನ್ಗ್ ಯಾಂಗ್: ಕೊರೊನಾ ವೈರಸ್ ಮೊದಲ ಪ್ರಕರಣ ಕಾಣಿಸಿಕೊಂಡ ಬೆನ್ನಲ್ಲೇ ಉತ್ತರ ಕೊರಿಯಾದಲ್ಲಿ 1 ಲಕ್ಷದ 74 ಸಾವಿರದ 440 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಅಲ್ಲದೆ ಒಂದೇ ದಿನ 27 ಮಂದಿ ಮೃತಪಟ್ಟಿದ್ದಾರೆ.

    ಆದರೆ ಮೃತಪಟ್ಟಿರುವ 27 ಮಂದಿ ಕೊರೊನಾದಿಂದಲೇ ಮೃತಪಟ್ಟಿದ್ದಾರೆಯಾ ಎಂಬುದು ದೃಢವಾಗಿಲ್ಲ. ಮೇ ತಿಂಗಳಲ್ಲಿ ಇದುವರೆಗೆ 5,24,440 ಮಂದಿಗೆ ಜ್ವರ ಬಂದಿದೆ. ಇದರಲ್ಲಿ 2,43,630 ಮಂದಿ ಚೇತರಿಸಿಕೊಂಡಿದ್ದಾರೆ. ಇದು ಕೂಡ ಕೊರೊನಾದಿಂದ ಜ್ವರ ಬಂದಿದೆಯಾ ಇಲ್ಲವೋ ಎಂಬುದು ಖಚಿತವಾಗಿಲ್ಲ.

    ಇದೇ ತಿಂಗಳ 13 ರಂದು ದೇಶದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ಅಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ಪತ್ತೆ- ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಣೆ

    ಈ ಸಂಬಂಧ ಅಲ್ಲಿನ ತಜ್ಞರು, ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ದೇಶದ 2.5 ಕೋಟಿ ಜನರು ಲಸಿಕೆ ಪಡೆಯದೇ ಇರುವ ಕಾರಣ ಕೋವಿಡ್ ಪ್ರಕರಣ ಎದುರಿಸಲು ಕಷ್ಟವಾಗಬಹುದು ಎಂದು ತಿಳಿಸಿದ್ದಾರೆ.

  • ಅಸನಿ ಎಫೆಕ್ಟ್‌ನಿಂದ ಬಿಟ್ಟು ಬಿಡದೆ ಮಳೆ –  ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಹೆಚ್ಚಳ ಭೀತಿ

    ಅಸನಿ ಎಫೆಕ್ಟ್‌ನಿಂದ ಬಿಟ್ಟು ಬಿಡದೆ ಮಳೆ – ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಹೆಚ್ಚಳ ಭೀತಿ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ವರುಣನ ಆರ್ಭಟ ಜೋರಿದೆ. ದಿನಕಳೆದಂತೆ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗ್ತಾ ಇದೆ ಈಗಾಗಿ ಆರೋಗ್ಯ ಇಲಾಖೆ ಮೂರು ಖಾಯಿಲೆಗಳ ಬಗ್ಗೆ ಎಚ್ಚರವಹಿಸುವಂತೆವ ಅಲರ್ಟ್ ಮಾಡ್ತಿದೆ.

    ರಾಜ್ಯದಲ್ಲಿ ಬಿರು ಬೇಸಿಗೆ ಮಧ್ಯೆ ವರುಣನ ಆರ್ಭಟ ಹೆಚ್ಚಾಗ್ತಿದೆ. ಇದರ ಮಧ್ಯೆ ಮತ್ತೊಂದು ಆತಂಕವೂ ಸೃಷ್ಟಿ ಆಗಿದೆ. ಅದೇ ಸಾಂಕ್ರಾಮಿಕ ರೋಗಗಳ ಹರಡುವ ಭೀತಿ. ಈ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಎಚ್ಚರಿವಹಿಸುವಂತೆ ಸಾರ್ವಜನಿಕರಿಗೆ ಸೂಚಿಸಿದೆ. ಮಳೆಗಾಲ ಆರಂಭ ಹಿನ್ನೆಲೆ ಪ್ರಮುಖವಾಗಿ ಡೆಂಗ್ಯೂ, ಚಿಕನ್ ಗುನ್ಯ ಮತ್ತು ಮಲೇರಿಯಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸ್ತಿದ್ದಾರೆ. ಇದನ್ನೂ ಓದಿ: ಕೊರೊನಾಗೂ ಟೊಮ್ಯಾಟೊ ಫ್ಲೂಗೂ ಸಂಬಂಧವಿಲ್ಲ, ಇದು ಈಗಾಗಲೇ ಇರುವ ಕಾಯಿಲೆ: ಸುಧಾಕರ್‌

    ಆರೋಗ್ಯ ಇಲಾಖೆ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ವಿರುದ್ಧ ಮುನ್ನೆಚ್ಚರಿಕಾ ಕ್ರಮಗಳನ್ನ ಬಿಡುಗಡೆ ಮಾಡಿದೆ. ಮನೆ ಮುಂದೆ ನೀರು ನಿಂತುಕೊಳ್ಳದಂತೆ ಸ್ವಚ್ಛತೆ ಕಾಪಾಡಬೇಕು. ನಿಂತ ನೀರು ಸೊಳ್ಳೆಗಳ ಉತ್ಪತ್ತಿ ತಾಣವಾಗದಂತೆ ಕಟ್ಟೆಚ್ಚರ ವಹಿಸಬೇಕು. ನೀರು ಸಂಗ್ರಹಿಸುವ ಡ್ರಮ್‍ಗಳನ್ನು ಮುಚ್ಚಳದಿಂದ ಮುಚ್ಚಿಡಬೇಕು. ನೀರು ಸಂಗ್ರಹ ತೊಟ್ಟಿ, ಡ್ರಮ್‍ಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಸ್ವಯಂ ರಕ್ಷಣಾ ವಿಧಾನಗಳನ್ನ ಬಳಸಿ. ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕಗಳನ್ನ ಬಳಸಬೇಕು.

    ಮಲೇರಿಯಾ ಮತ್ತು ಡೆಂಗ್ಯೂ ಕೇಸ್‍ಗಳ ಸಂಖ್ಯೆ ಹೆಚ್ಚಾಗ್ತಿದ್ದು ತಕ್ಷಣವೇ ಮುನ್ನೆಚ್ಚರಿಕಾ ಕ್ರಮ ವಹಿಸದಿದ್ದರೆ ಅಪಾಯ ಎಂದು ವೈದ್ಯರು ತಿಳಿಸಿದ್ದಾರೆ. ಒಟ್ಟಾರೆ ಮಳೆಗಾಲ ಆರಂಭದ ಹೊತ್ತಲ್ಲೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮ ವಹಿಸಲು ಆರೋಗ್ಯ ಇಲಾಖೆ ಜನರ ಜಾಗೃತಿ ಮೂಡಿಸ್ತಾ ಇದೆ. ಜನ ಇದನ್ನ ಎಷ್ಟರ ಮಟ್ಟಿಗೆ ಪಾಲನೇ ಮಾಡ್ತಾರೋ ಕಾದು ನೋಡಬೇಕಿದೆ.

  • ರಾಜ್ಯದಲ್ಲಿ ಶೀತ, ಜ್ವರ ಜಾಸ್ತಿ ಇದೆ, ಇದು ಸಾಮಾನ್ಯವಾದ ಪ್ರಕ್ರಿಯೆ: ಸುಧಾಕರ್

    ರಾಜ್ಯದಲ್ಲಿ ಶೀತ, ಜ್ವರ ಜಾಸ್ತಿ ಇದೆ, ಇದು ಸಾಮಾನ್ಯವಾದ ಪ್ರಕ್ರಿಯೆ: ಸುಧಾಕರ್

    ಬೆಂಗಳೂರು: ರಾಜ್ಯದಲ್ಲಿ ಶೀತ, ಜ್ವರ ಜಾಸ್ತಿ ಇದೆ. ಇದೊಂದು ಸಾಮಾನ್ಯವಾದ ಪ್ರಕ್ರಿಯೆ ಆಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ ನೆಗಡಿ, ಶೀತ ಹೆಚ್ಚಳ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇದು ಸೀಸನಲ್ ಫ್ಲೋ. ಡಿಸೆಂಬರ್ ನಿಂದ ಫೆಬ್ರವರಿವರೆಗೂ ಪ್ರತಿ ವರ್ಷ ಅದು ಇರುತ್ತೆ. ಸಾರಿ ಮತ್ತು ILI ಕೇಸ್ ಅವು. ಈ ಲಕ್ಷಣ ಇರೋರಿಗೆ ಆದ್ಯತೆ ಮೇಲೆ ಟೆಸ್ಟ್ ಮಾಡ್ತಿದ್ದೇವೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಾವು ಹೆಚ್ಚು ಟೆಸ್ಟ್ ಮಾಡುತ್ತಿದ್ದೇವೆ. ಬೇರೆ ರಾಜ್ಯದಲ್ಲಿ ಒಂದು ರಾಜ್ಯ ಕಡಿಮೆ 35 ಸಾವು ತೋರಿಸಿದ್ದಾರೆ. ನಮ್ಮಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಆಸ್ಪತ್ರೆಗೆ ಸೆರೋರ ಪ್ರಮಾಣವೂ ಕಡಿಮೆ ಇದೆ. ನಾವು ಮುಂಚಿತವಾಗಿ ಎಲ್ಲಾ ಕ್ರಮಗಳನ್ನ ತೆಗೆದುಕೊಳ್ತಿರೋದ್ರಿಂದ ನಮ್ಮಲ್ಲಿ ನಿಯಂತ್ರಣದಲ್ಲಿ ಇದೆ ಎಂದರು.

    ಸಿಎಂ ಸಭೆ ಕರೆದಿದ್ದಾರೆ. ಪಾಸಿಟಿವ್ ಕೇಸ್, ಆಸ್ಪತ್ರೆಗೆ ಸೇರೋರು, ಮಕ್ಕಳ ಬಗ್ಗೆ ಸಭೆ ಆಗುತ್ತೆ. ತಜ್ಞರು, ಸಚಿವರು ಸಭೆಯಲ್ಲಿ ಇರುತ್ತಾರೆ. ತಜ್ಞರ ಸಭೆ ಬಳಿಕ ನಿರ್ಧಾರ ಘೋಷಣೆ ಮಾಡ್ತೀವಿ. ವೀಕೆಂಡ್ ಕಫ್ರ್ಯೂ ಬಗ್ಗೆಯೂ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡ್ತೀವಿ. ನಾವು ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವುದು ನಮ್ಮ ಕೆಲಸ. ಹೆಚ್ಚು ಸಾವು-ನೋವು ಆಗಬಾರದು ಅನ್ನೋದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನುಡಿದರು. ಇದನ್ನೂ ಓದಿ: ದೇಶದಲ್ಲಿ ಒತ್ತಾಯದಿಂದ ಯಾರಿಗೂ Corona Vaccine ನೀಡಲ್ಲ: ಕೇಂದ್ರ ಸರ್ಕಾರ

    ಬೆಳಗಾವಿಯಲ್ಲಿ ಇಬ್ಬರು ಮಕ್ಕಳು ಚುಚ್ಚು ಮದ್ದಿನಿಂದ ಸಾವನ್ನಪ್ಪಿರುವ ಪ್ರಕರಣ ಸಂಬಂಧ ಮಾತನಾಡಿ, ಸೆಪ್ಟಿಕ್ ಶಾಕ್ ಸಿಂಡ್ರೋಮ್ ನಿಂದ ಸತ್ತಿರೋ ಬಗ್ಗೆ ವರದಿ ಆಗಿದೆ. ಆದರೂ ಮತ್ತೊಂದು ಸುತ್ತಿನ ತನಿಖೆಗೆ ಸೂಚನೆ ನೀಡಿದ್ದೇನೆ. ಎರಡು ದಿನಗಳಲ್ಲಿ ವರದಿ ಕೊಡಲು ಸೂಚನೆ ನೀಡಲಾಗಿದೆ. ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಮಾಡಲು ಸೂಚನೆ ನೀಡಲಾಗಿದೆ. ಅಲ್ಲಿನ ANM ಮತ್ತು ಫಾರ್ಮಸಿಸ್ಟ್ ರನ್ನ ತಕ್ಷಣ ಅಮಾನತು ಮಾಡಲು ಸೂಚನೆ ನೀಡಿದ್ದೇನೆ. ಈಗ ಅಮಾನತು ಆಗುತ್ತಾರೆ. ನೋಡಲ್ ಆಫೀಸ್ ರನ್ನ ತನಿಖೆಗೆ ಕಳುಹಿಸುತ್ತಿದ್ದೇನೆ. ಪ್ರೊಟೋಕಾಲ್ ಪ್ರಕಾರ ಚಿಕಿತ್ಸೆ ನೀಡಿದ್ದಾರಾ ಅಂತ ತನಿಖೆ ಮಾಡಲಾಗುತ್ತೆ. ಎರಡು ದಿನಗಳಲ್ಲಿ ವರದಿ ನೀಡಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

    ಸಿಎಂ ಸಭೆಯಲ್ಲಿ ಮತ್ತಷ್ಟು ರೂಲ್ಸ್ ಬಗ್ಗೆ ಚರ್ಚೆ ಮಾಡ್ತೀವಿ. ಸರ್ಕಾರಕ್ಕೆ ತಜ್ಞರು ವರದಿ ಕೊಟ್ಟಿದ್ದಾರೆ. ತಜ್ಞರ ವರದಿ ಬಗ್ಗೆ ಚರ್ಚೆ ಮಾಡ್ತೀವಿ. ವೀಕೆಂಡ್ ಕಫ್ರ್ಯೂ ವಿಸ್ತರಣೆ ಸೇರಿದಂತೆ ಎಲ್ಲಾ ವಿಚಾರ ಚರ್ಚೆ ಮಾಡ್ತೀವಿ. ಸಿಎಂ ಸಭೆ ಬಳಿಕ ಯಾವ ತೀರ್ಮಾನ ಅಂತ ಹೇಳ್ತೀವಿ. ತಜ್ಞರು ಕೂಡಾ ಸಭೆಯಲ್ಲಿ ಇರುತ್ತಾರೆ. ತಜ್ಞರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ. ಈಗಿರುವ ನಿಯಮ ಮುಂದುವರೆಯುತ್ತವಾ ಅನ್ನೋದರ ಬಗ್ಗೆ ಸಿಎಂ ಸಭೆಯಲ್ಲಿ ತೀರ್ಮಾನ ಮಾಡುವುದಾಗಿ ಹೇಳಿದರು.

    ಕೊರೊನಾ ಕಂಟ್ರೋಲ್ ಗೆ ಬೇಕಾದ ನಿಯಮ ಮಾಡುತ್ತೇವೆ. ಇದಕ್ಕಾಗಿ 3 ದಿನಕ್ಕೊಮ್ಮೆ ಸಿಎಂ ಸಭೆ ಮಾಡುತ್ತಿದ್ದಾರೆ. ಇದನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಸಾವಿನ ಪ್ರಮಾಣ ಕಡಿಮೆ ಮಾಡೋದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ನಾವು ಕ್ರಮ ತಗೋತೀವಿ. ನಾವು ಹೆಚ್ಚು ಟೆಸ್ಟ್ ಮಾಡ್ತಿದ್ದೇವೆ. ಅದಕ್ಕೆ ನಮ್ಮಲ್ಲಿ ಕೇಸ್ ಜಾಸ್ತಿ ಬರ್ತಿದೆ ಅಷ್ಟೆ. ಕೇಸ್ ಹೆಚ್ಚಳದ ಬಗ್ಗೆ ಸುಧಾಕರ್ ಸ್ಪಷ್ಟನೆ ನೀಡಿದರು.

  • ಜ್ವರ, ಕೆಮ್ಮು, ತಲೆನೋವು ಇದ್ದರೂ ಕೋವಿಡ್ ಟೆಸ್ಟ್ ಮಾಡಿಸಿ: ಕೇಂದ್ರ ಸೂಚನೆ

    ಜ್ವರ, ಕೆಮ್ಮು, ತಲೆನೋವು ಇದ್ದರೂ ಕೋವಿಡ್ ಟೆಸ್ಟ್ ಮಾಡಿಸಿ: ಕೇಂದ್ರ ಸೂಚನೆ

    ನವದೆಹಲಿ: ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಜನರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

    ಯಾವುದೇ ವ್ಯಕ್ತಿಯಲ್ಲಿ ಜ್ವರ, ಕೆಮ್ಮು, ತಲೆ ನೋವು , ಗಂಟಲು ನೋವು, ಉಸಿರಾಟ ಸಮಸ್ಯೆ, ಮೈಕೈ ನೋವು, ರುಚಿ ಅಥವಾ ವಾಸನೆ ಗ್ರಹಿಕೆ ಸಾಧ್ಯವಾಗದ ಲಕ್ಷಣಗಳಿದ್ದಲ್ಲಿ ಅಂಥವರನ್ನು ಶಂಕಿತ ಕೋವಿಡ್ ಸೋಂಕಿತರು ಎಂದು ಪರಿಗಣಿಸಬೇಕು. ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಲಾಗಿದೆ.

    ಅಲ್ಲದೆ ರಾಜ್ಯದ ವಿವಿಧೆಡೆ 24 ಗಂಟೆಯೂ ಕೋವಿಡ್ ಪರೀಕ್ಷಾ ಕೇಂದ್ರ ತೆರೆದಿರಬೇಕು. ವೈದ್ಯಕೀಯ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಬೇಕು. ಮನೆಯಲ್ಲೇ ಕೋವಿಡ್ ಪರೀಕ್ಷೆ ಮಾಡುವ ಕಿಟ್ ಬಳಕೆಗೆ ಪ್ರೋತ್ಸಾಹ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

    ಭಾರತದಲ್ಲಿ ಕೋವಿಡ್‍ನ 2ನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ತಳಿಯ ಸ್ಥಾನವನ್ನು ಓಮಿಕ್ರಾನ್ ಆವರಿಸಲು ಆರಂಭಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

  • ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾದ ಮನಮೋಹನ್ ಸಿಂಗ್

    ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾದ ಮನಮೋಹನ್ ಸಿಂಗ್

    ನವದೆಹಲಿ: ತೀವ್ರ ಜ್ವರದಿಂದ ಬಳಲುತ್ತಿದ್ದ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮನಮೋಹನ್ ಸಿಂಗ್ ಅವರಿಗೆ ನಿನ್ನೆಯಿಂದ ಜ್ವರ ಆರಂಭವಾಗಿದ್ದು ಮನೆಯಲ್ಲೇ ವಿಶ್ರಾಂತಿ ಪಡೆದಿದ್ದರು. ಇಂದು ಜ್ವರ ಹೆಚ್ಚಳಗೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ

    ಮನಮೋಹನ್ ಸಿಂಗ್ ಅವರು ಕೆಲ ದಿನಗಳ ಹಿಂದೆ 89ನೇ ವರ್ಷಕ್ಕೆ ಕಾಲಿಟ್ಟಿದ್ದರು. ಅದಲ್ಲದೆ ಕೊರೊನಾ 2ನೇ ಅಲೆಯಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಇದನ್ನೂ ಓದಿ: ರಾಷ್ಟ್ರಪತಿ ಭೇಟಿಯಾದ ಕಾಂಗ್ರೆಸ್ ನಿಯೋಗ

  • ಜ್ವರದಿಂದ ಬಳಲುತ್ತಿದ್ದ 14ರ ಬಾಲಕಿ ಸಾವು- ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಡೆಂಘೀ

    ಜ್ವರದಿಂದ ಬಳಲುತ್ತಿದ್ದ 14ರ ಬಾಲಕಿ ಸಾವು- ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಡೆಂಘೀ

    ದಾವಣಗೆರೆ: ಜಿಲ್ಲೆಯಲ್ಲಿ ವೈರಲ್ ಫೀವರ್ ಹಾಗೂ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ.

    ಜ್ವರದಿಂದ ಬಳಲುತ್ತಿದ್ದ 14 ವರ್ಷದ ಬಾಲಕಿ ಸುಮಯ್ಯಾ ಕೌಸರ್ ಸಾವನ್ನಪ್ಪಿದ್ದಾಳೆ. ಇದು ಡೆಂಘೀ ಶಂಕಿತ ಪ್ರಕರಣವಾಗಿದ್ದು, ಡೆಂಘೀ ಎಂದು ಖಚಿತವಾಗಿಲ್ಲ ಎಂದು ಡಿಹೆಚ್‍ಒ ನಾಗರಾಜ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಬಾಲಕಿ ಸಾವಿನ ಬಗ್ಗೆ ದಾವಣಗೆರೆ ಡಿಎಚ್‍ಒ ಡಾ.ನಾಗರಾಜ ಮಾತನಾಡಿ, ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಬಾಲಕಿ, ದಾವಣಗೆರೆ ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಕಳೆದ ದಿನ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಸಾವನ್ನಪ್ಪಿದ ಬಾಲಕಿ ಸುಮಯ್ಯಾ ಕೌಸರ್ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಮುಜಾಹಿದ್ ಅವರ ಪುತ್ರಿ ಎಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.0.57ಕ್ಕೆ ಇಳಿಕೆ- 847 ಹೊಸ ಕೊರೊನಾ ಕೇಸ್, 20 ಸಾವು

    ಜಿಲ್ಲೆಯಲ್ಲಿ ಡೆಂಘೀ ಹಾಗೂ ವೈರಲ್ ಫೀವರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಕ್ಕಳನ್ನು ಹೆಚ್ಚು ಬಾಧಿಸುತ್ತಿದೆ. ಹೀಗಾಗಿ ಪೋಷಕರಲ್ಲಿ ಆತಂಕ ಮನೆ ಮಾಡಿದೆ.

  • ನೊಣಗಳ ಹಾವಳಿಗೆ ಜನ ಸುಸ್ತೋ ಸುಸ್ತು – ನೊಣಕ್ಕಂಜಿ ಊರು ತೊರೆಯಲಾರಂಭಿಸಿದ ಸಾರ್ವಜನಿಕರು

    ನೊಣಗಳ ಹಾವಳಿಗೆ ಜನ ಸುಸ್ತೋ ಸುಸ್ತು – ನೊಣಕ್ಕಂಜಿ ಊರು ತೊರೆಯಲಾರಂಭಿಸಿದ ಸಾರ್ವಜನಿಕರು

    ಗದಗ: ತಾಲೂಕಿನ ಹರ್ತಿ ಗ್ರಾಮದ ಜನರ ಜೀವನ ದುಸ್ತರವಾಗಿದೆ. ಗ್ರಾಮೀಣ ಭಾಷೆಐಲ್ಲಿ ಹೇಳುವುದಾದರೆ, ದಂಡಿನ ಗುಂಡಿಗೆ ಹೆದರಲಿಲ್ಲಾ, ದಾಳಿಗೆ ಹೆದರಲಿಲ್ಲಾ, ಆದರೆ ನೊಣಗಳ ಹಿಂಡಿಗೆ ಹೆದರುವಂತಾಗಿದೆ.

    ಈ ಗ್ರಾಮದ ಜನ ಏನು ತಪ್ಪು ಮಾಡಿರುವರೋ ಗೊತ್ತಿಲ್ಲ. ಈ ಹಳ್ಳಿಗೆ ವೈರಿಗಳ ದಂಡೊಂದು ಲಗ್ಗೆ ಇಟ್ಟು ನಿತ್ಯ ಕಾಟ ಕೊಡುತ್ತಿವೆ. ಆ ವೈರಿಗಳ ಕಾಟಕ್ಕೆ ಇಲ್ಲಿನ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮನೆ ಒಳಗೆ, ಹೊರಗೆ ಎಲ್ಲಿ ಕೂತರು ಸಮಾಧಾನವೇ ಇಲ್ಲದಂತಾಗಿದೆ. ಊಟ, ನಿದ್ರೆ, ವಿಶ್ರಾಂತಿಗೂ ಬಿಡಲ್ಲಾ. ವೈರಿಗಳ ಆಟೋಟಪಕ್ಕೆ ಊರಿನ ಜನ ಬೇಸತ್ತು ಹೋಗಿದ್ದಾರೆ.

    ಹರ್ತಿ ಗ್ರಾಮದ ಜನರ ಪರಸ್ಥಿತಿ ನಾಲ್ಕೈದು ತಿಂಗಳು ಹೇಳ ತೀರದಾಗಿದೆ. ಕಾರಣ ಊರ ಪಕ್ಕದ ಕೋಳಿ ಫಾರ್ಮ್ ನಿಂದ ಲಗ್ಗೆ ಇಟ್ಟ ಈಗಗಳ ದಂಡುಪಾಳ್ಯ, ಈ ಜನರ ನೆಮ್ಮದಿ ಹಾಳು ಮಾಡಿದೆ. ಒಂದಡೆ ಕೊರೊನಾ ಹಾವಳಿ, ಮತ್ತೊಂದಡೆ ನೊಣಗಳ ಹಾವಳಿಯಿಂದ ಅನಾರೋಗ್ಯಕ್ಕೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದಾರೆ. ಮಾವು, ಬೇವು ಹಣ್ಣಿನ ಸೀಜನ್‍ನಲ್ಲಿ ನೊಣಗಳು ಹೆಚ್ಚು ಇರುತ್ತವೆ. ಆದರೆ ಮಳೆಗಾಲದಲ್ಲೂ ಎಲ್ಲಿ ಕುಂತರೂ ಸಮಾಧಾನ ಆಗುವುದಿಲ್ಲ. ಅಡಿಗೆ ಮಾಡಿ ಊಟ ಮಾಡಲಿಕ್ಕೂ ಆಗುತ್ತಿಲ್ಲಾ, ನೀರು ಕುಡಿಯಲು ಆಗುತ್ತಿಲ್ಲ. ಅಂಗಡಿ, ಹೋಟೆಲ್ ನವರ ಪರಸ್ಥಿತಿ ನೋಣ ಹೊಡೆಯುವುದೇ ಕಾಯಕವಾಗಿದೆ.

    ಮಕ್ಕಳು, ವೃದ್ಧರ ಪರಸ್ಥಿತಿ ಕೇಳತೀರದು. ಜಾನುವಾರುಗಳ ಮೇಲು ಜೇನು ಹುಳುವಿನಂತೆ ಕೂಡಿರುತ್ತವೆ. ಇದರಿಂದ ಗ್ರಾಮದಲ್ಲಿ ಅನೇಕರು ವಾಂತಿ, ಬೇಧಿ, ಜ್ವರ ಹೀಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಬೇಸಿಗೆಯಲ್ಲಿ ಗಾಳಿ ಬೀಸಿಕೊಂಡಂತೆ ಮಳೆಗಾಲದಲ್ಲೂ ನೊಣಗಳ ಕಾಟಕ್ಕೆ ಗಾಳಿ ಬೀಸಿಕೊಳ್ಳಬೇಕಾದ ಪರಿಸ್ಥಿತಿ ಇವರದ್ದಾಗಿದೆ. ಕೊರೊನಾ ಸಂದರ್ಭದಲ್ಲಿ ಮಕ್ಕಳನ್ನು ಕಟ್ಟಿಕೊಂಡು ವಾಸಿಸದೇ ಊರು ತೊರೆಯುವ ಸಂದರ್ಭ ಬಂದಿದೆ. ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ, ಕೋಳಿ ಫಾರ್ಮ್‍ಗಳನ್ನು ಬಂದ್ ಮಾಡಿ, ಜನರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಹಾಗೂ ತೊಂದರೆಗಳನ್ನು ತಪ್ಪಿಸಬೇಕು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಈ ಕೋಳಿ ಫಾರ್ಮ್ ಆಗಿ ನಾಲ್ಕೈದು ವರ್ಷಗಳಿಂದ ಆಗಾಗ ಇದೇ ಸಮಸ್ಯೆ ಎದುರಿಸುತ್ತಿದೆ. ಆದರೆ ಇತ್ತೀಚಿಗೆ ನೊಣಗಳ ಹಾವಳಿ ತುಂಬಾನೆ ಆಗಿದ್ದು, ನೊಣಗಳ ಕಾಟಕ್ಕೆ ಜನ ಸುಸ್ತಾಗಿದ್ದಾರೆ. ಊರಾಚೆಯ ಆಂಧ್ರ ಪ್ರದೇಶ ಮೂಲದ ಪ್ರಭಾವಿ ಗುತ್ತಿಗೆದಾರ ಸುಬ್ಬಾರೆಡ್ಡಿ ಸಂಬಂಧಿಗಳ ಈ ಕೋಳಿ ಫಾರ್ಮ್ ನಲ್ಲಿ ಸ್ವಚ್ಛತೆ, ಔಷಧ ಸಿಂಪಡಣೆ, ತ್ಯಾಜ್ಯ ವಿಲೇವಾರಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ನೊಣಗಳು ಹೆಚ್ಚಾಗಿ ಹರ್ತಿ ಜನರನ್ನು ಕಾಡತೊಡಗಿವೆ. ಸತ್ತ ಕೋಳಿಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ ಎಂಬ ಆರೋಪಿಸಿದ್ದಾರೆ.

    ಇತ್ತೀಚಿಗೆ ಅತೀ ಹೆಚ್ಚು ನೊಣಗಳು ಉದ್ಭವಿಸಿ ಜನರ ನಿದ್ದೆಗೆಡಿಸಿದೆ. ಪಿಡಿಓ, ಅಧ್ಯಕ್ಷರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಎಲ್ಲರಿಗೂ ಹೇಳಿದರೂ ನೊಣಗಳು ಕಡಿಮೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದು ಪ್ರಭಾವಿಯೊಬ್ಬರ ಫಾರ್ಮ್ ಆಗಿದ್ದರಿಂದ ಯಾರು ಇವರ ಗೋಜಿಗೆ ಹೊಗುತ್ತಿಲ್ಲ. ಗ್ರಾಮ ಪಂಚಾಯತ ನಿಂದ ಕೋಳಿ ಫಾರ್ಮ್‍ಗೆ ಕೇವಲ ಸೂಚನೆ ನೀಡ್ತಾರೆ, ಆದ್ರೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಜನ್ರಿಗೆ ಮಾರಕವಾಗುವ ಈ ಕೋಳಿ ಫಾರ್ಮ್‍ಗಳನ್ನ ಬಂದ್ ಮಾಡಬೇಕು. ಕೊರೊನಾ ಸಂದರ್ಭದಲ್ಲಿ ಜನ-ಜಾನುವಾರಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ ಎಂಬುದು ಎಲ್ಲರ ಬೇಡಿಕೆಯಾಗಿದೆ. ಇದನ್ನೂ ಓದಿ: ಸಿಎಂ ಖುರ್ಚಿಗಾಗಿ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಈಗಲೇ ಕುಸ್ತಿ ಶುರುವಾಗಿದೆ: ಕಾರಜೋಳ