Tag: ಜ್ಯೋತಿಷ್ಯ

  • ದಿನ ಭವಿಷ್ಯ 01-07-2025

    ದಿನ ಭವಿಷ್ಯ 01-07-2025

    ರಾಹುಕಾಲ: 3:39 ರಿಂದ 5:15
    ಗುಳಿಕಕಾಲ: 12:27 ರಿಂದ 2:01
    ಯಮಗಂಡಕಾಲ: 9:15 ರಿಂದ 10:51
    ವಾರ: ಮಂಗಳವಾರ, ತಿಥಿ: ಷಷ್ಠಿ
    ನಕ್ಷತ್ರ: ಪುಬ್ಬ

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಆಷಾಡ ಮಾಸ, ಶುಕ್ಲ ಪಕ್ಷ

    ಮೇಷ: ಮಿತ್ರರಲ್ಲಿ ಕಲಹ, ಮನಸ್ಸಿನಲ್ಲಿ ಭಯಭೀತಿ, ಅಧಿಕ ಖರ್ಚು, ನೌಕರಿಯಲ್ಲಿ ಅಲ್ಪ ಲಾಭ, ಅನಾರೋಗ್ಯ.

    ವೃಷಭ: ಆರೋಗ್ಯದಲ್ಲಿ ಏರುಪೇರು, ನೆಮ್ಮದಿ ಇಲ್ಲದ ಜೀವನ, ಕಾರ್ಯ ವಿಘಾತ, ವಾಸಗೃಹದಲ್ಲಿ ತೊಂದರೆ.

    ಮಿಥುನ: ಆದಾಯಕ್ಕಿಂತ ಖರ್ಚು ಜಾಸ್ತಿ, ಕೋರ್ಟ್ ಕಚೇರಿ ಕೆಲಸದಲ್ಲಿ ವಿಘ್ನ, ಶತ್ರುತ್ವ, ಸುಳ್ಳು ಮಾತನಾಡುವಿರಿ.

    ಕಟಕ: ತಾಯಿಗೆ ತೊಂದರೆ, ವಾಹನ ರಿಪೇರಿ, ಸೇವಕರಿಂದ ತೊಂದರೆ, ಜನರಲ್ಲಿ ಕಲಹ, ದುಷ್ಟಬುದ್ಧಿ.

    ಸಿಂಹ: ಕ್ರಯ ವಿಕ್ರಯಗಳಲ್ಲಿ ಲಾಭ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಕೃಷಿಯಲ್ಲಿ ಲಾಭ, ಶತ್ರು ಭಾದೆ.

    ಕನ್ಯಾ: ದಾಯಾದಿ ಕಲಹ, ಅಪಕೀರ್ತಿ, ಅನಾರೋಗ್ಯ, ವಾಹನ ಯೋಗ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಗೌರವ ಪ್ರಾಪ್ತಿ.

    ತುಲಾ: ಋಣಭಾದೆ, ಜೋರಾಗ್ನಿ ಭೀತಿ, ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ಶತ್ರುಭಾದೆ.

    ವೃಶ್ಚಿಕ: ಆಲಸ್ಯ ಮನೋಭಾವ, ವ್ಯಾಪಾರಗಳಲ್ಲಿ ನಷ್ಟ, ಧನ ನಷ್ಟ, ಅಕಾಲ ಭೋಜನ, ಅಶಾಂತಿ, ಕಾರ್ಯ ವಿಕಲ್ಪ, ದ್ವೇಷ.

    ಧನು: ಚಂಚಲ ಮನಸ್ಸು, ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ, ಶತ್ರು ನಾಶ, ದಾನ ಧರ್ಮದಲ್ಲಿ ಆಸಕ್ತಿ.

    ಮಕರ: ಕುಟುಂಬದಲ್ಲಿ ಅಹಿತಕರ ವಾತಾವರಣ, ವ್ಯಾಜ್ಯಗಳಿಂದ ತೊಂದರೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ.

    ಕುಂಭ: ಬಂಧುಗಳಿಂದ ಸಹಾಯ, ಮನೆಯಲ್ಲಿ ಶುಭ ಸಮಾರಂಭ, ಆಕಸ್ಮಿಕ ಖರ್ಚು, ಯತ್ನ ಕಾರ್ಯಗಳಲ್ಲಿ ಜಯ.

    ಮೀನ: ನೀಚ ಜನರ ಸಹವಾಸ, ಸಜ್ಜನ ವಿರೋಧ, ಧನ ಹಾನಿ, ದ್ರವ್ಯನಾಶ, ನಿಂದನೆ, ಬೇಸರ, ಅಪವಾದ.

  • ಆ ’84 ಸೆಕೆಂಡ್‌’ ನಡುವೆಯೇ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಯಾಕೆ?

    ಆ ’84 ಸೆಕೆಂಡ್‌’ ನಡುವೆಯೇ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಯಾಕೆ?

    ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆಗೆ ಇನ್ನು 22 ದಿನವಷ್ಟೇ ಬಾಕಿ. ಆಯೋಧ್ಯೆಗೆ ಅಯೋಧ್ಯೆಯೇ ಶ್ರೀರಾಮನನ್ನು (Ayodhya Ram Mandir) ಬರ ಮಾಡಿಕೊಳ್ಳಲು ಸಜ್ಜಾಗುತ್ತಿದೆ. ರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಗೆ ಸಮಯವೂ ನಿಗದಿಯಾಗಿದೆ. 84 ಸೆಕೆಂಡ್‌ ಅವಧಿಯ ಶುಭ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾ (Prana Pratishta) ಕಾರ್ಯ ಸಂಪನ್ನಗೊಳ್ಳಲಿದೆ.

    ಜನವರಿ 22ರ ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್‌ ನಡುವಿನ 84 ಸೆಕೆಂಡ್‌ಗಳ ಅವಧಿಯನ್ನು ಪ್ರಾಣಪತ್ರಿಷ್ಠಾಪನೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ. ರಾಮಮಂದಿರದಲ್ಲಿ ರಾಮನ ಪ್ರತಿಷ್ಠಾಪನೆ ಮುಹೂರ್ತಕ್ಕೆ ಸಮಯ ಸೂಚಿಸುವಂತೆ ದೇಶಾದ್ಯಂತ ಇರುವ ವಿದ್ವಾಂಸರು ಹಾಗೂ ಪ್ರಖ್ಯಾತ ಜ್ಯೋತಿಷಿಗಳಲ್ಲಿ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ಮನವಿ ಮಾಡಿತ್ತು. ಎಲ್ಲರಿಂದ ಬಂದ ಮಾಹಿತಿಯನ್ನು ಸಮನ್ವಯಗೊಳಿಸಿ ಕೊನೆಗೆ ಮುಹೂರ್ತ ಸಮಯ ಅಂತಿಮಗೊಳಿಸಲಾಗಿದೆ.  ಇದನ್ನೂ ಓದಿ: ರಾಮ ವಿಗ್ರಹ ಇಂದು ಆಯ್ಕೆ: ಕರ್ನಾಟಕದ ಕಲಾವಿದರ ಕೈಚಳಕ ಗೆಲ್ಲುತ್ತಾ ಮನ..?

     

    ಕಾಶಿಯ ಜ್ಯೋತಿಷಿಯ ಮುಹೂರ್ತ ಆಯ್ಕೆ
    ಕಾಶಿಯ ಜ್ಯೋತಿಷಿ ಪಂಡಿತ್‌ ಗಣೇಶ್ವರ್‌ ಶಾಸ್ತ್ರಿ ದ್ರಾವಿಡ ಅವರು 84 ಸೆಕೆಂಡ್‌ ಅವಧಿಯ ಮುಹೂರ್ತವನ್ನು ಸೂಚಿಸಿದ್ದರು. ಜನವರಿ 22ರಂದು ಮಧ್ಯಾಹ್ನ 12 ಗಂಟೆ 29 ನಿಮಿಷ 08 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್‌ ನಡುವಿನ 84 ಸೆಕೆಂಡ್ ಶುಭ ಮುಹೂರ್ತ ಎಂದು ಸೂಚಿಸಿದ್ದರು. ಇದನ್ನೂ ಓದಿ: ಅಯೋಧ್ಯೆಯ ಬಾಲ ರಾಮನ ಮೂರ್ತಿಗೆ ಬಳಸಿದ್ದು ಮೈಸೂರಿನ ಕೃಷ್ಣ ಶಿಲೆ

    5 ದಿನಾಂಕಗಳು ಮುಂದಿತ್ತು!
    ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಾಮನ ಮೂರ್ತಿ ಸ್ಥಾಪನೆಗೆ ದಿನಾಂಕಗಳನ್ನು ಸೂಚಿಸಿತ್ತು. ಇದಕ್ಕೆ ಉತ್ತರವಾಗಿ ದಿನಾಂಕಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಇದರಲ್ಲಿ ಜನವರಿ ತಿಂಗಳ 17ರಿಂದ 25ನೇ ತಾರೀಕಿನ ನಡುವೆ 5 ದಿನಾಂಕಗಳು ಇದ್ದವು. ಕೊನೆಗೆ ಪಂಡಿತ್‌ ಗಣೇಶ್ವರ್‌ ಶಾಸ್ತ್ರಿ ದ್ರಾವಿಡ ಅವರು ಜನವರಿ 22ರ ದಿನಾಂಕ ಹಾಗೂ ಪುಣ್ಯ ಮುಹೂರ್ತವನ್ನು ಆಯ್ಕೆ ಮಾಡಿದರು. ಜನವರಿ 22ರ ಮುಹೂರ್ತ ದೇಶಕ್ಕೆ ಸಂಜೀವಿನಿ ಯೋಗ ತರುತ್ತದೆ ಎಂದು ಗಣೇಶ್ವರ ಶಾಸ್ತ್ರಿ ಹೇಳಿದರು.

     

  • ಗಣೇಶನ ಹಬ್ಬ ಸೆ.18ಕ್ಕಾ ಅಥವಾ 19ಕ್ಕಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    ಗಣೇಶನ ಹಬ್ಬ ಸೆ.18ಕ್ಕಾ ಅಥವಾ 19ಕ್ಕಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    ಬೆಂಗಳೂರು: ದೇಶಾದ್ಯಂತ ಗಣೇಶೋತ್ಸವ ಆಚರಣೆಗೆ (Celebration) ದಿನಗಣನೆ ಶುರುವಾಗಿದೆ. ಇದರ ಮಧ್ಯೆ ಗಣೇಶೋತ್ಸವ (Ganesh Chaturthi) ಎರಡೆರಡು ದಿನದ ಬಗ್ಗೆ ಗೊಂದಲ ಏರ್ಪಟ್ಟಿದೆ. ಕ್ಯಾಲೆಂಡರ್‌ನಲ್ಲಿ ಸೆಪ್ಟೆಂಬರ್ 18 ಅಂತಾ ಕೆಲವೆಡೆ ಇದ್ದರೆ ಇನ್ನೂ ಕೆಲವು ಕ್ಯಾಲೆಂಡರ್‌ನಲ್ಲಿ ಸೆಪ್ಟೆಂಬರ್ 19 ಅಂತಾ ಇದೆ. ಹಾಗಿದ್ದರೆ ಪಂಚಾಂಗದ ಪ್ರಕಾರ ಯಾವಾಗ ಗಣೇಶ ಹಬ್ಬ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

    ಸಾಮಾನ್ಯವಾಗಿ ಗೌರಿ ಹಬ್ಬದ ಬಳಿಕ ಗಣೇಶನ ಮೆರವಣಿಗೆ ಹಬ್ಬ ಆಚರಿಸುವುದು ರೂಢಿ. ಆದರೆ ಈ ಬಾರಿ ಗೌರಿ ಹಬ್ಬ ಮತ್ತು ಗಣೇಶನ ಹಬ್ಬ ಒಂದೇ ದಿನ ಬಂದಿದೆ. ಹೀಗಾಗಿ ಹಬ್ಬ ಸೆಪ್ಟೆಂಬರ್ 18ಕ್ಕಾ ಅಥವಾ 19ಕ್ಕಾ ಎಂಬ ಗೊಂದಲ ಇದೆ. ಕ್ಯಾಲೆಂಡರ್‌ನಲ್ಲಿಯೂ ಈ ಬಗ್ಗೆ ಗೊಂದಲ ಇದೆ. ಸೆಪ್ಟೆಂಬರ್ 18ರಂದು ತದಿಗೆ ಚತುರ್ಥಿ ಹಾಗೂ ಸೆಪ್ಟೆಂಬರ್ 19ರಂದು ಪಂಚಮಿ ಚತುರ್ಥಿ ಇದೆ. ತದಿಗೆ ಚತುರ್ಥಿಯಂದೇ ಗೌರಿ ಗಣೇಶ ಹಬ್ಬ ಆಚರಣೆಗೆ ಸೂಕ್ತ. ಒಟ್ಟಿಗೆ ಗೌರಿ ಗಣೇಶ ಪ್ರತಿಷ್ಟಾಪನೆ ಮಾಡಬಹುದು ಎಂಬುದು ಕೆಲವರ ವಾದ. ಇದನ್ನೂ ಓದಿ: ವರ್ಗಾವಣೆ ಮಾಡಿದರೂ ಜಾಗ ಖಾಲಿ ಮಾಡದ ಮುಕ್ತ ವಿವಿ ಹಣಕಾಸು ಅಧಿಕಾರಿ!

    ಜೋತಿಷ್ಯರ (Astrologer) ಪ್ರಕಾರ ಚಂದ್ರಮಾನವನ್ನು ಉತ್ತರ ಕರ್ನಾಟಕ, ಆಂಧ್ರದವರು ಚಂದ್ರಮಾನ ರೀತಿ ಆಚರಿಸುತ್ತಾರೆ. ಚಂದ್ರಮಾನ ರೀತಿ ಆಚರಣೆ ಮಾಡುವವರು ಗೌರಿ ಗಣೇಶ ಒಂದೇ ದಿನ ಆಚರಣೆ ಮಾಡುತ್ತಾರೆ. ಸೆಪ್ಟೆಂಬರ್ 18ರ ಸೋಮವಾರವೇ ಗೌರಿ, ಗಣೇಶ ಹಬ್ಬ ಆಚರಣೆ ಮಾಡುವುದು ಸೂಕ್ತ. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ವಂಚನೆ ಪ್ರಕರಣ – ಸಿಸಿಬಿಯಿಂದ ಸ್ಥಳ ಮಹಜರು

    ಸೋಮವಾರ ಬೆಳಗ್ಗೆ 9:56ರಿಂದ ಮಂಗಳವಾರ ಬೆಳಗ್ಗೆ 10:20 ನಿಮಿಷದವರಿಗೆ ಹಬ್ಬ ಆಚರಿಸಬಹುದು. ಸೌರಮಾನ ಪದ್ಧತಿ ಪ್ರಕಾರ ಹಬ್ಬ ಆಚರಿಸುವವರು ಮಂಗಳವಾರ ಆಚರಣೆ ಮಾಡುವುದು ಸೂಕ್ತ. ಚಂದ್ರಮಾನ ಪದ್ಧತಿಯಲ್ಲಿ ಆಚರಿಸುವವರು ಸೋಮವಾರವೇ ಗೌರಿ ಗಣೇಶ ಹಬ್ಬ ಮಾಡಬಹುದು. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ಮಾದರಿಯಲ್ಲೇ ಮತ್ತೊಂದು ಪ್ರಕರಣ – ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು: ಹೆಚ್‌ಡಿಕೆಗೆ ಡಿಕೆಶಿ ಟಾಂಗ್‌

    ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು: ಹೆಚ್‌ಡಿಕೆಗೆ ಡಿಕೆಶಿ ಟಾಂಗ್‌

    ಬೆಂಗಳೂರು: ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು. ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ನಮಗೆ ಬಹಳ ಮುಖ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಟಾಂಗ್‌ ನೀಡಿದ್ದಾರೆ.

    ಜ್ಯೋತಿಷ್ಯದ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹಳ ಸಂತೋಷ ಅವರ ಮಾಯಾನೋ, ಮಾಟನೋ ಜ್ಯೋತಿಷ್ಯನೋ, ಧರ್ಮಾನೋ, ಶ್ರಮಾನೋ, ಫಲ, ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ. 3 ವರ್ಷದಿಂದ ಪಟ್ಟ ಶ್ರಮವಿದು. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ ತಿರುಗೇಟು ನೀಡಿದರು. ಇದನ್ನೂ ಓದಿ: ಉಡುಪಿಯಲ್ಲಿ ಪ್ರಚೋದನಕಾರಿ ಭಾಷಣ – ಶರಣ್ ಪಂಪ್‍ವೆಲ್ ವಿರುದ್ಧ ಕೇಸ್

     

    ಶ್ರಮ ಪಟ್ಟು 3 ವರ್ಷ ಸರಿಯಾಗಿ ನಿದ್ರೆ ಮಾಡಲಿಲ್ಲ ಊಟ ಮಾಡಲಿಲ್ಲ. ನಮ್ಮ ಕಾರ್ಯಕರ್ತರನ್ನ ಸರಿಯಾಗಿ ಮಲಗೋಕೆ ಬಿಡಲಿಲ್ಲ ಜನರು ವಿಶ್ವಾಸ ಇಟ್ಟು ನಂಬಿಕೆ ಇಟ್ಟು ವೋಟ್ ಹಾಕಿದ್ದಾರೆ ಅಧಿಕಾರ ಕೊಟ್ಟಿದ್ದಾರೆ ಅವರ ಋಣ ತೀರಿಸಬೇಕು. ಪಾಪಾ ಮಾತನಾಡಲಿ ಬಿಡಿ. ಅವರದ್ದೇ ಆದ ಅನುಭವ ಇದೆಯಲ್ಲ ಮಾತಾನಾಡುತ್ತಾ ಇರಬೇಕು ಎಂದರು.

    ಕುಮಾರಸ್ವಾಮಿ ಅವರು ವಿಶ್ರಾಂತಿ ತೆಗೆದುಕೊಂಡು ಬಂದಿದ್ದಾರೆ. ಅವರಿಗೆ ಒಳ್ಳೆದಾಗಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ಪೊಲೀಸ್‌ ವರ್ಗಾವಣೆ ಸಭೆಯಲ್ಲಿ ವೈಎಸ್‌ಟಿ ಟ್ಯಾಕ್ಸ್‌ನವರಿಗೆ ಏನು ಕೆಲಸ? – ಹೆಚ್‌ಡಿಕೆಯಿಂದ ಮಿಡ್‌ನೈಟ್‌ ಬಾಂಬ್‌

     

    ಆರ್ ಆರ್ ನಗರ ವಿಚಾರದಲ್ಲಿ ನಾನು ಯಾವುದೇ ಶಿಫಾರಸ್ಸು ಮಾಡಿಲ್ಲ. ಡಿ.ಕೆ.ಸುರೇಶ್ ಮಾತು ಕೇಳಿ ವರ್ಗಾವಣೆ ಮಾಡಲು ನನಗೆ ತಲೆ ಕೆಟ್ಟಿದೆಯಾ ಎಂದು ಪ್ರಶ್ನಿಸಿದರು.

    ಯುರೋಪ್‌ ಪ್ರವಾಸದ ಬಳಿಕ ಹೆಚ್‌ಡಿ ಕುಮಾರಸ್ವಾಮಿ ಬೆಂಗಳೂರಿಗೆ ಮಧ್ಯರಾತ್ರಿ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳು ಸಿಂಗಾಪುರಕ್ಕೆ ಹೋಗಿ ಸರ್ಕಾರ ಕೆಡಲು ಪ್ಲ್ಯಾನ್‌ ಮಾಡಲಾಗುತ್ತದೆ ಎಂದು ಡಿಕೆಶಿ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಬಹುಶಃ ಅವರ ಈ ಸರ್ಕಾರದ ಅವಧಿ ಬಹಳ ದಿನ ಇರುವುದಿಲ್ಲ ಎಂದು ಅವರು ಅಂದುಕೊಂಡಿರಬೇಕು. ನಮಗಿಂತ ಜಾಸ್ತಿ ಅವರೇ ಶಾಸ್ತ್ರ ಕೇಳುತ್ತಾರೆ. ಜೋತಿಷ್ಯದವರನ್ನು ಬಹಳ ನಂಬುತ್ತಾರೆ. ಹಲವಾರು ರೀತಿ ಕುತಂತ್ರಗಳನ್ನ ಜೋತಿಷ್ಯದಲ್ಲಿ ಮಾಡುತ್ತಾರೆ. ಅದರ ಕೃತಕವಾದ ಶಕ್ತಿಯನ್ನು ಚುನಾವಣೆಯಲ್ಲಿ ತುಂಬಿಕೊಂಡಿದ್ದಾರೆ. ಆ ಕೃತಕವಾದ ಶಕ್ತಿ ಬಹುಶಃ ಬಹಳ ದಿನ ಇರುವುದಿಲ್ಲ ಎಂದು ಅವರ ತಲೆಯಲ್ಲಿ ಇರಬಹುದು. ಅದಕ್ಕಾಗಿ ಇಂತಹ ಹೇಳಿಕೆ ನೀಡಿರಬೇಕು ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

    ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

    ಲಕ್ನೋ: ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಪೈಕಿ ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟಬಹುಮತ ಪಡೆದುಕೊಳ್ಳಲಿದೆ ಮತ್ತು ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದು ಹಲವು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.

    ಎಕ್ಸಿಟ್ ಪೋಲ್‍ನಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಹುಮತ ದೊರೆಯಲಿದೆ ಎಂದು ತಿಳಿಸಲಾಗಿತ್ತು. ಇದೀಗ ಜ್ಯೋತಿಷಿಗಳು ಕೂಡ ಈ ಮಾತನ್ನು ಪುನರಾವರ್ತಿಸಿದ್ದು, ಈ ವರ್ಷದ ಅಧಿಪತಿ ಮಂಗಳ ಆಗಿರುವುದು ಮತ್ತು ಮಂಗಳ ಕ್ಷತ್ರಿಯ ಸಮುದಾಯದ ಅಧಿಪತಿಯೂ ಆಗಿರುವುದರಿಂದ ಯೋಗಿ ಆದಿತ್ಯನಾಥ್ ಅವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಅಂಚೆ ಮತ ಎಣಿಕೆ: ಆರಂಭದಲ್ಲಿ ಬಿಜೆಪಿ ಮುನ್ನಡೆ

    ಅಲ್ಲದೇ ಬಿಜೆಪಿ ಉತ್ತರ ಪ್ರದೇಶದಲ್ಲಿ 240 ಸ್ಥಾನಗಳನ್ನು ಗೆದ್ದರೆ, ಸಮಾಜವಾದಿ ಪಕ್ಷ 138-157 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಜ್ಯೋತಿಷಿ ಅಶ್ವಿನಿ ಪಾಂಡೆ ಭವಿಷ್ಯ ನುಡಿದಿದ್ದಾರೆ.

    ಮಥುರಾದಲ್ಲಿ ಅಲೋಕ್ ಗುಪ್ತಾ ಗೆಲ್ಲುತ್ತಾರೆ. ಬಿಜೆಪಿ ಕೂಡ ಗೆಲ್ಲುತ್ತದೆ ಎಂದು ಮೇರಟ್‍ನ ಖ್ಯಾತ ಜ್ಯೋತಿಷಿ ವಿನೋದ್ ತ್ಯಾಗಿ ಭವಿಷ್ಯ ನುಡಿದಿದ್ದು, ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಯೋಗಿ, ಅಖಿಲೇಶ್‌ ಮುನ್ನಡೆ- ಗೋವಾ, ಪಂಜಾಬ್‌ ಸಿಎಂ ಹಿನ್ನಡೆ

    ಉತ್ತರ ಪ್ರದೇಶದಲ್ಲಿ ಒಟ್ಟು 403 ಕ್ಷೇತ್ರಗಳಿದ್ದು ಬಹುಮತಕ್ಕೆ 202 ಸ್ಥಾನಗಳು ಬೇಕು. 2017ರ ಚುನಾವಣೆಯಲ್ಲಿ ಬಿಜೆಪಿ 312, ಬಿಎಸ್‍ಪಿ 19, ಎಸ್‍ಪಿ+ಕಾಂಗ್ರೆಸ್ 54, ಇತರರು 18 ಕ್ಷೇತ್ರಗಳಲ್ಲಿ ಜಯಗಳಿಸಿದ್ದರು.

  • ದಿನ ಭವಿಷ್ಯ 02-07-2021

    ದಿನ ಭವಿಷ್ಯ 02-07-2021

    ರಾಹುಕಾಲ – 10:51 ರಿಂದ 12:27
    ಗುಳಿಕಕಾಲ – 7.39 ರಿಂದ 9.15
    ಯಮಗಂಡಕಾಲ – 03:39 ರಿಂದ 05:15

    ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ,
    ಕೃಷ್ಣಪಕ್ಷ, ಅಷ್ಟಮಿ, ಶುಕ್ರವಾರ, ರೇವತಿ ನಕ್ಷತ್ರ

    ಮೇಷ: ಸಾಲದ ಸಹಾಯ, ಬಂಧುಗಳು ಮತ್ತು ನೆರೆಹೊರೆಯವರ ಭೇಟಿ, ದೂರ ಪ್ರಯಾಣದಿಂದ ಮಾನಸಿಕ ನೆಮ್ಮದಿ

    ವೃಷಭ: ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ, ಮಕ್ಕಳಿಂದ ಅನುಕೂಲ, ಗೃಹ ಮತ್ತು ಸ್ಥಳ, ಬದಲಾವಣೆಯಿಂದ ಅನುಕೂಲ, ಪತ್ರ ವ್ಯವಹಾರದಿಂದ ಲಾಭ

    ಮಿಥುನ: ಅಧಿಕ ಖರ್ಚು, ನಿದ್ರಾಭಂಗ, ಉದ್ಯೋಗ ಅನುಕೂಲ

    ಕಟಕ: ಉದ್ಯೋಗ ಹುಡುಕಾಟ, ಅಧಿಕ ಖರ್ಚು, ಆತ್ಮೀಯರಿಂದ ಬಂಧುಗಳಿಂದ ಅನುಕೂಲ

    ಸಿಂಹ: ಅನಿರೀಕ್ಷಿತ ಆದಾಯ, ಮಕ್ಕಳಿಗಾಗಿ ಅಧಿಕ ಖರ್ಚು, ತಂದೆಯೊಡನೆ ಮನಸ್ತಾಪ

    ಕನ್ಯಾ: ಉದ್ಯೋಗದಲ್ಲಿ ಅನುಕೂಲ, ಕಂಕಣ ಭಾಗ್ಯ, ದಾಯಾದಿಗಳ ಜೊತೆ ಕಲಹ

    ತುಲಾ: ಆಯುಧಗಳಿಂದ ಪೆಟ್ಟು, ಸಂಗಾತಿ ಅಥವಾ ಸ್ನೇಹಿತರೊಂದಿಗೆ ಕಲಹ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ

    ವೃಶ್ಚಿಕ: ಚಿರಾಸ್ತಿ ಕಲಹಗಳು, ಕಷ್ಟನಷ್ಟಗಳಿಗೆ ಕುಟುಂಬದಿಂದ ಸಾಂತ್ವಾನ, ಪ್ರೀತಿ ಪ್ರೇಮ ವಿಚಾರವಾಗಿ, ಮಕ್ಕಳೊಂದಿಗೆ ಕಲಹ

    ಧನಸ್ಸು: ಪಾಲುದಾರಿಕೆಯಲ್ಲಿ ಮನಸ್ತಾಪ, ಸ್ನೇಹಿತರೆ ಶತ್ರುಗಳಾಗುವರು, ತಾಯಿಯೊಡನೆ ಮನಸ್ತಾಪ

    ಮಕರ: ಭೂಮಿ ವಿಚಾರವಾಗಿ ಕಿರಿಕಿರಿ, ಸಹೋದರನಿಂದ ಅವಘಡ, ಪ್ರೀತಿ ಪ್ರೇಮದ ವಿಚಾರದಲ್ಲಿ ಸಂಕಷ್ಟ,

    ಕುಂಭ: ಬಂಧುಗಳೊಂದಿಗೆ ಮನಸ್ತಾಪ, ದ್ವಿಚಕ್ರ ವಾಹನಗಳಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಮತ್ತು ಆತಂಕ

    ಮೀನ: ಕಂಕಣ ಭಾಗ್ಯದ ಯೋಗ, ಮಕ್ಕಳಿಗೆ ಉತ್ತಮ ಅವಕಾಶ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ

  • ಆಗಸದಲ್ಲಿಂದು ಅಪರೂಪದ ನೀಲಿಚಂದ್ರ – ಏನಿದು ಬ್ಲೂ ಮೂನ್? ಖಗೋಳ ತಜ್ಞರು, ಜ್ಯೋತಿಷಿಗಳು ಹೇಳೋದು ಏನು?

    ಆಗಸದಲ್ಲಿಂದು ಅಪರೂಪದ ನೀಲಿಚಂದ್ರ – ಏನಿದು ಬ್ಲೂ ಮೂನ್? ಖಗೋಳ ತಜ್ಞರು, ಜ್ಯೋತಿಷಿಗಳು ಹೇಳೋದು ಏನು?

    ಬೆಂಗಳೂರು: ನೀಲಿಯಾಕಾಶದಲ್ಲಿ ಇಂದು ಅಪರೂಪದಲ್ಲಿ ಅಪರೂಪವಾದ ಬ್ಲೂ ಮೂನ್ ಕಾಣಿಸಲಿದೆ. ಬ್ಲೂಮೂನ್‍ನ ಕಣ್ತುಂಬಿಕೊಳ್ಳುವ ತವಕ ಜನರಲ್ಲಿ ಮನೆ ಮಾಡಿದೆ. ಅಷ್ಟಕ್ಕೂ ಏನಿದು ಬ್ಲೂಮೂನ್? ಯಾವಾಗ ನೀಲಿಚಂದ್ರ ಗೋಚರಿಸ್ತಾನೆ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

    ಏನಿದು ಬ್ಲೂ ಮೂನ್?
    ಇಂದು ರಾತ್ರಿ ಆಗಸದಲ್ಲಿ ಖಗೋಳ ವಿಸ್ಮಯ ನಡೆಯಲಿದ್ದು, ರಾತ್ರಿ 8.19ಕ್ಕೆ ಸರಿಯಾಗಿ ಬ್ಲೂ ಮೂನ್ ಗೋಚರವಾಗಲಿದೆ. ಸಾಮಾನ್ಯವಾಗಿ ತಿಂಗಳಿಗೆ ಒಂದು ಹುಣ್ಣಿಮೆ ಬರುತ್ತದೆ. ಆದರೆ ಈ ಬಾರಿ ಒಂದೇ ತಿಂಗಳಿನಲ್ಲಿ ಎರಡು ಹುಣ್ಣಿಮೆ ಬಂದಿದೆ. ತಿಂಗಳ ಎರಡನೇ ಹುಣ್ಣಿಮೆಯಂದು ಕಾಣುವ ಚಂದ್ರನನ್ನು ಬ್ಲೂ ಮೂನ್ ಎಂದು ಕರೆಯುತ್ತಾರೆ. ಬ್ಲೂ ಮೂನ್ ಎಂದಾಕ್ಷಣ ಚಂದ್ರ ನೀಲಿ ಬಣ್ಣದಲ್ಲಿ ಕಾಣುತ್ತಾನೆ ಎಂದರ್ಥವಲ್ಲ. ಅ.1 ರಂದು ಮೊದಲ ಹುಣ್ಣಿಮೆ ಬಂದಿದ್ದರೆ ಅ.31ರಂದು ಇಂದು ಎರಡನೇ ಹುಣ್ಣಿಮೆ ಬಂದಿದೆ.

    ಎಷ್ಟು ಅವಧಿ ಬೇಕು?
    ಗ್ರಗೋರಿಯನ್ ಕ್ಯಾಲೆಂಡರ್ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ ನಡುವಿನ ಅವಧಿ 29 ದಿನ, 44 ನಿಮಿಷ 38 ಸೆಕೆಂಡ್ ಆಗಿರುತ್ತದೆ. 30 ದಿನ ತುಂಬಲು ಬಾಕಿ ಉಳಿದ ಸಮವೆಲ್ಲ ಸೇರಿ ಕೊನೆಗೆ ಒಂದು ತಿಂಗಳಿನಲ್ಲಿ 2 ಹುಣ್ಣಿಮೆ ಬರುತ್ತದೆ. ಸಾಮಾನ್ಯವಾಗಿ ಎರಡು-ಮೂರು ವರ್ಷಕ್ಕೊಮ್ಮೆ ಈ ವಿದ್ಯಮಾನ ಘಟಿಸುತ್ತದೆ. ಈ ಹಿಂದೆ 2018ರಲ್ಲಿ ಬ್ಲೂ ಮೂನ್ ಗೋಚರಿಸಿತ್ತು. 31 ದಿನಗಳು ಇರುವ ತಿಂಗಳಿನಲ್ಲಿ ಬ್ಲೂ ಮೂನ್ ಸಾಮಾನ್ಯವಾಗಿ ಗೋಚರಿಸುತ್ತದೆ. ಆದರೆ 30 ದಿನಗಳಲ್ಲಿ ಬ್ಲೂ ಮೂನ್ ಗೋಚರಿಸುವುದು ಅಪರೂಪ.

    ಖಗೋಳ ತಜ್ಞರು ಏನು ಹೇಳುತ್ತಾರೆ?
    ಇದು ಖಗೋಳದಲ್ಲಿ ಸಹಜ ಪ್ರಕ್ರಿಯೆಯಾಗಿದ್ದು ಸ್ವಾಭಾವಿಕ ಹುಣ್ಣಿಮೆ. ಆದರೆ ಅಪರೂಪ ಅಷ್ಟೇ. ಎಲ್ಲಾ ಹುಣ್ಣಿಮೆಯ ರೀತಿಯೇ ಈ ಹುಣ್ಣಿಮೆ ಕೂಡ. ಬ್ಲೂಮೂನ್ ಎಂದಾಕ್ಷಣ ಇಂದು ಚಂದಿರನ ಬಣ್ಣ ನೀಲಿ ಇರುವುದಿಲ್ಲ. ಬ್ಲೂಮೂನ್‍ಗೂ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಬ್ಲಿಕ್ ಟಿವಿಗೆ ಪ್ಲಾನಿಟೋರಿಯಂ ಹಿರಿಯ ವಿಜ್ಞಾನಿ ಡಾ.ಆನಂದ್ ಹೇಳಿದ್ದಾರೆ.

    ಜ್ಯೋತಿಷಿಗಳು ಏನ್ ಹೇಳುತ್ತಾರೆ?
    ಈ ಬಾರಿಯ ಬ್ಲೂ ಮೂನ್ ಶುಭಕಾರಕವಾಗಿದ್ದು ನೀಲಚಂದ್ರನ ದರ್ಶನದಿಂದ ಲೋಕ ಕ್ಷೇಮ. ಶಾಂತಿ, ನೆಮ್ಮದಿ ದಯಪಾಲಿಸುತ್ತದೆ. ಆದರೆ ಕೆಲವು ಜನರಿಗೆ ಈ ಬ್ಲೂ ಮೂನ್ ಬಾಧಕಾರಕವಾಗಲಿದೆ. ಶೀಘ್ರವೇ ಕೋವಿಡ್‍ನಿಂದ ಜಗತ್ತಿಗೆ ಮುಕ್ತಿ ಸಿಗಲಿದೆ ಎಂದು ಗವಿ ಗಂಗಾಧರ ದೇವಾಲಯದ ಅರ್ಚಕರಾದ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ.

    ಈ ಬಾರಿಯ ಹುಣ್ಣಿಮೆಯಿಂದ ಒಂದಿಷ್ಟು ಜನಕ್ಕೆ, ಒಂದಿಷ್ಟು ರಾಶಿಯವರಿಗೆ ಸಮಸ್ಯೆಯಾಗಬಹುದು. ದೇವಿ ಅಥವಾ ಪರಶಿವನ ಆರಾಧನೆಯಿಂದ ಒಳಿತಾಗಲಿದೆ. ಮುಂಬರುವ ದಿನಗಳಲ್ಲಿ ಪ್ರಕೃತಿಯ ವೈಪರೀತ್ಯ ಆಗಲಿದೆ. ಕೋವಿಡ್ ಮಹಾಮಾರಿಯಿಂದ ಸದ್ಯದಲ್ಲೇ ಮುಕ್ತಿ ಸಿಗಲಿದೆ ಎಂದು ಖ್ಯಾತ ಜ್ಯೋತಿಷಿ ಮಹರ್ಷಿ ಆನಂದ ಗುರೂಜಿ ತಿಳಿಸಿದ್ದಾರೆ.

    ಹಿಂದಿನ ದಿನವೇ ದುರಂತ:
    ಬ್ಲೂ ಮೂನ್ ಹಿಂದಿನ ದಿನವೇ ವಿಶ್ವದ ಹಲವೆಡೆ ಸಾವು ನೋವು ಸಂಭವಿಸಿದೆ. ತೀವ್ರ ಭೂಕಂಪಕ್ಕೆ ಟರ್ಕಿ, ಗ್ರೀಸ್, ಬಲ್ಗೇರಿಯಾ ತತ್ತರಗೊಂಡಿದ್ದು ನೋಡನೋಡುತ್ತಲೇ ಕಟ್ಟಡಗಳು ಧರೆಗೆ ಬಿದ್ದಿದೆ. 20ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ. ಮಿನಿ ಸುನಾಮಿಯಿಂದ ಟರ್ಕಿಯ ನಗರಗಳಿಗೆ ನೀರು ನುಗ್ಗಿದೆ. ಗ್ರೀಸ್ ರಾಜಧಾನಿ ಅಥೆನ್ಸ್, ಸಮೋವಾ ದ್ವೀಪ ಸಮೂಹ ಮತ್ತು ಬಲ್ಗೇರಿಯಾದಲ್ಲಿಯೂ ಭೂಮಿ ಕಂಪಿಸಿದ್ದು, ಜನ ಮನೆಗಳಿಂದ ಓಡೋಡಿ ಬಂದಿದ್ದಾರೆ.

  • ಸಾಡೇ ಸಾತ್ ಮುಕ್ತಾಯ ಬಿಎಸ್‍ವೈ ಫುಲ್ ಜೋಷ್!

    ಸಾಡೇ ಸಾತ್ ಮುಕ್ತಾಯ ಬಿಎಸ್‍ವೈ ಫುಲ್ ಜೋಷ್!

    – ಜ್ಯೋತಿಷಿ ಮೊರೆ ಹೋದ ಬಿಎಸ್‍ವೈ

    ಬೆಂಗಳೂರು: ಸಾಲು ಸಾಲು ಮಂತ್ರಿಗಳು ರಾಜೀನಾಮೆ ನೀಡಿ ಸರ್ಕಾರ ಪತನದ ಸುಳಿವು ಸಿಗುತ್ತಿದ್ದಂತೆ ಬಿ.ಎಸ್.ಯಯೂರಪ್ಪನವರು ಖ್ಯಾತ ಜ್ಯೋತಿಷಿಯೊಬ್ಬರ ಮೊರೆ ಹೋಗಿದ್ದಾರೆ.

    ಹೌದು. ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಶನಿವಾರ ರಾತ್ರಿ ಎಂಟಿಬಿ ನಾಗರಾಜ್ ಅವರನ್ನು ಮನ ಒಲಿಸಿದ್ದರು. ನಾಯಕರುಗಳು ಇದ್ದಾಗ ಮಾಧ್ಯಮಗಳ ಮುಂದೆ ಎಂಟಿಬಿ ಒಂದು ಹೇಳಿಕೆ ನೀಡಿದ್ದರೆ ನಂತರ ಯೂಟರ್ನ್ ಹೊಡೆದು ಇಂದು ದಿಢೀರ್ ಆಗಿ ಮುಂಬೈಗೆ ತೆರಳಿ ಅತೃಪ್ತರನ್ನು ಸೇರಿಕೊಂಡಿದ್ದಾರೆ. ಎಂಟಿಬಿ ನಾಗರಾಜ್ ಮನವೊಲಿಕೆ ವಿಫಲವಾದ ಬೆನ್ನಲ್ಲೇ ಬಿ.ಎಸ್.ಯಡಿಯೂರಪ್ಪನವರು ಜ್ಯೋತಿಷಿಯೊಬ್ಬರ ಮೊರೆ ಹೋಗಿ ಭವಿಷ್ಯ ಕೇಳಿಕೊಂಡು ಬಂದಿದ್ದಾರೆ.

    ಸರ್ಕಾರ ಉರುಳುವ ಸಂದರ್ಭದಲ್ಲಿ, ಸಿಎಂ ಆಗುವ ಯೋಗಾಯೋಗದ ಬಗ್ಗೆ ಖ್ಯಾತ ಜ್ಯೋತಿಷಿ ಯೊಬ್ಬರ ಬಳಿ ಬಿಎಸ್‍ವೈ ಭವಿಷ್ಯ ಕೇಳಿದ್ದಾರೆ. ಈಗಾಗಲೇ ಸುಮಾರು ಏಳೂವರೆ ವರ್ಷಗಳ ಕಾಲ ಯಡಿಯೂರಪ್ಪನವರಿಗೆ ಶನಿ ಕಾಟ ಇತ್ತು. ಈಗ ಸಾಡೇ ಸಾತ್ ಕೊನೆಯ ವರ್ಷ. ಇನ್ನೇನು ಏಳುವರೆ ವರ್ಷ ಶನಿ ಕಾಟದ ಕೊನೆಯ ತಿಂಗಳು ಹೀಗಾಗಿ ಬಿ.ಎಸ್.ಯಡಿಯೂರಪ್ಪ ಫುಲ್ ಆಕ್ಟಿವ್ ಆಗಿದ್ದು, ಸರ್ಕಾರ ರಚಿಸಲು ಎಲ್ಲ ತಯಾರಿ ನಡೆಸುತ್ತಿದ್ದಾರೆ.

    ಬಿಎಸ್‍ವೈ ಸಿಎಂ ಆಗಲು ಈ ಹಿಂದೆ ಸಾಕಷ್ಟು ಕಂಟಕ ಇದೆ. ಶನಿ ಕಾಟ ಇದೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದ್ದರು. ಈ ಕಂಟಕ ನಿವಾರಣೆಗಾಗಿ ಯಡಿಯೂರಪ್ಪನವರು ಮಹಾ ಪೂಜೆಗಳನ್ನು ನಡೆಸಿಕೊಂಡು ಬಂದಿದ್ದರು.


    ಯಡಿಯೂರಪ್ಪನವರು ವೃಶ್ಚಿಕ ರಾಶಿ ಅನುರಾಧ ನಕ್ಷತ್ರದಲ್ಲಿ ಜನಿಸಿದ್ದಾರೆ. ಭೇಟಿ ನೀಡಿದ ವೇಳೆ ಜ್ಯೋತಿಷಿಗಳಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಕಂಟಕಗಳು ಎದುರಾದರೂ ಸಾಡೇಸಾತ್ ಬಿಡುವ ಸಮಯದಲ್ಲಿ ಕೆಲವರ ಅದೃಷ್ಟ ಬದಲಾಗಲಿದೆ ಎಂದು ಜ್ಯೋತಿಷಿಗಳು ಯಡಿಯೂರಪ್ಪನವರಿಗೆ ತಿಳಿಸಿದ್ದಾರೆ.

    ಏಳೂವರೆ ಶನಿ ಆರಂಭಗೊಂಡ ಸಮಯದಲ್ಲಿ ಭಾರೀ ಕಾಟವನ್ನು ನೀಡಿದರೆ ಬಿಡುವ ಸಮಯದಲ್ಲಿ ವ್ಯಕ್ತಿಗೆ ಒಳ್ಳೆಯದನ್ನು ಮಾಡುತ್ತಾನೆ ಎನ್ನುವ ನಂಬಿಕೆಯಿದೆ.

  • ಕೈ-ತೆನೆ ಸಮಾವೇಶಕ್ಕೂ ಬಂತು ವಾಸ್ತು – ರೇವಣ್ಣ ಸಲಹೆಯಂತೆ ಮುಖ್ಯವೇದಿಕೆ ನಿರ್ಮಾಣ

    ಕೈ-ತೆನೆ ಸಮಾವೇಶಕ್ಕೂ ಬಂತು ವಾಸ್ತು – ರೇವಣ್ಣ ಸಲಹೆಯಂತೆ ಮುಖ್ಯವೇದಿಕೆ ನಿರ್ಮಾಣ

    ಬೆಂಗಳೂರು: ಇಂದು ಕಾಂಗ್ರೆಸ್ ಜೆಡಿಎಸ್ ಜಂಟಿ ಪರಿವರ್ತನಾ ಸಮಾವೇಶ ನಡೆಯುತ್ತಿದ್ದು, ಇದಕ್ಕೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಜ್ಯೋತಿಷ್ಯರ ಸಲಹೆಯನ್ನು ಕೇಳಿದ್ದಾರೆ.

    ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಸಮಾವೇಶ ನಡೆಯುತ್ತಿದೆ. ಈ ಸಮಾವೇಶಕ್ಕೂ ರೇವಣ್ಣ ಅವರು ಜ್ಯೋತಿಷಿಗಳ ಸಲಹೆಯಂತೆ ಸಮಾವೇಶದ ಮುಖ್ಯ ವೇದಿಕೆಯನ್ನು ಪೂರ್ವ ದಿಕ್ಕಿಗೆ ಮುಖ ಮಾಡುವಂತೆ ನಿರ್ಮಾಣ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಸಮಾವೇಶದ ಆರಂಭಕ್ಕೂ ರೇವಣ್ಣರಿಂದಲೇ ಮುಹೂರ್ತ ಕೇಳಿದ್ದು, ರಾಹುಕಾಲ ಆರಂಭಕ್ಕೂ ಮುನ್ನ ಸಮಾವೇಶ ಆರಂಭಿಸುವಂತೆ ರೇವಣ್ಣ ಅವರು ಸಲಹೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಇಂದು ಸಂಜೆ 4.56 ರಿಂದ ಸಂಜೆ 6 ರವರೆಗೂ ರಾಹುಕಾಲ ಇದೆ. ಈ ಹಿನ್ನೆಲೆಯಲ್ಲಿ ರೇವಣ್ಣರ ಸಲಹೆಯಂತೆ ಸಂಜೆ 4.30 ರಿಂದ 4.55 ರ ಒಳಗೆ ಸಮಾವೇಶ ಶುರುವಾಗಲಿದೆ. ರಾಹುಲ್ ಗಾಂಧಿ ಆಗಮಿಸುವ ಮುನ್ನವೇ ಜಂಟಿ ಪರಿವರ್ತನಾ ಸಮಾವೇಶ ಆರಂಭವಾಗಲಿದೆ.

    ರಾಹುಲ್ ಗಾಂಧಿ ಬರುವವರೆಗೂ ಸಮಾವೇಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಭಾಷಣ ಮಾಡಲಿದ್ದಾರೆ. ಸಂಜೆ 5.15 ರ ಸುಮಾರಿಗೆ ರಾಹುಲ್ ಗಾಂಧಿ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಜೊತೆಗೆ ರಾಹುಕಾಲದ ಅವಧಿಯಲ್ಲೇ ರಾಹುಲ್ ಗಾಂಧಿ ಚುನಾವಣಾ ಭಾಷಣ ಮಾಡಲಿದ್ದಾರೆ.

    ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಇದೇ ಮೈದಾನದಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶದ ಉದ್ಘಾಟನೆ ನಡೆದಿತ್ತು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನ ಬಾರದ ಕಾರಣ ಫ್ಲಾಪ್ ಆಗಿತ್ತು. ಬಿಜೆಪಿ ಸಮಾವೇಶದಲ್ಲಿ ಉತ್ತರ ದಿಕ್ಕಿಗೆ ಮುಖ ಮಾಡಿದಂತೆ ಮುಖ್ಯ ವೇದಿಕೆಯನ್ನು ನಿರ್ಮಿಸಲಾಗಿತ್ತು. ಅಂದು ಬಿಜೆಪಿ ಸಮಾವೇಶ ಫ್ಲಾಪ್ ಆಗಿದ್ದು ವಾಸ್ತು ದೋಷದಿಂದಲೇ ಎಂದು ರೇವಣ್ಣ ಹೇಳಿದ್ದರು. ಹೀಗಾಗಿ ವಾಸ್ತು ಪ್ರಕಾರವಾಗಿ ಇವತ್ತಿನ ಸಮಾವೇಶವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಡೆಸುತ್ತಿದ್ದಾರೆ.

  • ನವೆಂಬರ್ 19ರಂದು ಜನಾರ್ದನ ರೆಡ್ಡಿಗೆ ರಾಜಯೋಗ – ಮತ್ತೆ ಶುಕ್ರದೆಸೆ ಶುರುವಾಯ್ತಾ?

    ನವೆಂಬರ್ 19ರಂದು ಜನಾರ್ದನ ರೆಡ್ಡಿಗೆ ರಾಜಯೋಗ – ಮತ್ತೆ ಶುಕ್ರದೆಸೆ ಶುರುವಾಯ್ತಾ?

    ಬೆಂಗಳೂರು: ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿಗೆ ಮತ್ತೆ ಶುಕ್ರದೆಸೆ ಶುರುವಾಗಿದ್ದು, ರಾಜಯೋಗದಿಂದ ರೆಡ್ಡಿ ರಾಜ್ಯವನ್ನು ಆಳುತ್ತಾರೆ ಎಂದು ಜೋತಿಷ್ಯ ಶಾಸ್ತ್ರ ಹೇಳಿದೆ ಎನ್ನಲಾಗಿದೆ.

    ಆಂಬಿಡೆಂಡ್ ಕಂಪೆನಿ ವಂಚನೆ ಪ್ರಕರಣದಿಂದ ಬೇಸತ್ತಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಇದೇ ತಿಂಗಳು 19ರಂದು ರಾಜಯೋಗ ಹಿನ್ನೆಲೆಯಲ್ಲಿ ಅಂದು ಮಹಾಯಾಗಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

    ಈ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಗಾಲಿ ಜನಾರ್ದನ ರೆಡ್ಡಿ ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ವಿಘ್ನ ನಿವಾರಕ ಗಣೇಶನ ಹೆಸರಿನಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಯಲಿದೆ. ಮಹಾಯಾಗ ನಡೆಯುವ ದಿನ ಮಗಳ ಮದುವೆಯ ಎರಡನೇ ವಾರ್ಷಿಕೋತ್ಸವ ಕೂಡ ಇದೆ.

    ಜನಾರ್ದನ ರೆಡ್ಡಿ ಅತೀ ಹೆಚ್ಚಾಗಿ ದೇವರ ಪೂಜೆ ಮಾಡುತ್ತಾರೆ. ಜೊತೆಗೆ ಜ್ಯೋತಿಷ್ಯವನ್ನು ನಂಬುತ್ತಾರೆ. ಆದ್ದರಿಂದ ಜಾಮೀನು ಸಿಕ್ಕಮೇಲೆ ಅವರೇ ಸ್ವತಃ ಇನ್ನು ಮೂರು ದಿನಗಳ ಬಳಿಕ ನಮ್ಮ ನಿವಾಸದಲ್ಲಿ ಹೋಮ-ಹವನ ಮಾಡಿಸುತ್ತೇನೆ. ನಂತರ ನಮಗೆ ರಾಜಯೋಗ ಶುರುವಾಗುತ್ತದೆ. ಮೂರುದಿನಗಳ ನಂತರ ನಮ್ಮನ್ನು ಯಾರು ಟಚ್ ಕೂಡ ಮಾಡುವುದಕ್ಕೆ ಆಗಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.

    ಈ ವಿಚಾರದ ಬಗ್ಗೆ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ನಾನು ಜನಾರ್ದನ ರೆಡ್ಡಿಯವರ ಜಾತಕವನ್ನು ಪರಿಶೀಲನೆ ಮಾಡಿಲ್ಲ. ರಾಜಯೋಗ ಅವರ ರಾಶಿ, ನಕ್ಷತ್ರದ ಅನುಗುಣವಾಗಿ ಆಯಾ ಕಾಲಕ್ಕೆ ಬರುತ್ತದೆ ಎಂಬುದನ್ನು ಪ್ರಮಾಣಿಕರಿಸಿ ನೋಡಲಾಗುತ್ತದೆ. ಹಿರಿಯರು ಹೇಳಿದಂತೆ ಮೂರಕ್ಕೆ ಮುಕ್ತಾಯ ಎಂಬಂತೆ ಮೂರು ಬಾರಿ ಜೈಲು ವಾಸದ ಬಳಿಕ ಜನಾರ್ದನ ರೆಡ್ಡಿಯ ಕಷ್ಟದ ದಿನಗಳು ಮುಗಿಯುತ್ತದೆ ಎಂದು ಹೇಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews