Tag: ಜ್ವರ

  • ಆರೋಗ್ಯದಲ್ಲಿ ಏರುಪೇರು – ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

    ಆರೋಗ್ಯದಲ್ಲಿ ಏರುಪೇರು – ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

    ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ವರದಿಗಳ ಪ್ರಕಾರ ಜ್ವರದ ಹಿನ್ನೆಲೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಅವರ ಮೇಲೆ ನಿಗಾವಹಿಸಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಈ ವರ್ಷದಲ್ಲಿ ಸೋನಿಯಾ ಗಾಂಧಿ ಅವರು 2 ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ವೈರಲ್ ಉಸಿರಾಟದ ಸೋಂಕಿನ ಚಿಕಿತ್ಸೆಗಾಗಿ ಅವರನ್ನು ಜನವರಿ 12ರಂದು ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಜನವರಿ 17ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಇದನ್ನೂ ಓದಿ: 5 ಬಾರಿ ಮರುಜನ್ಮ ಪಡೆದಿದ್ದೇನೆ, ನನ್ನ ಜೀವನದ ಬಗ್ಗೆ ಕನಿಕರದಿಂದ ನೋಡಿ: ಹೆಚ್‌ಡಿಕೆ ರಿಯಾಕ್ಷನ್

    ಮಾರ್ಚ್ 2ರಂದು ಜ್ವರದ ಕಾರಣ ಮತ್ತೆ ಇದೇ ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನೂ ಓದಿ: ಇಸ್ರೋ ಅಧ್ಯಕ್ಷರಿಗೆ ವಿಕ್ರಂ ಲ್ಯಾಂಡರ್ ಗಿಫ್ಟ್ ನೀಡಿದ ಪುಟ್ಟ ಬಾಲಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜ್ವರವೆಂದು ವೈದ್ಯರು ಕೊಟ್ಟ ಇಂಜೆಕ್ಷನ್ ಯುವಕನ ಪ್ರಾಣವನ್ನೇ ಕಸಿಯಿತಾ?

    ಜ್ವರವೆಂದು ವೈದ್ಯರು ಕೊಟ್ಟ ಇಂಜೆಕ್ಷನ್ ಯುವಕನ ಪ್ರಾಣವನ್ನೇ ಕಸಿಯಿತಾ?

    ಬೆಂಗಳೂರು: ಜ್ವರ (Fever) ಎಂದು ಆಸ್ಪತ್ರೆಗೆ ದಾಖಲಾದ ಯುವಕನ ಪ್ರಾಣವೇ ಹೋದ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಮೃತನನ್ನು ಅಮರ್ ಶೆಟ್ಟಿ (31) ಎಂದು ಗುರುತಿಸಲಾಗಿದೆ. ಉಡುಪಿ (Udupi) ಮೂಲದ ಈತ ದುಬೈನಲ್ಲಿ 7 ವರ್ಷ ಕೆಲಸ ಮಾಡಿ, ಲೈಫ್ ಸೆಟಲ್ ಮಾಡಿಕೊಳ್ಳೋದಕ್ಕೆ ಅಂತಾ ಕಳೆದ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ. ಆದರೆ ಈತನಿಗೆ ಕಳೆದ ವಾರ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಅಲ್ಲೇ ಪಕ್ಕದಲ್ಲಿದ್ದ ಮಾಗಡಿ ರಸ್ತೆಯಲ್ಲಿರುವ ಕ್ಲಿನಿಕ್‍ಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.

    ಕ್ಲಿನಿಕ್‍ನ ವೈದ್ಯ ತಪಾಸಣೆ ನಡೆಸಿ ಜ್ವರಕ್ಕೆ ಇಂಜೆಕ್ಷನ್ ಕೊಟ್ಟಿದ್ದಾರೆ. ಆದರೆ ಅಮರ್‍ಗೆ ಇಂಜೆಕ್ಷನ್ ಕೊಟ್ಟ ಭಾಗದಲ್ಲಿ ನೋವು, ಊತ ಕಾಣಿಸಿಕೊಂಡಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅಂತ ಕಿಮ್ಸ್ ಆಸ್ಪತ್ರೆಗೆ ಯುವಕ ದಾಖಲಾಗಿದ್ದಾನೆ. ಆದರೆ ಅಷ್ಟರಲ್ಲಿ ಯುವಕನ ಬಹು ಅಂಗಾಂಗಗಳಿಗೆ ಹಾನಿ ಆಗಿದೆ. ಕಿಮ್ಸ್ ಆಸ್ಪತ್ರೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸಿದೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ- 7 ಸಾವು, 90 ಮಂದಿಗೆ ಗಾಯ

    ಯುವಕ ಅಮರ್ ಶೆಟ್ಟಿ ಸಾವಿಗೆ ಇಂಜೆಕ್ಷನ್ ಕೊಟ್ಟ ವೈದ್ಯರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಕೆಪಿ ಅಗ್ರಹಾರ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಕಿಮ್ಸ್ ಶವಗಾರದ ಮುಂದೆ ಮೃತನ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಆರೋಪಿತ ವೈದ್ಯ ನನ್ನದೇನೂ ತಪ್ಪಿಲ್ಲ, ನನ್ನ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖುಷ್ಬೂ ಆರೋಗ್ಯ ಹೇಗಿದೆ? ಅಭಿಮಾನಿಗಳ ಆತಂಕ ಅರ್ಥ ಮಾಡಿಕೊಂಡ ನಟಿ

    ಖುಷ್ಬೂ ಆರೋಗ್ಯ ಹೇಗಿದೆ? ಅಭಿಮಾನಿಗಳ ಆತಂಕ ಅರ್ಥ ಮಾಡಿಕೊಂಡ ನಟಿ

    ವಿಪರೀತ ಜ್ವರ ಹಾಗೂ ತುಂಬಾ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ನಟಿ ಖುಷ್ಬೂ (Khushboo) ಈಗ ಹೇಗಿದ್ದಾರೆ ಎನ್ನುವ ಆತಂಕ ಅವರ ಅಭಿಮಾನಿಗಳಲ್ಲಿತ್ತು. ನಿನ್ನೆಯಿಂದಲೇ ಹೈದರಾಬಾದ್ ಆಸ್ಪತ್ರೆಯ (Hospital) ಮುಂದೆ ಅಭಿಮಾನಿಗಳು ಜಮಾಯಿಸಿ, ನಟಿಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ಅಭಿಮಾನಿಗಳ ಆತಂಕವನ್ನು ಗಮನಿಸಿದ ಖುಷ್ಬೂ ತಮ್ಮ ಆರೋಗ್ಯದ ಅಪ್ ಡೇಟ್ ಕೊಟ್ಟಿದ್ದಾರೆ.

    ವಿಪರೀತ ಜ್ವರದಿಂದ ಬಳಲಿ ಹೋಗಿದ್ದೆ. ಅಸಾಧರಣ ನೋವಿತ್ತು. ನನ್ನಿಂದ ತಡೆದುಕೊಳ್ಳಲು ಆಗದೇ ಆಸ್ಪತ್ರೆಗೆ ದಾಖಲಾದೆ. ಈಗ ಜ್ವರ ಕಡಿಮೆ ಆಗಿದೆ. ಆರೋಗ್ಯ ಸುಧಾರಿಸುತ್ತಿದೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ ಖುಷ್ಬೂ.

    ಇತ್ತೀಚಿನ ದಿನಗಳಲ್ಲಿ ಖುಷ್ಬೂ ಅವರು ಜ್ವರ ಮತ್ತು ಬಾಡಿ ವೀಕ್‌ನೆಸ್‌ನಿಂದ ಬಳಲುತ್ತಿದ್ದರಂತೆ. ಈ ಬಗ್ಗೆ ಸ್ವತಃ ಸೋಷಿಯಲ್ ಮೀಡಿಯಾ ಮೂಲಕ ನಟಿ ತಿಳಿಸಿದ್ದರು. ವಿಪರೀತ ಜ್ವರ, ತುಂಬಾ ನೋವು ಮತ್ತು ದೌರ್ಬಲ್ಯ ನನನ್ನು ಕೊಲ್ಲುತ್ತಿದೆ. ಆದರೆ ನಾನು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದಯವಿಟ್ಟು ಆರೋಗ್ಯವನ್ನು ನಿರ್ಲಕ್ಷಿಸಬೇಡಿ ಎಂದು ಬರೆದುಕೊಂಡಿದ್ದಾರೆ.

    ಕನ್ನಡದ ರಣಧೀರ, ಶಾಂತಿ ಕ್ರಾಂತಿ, ಹೃದಯಗೀತೆ, ಪಾಳೇಗಾರ ಸೇರಿದಂತೆ ಪರಭಾಷೆಗಳಲ್ಲೂ ನಟಿ ಖುಷ್ಬೂ ಸುಂದರ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ- ರಾಜಕೀಯ ಎರಡು ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ.

  • ಕೊರೋನಾ ಬಳಿಕ ದೇಶದಲ್ಲಿ ಫ್ಲೂ ಭೀತಿ- ಚಿಕಿತ್ಸೆ ಹೇಗೆ? ಏನು ಮಾಡಬೇಕು? ಏನು ಮಾಡಬಾರದು?

    ಕೊರೋನಾ ಬಳಿಕ ದೇಶದಲ್ಲಿ ಫ್ಲೂ ಭೀತಿ- ಚಿಕಿತ್ಸೆ ಹೇಗೆ? ಏನು ಮಾಡಬೇಕು? ಏನು ಮಾಡಬಾರದು?

    ಬೆಂಗಳೂರು: ಕೊರೋನಾ (Corona) ಬಳಿಕ ಪ್ರಸ್ತುತ ದೇಶದಲ್ಲಿ ಫ್ಲೂ (Flu) ಭೀತಿ ಎದುರಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ದೇಶದಾದ್ಯಂತ ಹೆಚ್3ಎನ್2 (H3N2) ರೋಗವು ವ್ಯಾಪಕವಾಗಿ ಹಬ್ಬುತ್ತಿದ್ದು ಕಳೆದ ಒಂದು ವಾರದಿಂದ ಶೇ. 10-15 ರಷ್ಟು ರೋಗಿಗಳ ಸಂಖ್ಯೆ ಏರಿಕೆಯಾಗಿದೆ. ಇದರ ಚಿಕಿತ್ಸೆ ಹೇಗೆ? ಏನು ಮಾಡಬೇಕು ? ಏನು ಮಾಡಬಾರದು? ಇದರ ಮುನ್ನೆಚ್ಚರಿಕಾ ಕ್ರಮಗಳೇನು ಎಂಬುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

     

    ಚಿಕಿತ್ಸೆ ಹೇಗೆ?
    ಹೆಚ್3ಎನ್2 ಎಂಬುವುದು ಇನ್‌ಫ್ಲುಯೆಂಜಾ (Influenza) ಎ ವೈರಸ್‌ನ ಎರಡನೇ ಜೀನ್‌ಗಳಿಂದ ಸೃಷ್ಟಿಯಾದ ತಳಿಯಾಗಿದೆ. ಈ ಉಪತಳಿಯು ಮೊದಲಿಗೆ ಅಮೇರಿಕಾದಲ್ಲಿ 1968ರಲ್ಲಿ ವರದಿಯಾಗಿತ್ತು. ಪ್ರಸ್ತುತ ಭಾರತದಲ್ಲಿ ಹೆಚ್3ಎನ್2 ರೋಗ ಕಾಣಿಸಿಕೊಂಡಿದ್ದು ದೊಡ್ಡವರು ಮಾತ್ರವಲ್ಲದೆ 15 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲೂ ಈ ರೋಗ ಪತ್ತೆಯಾಗಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಮೂರು ತಿಂಗಳಿನಿಂದ ಜ್ವರ, ವಿಪರೀತ ಕೆಮ್ಮು, ವಾಕರಿಕೆ ಹಾಗೂ ಶೀತ ಹೆಚ್3ಎನ್2 ರೋಗದ ಪ್ರಮುಖ ಲಕ್ಷಣಗಳಾಗಿವೆ. ಈ ರೋಗದ ಲಕ್ಷಣಗಳು ಕಂಡುಬಂದ ವ್ಯಕ್ತಿಗೆ ರೋಗಲಕ್ಷಣದ ಚಿಕಿತ್ಸೆಯನ್ನು ಮಾತ್ರ ನೀಡಬೇಕು. ಈ ರೋಗಕ್ಕೆ ಯಾವುದೇ ಆ್ಯಂಟಿ ಬಯೋಟಿಕ್‌ನ ಅಗತ್ಯವಿಲ್ಲ. ಇದನ್ನೂ ಓದಿ: ನೀವು ವೈನ್‌ ಕುಡಿಯುತ್ತೀರಾ? ವೈನ್‌ ಸೇವಿಸಿದ್ರೆ ಈ 6 ಆರೋಗ್ಯ ಪ್ರಯೋಜನ ಗ್ಯಾರಂಟಿ

    ಏನು ಮಾಡಬಾರದು?
    ಹೆಚ್3ಎನ್2 ರೋಗಕ್ಕೆ ತುತ್ತಾಗಿರುವ ವ್ಯಕ್ತಿಯಿಂದ ಯಾವುದೇ ಕಾರಣಕ್ಕೂ ಶೇಕ್ ಹ್ಯಾಂಡ್ ಮಾಡಿಸಿಕೊಳ್ಳಬಾರದು. ಇಂತಹ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದರಿಂದ ಇತರರಿಗೆ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿಷೇಧಿಸಲಾಗಿದೆ. ಈ ರೋಗದ ಲಕ್ಷಣಗಳಿರುವವರು ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯೋಟಿಕ್‌ (Antibiotic) ಮಾತ್ರೆಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಇಂತಹ ವ್ಯಕ್ತಿಗಳ ಜೊತೆ ಕುಳಿತು ಊಟ ಮಾಡಬಾರದು. ಇದನ್ನೂ ಓದಿ: ಚಳಿಗಾಲದಲ್ಲಿ ಕೀಲುನೋವಿನಿಂದ ಮುಕ್ತಿ ಪಡೆಯಲು ಈ ಆಹಾರ ಸೇವಿಸಿ

     

    ಏನು ಮಾಡಬೇಕು?
    ಹೆಚ್3ಎನ್2 ಸೋಂಕಿನ ತಡೆಗಟ್ಟುವಿಕೆಗಾಗಿ ಜನ ಸಮೂಹದಿಂದ ಕಿಕ್ಕಿರಿದ ಸ್ಥಳಗಳಿಗೆ ಅನಗತ್ಯವಾಗಿ ಹೋಗಬಾರದು. ಮಾಸ್ಕ್ ಕಡ್ಡಾಯ ಎಂಬ ನಿಯಮವನ್ನು ತಪ್ಪದೇ ಪಾಲಿಸುವುದರಿಂದ ಈ ರೋಗವನ್ನು ತಡೆಗಟ್ಟಬಹುದು. ಈ ಸೋಂಕಿಗೆ ತ್ತುತಾದವರು ಹೆಚ್ಚು ಹೆಚ್ಚು ದ್ರವ ಆಹಾರಗಳನ್ನು ಸೇವನೆ ಮಾಡಬೇಕು. ಪದೇ ಪದೇ ಕಣ್ಣುಗಳನ್ನು ಮುಟ್ಟುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಕಣ್ಣುಗಳನ್ನು ಮುಟ್ಟಬಾರದು. ಆಗಾಗ ಕೈಗಳನ್ನು ಸೋಪು ನೀರಿನಿಂದ ತೊಳಿಯಬೇಕು. ಜ್ವರ ಮತ್ತು ಮೈಕೈ ನೋವುಗಳು ಕಾಣಿಸಿಕೊಂಡಲ್ಲಿ ಪ್ಯಾರಸಿಟಮಲ್ (Paracetamol) ಮಾತ್ರೆಗಳನ್ನು ತೆಗೆದುಕೊಳ್ಳುವುದು ಹೆಚ್ಚು ಸೂಕ್ತ. ಇದನ್ನೂ ಓದಿ: ಸಾಮಾನ್ಯ ನೆಗಡಿಗೆ ಇಲ್ಲಿದೆ ಸುಲಭ ಪರಿಹಾರಗಳು

  • ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಸಲಾರ್ ನಟ ಪ್ರಭಾಸ್ : ಶೂಟಿಂಗ್ ಕ್ಯಾನ್ಸಲ್

    ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಸಲಾರ್ ನಟ ಪ್ರಭಾಸ್ : ಶೂಟಿಂಗ್ ಕ್ಯಾನ್ಸಲ್

    ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿರುವ ಪ್ರಭಾಸ್ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಅವರ ಎಲ್ಲ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ವಿಶ್ರಾಂತಿ ತಗೆದುಕೊಳ್ಳುತ್ತಿದ್ದಾರಂತೆ. ಜ್ವರ ಕಡಿಮೆ ಆಗುತ್ತಿದ್ದು, ಆತಂಕ ಪಡಬೇಕಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ನಿಜ. ಆದರೆ, ಇದು ಜ್ವರದ ಕಾರಣಕ್ಕೋ ಅಥವಾ ಅವರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಆ ಕಾರಣಕ್ಕೋ ಎನ್ನುವುದು ಗೊತ್ತಾಗಿಲ್ಲ.

    ವಿದೇಶಿ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಳ್ಳುವ ಬಾಲಿವುಡ್ ಸಿನಿಮಾಗಳ ವಿಮರ್ಶೆಕ ಉಮೈರ್ ಸಂಧು ಬ್ರೇಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಸದ್ಯದಲ್ಲೇ ಬಾಹುಬಲಿ ಖ್ಯಾತಿಯ ಪ್ರಭಾಸ್ ಮತ್ತು ಬಾಲಿವುಡ್ ನಟಿ ಕೃತಿ ಸನೋನ್ ಮಾಲ್ಡೀವ್ಸ್‍ ನಲ್ಲಿ ನಿರ್ಶಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಎಂಗೇಜ್ ಮೆಂಟ್ ನಂತರ ಬಹುಬೇಗ ಅವರು ವೈವಾಹಿಕ ಜೀವನಕ್ಕೂ ಕಾಲಿಡಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಪತಿ, ಮೈಸೂರು ಹುಡುಗ ಆದಿಲ್ ಪೊಲೀಸ್ ವಶಕ್ಕೆ

    ಈ ಜೋಡಿ ಡೇಟಿಂಗ್ ಮಾಡುತ್ತಿದೆ ಎಂದು ಈ ಹಿಂದೆಯೇ ರಿಯಾಲಿಟಿ ಶೋ ವೊಂದರಲ್ಲಿ ವರುಣ್ ಧವನ್ ಸುಳಿವು ನೀಡಿದ್ದರು. ಇವರ ನಡುವೆ ರಿಲೇಷನ್ ಶಿಪ್ ಇದೆ ಎಂದು ನೇರವಾಗಿಯೇ ವರುಣ್ ಮಾತನಾಡಿದ್ದರು. ಆದರೆ, ಈ ವಿಷಯವನ್ನು ಕೃತಿ ತಳ್ಳಿಹಾಕಿದ್ದರು. ತಾವಿಬ್ಬರೂ ಸ್ನೇಹಿತರು ಎಂದಷ್ಟೇ ಹೇಳಿಕೆ ಕೊಟ್ಟಿದ್ದರು. ಇದೀಗ ಅವರ ನಿಶ್ಚಿತಾರ್ಥದ ವಿಷಯವನ್ನು ಬಹಿರಂಗ ಪಡಿಸಿದ್ದಾರೆ ಉಮೈರ್.

    ಪ್ರಭಾಸ್ ಮತ್ತು ಕೃತಿ ‘ಆದಿಪುರಷ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ರಾಮ-ಸೀತೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಈ ವೇಳೆಯಲ್ಲೇ ಇಬ್ಬರೂ ಆತ್ಮೀಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ಪಾರ್ಟಿಗಳಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡು ಅಚ್ಚರಿ ಕೂಡ ಮೂಡಿಸಿತ್ತು. ಈ ಎಲ್ಲದರ ಫಲಿತಾಂಶ ಎನ್ನುವಂತೆ ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅವರೇ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕಷ್ಟೇ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಝಿಕಾ ವೈರಸ್‌ಗೆ ಹೆಚ್ಚಿದ ಆತಂಕ – ಮಕ್ಕಳ ಸಣ್ಣ ಜ್ವರಕ್ಕೂ ಹೆದರುತ್ತಿದ್ದಾರೆ ಪೋಷಕರು

    ಝಿಕಾ ವೈರಸ್‌ಗೆ ಹೆಚ್ಚಿದ ಆತಂಕ – ಮಕ್ಕಳ ಸಣ್ಣ ಜ್ವರಕ್ಕೂ ಹೆದರುತ್ತಿದ್ದಾರೆ ಪೋಷಕರು

    ರಾಯಚೂರು: ರಾಜ್ಯದಲ್ಲೇ ಮೊದಲ ಪ್ರಕರಣವಾಗಿ ರಾಯಚೂರಿನಲ್ಲಿ (Raichur) ಝಿಕಾ ವೈರಸ್ (Zika Virus) ಪತ್ತೆಯಾದ ಹಿನ್ನೆಲೆ ಜಿಲ್ಲೆಯಲ್ಲಿ ಚಿಕ್ಕಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ. ಜಿಲ್ಲೆಯಲ್ಲಿ ಈಗ ಯಾವುದೇ ಮಕ್ಕಳ (Children) ಆಸ್ಪತ್ರೆಯನ್ನು ನೋಡಿದರೂ ತುಂಬಿ ತುಳುಕುತ್ತಿವೆ.

    ಝಿಕಾ ವೈರಸ್ ಆತಂಕದಲ್ಲಿ ಸಣ್ಣ ಜ್ವರಕ್ಕೂ (Fever) ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ. ಜ್ವರ ಬಂದರೂ ಡೆಂಗ್ಯೂ ಲಕ್ಷಣಗಳ ಅನುಮಾನಕ್ಕೆ ಆಸ್ಪತ್ರೆಗೆ ಬರುತ್ತಿದ್ದಾರೆ. ಚಂಡಮಾರುತದ ಪರಿಣಾಮ ವಾತಾವರಣ ಬದಲಾಗಿರುವುದರಿಂದಲೂ ಮಕ್ಕಳಲ್ಲಿ ಜ್ವರ, ನೆಗಡಿಯಂತ ಸಾಮಾನ್ಯ ರೋಗಗಳು ಹೆಚ್ಚಾಗಿವೆ.

    ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿಕ್ಯಾಂಪ್‌ನ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆಯಾದ ಬಳಿಕ ಪೋಷಕರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಮಕ್ಕಳ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕ್ಲಿನಿಕ್‌ಗಳಲ್ಲೂ ಕೂಡಾ ಮಕ್ಕಳನ್ನು ಕರೆದುಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆ. ಆರೋಗ್ಯ ಇಲಾಖೆಯ ಜಾಗೃತಿ ನಡುವೆಯೂ ಪೋಷಕರು ಆತಂಕಗೊಂಡಿದ್ದಾರೆ. ಝಿಕಾ ವೈರಸ್ ಬಗ್ಗೆ ಚಿಕ್ಕಮಕ್ಕಳ ಪೋಷಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಆದರೆ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಏಮ್ಸ್‌ಗೆ ಕನ್ನ ಹಾಕಿದ್ದು ಚೀನಾ – ಡೇಟಾ ಈಗ ಸುರಕ್ಷಿತ

    ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ಗೈಡ್‌ಲೈನ್ಸ್ ಪ್ರಕಾರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಗೈಡ್‌ಲೈನ್ಸ್ ಪ್ರಕಾರ ಅಧಿಕಾರಿಗಳ ಸಭೆ, ಸ್ಯಾಂಪಲ್ ಸಂಗ್ರಹ, ಜನ ಜಾಗೃತಿ, ಸೊಳ್ಳೆಗಳ ನಿಯಂತ್ರಣಕ್ಕೆ ಮುಂದಾಗಿದೆ. ಗರ್ಭಿಣಿಯರ ಬಗ್ಗೆ ಹೆಚ್ಚು ಜಾಗ್ರತೆ ವಹಿಸುತ್ತಿರುವ ಆರೋಗ್ಯ ಇಲಾಖೆ ಸೊಳ್ಳೆ ಪರದೆ ವಿತರಣೆ, ಫಾಗಿಂಗ್ ಮಾಡುತ್ತಿದೆ. ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ತಡೆಯಲು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಮುಂದುವರೆಸಿದೆ.

    ಒಟ್ಟಿನಲ್ಲಿ ವೈದ್ಯರು ಹಾಗೂ ಅಧಿಕಾರಿಗಳು ಝಿಕಾ ವೈರಸ್ ಅಷ್ಟೊಂದು ಅಪಾಯಕಾರಿ ಅಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಪೋಷಕರು ಮಾತ್ರ ಆತಂಕದಲ್ಲಿದ್ದಾರೆ. ಜನ ಆತಂಕ ಪಡುವ ಬದಲು ಮನೆ ಸುತ್ತಮುತ್ತಲ ವಾತಾವರಣ ಸ್ವಚ್ಚವಾಗಿಟ್ಟುಕೊಂಡು, ಸೊಳ್ಳೆಗಳ ನಿಯಂತ್ರಣ ಮಾಡಬೇಕು ಎಂದು ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಇದನ್ನೂ ಓದಿ: ಪತ್ನಿಯಿಂದ ಕಿರುಕುಳ – ಮೂರು ತಿಂಗಳ ಹಿಂದೆ ಮದ್ವೆಯಾಗಿದ್ದ ವ್ಯಕ್ತಿ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದ ಆತಂಕ

    ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದ ಆತಂಕ

    ಭಾರತೀಯ ಸಿನಿಮಾ ರಂಗದ ಹೆಸರಾಂತ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳಿಂದ ಅವರು ತೀರ್ವ ಜ್ವರದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಜ್ವರ ಕಡಿಮೆ ಆಗದ ಕಾರಣಕ್ಕಾಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

    ನೆಚ್ಚಿನ ನಟ ಕಮಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು. ಕಮಲ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಸದ್ಯ ಕಮಲ್ ಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಬಹುದು ಎನ್ನಲಾಗುತ್ತಿದೆ. ಇದೀಗ ಜ್ವರ ಕೂಡ ಕಡಿಮೆ ಆಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂಬ ಓದಿ:51ನೇ ವಯಸ್ಸಿನಲ್ಲಿ ಮೂರನೇ ಮಗುವಿನ ನಿರೀಕ್ಷೆಯಲ್ಲಿರುವ ಮನೋಜ್ ತಿವಾರಿ

    ದಣಿವರಿಯದ ಕೆಲಸವೇ ಜ್ವರಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದ ಸಿನಿಮಾ, ರಿಯಾಲಿಟಿ ಶೋ ಸೇರಿದಂತೆ ಸಾಕಷ್ಟು ಕೆಲಸಗಳಲ್ಲಿ ಕಮಲ್ ಬ್ಯುಸಿಯಾಗಿದ್ದಾರೆ. ಇಂಡಿಯನ್ 2 ಸಿನಿಮಾದ ಶೂಟಿಂಗ್ ನಲ್ಲಿ ನಿರಂತರವಾಗಿ ಕಮಲ್ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಈಗ ಕಮಲ್ ಅನಿವಾರ್ಯವಾಗಿ ರೆಸ್ಟ್ ತಗೆದುಕೊಳ್ಳಬೇಕಾಗಿದ್ದು, ಸದ್ಯ ವಿಶ್ರಾಂತಿಯಲ್ಲಿದ್ದಾರೆ ಕಮಲ್.

    Live Tv
    [brid partner=56869869 player=32851 video=960834 autoplay=true]

  • ತಪ್ಪಾದ ಇಂಜೆಕ್ಷನ್ ನೀಡಿದ್ದರಿಂದ ಮಹಿಳೆ ಸಾವು – ನರ್ಸ್‌ ವಿರುದ್ಧ ಕುಟುಂಬಸ್ಥರ ಆಕ್ರೋಶ

    ತಪ್ಪಾದ ಇಂಜೆಕ್ಷನ್ ನೀಡಿದ್ದರಿಂದ ಮಹಿಳೆ ಸಾವು – ನರ್ಸ್‌ ವಿರುದ್ಧ ಕುಟುಂಬಸ್ಥರ ಆಕ್ರೋಶ

    ತಿರುವನಂತಪುರಂ: ಜ್ವರದಿಂದ ಬಳಲುತ್ತಿದ್ದ 45 ವರ್ಷದ ಮಹಿಳೆಯೊಬ್ಬರಿಗೆ ತಪ್ಪಾದ ಚುಚ್ಚುಮದ್ದನ್ನು ನೀಡಿದ್ದರಿಂದ ಸಾವನ್ನಪ್ಪಿರುವ ಘಟನೆ ಕೇರಳದ (Kerala) ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ( Kozhikode Medical College) ನಡೆದಿದೆ.

    ಮೃತರನ್ನು ಕೋಯಿಕ್ಕೋಡ್‍ನ ಕೂಡರಂಜಿ ನಿವಾಸಿ ಸಿಂಧು ಎಂದು ಗುರುತಿಸಲಾಗಿದೆ. ನರ್ಸ್ ತಪ್ಪಾದ ಇಂಜೆಕ್ಷನ್ ನೀಡಿದ್ದರಿಂದ ಸಿಂಧು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗುರುವಾರ ತೀವ್ರ ಜ್ವರದಿಂದ ಬಳಲುತ್ತಿದ್ದ ಸಿಂಧು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ ಚೆನ್ನಾಗಿಯೇ ಇದ್ದರು, ಆದರೆ ನರ್ಸ್ ತಪ್ಪಾದ ಇಂಜೆಕ್ಷನ್ ನೀಡಿದ ಬಳಿಕ ಅವರ ಆರೋಗ್ಯ ಹದಗೆಡಲು ಪ್ರಾರಂಭವಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಮೃತ ಸಿಂಧು ಪತಿ ರಘು ಅವರು, ಇದು ನರ್ಸ್‍ನ ತಪ್ಪು, ಕೊನೆ ಕ್ಷಣದಲ್ಲಿ ನನ್ನ ಹೆಂಡತಿ ಬಹಳ ಬೆವರುತ್ತಿದ್ದಳು. ಇಂಜೆಕ್ಷನ್ ನೀಡಿದ ಬಳಿಕ ನಾನು ಆರೋಗ್ಯವಾಗಿಲ್ಲ ಎಂದು ಹೇಳುತ್ತಿದ್ದಳು. ಹೀಗಾಗಿ ನರ್ಸ್‍ಗೆ ಕರೆ ಮಾಡಿ ಕೇಳಿದಾಗ ಭಯ ಪಡುವ ಅಗತ್ಯವಿಲ್ಲ. ಅವರ ಆರೋಗ್ಯ ಸ್ಥಿರವಾಗಿಯೇ ಇದೆ ಎಂದು ಹೇಳಿದ್ದರು. ಆದರೆ ಇಂಜೆಕ್ಷನ್ ನೀಡಿದ ಬಳಿಕ ನನ್ನ ಪತ್ನಿ ಆರೋಗ್ಯ ಹದಗೆಡಲು ಆರಂಭವಾಯಿತು. ನನ್ನ ಮಡಿಲಿನಲ್ಲಿಯೇ ನನ್ನ ಪತ್ನಿ ಪ್ರಾಣಬಿಟ್ಟಿದ್ದಾಳೆ. ನಿನ್ನೆ ಬಳಸಿದ್ದ ಔಷಧವನ್ನೇ ಇಂದು ಕೂಡ ಆಸ್ಪತ್ರೆಯಲ್ಲಿ ಬಳಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಂಡೇ ಮಠದ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿ ಕೈವಾಡ!

    ಆದರೆ ಆಸ್ಪತ್ರೆ ಮಾತ್ರ ಕುಟುಂಬಸ್ಥರ ಆರೋಪವನ್ನು ನಿರಾಕರಿಸಿದ್ದು, ಮಹಿಳೆ ಅಚಾನಕ್ ಆಗಿ ಸಾವನ್ನಪ್ಪಿರವ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿದುಬಂದಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಈ ಬಗ್ಗೆ ಮೃತ ಮಹಿಳೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಘಟನೆ ಸಂಬಂಧ ಸಂಪೂರ್ಣ ತನಿಖೆ ನಡೆಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಆದೇಶಿಸಿದ್ದಾರೆ. ಇದನ್ನೂ ಓದಿ: ‘ಹೆಂಡ್ತಿ ಮಕ್ಳನ್ನು ಬಿಟ್ ಬಂದಿದ್ದೀನಿ, ಸೇಫ್ ಆಗಿ ಮನೆಗೆ ಹೋಗ್ತೀನಾ?’: ಗಂಧದ ಗುಡಿಯಲ್ಲಿ ಕಣ್ಣೀರು ತರಿಸುತ್ತೆ ಅಪ್ಪು ಡೈಲಾಗ್

    Live Tv
    [brid partner=56869869 player=32851 video=960834 autoplay=true]

  • ಮಕ್ಕಳಲ್ಲಿ ವಿಪರೀತ ಜ್ವರ – ಸೆ.25 ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೇರಿ ಸರ್ಕಾರ

    ಮಕ್ಕಳಲ್ಲಿ ವಿಪರೀತ ಜ್ವರ – ಸೆ.25 ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೇರಿ ಸರ್ಕಾರ

    ಪುದುಚೇರಿ: ಶಾಲಾ (School) ಮಕ್ಕಳಲ್ಲಿ (Childrens)  ಜ್ವರ (Fever)  ಕಾಣಿಸಿಕೊಳ್ಳುತ್ತಿರುವ ಪರಿಣಾಮ ಇಂದಿನಿಂದ ಸೆಪ್ಟೆಂಬರ್ (September) 25 ರವರೆಗೆ ಒಂದರಿಂದ 8ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪುದುಚೇರಿ (Puducherry) ಸರ್ಕಾರ ರಜೆ ಘೋಷಿಸಿದೆ.

    ಪುದುಚೇರಿ ಮತ್ತು ಕಾರೈಕಲ್ ಪ್ರದೇಶ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ವಿ.ಜಿ ಶಿವಗಾಮಿ ಸೆಪ್ಟೆಂಬರ್ 17 ರಿಂದ 25ರ ವರಗೆ ರಜೆ ಘೋಷಿಸಿ ಸುತ್ತೋಲೆ ಹೊರಡಿಸಿದ್ದಾರೆ. ಆರೋಗ್ಯ ಇಲಾಖೆಯ ಶಿಫಾರಸಿನ ಮೇರೆಗೆ ಶಾಲೆಗಳನ್ನು ಮುಚ್ಚಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕಳೆದ 10 ದಿನಗಳಲ್ಲಿ, ಮಕ್ಕಳಲ್ಲಿ ಜ್ವರ ಸಮಸ್ಯೆ ಕಾಡುತ್ತಿದೆ. ಸಣ್ಣ ಮಕ್ಕಳಲ್ಲಿ ಜ್ವರ ಪ್ರಕರಣ ಏರಿಕೆಯಾಗುತ್ತಿದ್ದು, ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಆರೋಗ್ಯ ಇಲಾಖೆಯಿಂದ ವರದಿಯಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಅವರಿಗೆ 72ರ ಸಂಭ್ರಮ – ನಮೀಬಿಯಾದಿಂದ ಭಾರತಕ್ಕೆ 8 ಚಿರತೆಗಳು

    ಸರ್ಕಾರಿ ಸ್ವಾಮ್ಯದ ರಾಜೀವ್ ಗಾಂಧಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜ್ವರ, ಕೆಮ್ಮು ಮತ್ತು ಶೀತ ಬಾಧೆಯಿಂದ ಈಗಾಗಲೇ ಸಾಕಷ್ಟು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನದಿಂದ ದಿನಕ್ಕೆ ಮಕ್ಕಳ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಶಾಲೆಗಳಿಗೆ ರಜೆ ನೀಡಲು ಮುಂದಾಗಿದೆ. ಇದನ್ನೂ ಓದಿ: ಮಹಾಗಣಪತಿ ವಿಸರ್ಜನೆ – ಶಾಲಾ-ಕಾಲೇಜ್‍ಗಳಿಗೆ ರಜೆ, 4 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ

    Live Tv
    [brid partner=56869869 player=32851 video=960834 autoplay=true]

  • ಜ್ವರದಿಂದ ಬಳಲುತ್ತಿದ್ರೂ ಮೌನ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಭಾಗಿ

    ಜ್ವರದಿಂದ ಬಳಲುತ್ತಿದ್ರೂ ಮೌನ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಭಾಗಿ

    ಬೆಂಗಳೂರು: ಜ್ವರದಿಂದ ಬಳಲುತ್ತಿದ್ದರೂ ಮೌನ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ.

    ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಸಿಎಂ ಅವರು ಕುಟುಂಬದ ವೈದ್ಯರಿಂದ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ವೇಳೆ ವೈದ್ಯರು, ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಜ್ವರದಿಂದ ಬಳಲುತ್ತಿದ್ದರೂ ಮೌನ ಪ್ರತಿಭಟನೆಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್ ಸದ್ದಿಗೆ ಗಾಬರಿಯಿಂದ ಜನರ ಮೇಲೆ ಓಡಿದ ಕುದುರೆ – 6 ಮಂದಿಗೆ ಗಾಯ

    ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಸೋನಿಯಾ ಗಾಂಧಿಯವರ ವಿಚಾರಣೆ ನಡೆಯುತ್ತಿದೆ. ಅವರನ್ನು ವಾಪಸ್ ಕಳಿಸೋವರೆಗೂ ಪ್ರತಿಭಟನೆ ಮಾಡುತ್ತೇವೆ. ಪ್ರತಿಭಟನೆಗೆ ಎಲ್ಲ ನಾಯಕರನ್ನೂ ಬರುವುದಕ್ಕೆ ಹೇಳಿದ್ದೇವೆ. ಮೌನವಾಗಿ ಪ್ರತಿಭಟನೆ ಮಾಡ್ತೀವಿ. ದೆಹಲಿಯಲ್ಲೂ ಪ್ರತಿಭಟನೆ ಮಾಡ್ತಿದ್ದಾರೆ ಎಂದು ತಿಳಿಸಿದರು.

    ಜಮೀರ್ ಅಹಮದ್ ಗೆ ರಣದೀಪ್ ಸುರ್ಜೇವಾಲಾ ಎಚ್ಚರಿಕೆ ನೊಟೀಸ್ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾನೂ ಆ ವಿಚಾರವನ್ನು ಪೇಪರ್ ನಲ್ಲಿ ಓದಿದೆ. ನನಗೂ ಆ ಮಾಹಿತಿ ಬಂದಿದೆ. ಯಾರ್ಯಾರ ಮೇಲೆ ಏನೇನು ಕ್ರಮ ತಗೋಬೇಕೋ ಅವರು ತಗೋತಾರೆ ಅಂತ ಡಿಕೆಶಿ ಹೇಳಿದರು.

    Live Tv
    [brid partner=56869869 player=32851 video=960834 autoplay=true]